ಚಿತ್ರದುರ್ಗ: ಭಾರಿ ಮಳೆಗೆ ನಾಯಕನಹಟ್ಟಿ ಐತಿಹಾಸಿಕ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠ ಮಳೆ ನೀರಿನಿಂದ ಜಲಾವೃತವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ನಿರಂತರ ಮಳೆ ಬೀಳುತ್ತಿದ್ದು ಇನ್ನಿಲ್ಲದ ಅವಾಂತರ ಸೃಷ್ಟಿ ಮಾಡಿದ್ದು ಜಲ ಪ್ರಳಯ ಉಂಟಾಗಿದೆ. https://www.youtube.com/live/3isTZtD9Hnc?si=onEWGQKW-Nqdb7yo ಚಳ್ಳಕೆರೆ ತಾಲೂಕಿನ ಐತಿಹಾಸಿಕ ನಾಯಕನಹಟ್ಟಿ ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವರ ಒಳಮಠ ಮಳೆ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ. ನಾಯಕನಹಟ್ಟಿ ಕೆರೆ ಈಗಾಗಲೇ ಭರ್ತಿಯಾಗಿದ್ದು ಕೋಡಿ ಬಿದ್ದು ಹರಿಯುತ್ತಿದೆ. ಇನ್ನೂ ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೋಡಿ ವೇಗವಾಗಿ ಹರಿಯುತ್ತಿದ್ದು ಆ ನೀರು ಸಂಪೂರ್ಣವಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ಒಳ ಮಠ ಪ್ರವೇಸಿಸಿದ್ದು ಒಳ ಮಠ ಸಂಪೂರ್ಣ ಜಲಾವೃತವಾಗಿದ್ದು ಭಕ್ತರು ದೇವರನ್ನ ಕಾಣಲು ಬರದಂತಾದ ದೃಶ್ಯ ಕಂಡು ಬಂದಿದೆ.
Author: Prajatv Kannada
ಕಲಘಟಗಿ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ತುಂಬಿ ಹರಿಯುತ್ತಿದ್ದ ಶಾಲ್ಮಲಾ ನದಿ ಸೆಳವಿಗೆ ಕಾರು ಸಮೇತ ಸಿಲುಕಿದ್ದ ಚಾಲಕನನ್ನು ರಕ್ಷಸುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. https://youtu.be/ywbhyLyj8IU?si=MDXzZF_eZ2vsXs4h ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ.ಹಿರೇಹೊನ್ನಳ್ಳಿ-ಬೇಗೂರು ನಡುವೆ ನಡೆದ ಘಟನೆಯಾಗಿದ್ದು, ಎರಡೂ ಗ್ರಾಮಗಳ ನಡುವೆ ಹರಿಯುವ ಶಾಲ್ಮಲಾ ನದಿಯಲ್ಲಿ ಮಧ್ಯರಾತ್ರಿ ನಡೆದ ಘಟನೆಯಲ್ಲಿ ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮದ ನಾಗರಾಜ ದೇಮಣ್ಣವರಬೇಗೂರು ಗ್ರಾಮಕ್ಕೆ ತೆರಳುತ್ತಿದ್ದರು. ನೀರಿನ ರಭಸಕ್ಕೆ ಕಾರು ಸಮೇತ ಕೊಚ್ಚಿ ಹೋಗಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಕೊಚ್ಚಿ ಹೋಗುವ ಸಮಯದಲ್ಲಿ ಕಾರಿನಿಂದ ಮರವೇರಿದ ಯುವಕ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ರಕ್ಷಣೆ ಮಾಡುವಲ್ಲಿ.ಯಶಸ್ವಿಯಾಗಿದ್ದಾರೆ
ವಿಜಯನಗರ: ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಸಾವನ್ನಪ್ಪಿದ್ದಾರೆ. ಶುದ್ಧ ನೀರು ಕೊಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶಕ್ಕೆ ಒಳಗಾದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ನಡೆದಿದೆ. https://youtu.be/sspSOm-DFtQ?si=8TupPdFxQ7zYBCUD ಗ್ರಾಮದ ಸುರೇಶ್(30), ಮಹಾಂತೇಶ್(45)ಗೌರಮ್ಮ(60), ಹನುಮಂತಪ್ಪ(38),8 ತಿಂಗಳ ಗಂಡು ಮಗು ಸಾವನ್ನಪ್ಪಿದವರು. ಗ್ರಾಮದ ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರ ಸಾವಾಗಿದೆ. ಕಳೆದ ವಾರ ಮೂವರು ಸಾವನ್ನಪ್ಪಿದ್ದು, ಸರಣಿ ಸಾವಿನಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ವಾಂತಿ ಭೇದಿಯಿಂದ ನರಳಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಎಂದು ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಗರ್ಭಿಣಿ ನಿಂಗಮ್ಮ ಎನ್ನುವವರಿಗೆ ಕೂಡ ವಾಂತಿಭೇದಿ ಕಾಣಿಸಿಕೊಂಡಿದ್ದು, ಹೆರಿಗೆ ವೇಳೆ ಗಂಡು ಮಗು ಕೂಡ ಸಾವನ್ನಪ್ಪಿದೆ. ಇದಕ್ಕೆ ಗ್ರಾಮಕ್ಕೆ ಸರಬರಾಜು ಆಗುವ ನಲ್ಲಿಯಲ್ಲಿ ಕಲುಷಿತ ನೀರು ಬಂದು ವಾಂತಿ ಭೇದಿಯಾಗುತ್ತಿದೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ. ಇಷ್ಟೇಲ್ಲ ಆದರೂ ಕೂಡ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ ಆರೋಗ್ಯ ಅಧಿಕಾರಿಗಳ…
ಬೆಂಗಳೂರು: ಚನ್ನಪಟ್ಟಣದಲ್ಲಿ ಟಿಕೆಟ್ ಅನೌನ್ಸ್ಗೂ ಮೊದಲೇ ಆಂತರಿಕ ಯುದ್ಧ ಆರಂಭವಾಗಿದೆ. ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಆ ಮೂಲಕ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ. https://youtu.be/sspSOm-DFtQ?si=TUJK7VwVzGd0Pflu ಹೌದು ರಾಜ್ಯ ರಾಜಕಾರಣದಲ್ಲಿ ಇಂದು ಅತಿ ದೊಡ್ಡ ಬೆಳವಣಿಗೆ ಆಗಿದ್ದು, ಚನ್ನಪಟ್ಟಣ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯೆ ಎಲ್ಲಾ ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿತ್ತು.ಇದೀಗ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಂಗಳವಾರ ತಡರಾತ್ರಿ ಎರಡು ಸಲ ಮನೆಯಿಂದ ರಹಸ್ಯ ಸ್ಥಳಕ್ಕೆ ಹೋಗಿ ಯೋಗೀಶ್ವರ್ ಚರ್ಚಿಸಿದ್ದರು. ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಪಕ್ಷ ಸೇರ್ಪಡೆಗೆ ಸಿಪಿವೈಗೆ ಡಿಕೆಶಿ ತಿಳಿಸಿದ್ದರು.…
ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣಾ ಕಾವು ಜೋರಾಗಿದ್ದು, ಅದರಲ್ಲೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದೆ. https://www.youtube.com/live/3isTZtD9Hnc?si=8wnvigctYYtvo9VZ ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ಬಳಿಕ ಇಬ್ಬರು ನಾಯಕರು ಒಂದೇ ಕಾರಿನಲ್ಲಿ ತೆರಳಿ ಸಿಎಂ ಸಿದ್ದರಾಯ್ಯನವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ನಾಯಕರ ಸಲಹೆ ಮೇರೆಗೆ ಎನ್ಡಿಎ ಟಿಕೆಟ್ ಸಿಗಬಹುದು ಎಂದು ಯೋಗೇಶ್ವರ್ ನಿನ್ನೆಯವರೆಗೂ ಕಾದು ಕುಳಿತ್ತಿದ್ದರು. ಸಂಜೆ ವರೆಗೂ ಕಾಯುತ್ತೇನೆ ಎಂದು ಯೋಗೇಶ್ವರ್ ಅವರು ಪ್ರಲ್ಹಾದ್ ಜೋಶಿಸಂಸದ ಡಾ.ಸಿ.ಎನ್. ಮಂಜುನಾಥ್ಗೆ ತಿಳಿಸಿ ಎಂದು ನಿನ್ನೆ ಚನ್ನಪಟ್ಟಣದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಆದ್ರೆ, ಬಿಜೆಪಿ ಟಿಕೆಟ್ ಘೋಷಣೆ ಆಗದಿರುವ ಕಾರಣ ಸಿಪಿ ಯೋಗೇಶ್ವರ್ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಿದರು. ಬಳಿಕ ಒಂದೇ ಕಾರಿನಲ್ಲಿ ಇಬ್ಬರೂ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಸ್ನೇಹಾ ಅಲಿಯಾಸ್ ಸಂಜನಾ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅಂತೆಯೇ ಇದೀಗ ಎಪಿಸೋಡ್ ನೋಡಿದ್ರೆ ಅವರ ಪಾತ್ರ ಅಂತ್ಯವಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಕೆಲವೊಂದು ಗುಡ್ ಬೈ ಹೇಳೋದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಸಂಜನಾ ಬರೆದುಕೊಂಡಿದ್ದರು. ಆಕೆ ಬರೆದುಕೊಂಡಿದ್ದಕ್ಕೆ ಪೂರಕ ಎಂಬಂತೆ ಸದ್ಯ ಪುಟ್ಟಕ್ಕನ ಮಕ್ಕಳ ಧಾರವಾಹಿಯ ಹೊಸ ಪ್ರೋಮೋ ಔಟ್ ಆಗಿದೆ. ಅತ್ತೆ ಪಾಲಿಗೆ ಸೊಸೆ ಸ್ನೇಹಾನೇ ಕಾವಲಾಗಿದ್ದಾಳೆ. ಬಂಗಾರಮ್ಮನಿಗೆ ತೋಡಿದ ಖೆಡ್ಡಾದಲ್ಲಿ ತಾನೇ ಉರುಳಿ ಬೀಳುವಂತಿದೆ ಸಿಂಗಾರಮ್ಮ. ಅತ್ತೆಯನ್ನು ಕಾಪಾಡಬೇಕು ಅಂತಿದ್ದ ಸ್ನೇಹಾಗೆ ಸಿಂಗಾರಮ್ಮ ಆಕ್ಸಿಡೆಂಟ್ ಮಾಡಿಸಬೇಕು ಎಂದು ಪ್ಲ್ಯಾನ್ ಮಾಡ್ತಾಳೆ. ಆದರೆ ಈ ಮಾತನ್ನು ಆಣೆ ಚೌಡವ್ವ ಕದ್ದು ಕೇಳಿಸಿಕೊಳ್ತಾಳೆ. ಆದರೆ ಈಗ ಹೊಸ ಪ್ರೋಮೋ ನೋಡಿದರೆ, ಸ್ನೇಹಾ ಹಾಗೂ ಬಂಗಾರಮ್ಮ ಬರುತ್ತಿದ್ದ ಕಾರು ಆಕ್ಸಿಡೆಂಟ್ ಆಗಿದೆ. ಭೀಕರ…
ಲೈಂಗಿಕ ಕ್ರಿಯೆಯ ನಂತರ, ಕೆಲವರಿಗೆ ಒಂದೊಂದು ರೀತಿಯ ಅನುಭವ ಉಂಟಾಗುತ್ತದೆ. ತಲೆನೋವು ತುಂಬಾ ಸಾಮಾನ್ಯವಾಗಿದೆ. ಆದರೆ ಅದು ಯಾವಾಗಲೂ ಕಾಣಿಸಿಕೊಂಡರೆ, ಆ ಬಗ್ಗೆ ತಪಾಸಣೆ ನಡೆಸುವುದು ಒಳ್ಳೆಯದು. ಏಕೆಂದರೆ ಇದು ದೊಡ್ಡ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಅದಕ್ಕಾಗಿಯೇ ಪದೇ ಪದೇ ತಲೆನೋವು ಬಂದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ತಲೆನೋವಿನ ಕೆಲವೊಂದು ಕಾರಣಗಳನ್ನು ತಿಳಿಯೋಣ. ಸೈನಸ್ ಸೈನಸ್ ಸೋಂಕುಗಳು ಹೆಚ್ಚಾಗಿ ತಲೆನೋವು ಉಂಟುಮಾಡುತ್ತವೆ. ನೀವು ಕೆನ್ನೆ, ಹಣೆ ಮತ್ತು ಮೂಗಿನ ಮೇಲಿನ ಭಾಗದಲ್ಲಿ ನೋವು ಅನುಭವಿಸಿದರೆ, ಅದು ಸೈನಸ್‌ನಿಂದ ಉಂಟಾಗುತ್ತದೆ ಎಂದು ಅರ್ಥಮಾಡಿಕೊಳ್ಳಿ. ಇವುಗಳ ಜೊತೆಗೆ ಮೂಗು ಸೋರುವಿಕೆ, ಕಿವುಡುತನ, ಜ್ವರ ಮತ್ತು ಮುಖದ ಊತದಂತಹ ಸಮಸ್ಯೆಗಳಿವೆ. ಸೆಕ್ಸ್, ವ್ಯಾಯಾಮ ತಜ್ಞರು ಹೇಳುವಂತೆ ಕೆಲವರಿಗೆ ವ್ಯಾಯಾಮದ ಸಮಯದಲ್ಲಿ ಅಥವಾ ಲೈಂಗಿಕತೆಯ ನಂತರ ತಲೆನೋವು ಬರುತ್ತದೆ. ಈ ಸಮಯದಲ್ಲಿ, ನೆತ್ತಿ, ತಲೆ ಅಥವಾ ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚಿನ ರಕ್ತದ ಅಗತ್ಯವಿರುತ್ತದೆ. ಇದಕ್ಕಾಗಿ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ತಲೆನೋವು ಉಂಟಾಗುತ್ತದೆ. ಹಸಿವು ಹಸಿವು ಕೂಡ ತಲೆನೋವಿಗೆ…
ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸಿದರೆ ನಿಮಗೆ ಸಾಕಷ್ಟು ತೊಂದರೆಯಾಗಬಹುದು. ವಿಶೇಷವಾಗಿ ನೀವು ಕೆಲವು ಪ್ರಮುಖ ಕೆಲಸ ಅಥವಾ ಪ್ರಯಾಣದ ನಡುವೆ ಇರುವಾಗ ನಿಮಗೆ ಬಹಳ ತೊಂದರೆ ಉಂಟುಮಾಡಬಹುದು. ಪದೇ ಪದೇ ಮೂತ್ರ ವಿಸರ್ಜನೆಯಾಗುವುದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಮೂತ್ರಸೋರಿಕೆಗೆಕಾರಣಗಳೇನು ? ಒಂದು ಸಾರಿ ಮೂತ್ರ ಬಂದಾಗ ಶೌಚಾಲಯಕ್ಕೆ ಹೋಗಿ ಸರಿಯಾಗಿ ಮೂತ್ರ ಮಾಡದೆ ಬಂದಾಗ ಇಂಥಾ ಸಮಸ್ಯೆ ಉಂಟಾಗುತ್ತದೆ. ಸ್ವಲ್ಪ ಸಮಯದಲ್ಲೇ ಮೂತ್ರ ಸೋರಿಕೆಯನ್ನು ಅನುಭವಿಸಬಹುದು ಅಥವಾ ಮೂತ್ರ ಬರುವ ಹಠಾತ್ ಪ್ರಚೋದನೆಯನ್ನು ಅನುಭವಿಸಬಹುದು. ಕೆಲವರಲ್ಲಿ ಇದು ಪ್ರತಿದಿನ ಕಂಡು ಬರುವ ಸಮಸ್ಯೆಯಾಗಿದೆ. ಇನ್ನು ಕೆಲವರಿಗೆ ಇದು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಸಂಭವಿಸಬಹುದು. ನಗುವುದು, ವ್ಯಾಯಾಮ ಮಾಡುವುದು, ಕೆಮ್ಮುವುದು ಮುಂತಾದ ದೈಹಿಕ ಚಟುವಟಿಕೆಯಿಂದ ಸಹ ಪದೇ ಪದೇ ಮೂತ್ರ ಸೋರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂಥಾ ಸಂದರ್ಭಗಳಲ್ಲಿ, ಮೂತ್ರಕೋಶವು ನಿಯಂತ್ರಣವನ್ನು ಕಳೆದುಕೊಳ್ಳಬಹುದು ಮತ್ತು ನೀವು ಸ್ವಲ್ಪ ಮೂತ್ರ ವಿಸರ್ಜನೆ ಮಾಡಬಹುದು. ಇದು ಸಾಕಷ್ಟು ಸಾಮಾನ್ಯವಾಗಿದೆ ಮತ್ತು ಆತಂಕಕಾರಿ ಪರಿಸ್ಥಿತಿ ಅಲ್ಲ.…
ಸೂರ್ಯೋದಯ: 06:15, ಸೂರ್ಯಾಸ್ತ : 05:45 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶರದ ಋತು, ಅಶ್ವಿನಿ ಮಾಸ, ತಿಥಿ: ಸಪ್ತಮಿ ನಕ್ಷತ್ರ: ಪುನರ್ವಸು ರಾಹು ಕಾಲ:12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30vನಿಂದ 12:00 ತನಕ ಅಮೃತಕಾಲ: ರಾ .3:48 ನಿಂದ ಬೆ.5:26 ತನಕ ಅಭಿಜಿತ್ ಮುಹುರ್ತ: ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಸಂತಾನ ಅಪೇಕ್ಷಿಗಳಿಗೆ ಫಲಪ್ರಾಪ್ತಿಯಾದ ಕಾರಣದಿಂದ ಮನೆಯಲ್ಲಿ ಹರ್ಷೋದ್ಗಾರ,ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿದವರಿಗೆ ಹೆಸರುವಾಸಿಯ ಕಂಪನಿಯಲ್ಲಿ ಉದ್ಯೋಗ ಪ್ರಾಪ್ತಿ, ದಿನಸಿ ವರ್ತಕರು ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ನಿಮ್ಮ ಪತ್ನಿ ಕಡೆಯಿಂದ ಆಸ್ತಿ ಭಾಗ್ಯ,ಈ ವಾರದಲ್ಲಿ ದೊಡ್ಡ ಧನಾತ್ಮಕ ಬದಲಾವಣೆ ಸಾಧ್ಯತೆ, ಉದ್ಯೋಗದಲ್ಲಿ ಅಧಿಕಾರಿಯ ಸಂಪೂರ್ಣ ಬೆಂಬಲ, ಉದ್ಯೋಗದಲ್ಲಿ ವರ್ಗಾವಣೆ ಜೊತೆ…
ಲಕ್ನೋ:- ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಹಿನ್ನೆಲೆ, ಕಾರಿನಲ್ಲಿದ್ದ 12.5 ಕೆಜಿ ಗೋಲ್ಡ್ ಸೀಜ್ ಮಾಡಲಾಗಿದೆ. ಮಾಂಟ್ ಟೋಲ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕಾರಿನಿಂದ ಸುಮಾರು 12.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದೆಹಲಿಯಿಂದ ಡಿಯೋರಿಯಾ ಕಡೆಗೆ ಚಿನ್ನವನ್ನು ಸಾಗಿಸುತ್ತಿದ್ದರು. ಚಿನ್ನ ಸಾಗಣೆಯ ಸಂಬಂಧ ಯಾವುದೇ ದಾಖಲೆ ಇರಲಿಲ್ಲ. ಆದ್ದರಿಂದ ಚಿನ್ನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರಪ್ರದೇಶದ ಮಥುರಾದಲ್ಲಿ ಘಟನೆ ಜರುಗಿದೆ. ಮಥುರಾ ಪೊಲೀಸರು ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ