Author: Prajatv Kannada

ತನ್ನ 23ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕೈಯಲ್ಲಿದ್ದ ರೈಫಲ್ ನಿಂದ ಗುಂಡು ಹಾರಿದ ಪರಿಣಾಮ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಅಮೆರಿಕದ ಅಟ್ಲಾಂಟ ನಗರದಲ್ಲಿ ನಡೆದಿದೆ. ನವೆಂಬರ್ 13ರಂದು ಈ ಘಟನೆ ನಡೆದಿದ್ದು ಇದೀಗ ವರದಿಯಾಗಿದೆ. ಕಾನ್ಸಾಸ್ ರಾಜ್ಯ ವಿವಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾದ ಆರ್ಯನ್ ರೆಡ್ಡಿ ಇತ್ತೀಚೆಗಷ್ಟೇ ಹಂಟಿಂಗ್ ರೈಫಲ್ ಅನ್ನು ಖರೀದಿಸಿದ್ದನು. ಆರ್ಯನ್ ರೆಡ್ಡಿ ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಗುಂಡು ಸಿಡಿದಿದ್ದು ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾಣೆ. ಗುಂಡಿನ ಸದ್ದುಕೇಳಿ ಕೊಠಡಿಗೆ ಆಗಮಿಸಿದ ಸ್ನೇಹಿತರಿಗೆ ಆರ್ಯನ್ ರೆಡ್ಡಿ ರಕ್ತದ ಮಡುವಿನ ಬಿದ್ದಿರುವುದನ್ನು ಕಂಡಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.  ಆರ್ಯಬ್ ರೆಡ್ಡಿ ಕುಟುಂಬ ಮೂಲತಃ ತೆಲಂಗಾಣದ ಭುವನಗಿರಿ ಜಿಲ್ಲೆಯವರಾಗಿದ್ದರೂ ಅವರು ಪ್ರಸ್ತುತ ಉಪ್ಪಲ್ ಜಿಲ್ಲೆಯಲ್ಲಿ ನೆಲೆಸಿದ್ದಾರೆ.

Read More

ಬಳ್ಳಾರಿ : ತೀವ್ರ ಕುತೂಹಲ ಕೆರಳಿಸಿದ್ದ ಸಂಡೂರಿನಲ್ಲಿ ಕಾಂಗ್ರೆಸ್‌ ಆಭ್ಯರ್ಥಿ ಅನ್ನಪೂರ್ಣ ತುಕಾರಂ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 18ನೇ ಸುತ್ತಿನಲ್ಲಿ ಕೈ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 9,568 ಮತಗಳ ಮುನ್ನಡೆ ಸಾಧಿಸಿದ್ದಾರೆ. https://youtu.be/fPFsggrxezI?si=iHCMFQo5reKMBITA ಇನ್ನೂ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಪರಾಜಿತ ಅಭ್ಯರ್ಥಿ ‌ಬಂಗಾರಿ ಹನುಮಂತು , ಈ ಸೋಲಿನ ಹೊಣೆಯನ್ನು ನಾನು ಒತ್ತುಕೊಳ್ಳುತ್ತೇನೆ. ಯಾರ ಮೇಲೂ‌ ಇದನ್ನು ಹೊರಿಸಲ್ಲ, ಕಾಂಗ್ರೆಸ್ ‌ಹಣ ಬಲದಿಂದ‌‌ ಈ ಚುನಾವಣೆ ಗೆದ್ದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಇಲ್ಲಿಯೇ ಠಿಕಾಣಿ ಹೂಡಿದ್ದರು. ಸಚಿವ ಶಿವರಾಜ ತಂಗಡಗಿ ಉಸ್ತುವಾರಿ ‌ಹೊತ್ತಿದ್ದ ಪ್ರದೇಶ ಸೇರಿ ಸಚಿವರು ಇದ್ದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ. ಅಂಕಿ-ಅಂಶಗಳ ಪ್ರಕಾರ ನಮಗೆ ಸೋಲೇ ಇಲ್ಲ. ಚುನಾವಣೆ ಹತ್ತಿರ ಇದ್ದಾಗ ಎಲ್ಲ‌ ಮಹಿಳೆಯರ ಖಾತೆಗೆ ೨ ಸಾವಿರ ಹಣ ಹಾಕಿದರು. ವೋಟಿಗೆ ೨ ಸಾವಿರ ಕೊಟ್ಟು ಮತಗಳನ್ನು ಖರೀದಿ‌ ಮಾಡಿದರು. ೨೦೨೮ ರಲ್ಲಿ ಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ನಾನು ಅಲ್ಲಿಯೇ ಮನೆ ಮಾಡಿ ಜನರ…

Read More

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸರ್ಕಾರದ ನೂತನ ಅಟಾರ್ನಿ ಜನರಲ್ ಆಗಿ ಪಾಮ್ ಬಾಂಡಿ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅಟಾರ್ನಿ ಜನರಲ್ ಹುದ್ದೆಗೆ ಅವರ ಪ್ರಥಮ ಆಯ್ಕೆಯಾಗಿದಿದ್ದು ಮ್ಯಾಟ್ ಗಾಯೆಟ್ಝ್. ಆದರೆ ಅವರ ವಿರುದ್ಧ ಲೈಂಗಿಕ ದುರ್ನಡತೆಯ ಆರೋಪಗಳೆನ್ನೆದುರಿಸುತ್ತಿರುವ ಬಗ್ಗೆ ವಿವಾದವುಂಟಾಗಿದ್ದರಿಂದ ಅವರ ಹೆಸರನ್ನು ಕೈಬಿಡಲಾಗಿತ್ತು. ಆನಂತರ ಟ್ರಂಪ್ ಅವರು ಫ್ಲೊರಿಡಾ ರಾಜ್ಯದ ಅಟಾರ್ನಿ ಜನರಲ್ ಪಾಮ್ ಬಾಂಡಿ ಅವರನ್ನು ದೇಶದ ನ್ಯಾಯಾಂಗ ಇಲಾಖೆಯ ಮುಖ್ಯಸ್ಥೆಯಾಗಿ ನೇಮಿಸಿದ್ದಾರೆ. ಬಾಂಡಿ ಅವರು ಟ್ರಂಪ್ ಅವರ ಕಟ್ಟಾ ಬೆಂಬಲಿಗರು. ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕರಣದಲ್ಲಿ ಅವರನ್ನು ಪ್ರತಿನಿಧಿಸಿದ್ದ ವಕೀಲರುಗಳಲ್ಲಿ ಬಾಂಡಿ ಕೂಡಾ ಒಬ್ಬರು. ಮೇ ತಿಂಗಳಲ್ಲಿ ವಿಚಾರಣೆ ಪೂರ್ಣಗೊಂದ ಟ್ರಂಪ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿಯೂ ಟ್ರಂಪ್ ಪರ ವಾದಿಸಿದ್ದರು.

Read More

ತಮಿಳು ಚಿತ್ರರಂಗದ ಸ್ಟಾರ್ ಹೀರೋ ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋತಿದೆ. ಸಿನಿಮಾಗೆ ಹಾಕಿದ ಬಂಡವಾಳ ಬಂದರೆ ಸಾಕಪ್ಪ ಎಂದು ನಿರ್ಮಾಪಕರು ಅಂದುಕೊಳ್ತಿದ್ದಾರೆ. ‘ಕಂಗುವ’ ಸಿನಿಮಾದ ಸೋಲು ಸೂರ್ಯ ಅವರ ಮುಂದಿನ ಚಿತ್ರಗಳ ಮೇಲೆ ಪರಿಣಾಮ ಬೀರಿದೆ. ಅವರಿಗೆ ನೀಡಲಾದ ಬಿಗ್ ಬಜೆಟ್ ಚಿತ್ರವನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ. ಬರೋಬ್ಬರಿ 350 ಕೋಟಿ ವೆಚ್ಚದಲ್ಲಿ ಬಾಲಿವುಡ್​ನಲ್ಲಿ ‘ಕರ್ಣ’ ಹೆಸರಿನ ಸಿನಿಮಾ ಪ್ಲ್ಯಾನ್ ಮಾಡಲಾಗಿತ್ತು. ಇದರಲ್ಲಿ ಸೂರ್ಯ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಇದು ಮಹಾಭಾರತದ ಕರ್ಣ ಅವರನ್ನು ಆಧರಿಸಿ ಸಿದ್ಧಗೊಳ್ಳಬೇಕಿದ್ದ ಸಿನಿಮಾ ಆಗಿತ್ತು. ‘ಭಾಗ್ ಮಿಲ್ಕಾ ಭಾಗ್’ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಈ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಈ ಸಿನಿಮಾ ಎರಡು ಪಾರ್ಟ್​ನಲ್ಲಿ ಬರಬೇಕಿತ್ತು. ಈ ಚಿತ್ರದಲ್ಲಿ ಜಾನ್ವಿ ಅವರು ದ್ರೌಪದಿ ಪಾತ್ರ ಮಾಡಬೇಕಿತ್ತು. ಸೂರ್ಯ ಅವರ ‘ಕಂಗುವ’ ಸಿನಿಮಾ ನೋಡಿದ ಬಳಿಕ ‘ಕರ್ಣ’ ನಿರ್ಮಾಪಕರು ಈ ಸಿನಿಮಾ ಮಾಡಲು ಹಿಂದೇಟು ಹಾಕಿದ್ದಾರೆ. ಅಲ್ಲದೆ…

Read More

29 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದ ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ಪಡೆದುಕೊಂಡಿದ್ದಾರೆ. ಏಕಾಏಕಿ ಡಿವೋರ್ಸ್ ಘೋಷಿಸಿದ್ದು ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ಸೈರಾ ಬಾನು ವಿಚ್ಚೇಧನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರೆಹಮಾನ್ ಬ್ಯಾಂಡ್​ನಲ್ಲಿ ಇದ್ದ ಮೋಹಿನಿ ಡೇ ಕೂಡ ಪತಿ ಮಾರ್ಕ್​ ಜೊತೆ ವಿಚ್ಛೇದನ ಪಡೆದಿದ್ದಾರೆ. ಇದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಈ ಎರಡೂ ವಿಚ್ಛೇದನವನ್ನು ಲಿಂಕ್ ಮಾಡಲಾಗಿದೆ. ಈ ಬಗ್ಗೆ ಮೋಹಿನಿ ಡೇ ಪ್ರತಿಕ್ರಿಯೆ ನೀಡಿದ್ದಾರೆ. ರೆಹಮಾನ್ ಹಾಗೂ ಮೋಹಿನಿ ಮಧ್ಯೆ ಏನೋ ನಡೆಯುತ್ತಿದ್ದು ಇದೇ ಕಾರಣಕ್ಕೆ ಇಬ್ಬರು ಒಟ್ಟೊಟ್ಟಿಗೆ ಡಿವೋರ್ಸ್ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿರುವ ಮೋಹಿನಿ,  ‘ಸಂದರ್ಶನಕ್ಕಾಗಿ ನನಗೆ ಆಹ್ವಾನ ಬರುತ್ತಿದೆ. ಅದು ಯಾಕೆ ಎಂದು ನನಗೆ ಗೊತ್ತು. ನಾನು ಅದನ್ನು ಗೌರವಯುತವಾಗಿ ತಿರಸ್ಕರಿಸುತ್ತಿದ್ದೇನೆ. ವದಂತಿ ಹೆಚ್ಚಿಸಲು ನನಗೆ ಇಷ್ಟ ಇಲ್ಲ’ ಎಂದಿದ್ದಾರೆ. ‘ನನಗೆ ನನ್ನ ಎನರ್ಜಿ ಬಗ್ಗೆ ನಂಬಿಕೆ ಇದೆ. ಅದನ್ನು ವದಂತಿಗಳನ್ನು ಹಬ್ಬಿಸಲು ಖರ್ಚು…

Read More

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೂಲ್’ ಸಿನಿಮಾದಲ್ಲಿ ನಟಿಸಿದ್ದ ಸನಾ ಖಾನ್ ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಮುಸ್ಲಿಂ ಧರ್ಮಗುರು ಅನಾಸ್ ಸಯ್ಯದ್ ಅವರನ್ನು ಮದುವೆ ಆಗಿರುವ ಸನಾ ಖಾನ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಎರಡನೇ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ಸನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ‘ಅಲ್ಲಾಹನ ಆಶೀರ್ವಾದದಿಂದ ನಾವು ಮೂವರು ಈಗ ನಾಲ್ವರಾಗುತ್ತಿದ್ದೇವೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕನಾಗಿದ್ದಾನೆ. ಮಗುವಿಗಾಗಿ ನಾವು ಕಾಯುತ್ತಿದ್ದೇವೆ. ಅಲ್ಲಾಹ ನಿಮ್ಮ ಆಶೀರ್ವಾದ ಇರಲಿ’ ಎಂದು ಅವರು ಬರೆದುಕೊಂಡಿದ್ದಾರೆ. ‘ಇಂಥ ಉಡುಗೊರೆಯನ್ನು ನೀಡಲು ಅಲ್ಲಾಹನಿಗೆ ಮಾತ್ರ ಅಧಿಕಾರವಿದೆ. ನಮಗೆ ಒಳ್ಳೆಯದು ಮಾಡಲಿ. ಅಲ್ಲಾಹ ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ’ ಎಂದು ನಟಿ ಬರೆದುಕೊಂಡಿದ್ದಾರೆ. ಕೇರಳ ಮೂಲದ ಸನಾ ಖಾನ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅವರು 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ಗಣೇಶ್ ಗೆ ಜೋಡಿಯಾಗುವ ಮೂಲಕ ‘ಕೂಲ್’ ಸಿನಿಮಾದಲ್ಲಿ…

Read More

ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಅಷ್ಟಮಿ ನಕ್ಷತ್ರ: ಮಖಾ ರಾಹು ಕಾಲ: 09:00 ನಿಂದ 1:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಸಂ.4:49 ನಿಂದ ಸಂ.6:34 ತನಕ ಅಭಿಜಿತ್ ಮುಹುರ್ತ: ಬೆ.11:40 ನಿಂದ ಮ.12:24 ತನಕ ಮೇಷ ರಾಶಿ: ನಿಮ್ಮ ವ್ಯವಹಾರ ಕಾರ್ಯ ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ,ಯಂತ್ರಗಳ ಬಿಡಿ ಭಾಗಗಳ ಉದ್ಯಮದಾರರಿಗೆ ಆರ್ಥಿಕ ನಷ್ಟ, ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ಒಳಸಂಚುಗಳ ಬಗ್ಗೆ ಜಾಗೃತಿ ಇರಲಿ,ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ ಚೇತರಿಕೆ,ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಹೊಸ ಆದಾಯ ಮೂಲ ಗೋಚರಿಸಲಿದೆ, ಅಷ್ಟೇ ಅಲ್ಲದೆ…

Read More

ಗಡಿಬಿಡಿಯ ಹೊರತಾಗಿ ಇನ್ನೇನೂ ಇಲ್ಲ ಅನುಭವಿಸುವುದಕ್ಕೆ ಎನ್ನುವಂತೆ ಬದುಕುತ್ತೇವೆ ನಾವು. ಎಲ್ಲಿಯವರೆಗೆ ಎಂದರೆ ಎಷ್ಟೇ ದುಡಿದರೂ ಕೂತು ತಿನ್ನುವುದಕ್ಕೆ ನಮಗೆ ಸಮಯವಿಲ್ಲ. ಅದಲ್ಲದೆ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ಇಂದಿಗೂ ಅನೇಕರಿಗೆ ತಿಳಿದಿಲ್ಲ. ಆದ್ದರಿಂದಲೇ ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಸರಿಯಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಜನರು, ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಹಾಸಿಗೆಯಲ್ಲಿ ಕುಳಿತು ತಿನ್ನೋದು ನಿಲ್ಲಿಸಿ. ಲಕ್ಷ್ಮೀ ವಾಸ  ಪ್ರತಿದಿನ ಹಾಸಿಗೆಯಲ್ಲಿ ಕುಳಿತು ಊಟ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಸಿಗೆಯು ಮಲಗುವ ಸ್ಥಳ, ಅಲ್ಲಿ ಎಂದಿಗೂ ತಿನ್ನಬಾರದು. ನೆಮ್ಮದಿ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ಮನೆಯಲ್ಲಿ ವಿವರಿಸಲಾಗದ ಶಾಂತಿಯ ನಷ್ಟವು ಉಂಟಾಗುತ್ತದೆ. ಆದ್ದರಿಂದ ನೀವು ಈ ಅಭ್ಯಾಸವನ್ನು ಬದಲಾಯಿಸಬೇಕಾಗಿದೆ. ಹಾಸಿಗೆಯ ಮೇಲೆ ಕುಳಿತು ತಿನ್ನುವವರು ಸಾಲದ…

Read More

ಬೆಳಗಿನ ಉಪಾಹಾರದಲ್ಲಿ ಖರ್ಜೂರವನ್ನು ತಿನ್ನುವ ಪ್ರಯೋಜನಗಳು ಹಲವು. ಖರ್ಜೂರಗಳು ಆರೋಗ್ಯಕ್ಕೆ ಪರಿಣಾಮಕಾರಿಯಾದಂತೆಯೇ ತಿನ್ನಲು ರುಚಿಕರವಾಗಿರುತ್ತವೆ. ಚಳಿಗಾಲದಲ್ಲಿ ಖರ್ಜೂರದ ಸೇವನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು. ಚಳಿಗಾಲದಲ್ಲಿ ಖರ್ಜೂರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ಈ ಪೋಸ್ಟ್‌ನಲ್ಲಿ ನೋಡೋಣ. ಚಳಿಗಾಲದಲ್ಲಿ ಹೆಚ್ಚಿನವರು ಆಗಾಗ್ಗೆ ಕೀಲು ನೋವಿನಿಂದ ಬಳಲುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಕನಿಷ್ಠ ಪ್ರಮಾಣದ ಖರ್ಜೂರವನ್ನು ಸೇವಿಸಬಹುದು. ಚಳಿಗಾಲದಲ್ಲಿ ಸೂರ್ಯನ ಬೆಳಕು ಪಡೆಯುವುದು ಕಷ್ಟಕರವಾದ್ದರಿಂದ, ದೇಹದಲ್ಲಿ ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಖರ್ಜೂರ ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಎಲುಬುಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದಲ್ಲದೆ, ಇದರಲ್ಲಿ ಪೊಟ್ಯಾಸಿಯಮ್, ಫಾಸ್ಫರಸ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳಿವೆ. ಇದು ಎಲುಬುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಹೃದಯವನ್ನು…

Read More

ಕೇರಳ: ವಯನಾಡು ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ರಾಹುಲ್‌ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು, ಚೊಚ್ಚಲ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಈವರೆಗೆ ನಡೆದ ಮತ ಎಣಿಕೆಯಲ್ಲಿ ಪ್ರಿಯಾಂಕಾ ಗಾಂಧಿ 68,000 ಮತಗಳನ್ನು ಗಳಿಸಿದ್ದಾರೆ. ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 20,000 ಮತಗಳು ಹಾಗೂ ಬಿಜೆಪಿಯ ನವ್ಯಾ ಹರಿದಾಸ್ 11,235 ಮತಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕಾ ಗಾಂಧಿ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ವಯನಾಡ್‌ ಉಪಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ 68,000 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

Read More