ನವದೆಹಲಿ ;- ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. .. ಭಾನುವಾರ ಎನ್ಸಿಪಿ ನಾಯಕ ಅಜಿತ್ ಪವಾರ್ ವಿಪಕ್ಷನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಅವರು ಉಪಮುಖ್ಯಮಂತ್ರಿಯಾಗಿ ಹಾಗೂ ಇತರ 8 ಎನ್ಸಿಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ವೈ, ಇದು ತುಂಬಾ ಒಳ್ಳೆಯ ಬೆಳವಣಿಗೆ. ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯನ್ನು ನಾನು ಸ್ವಾಗತಿಸುತ್ತೇನೆ. ಎನ್ಸಿಪಿ ನಾಯಕರ ಈ ನಿರ್ಧಾರದಿಂದ ನಾನು ಮತ್ತು ಮಹಾರಾಷ್ಟ್ರದ ಜನತೆ ಕೂಡ ಖುಷಿಯಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Author: Prajatv Kannada
ನವದೆಹಲಿ: ” ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ, ಅನ್ನದಾತರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರಕಾರ ವಾರ್ಷಿಕವಾಗಿ 6.5 ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಕೈಗೊಂಡ ಉಪಕ್ರಮಗಳಿಂದ ರೈತನ ಖಾತೆಗೆ ವಾರ್ಷಿಕ 50 ಸಾವಿರ ರೂ. ಹಣ ಸಂದಾಯವಾಗುತ್ತಿದೆ ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಹಕಾರ ದಿನದ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಭಾಗಿಯಾಗಿ ಶನಿವಾರ ಮಾತನಾಡಿದ ಮೋದಿ, ”2014ರಲ್ಲಿ ಬಿಜೆಪಿ ಕೇಂದ್ರದಲ್ಲಿಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಲಾದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳ ಹಾಗೂ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯಂತಹ ಯೋಜನೆಗಳು ರೈತರ ಆದಾಯ ಹೆಚ್ಚಿಸಿವೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಆಧಾರವಾಗಿದೆ,” ಎಂದು ಹೇಳಿದರು. ”ಖಾದ್ಯ ತೈಲ ವಿಚಾರದಲ್ಲಿ ದೇಶವನ್ನು ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಸಲು ಸಹಕಾರಿ ಸಂಸ್ಥೆಗಳು ಮುಂದಾಗಬೇಕು,” ಎಂದು ಕರೆ ನೀಡಿದ ಮೋದಿ, ” ರಾಜಕೀಯ ಬದಿಗಿಟ್ಟು ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ರಹಿತ…
ಬೆಂಗಳೂರು/ಕಲಬುರಗಿ : ರಾಜ್ಯದಲ್ಲಿ ಮುಂಗಾರು ಹೊಡೆತದಿಂದ ತರಕಾರಿ ಬೆಲೆ ದಿಢೀರನೆ ಗಗನಕ್ಕೇರಿದ್ದು ವಾರ ಕಳೆದರೂ ಬೆಲೆ ಕಡಿಮೆ ಆಗಿಲ್ಲ. ಕೊಂಚ ಮಾತ್ರ ಏರುಪೇರು ಕಂಡುಬಂದಿದೆ. ಆದ್ರೆ ಟೊಮ್ಯಾಟೋ ಬೆಲೆ ಮಾತ್ರ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಿ ಈರುಳ್ಳಿ- 30 ರೂ. ಟೊಮೆಟೊ – 102ರೂ. ಹಸಿರು ಮೆಣಸಿನಕಾಯಿ 64 ರೂ ಇದೆ. ಕಲಬುರಗಿ ಜಿಲ್ಲೆಯಲ್ಲಿ ಟೊಮೇಟೋ ಬೆಲೆ ಮತ್ತೆ ಹೆಚ್ಚಾಗಿದೆ. ಕಳೆದ ವಾರ ಪ್ರತಿ ಕಿಲೋ ಟೊಮೇಟೊಗೆ ನೂರು ರೂಪಾಯಿ ಇತ್ತು. ಈ ವಾರ ಪ್ರತಿ ಕಿಲೋ ಟೊಮೇಟೊ ನೂರಾ ನಲವತ್ತರಿಂದ ನೂರಾ ಐವತ್ತು ರೂಪಾಯಿಗೆ ಮಾರಟವಾಗುತ್ತಿದೆ. ಹೀರೇಕಾಯಿ 80ರಿಂದ 90ರೂಗೆ ಜಿಗಿದಿದೆ. ಬೆಂಡೆಕಾಯಿ 70ರಿಂದ 80 ರೂ ಆಗಿದೆ. ಹಾಗಲಕಾಯಿ 90 ರೂ ಇದೆ. ಸವತೆಕಾಯಿ 80ರಿಂದ 100ರೂ ಆಗಿದೆ. ಮೆಣಸಿನಕಾಯಿ 100ರಿಂದ 120 ಆಗಿದೆ. ಬೀನ್ಸ್ 140ರಿಂದ 160 ರೂ ಆಗಿದೆ. ಆಲುಗಡ್ಡೆ 80 ರಿಂದ 100ರೂ ಆಗಿದೆ. ಚವಳಿಕಾಯಿ 80ರಿಂದ 100ಕ್ಕೆ ಏರಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬೆಳಗಾವಿಯಲ್ಲಿ ಬಹುತೇಕ…
ಬೆಂಗಳೂರು ;- ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಬೆತ್ತಲಾಗಿದ್ದಾರೆ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರಾಗಲು, ಮಂತ್ರಿಯಾಗಲು ಏನೆಲ್ಲ ಮಾಡಿದ್ದರು. ಹೇಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂಬುದರ ಬಗ್ಗೆ ಬಿಜೆಪಿ ಅವರೇ ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷದಲ್ಲಿದ್ದಾಗ ರಾಜ್ಯವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಪ್ರವೃತ್ತಿಯನ್ನು ಅವರು ತೋರಲಿಲ್ಲ. ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವು ಅನ್ನ ಭಾಗ್ಯ ಯೋಜನೆ ಜಾರಿ ಮಾಡಿ ಬಡವರಿಗೆ ಉಚಿತ ಅಕ್ಕಿ ನೀಡುವ ಕೆಲಸ ಮಾಡುತ್ತಿದೆ ಎಂದು ಉಗ್ರಪ್ಪ ಹೇಳಿದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಬೆತ್ತಲಾಗಿದ್ದಾರೆ. ಅವರ ನಿಜವಾದ ಬಣ್ಣ ಬಯಲಾಗುತ್ತಿದೆ. ಬಡವರ ಹಸಿವನ್ನು ಅರಿತ ಕಾಂಗ್ರೆಸ್ ಸರ್ಕಾರ ಈ ಯೋಜನೆ ಮೂಲಕ…
ರಾಯಚೂರು: ಇಂದು ಆಷಾಢ ಮಾಸದ ಗುರುಪೂರ್ಣಿಮಾ ಹಿನ್ನೆಲೆ ಮಂತ್ರಾಲಯದ ರಾಯರ ಮಠದಲ್ಲಿ ಗುರು ಪೂರ್ಣಿಮಾ ಸಂಭ್ರಮ ಜೋರಾಗಿದೆ. ಇಂದು ರಾಯರ ಮೂಲ ಬೃಂದಾವನಕ್ಕೆ ತಿರುಪತಿ ತಿರುಮಲ ದೇವಸ್ಥಾನದ ಶ್ರೀವಾರಿ ವಸ್ತ್ರ ಸಮರ್ಪಿಸಲಾಗಿದೆ. ಬಳಿಕ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹುಬ್ಬಳ್ಳಿ: ಯಾರೋ ಕಿಡಗೇಡಿಗಳು ಚಲಿಸುತ್ತಿದ್ದ ವಂದೇ ಭಾರತ ರೈಲಿಗೆ ಚಲಿಸುತ್ತಿದ್ದಾಗಲೇ ಕಲ್ಲು ಎಸೆದಿರುವ ಘಟನೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಬರುವ ದಾವಣಗೆರೆಯಲ್ಲಿ ನಡೆದಿದೆ. ಹೌದು ಜೂನ್ 27 ರಂದು ಆರಂಭವಾದ ಧಾರವಾಡ ಬೆಂಗಳೂರು ಮಧ್ಯೆ ವಂದೇ ಭಾರತ ಟ್ರೈನ್‌ಗೆ ಯಾರೋ ಕಿಡಗೇಡಿಗಳು ಗಾಜಿಗೆ ಕಲ್ಲು ಎಸೆದಿದ್ದಾರೆ. ಎಸೆತದಿಂದ ಟ್ರೈನ್ ಗ್ಲಾಸ್ ಒಡೆದಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ. ಇನ್ನು ಕಲ್ಲು ಎಸೆದವರನ್ನು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ…
ಧಾರವಾಡ: ಮೊದಲು ಯಾರು ಬೇಕಾದರೂ ಎಲ್ಲಿ ಬೇಕಾದಲ್ಲಿ ಬಾಂಬ್ ಹಾಕಿ ಓಡಿ ಹೋಗುತ್ತಿದ್ದರು. ಬಾಂಬ್ ಹಾಕಿದ ಮೇಲೆ ನಾವು ಅಳುತ್ತಾ ಕುಳಿತು ಬಿಡುತ್ತಿದ್ದೆವು. ಆದರೆ ಈಗ ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ನಮ್ಮಲ್ಲಿ ಬೆಳೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು. ಧಾರವಾಡ (Dharwad) ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭಾರತದ ಮೇಲೆ ಯಾರೂ ಈಗ ಕಣ್ಣು ಕೆಕ್ಕರಿಸಿ ನೋಡುವುದಿಲ್ಲ. ಹಾಗೆ ನಾವು ನಮ್ಮ ಸೈನ್ಯವನ್ನು ಬಲಪಡಿಸಿದ್ದೇವೆ ಎಂದರು. ಸದ್ಯದಲ್ಲೇ ರಾಮ ಮಂದಿರ ನಿರ್ಮಾಣ ಆಗಲಿದೆ, ನೀವೆಲ್ಲ ಅಯೋಧ್ಯೆಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕು ಎಂದು ಕಾರ್ಯಕ್ರಮದಲ್ಲಿ ಜೋಶಿ ಕರೆ ನೀಡಿದರು.
ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿದ್ದಾರೆ. ನಂದಿಗಿರಿಧಾಮ, ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ದೆಹಲಿಯಿಂದ ಐಎಎಫ್‌ಎಂಐ-17 ವಿಶೇಷ ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಮಧ್ಯಾಹ್ನ 3.55ಕ್ಕೆ ಹೆಲಿಕಾಪ್ಟರ್ ಮೂಲಕ ಮುದ್ದೇನಹಳ್ಳಿಗೆ ತೆರಳುತ್ತಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಜುಲೈ 2ರ ಬೆಳಗ್ಗೆ 6 ಗಂಟೆಯಿಂದ ಜುಲೈ 3ರ ಸಂಜೆ 6 ಗಂಟೆಯ ವರೆಗೆ ನಂದಿಗಿರಿಧಾಮ ಮತ್ತು ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಇನ್ನೂ ಚಿಕ್ಕಬಳ್ಳಾಪುರದಲ್ಲಿ ದ್ರೌಪದಿ ಮುರ್ಮು ಭೇಟಿ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 60 ಪಿಎಸ್‌ಐಗಳು, ಕೆಎಸ್‌ಆರ್‌ಪಿಯ 3 ತುಕಡಿ, 3 ಎಸ್ಪಿಗಳು, 10 ಡಿವೈಎಸ್ಪಿಗಳು, 28 ಪೊಲೀಸ್ ಇನ್ಸ್ಪೆಕ್ಟರ್, 700 ಪೊಲೀಸ್ ಸಿಬ್ಬಂದಿಯನ್ನು ನಿಯೋಜನ ಮಾಡಲಾಗಿದೆ. ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ದೇಹದಾರ್ಢ್ಯತೆ ವಿಭಾಗದಲ್ಲಿ ಪುಲ್ಲೇಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಡಾ.ಪ್ರತಿಮಾ ಮೂರ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರೊ.ಅಜಯ್…
ಬೆಳಗಾವಿ: ಆಗಸ್ಟ್‌ನಿಂದ ಗೃಹಲಕ್ಷ್ಮಿ (Gruhalakshmi) ಯೋಜನೆ ಮನೆಯ ಯಜಮಾನಿಗೆ ಸಿಗುತ್ತದೆ. ಕೊಟ್ಟ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ (Belagavi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 14ರಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಶುರು ಬಗ್ಗೆ ಮಾತನಾಡಿಕೊಂಡಿದ್ದೇವೆ. ಜುಲೈ 3 ಅಥವಾ 4ನೇ ತಾರೀಖು ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದರು. ರಾಜ್ಯ ಕಾಂಗ್ರೆಸ್ (Congress) ಸರ್ಕಾರದಲ್ಲಿ ವೈಎಸ್‌ಟಿ (YST) ಸಂಗ್ರಹ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು (H.D.Kumaraswamy) ಕೂಡಾ ಸರ್ಕಾರ ನಡೆಸಿದಂತ ಅನುಭವ ಇದ್ದವರು. ಕುಮಾರಸ್ವಾಮಿ ಅಣ್ಣ ಹಿರಿಯರು, ರಾಜಕೀಯ ಮುತ್ಸದ್ಧಿಗಳು. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಸರ್ಕಾರ ರಚನೆ ಆಗಿ ಈಗ ಒಂದು ತಿಂಗಳು ಐದು ದಿನ ಆಗಿದೆ. ಸರ್ಕಾರಕ್ಕೆ ಕೆಲಸ ಮಾಡಲು…
ಗುರು ಪೂರ್ಣಿಮಾ ಸೂರ್ಯೋದಯ: 05.58 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಹುಣ್ಣಿಮೆ 05:08 PM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಮೂಲ 11:02 AM ತನಕ ನಂತರ ಆಷಾಢ ಯೋಗ: ಇವತ್ತು ಬ್ರಹ್ಮ 03:45 PM ತನಕ ನಂತರ ಇಂದ್ರ ಕರಣ: ಇವತ್ತು ವಿಷ್ಟಿ 06:47 AM ತನಕ ನಂತರ ಬವ 05:08 PM ತನಕ ನಂತರ ಬಾಲವ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 05.14 AM to 06.41 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:46 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc…