Author: Prajatv Kannada

ವಿಜಯ್ ಪ್ರಸಾದ್ ನಿರ್ದೇಶನದ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್ ನ ತೋತಾಪುರಿ 2 ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಭಿನ್ನ ಕಾಣ್ಸೆಪ್ಟ್ ನ ಪೋಸ್ಟರ್ ಗಳು ಜನರ ಮನ ಗೆದ್ದಿದ್ದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ತೆರೆಗೆ ಬಂದಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಿತ್ತು. ಅದೇ ಜೋಶ್ ನಲ್ಲಿ ಚಿತ್ರತಂಡ ತೋತಾಪುರಿ 2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಚಿತ್ರ ತೆರೆಗೆ ತರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ವಿಭಿನ್ನ ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ. ಬಾಲ ಆಂಜನೇಯ, ಬಾಲ ಕೃಷ್ಣ, ಬಾಲ ಗಣಪ ಹೀಗೆ ಜೋಡಿಯ ಪೋಸ್ಟರ್ ಗಳನ್ನು ನಿರ್ಮಾಪಕ ಕೆ.ಎ ಸುರೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಪೋಸ್ಟರ್  ಕಾನ್ಸೆಪ್ಟ್ ಗೂ ಮತ್ತು ಸಿನಿಮಾಗೂ ಸಂಬಂಧವಿರಬಹುದು ಎನ್ನುವ ರೀತಿಯಲ್ಲಿ ಕುತೂಹಲ ಮೂಡಿಸುತ್ತಿದೆ. ಕೆ.ಎ.ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ  ಈ ಸಿನಿಮಾ ನಿರ್ಮಾಣಗೊಂಡಿದ್ದು,…

Read More

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಇದೀಗ ಆಸ್ಕರ್ ಜ್ಯೂರಿಯಾಗುವ ಅವಕಾಶವನ್ನು ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಪಡೆದುಕೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ಕೂಡ ಭಾರತೀಯ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದ್ದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ. ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆಸ್ಕರ್‌ ಟೀಮ್‌, RRR ತಂಡದ ಸದಸ್ಯರಿಗೆ ಮತ್ತೊಂದು ಗೌರವ ಲಭಿಸಿದೆ. ತಂಡದ ನಾಲ್ವರಿಗೆ ಆಸ್ಕರ್ ಜ್ಯೂರಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅದರಲ್ಲಿ ರಾಮ್ ಚರಣ್, ಜ್ಯೂ.ಎನ್‌ಟಿಆರ್, ಸಂಗೀತ ನಿರ್ದೇಶಕ ಕೀರವಾಣಿ ಅವರಿಗೆ ಆಸ್ಕರ್ ವಿಜೇತರ…

Read More

ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ರಾಜ್ ಬಿ ಶೆಟ್ಟಿ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕನಾಗಿಯೂ ಖ್ಯಾತಿ ಘಳಿಸಿರುವ ರಾಜ್ ಬಿ ಶೆಟ್ಟಿ ಸದ್ಯ ಟೋಬಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಟೋಬಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಚಿತ್ರರಂಗಕ್ಕೆ ನಟ ಕಮ್ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ ವಿಭಿನ್ನ ಕಥೆಗಳ ಮೂಲಕವೇ ಖ್ಯಾತಿ ಘಳಿಸಿದ್ದಾರೆ. ಮಹಿರಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಸೇರಿದಂತೆ ಭಿನ್ನ , ವಿಭಿನ್ನ ಕಥೆಗಳ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದ ರಾಜ್ ಬಿ ಶೆಟ್ಟಿ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ದೋಬಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದು ರಿಲೀಸ್ ಗೂ ಮುನ್ನವೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತ್ತೀಚಿಗಷ್ಟೇ ಟೋಬಿ ಸಿನಿಮಾದ ಸಣ್ಣ ಝಲಕ್‌ವೊಂದು ರಿವೀಲ್ ಆಗಿತ್ತು. ಇದು…

Read More

ಮಳೆಗಾಲದಲ್ಲಿ ಹೆಚ್ಚಿನವರು ಅನಾರೋಗಕ್ಕೀಡಾಗುತ್ತಾರೆ. ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ ಶೀತ, ನೆಗಡಿ, ಜ್ವರ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಸಾಕಷ್ಟು ಗಮನಹರಿಸಬೇಕಾಗುತ್ತದೆ. ವಿಶೇಷವಾಗಿ ನಾವು ಸೇವಿಸುವ ತರಕಾರಿಗಳತ್ತ ಗಮನನೀಡಬೇಕು ಎನ್ನುತ್ತಾರೆ. ​ಸೊಪ್ಪು ಸೇವಿಸಬೇಡಿ​ ಸಾಮಾನ್ಯವಾಗಿ ಸೊಪ್ಪು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಆದಷ್ಟು ನೀವು ಸೊಪ್ಪು ಸೇವಿಸೋದನ್ನು ಕಡಿಮೆ ಮಾಡಬೇಕು. ಮಳೆಗಾಲದಲ್ಲಿ ಸೊಪ್ಪಿನಲ್ಲಿ ಮಣ್ಣು, ಕ್ರೀಮಿ ಕೀಟಗಳು ಹೆಚ್ಚಾಗಿರುತ್ತದೆ. ಹಾಗಾಗಿ ಈ ಪಾಲಕ್, ಹೂ ಕೋಸು , ಎಲೆಕೋಸು ಇವುಗಳನ್ನೆಲ್ಲಾ ಸೇವಿಸದೇ ಇರುವುದು ಉತ್ತಮ. ಅದರ ಬದಲು ಇನ್ನಿತರ ತರಕಾರಿಗಳನ್ನು ಸೇವಿಸಬಹುದು. ಬದನೆಕಾಯಿ ತಿನ್ನಬೇಡಿ​ ಬದನೆಕಾಯಿಯ ನೇರಳೆ ಬಣ್ಣವು ಬಲ್ಬ್ ಆಲ್ಕಲಾಯ್ಡ್ಸ್ ಎಂಬ ರಾಸಾಯನಿಕಗಳ ವರ್ಗದಿಂದ ಬಂದಿದೆ. ಮಳೆಗಾಲದಲ್ಲಿ, ಅಂತಹ ಬೆಳೆಗಳು ಕೀಟಗಳು ಮತ್ತು ಇತರ ಕೀಟಗಳಿಂದ ರಕ್ಷಿಸಲು ಈ ವಿಷಕಾರಿ ಸಂಯುಕ್ತವನ್ನು ಉತ್ಪಾದಿಸುತ್ತವೆ. ಮಳೆಗಾಲದಲ್ಲಿ ಕೀಟಗಳ ಬಾಧೆ ಹೆಚ್ಚಿರುವಾಗ ಬದನೆಕಾಯಿ ಸೇವನೆಯನ್ನು ಕಡಿಮೆ ಮಾಡಿ. ಇಲ್ಲವಾದಲ್ಲಿ ಆಲ್ಕಲಾಯ್ಡ್‌ಗಳು ಅಲರ್ಜಿಯ ಪ್ರತಿಕ್ರಿಯೆಗಳು, ಚರ್ಮದ ತುರಿಕೆ, ವಾಕರಿಕೆ…

Read More

ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಆರಂಭಿಸಿದ್ದರು.ಇದು ಭಾರತದ ಆರ್ಥಿಕತೆಯ ಮೇಲೆ ಯಶಸ್ವಿ ಪರಿಣಾಮವನ್ನು ಬೀರಿದೆ. ಭಾರತದ ಉತ್ತಮ ನಾಯಕ ಮತ್ತು ರಷ್ಯಾದ ಉತ್ತಮ ಸ್ನೇಹಿತ ನರೇಂದ್ರ ಮೋದಿಯವರಿಂದ ಇದು ಸಾಧ್ಯವಾಗಿದೆ ಎಂದು ಅವರು ಹೊಗಳಿದ್ದಾರೆ. ರಷ್ಯಾದಲ್ಲಿ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಭಾರತದ ಈ ವಿಚಾರವನ್ನು ಅವರು ಚರ್ಚಿಸಿದ್ದಾರೆ. ನವದೆಹಲಿಯಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಇತ್ತೀಚೆಗೆ ಮಾತನಾಡಿ, ರಷ್ಯಾ ಮತ್ತು ಭಾರತದ ಪಾಲುದಾರಿಕೆ ವಿಶ್ವಕ್ಕೆ ಬಲವನ್ನು ತೋರಿಸಿದೆ ಎಂದಿದ್ದಾರೆ.

Read More

ಪ್ಯಾರಿಸ್‌: ವಾಹನ ತಪಾಸಣೆ ವೇಳೆ 17 ವರ್ಷದ ಯುವಕನನ್ನು ಸಂಚಾರ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದನ್ನು ಖಂಡಿಸಿ ಫ್ರಾನ್ಸ್‌ನಲ್ಲಿ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅನೇಕ ಸಾರ್ವಜನಿಕ ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾನ್ಸ್ ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕಲು 40,000 ಪೊಲೀಸರನ್ನು ನಿಯೋಜಿಸಲಾ ಗಿದೆ. ಶಾಂತ ರೀತಿಯಿಂದ ವರ್ತಿಸುವಂತೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಸೇರಿದಂತೆ ಹಲವು ಸಚಿವರು ಮನವಿ ಮಾಡಿದ್ದರು ಜನ ಮಾತ್ರ ಕ್ಯಾರೆ ಎನ್ನದೆ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಬುಧವಾರದಿಂದ ಇಲ್ಲಿಯವರೆಗೆ ಸುಮಾರು 100 ಸಾರ್ವಜನಿಕ ಕಟ್ಟಡಗಳನ್ನು ಹಾನಿಗೊಳಿಸಲಾಗಿದೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಪ್ರತಿ ಭಟನೆ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಅನೇಕ ನಾಗರಿಕರು ಗಾಯಗೊಂಡಿದ್ದಾರೆ. ಮಂಗಳವಾರ 17 ವರ್ಷದ ನಹೇಲ್‌ ಎಂಬ ಯುವಕ ಬಸ್‌ ಲೇನ್‌ನಲ್ಲಿ ಕಾರು ಓಡಿಸುತ್ತಿದ್ದ. ಯುವಕ ಚಿಕ್ಕ ವಯಸ್ಸಿನವ ನಾದ ಕಾರಣ, ಚಾಲನಾ…

Read More

ನವದೆಹಲಿ: ಬ್ಯಾಂಕ್‍ಗಳ ವಿಲೀನದ ನಂತರ ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕ್‍ಗಳಲ್ಲಿ ಹೆಚ್‍ಡಿಎಫ್‍ಸಿ (HDFC) ಬ್ಯಾಂಕ್ (Bank) ಸ್ಥಾನ ಪಡೆದಿದೆ. ಜುಲೈ 1 ರಿಂದ ಈ ವಿಲೀನ ಅನ್ವಯವಾಗಲಿದ್ದು, ಹೊಸ ಹೆಚ್‍ಡಿಎಫ್‍ಸಿ ಬ್ಯಾಂಕ್ ಘಟಕವು ಸುಮಾರು 120 ಮಿಲಿಯನ್ ಗ್ರಾಹಕರನ್ನು ಹೊಂದಿರಲಿದೆ. ಇದು ಜರ್ಮನಿಯ ಜನ ಸಂಖ್ಯೆಗಿಂತ ಹೆಚ್ಚಾಗಿದೆ. ಅಲ್ಲದೇ ಶಾಖೆಯ ನೆಟ್‍ವರ್ಕ್ 8,300 ಕ್ಕಿಂತಲೂ ಹೆಚ್ಚಾಗಲಿದೆ. 1,77,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಇದು ಒಳಗೊಳ್ಳಲಿದೆ ಎಚ್‍ಎಸ್‍ಬಿಸಿ ಹೋಲ್ಡಿಂಗ್ಸ್ ಪಿಎಲ್‍ಸಿ ಮತ್ತು ಸಿಟಿಗ್ರೂಪ್ ಇಂಕ್ ಸೇರಿದಂತೆ ಉಳಿದ ಬ್ಯಾಂಕ್‍ಗಳಿಗಿಂತ ಹೆಚ್‍ಡಿಎಫ್‍ಸಿ ಈಗ ಮುನ್ನಡೆ ಸಾಧಿಸಿದೆ. ಜೂನ್ 22ರ ವೇಳೆಗೆ ಕ್ರಮವಾಗಿ ಸುಮಾರು 62 ಬಿಲಿಯನ್ ಡಾಲರ್ ಮತ್ತು 79 ಬಿಲಿಯನ್ ಡಾಲರ್ ಬಂಡವಾಳದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‍ಗಳನ್ನು ಹೆಚ್‍ಡಿಎಫ್‍ಸಿ ಹಿಂದಿಕ್ಕಿದೆ. ಈ ಬಗ್ಗೆ ಹಣಕಾಸು ಸೇವೆಗಳ ಸಂಶೋಧನೆಯ ಮುಖ್ಯಸ್ಥ ಸುರೇಶ್ ಗಣಪತಿಯವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 18% ರಿಂದ 20% ರಷ್ಟು ಬೆಳವಣಿಗೆಯನ್ನು ನಿರೀಕ್ಷೆಯಲ್ಲಿದ್ದೇವೆ. ಗಳಿಕೆಯ ಬೆಳವಣಿಗೆಯಲ್ಲಿ ಉತ್ತಮ…

Read More

ನವದೆಹಲಿ: 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೊಂದು ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ತನ್ನ ಗೆಳೆಯನ ಜೊತೆ ರಾತ್ರಿ ಸಮಯದಲ್ಲಿ ಪಾರ್ಕ್‍ನಲ್ಲಿ ಕುಳಿತಿದ್ದಳು. ಹೀಗೆ ಕುಳಿತುಕೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮೂವರು ಎಂಟ್ರಿ ಕೊಡುತ್ತಾರೆ. ಅಲ್ಲದೆ ಕುಳಿತಿರುವ ಇಬ್ಬರ ಜೊತೆ ಮಾತಿಗಿಳಿಯುತ್ತಾರೆ. ಮಾತು ಮಾತಿಗೆ ಬೆಳೆಯುತ್ತಾ ಮೂವರು ಹುಡುಗಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ. ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಘಟನೆ ಸಂಬಂಧ ದೆಹಲಿ ಪೊಲೀಸರಿಗೆ (Delhi Police) ಮಾಹಿತಿ ರವಾನೆಯಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಕೃತ್ಯ ಎಸಗಿ ಪರಾರಿಯಾಗಿರುವ ಕಾಮುಕರ ಪತ್ತೆಗೆ ಬಲೆ ಬೀಸಿದ್ದಾ

Read More

ಚೆನ್ನೈ: ಬಹಳ ಅಪರೂಪದ ಎಂಬಂತೆ ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ (Tamil Nadu Governor RN Ravi) ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (Stalin) ಅವರನ್ನು ಸಂಪರ್ಕಿಸದೇ ಸಚಿವ ವಿ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಚಿವ ವಿ ಸೆಂಥಿಲ್ ಬಾಲಾಜಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ ಎಂದು ತಮಿಳುನಾಡು ರಾಜಭವನದ ಪ್ರಕಟಣೆ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿದ್ಯುತ್, ಅಬಕಾರಿ ಖಾತೆಯನ್ನು ಹೊಂದಿದ್ದ ಸೆಂಥಿಲ್‌ ಬಾಲಾಜಿ ಅವರನ್ನು ಬಂಧಿಸಿತ್ತು. ಬಂಧಿಸಿದ ಬಳಿಕ ಸ್ಟಾಲಿನ್‌ ಅವರು ಯಾವುದೇ ಖಾತೆಯನ್ನು ನೀಡದೇ ಸಂಪುಟದಲ್ಲಿ ಉಳಿಸಿದ್ದರು. ಯಾವುದೇ ಖಾತೆಯನ್ನು ನೀಡದೇ ಸಂಪುಟದಲ್ಲಿ ಉಳಿಸಿಕೊಂಡಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಈಗ ಸ್ಟಾಲಿನ್‌ ಅವರನ್ನು ಸಂಪರ್ಕಿಸದೇ ವಜಾಗೊಳಿಸಿದ್ದು ತಮಿಳುನಾಡಿನಲ್ಲಿ…

Read More

ದೆಹಲಿ: ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಮುಕುಲ್ ರೋಹಟಗಿ ಈ ಹಿಂದೆ ಇಡಿ, ಸಿಬಿಐ ಕೇಸ್‌ಗಳಿಗೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಪರವಾಗಿ ವಾದಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ ಬುಧವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಪರಿಷತ್ ಸದಸ್ಯರ ಆಯ್ಕೆ, ನಿಗಮ ಮಂಡಳಿ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ಮುಕುಲ್ ರೋಹಟಗಿ, ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿ ಚರ್ಚಿಸಿದ ಡಿಸಿಎಂ ಡಿಕೆಶಿ ನವದೆಹಲಿಯಲ್ಲಿ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಜಾರಿ ಹಾಗೂ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಿದ್ದಾರೆ.

Read More