ಬೆಂಗಳೂರು ;- ಅಕ್ಕಿಯ ಕೊರತೆ ಹಿನ್ನೆಲೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಹಣ ಕೊಡಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲವೆಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಾಡಿದ ಬೇರೆ ಬೇರೆ ಪ್ರಯತ್ನಗಳು ಕೈಗೂಡದ ಕಾರಣ ಹಣ ವಿತರಣೆಯ ನಿರ್ಧಾರಕ್ಕೆ ಬರಲಾಯಿತು. ಜನರ ಕೈಗೆ ಹಣ ಸಿಕ್ಕುವುದರೊಂದಿಗೆ ಸರ್ಕಾರಕ್ಕೂ ಉಳಿತಾಯ ತರುತ್ತಿದೆ. ಅಕ್ಕಿ ಸಿಕ್ಕಿದ್ದರೆ ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮೀಷನ್ ಕೊಡಬೇಕಾಗಿತ್ತು. ಸಾಗಣೆ ವೆಚ್ಚ ಪ್ರತಿ ಕೆಜಿಗೆ 1.10 ರೂ., ಸಗಟು ಕಮೀಷನ್ 35 ಪೈಸೆ ಹಾಗೂ ಚಿಲ್ಲರೆ ಕಮೀಷನ್ 1.84 ರೂ. ನೀಡಲಾಗುತ್ತಿತ್ತು. ಅಂದರೆ ಒಟ್ಟಾರೆ 2.69 ಪೈಸೆ ಈಗ ಸರ್ಕಾರಕ್ಕೆ ಉಳಿತಾಯವಾಗುತ್ತದೆ. ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, ಇವುಗಳಿಂದ ಒಟ್ಟಾರೆ 4.30 ಕೋಟಿ ಫಲಾನುಭವಿಗಳಿದ್ದಾರೆ ಎಂಬ ಅಂದಾಜು ಇದೆ. ಇಷ್ಟು ಜನರಿಗೂ ಸರ್ಕಾರ ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತಿತ್ತು. ಅಕ್ಕಿ ಕೊಡಲು ಸಾಧ್ಯವಿಲ್ಲದ…
Author: Prajatv Kannada
ಮಂಡ್ಯ: ಲಕ್ಷಾಂತರ ಜನರಿಗೆ ಅನುಕೂಲವಾಗಲಿ ಅಂತ ನಿರ್ಮಾಣವಾದ ಬೆಂಗಳೂರು-ಮೈಸುರು ನಡುವಿನ ನೂತನ ದಶಪಥ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ನೂತನ ಹೈವೇಯಲ್ಲಿ ಆಕ್ಸಿಡೆಂಟ್ ಹೆಚ್ಚಾಗುತ್ತಿರೋದ್ರಿಂದ ಪ್ರಮಾಣಿಕರಲ್ಲಿ ಆಂತಕ ಆವರಿಸುತ್ತಿದೆ. ಅಪಘಾತ ಹೆಚ್ಚಳಕ್ಕೆ ಕಾರಣ ತಿಳಿಯಲು ಎಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ರು. ಈ ವೇಳೆ ಸ್ಥಳೀಯರು ಹಾಗೂ ವಾಹನ ಸವಾರರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ದೂರಗಳ ಸರಮಾಲೆ ಹೇಳಿದ್ರು. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯೂ ಒಂದು. 9 ಸಾವಿರ ಕೋಟಿಗೂ ಅಧಿಕ ಖರ್ಚು ಮಾಡಿ ನಿರ್ಮಾಣಗೊಂಡಿರುವ ಈ ಹೈವೇ ಬಗ್ಗೆ ಸವಾರರು ಮೆಚ್ಚುಗೆ ವ್ಯಕ್ತಪಡಿಸುವ ಬದುಲು ಬೈದುಕೊಂಡೇ ಓಡಾಡುವಂತಾಗಿದೆ. ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪೊಲೀಸ್ ಇಲಾಖೆ ಅಪಘಾತ ತಗ್ಗಿಸುವ ನಿಟ್ಟಿನಲ್ಲಿ ಅಲರ್ಟ್ ಆಗಿದ್ದು, ಇಂದು ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿಯಲ್ಲಿ ರೌಡ್ಸ್ ಹಾಕಿ ಪರಿಶೀಲನೆ ನಡೆಸಿದ್ರು. ಎಡಿಜಿಪಿ ಅಲೋಕ್ ಕುಮಾರ್ ಅವರು ಮೊನ್ನೆಯಷ್ಟೇ…
ರೋಮ್: 24 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಬರೋಬ್ಬರಿ 20 ವರ್ಷ ಅನಾರೋಗ್ಯದ ಕಾರಣ ಹೇಳಿ ಶಾಲೆಗೆ ರಜೆ ಹಾಕಿದ್ದ ಶಿಕ್ಷಕಿಯನ್ನು ಕೊನೆಗೂ ಶಾಲಾ ಆಡಳಿತ ಮಂಡಳಿ ವಜಾಗೊಳಿಸಿದೆ. ಅಲ್ಲದೆ ಈಕೆಗೆ ‘ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ’ ಎಂಬ ಪಟ್ಟವನ್ನು ನೀಡಿದೆ. ವೆನಿಸ್ ನಗರದ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂಜಿಯಾ ಪಾವೊಲಿನಾ ಡಿ ಲಿಯೊ ಎಂಬ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಲಿಯೋ ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ಪಾಠ ಮಾಡಲು ತರಗತಿಗೆ ಹೋಗಿಲ್ಲ. ಮೊದಲ 10 ವರ್ಷ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು. ಉಳಿದ 14 ವರ್ಷ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ವಿಶೇಷ ಅಂದರೆ ಕರ್ತವ್ಯಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಇಟಲಿಯ ಶಿಕ್ಷಣ ಸಚಿವಾಲಯ ಹೇಳಿದೆ. ಮಕ್ಕಳ ಪರೀಕ್ಷೆ ಸಂದರ್ಭದಲ್ಲಿಯೂ ಶಾಲೆಗೆ ರಜೆ ಹಾಕುತ್ತಿದ್ದ ಲಿಯೋ, ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಅಲ್ಲದೆ ಈ ಬಗ್ಗೆ…
ವಾಷಿಂಗ್ಟನ್: ಆನ್‌ಲೈನ್ ಮಾರಾಟದಲ್ಲಿ ಅತಿ ಸಣ್ಣ ಬ್ಯಾಗ್ ಒಂದು ಅಂದರೆ ಉಪ್ಪಿನ ಕಣಕ್ಕಿಂತ ಸಣ್ಣದಾದ ಹ್ಯಾಂಡ್ ಬ್ಯಾಕ್ 63 ಸಾವಿರ ಡಾಲರ್ ಗೆ (51.6 ಲಕ್ಷ) ಮಾರಾಟವಾಗಿರುವ ಕುರಿತು ವರದಿಯಾಗಿದೆ. ಈ ಹ್ಯಾಂಡ್‌ಬ್ಯಾಗ್ ಗಾತ್ರದಲ್ಲಿ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದ್ದು, ಹಳದಿ ಮತ್ತು ಹಸಿರು ಬಣ್ಣವನ್ನು ಹೊಂದಿದೆ. ಇದೊಂದು ಮೈಕ್ರೋಸ್ಕೋಪಿಕ್ ಬ್ಯಾಗ್ ಆಗಿದ್ದು, ಜನಪ್ರಿಯ ಲೂಯಿ ವಿಟಾನ್ ವಿನ್ಯಾಸವನ್ನು ಆಧರಿಸಿದೆ. ಈ ಹ್ಯಾಂಡ್‌ಬ್ಯಾಗ್ ಅನ್ನು ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಎಮ್‌ಎಸ್‌ಸಿಹೆಚ್‌ಎಫ್ ರಚಿಸಿದ್ದು, ಕೇವಲ 0.003 ಇಂಚುಗಳಿಂತ ಕಡಿಮೆ ಅಗಲವನ್ನು ಹೊಂದಿದೆ. ಈ ತಿಂಗಳ ಆರಂಭದಲ್ಲಿ ಎಮ್‌ಎಸ್‌ಸಿಹೆಚ್‌ಎಫ್ ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಹ್ಯಾಂಡ್‌ಬ್ಯಾಗ್ ಸೂಜಿಯ ಕಣ್ಣಿನ ಮೂಲಕ ಹಾದುಹೋಗುವಷ್ಟು ಕಿರಿದಾಗಿದೆ ಮತ್ತು ಸಮುದ್ರದಲ್ಲಿ ಸಿಗುವ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದೆ ಎಂಬ ಶೀರ್ಷಿಕೆಯ ಜೊತೆಗೆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬ್ಯಾಗ್ ಅನ್ನು 2 ಫೋಟೋಪಾಲಿಮರ್ ಬಳಸಿ ತಯಾರಿಸಲಾಗಿದೆ. ಫೋಟೋಪಾಲಿಮರ್ ಅನ್ನು 3ಡಿ ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್…
ಇಸ್ಲಾಮಾಬಾದ್: ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಹಾಗೂ ಏಷ್ಯನ್ ಅಂಡರ್-21 ಗೇಮ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮಜೀದ್ ಅಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಮಜಿದ್ ಅಲಿ (28) ಪಾಕಿಸ್ತಾನದ ಪಂಜಾಬ್‌ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಾದ ಸಾಮುಂದ್ರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರ ಕಡಿಯುವ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಜೀದ್ ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾಗಿದ್ದರು. ಮಜೀದ್ ತನ್ನ ಹದಿಹರೆಯದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗೆ ಮಾಡಿಕೊಳ್ಳುತ್ತಾನೆ ಅಂತ ನಾವು ನಿರೀಕ್ಷಿಸಿರಲಿಲ್ಲ ಎಂದು ಮಜೀದ್ ಸಹೋದರ ಉಮರ್ ಹೇಳಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ ಎರಡನೇ ಸ್ನೂಕರ್ ಆಟಗಾರ ಮಜೀದ್ ಆಗಿದ್ದಾರೆ. ಕಳೆದ ತಿಂಗಳು ಮತ್ತೊಬ್ಬ ಅಂತಾರಾಷ್ಟ್ರೀಯ ಸ್ನೂಕರ್ ಆಟಗಾರ ಮುಹಮ್ಮದ್ ಬಿಲಾಲ್ ಹೃದಯ ಸ್ತಂಭನದಿಂದ ನಿಧನರಾಗಿದ್ದರು.
ಬೆಂಗಳೂರು: ನನ್ನ ಘನತೆಗೆ ತೇಜೋವಧೆ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಸುಧಾಕರ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿ ಮಾತನಾಡೋದು, ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳ ಸಂದರ್ಶನದಲ್ಲಿ ಮಾನಹಾನಿ ರೀತಿ ಮಾತನಾಡುತ್ತಿದ್ದಾರೆ. ಈ ಮೂಲಕ ಘನತೆಗೆ ತೇಜೋವಧೆ ಮಾಡುತ್ತಾ ಇದ್ದಾರೆ. ಹೀಗಾಗಿ ಪ್ರದೀಪ್ ಈಶ್ವರ್ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ ಎಂದಿದ್ದಾರೆ. ಅಲ್ಲದೆ ತನ್ನ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಲು ಸುಧಾಕರ್ ಮನವಿ ಮಾಡಿದ್ದಾರೆ.
ಬೆಂಗಳೂರು : ಲಂಚ ಪಡೆಯುವ ವ್ಯಕ್ತಿ ಮಾತ್ರವಲ್ಲ ಲಂಚ ಕೊಡುವ ವ್ಯಕ್ತಿಗೂ ಶಿಕ್ಷೆ ಆಗಬೇಕು ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಮಹತ್ವದ ಆದೇಶ ಹೊರಡಿಸಿದೆ. ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ ಕುಮಾರ್ ವಿರುದ್ಧದ ಲಂಚದ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಕುಮಾರ್‌ಗೆ ಲಂಚ ನೀಡಲು ಮುಂದಾದ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಕೋರಿ ಕರ್ನಾಟಕ ಅರೋಮಾ ಕಂಪೆನಿ ಮಾಲೀಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್, ಚೇತನ್ ಮಾರ್ಲೇಚ, ಸಿಬ್ಬಂದಿ ಅಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಲಂಚ ಪಡೆಯುವ ವ್ಯಕ್ತಿಯ ಜೊತೆಜೊತೆಗೇ ಲಂಚ ಕೊಡುವ ವ್ಯಕ್ತಿಯನ್ನೂ ಶಿಕ್ಷೆಗೆ ಒಳಪಡಿಸಬೇಕು ಮತ್ತು ಲಂಚದ…
ಲಕ್ನೋ: ಕಳೆದ 2 ತಿಂಗಳ ಹಿಂದೆ ಹತ್ಯೆಯಾಗಿದ್ದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್‌ನ (Atiq Ahmed) ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಇದೀಗ ಆ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬಡವರಿಗೆ ಹಂಚಿದ್ದಾರೆ. ಪ್ರಯಾಗ್‌ರಾಜ್ (Prayagraj) ಬಳಿಯ ಲುಕರ್ಗಂಜ್ ಬಳಿ ಸ್ವಾಧೀನಪಡಿಸಿಕೊಂಡ 1731 ಚ.ಮೀ ಭೂಮಿಯಲ್ಲಿ ಸಿಎಂ ಆದಿತ್ಯನಾಥ್ 2021ರ ಡಿಸೆಂಬರ್ 26ರಂದು ವಸತಿಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಬಳಿಕ ಭೂಮಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಅಡಿಯಲ್ಲಿ 2 ಬ್ಲಾಕ್‌ಗಳಲ್ಲಿ 76 ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ತಿಂಗಳ ಆರಂಭದಲ್ಲಿ ಲಾಟರಿ ಮೂಲಕ ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಶುಕ್ರವಾರ ಆದಿತ್ಯನಾಥ್ ಅವರು 76 ಫ್ಲಾಟ್‌ಗಳ ಕೀಲಿಗಳನ್ನು ಬಡವರಿಗೆ ಹಂಚಿಕೆ ಮಾಡಿದ್ದಾರೆ ಅಧಿಕಾರಿಗಳ ಪ್ರಕಾರ ಪ್ರತಿ ಫ್ಲಾಟ್‌ಗಳು 41 ಚ.ಮೀ ವಿಸ್ತೀರ್ಣವನ್ನು ಹೊಂದಿದೆ. ಮನೆಗಳಲ್ಲಿ 2 ಕೊಠಡಿಗಳು, ಅಡುಗೆಮನೆ, ಶೌಚಾಲಯ ಒಳಗೊಂಡಿದೆ. ಈ ಫ್ಲಾಟ್‌ಗಳಿಗಾಗಿ 6,000 ಕ್ಕೂ ಹೆಚ್ಚು ಜನರು ಪ್ರಯಾಗ್‌ರಾಜ್…
ನವದೆಹಲಿ: ಮೆಟ್ರೋದಲ್ಲಿ ಓರ್ವ ಪ್ರಯಾಣಿಕ ಎರಡು ಸೀಲ್ಡ್ ಮದ್ಯದ (Metro Liquor) ಬಾಟಲ್‌ಗಳೊಂದಿಗೆ ಪ್ರಯಾಣಿಸಬಹುದು ಎಂದು ದೆಹಲಿ ಮೆಟ್ರೋ ಹೇಳಿದೆ. ಟ್ವಿಟರ್ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೋ ರೈಲು ನಿಗಮ, 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಅನುಮತಿಸಲಾಗಿದೆ ಎಂದು ಹೇಳಿದೆ. ಈವರೆಗೂ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ CISF ಮತ್ತು DMRC ಅಧಿಕಾರಿಗಳನ್ನೊಳಗೊಂಡ ಸಮಿತಿಯು ಈ ಬಗ್ಗೆ ಚರ್ಚಿಸಿ ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶ ನೀಡಿದೆ. ಮೆಟ್ರೋ ಆವರಣದಲ್ಲಿ ಮದ್ಯಪಾನ ನಿಷೇಧ ಮುಂದುವರಿಸಲಾಗಿದೆ ಎಂದು ತಿಳಿಸಿದ್ದು, ಮೆಟ್ರೋ ಪ್ರಯಾಣಿಕರು ಪ್ರಯಾಣಿಸುವಾಗ ಬಾಟಲ್‌ಗಳನ್ನು ವ್ಯವಸ್ಥಿತವಾಗಿ ಕೊಂಡೊಯ್ಯಲು ವಿನಂತಿಸಲಾಗಿದೆ.
ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಟಾಪಟಿ ನಡೆಯುತ್ತಿದ್ದು, ಈ ನಡುವೆ ಮಂಡ್ಯದಲ್ಲಿ ಬಿ.ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವಿನೂತನ ಪ್ರತಿಭಟನೆ ಕೈಗೊಳ್ಳಲಾಗಿದೆ. ಮಂಡ್ಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಪತ್ರ ಬರೆದಿದ್ದಾರೆ. ಮಂಡ್ಯದ ಪೋಸ್ಟ್ ಆಫೀಸ್ ಬಳಿ ಈ ಪ್ರತಿಭಟನೆ ನಡೆದಿದ್ದು, ಅಂಚೆ ಕಚೇರಿ ಮೂಲಕ ನಡ್ಡಾಗೆ ಪತ್ರ ಪೋಸ್ಟ್ ಮಾಡಲಾಗಿದೆ. ಈ ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಮುದ್ರೆ ಒತ್ತಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ.ವಿಜಯೇಂದ್ರರನ್ನ ನೇಮಕ ಮಾಡಿ. ಯಡಿಯೂರಪ್ಪ (B. S Yediyurappa) ಒಂದು ಸೀಟನ್ನ 114 ಸೀಟ್ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದ್ರು. ಆದರೆ ಈಗ ರಾಜ್ಯದ ನಾಯಕರ ಬೇಜವ್ದಾರಿತನದಿಂದ ಬಿಜೆಪಿ ಸೋತಿದೆ.