ಶಿವಮೊಗ್ಗ ;- ರಾಜ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಯೇ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವ್ಯಂಗ್ಯವಾಡಿದರು. ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಹಾಗೂ ರಾಜಾಧ್ಯಕ್ಷರ ಆಯ್ಕೆಯಾದ ಬಳಿಕ ಬಿಜೆಪಿಯಲ್ಲಿ ಎರಡು ಪಾರ್ಟಿ ಆಗುತ್ತದೆ”. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಯಿದೆ ಅಂತ ಗೊತ್ತಿರದವರನ್ನು ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಕೊಡಲ್ಲ ಎನ್ನುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಯೇ ಇಲ್ಲದಂತಾಗಿದೆ” ಎಂದು ವಾಗ್ದಾಳಿ ನಡೆಸಿದರು. ”ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನನ್ನ ಪ್ರಕಾರ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡುತ್ತಾರೆ ಅನಿಸುತ್ತೆ ಎಂದು ಲೇವಡಿ ಮಾಡಿದರು. ಬಿಜೆಪಿ ಬಾಯಿ ಬಂದಂತೆ ಹೇಳಿಕೆಗಳನ್ನು ನೀಡುವುದನ್ನು ನೋಡಿದರೆ ನಮಗೆ ಕನಿಕರ ಬರುತ್ತದೆ” ಎಂದರು.
Author: Prajatv Kannada
ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ವಸತಿ ಯೋಜನೆ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸುಳ್ಳು ಅಭಿಯಾನ ಆರಂಭ ಮಾಡಿದ್ದಾರೆ. ಸುಳ್ಳು ಪ್ರಚಾರದಿಂದ ಗೆದ್ದ ಮೇಲೆ ಅಭಿವೃದ್ಧಿ ಮೇಲೆ ಲಕ್ಷ್ಯ ಕೊಡ್ತಾರೆ ಎಂದು ಭಾವಿಸಿದ್ದೆ. ಆದರೆ ಶಾಸಕ ಪ್ರದೀಪ್ ಈಶ್ವರ್‌ಗೆ ಸುಳ್ಳೆ ಮನೆ ದೇವರಾಗಿದೆ ಎಂದು ಮಾಜಿ ಸಚಿವ ಸುಧಾಕರ್ (K Sudhakar) ಕಿಡಿಕಾರಿದ್ದಾರೆ. ಕ್ಷೇತ್ರದಲ್ಲಿ ನಿವೇಶನಗಳು ಆಗೇ ಇಲ್ಲ ಎನ್ನುವ ಹಾಗೆ ಬಡವರ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಸುಳ್ಳಿನ ಯೋಜನೆ ತಂದಿಲ್ಲ. ಕಣ್ಣಿಗೆ ಕಂಡಿರುವ ಯೋಜನೆ ತಂದಿದ್ದೇನೆ. ರಾಜ್ಯದಲ್ಲೇ 20,000ಕ್ಕೂ ಹೆಚ್ಚು ನಿವೇಶನ ತಂದ ಏಕೈಕ ವ್ಯಕ್ತಿ ನಾನು. ಇದನ್ನು ತಿಳಿದುಕೊಳ್ಳಲಿ ಎಂದರು. ಎಲ್ಲದಕ್ಕೂ ಆದೇಶ ಪತ್ರಗಳಿವೆ. 555 ಎಕರೆ ಜಮೀನು ಮಂಜೂರಾತಿ ಆಗಿದೆ. ನಾನೇ ಖುದ್ದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಫಲಾನುಭವಿಗಳ ಆಯ್ಕೆ ಮಾಡಿದ್ದೇನೆ. ಆಗ ಆಧಿಕಾರಿಗಳು ಏನು ಮಾಡುತ್ತಿದ್ದರು? ಶಾಸಕ ಪ್ರದೀಪ್ ಈಶ್ವರ್ ಹಕ್ಕು ಪತ್ರ ಯಾವುದು, ಮಂಜೂರಾತಿ ಪತ್ರ ಯಾವುದು ಎಂಬುದು…
ನವದೆಹಲಿ ;- ಇಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿಒ ಶೃಂಗಸಭೆ ಜರುಗಲಿದೆ. ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಎಲ್ಲಾ ಎಂಟು ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ವೇಳೆ ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಇರಾನ್ ಅನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭ ಆಗಲಿದೆ. ಸದ್ಯ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ. ಈ ಒಕ್ಕೂಟದಲ್ಲಿ ಬೆಲಾರಸ್ ಸೇರ್ಪಡೆಗೆ ರಷ್ಯಾ ಬಲವಾಗಿ ಬೆಂಬಲ ನೀಡಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ದೇಶಗಳು ಕೂಡ ಎಸ್ಸಿಒಗೆ ಸೇರಲು ಬಯಸುತ್ತಿವೆ. ಆದರೆ ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ. ಮಾಹಿತಿ ಪ್ರಕಾರ, ತುರ್ಕಮೆನಿಸ್ತಾನವನ್ನು ಸಹ ಅತಿಥಿಯಾಗಿ ಆಹ್ವಾನಿಸಲಾಗಿದೆ. 1996ರಲ್ಲಿ ರೂಪುಗೊಂಡ ಈ ಒಕ್ಕೂಟದಲ್ಲಿ ಭಾರತ 2017ರಲ್ಲಿ ಪೂರ್ಣ ಸದಸ್ಯತ್ವವನ್ನು…
ನವದೆಹಲಿ: ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜ್ಯದಲ್ಲಿ 45-60 ವಯೋಮಾನದ ಅವಿವಾಹಿತರಿಗೆ ಶೀಘ್ರದಲ್ಲೇ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಮುಂದಿನ ಆರು ತಿಂಗಳೊಳಗೆ ರಾಜ್ಯದಲ್ಲಿ ವೃದ್ಧ ಪಿಂಚಣಿಯನ್ನು ತಿಂಗಳಿಗೆ 3000 ರೂ.ಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು. ಒಂದು ತಿಂಗಳೊಳಗೆ ನಿರ್ಧಾರ ಒಂದು ತಿಂಗಳೊಳಗೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕರ್ನಾಲ್‌ನ ಕಲಾಂಪುರ ಗ್ರಾಮದಲ್ಲಿ ನಡೆದ ‘ಜನಸಂವಾದ’ ಕಾರ್ಯಕ್ರಮದಲ್ಲಿ ಹೇಳಿದರು. ‘ಜನ ಸಂವಾದ’ ಸಂದರ್ಭದಲ್ಲಿ 60 ವರ್ಷದ ಅವಿವಾಹಿತ ವ್ಯಕ್ತಿಯ ಪಿಂಚಣಿ ಸಂಬಂಧಿತ ದೂರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸರ್ಕಾರವು ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ಹೇಳಿದರು. ಕರ್ನಲ್ ಜಿಲ್ಲೆಗೆ ಇಂಟರ್‌ನೆಟ್ ಸೌಲಭ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವಂತೆ ಕರ್ನಾಲ್ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು. ಇಂದಿನ ಕಾಲದಲ್ಲಿ ಶೇ.70ರಿಂದ ಶೇ.80ರಷ್ಟು ಕೆಲಸಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಅದಕ್ಕಾಗಿಯೇ ಹಳ್ಳಿಗಳಲ್ಲಿ ಇಂಟರ್‌ನೆಟ್ ಸೇವೆ ಅಗತ್ಯವಾಗಿದೆ. ಪ್ರತಿ ಹಳ್ಳಿಯಲ್ಲಿ…
ಬೆಂಗಳೂರು: ನ್ಯೂಯಾರ್ಕ್ ನ ಪೌರಾಣಿಕ ಕಾರ್ನೆಗೀ ಹಾಲ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಬೆಂಗಳೂರಿನ ರಶ್ಮಿ ಶಶಿ ಅವರ 30 ವಿಧ್ಯಾರ್ಥಿಗಳ ನೃತ್ಯ ನೆರೆದಿದ್ದ ಕಲಾರಸಿಕರ ಮನಸೂರೆಗೊಳ್ಳುವಂತೆ ಮಾಡಿದೆ. ಕಾರ್ನೆಗೀ ಹಾಲ್ ನಲ್ಲಿ ನಡೆದ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ 10 ಆಯ್ದ ನೃತ್ಯ ಶಾಲೆಗಳು ಪಾಲ್ಗೊಂಡಿದ್ದು, ಬೆಂಗಳೂರು ಮೂಲದ ಗುರು ರಶ್ಮಿಯವರ ತಂಡ ಭಾರತೀಯ ಶಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸಿತು. ಅಮೆರಿಕಾದ ಪ್ರಸಿದ್ಧ ಫೆಸ್ಟಿವಲ್ ನಲ್ಲಿ ಒಂದಾಗಿರುವ ನ್ಯೂಯಾರ್ಕ್ ಕಾರ್ನೆಗೀ ಡ್ಯಾನ್ಸ್ ಫೆಸ್ಟಿವಲ್ ಗೆ ಪ್ರಪಂಚದಾದ್ಯಂತ ಅತ್ಯುತ್ತಮ ಕಲಾವಿದರನ್ನ ಆಯೋಜಿಸಲಾಗಿತ್ತು. ಫೆಸ್ಟಿವಲ್ ಗೆ ಉತ್ತರ ಅಮೆರಿಕಾದ್ಯಂತ ಕೇವಲ ಹತ್ತು ಪ್ರತಿಷ್ಠಿತ ನೃತ್ಯ ಶಾಲೆಗಳನ್ನು ಆಯ್ಕೆಯಾಗಿದ್ದವು. ಈ ಪೌರಾಣಿಕ ವಿಶ್ವ ವೇದಿಕೆಯಲ್ಲಿ ಗುರು ರಶ್ಮಿ ಅವರ ವಿಧ್ಯಾರ್ಥಿಗಳ ತಂಡ ಭಾರತದ ಪರಂಪರೆಯ ಸಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸುವುದರೊಂದಿಗೆ ದೇಶದ ಗೌರವ ಹೆಚ್ಚಿಸಿದರು. ಟೆಕ್ಸಾಸ್ ಲ್ಯಾಂಡ್‍ನಲ್ಲಿರುವ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್‍ನ ಕಲಾತ್ಮಕ ನಿರ್ದೇಶಕರಾಗಿರುವ ಗುರು ರಶ್ಮಿ ಶಶಿಯವರು ಬೆಂಗಳೂರಿನವರು. ಭರತನಾಟ್ಯ, ಜಾನಪದ ಮತ್ತು…
ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ತನ್ನ ಕಹಿ ಗುಣ ಲಕ್ಷಣದಿಂದಲೇ ಜಗತ್ಪ್ರಸಿದ್ಧಿ ಪಡೆದಿರುವ ಮುಳ್ಳು ಮೈ ಹೊಂದಿರುವ ತರಕಾರಿ ಈ ಹಾಗಲ ಕಾಯಿ. ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ. ಹಾಗಲಕಾಯಿ ರಸವು ತನ್ನಲ್ಲಿ ಫೋಲೇಟ್, ಜಿಂಕ್, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ ಎ ‘ ಮತ್ತು ವಿಟಮಿನ್ ‘ ಸಿ ‘ ನಂತಹ ಹಲವಾರು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಆಹಾರದಲ್ಲಿ ನಾರಿನ ಅಂಶದ ಅತ್ಯುತ್ತಮ ಮೂಲ ಎಂದು ಗುರುತಿಸಿಕೊಂಡಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್…
ತಮಿಳಿನ ಸ್ಟಾರ್ ಜೋಡಿ ಸೂರ್ಯ ಹಾಗೂ ಜ್ಯೋತಿಕ ವಿದೇಶಕ್ಕೆ ತೆರಳಿದ್ದಾರೆ. ಮಗನ ಹುಟ್ಟುಹಬ್ಬವನ್ನು ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದು ಸದ್ಯ ವಿದೇಶದಲ್ಲಿನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸೂರ್ಯ ಹಾಗೂ ಜ್ಯೋತಿಕ ಹಂಚಿಕೊಂಡಿದ್ದಾರೆ. ಫರೋ ಐಲ್ಯಾಂಡ್‌ನಲ್ಲಿ ಮಗ ದೇವ್ ಹುಟ್ಟುಹಬ್ಬವನ್ನ ಸೂರ್ಯ, ಜ್ಯೋತಿಕ ದಂಪತಿ ಆಚರಿಸಿದ್ದಾರೆ. ಹೊಸ ಜಾಗಗಳಿಗೆ ಭೇಟಿ ನೀಡುತ್ತ ವೆಕೇಷನ್ ಏಂಜಾಯ್ ಮಾಡ್ತಿರುವ ಸೂರ್ಯ ಫ್ಯಾಮಿಲಿ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾಲಿವುಡ್‌ನ ಬೆಸ್ಟ್ ಕಪಲ್ ಎಂದೇ ಫೇಮಸ್ ಆಗಿರುವ ಸೂರ್ಯ,ಜ್ಯೋತಿಕಾಗೆ ಒರ್ವ ಮಗ ಹಾಗೂ ಮಗಳಿದ್ದು ಇದೀಗ ನಟ ಕುಟುಂಬ ಸಮೇತರಾಗಿ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ ಸೂರ್ಯ ಸದ್ಯ ‘ಕಂಗುವ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದ್ದು, ಈ ಸಿನಿಮಾಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಡಬಲ್ ರೋಲ್‌ನಲ್ಲಿ ಸೂರ್ಯ ಬಣ್ಣ ಹಚ್ಚಲಿದ್ದಾರೆ. ಜ್ಯೋತಿಕಾ ಕೂಡ ಮಲಯಾಳಂ, ತಮಿಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.
ದೆಹಲಿ: ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರಲ್ಲಿ ಯಾರು ಉತ್ತಮರು ಎಂಬ ಚರ್ಚೆ ಎಂದಿಗೂ ಮುಗಿಯದಿದ್ದರೂ, ಮೈದಾನದಲ್ಲಿ ಇಬ್ಬರು ಮಾಜಿ ಅಂತರರಾಷ್ಟ್ರೀಯ ಪ್ರತಿಸ್ಪರ್ಧಿಗಳು ಮತ್ತು ಉತ್ತಮ ಸ್ನೇಹಿತರು ಹರ್ಭಜನ್ ಸಿಂಗ್ ಮತ್ತು ಶೋಯಿಬ್ ಅಖ್ತರ್ ಭಾರತದ ಮಾಜಿ ಸ್ಪಿನ್ನರ್‌ಗಳ ಇತ್ತೀಚಿನ ವೀಡಿಯೊದಲ್ಲಿ ಇದೇ ವಿಷಯವನ್ನು ಚರ್ಚಿಸಿದ್ದಾರೆ. ಈ ಸಮಯದಲ್ಲಿ ಹರ್ಭಜನ್ ಪಾಕಿಸ್ತಾನದ ಮಾಜಿ ವೇಗದ ಆಟಗಾರನನ್ನು ಬಾಬರ್ ಅಜಮ್ ವಿರುದ್ಧ ವಿರಾಟ್ ಕೊಹ್ಲಿ ಕುರಿತು ಅವರ ಅಭಿಪ್ರಾಯಗಳನ್ನು ಕೇಳಿದರು. ರಾವಲ್ಪಿಂಡಿ ಎಕ್ಸ್‌ಪ್ರೆಸ್ ನೀಡಿದ ಉತ್ತರ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅಖ್ತರ್ ಕೊಹ್ಲಿಯನ್ನು ‘ಶ್ರೇಷ್ಠ ಬ್ಯಾಟರ್’ ಎಂದು ರೇಟ್ ಮಾಡಿದರು, ಆದರೆ ಅವರ ದೇಶಬಾಂಧವ ಬಾಬರ್ ಅವರನ್ನು ಕ್ರಿಕೆಟ್ ಕ್ಷೇತ್ರದಲ್ಲಿ ‘ಮುಂಬರುವ ಶ್ರೇಷ್ಠ ಬ್ಯಾಟರ್’ ಎಂದು ಹೆಸರಿಸಿದರು. “ವಿರಾಟ್ ಕೊಹ್ಲಿ ಶ್ರೇಷ್ಠ, ಮತ್ತು ಬಾಬರ್ ಅಜಮ್ ಎಂದಿಗೂ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುವ ತಯಾರಿಯಲ್ಲಿದ್ದಾರೆ. ಅವರು ಟಿ20ಗಳಲ್ಲಿ ಉತ್ತಮವಾಗಲು ಪ್ರಯತ್ನಿಸುತ್ತಿದ್ದಾರೆ. ಜನರು ಯಾವುದೇ ಕಾರಣವಿಲ್ಲದೆ ಅವರ ಹಿಂದೆ ಇದ್ದಾರೆ” ಎಂದು ಭಜ್ಜಿ ಕೇಳಿದ ಪ್ರಶ್ನೆಗೆ…
ಸೂರ್ಯೋದಯ: 05.58 AM, ಸೂರ್ಯಾಸ್ತ : 06.50 ಪಿಎಂ ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಪಾಡ್ಯ 01:38 PM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ಆಷಾಢ 08:25 AM ತನಕ ನಂತರ ಉತ್ತರ ಆಷಾಢ ಯೋಗ: ಇವತ್ತು ಇಂದ್ರ 11:50 AM ತನಕ ನಂತರ ವೈಧೃತಿ ಕರಣ: ಇವತ್ತು ಬಾಲವ 03:24 AM ತನಕ ನಂತರ ಕೌಲವ 01:38 PM ತನಕ ನಂತರ ತೈತಲೆ 11:50 PM ತನಕ ನಂತರ ಗರಜ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 04.08 AM to 05.34 AM , 12.00 PM to 01.24 AM (ಮರುದಿನ) ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:46 ವರೆಗೂ ನಿಮ್ಮ…
ಬೆಂಗಳೂರು ;- ಗಿರಿನಗರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ಡ್ರಗ್ ಪೆಡ್ಲರ್ಸ್ ಅನ್ನು ಅರೆಸ್ಟ್ ಮಾಡಿದ್ದಾರೆ. ಸೈಯ್ಯದ್ ಸಾಧಿಕ್ ಹಾಗೂ ಮಹಾರಾಷ್ಟ್ರ ಮೂಲದ ಸಹೋದರರಾದ ಅಮೂಲ್, ಆಕಾಶ್, ರಾಹುಲ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 50 ಲಕ್ಷ ಮೌಲ್ಯದ 96 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಜಾಲ್ನಾದಲ್ಲಿ ಗ್ಯಾರೇಜ್ ಹೊಂದಿರುವ ಆರೋಪಿಗಳು ಸೈಯದ್ ಸಾಧಿಕ್ ಎಂಬಾತನ ಜೊತೆಗೂಡಿ ಗಾಂಜಾ ಮಾರಾಟ ದಂಧೆ ಮಾಡುತ್ತಿದ್ದರು. ಒಡಿಶಾದಿಂದ ಗಾಂಜಾವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿಸುತ್ತಿದ್ದರು. ಸಾಯಿ ರಾಮ್ ಎಂಬಾತನನ್ನು ಬಂಧಿಸಿದ್ದ ಗಿರಿನಗರ ಠಾಣಾ ಪೊಲೀಸರು ಬಳಿಕ ಸೈಯ್ಯದ್ ಸಾಧಿಕ್ ನನ್ನು ಬಂಧಿಸಿದ್ದರು. ಸಾಧಿಕ್ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಜಾಲ್ನಾಕ್ಕೆ ತೆರಳಿದ್ದರು. ಬಳಿಕ ಆರೋಪಿ ಸಹೋದರರನ್ನು ಬಂಧಿಸಿ ಕರೆ ತರುವಾಗ ಅವರ ಕುಟುಂಬಸ್ಥರ ಹೈಡ್ರಾಮಾ ನಡೆಸಿದ್ದಾರೆ. ಬಂದು ಆರೋಪಿಗಳನ್ನು ಬಂಧಿಸಿದ್ದವರು ಕರ್ನಾಟಕ ಪೊಲೀಸರು ಎಂದು ತಿಳಿದಿದ್ದರೂ ಸಹ ತಮ್ಮವರನ್ನು ಯಾರೋ ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು.…