ಬೆಂಗಳೂರು: ಲಂಚ ಪಡೆದ ಆರೋಪದಲ್ಲಿ ಪೀಣ್ಯಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಾರೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಟ್ಟಡ ಕಾಮಗಾರಿ ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು. ಹೀಗಾಗಿ ದೂರುದಾರ ಗವಿರಾಜಗೌಡ ಕಟ್ಟಡದ ಬಳಿ ರಕ್ಷಣೆಗೆ ಮನವಿ ಮಾಡಿದ್ದರು. ಈ ವೇಳೆ ಬಂದೋಬಸ್ತ್ ನೀಡಲು ಮೂರು ಲಕ್ಷ ಹಣವನ್ನು ಹೆಡ್ ಕಾನ್ಸ್ ಟೇಬಲ್ ಬೇಡಿಕೆ ಇಟ್ಟಿದ್ದರು. ಅದೇ ರೀತಿ ಒಂದೂವರೆ ಲಕ್ಷ ಹಣ ಅಡ್ವಾನ್ಸ್ ಪಡೆಯೋ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Author: Prajatv Kannada
ಬೆಂಗಳೂರು: ರಾಜ್ಯದ ವಿವಿಧೆಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ಮುಂದಿನ 2 ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ 34 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಬೆಂಗಳೂರು: ಈಗಾಗಲೇ ಮುಂಗಾರು ತಡವಾಗಿ ಬಂದಿದೆ.ಹೀಗಾಗಿ ರಾಜ್ಯದ ಬಹುತೇಕ ಜಲಾಶಯಗಳು ಖಾಲಿ ಖಾಲಿಯಾಗಿವೆ. ಬೆಂಗಳೂರಿಗೆ ನೀರುಣಿಸುತ್ತಿರೋ ಕೆಆರ್‌ಎಸ್‌ನಲ್ಲೂ ನೀರಿಲ್ಲದೇ ಡೆಡ್‌ಸ್ಟೋರೇಜ್ ತಲುಪುವ ಹಂತದಲ್ಲಿದೆ.. ಇದ್ರ ಬೆನ್ನಲ್ಲೇ ಬೆಂಗಳೂರಿಗೆ ಜಲಕಂಟಕ ಎದುರಾಗಿದೆ. ನಿಮ್ಗೆಲ್ಲಾ ಗೊತ್ತೆ ಇದೆ.. ನಮ್ಮ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಎಷ್ಟರಮಟ್ಟಿಗಿದೆ ಎಂಬುದನ್ನ.. ಚೆನ್ನೈನಲ್ಲಿ ಕುಡಿಯೋ ನೀರಿಗೂ ಪರದಾಡ್ತಿದ್ದಾರೆ.. ಒಂದು ಬಿಂದಿಗೆ ನೀರಿಗಾಗಿ ಬಡಿದಾಡಿಕೊಳ್ತಿದ್ದಾರೆ.. ಇದೇ ಪರಿಸ್ಥಿತಿ ಬೆಂಗಳೂರಿಗರೂ ಸದ್ಯದಲ್ಲೇ ಅನುಭವಿಸಬೇಕಾಗುತ್ತೆ.. ಹೌದು.. ಬೆಂಗಳೂರಿನಲ್ಲಿ ಸದ್ಯದಲ್ಲೇ ಜಲಕ್ಷಾಮ ತಲೆದೋರಲಿದೆ.. ಇಡೀ ಬೆಂಗಳೂರು ಕಾವೇರಿ ನೀರನ್ನೇ ಅವಲಂಭಿಸಿದೆ.. ಈ ಬಾರಿ ಮುಂಗಾರು ಆರಂಭವಾದ್ರೂ ಕರುಣ ಕೃಪೆ ತೋರಿಲ್ಲ… ಪರಿಣಾಮ ಕೆಆರ್‌ಎಸ್ ಒಡಲು ಖಾಲಿಯಾಗಿದೆ.. ಕಾವೇರಿ ಕೊಳ್ಳದಲ್ಲೂ ನೀರಿಲ್ಲದೇ ಜಲಾಶಯಗಳು ಡೆಡ್ ಸ್ಟೋರೇಜ್ ತಲುಪಿದೆ.. ಈ ತಿಂಗಳಲ್ಲಿ ಮಳೆ ಬಾರದಿದ್ರೆ ಚೆನ್ನೈನಲ್ಲಿ ನೀರಿಗಾಗಿ ಪರದಾಡ್ತಿರುವಂತೆ ನಾವು ನೀವುಗಳೆಲ್ಲಾ ಹನಿ ಹನಿ ನೀರಿಗೂ ಪರದಾಡುವುದು ಗ್ಯಾರಂಟಿ.. ಸದ್ಯ ಬೆಂಗಳೂರು ಜಲಮಂಡಳಿ ಪ್ರತಿನಿತ್ಯ 145 ಕೋಟಿ ಲೀಟರ್‌ನಷ್ಟು ನೀರನ್ನ ಪೂರೈಕೆ ಮಾಡ್ತಿದೆ.. ಅಂದ್ರೆ ತಿಂಗಳಿಗೆ…
ಬೆಂಗಳೂರು: BPL ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿ ಜುಲೈ 10ರಿಂದ ಅಕ್ಕಿ ಬದಲು ಹಣ ಕೊಡುವ ಪ್ರಕ್ರಿಯೆ ಶುರುವಾಗುತ್ತೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಜುಲೈನಲ್ಲಿ ಅಕ್ಕಿ ಬದಲು ಹಣ ಕೊಡ್ತೇವೆ ಅಂತಾ ಹೇಳಿದ್ದೆವು. ಆದರೆ ಜುಲೈ 1ರಂದೇ ಹಣ ಕೊಡುತ್ತೇವೆ ಅಂತಾ ಹೇಳಿಲ್ಲ. ಈ ತಿಂಗಳಿನಿಂದಲೇ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಆಗಸ್ಟ್ ತಿಂಗಳ ಬಿಲ್ ಉಚಿತ ಎಂದರು.
ಬೆಂಗಳೂರು: ಇಂದಿನಿಂದ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ ಸಂಬಂಧ ನಾವು ಮಾತು ಕೊಟ್ಟಂತೆ ಭರವಸೆ ಈಡೇರಿಸುತ್ತಿದ್ದೇವೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ತಾತ್ಕಾಲಿಕವಾಗಿ 5 ಕೆಜಿ ಅಕ್ಕಿ ಬದಲು ಬಡವರಿಗೆ ಹಣ ನೀಡುತ್ತೇವೆ. ಹೆಚ್ಚುವರಿ ಅಕ್ಕಿ ಸಿಗದ ಹಿನ್ನೆಲೆ ಬ್ಯಾಂಕ್ ಖಾತೆಗೆ ಹಣ ಹಾಕ್ತಿದ್ದೇವೆ. ಕೇಂದ್ರ ಅಕ್ಕಿ ಕೊಡದ ಕಾರಣ ವಿಧಿಯಿಲ್ಲದೆ ಹಣ ಕೊಡುತ್ತಿದ್ದೇವೆ ಎಂದರು.
ಬೆಂಗಳೂರು: BJP ನಾಯಕರ ವಿರುದ್ಧವೇ ರೇಣುಕಾಚಾರ್ಯ ಹೇಳಿಕೆ ಹಿನ್ನೆಲೆ ಮಾಜಿ ಸಚಿವ ರೇಣುಕಾಚಾರ್ಯಗೆ ಯಡಿಯೂರಪ್ಪ ಬುಲಾವ್ ಕೊಟ್ಟಿದ್ದಾರೆ. ಮಾಜಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ ಅವರು ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ BSY ನಿವಾಸದಲ್ಲಿ ರೇಣುಕಾಚಾರ್ಯ ಭೇಟಿ ಮಾಡಿ ಇಬ್ಬರು ಮಾತುಕತೆ ನಡೆಸಿದ್ದಾರೆ.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಕ್ಕೆ ಅಂಕುಶ ಹಾಕುವ ಕೆಲಸ ನಡೆದಿದೆ. ಸ್ವಪಕ್ಷೀಯ ನಾಯಕರ ವಿರುದ್ಧವೇ ಸಮರ ಸಾರಿದ್ದವರನ್ನ ಸುಮ್ಮನಿರಿಸುವ ಪ್ರಯತ್ನ ಮುಂದುವರಿದಿದೆ.ಪಕ್ಷಕ್ಕೆ ಮುಜುಗರ ತಂದವರಿಗೆ ನೊಟೀಸ್ ಕೊಟ್ಟು ಎಚ್ಚರಿಕೆ ನೀಡಲಾಗಿದ್ದು, ಕೆಲವರು ಹಿರಿಯರ ಮುಂದೆ ವಿವರಣೆ ಕೊಟ್ರೆ, ರೇಣುಕಾಚಾರ್ಯ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿ ಪಕ್ಷದಲ್ಲಿ ಆಂತರಿಕ ಯುದ್ದ ಶುರುವಾಗಿದೆ. ಪಕ್ಷದ ಮುಖಂಡರ ನಡವಳಿಕೆ ಬಗ್ಗೆ ಅನೇಕರು ಬಹಿರಂಗ ಅಸಮಾಧಾನಹೊರಹಾಕಿದ್ದರು. ತಮ್ಮದೇ ನಾಯಕರ ವಿರುದ್ಧ ತಮ್ಮದೇ ಪಕ್ಷದವರ ಸ್ಟೇಟ್ ಮೆಂಟ್ ಗಳಿಂದ ಪಕ್ಷಕ್ಕೆ ಸಾಕಷ್ಟು ಮುಜುಗರ ಎದುರಾಗಿತ್ತು. ಬಿಎಸ್ ವೈ ಹಾಗೂ ಸಂತೋಷ್ ತಂಡಗಳ ಬಣ ರಾಜಕೀಯಕ್ಕೂ ಇದು ವೇದಿಕೆ ಮಾಡಿಕೊಟ್ಟಿತ್ತು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇದು ಹೆಚ್ಚಾದ್ರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂಬ ಮನವರಿಕೆ ಹಿರಿಯರಿಗೆ ತಟ್ಟಿದೆ.ಹಾಗಾಗಿ ಬಹಿರಂಗ ಹೇಳಿಕೆ ನೀಡ್ತಿದ್ದವರನ್ನ ಕರೆಸಿ ಬುದ್ಧಿವಾದ ಹೇಳುವ ಕೆಲಸ ಮಾಡಲಾಗಿದೆ.. ವಿವಾದಾತ್ಮಕ ಹೇಳಿಕೆಕೊಟ್ಡವರ ಜೊತೆ ಇಂದು ಹಿರಿಯ ನಾಯಕರು ಸಭೆ ನಡೆಸಿದ್ರು..16 ಮಂದಿ ಪ್ರಮುಖರ…
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಕೆ.ಆರ್. ಪುರಂ ಕುಬೇರ ತಹಸೀಲ್ದಾರ್ ಅಜಿತ್ ರೈ ಅವರನ್ನು ಅಮಾನತುಗೊಳಿಸಲಾಗಿದೆ. ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಅಜಿತ್ ರೈ ಆ ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಸಹ ಪಡೆದಿದ್ದನು.. ಕೆ.ಆರ್. ಪುರಂನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಆದಾಯಕ್ಕಿಂತ ಹೆಚ್ಚುವರಿ ಆಸ್ತಿ ಹೊಂದಿರುವ ಆರೋಪದಲ್ಲಿ ಅಜಿತ್ ರೈ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪರಿಶೀಲನೆ ವೇಳೆ 40 ಲಕ್ಷ ರೂ. ನಗದು, ಕೋಟ್ಯಂತರ ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿತ್ತು. ಸತತ 30 ಗಂಟೆಗಳ ಪರಿಶೀಲನೆ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ರೈನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್ಲೈನ್ ಇಲ್ಲ. ಗೃಹಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ತಿಂಗಳಿಗೆ ಬರುತ್ತೆ. ಜುಲೈ ತಿಂಗಳಿನಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತ ಕರೆಂಟ್. ಗೃಹಜ್ಯೋತಿಗೆ ಅರ್ಜಿ ಹಾಕದಿದ್ರೆ ಮುಂದಿನ ತಿಂಗಳು ಬಿಲ್ ಬರುತ್ತೆ. ‘ಗೃಹಜ್ಯೋತಿ’ ಲಾಭ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು. ಆದಷ್ಟು ಬೇಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಒಳ್ಳೇದು ಎಂದರು.
ಬೆಂಗಳೂರು-ಮೈಸೂರು ಹೈವೇಯಲ್ಲಿ 2ನೇ ಹಂತದ ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಬೆಳಗ್ಗೆ 8ರಿಂದ ಗಣಂಗೂರು ಟೋಲ್ನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ನಡೆದಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಶುಲ್ಕ ವಸೂಲಿಗೆ ಸಿದ್ಧತೆ ನಡೆದಿದ್ದು NHAI ನಡೆ ವಿರುದ್ಧ ಮಂಡ್ಯ ಶಾಸಕರು, ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಟೋಲ್ ಸಂಗ್ರಹ ಇಂದಿನಿಂದ ಶುರುವಾಗಿದೆ. ಮಂಡ್ಯ ಜಿಲ್ಲೆಯ 55 ಕಿಮೀ ವ್ಯಾಪ್ತಿಯಲ್ಲಿ ಟೋಲ್ ಕಲೆಕ್ಷನ್ ಮಾಡಲಾಗ್ತಿದೆ. ಜೀಪು ಕಾರು ಸೇರಿದಂತೆ ಲಘು ವಾಹನಗಳಿಗೆ 80 ರೂಪಾಯಿ ಕಟ್ಟಬೇಕಿದೆ.