Author: Prajatv Kannada

ತುಮಕೂರು: ಹಸುಗಳು ಎರಡು ಕರುಗಳಿಗೆ ಮೂರು ಕರುಗಳಿಗೆ ಜನ್ಮ ನೀಡಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಹಸುವೊಂದು ಒಂದಲ್ಲ ಎರಡಲ್ಲ, ಬರೋಬ್ಬರಿ 4 ಕರುಗಳಿಗೆ ಜನ್ಮ ನೀಡಿದೆ. (Cow Give Birth Four Calves)ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುನಿಯಪ್ಪ ಎಂಬುವರಿಗೆ ಸೇರಿದ ರೈತರ ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು, ತಾಯಿ ಹಸು ಹಾಗೂ ನಾಲ್ಕೂ ಕರುಗಳು ಆರೋಗ್ಯವಾಗಿವೆ. ನಾಲ್ಕು ಕರುಗಳಲ್ಲಿ ಒಂದು ಹೆಣ್ಣು  ಹಾಗೂ ಮೂರು ಗಂಡು ಕರುಗಳಾಗಿವೆ. ನಿನ್ನೆ ಸಂಜೆ ಹಸು ಈ ನಾಲ್ಕು ಕರುಗಳಿಗೆ ಜನ್ಮ ನೀಡಿದೆ.  ಕರುಗಳ ಜನನದಿಂದ ರೈತ ಮುನಿಯಪ್ಪ ಮನೆಯಲ್ಲಿ ಸಂತಸ ನೆಲೆಯಾಗಿದೆ.

Read More

ಮಂಡ್ಯ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮನ್ಮುಲ್‌) ಅಧ್ಯಕ್ಷ ಸ್ಥಾನಕ್ಕೆ ಜುಲೈ 6ರಂದು ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳ ಮುಖಂಡರು ಪಕ್ಷದ ಲೇಬಲ್‌ ಇಲ್ಲದೆ ಸಹಕಾರ ಸಂಘಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದರಂತೆ 12 ನಿರ್ದೇಶಕರ ಬಲದ ಮನ್‌ಮುಲ್‌ನಲ್ಲಿ 7 ಮಂದಿ ಜೆಡಿಎಸ್‌ ಬೆಂಬಲಿತ ನಿರ್ದೇಶಕರಿದ್ದಾರೆ. ಮೂರೂವರೆ ವರ್ಷ ಕಾಲ ಇವರಿಬ್ಬರೂ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಈ ಮಧ್ಯೆ ಜೆಡಿಎಸ್‌ ಪಕ್ಷದ ಆಂತರಿಕ ಒಪ್ಪಂದ ಮತ್ತು ಅಧಿಕಾರ ಹಂಚಿಕೆ ಸೂತ್ರದನ್ವಯ ಎರಡೂವರೆ ವರ್ಷಗಳ ಅಧಿಕಾರಾವಧಿ ಪೂರೈಸಿದ್ದ ರಾಮಚಂದ್ರ ಅವರು ತಿಂಗಳ ಹಿಂದೆ ಸಲ್ಲಿಸಿದ್ದ ರಾಜೀನಾಮೆ, ಮೇ 16ರಂದು ಅಂಗೀಕಾರವಾಗಿದೆ. ಹೀಗಾಗಿ ರಾಮಚಂದ್ರು ಅವರಿಂದ ತೆರವಾದ ಸ್ಥಾನಕ್ಕೆ ಜು.6ರಂದು ಚುನಾವಣೆ ನಿಗದಿಯಾಗಿದೆ

Read More

ಬಾಗಲಕೋಟೆ: ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಕಡೆ ಮುಖ ಮಾಡುವ ವಿಚಾರವಾಗಿ ಮಾತನಾಡಿದ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ, ಅವರು ನಮ್ಮ ಜಿಲ್ಲೆಯವರು, ಬರುತ್ತೀನೆ ಅಂದರೆ ನಾವು ಕರೆದುಕೊಳ್ಳಬೇಕಲ್ಲ. ನಮ್ಮ ಪಕ್ಷದಲ್ಲಿ ಜಾಗ ಇಲ್ಲಪ್ಪ, ನಮ್ಮ ಜಿಲ್ಲೆಯಲ್ಲಿ ಅವರಿಗೆ ಜಾಗ ಇಲ್ಲ. ರೇಣುಕಾಚಾರ್ಯ ಕಾಂಗ್ರೆಸ್​ಗೆ ಬರುತ್ಥೇನೆ ಅಂದರೆ ಇಲ್ಲಿ ಜಾಗ ಬೇಕಲ್ಲ. ಒಮ್ಮೆ ಹಾಗೇ ಮಾತಾಡುತ್ತಾರೆ, ಮತ್ತೊಮ್ಮೆ ಬೇರೆ ರೀತಿ ಮಾತಾಡುತ್ತಾರೆ. ಅಧಿಕಾರದಲ್ಲಿ ಇದ್ದಾಗ ಅವರು ಕಾಂಗ್ರೆಸ್ ಬಗ್ಗೆ ಮಾತಾಡಬೇಕಿತ್ತು ಎಂದರು.

Read More

ಗದಗ: ಜನರ ಮನಸ್ಸನ್ನ‌ ಕೆಡಿಸಿ ಗೊಂದಲ‌ಸೃಷ್ಠಿ ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಪ್ರಯತ್ನ ವಿಫಲ ಎಂದು ಸಚಿವ ಹೆಚ್.ಕೆ.ಪಾಟೀಲ‌ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಕೈಲಾಗದ ಸಿಎಂ‌ ಎಂಬ ಬಿಜೆಪಿ ಟ್ವೀಟ್​ಗೆ ತಿರುಗೇಟು ನೀಡಿದ ಅವರು, ಅಕ್ಕಿ‌ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ‌ ಮಾಡಿದ್ದೇ ಕೇಂದ್ರ ಸರ್ಕಾರ. ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ‌ ಕೊಡಬೇಡಿ. ಇಂತಹ ನಿಲುವಿಗೆ ಆ ಪಕ್ಷದ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು

Read More

ಸಾಗರ ;- ನಟಿ ಅನೂಗೌಡ ಅವರ ಮೇಲೆ ಹಲ್ಲೆ ನಡೆದಿರುವ ಘಟನೆ ಉಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ನಡೆದಿದೆ. ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಜಮೀನಿನ ವಿವಾದದ ಕಾರಣ ಸ್ಥಳೀಯ ನಿವಾಸಿಗಳಾದ ನೀಲಮ್ಮ ಮತ್ತು ಮೋಹನ್ ಅವರು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅವರು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನೂಗೌಡ ಅವರ ತಂದೆ ತಾಯಿ ಕಾಸ್ಪಾಡಿಯಲ್ಲಿ ಜಮೀನು ನೋಡಿಕೊಳ್ಳುತ್ತಿದ್ದು, ನಟಿ ಬೆಂಗಳೂರಿನಿಂದ ಆಗಾಗ ಊರಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

Read More

ಮೈಸೂರು: ಸಿದ್ದರಾಮಯ್ಯ, ಡಿಕೆ​​ ಶಿವಕುಮಾರ್ ಪಂಚೆ ಬಗ್ಗೆ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮೊದಲು ಸಿ.ಟಿ.ರವಿ ತಮ್ಮ ಪಂಚೆಯನ್ನು ಸರಿ ಮಾಡಿಕೊಳ್ಳಲಿ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಎನ್​​​.ಚಲುವರಾಯಸ್ವಾಮಿ (Chaluvarayaswamy)ಟಾಂಗ್​ ಕೊಟ್ಟಿದ್ದಾರೆ. ಹೀಗೆ ಮಾತನಾಡಿದ್ದಕ್ಕೆ ಚುನಾವಣೆಯಲ್ಲಿ ಜನ ಉತ್ತರಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಉತ್ತರವೇ ಅಂತಿಮ. ಕೇವಲ 65 ಸ್ಥಾನಕ್ಕೆ ಕುಸಿದಿರುವ ಬಿಜೆಪಿಯಲ್ಲಿ ಕಚ್ಚಾಟ ಇಲ್ಲವೇ?. ಡಿ.ಕೆ.ಶಿವಕುಮಾರ್​​ ಹಾಗೂ ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರೆ? ಮನಸ್ಸಿಗೆ ಬಂದಂತೆ ಮಾತನಾಡ್ತಿದ್ದಕ್ಕೆ ಜನರು ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಎನ್​​​.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

Read More

ಮೈಸೂರು ;- ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದ ಮೈಸೂರಿನ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 20 ವರ್ಷದ ಎಫ್ರಾಹಿಂ ಮೃತ ದುರ್ದೈವಿ. ಹಕ್ಕಿಪಿಕ್ಕಿ ಸಮುದಾಯದ ಎಫ್ರಾಹಿಂ, ಅಮಿತ್ ಮತ್ತು ಮಂಜುಳ ದಂಪತಿಯ ಪುತ್ರ. ಎಫ್ರಾಹಿಂ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಬಗ್ಗೆ ತಂದೆ-ತಾಯಿ ಜೊತೆ ದೂರವಾಣಿಯಲ್ಲಿಯೂ ಮಾತನಾಡಿದ್ದ. ಆತನನ್ನು ಜೊತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಾ ಎಂಬ ಆತಂಕದಲ್ಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸುವಂತೆ ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ

Read More

ಮೈಸೂರು: ಮೈಸೂರು-ಬೆಂಗಳೂರು ದಶಪಥ ಎಕ್ಸ್ ಪ್ರೆಸ್ ಹೈವೇ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿ ಮುಂದುವರಿದಿದೆ. ಇದೀಗ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಎಕ್ಸ್ ಪ್ರೆಸ್ ಹೈವೇಯ ಟೋಲ್ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಚಾಲನೆಗೊಂಡು ಐದಾರು ತಿಂಗಳು ಕಳೆಯಿತು. ಜನರ ಸುಲಿಗೆ ಮಾಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬೆಂಗಳೂರಿಗೆ ಹೋಗಲು ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಬೇಕು. ಇದೊಂದು ಹಗಲು ದರೋಡೆ ಎಂದು ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಒಂದು ಕಡೆ 330 ಇನ್ನೊಂದು ಕಡೆಗೆ 330 ರೂಪಾಯಿ, ಇದು ಜನರ ಸುಲುಗೆ ಅಲ್ಲದೆ ಬೇರೇನು ಅಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಾಲ್ಕು ಪಥದ ರಸ್ತೆ ಮಾಡಿದ್ದಾಗ ಉಚಿತವಾಗಿ ಸಂಚಾರ ಮಾಡುಬಹುದಿತ್ತು ಎಂದರು. ಈಗ ದಶಪಥ ರಸ್ತೆ ಅಂತ ಮಾಡಿ ಜನರ ಬಳಿ ಸುಲಿಗೆ ಮಾಡ್ತಾ ಇದ್ದಾರೆ. ಆರಂಭದಲ್ಲಿ 3 ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾದ ಈ ರಸ್ತೆಗೆ ರಸ್ತೆ ಕಾಮಗಾರಿ ಈಗ…

Read More

ಕೊಪ್ಪಳ ;– ಟೊಮ್ಯಾಟೊ ರೇಟ್ ಕೇಳಿ ಗ್ರಾಹಕರು ಇದೀಗ ಶಾಕ್ ಆಗಿದ್ದು, ಕೆಜಿ ಟೊಮೆಟೊ 180 ರೂ. ವರೆಗೆ ಮಾರಾಟವಾಗಿದ್ದು, 200 ರೂಪಾಯಿ ಗಡಿ ತಲುಪಿದೆ. 22 ಕೆಜಿ ಟೊಮೆಟೊ ಬಾಕ್ಸ್ ದರ 2500 ರೂ.ನಿಂದ 2,900 ರೂ.ವರೆಗೆ ಮಾರಾಟವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ 180 ರೂ.ಗೆ ಮಾರಾಟವಾಗಿದೆ. ದೇಶದ ವಿವಿಧೆಡೆ ಟೊಮೆಟೊ ದರ 100 ರೂ.ಗಿಂತಲೂ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಒಂದು ಕೆಜಿ ಟೊಮೆಟೊ 180 ರೂ. ವರೆಗೆ ಮಾರಾಟವಾಗಿದ್ದು, 200 ರೂಪಾಯಿ ಗಡಿ ತಲುಪಿದೆ. ಜಿಲ್ಲೆಗೆ ಇಷ್ಟೊಂದು ದರಕ್ಕೆ ಟೊಮೆಟೊ ಮಾರಾಟವಾಗಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

Read More

ತಿರುಪತಿ ಸಮೀಪದ ಜಲಪಾತವೊಂದಕ್ಕೆ ವಿಹಾರಕ್ಕೆ ಹೋದ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ. ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್‌ ಅಮೀನ್‌ (23) ಮೃತ ಯುವಕ. ಪ್ರಕರಣ ವಿವರ: ಸುಮಂತ್‌ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ತಂದೆಯ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಫಾಲ್ಸ್‌ಗೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭ ಬಂಡೆಕಲ್ಲಿನಿಂದ 10 ಅಡಿ ಕೆಳಭಾಗಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ. ಸುಮನ್‌ ಸಹಾಯಕ್ಕಾಗಿ ಕೂಗಿದರೂ ಏನೂ ಪ್ರಯೋಜನವಾಗಿಲ್ಲ. ಇದನ್ನು ನೋಡಿದ ಗೆಳೆಯ ಕೂಡಲೇ ಧಾವಿಸಿ ಬಂದು ಸುಮಂತ್‌ನನ್ನು ಮೇಲಕ್ಕೆತ್ತಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೂಡಲೇ ಮನೆಯಲ್ಲಿರುವವರಿಗೆ ವಿಚಾರ ತಿಳಿಸಲಾಗಿದ್ದು, ಭಾನುವಾರ ಬೆಳಗ್ಗೆ ಮೃತದೇಹವನ್ನು ಕುಳಾಯಿ ಹೊನ್ನೆಕಟ್ಟೆಯಲ್ಲಿರುವ ಮನೆಗೆ ತಂದು ಬಳಿಕ ಅಂತ್ಯಸಂಸ್ಕಾರ ಮಾಡಲಾಯಿತು.

Read More