Author: Prajatv Kannada

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹೈಕಮಾಂಡ್ ವೀಕ್ಷಕರಾದ ವಿನೋದ್ ತಾವಡೆ, ಮನ್ಸುಖ್ ಮಾಂಡವೀಯ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್​ಗೆ ಮಾಹಿತಿ ನೀಡಲಾಗುತ್ತೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಸಾಧ್ಯತೆ. ನಾನ್ ಲಿಂಗಾಯತ ನಿರ್ಧಾರಕ್ಕೆ ಬಂದರೆ ವಿ.ಸುನೀಲ್ ಕುಮಾರ್​ಗೆ ಸ್ಥಾನ.

Read More

ಬೆಂಗಳೂರು: ವಿಧಾನಮಂಡಲ​​​ ಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಒಟ್ಟು 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದ್ದು ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ(Congress Guarantees) ಅನುಷ್ಠಾನ ವಿಚಾರ, ಬಿಜೆಪಿ ಅವಧಿಯ ವಿವಾದಿತ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ​​ ಚರ್ಚೆ ನಡೆಯುವ ಸಾಧ್ಯತೆ ಇದೆ. ಸದನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ.

Read More

ಬೆಂಗಳೂರು;- ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನೋಂದಣಿ ಮಾಡುವಾಗ ನಕಲಿ ಲಿಂಕ್ ಹಾಗೂ ಆಯಪ್‌ಗಳ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದೆ. ಗ್ಯಾರಂಟಿ ಯೋಜನೆಗಳಿಗೆ ನಾಗರಿಕರು ಸೇವಾಸಿಂಧು ಪೋರ್ಟಲ್‌ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಸೈಬರ್ ಖದೀಮರು ಹಲವು ನಕಲಿ ಆಯಪ್‌ ಹಾಗೂ ಲಿಂಕ್‌ಗಳನ್ನು ಹರಿಯಬಿಟ್ಟು, ನಾಗರಿಕರ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ. ‘‌ಗ್ಯಾರಂಟಿ ಯೋಜನೆಗಳ ನೋಂದಣಿಗೆ ಸರ್ಕಾರ ಯಾವುದೇ ಆಯಪ್ ಅನ್ನು ಪರಿಚಯಿಸಿಲ್ಲ. ಆದರೆ ಹಲವು ನಕಲಿ ಆಯಪ್‌ಗಳು ಡೌನ್‌ಲೋಡ್‌ ಮಾಡಿಕೊಳ್ಳಲು ಲಭ್ಯವಿದೆ. ಫಲಾನುಭವಿಗಳು ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಆಯಪ್‌ಗಳನ್ನು ರಿಪೋರ್ಟ್‌ ಮಾಡಬೇಕು. ಈ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಸ್‌.ಡಿ ಶರಣಪ್ಪ ತಿಳಿಸಿದ್ದಾರೆ. ಅಲ್ಲದೇ ಸೇವಾಸಿಂಧು ವೆಬ್‌ಸೈಟ್‌ ಮೂಲಕವೇ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿರುವ ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹೇಳಿದ್ದಾರೆ.

Read More

ಬೆಂಗಳೂರು ;- ಚಾತುರ್ವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣ ವಂಚಿತರನ್ನಾಗಿಸಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಚನ ಪಿತಾಮಹ ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾತುರ್ವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಶೂದ್ರರಿಗೆ ಶಿಕ್ಷಣ ಭಾಗ್ಯವನ್ನು ಕಲ್ಪಿಸಿ ಕ್ರಾಂತಿ ಮಾಡಿದವರು ವಚನಕಾರರು ಮತ್ತು ಬಸವಣ್ಣನವರು’ ಎಂದರು. ಅತ್ಯಂತ ಕೆಳಜಾತಿಯಲ್ಲಿ ಜನಿಸಿ ಅತ್ಯುನ್ನತ ಎತ್ತರಕ್ಕೆ ಏರಿದ ಅಲ್ಲಮಪ್ರಭುರನ್ನು ಅನುಭವ ಮಂಟಪದ ಮುಖ್ಯಸ್ಥರನ್ನಾಗಿಸಿದ್ದರು. ಈ ಅನುಭವ ಮಂಟಪದ ಆಶಯವನ್ನು, ವಚನಗಳ ಮಹತ್ವವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದವರಲ್ಲಿ ಫ.ಗು.ಹಳಕಟ್ಟಿ ಪ್ರಮುಖರು ಎಂದು ಸ್ಮರಿಸಿದರು. ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ, ಸಂಪತ್ತಿನಿಂದ ಶೂದ್ರ ಸಮುದಾಯ ವಂಚಿತವಾಗಿತ್ತು. ಅದಕ್ಕೇ ಕಾಯಕ ಮತ್ತು ದಾಸೋಹ ಸಂಸ್ಕಾರದ ಮೂಲಕ ಸರ್ವರಿಗೂ ಶಿಕ್ಷಣ ಮತ್ತು ಅವಕಾಶಗಳಲ್ಲಿ ಸಮಪಾಲು ಸಿಗುವಂತೆ ಮಾಡಿದ್ದು ಬಸವಣ್ಣನವರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಇದೇ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Read More

ಇತ್ತೀಚಿಗೆ ಅಂತೂ ಸರ್ಕಾರಿ ಬಸ್ ಗಳು ಸಿಕ್ಕಪಟ್ಟೆ ಕೆಟ್ಟು ನಿಲ್ಲುತ್ತಾ ಇದೆ..ಹೀಗಾಗಿ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗ್ತಿದೆ.ಇದರಿಂದ ನಿಗಮಕ್ಕೂ ಕೂಡ ಕೆಟ್ಟ ಹೆಸರು ಬರುತ್ತಿದೆ ‌ಆದ್ರೆ ಇದೀಗ.ಇದನ್ನು ನಿಲ್ಲಿಸೋದಕ್ಕೆ ಶೀಘ್ರದಲ್ಲೇ ಸಾವಿರಕ್ಕೂ ಹೆಚ್ಚು ಪ್ರೀಮಿಯಂ ಆಧಾರಿತ ಬಸ್ ಗಳನ್ನ ಖರೀದಿಸಲು ಸರ್ಕಾರ ಮುಂದಾಗಿದೆ.   ರಾಜ್ಯ ಸಾರಿಗೆ ನಿಗಮಗಳು ಜನ್ರ  ನಾಡಿಮಿಡಿತ. ವರ್ಷಕ್ಕೆರೆಡು ರಾಷ್ಟ್ರಮಟ್ಟದ ಪ್ರಶಸ್ತಿ ,ಬೆಸ್ಟ್ ಸಾರ್ವಜನಿಕ ಸಾರಿಗೆ ಅನ್ನೋ ಗರಿ ಇದೆ.ಹೀಗಿದ್ದು  ಇತ್ತೀಚಿಗೆ ಕೆಟ್ಟ ದಿನಗಳನ್ನು ಎದುರಿಸುತ್ತಾ ಇದೆ. ಬಸ್ ಗಳು ಫಿಟ್ ಇಲ್ಲ. ಆಕ್ಸಿಡೆಂಟ್ ಗಳು ಜಾಸ್ತಿ ಆಗ್ತಿತ್ತಿವೆ..ಸದ್ಯ ನಿಗಮದ ಹಲವು  ಬಸ್ ಗಳು 9 ಲಕ್ಷ ದಾಟಿದ ಬಸ್ ಗಳೇ ಆಗಿವೆ.ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದ ನಿಗಮ ಇದೀಗ ಹೊಸ ಬಸ್ ಖರೀದಿನತ್ತ ಮುಖ ಮಾಡಿದೆ.ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳನ್ನ ಖರೀದಿ ಮಾಡ್ತಾ ಇರೋ ನಿಗಮ, ಇದೀಗ ಶಕ್ತಿ ಯೋಜನೆಯಿಂದ ಬಸ್ ಗಳ ಬೇಡಿಕೆ ಬಂದ ಬೆನ್ನಲ್ಲೇ ಹೊಸ ಬಸ್ ಖರೀದಿ, ಸಿಬ್ಬಂದಿ ನೇಮಕ  ಜತೆ ಆದಾಯ…

Read More

ಬೆಂಗಳೂರು ;- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಚಿವ ದಿನೇಶ್ ಗುಂಡೂರಾವ್ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ. ವಿವಿಧ ರಾಜ್ಯಗಳ ಆರೋಗ್ಯ ಸಚಿವರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಪ್ರತಿಪಕ್ಷಗಳನ್ನು ಟೀಕಿಸಲು ಪ್ರಧಾನಿಯವರು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಕಲ್ ಸೆಲ್ ಅನಿಮೀಯಾ ನಿವಾರಣೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವರ್ಚುಯಲ್ ಮೂಲಕ ಭಾಗವಹಿಸಿದ್ದ ವೇಳೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ವಿವಿಧ ರಾಜ್ಯಗಳ ಆರೋಗ್ಯ ಸಚಿವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮದ ಕುರಿತಾಗಿ ಯಾವುದೇ ಚರ್ಚೆ ಮಾಡದೆ ಚುನಾವಣೆ ಮೂಡ್ ನಲ್ಲಿರುವ ಮೋದಿ ವಿಪಕ್ಷಗಳನ್ನು ಹಣಿಯಲು ಸರ್ಕಾರಿ ಕಾರ್ಯಕ್ರಮ ಬಳಸಿಕೊಂಡಿದ್ದಾರೆ ಎಂದು ದೂರಲಾಗಿದೆ.

Read More

ಬೆಂಗಳೂರು ;- ವಿಪಕ್ಷ ನಾಯಕನ ಆಯ್ಕೆ ಕಸರತ್ತು ಬೆಂಗಳೂರಿಗೆ ಶಿಫ್ಟ್‌ ಆಗಿದೆ. ಇದಕ್ಕಾಗಿಯೇ ಕೇಂದ್ರದ ಇಬ್ಬರು ವೀಕ್ಷಕರು ಆಗಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿ ಭೇಟಿ ವೇಳೆಯಲ್ಲಿ ಕರ್ನಾಟಕದ ವಿರೋಧ ಪಕ್ಷದ ನಾಯಕನ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ನಿನ್ನೆ ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕವೂ ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಒಮ್ಮತ ಮೂಡಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ನಡೆದ ಸರಣಿ ಸಭೆಗಳ ಬಳಿಕವು ಯಾವುದೇ ಘೋಷಣೆಯಾಗಿಲ್ಲ. ಕರ್ನಾಟಕದಲ್ಲಿ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕನೇ ಇಲ್ಲದೇ ಪ್ರತಿಪಕ್ಷ ಬಿಜೆಪಿ ಕಲಾಪವನ್ನು ಎದುರಿಸಲಿದೆ. ಸಂಜೆಯ ವೇಳೆಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

Read More

ಬೆಂಗಳೂರು ;– ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಮೂವರಿಂದ ಇಂದು ವಿಧಾನಸೌಧದಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಗದೀಶ್ ಶೆಟ್ಟರ್, ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮೂವರಿಗೂ ಪ್ರಮಾಣವಚನ ಬೋಧಿಸಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜಗದೀಶ್ ಶೆಟ್ಟರ್ ಪರಾಭವಗೊಂಡಿದ್ದರೂ ಬಳಿಕ ವಿಧಾನ ಪರಿಷತ್ ಗೆ ಅವಕಾಶ ಮಾಡಿಕೊಡಲಾಗಿದ್ದು, ಶೆಟ್ಟರ್ ಕಾಂಗ್ರೆಸ್ ಪಕ್ಷದಿಂದ ತಮ್ಮ ರಾಜಕೀಯದ ಎರಡನೇ ಆರಂಭಿಸುತ್ತಿದ್ದಾರೆ.

Read More

ಬೆಂಗಳೂರು ;- ರಾಜಧಾನಿ ಬೆಂಗಳೂರಿನಾದ್ಯಂತ ಇಂದು ಗುರುಪೂರ್ಣಿಮೆಯ ಸಂಭ್ರಮ ಮನೆ ಮಾಡಿದೆ. ಹೀಗಾಗಿ ನಗರದ ಗಣೇಶ ಹಾಗೂ ಸಾಯಿಬಾಬ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಬೆಳ್ಳಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ಅಲಂಕಾರ ಆರಂಭವಾಗಿದ್ದು, ನಗರದ ಮಲ್ಲೇಶ್ವರಂ ನಾ ಸಾಯಿಬಾಬ ದೇವಸ್ಥಾನಲ್ಲಿ ವಿಶೇಷ ಪೂಜೆ ನೆರವೇರಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು, ಬರುವ ಭಕ್ತದಿಗಳಿಗೆ ಪ್ರಸಾಧ ವಿತರರಣೆ ಮಾಡಲಾಗುತ್ತದೆ. ಇಂದು ಸಂಜೆಯವರೆಗೂ ಭಕ್ತದಿಗಳಿಗೆ ದರ್ಶನ ಸಿಗಲಿದ್ದು, ಪ್ರಸಾದ ವ್ಯವಸ್ಥೆ ಕೂಡ ಇರಲಿದೆ.

Read More

ಇತ್ತೀಚೆಗಷ್ಟೇ ಹಾಂಗ್ ಕಾಂಗ್ ನಲ್ಲಿ ಮುಕ್ತಾಯಗೊಂಡ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ ಟೂರ್ನಿಯಲ್ಲಿ ತಮ್ಮ ಬೌಲಿಂಗ್ ಮೋಡಿ ಪ್ರದರ್ಶಿಸಿ 9 ವಿಕೆಟ್ ಪಡೆದು ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಶ್ರೇಯಾಂಕ, ಬಾಂಗ್ಲಾದೇಶ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಪಡೆದು ಟೀಮ್ ಇಂಡಿಯಾ 31 ರನ್ ಗಳಿಂದ ಗೆಲುವು ಸಾಧಿಸಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪರ ಆಡಿ ತಮ್ಮ ಸ್ಪಿನ್ ಮೋಡಿಯಿಂದ 9.84 ರ ಸರಾಸರಿಯಲ್ಲಿ 7 ಪಂದ್ಯಗಳಿಂದ 6 ವಿಕೆಟ್ ಪಡೆದು ಗಮನ ಸೆಳೆದ ಕನ್ನಡತಿ ಶ್ರೇಯಾಂಕ ಪಾಟೀಲ್, ತಮ್ಮ ಈ ಪ್ರದರ್ಶನದಿಂದಲೇ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡಲು ಒಪ್ಪಂದ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಮುನ್ನವೇ ವಿದೇಶಿ ಲೀಗ್ ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆಗೆ…

Read More