Author: Prajatv Kannada

ತುಮಕೂರು: ವಸತಿ ನಿಲಯಗಳಿಗೆ ಪಾವಗಡ ತಹಶೀಲ್ದಾರ್ ಸುಜಾತ  ದಿಢೀರ್ ಭೇಟಿ ನೀಡಿ ಹಾಸ್ಟೆಲ್‌ಗಳ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಪರಿಶೀಲನೆ ಮಾಡಿದ್ದಾರೆ. ಪಾವಗಡ ಪಟ್ಟಣದಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್‌’ಗಳಿಗೆ ಭೇಟಿ ನೀಡಿದ್ದು, ತಾವೇ ಹಾಸ್ಟೆಲ್  ಊಟ ಸೇವಿಸಿ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು. ಹಾಸ್ಟೆಲ್ ಸ್ವಚ್ಚವಾಗಿ ಇಡುವಂತೆ ವಾರ್ಡ್ ಗೆ ಸೂಚನೆ ನೀಡಿ ಬಳಿಕ ಎಸ್ಸಿ-ಎಸ್ಟಿ ವಸತಿ ನಿಲಯಕ್ಕೂ ಭೇಟಿ ನೀಡಿದರು. ಶೌಚಾಲಯ ಇಲ್ಲದೆ ಇರುವುದನ್ನು ಗಮನಿಸಿದ ತಹಶೀಲ್ದಾರ್ ಕೂಡಲೇ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ತಹಶೀಲ್ದಾರ್ ಗೆ ಸ್ಥಳೀಯ ಅಧಿಕಾರಿಗಳ ಸಾಥ್ ನಿಡಿದರು.

Read More

ಶಿವಮೊಗ್ಗ : ಕಾಂಗ್ರೆಸ್‌ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರಿಗೆ ಮಾರಕವಾಗಿರುವ ಕೃಷಿ ತಿದ್ದು​ಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರಾಜ್ಯ ರೈತ ಸಂಘ ಕೋಡಿಹಳ್ಳಿ ಬಣದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೂರು ಕೃಷಿ ತಿದ್ದು​ಪಡಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ ಕಾಂಗ್ರೆಸ್‌ನವರು ನಮ್ಮ ಜೊತೆ ಒಡನಾಟ ಇಟ್ಟುಕೊಂಡು ಬಿಜೆಪಿ ಸರ್ಕಾರ ತಪ್ಪು ಮಾಡಿದೆ. ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಈ ಅಧಿವೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಬಹುದು ಎಂಬ ಆಶಾವಾದ ಇಟ್ಟುಕೊಂಡಿದ್ದೇವೆ. ಆದರೆ, ಸಿದ್ದರಾಮಯ್ಯ ಅವರು ಕೃಷಿ ಕಾಯ್ದೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಆತಂಕ ಮೂಡಿಸಿದೆ ಎಂದರು.

Read More

ಗದಗ: ಜನರ ಮನಸ್ಸನ್ನ‌ ಕೆಡಿಸಿ ಗೊಂದಲ‌ಸೃಷ್ಠಿ ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಪ್ರಯತ್ನ ವಿಫಲ ಎಂದು ಸಚಿವ ಹೆಚ್.ಕೆ.ಪಾಟೀಲ‌ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಕೈಲಾಗದ ಸಿಎಂ‌ ಎಂಬ ಬಿಜೆಪಿ ಟ್ವೀಟ್​ಗೆ ತಿರುಗೇಟು ನೀಡಿದ ಅವರು, ಅಕ್ಕಿ‌ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ‌ ಮಾಡಿದ್ದೇ ಕೇಂದ್ರ ಸರ್ಕಾರ. ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ‌ ಕೊಡಬೇಡಿ. ಇಂತಹ ನಿಲುವಿಗೆ ಆ ಪಕ್ಷದ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

Read More

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿ ನಡೆದಿದೆ. ಅಜಯ ಎಂಬುವನೇ ಗಾಯಗೊಂಡಿದ್ದು, ಅಣ್ಣ ತಮ್ಮಂದಿರ ಆಸ್ತಿ ವಿಚಾರ ಚಾಕು ಇರಿತದ ವರೆಗೆ ಬಂದಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ಇನ್ನೂ ಗಾಯಗೊಂಡ ಅಜಯ್ ಎಂಬಾತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಚಾಕುವಿನಿಂದ ಕೈಗೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದಿದ್ದು, ಗಂಭೀರವಾಗಿ ಗಾಯಗಳಾಗಿವೆ. ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Read More

ಚಿಕ್ಕಮಗಳೂರು: ಮಳೆ ಬರುತ್ತೆಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಚಿಕ್ಕಮಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್‌(KJ George) ಹೇಳಿದ್ದಾರೆ. 15, 20 ದಿನ ಮಳೆ ಬಂದರೆ ಎಲ್ಲಾ ಜಲಾಶಯ ತುಂಬುತ್ತವೆ. ಮಳೆ ಬಾರದಿದ್ದರೆ ವಿದ್ಯುತ್ ಉತ್ಪಾದನೆಯಲ್ಲಿ ಕಷ್ಟವಾಗಬಹುದು. ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ. ಹೈಡ್ರೋದಿಂದ ತೊಂದರೆಯಾದರೆ ಸೋಲಾರ್‌, ವಿಂಡ್, ಥರ್ಮಲ್ ಇದೆ. ಥರ್ಮಲ್ ಪ್ಲಾಂಟ್‌ ಸೇರಿ ಪಾವಗಡ ಸೋಲಾರ್ ಪ್ಲಾಂಟ್ ವೀಕ್ಷಿಸಿದ್ದೇನೆ. ಹೈಡ್ರೋದಿಂದ ತೊಂದರೆಯಾ ಗಬಹುದು, ಅಧಿಕಾರಿಗಳ ಜತೆ ಚರ್ಚಿಸಿರುವೆ. ಸೋಲಾರ್‌, ವಿಂಡ್, ಥರ್ಮಲ್‌ನಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದರು.

Read More

ಮೈಸೂರು: ಇಂದು ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ನಡೆಯಲಿದ್ದು, ರಾಷ್ಟ್ರಪತಿ ದ್ರೌಪತಿ ಮುರ್ಮು ಸೇರಿದಂತೆ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಶಿಕ್ಷಣ ತಜ್ಞರಾದ ಎನ್ ರಾಮಚಂದ್ರಯ್ಯ ಹಾಗೂ ವೆಂಕಟ ಲಕ್ಷ್ಮಿ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಇಂದು ಬೆಳಗ್ಗೆ 11 ಗಂಟೆಗೆ ವಿವಿಯ ಘಟಿಕೋತ್ಸವ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ.

Read More

ಸೂರ್ಯೋದಯ: 05.57 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಚತುರ್ದಶಿ 08:21 PM ತನಕ ನಂತರ ಹುಣ್ಣಿಮೆ ನಕ್ಷತ್ರ: ಇವತ್ತು ಜೇಷ್ಠ 01:18 PM ತನಕ ನಂತರ ಮೂಲ ಯೋಗ: ಇವತ್ತು ಶುಕ್ಲ 07:26 PM ತನಕ ನಂತರ ಬ್ರಹ್ಮ ಕರಣ: ಇವತ್ತು ಗರಜ 09:48 AM ತನಕ ನಂತರ ವಣಿಜ 08:21 PM ತನಕ ನಂತರ ವಿಷ್ಟಿ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ:03:00 ನಿಂದ 04:30 ವರೆಗೂ ಅಮೃತಕಾಲ: 05.09 AM to 06.38 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:46 ವರೆಗೂ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc…

Read More

ಬೆಂಗಳೂರು: ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ನಾವು ಹೋರಾಟ ಮಾಡುತ್ತೇವೆ. ಗ್ಯಾರಂಟಿ ಆಧಾರದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕೊಟ್ಟು ಮಾತು ತಪ್ಪಿದೆ. ಹೀಗಾಗಿ ಬಿಜೆಪಿ ಸದನದ ಹೊರಗಡೆ ಮತ್ತು ಒಳಗಡೆ ಹೊರಟ ಮಾಡಲಿದೆ. ಸದನದ ಹೊರಗಡೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹೋರಾಟ ಮಾಡಲಿದ್ದಾರೆ. ಬಿಎಸ್​ ಯಡಿಯೂರಪ್ಪ ಅವರು ಫ್ರೀಡಂ ಪಾರ್ಕ್​ನಲ್ಲಿ ಜುಲೈ 4 ರಂದು ಪ್ರತಿಭಟನೆ ಮಾಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್​ ನಾರಾಯಣ್ ಹೇಳಿದ್ದಾರೆ.

Read More

ಬೆಂಗಳೂರು:  ಲಿವಿಂಗ್ ಟುಗೆದರ್​​ನಲ್ಲಿದ್ದ (Living together)  ಜೋಡಿ ಮಾಲೀಕರ ಮನೆಯನ್ನೇ ದೋಚಿರುವ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​​​ನಲ್ಲಿ ನಡೆದಿದೆ. ಸದ್ಯ ಖತರ್ನಾಕ್ ಜೋಡಿಯನ್ನು (Couple) ಸುಬ್ರಮಣ್ಯವಪುರ ಪೊಲೀಸರು ಬಂಧಿಸಿದ್ದಾರೆ. ಲಿಖಿತ ಹಾಗೂ ಸುಮಂತಾ ಬಂಧಿತ ಆರೋಪಿಗಳು. ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​​​ನ ಪ್ರೇಮಲತ ಎಂಬುವವರ ಮನೆಯಲ್ಲಿ ಲಿಖಿತ ಹಾಗೂ ಸುಮಂತ್ ಬಾಡಿಗೆಗೆ ಇದ್ದರು. ಜೋಡಿ ಕಳ್ಳತನ ಮಾಡಲು ನಾಲ್ಕು ತಿಂಗಳು ಮನೆ ಬಾಡಿಗೆಗೆ ಪಡೆದಿತ್ತು. ಈ ಇಬ್ಬರು ನಾಲ್ಕು ತಿಂಗಳು ಮನೆ ಮಾಲೀಕರ ಚಲನ-ವಲನ ಗಮನಿಸಿದ್ದರು. ಜೋಡಿ ಇತ್ತೀಚೆಗೆ ಮನೆ ಖಾಲಿ ಮಾಡಿದೆ. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದೆ. ಆರೋಪಿಗಳು ಮನೆಯಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ. ಆರೋಪಿಗಳ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರಿಗಾಗಿ ಬಲೆ ಬೀಸಿದ್ದರು. ಆರೋಪಿಗಳು ಕದ್ದ ಚಿನ್ನದ ಒಡವೆಗಳನ್ನು ಮಾರಿ ಶಿವಮೊಗ್ಗದಲ್ಲಿ ಸೆಟಲ್…

Read More

ಬೆಂಗಳೂರು: ಎಲ್ಲವೂ  ಅಂದುಕೊಂಡಂತೆ ಆಗಿದ್ರೆ ರಾಜ್ಯದ ಜನತೆಗೆ ತಲಾ 10 ಕೆಜಿ ಅಕ್ಕಿ ಸಿಗ್ಬೇಕಿತ್ತು. ಬಿಜೆಪಿ- ಕಾಂಗ್ರೆಸ್ ನ ದ್ವೇಶ ರಾಜಕಾರಣದಿಂದ ರಾಜ್ಯಕ್ಕೆ ಅಕ್ಕಿ ಬರ್ಲಿಲ್ಲ, ಕ್ಯಾಬಿನೆಟ್ ನಿರ್ಧಾರದಂತೆ ಪಡಿತರದಾರರ ಅಕೌಂಟ್ ಗೆ ಅಕ್ಕಿಯ ಹಣ ಹಾಕೋ ಪ್ರಕ್ರಿಯೆ ಸದ್ಯ ಗೊಂದಲದ ಗೂಡಾಗಿದೆ. ಆಹಾರ ಸಚಿವರು, ಸಿಎಂ, ಡಿಸಿಎಂ ಗೊಂದಲದ ಹೇಳಿಕೆಗಳು ಎಲ್ಲವೂ ಅಯೋಮಯ ಎನ್ನಿಸ್ತಿವೆ. ಅನ್ನಭಾಗ್ಯ ಯೋಜನೆ ಮತ್ತಷ್ಟು ವಿಳಂಬವಾಗ್ತಿದ್ದು ಇನ್ನೆರಡು ವಾರ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯದ ತಲಾ 10 ಕೆಜಿ ಕೊಡುವ ಯೋಜನೆ ಎಲ್ಲವೂ ಅಂದುಕೊಂಡಂತೆ ಅಗಿದ್ರೆ ಇಂದಿನಿಂದ ಜಾರಿಯಾಗ್ಬೇಕಿತ್ತು. ಆದ್ರೆ ಕಾಂಗ್ರೆಸ್- ಬಿಜೆಪಿಯ ದ್ವೇಶ ರಾಜಕಾರಣದಿಂದ ಅದು ಈಡೇರ್ಲಿಲ್ಲ ರಾಜ್ಯ ಸರ್ಕಾರ ಬೇರೆ- ಬೇರೆ ರಾಜ್ಯಗಳಿಂದ ಅಕ್ಕಿ ತರಲು ಎಷ್ಟೇ ಪ್ರಯತ್ನ ಪಟ್ರು ಸಾಧ್ಯವಾಗ್ಲಿಲ್ಲ. ಕೊನೆಗೆ ಕ್ಯಾಬಿನೆಟ್ ನಲ್ಲಿ ಕೇಂದ್ರ ಕೊಡ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯದ 5 ಕೆಜಿ ಅಕ್ಕಿಯ ಹಣವನ್ನು ಪಡಿತರ ಅಕೌಂಟ್ ಗೆ ಹಾಕಲು ನಿರ್ಧರಿಸಲಾಯ್ತು.‌ಆಹಾರ ಸಚಿವ…

Read More