Author: Prajatv Kannada

ಬೆಂಗಳೂರು: ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸೋಕೆ ಜುಲೈ 25ರ ವರೆಗೂ ಸಮಯವಿದೆ. ಅರ್ಜಿ ಹಾಕದವರಿಗೆ ವಿದ್ಯುತ್ ಉಚಿತ ಸಿಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಗೃಹಜ್ಯೋತಿ ಯೋಜನೆ ಕೆಲಸ ಚೆನ್ನಾಗಿ ಆಗುತ್ತಿದೆ. 86.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಜುಲೈ 1ರಿಂದಲೇ ಎಲ್ಲರಿಗೂ ಫ್ರೀ ಕರೆಂಟ್ ಸಿಗಲಿದೆ ಎಂದು ಹೇಳಿದ್ದಾರೆ. ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದವರಗೆ ಮಾತ್ರ ಆಗಸ್ಟ್‌ ತಿಂಗಳಿಂದ ಕರೆಂಟ್‌ ಬಿಲ್‌ ಫ್ರೀ ಇರಲಿದೆ. ಇಲ್ಲದಿದ್ದರೆ, ಉಚಿತ ಇರಲ್ಲ. ಅರ್ಜಿ ಹಾಕೋದು ತಡ ಮಾಡಿದ್ರೆ, ಸೌಲಭ್ಯ ಸಿಗೋದು ಕೂಡ ತಡವಾಗುತ್ತೆ. ಆದ್ದರಿಂದ ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

Read More

ಅಹಮದಾಬಾದ್‌: ವಿಶ್ವಕಪ್‌ನ (ICC ODI WorldCup) ಭಾರತ-ಪಾಕ್ ನಡುವಿನ ಪಂದ್ಯ ಹಾಗೂ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುವುದು ಖಚಿತಗೊಂಡ ಬೆನ್ನಲ್ಲೇ ನಗರದಲ್ಲಿ ಹೋಟೆಲ್ ರೂಮ್‌ಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ (Hotels) ಒಂದು ರಾತ್ರಿ ಉಳಿಯಲು 6,500-10,000 ರೂ. ಇರುವ ಬೆಲೆ ಅ.13ರಿಂದ 16ರ ನಡುವೆ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ರೂ. ವರೆಗೂ ಏರಿಕೆಯಾಗಿದೆ. ಬೆಲೆ ಗಗನಕ್ಕೇರಿದ್ದರೂ ನಗರದ ಹೋಟೆಲ್‌ಗಳು ಶೇ. 80 ರಷ್ಟು ಮುಂಗಡ ಬುಕಿಂಗ್ ಆಗಿವೆ ಎನ್ನಲಾಗಿದೆ. ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅಕ್ಟೋಬರ್‌ 15 ರಂದು ಭಾರತ-ಪಾಕಿಸ್ತಾನ ತಂಡಗಳ ರಣರೋಚಕ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಮುಂಚಿತವಾಗಿಯೇ ಕ್ರೀಡಾಂಗಣಕ್ಕೆ ಹತ್ತಿರದ ಹೋಟೆಲ್‌ಗಳಲ್ಲಿ (Ahmedabad Hotels) ರೂಮ್‌ಗಳನ್ನ ಬುಕಿಂಗ್‌ ಮಾಡೋಕೆ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೂಮ್‌ ಬುಕಿಂಗ್‌ ಬೆಲೆ ಸಾಮಾನ್ಯ ಅವಧಿಗಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ರೂಮ್‌…

Read More

ಹಾವೇರಿ: ನೆಚ್ಚಿನ ಶಿಕ್ಷಕ ವರ್ಗಾವಣೆ ಆಗಿದ್ದಕ್ಕೆ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ನಿಡನೇಗಿಲು ಸರಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಆರು ವರ್ಷಗಳ ಕಾಲ ನಿಡನೇಗಿಲು ಗ್ರಾಮದ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ಪಿ.ಎಸ್.ಸೀತೆಕೊಂಡ ವರ್ಗಾವಣೆ ಆಗಿದ್ದಾರೆ. ರಟ್ಟೀಹಳ್ಳಿ ತಾಲೂಕಿನ ಮೇದೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಗಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೆಚ್ಚಿನ ಶಿಕ್ಷಕರಾಗಿದ್ದ ಸೀತೆಕೊಂಡ ವರ್ಗಾವಣೆ ಆಗಿದ್ದಕ್ಕೆ ವಿದ್ಯಾರ್ಥಿಗಳು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿದ್ಯಾರ್ಥಿಗಳ ಕಣ್ಣೀರು ಕಂಡು ವಿದ್ಯಾರ್ಥಿಗಳನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಲೇ ಶಿಕ್ಷಕ ಸೀತೆಕೊಂಡ ಭಾವುಕರಾದರು.

Read More

ಹುಬ್ಬಳ್ಳಿ : ವೀರಶೈವ ಲಿಂಗಾಯತ ಎಲ್ಲ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವೀರಶೈವ-ಅಂಗಾಯತ  ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 27  ರಂದು ಹುಬ್ಬಳ್ಳಿಯ ಸವಾಯಿ ಗಂಧರ್ದ ಹಾಲ್‌ನಲ್ಲಿ ಜರುಗುವುದು ಎಂದು ಸಮಾಜದ ಮುಖಂಡ ಪ್ರಕಾಶ ಬೆಂಡಿಗೇರಿ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಪ್ರತಿಭಾವಂತ ವಿದ್ಯಾರ್ಥಿಗಳು 2022-23 ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರಮಠ ಇವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿಗಳು ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿಗಳು ವಿಧಾನ ಪರಿಷತ್‌ ಸದಸ್ಯರಾದ  ಜಗದೀಶ ಶೆಟ್ಟರ ವಹಿಸುವರು‌ ಎಂದರು‌.‌ ಇನ್ನುಹುಬ್ಬಳ್ಳಿಯಲ್ಲಿ ಬರುವ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಎರಡು ಭಾವಚಿತ್ರ ಅಂಕಪಟ್ಟ ಹಾಗೂ ಆಧಾರ ಕಾರ್ಡಗಳನ್ನು ಈ ಕೆಳಗಿನ ವಿಳಾಸಕ್ಕೆ ಜುಲೈ12,.2023 ರ ಒಳಗಾಗಿ ತಲುಪಿಸಿ ನೋಂದಣಿಯನ್ನು…

Read More

ವಿಜಯಪುರ: ಖಾಸಗಿ ಸಂಸ್ಥೆಯ ಶಾಲಾ ಶಿಕ್ಷಕಿಯಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಹೌದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದ ವಿದ್ಯಾಭಾರತಿ ವಿದ್ಯಾಕೇಂದ್ರದ ಶಾಲೆಯಲ್ಲಿ ಶಿಕ್ಷಕಿ ಆಗಿರೋ ಶ್ರೀದೇವಿ ಕಲ್ಮನಿ ವಿದ್ಯಾರ್ಥಿನಿ ಆರತಿ ಅಮೋಘಿ ಹೆಳವಾರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್ ಟಿ ಇ ಅಡಿಯಲ್ಲಿ ಶಾಲೆಗೆ ಆರತಿ ಹೆಳವಾರ ದಾಖಲಾಗಿದ್ದು, ವಿದ್ಯಾರ್ಥಿನಿಯಿಂದ ಶುಲ್ಕ ವಸೂಲಿ ಮಾಡಿರೋ ಆರೋಪ ಕೂಡ ಕೇಳಿಬಂದಿದೆ. 7 ನೇ ತರಗತಿಯ ಶುಲ್ಕ 4 ಸಾವಿರ ಹಣ ನೀಡುವಂತೆ ಒತ್ತಾಯ ಮಾಡಿದ್ದು, ಹಣ ನೀಡದ ಕಾರಣ ವಿದ್ಯಾರ್ಥಿನಿ ಆರತಿ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಶಿಕ್ಷಕಿ ಶ್ರೀದೇವಿಯಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ ಆರತಿ ಇಂಡಿ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರೆದಿದೆ. ಇನ್ನೂ ಈ ಘಟನೆ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಮೊದಲು ಬಿಜೆಪಿ ನಾಯಕ ಸಿಟಿ ರವಿ ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ. ಚುನಾವಣೆಯಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಉತ್ತರವೇ ಅಂತಿಮ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಪಂಚೆ ಬಗ್ಗೆ ಮಾತನಾಡಿದ್ದ ಸಿಟಿ ರವಿಗೆ ಚಲುವರಾಯಸ್ವಾಮಿ ಟಾಂಗ್‌ ನೀಡಿದ್ದಾರೆ. ಬಿಜೆಪಿ 65 ಸ್ಥಾನಕ್ಕೆ ಕುಸಿದಿರುವ ಅವರಲ್ಲಿ ಕಚ್ಚಾಟ ಇಲ್ವಾ. ನಮ್ಮಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರಾ? ಸುಮ್ಮನೇ ಅವರೇ ಕಲ್ಪಿಸಿಕೊಂಡು ಮಾತಾನಾಡುತ್ತಾರೆ. ಮನಸ್ಸಿಗೆ ಬಂದಂತೆ ಮಾತನಾಡಿದವರನ್ನು ಜನರು ಮಲಗಿಸಿದ್ದಾರೆ. ಅದರಲ್ಲಿ ಒಬ್ಬರು ಇಬ್ಬರು ಉಳಿದುಕೊಂಡಿದ್ದಾರೆ. ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಮ್ಮ ಪಂಚೆ ಸರಿ ಮಾಡೋದು ಬೇಡ. ಮೊದಲು ಅವರ ಪಂಚೆ ಸರಿ ಮಾಡಿಕೊಳ್ಳೋಕೆ ಹೇಳಿ ಎಂದು ಕಿಡಿಕಾರಿದರು.

Read More

ಬೆಂಗಳೂರು: ರಾಜ್ಯ ಸರ್ಕಾರದ ಘೋಷಣೆಗಳ ಜಾರಿಗೆ ಒತ್ತಾಯಿಸಿ ಜುಲೈ 4 ರಂದು ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಧರಣಿ ನಡೆಸಲು ಮುಂದಾಗಿದೆ. ಬಿಜೆಪಿ ಶಾಸಕರು ಅಧಿವೇಶನದಲ್ಲಿ ಧರಣಿ ನಡೆಸಲಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಧರಣಿ ನಡೆಸಲಿದ್ದಾರೆ.ಯಡಿಯೂರಪ್ಪ ಜೊತೆ ಮಾಜಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ. ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಯಂತೆ 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡ್ತೇವೆ ಎಂದು ಹೇಳಿದಕ್ಕೆ ವಿರೋಧ ಪಕ್ಷಗಳು ಸಿಡಿದೆದ್ದುಬಿಟ್ಟು ಕೊಟ್ಟ ಮಾತಿಗೆ ಸರ್ಕಾರ ತಪ್ಪುತ್ತಿದೆ. ನೀವು ಜನರಿಗೆ ಕೊಟ್ಟ ವಿಶ್ವಸವನ್ನು ಉಳಿಸಿಕೊಳ್ಳಿ ಇಲ್ಲದಿದ್ದರೆ ಜನರ ಬಳಿ ತಮ್ಮ ಮೋಸವನ್ನು ಹೇಳಿಕೊಳ್ಳಿ ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಾಗುತ್ತೆ

Read More

ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಹುಡುಗಿ ನಟಿ ಪ್ರಿಯಾಮಣಿ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕ ಕೊಂಚ ಮಟ್ಟಿಗೆ ಸಿನಿಮಾದ ಕೆಲಸಗಳಿಂದ ದೂರವಾಗಿದ್ದ ನಟಿ ಇದೀಗ ಮತ್ತೆ ಪ್ಲ್ಯಾಟ್ ಗೆ ಮರಳಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟು 20 ವರ್ಷ ಕಳೆದಿದ್ದರು ಇದುವರೆಗೂ ಯಾವುದೇ ಕಿಸ್ಸಿಂಗ್ ದೃಶ್ಯ ಅಥವಾ ಹಸಿ ಬಿಸಿ ದೃಶ್ಯಗಳಲ್ಲಿ ಪ್ರಿಯಾಮಣಿ ನಟಿಸಿಲ್ಲ. ಈ ಬಗ್ಗೆ ಸ್ವತಃ ಪ್ರಿಯಾಮಣಿ ಪ್ರತಿಕ್ರಿಯೆ ನೀಡಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ನಟಿ ಕನ್ನಡದಲ್ಲಿ ರಾಮ್, ಅಣ್ಣಾ ಬಾಂಡ್, ಕೋ ಕೋ, ವಿಷ್ಣುವರ್ಧನ, ಲಕ್ಷ್ಮಿ ಚಿತ್ರ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಶಾರುಖ್ ಖಾನ್ ನಟನೆಯ ‌’ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿನ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಇದೀಗ ಮತ್ತೆ ಶಾರುಖ್ ಜೊತೆ ಸೊಂಟ ಬಳುಕಿಸಲು ಸಜ್ಜಾಗಿದ್ದಾರೆ.  20 ವರ್ಷಗಳ ಸಿನಿ ಜರ್ನಿಯಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಗಮನ…

Read More

ತೆಲುಗು ನಟ ಪವನ್ ಕಲ್ಯಾಣ್​ರ ಸಿನಿಮಾ ನೋಡಿದ್ದ ಅಮಿತಾಬ್ ಬಚ್ಚನ್ ಸಿನಿಮಾ ನೋಡುವಾಗಲೇ ಸಿಟ್ಟಾಗಿ ಬೀಗವನ್ನು ಟಿವಿಯತ್ತ ಬಿಸಾಡಿಬಿಟ್ಟಿದ್ದರಂತೆ. ಅದು ಯಾವ ಸಿನಿಮಾ,, ಯಾಕೆ ಆ ರೀತಿ ಮಾಡಿದ್ರೂ ಅನ್ನೋದನ್ನು ಹೇಳಿದ್ದಾರೆ ಸ್ಟೋರಿ ಪೂರ್ತಿ ಓದಿ. ಪವನ್ ಕಲ್ಯಾಣ್ ಈಗ ಸೂಪರ್ ಸ್ಟಾರ್ ನಟ, ಅವರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಅವರ ಸಿನಿಮಾಗಳನ್ನು ತೆಲುಗು ಜನರು ಮಾತ್ರವಲ್ಲದೆ ಇತರೆ ಭಾಷೆಯ ಜನರೂ ನೋಡಿ ಮೆಚ್ಚಿದ್ದಾರೆ. ಆದರೆ ಬಹಳ ವರ್ಷಗಳ ಹಿಂದೊಮ್ಮೆ ಪವನ್ ಕಲ್ಯಾಣ್​ರ ಸಿನಿಮಾ ನೋಡಿದ್ದ ಅಮಿತಾಬ್ ಬಚ್ಚನ್, ಸಿನಿಮಾ ನೋಡುವಾಗಲೇ ಸಿಟ್ಟಾಗಿ ಬೀಗವನ್ನು ಟಿವಿಯತ್ತ ಬಿಸಾಡಿಬಿಟ್ಟಿದ್ದರಂತೆ. ತೊಲಿ ಪ್ರೇಮ’ ಇದು ಪವನ್ ಕಲ್ಯಾಣ್​ರ ನಾಲ್ಕನೇ ಸಿನಿಮಾ. ಬಿಡುಗಡೆ ಆಗಿ ಬರೋಬ್ಬರಿ 25 ವರ್ಷಗಳಾಗಿವೆ. ಸಿನಿಮಾ 25 ವರ್ಷ ಪೂರೈಸಿದ ಕಾರಣ ಸಿನಿಮಾ ನಿರ್ದೇಶಕ ಎ ಕರುಣಾಕರನ್ ಹಲವು ಸಂದರ್ಶನಗಳನ್ನು ನೀಡಿದ್ದು, ಅಮಿತಾಬ್ ಬಚ್ಚನ್ ಒಮ್ಮೆ…

Read More

ನಾವು ಎಳನೀರು ಯಾಕೆ ಕುಡಿಬೇಕು? ಅದರ ಮಹತ್ವ ಏನು? ಇದರ ಉಪಯೋಗವೇನು ಅಂತ ನಿಮಗೆ ತಿಳಿಸುತ್ತೇವೆ. ನೋಡೋಕೆ ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಆದ್ರೆ ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ವರ್ಷವಿಡಿ ದೊರೆಯುತ್ತದೆ. ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಲ್ಲ, ಸರಿಯಾಗಿ ಬಳಸಿದರೆ ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೈಕೆಗೂ ಒಳ್ಳೆಯದು. ಎಳನೀರ ಉಪಯೋಗಗಳೇನು? ದೇಹಕ್ಕೆ ಬೇಕಾದ ಬಹುತೇಕ ನೀರಿನ ಅಗತ್ಯತೆಗಳನ್ನು ಪೂರೈಸುತ್ತದೆ: ಎಳನೀರು ಒಂದು ಜೀವಾಮೃತ. ಇದರಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸುವುದಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಎಳನೀರಿನಲ್ಲಿ…

Read More