ದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದ್ದಾರೆ. ಲೋಕ ಕಲ್ಯಾಣ ಮಾರ್ಗ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಬಗ್ಗೆ ಸುಮಾರು 5 ಗಂಟೆಗಳ ಸುದೀರ್ಘ ಸಭೆ ನಡೆದಿದೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಹೊಸ ಕಾನೂನು ಜಾರಿಗೆ ತರುವುದು ಹೇಗೆ? ಇದಕ್ಕೆ ಬರಬಹುದಾದ ವಿರೋಧಗಳೇನು? ಮತ್ತು ಇದು ಮುಂಬರುವ ಚುನಾವಣೆಗಳಿಗೆ ಎಷ್ಟು ಪ್ರಮಾಣದಲ್ಲಿ ಲಾಭವಾಗಲಿದೆ ಎಂಬುವುದನ್ನು ವಿಮರ್ಶಿಸಲಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಭೋಪಾಲ್‌ನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಂವಾದದಲ್ಲಿ ಮಾತನಾಡಿದ ಅವರು, ಹೊಸ ಕಾನೂನು ಮುಂದಿಟ್ಟುಕೊಂಡು ಕೆಲ ಸಮುದಾಯಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ನಮ್ಮ ವಿರುದ್ಧ ಒಟ್ಟಾಗಿರುವ ಪ್ರತಿ ನಾಯಕರು ಲಕ್ಷ ಕೋಟಿ…
Author: Prajatv Kannada
ದೆಹಲಿ: ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ಐದು ಸಾವಿರ ಕೋಟಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಎಐಬಿಪಿಯಿಂದ ಅನುದಾನ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಇದು ರಾಷ್ಟ್ರೀಯ ಯೋಜನೆಯೆಂದು ಘೋಷಿಸಲು ಮನವಿ ಮಾಡಿದೆ. ಎಐಬಿಪಿಯಲ್ಲಿ 60:40 ಹಣ ನೀಡಲಾಗುತ್ತೆ. ಹೀಗಾಗಿ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ. ಇನ್ನು ಕೆಲವು ಯೋಜನೆಗಳಿಗೆ ಹೆಚ್ಚಿನ ಹಣಕ್ಕೆ ಮನವಿ ಮಾಡಿದ್ದೇನೆ ಎಂದಿದ್ದಾರೆ. ಅಕ್ಕಿ ಸಿಗದಿದ್ರೆ ಹಣ ನೀಡುವಂತೆ ಬಿಜೆಪಿಯವರೇ ಸಲಹೆ ನೀಡಿದ್ದರು. ತಾತ್ಕಾಲಿಕವಾಗಿ ಅಕ್ಕಿ ಬದಲು ನಾವು ಜನರಿಗೆ ಹಣ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲೇ ಅಕ್ಕಿ ಸಂಗ್ರಹ ಮಾಡಲು ಚಿಂತನೆ ಇದೆ ಎಂದು ಹೇಳಿದರು. 5 ಕೆಜಿ ಸೇರಿ 10 ಕೆಜಿ ಅಕ್ಕಿ ಕೊಡುವುದಾಗಿ ಮಾತು ಕೊಟ್ಟಿದ್ದೆವು. ಕೊಟ್ಟ ಮಾತು ಉಳಿಸಿಕೊಳ್ಳಲು ಜನರ ಖಾತೆಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ನವದೆಹಲಿ ;– ಅಕ್ಕಿ ಬದಲು ಹಣ ನೀಡಲು ಘೋಷಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ವ್ಯಾಪಕ ಟೀಕೆ ವ್ಯಕ್ತಪಡಿಸಿದೆ. ಈ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಅಕ್ಕಿ ಸಿಗದಿದ್ರೆ ಹಣ ನೀಡುವಂತೆ ಬಿಜೆಪಿಯವರೇ ಸಲಹೆ ನೀಡಿದ್ದರು. ತಾತ್ಕಾಲಿಕವಾಗಿ ಅಕ್ಕಿ ಬದಲು ನಾವು ಜನರಿಗೆ ಹಣ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲೇ ಅಕ್ಕಿ ಸಂಗ್ರಹ ಮಾಡಲು ಚಿಂತನೆ ಇದೆ ಎಂದು ಹೇಳಿದರು. 5 ಕೆಜಿ ಸೇರಿ 10 ಕೆಜಿ ಅಕ್ಕಿ ಕೊಡುವುದಾಗಿ ಮಾತು ಕೊಟ್ಟಿದ್ದೆವು. ಕೊಟ್ಟ ಮಾತು ಉಳಿಸಿಕೊಳ್ಳಲು ಜನರ ಖಾತೆಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ತಿರುವನಂತಪುರಂ: ಕರ್ನಾಟಕದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಹಿಜಬ್ (Hijab) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳದ 7 ಮಂದಿ ವಿದ್ಯಾರ್ಥಿನಿಯರು ಹಿಜಬ್ ಕುರಿತು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ತಿರುವನಂತಪುರದ ಸರ್ಕಾರಿ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ (MBBS Students) ಯರು ಈ ಪತ್ರವನ್ನು ಬರೆಯುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಧಾರ್ಮಿಕ ನಂಬಿಕೆಯ ಪ್ರಕಾರ ಹಿಜಬ್ ಅನ್ನು ಕಡ್ಡಾಯವಾಗಿ ಧರಿಸಬೇಕಾಗಿದೆ. ಆದರೆ ನಮಗೆ ಆಪರೇಷನ್ ಥಿಯೇಟರ್ (Operation Theatre) ನಲ್ಲಿ ಹಿಜಬ್ ಧರಿಸಿ ಸರ್ಜರಿ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಈ ಸಂಬಂಧ ಪರ್ಯಾಯ ಆಯ್ಕೆ ಕೊಡುವಂತೆ ವಿದ್ಯಾರ್ಥಿನಿಯರು ಪತ್ರದಲ್ಲಿ ತಿಳಿಸಿದ್ದಾರೆ. ನಮ್ಮ ಸಂಪ್ರದಾಯದಲ್ಲಿ ಎಲ್ಲಾ ಸಮಯದಲ್ಲೂ ತಲೆ ಮುಚ್ಚಿಕೊಳ್ಳಬೇಕು. ಆದರೆ ಆಪರೇಷನ್ ಥಿಯೇಟರ್ ಗಳಲ್ಲಿ ತಲೆ ಮುಚ್ಚಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹಿಜಬ್ ಬದಲು ಉದ್ದ ತೋಳು ಇರುವಂತಹ ಜಾಕೆಟ್ ಅಥವಾ ಪರ್ಯಾಯ ಡ್ರೆಸ್ ಧರಿಸಲು ಅವಕಾಶ ನೀಡಬೇಕು ಎಂದು ಕೂಡ ಪ್ರಾಂಶುಪಾಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲ, ಈ ಸಂಬಂಧ…
ಸೂರ್ಯೋದಯ: 05.57 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಏಕಾದಶಿ 02:42 AM ತನಕ ನಂತರ ದ್ವಾದಶಿ ನಕ್ಷತ್ರ: ಇವತ್ತು ವಿಶಾಖ 04:10 PM ತನಕ ನಂತರ ಅನುರಾಧ ಯೋಗ: ಇವತ್ತು ಸಿದ್ದಿ 03:44 AM ತನಕ ನಂತರ ಸಾಧ್ಯ ಕರಣ: ಇವತ್ತು ವಿಷ್ಟಿ 02:42 AM ತನಕ ನಂತರ ಬವ 02:05 PM ತನಕ ನಂತರ ಬಾಲವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 07.29 AM to 09.04 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:45 ವರೆಗೂ ಮೇಷ: ನಿಮ್ಮಿಂದ ಸಹಾಯ ಪಡೆದವರೇ ನಿಮಗೆ ದೂಷಿಸುವರು, ಕೃಷಿ ಪದವಿ ಮತ್ತು ತಂತ್ರಜ್ಞಾನ ಪದವಿ ಪಡೆದವರಿಗೆ ವಿದೇಶಕ್ಕೆ ಹೋಗುವ…
ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಮೃತ ಸನ್ಯಾಸಿ ಮನೆಯಲ್ಲಿ ವಿವಿಧ ಕಡೆಗಳಲ್ಲಿಟ್ಟಿದ್ದ 30 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ. ಹೊಳಲ್ಕೆರೆ ಪಟ್ಟಣದ ಮನೆಯಲ್ಲಿ ವಾರದ ಹಿಂದೆ ಸನ್ಯಾಸಿ ಗಂಗಾಧರ ಶಾಸ್ತ್ರಿ (70) ಮೃತಪಟ್ಟಿದ್ದರು. ಅವರಿಗೆ ಯಾರೂ ಇರಲಿಲ್ಲ. ಒಂಟಿಜೀವನ ನಡೆಸುತ್ತಿದ್ದ, ಇವರು ಶಾಸ್ತ್ರ ಹೇಳುವುದು, ಶುಭ ಕಾರ್ಯ ಮಾಡಿಸುವುದು ಪೂಜೆ ಮಾಡಿಸುವ ಕೆಲಸ ಮಾಡಿಸುತ್ತಿದ್ದರು. ಇವರಿಗೆ 16 ಎಕರೆ ಜಮೀನಿದ್ದು, 4 ಎಕರೆ ಅಡಿಕೆ ತೋಟವಿದೆ.ಗದ್ದೆಯನ್ನು ಹೊಂದಿದ್ದಾರೆ. ಭಕ್ತರಿಂದ ಬಂದ ಕಾಣಿಕೆ ಹಣವೇ ಸುಮಾರು 46 ಸಾವಿರಕ್ಕೂ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಬಂದಿದ್ದು,ಎರಡು ದಿನಗಳ ಹಿಂದೆ ಭಕ್ತರು ಮನೆ ಪರಿಶೀಲಿಸಿದಾಗ ಹಣ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಜುಲೈ 7 ಕ್ಕೆಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರು ನಿರ್ಧರಿಸಿದ್ದಾರೆ. ಗಂಗಾಧರ್ ಶಾಸ್ತ್ರಿ ಜಮೀನಿನಲ್ಲಿ ಅವರ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.
ಮೈಸೂರು: ಮಾಜಿ ಸೇನಾಧಿಕಾರಿ ಕೃಷ್ಣಮೂರ್ತಿ ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿಯವರು ಮೈಸೂರು ನಗರದ ಲಕ್ಷ್ಮೀಪುರಂ ನಿವಾಸದಲ್ಲಿ ಕೊನೆಯುಸಿರೆಳದಿದ್ದಾರೆ. ಇವರು ರಜಪೂತ್ ರೆಜಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, 1971ರ ಯುದ್ದದಲ್ಲಿ ಭಾಗವಹಿಸಿದ್ದರು. ಇದೀಗ ವಿಧಿವಶರಾಗಿದ್ದು, ಲಕ್ಷ್ಮೀಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ: ನಾಳೆಯಿಂದಲೇ ಗೃಹಜ್ಯೋತಿ ಅನ್ವಯ ವಿಚಾರವಾಗಿ ಕುಂದಾನಗರಿ ಬೆಳಗಾವಿಯ ಜನರಲ್ಲಿ ಹಲವಾರು ಗೊಂದಲ ಏರ್ಪಟ್ಟಿದೆ. ಹೌದು ಬಹುತೇಕ ಮನೆ ಮಾಲೀಕರು ಮಾತ್ರ ಅರ್ಜಿ ತುಂಬಿದ್ದು, ಬಾಡಿಗೆದಾರರು ಅರ್ಜಿ ತುಂಬಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ಬಾಡಿಗೆದಾರರು ರೆಂಟ್ ಅಗ್ರಿಮೆಂಟ್ ಕೊಡಬೇಕು ಅಂದಿದ್ರು. ಆದ್ರೆ, ರೆಂಟ್ ಅಗ್ರಿಮೆಂಟ್ ಆಪ್ಷನ್ ಅದರಲ್ಲಿಲ್ಲ, ಜೊತೆಗೆ ಆಧಾರ್ ನಂಬರ್ ಲಿಂಕ್ ಆಗುತ್ತಿಲ್ಲ. ಹೀಗೆ ಹತ್ತು ಹಲವು ಗೊಂದಲಗಳು ಏರ್ಪಟ್ಟಿದೆ.
ಗದಗ: ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ಗದಗಿನ ನೂತನ ಶಾಸಕರು ಮತ್ತು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ ಅವರು ಮಾತನಾಡಿ ಗದಗ ಜಿಲ್ಲೆಯ ಮಾಜಿ ಸೈನಿಕರ ಹಾಗೂ ವೀರನಾರಿಯರ ಮತ್ತು ಅರೆಸೇನಾಪಡೆಗಳ ಯೋಧರ ಸಮಸ್ಯೆಗಳು, ಕುಂದು ಕೊರತೆಗಳ ಹಾಗೂ ಸರ್ಕಾರದ ಸವಲತ್ತುಗಳ ಮತ್ತು ಬೇಡಿಕೆಗಳ ಕುರಿತು ಮಾತನಾಡಿ ಸಚಿವರಿಗೆ ಮನವಿ ಮಾಡಿಕೊಂಡ್ರು. ಜೊತೆಗೆ ಗದಗ ಜಿಲ್ಲೆಯಲ್ಲಿ ಸೈನಿಕ ಭವನ, ಮತ್ತು ಯುದ್ಧ ಸ್ಮಾರಕ, ಹಾಗೂ ಸೈನಿಕ ತರಬೇತಿ ಕೇಂದ್ರದ ನಿರ್ಮಾಣಕ್ಕಾಗಿ ಸರ್ಕಾರದ ಅನುದಾನದಲ್ಲಿ ಉಚಿತವಾಗಿ ಕನಿಷ್ಠ ಒಂದು ಎಕರೆ ಜಮೀನನ್ನು ನೀಡಬೇಕೆಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದೇ ವೇಳೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ…
ಹುಬ್ಬಳ್ಳಿ: ತಾಲ್ಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಹ್ಮದ್ ಜಹೀರ್ ಸೈಯದಲಿ 2022-23ನೇ ಸಾಲಿನ ಇನ್‌ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಮಹ್ಮದ್ ಜಹೀರ್ ವಿಜ್ಞಾನ ಶಿಕ್ಷಕ, ವಿಜ್ಞಾನ ಸಂವಹನಕಾರ ಸಂಜೀವಕುಮಾರ ಭೂಶೆಟ್ಟಿ ಅವರ ಮಾರ್ಗದರ್ಶನದಲ್ಲಿ ‘ಥರ್ಮೋ ಎಲೆಕ್ಟ್ರಿಕ್ ಹೆಲ್ಮೆಟ್ ಕೂಲಿಂಗ್ ಸಿಸ್ಟಮ್’ ಮಾದರಿ ಸಿದ್ಧಪಡಿಸಿದ್ದ. ಈ ಹೆಲ್ಮೆಟ್‌ನಿಂದ ನಗರ ಪ್ರದೇಶಗಳಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ ಬಿಸಿಲು ಮತ್ತು ಹೆಚ್ಚಿನ ಉಷ್ಣತೆ ಇರುವ ಕಡೆ ಕೆಲಸ ಮಾಡುವ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತದೆ. ವಿದ್ಯಾರ್ಥಿಯನ್ನು ಎಸ್‌ಡಿಎಂಸಿ ಸದಸ್ಯರಾದ ಬಸವನಗೌಡ್ರು ಕೆಂಚನಗೌಡ್ರು, ಶ್ರೀಕಾಂತ ಪತ್ತಾರ, ಈಶ್ವರ ನೂಲ್ವಿ, ರವಿರಾಜ ಬಡಿಗೇರ, ಗುರುನಾಥ ನರಗುಂದ, ಮೀನಾಕ್ಷಿ ಚಂದರಗಿ, ರೇಣುಕಾ ತಂಬೂರಿ, ಲಲಿತಾ ನೆಲಗುಡ್ಡದ, ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ನಿರ್ಮಲಾ ಕಟಕಧೊಂಡ ಅಭಿನಂದಿಸಿದ್ದಾರೆ.