ಮೈಸೂರು: ಮೈಸೂರಿನಲ್ಲಿ ಜುಲೈ 2 ರಿಂದ ಸೆಪ್ಟಂಬರ್ 29 ರವರೆಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ 36ನೇ ಚಾತುರ್ಮಾಸ್ಯ ವ್ರತ ನಡೆಯಲಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯಾ ಸಮಿತಿ ಗೌರವ ಅಧ್ಯಕ್ಷರಾದ ಆರ್ ವಾಸುದೇವ್ ಭಟ್ ತಿಳಿಸಿದರು. ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತಿವರೇಣ್ಯ ಸಮಾಜ ಸುಧಾರಕರೆಂದು ಹೆಸರುವಾಸಿಯಾದ ಪೇಜಾವರ ಮಠಾಧೀಶ, ವಿಶ್ವೇಶತೀರ್ಥ ಶ್ರೀ ಪಾದರಕರಕಮಲ ಸಂಜಾತರಾದ ಪೂಜ್ಯ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅವರ ಗುರುಗಳು ನಡೆದುಕೊಂಡು ಬಂದಿದ್ದ ದಾರಿಯಲ್ಲೇ ಸಾಗುತ್ತ, ತಮ್ಮ ಗುರುಗಳು ಪ್ರಾರಂಭಿಸಿದ್ದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು, ವಿದ್ಯಾಶಾಲೆಗಳನ್ನು, ವಿದ್ಯಾರ್ಥಿನಿಲಯಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಯತಿಗಳು ಪ್ರತೀ ವರ್ಷವೂ ಪಾಲನೆ ಮಾಡಿಕೊಂಡು ಬರುತ್ತಿರುವ ಚಾತುರ್ಮಾಸ್ಯ ವ್ರತವನ್ನು ಈ ಬಾರಿ ಮೈಸೂರು ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದೆ ತಿಳಿಸಿದರು
Author: Prajatv Kannada
ಮೈಸೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವ ನಿಲುವು ಸ್ವಾಗತಾರ್ಹ. ಆದರೆ ಬಡವರ ಹಸಿವಿನ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮ್ ಕಿಡಿ ಕಾರಿದರು. ಅಕ್ಕಿ ದೊರಕದೆ ಹಿನ್ನಲೆಯಲ್ಲಿ 5 ಕೆಜಿ ಅಕ್ಕಿ ಜೊತೆ 5 ಅಕ್ಕಿಗೆ ತಗುಲುವ ಹಣ ಸಂದಾಯ ಮಾಡಲು ಸರ್ಕಾರ ನಿರ್ಧರಿಸಿರುವುದನ್ನ ಟೀಕಿಸಿರುವ ಪ್ರತಿಪಕ್ಷಗಳ ವಿರುದ್ದ ಕೆ.ಎಸ್ ಶಿವರಾಮ್ ಕಿಡಿಕಾರಿದರು. ಬಿಜೆಪಿ ಬಡವರ ಹಸಿವಿನ ಮೇಲೆ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಅಕ್ಕಿ ಕೊಡಲಿಲ್ಲ ಅಂದ್ರೆ ಹಣ ನೀಡಿ ಎಂದು ನೀವೆ ಹೇಳಿದ್ರಿ ಇಂದು ಅದನ್ನು ವಿರೋಧಿಸುತ್ತಿದ್ದೀರಿ. ಅನ್ನಭಾಗ್ಯ ಯೋಜನೆ ಜಾರಿಗೊಂಡ್ರೆ ಬಿಜೆಪಿ ನೆಲೆ ಇರಲ್ಲ ಅಂತ ಭಯ ಪಟ್ಟಿದ್ದೀರಿ . ಅದಕ್ಕೆ ಹೀಗೆ ಇಲ್ಲಸಲ್ಲದ ವಾದ ಮಾಡ್ತಿದ್ದೀರಾ. ನಿಮ್ಮನ್ನು ಈಗಾಗಲೇ ಜನ ತಿರಸ್ಕರಿಸಿದ್ದಾರೆ ಹೀಗೆ ಮಾಡಿದ್ರೆ ಲೋಕಸಭೆ ಚುನಾವಣೆಯಲ್ಲೂ ಮನೆಗೆ ಕಳಿಸ್ತಾರೆ ಎಂದು ವಾಗ್ದಾಳೀ ನಡೆಸಿದರು.
ಚಿಕ್ಕಮಗಳೂರು: ರಾಜಕಾರಣದಲ್ಲಿ ಅನೇಕ ವರ್ಷಗಳಿಂದ ಕಷ್ಟಪಟ್ಟು ಘನತೆ, ಗೌರವ ಸಂಪಾದಿಸಿ ಬಿಳಿ ಅಂಗಿ ಹಾಕಿಕೊಂಡಿರುತ್ತೇವೆ. ನೀವು ಒಂದು ಸಾರಿ ಬಂದು ನಮ್ಮ ಬಿಳಿ ಅಂಗಿ ಮೇಲೆ ಉಗಿದು ಹೋಗ್ತೀರ. ಅದನ್ನು ತೊಳೆದುಕೊಳ್ಳೇಕೊ ನಮಗೆ ತಿಂಗಳಾನುಗಟ್ಟಲೆ ಬೇಕಾಗುತ್ತದೆ. ಹೀಗೆ ರಾಜ್ಯದ ಬಿಜೆಪಿ ನಾಯಕರೊಬ್ಬರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜಾಡಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗಳ ನಡುವೆ ಬೊಮ್ಮಾಯಿ ಈ ಮಾತು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿದ್ದರು ಎಂದು ಇತ್ತೀಚೆಗೆ ಹೇಳಿದ್ದ ನಾಯಕರೊಂದಿಗೆ ಸಭೆಯಲ್ಲಿ ಮಾತನಾಡಿದ್ದಾರೆ. ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿ ಅನೇಕರು ಸಭೆಯಲ್ಲಿದ್ದರು. ನಾವು ರಾಜಕಾರಣದಲ್ಲಿ ಕಷ್ಟ ಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರುತ್ತೇವೆ. ನೀವು ಬಂದು ಉಗಿದು ಹೋಗಿರುತ್ತೀರಿ. ಆರೋಪದ ಶಾಯಿ ತೆಗೆದು ನಮಗೆ ಎಸೆಯುತ್ತೀರಿ. ಅದರ ಹಿಂದೆ ಏನಾಗಿರುತ್ತದೆ ಅಂತ ಗೊತ್ತಿರಲ್ಲ ನಿಮಗೆ. ನೀವು ಮಾಡಿರುವ ಕಲೆಯನ್ನು ಅಳಿಸೋಕೆ ತಿಂಗಳಾನುಗಟ್ಟಲೆ ಬೇಕು.…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗನ್ನ ಜಾರಿ ಮಾಡೋಕೆ ಇನ್ನಿಲ್ಲದ ಕಸರತ್ತು ನಡೆಸಿದೆ. ಅಂತೂ ಇಂತೂ ನೂರೆಂಟು ವಿಘ್ನಗಳ ನಡುವೆ ಶಕ್ತಿ ಯೋಜನೆ ಜಾರಿ ಮಾಡಿರೋ ಸರ್ಕಾರ ಇದೇ ಹುಮ್ಮಸ್ಸಿನಲ್ಲಿ ಇಂದಿನಿಂದ ಗೃಹಜ್ಯೋತಿ ಜಾರಿಗೆ ಮುಂದಾಗಿದೆ. ನುಡಿದಂತೆ ನಡೆಯುವ ಸರ್ಕಾರ ಎಂದಿರುವ ಸಿಎಂ ಸಿದ್ದರಾಯಯ್ಯ ಗೃಹಜ್ಯೋತಿ ಯೋಜನೆ ಅಡಿ ಫ್ರೀ ವಿದ್ಯುತ್ ಭಾಗ್ಯಕ್ಕೆ ಕಲ್ಪಿಸೋಕೆ ಭಾರೀ ಸಿದ್ದತೆ ನಡೆಸಿದೆ. ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಅನುಷ್ಠಾನ ಭಾರೀ ಸವಾಲು ಎನ್ನಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆ ಶಕ್ತಿ ಯೋಜನೆ ಜಾರಿ ಜನಮೆಚ್ಚಿಗೆ ಪಾತ್ರವಾಗಿರೋ ಸರ್ಕಾರ ಇದೀಗ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯನ್ನ ಜಾರಿ ಮಾಡ್ತಿದೆ. ಹೌದು.. ನುಡಿದಂತೆ ನಡೆಯುವ ಸರ್ಕರ ಎಂದಿರುವ ಸಿದ್ದರಾಮಯ್ಯ, ಜುಲೈ 1ರಿಂದ ಗೃಹಜ್ಯೋತಿ ಗ್ಯಾರಂಟಿಯನ್ನ ಈಡೇಸಲಿದ್ದಾರೆ. ಈಗಾಗಲೇ ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹ ಜ್ಯೋತಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, 200 ಯೂನಿಟ್ ವಿದ್ಯುತ್ ಉಚಿತವಾಗಿ…
ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹಣ ಜುಲೈ 1ರಂದೇ ಹಣ ಕೊಡ್ತೀವಿ ಅಂತಾ ಹೇಳಿಲ್ಲ. ಈ ತಿಂಗಳು 10ರ ನಂತರ ಕೊಡಲು ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ಜುಲೈ ತಿಂಗಳ ಅಕ್ಕಿ ಬದಲಿಗೆ ದುಡ್ಡನ್ನು ಜುಲೈ 1ರಂದೇ ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು. ಜುಲೈ 10ರ ನಂತರ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಗೃಹಜ್ಯೋತಿ (Gruhajyothi Scheme) ಯೋಜನೆಯ ಕುರಿತು ಮಾತಾಡಿದ ಸಿಎಂ, ಗೃಜ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಗೃಹಜ್ಯೋತಿ ಇಂದಿನಿಂದ ಪ್ರಾರಂಭವಾಗುತ್ತಿದೆ, ಈ ತಿಂಗಳು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು: ಚೀಟಿ ಕಟ್ಟಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿ(Bengaluru)ನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಪುಣ್ಯ ಹಾಗೂ ಚಂದ್ರಶೇಖರ್ ಎಂಬ ದಂಪತಿಗಳು ಸ್ವಂತ ಮನೆ ತೋರಿಸಿ, ಸುಮಾರು 1.5 ಕೋಟಿಗೂ ಹೆಚ್ಚು ಹಣ ಚೀಟಿ ಹಾಕಿಸಿಕೊಂಡು ಹಲವರಿಗೆ ವಂಚಿಸಿದ್ದಾರೆ. ಈ ಕುರಿತು ದಂಪತಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 6ಗಂಟೆಗಳ ಬಳಿಕ ಸತತ ಪ್ರಯತ್ನದೊಂದಿಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಬಿಜೆಪಿ ತರ ಯಾವತ್ತೂ ತಪ್ಪಿಸಿಕೊಂಡು ಕೆಲಸ ಮಾಡೋದಿಲ್ಲ, ನಾವು ಕೊಟ್ಟ ಭರವಸೆಗಳನ್ನು ಈಡೇರಿಕೆ ಮಾಡೇ ಮಾಡ್ತೀವಿ ಅವರು ಪ್ರತಿಪಕ್ಷದಲ್ಲಿ ಇಟ್ಕೊಂಡು ಸೂಚನೆ ಮತ್ತು ಸಲಹೆಗಳನ್ನು ಕೊಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಕಿಡಿ ಕಾರ್ಯಕರ್ತರು. ಆನೇಕಲ್ ತಾಲೂಕಿನ ಸೂರ್ಯ ಸಿಟಿ ಒಂದನೇ ಹಂತದಲ್ಲಿ ಹಮ್ಮಿಕೊಂಡಿದ್ದ ಮೂರನೇ ಬಾರಿ ಆಯ್ಕೆಯಾದ ಶಾಸಕ ಶಿವಣ್ಣ ಅಭಿನಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಅವರು ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆಯನ್ನು ಸುರಿದಿದ್ದಾರೆ. ಯಡಿಯೂರಪ್ಪ ಎರಡು ವರ್ಷ ಮತ್ತು ಬಸವರಾಜ್ ಬೊಮ್ಮಾಯಿ ಎರಡು ವರ್ಷ ಆಡಳಿತವನ್ನು ನಡೆಸಿದ್ದಾರೆ ಬಿಜೆಪಿ ಮೆನು ಫಸ್ಟ್ ದಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು ಆದರೆ ಅವರು ಬರಿ 60 ಭರವಸೆಗಳನ್ನ ಈಡೇರಿಕೆ ಮಾಡಿದರೆ. ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಮಾನ ಮರ್ಯಾದೆ ಇದ್ರೆ ಕೇಂದ್ರ ಸರ್ಕಾರ ಬೆಲೆ ಏರಿಕೆ ವಿಚಾರವಾಗಿ ಮಾತನಾಡಲಿ ಕೇಂದ್ರ ಸರ್ಕಾರದ ಮನದಟ್ಟು ಮಾಡುವ ಕೆಲಸ ಮಾಡಲಿ . ಕಾಂಗ್ರೆಸ್ ಪಕ್ಷ 2013ರಲ್ಲಿ ಮತ್ತು 2018 ರವರೆಗೆ 165…
ಬೆಂಗಳೂರು: ಬಿಜೆಪಿ ಇನ್ನೂ ವಿಪಕ್ಷ ನಾಯಕರನ್ನು ನೇಮಕ ಮಾಡದ ಹಿನ್ನೆಲೆ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳೆದಿದೆ. ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ. ಸಂವಿಧಾನ ತಿಳಿದವರು, ಪ್ರಜಾಪ್ರಭುತ್ವ ಅರಿತವರು ಬೇಕಾಗಿದ್ದಾರೆ. ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ಬೇಕಾಗಿದ್ದಾರೆ. ಆರ್ಎಸ್ಎಸ್ ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನ ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ. ಕಾಂಗ್ರೆಸ್ ಟ್ವೀಟ್‌ನಲ್ಲಿ ಏನಿದೆ? ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ… * ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. * ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. * RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. * ವಾಟ್ಸಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. * ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. * ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು…
ಬೆಂಗಳೂರು: ಸರ್ಕಾರದ 108-ಆರೋಗ್ಯ ಕವಚ ಯೋಜನೆಯನ್ನು ನಡೆಸುತ್ತಿರುವ ಜಿ.ವಿ.ಕೆ ಸಂಸ್ಥೆ ಕಳೆದ 4 ತಿಂಗಳಿಂದ ವೇತನ ನೀಡಿಲ್ಲವೆಂದು ಸಂಸ್ಥೆಯ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಸುಮಾರು 3 ಸಾವಿರ ಸಿಬ್ಬಂದಿಗಳು ಕೆಲಸ ಮಾಡ್ತಾ ಇದ್ದು, ಸಾಮೂಹಿಕ ರಜೆ ಹಾಕಿದ್ದೇ ಆದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಕಳೆದ 4 ತಿಂಗಳಿಂದ ವೇತನ ಆಗಿಲ್ಲ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮುಂದೆ ಬಂದು ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಸಾಮೂಹಿಕ ರಜೆ ತೆಗೆದುಕೊಳ್ಳಲು ಸಿಬ್ಬಂದಿಗಳು ನಿರ್ಧರಿಸಲಾಗಿದೆ. ಬಾಕಿ ಉಳಿದಿರುವ ವೇತನದ ಜೊತೆಗೆ ಸಿಬ್ಬಂದಿಗೆ ವೇತನವನ್ನು ಹೆಚ್ಚಳ ಮಾಡಬೇಕು, ಪ್ರಸ್ತುತ ಸಿಗುತ್ತಿರುವ ವೇತನ ಸಾಲತ್ತಿಲ್ಲ ಎಂದು ತಮ್ಮ ಬೇಡಿಕೆಯನ್ನು ಸಹ ಮುಂದಿಟ್ಟಿದ್ದಾರೆ. ಸರ್ಕಾರದ ಬೊಕ್ಕಸದಿಂದ ಈಗಾಗಲೇ 2022-23 ನೇ ಸಾಲಿನ ಎರಡನೇ ತ್ರೈಮಾಸಿಕಕ್ಕೆ 2,499.97 ಲಕ್ಷಗಳ ಅನುದಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ, ಇಎಂಆರ್ ಐ ಇಲಾಖೆಯಿಂದ ಜಿವಿಕೆ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ.…
ಪ್ರತಿ ವರ್ಷ ಜುಲೈ 1 ರಂದು ನಮ್ಮ ರಾಜ್ಯದಲ್ಲಿ `ಪತ್ರಿಕಾ ದಿನ’ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ. ಮಂಗಳೂರಿನಿಂದ ಕಲ್ಲಚ್ಚಿನಲ್ಲಿ ಪ್ರಸರಣಗೊಳ್ಳುತ್ತಿದ್ದ ‘ಮಂಗಳೂರ ಸಮಾಚಾರ’ ಪತ್ರಿಕೆ ಪ್ರಾರಂಭಗೊಂಡ ಒಂದು ವರ್ಷದ ಬಳಿಕ ಅಂದರೆ 1844ರ ಮಾರ್ಚ್ ತಿಂಗಳಲ್ಲಿ ಬಳ್ಳಾರಿ ಕಾಗದ ಮುದ್ರಣಾಲಯದಲ್ಲಿ ಮುದ್ರಿಸುವ ಉದ್ದೇಶದಿಂದ ಬಳ್ಳಾರಿಗೆ ವರ್ಗಾಯಿಸಲಾಯಿತು. ಇಲ್ಲಿ ಪತ್ರಿಕೆಗೆ ‘ಕನ್ನಡ ಮಿಷನರಿ ಸಮಾಚಾರ’ ಎಂದು ಮರು ನಾಮಕರಣಗೊಳಿಸಲಾಯಿತು. ಇಲ್ಲಿ ಮೊಗ್ಲಿಂಗ್ ಅವರ ಆಪ್ತನಾಗಿದ್ದ ಇನ್ನೊಬ್ಬ ಮಿಷನರಿ ರೀಡ್ ಎಂಬಾತ ಪತ್ರಿಕೆಯ ಪ್ರಕಟಣೆ ಜವಾಬ್ದಾರಿ ಹೊತ್ತುಕೊಂಡರು. ಆದರೆ ರೀಡ್ ಅವರ ಮರಣಾನಂತರ ಪತ್ರಿಕೆಯ ಪ್ರಸರಣಕ್ಕೆ ತೀವ್ರ ಹೊಡೆತ ಬಿತ್ತು. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪತ್ರಿಕೆ ಅಲ್ಲಿ ಬಾಳಲಿಲ್ಲ. ದೇಶದ ಸ್ವಾತಂತ್ರ್ಯ ಹಾಗೂ ಏಕತೆಯ ಹಿನ್ನಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮೊಗ್ಲಿಂಗ್ 1857ರಲ್ಲಿ ‘ಕನ್ನಡ ಸುವಾಟಿಕ’ ಎಂಬ…