ಬೆಂಗಳೂರು: ಇಂನಿಂದಲೇ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. 5 ಅಕ್ಕಿ ನೀಡಲಾಗುವುದು, ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್ ಖಾತೆಗೆ ಹಾಕಲು ಹಣ ಕೂಡ ರೆಡಿ ಇದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ 1 ಅಂದ್ರೆ ಇಂದಿನಿಂದಲೇ ಜನರ ಬ್ಯಾಂಕ್ ಖಾತೆಗೆ ಹಾಕಲು ಹಣ ರೆಡಿಯಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿಯ ಹಣ ಸಿಗುತ್ತೆ. ಒಂದು ಮನೆಯಲ್ಲಿ 5 ಸದಸ್ಯರು ಇದ್ದರೆ, ಪ್ರತಿ ಕೆಜಿಗೆ 34 ರೂ.ನಂತೆ 25 ಕೆಜಿಗೆ 850 ರೂ. ಸಿಗುತ್ತದೆ. ಅಕ್ಕಿ ಕೊಡುವವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಅಕ್ಕಿ ಸಿಕ್ಕ ಕೂಡಲೇ ಕೊಡುವ ವ್ಯವಸ್ಥೆ ಮಾಡುತ್ತೇವೆ. ರೇಷನ್ ಕಾರ್ಡ್ ಪ್ರಕಾರ ಯಾರು ಮುಖ್ಯಸ್ಥರಿದ್ದಾರೋ ಅವರ ಅಕೌಂಟ್‌ಗೆ ಹಣ ಹಾಕುತ್ತೇವೆ. ಬಹುತೇಕ ಮಂದಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಇಲ್ಲದವರು ತಕ್ಷಣ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಹಣ ಹಾಕುತ್ತೇವೆ ಎಂದು…
Author: Prajatv Kannada
ಬೆಂಗಳೂರು: ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಜುಲೈ 3ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು 2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್ 15ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು. ಬಳಿಕ ಜೂನ್ 30ರವರೆಗೆ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ ಸರ್ಕಾರ ಈಗ ಮೂರನೇ ಬಾರಿಗೆ ವಿಸ್ತರಣೆಯ ಆದೇಶ ಹೊರಡಿಸಿದೆ. 2023-24ನೇ ಸಾಲಿಗೆ ಗ್ರೂಪ್ ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ವರ್ಗಾವಣೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ಕೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ಮಾರ್ಗಸೂಚಿಗಳಲ್ಲಿರುವ ಷರತ್ತುಗಳಿಗೊಳಪಟ್ಟು ಮಾಡಬಹುದಾಗಿದೆ. ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ…
ಮೈಸೂರು: ಬೆಂಗಳೂರು-ಮೈಸೂರು ಹೈವೇಯಲ್ಲಿ 2ನೇ ಹಂತದ ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಬೆಳಗ್ಗೆ 8ರಿಂದ ಗಣಂಗೂರು ಟೋಲ್ನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ನಡೆದಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಶುಲ್ಕ ವಸೂಲಿಗೆ ಸಿದ್ಧತೆ ನಡೆದಿದ್ದು NHAI ನಡೆ ವಿರುದ್ಧ ಮಂಡ್ಯ ಶಾಸಕರು, ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.
ಮೈಸೂರು: ಮುಂಗಾರು ಕೈಕೊಟ್ಟ ಹಿನ್ನೆಲೆ ಕಬಿನಿ ಜಲಾಶಯ ಬರಿದಾಗಿದ್ದು, 2,224 ಅಡಿ ಜಲಾಶಯದಲ್ಲಿ ಕೇವಲ 50 ಅಡಿ ನೀರು ಮಾತ್ರ ಇದೆ. ಜಲಾಶಯದಲ್ಲಿ ನೀರಿಲ್ಲದ ಹಿನ್ನೆಲೆ ಮುಳುಗಡೆಯಾಗಿದ್ದ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ. ಸುಮಾರು ಹತ್ತು ವರ್ಷಗಳ ನಂತರ ಮತ್ತೆ ದೇವಸ್ಥಾನ ಕಾಣಿಸಿಕೊಂಡಿದೆ. 2013 ರಲ್ಲಿ ಬರಗಾಲ ಬಂದಿದ್ದು, ಈ ವೇಳೆ ದೇವಸ್ಥಾನ ಕಾಣಿಸಿಕೊಂಡಿತ್ತು. 2013ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಈಗ ಮತ್ತೆ ಅವರೇ ಸಿಎಂ ಆಗಿದ್ದು, ಬರಗಾಲ ಎದುರಾಗುವ ಭೀತಿ ಇದೆ. ಜುಲೈ ತಿಂಗಳು ಬಂದರೂ, ಜಲಾಶಯಕ್ಕೆ ಒಂದು ಹನಿ ನೀರು ಸಹ ಬಂದಿಲ್ಲ. ಈ ಜಲಾಶಯದ ನೀರನ್ನು ಮೈಸೂರು, ಚಾಮರಾಜನಗರ, ಬೆಂಗಳೂರು, ಮಂಡ್ಯದ ಜನ ಈ ನೀರನ್ನ ಕುಡಿಯಲು ಬಳಕೆ ಮಾಡುತ್ತಾರೆ. ಇದೇ ಪರಿಸ್ಥಿತಿ ಮುಂದುವರೆದರೇ, ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ಬರಲಿದೆ.
ಚಾಮರಾಜನಗರ: ಇಂದಿನಿಂದ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ ಸಂಬಂಧ ನಾವು ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದ್ರು. ತಾತ್ಕಾಲಿಕವಾಗಿ 5 ಕೆಜಿ ಅಕ್ಕಿ ಬದಲು ಬಡವರಿಗೆ ಹಣ ನೀಡುತ್ತೇವೆ. ಹೆಚ್ಚುವರಿ ಅಕ್ಕಿ ಸಿಗದ ಹಿನ್ನೆಲೆ ಬ್ಯಾಂಕ್ ಖಾತೆಗೆ ಹಣ ಹಾಕ್ತಿದ್ದೇವೆ. ಕೇಂದ್ರ ಅಕ್ಕಿ ಕೊಡದ ಕಾರಣ ವಿಧಿಯಿಲ್ಲದೆ ಹಣ ಕೊಡುತ್ತಿದ್ದೇವೆ ಎಂದರು.
ಮೈಸೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕುಟುಂಬ ಇಂದು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿತು. ಗೃಹ ಸಚಿವರನ್ನು ದೇವಾಲಯದ ಆಡಳಿತ ವರ್ಗ ಅತ್ಮೀಯವಾಗಿ ಸ್ವಾಗತಿಸಿತು. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹೊರಬಂದ ಪರಮೇಶ್ವರ ಹಾಗೂ ಕುಟುಂಬದ ಸದಸ್ಯರು ದೇವಾಲಯದ ಮುಂಭಾಗ ಈಡುಗಾಯಿ ಒಡೆದು ದೇವಿಗೆ ಹರಕೆ ತೀರಿಸಿದರು. ಗೃಹ ಸಚಿವರಾದ ಬಳಿಕ ಮೊದಲ ಬಾರಿ ಮೈಸೂರಿಗೆ ಆಗಮಿಸಿರುವ ಡಾ. ಜಿ. ಪರಮೇಶ್ವರ್ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಅತ್ಯಂತ ಶ್ರೀಮಂತವಾದ ದೇವಸ್ಥಾನ ಯಾವುದು…? ಅದು ಎಲ್ಲಿದೆ.? .ಅದರ ವರಮಾನ ಎಷ್ಟಿರಬಹುದು..?ರಾಜಧಾನಿ ಬೆಂಗಳೂರಿನಲ್ಲಿಅತ್ಯಂತ ಹೆಚ್ಚು ಗಳಿಕೆಯ ದೇವಸ್ಥಾನ ಯಾವುದು..? ಹೀಗೊಂದಿಷ್ಟು ಪ್ರಶ್ನೆಗಳು ಯಾರನ್ನು ತಾನೇ ಕಾಡಿರೊಲ್ಲ ಹೇಳಿ.ಅಂತದ್ದೊಂದು ಪ್ರಶ್ನೆಗೆ ದಾಖಲೆ ಸಮೇತ ಉತ್ತರ ನೀಡ್ತಿದೆ.ಹೆಚ್ಚು ಆದಾಯವಿರುವ ದೇವಸ್ಥಾನಗಳ ಕುರಿತು ಮುಜರಾಯಿ ಇಲಾಖೆ ಮಾಡಿರುವ ಎಕ್ಸ್ ಕ್ಲ್ಯೂಸಿವ್ ಡೀಟೈಲ್ಸ್ ಇಲ್ಲಿದೆ. ಧಾರ್ಮಿಕ ಶೃದ್ಧಾಕೇಂದ್ರಗಳಾದ ದೇವಸ್ಥಾನಗಳು ಭಕ್ತಿಯನ್ನು ಪಸರಿಸುವುದರ ಜತೆಗೆ ಆರ್ಥಿಕವಾಗಿಯೂ ಸರ್ಕಾರದ ಬೊಕ್ಕಸವನ್ನು ತುಂಬಿಸುತ್ತಾ ಬಂದಿವೆ.ಮುಜರಾಯಿ ವ್ಯಾಪ್ತಿಯಲ್ಲಿರುವ ಸಾಕಷ್ಟು ದೇವಸ್ಥಾನಗಳು ಆರ್ಥಿಕವಾಗಿ ಸಾಕಷ್ಟು ಸ್ಥಿತಿವಂತ ಸ್ಥಿತಿಯಲ್ಲಿವೆ, ಆದಾಯದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ದೇವಸ್ಥಾನಗಳು ಎನ್ನುವಂಥ ಸ್ಥಾನ ಕಾಯ್ದುಕೊಂಡಿವೆ, ಅಂದ್ಹಾಗೆ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಆದಾಯದ ಆಧಾರದಲ್ಲಿ ಅತ್ಯಂತ ಶ್ರೀಮಂತ ದೇಗುಲಗಳ ಪಟ್ಟಿಯನ್ನು ಸಿದ್ದಪಡಿಸಿದೆ. 2023-23ರ ಸಾಲಿನಲ್ಲಿ ಸಂಗ್ರಹವಾದ ಆದಾಯದ ಪೈಕಿ ಅತ್ಯಂತ ಶ್ರೀಮಂತವಾದ ದೇವಸ್ಥಾನ ಸುಳ್ಯ ತಾಲುಕಿನ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಎನ್ನಲಾಗಿದೆ. ಅಂದ್ಹಾಗೆ ಸಂಗ್ರಹವಾಗಿರುವ ಆದಾಯ ಎಷ್ಟು ಗೊತ್ತಾ, ಬರೋಬ್ಬರಿ 123 ಕೋಟಿ 64 ಲಕ್ಷವಂತೆ.…
ಸೂರ್ಯೋದಯ: 05.57 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ದ್ವಾದಶಿ 01:16 AM ತನಕ ನಂತರ ತ್ರಯೋದಶಿ 11:07 PM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಅನುರಾಧ 03:04 PM ತನಕ ನಂತರ ಜೇಷ್ಠ ಯೋಗ: ಇವತ್ತು ಸಾಧ್ಯ 01:32 AM ತನಕ ನಂತರ ಶುಭ 10:44 PM ತನಕ ನಂತರ ಶುಕ್ಲ ಕರಣ: ಇವತ್ತು ಬಾಲವ 01:16 AM ತನಕ ನಂತರ ಕೌಲವ 12:17 PM ತನಕ ನಂತರ ತೈತಲೆ 11:07 PM ತನಕ ನಂತರ ಗರಜ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ0 7:30 ವರೆಗೂ ಅಮೃತಕಾಲ: 05.09 AM to 06.40 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:46…
ಬೆಂಗಳೂರು ;– ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಕೋರ್ಟ್ ಪೀಠವು ಆರೋಪಿಗೆ ಜಾಮೀನು ನಿರಾಕರಿಸಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಮಾಡಿದೆ. ತಕ್ಷಣಕ್ಕೆ ಉಂಟಾದ ಜಗಳದಿಂದ ಕೊಲೆ ಘಟನೆ ನಡೆದಿದೆ. ಮೃತನನ್ನು ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. ತಿರಸ್ಕರಿಸಿದ ಹೈಕೋರ್ಟ್, ಆರೋಪಿಯು ಕೊಲೆ ಮಾಡಿ ಫೇಮಸ್ ಆಗಬೇಕೆಂದು ಪದೇ ಪದೇ ಹೇಳುತ್ತಿದ್ದ. ಮೃತ ಯುವಕನ ತಾಯಿ ಹಾಗೂ ಇತರ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಆರೋಪಿಯು ಯುವಕನ ಕುತ್ತಿಗೆಗೆ ಡ್ರ್ಯಾಗರ್‌ನಿಂದ ಚುಚ್ಚಿದ್ದಾನೆ. ನಂತರ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗಲೂ ಬೆನ್ನಟ್ಟಿ ಮತ್ತೆ ಕುತ್ತಿಗೆ ಮತ್ತು ಹೊಟ್ಟೆಗೆ ಡ್ಯಾಗರ್‌ನಿಂದ ಇರಿದಿದ್ದಾನೆ ಎಂದು ಪೀಠ ಹೇಳಿದೆ. ಅಲ್ಲದೆ, ಶವಪರೀಕ್ಷೆಯ ವರದಿ ಪ್ರಕಾರ, ಮೃತದೇಹದ ಮೇಲೆ ಏಳು ಗಂಭೀರ ಗಾಯಗಳಿವೆ. ಆಘಾತ ಮತ್ತು ತೀವ್ರ ರಕ್ತಸ್ರಾವದಿಂದ ವ್ಯಕ್ತಿಯ ಸಾವಾಗಿದೆ. ಈ ಹಂತದಲ್ಲಿ ಉಂಟಾದ ಹಠಾತ್ ಜಗಳದಿಂದ ಘಟನೆ ನಡೆದಿದೆ ಹಾಗೂ ಕೊಲೆ…
ಬೆಂಗಳೂರು ;- ಶೀಘ್ರವೇ ಸಾರಿಗೆ ಇಲಾಖೆಯಲ್ಲಿ 13,415 ಖಾಲಿ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ನಿಗಮಗಳ ಮಗು 13,415 ಖಾಲಿ ಹುದ್ದೆ ಭರ್ತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ನಿವೃತ್ತಿ, ಮರಣ ಸೇರಿ ವಿವಿಧ ಕಾರಣದಿಂದ ಹಲವು ವರ್ಷಗಳಿಂದ ಚಾಲಕರು, ನಿರ್ವಾಹಕರು, ತಾಂತ್ರಿಕ ವಿಭಾಗ ಸೇರಿ ಇತರೆ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಉತ್ತಮ ಸೇವೆ ನೀಡಲು ಸಮಸ್ಯೆಯಾಗುತ್ತಿದೆ. ಇದನ್ನು ನಿವಾರಿಸಲು ನಾಲ್ಕು ನಿಗಮಗಳಲ್ಲಿ ಖಾಲಿ ಇರುವ 13,415 ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಕೆಎಸ್‌ಆರ್ಟಿಸಿಯಲ್ಲಿ 3745 ಚಾಲನಾ ಸಿಬ್ಬಂದಿ, 726 ತಾಂತ್ರಿಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಹೊಸದಾಗಿ 1,433 ಚಾಲನೆ ಸಿಬ್ಬಂದಿ, 2738 ತಾಂತ್ರಿಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಕೆಕೆಆರ್ಟಿಸಿಯಲ್ಲಿ 1773 ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಬಿಎಂಟಿಸಿಯಲ್ಲಿ…