Author: Prajatv Kannada

ಬೆಂಗಳೂರು ;– ನಾಯಕರ ವರ್ತನೆಗಳೇ ಪಕ್ಷದ ಸೋಲಿಗೆ ಕಾರಣ ಎಂದು ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ವರ್ತನೆಗಳೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣ. ಪಕ್ಷ ಮತ್ತು ನಾಯಕರು ಸೂಜಿ ದಾರದಂತೆ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷದ ಕಚೇರಿ ಕಟ್ಟಲಾಗಿದೆ. ಆದರೆ, ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಬರೀ ಕತ್ತರಿ ಹಾಕೋದೇ ಕೆಲಸವಾಗಿದೆ. ಯಾರು ಮಾತನಾಡುತ್ತಾರೋ ಅವರನ್ನು ಮುಗಿಸೋದು ಅವರ ಕೆಲಸವಾಗಿದೆ. ನಾನು ಸೋತಮೇಲೆ ಯಡಿಯೂರಪ್ಪ, ವಿಜಯೇಂದ್ರ‌ ನನ್ನನ್ನು ಕರೆದು ಮಾತನಾಡಿದರು. ಆದರೆ ರಾಜ್ಯಾಧ್ಯಕ್ಷರಾದವರು ಒಂದು ಬಾರಿ ಆದರೂ ಮಾತಾಡಿದ್ರಾ..? ಪಾರ್ಟಿ ಆಫೀಸ್​ನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ದರು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸೋಲಿನ ಬಳಿಕ ನಳೀನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು..? ಮೊನ್ನೆ ರಾಜೀನಾಮೆ ಅಂದರು, ಆಮೇಲೆ ಇಲ್ಲ ಅಂದರು ಏನು ನಿಮ್ಮ ಉದ್ದೇಶ..? ನೀವು ನಾಲ್ಕೈದು ಬಾರಿ…

Read More

ಬೆಂಗಳೂರು ;- ಫ್ರೀ ಬಸ್ ನಿಂದ ಟ್ರಿಪ್ ಗೆ ಹೋದ ನನ್ನ ಪತ್ನಿ ಇನ್ನೂ ಬಂದಿಲ್ಲ ಎಂದು ಕುಡುಕ ಪತಿಯೊಬ್ಬ ಸರ್ಕಾರಿ ಬಸ್​ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಹೀಗೆ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ಎಂದು ಮಧ್ಯಪ್ರಿಯ ಪತಿರಾಯ ಅವಾಂತರ ಸೃಷ್ಠಿಸಿದ್ದಾನೆ. ನನ್ನ ಹೆಂಡತಿ ಪ್ರವಾಸಕ್ಕೆ ಹೋದವಳು ಇನ್ನು ವಾಪಸ್ ಬಂದಿಲ್ಲವೆಂದು ಸರ್ಕಾರಿ ಬಸ್​ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹೊಸಕೋಟೆ ಬಸ್ ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ದಗಂಟೆಗೂ ಹೆಚ್ಚು ಕಾಲ ಕಿರಿಕ್ ಮಾಡಿದ್ದಾನೆ. ಈತನ ಅವಾಂತರದಿಂದ ಬಸ್​ನಲ್ಲಿ‌ ಕುಳಿತ ಪ್ರಯಾಣಿಕರ ಪರದಾಡುವಂತಾಯಿತು. ಸಿದ್ದರಾಮಯ್ಯ ಸರಿಯಿಲ್ಲ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕು ಎಂದು…

Read More

ಬೆಂಗಳೂರು ;- ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ, ಭಯವಿತ್ತು ಹೀಗಾಗಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಎಲ್ಲೋ ಒಂದು ಕಡೆ ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಈ ಬಾರಿಯ ಚುನಾವಣೆಯಲ್ಲಿ ಅದೆಲ್ಲವನ್ನೂ ಮನಗಂಡು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಜ್ಯಾತ್ಯತೀತವಾದ ಪಕ್ಚ, ಹಾಗಾಗಿ ಅವರು ನಮ್ಮ ಜೊತೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿ ಜೊತೆಗೆ ಶಾಂತಿ ಕಾಪಾಡಬೇಕಿದೆ ಎಂದು ಸಲಹೆ ನೀಡಿದರು. ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಉತ್ತಮವಾದ ಆಡಳಿತ ನೀಡುವುದು ಶತಸಿದ್ದ. ಒಟ್ಟೊಟ್ಟಿಗೆ ಎಲ್ಲ ಸಮುದಾಯಗಳನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Read More

ಚಿಕ್ಕಬಳ್ಳಾಪುರ: ಪ್ರೇಮವೈಫಲ್ಯದಿಂದ ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಧರ್ಮಾವರಂ ನ ನಿಹಾರಿಕಾ (22) ಮೃತ ಯುವತಿ. ಬೆಂಗಳೂರಿನಲ್ಲಿ B-Tech ಓದುತ್ತಿದ್ದ ನಿಹಾರಿಕಾ ಪಿಜಿಯಲ್ಲಿ ವಾಸವಿದ್ದಳು. ಆಂಧ್ರಪ್ರದೇಶದ ತೆನಾಲಿ ಮೂಲದ ಅಜಯ್‌ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕಾರಣಾಂತರಗಳಿಂದ ಇಬ್ಬರ ಮಧ್ಯೆ ವೈಮನಸ್ಯ ಮೂಡಿ ಬ್ರೇಕಪ್‌ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ತಿಂಗಳ 23 ರಂದು ಕೆಎಸ್ಆರ್‌ಟಿಸಿ ಬಸ್ ಮೂಲಕ ಬೆಂಗಳೂರಿನಿಂದ ಧರ್ಮಾವರಂಗೆ ಬರುತ್ತಿದ್ದ ನಿಹಾರಿಕಾ ಬಸ್ ನಲ್ಲಿ ಬರುವಾಗಲೇ ಪ್ರಿಯಕರನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದಾಳೆ. ನಂತರ ಈ ವಿಚಾರವನ್ನು ಸ್ನೇಹಿತರು ಹಾಗೂ ತನ್ನ ತಂಗಿಗೆ ಕರೆ ಮಾಡಿ ತಿಳಿಸಿದ್ದಾಳೆ. ತಂಗಿಯೊಂದಿಗೆ ಮಾತನಾಡಿದ ನಂತರ ಬಸ್ಸಿನಲ್ಲಿ ಬರುತ್ತಿದ್ದ ನಿಹಾರಿಕಾ ಬಾಗೇಪಲ್ಲಿ ಬಳಿ ಚಿತ್ರಾವತಿ ನದಿಯಲ್ಲಿ ನೀರಿರುವುದನ್ನ ಕಂಡಿದ್ದಾಳೆ. ಬಸ್‌ ನಿಲ್ದಾಣದಲ್ಲಿ ಇಳಿದವಳೇ ಸೀದಾ ಸೇತುವೆ ಮೇಲೆ ಹೋಗಿ ಚಿತ್ರಾವತಿ ನದಿಗೆ ಹಾರಿದ್ದಾಳೆ. ಸಾಯುವುದಕ್ಕೂ ಮುನ್ನ…

Read More

ರಾಮನಗರ: ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆ ಸುಮಾರು ಬುಧವಾರ ಸಂಜೆ ರಾಮನಗರ ತಾಲೂಕಿಗೆ ಬಸವನಪುರ (ಮದುರಾ ಗಾರ್ಮೆಂಟ್ಸ್ ) ಬಳಿ ಜರುಗಿದ್ದು ಈ ಸಂಬಂಧ ಪಟ್ಟಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ… ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕ, ಸೀಟ್ ಬೆಲ್ಟ್ ಹಾಕಿಲ್ಲ ಎಂದು ಟ್ರಾಫಿಕ್ ಠಾಣೆ ಸಿಬ್ಬಂದಿ ಮೋಹನ್ ಎಂಬಾಂತ ಕಾರು ತಡೆದಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎಸ್ಪಿ ಕಚೇರಿಯಲ್ಲಿ ಸಿಸಿ ಟಿವಿ ಯಲ್ಲಿ ಈ ಬಗ್ಗೆ ಪರಿಶೀಲಿಸುತ್ತೆವೆ ಎಂದು ಪೊಲೀಸರು ಸುಮ್ಮನಾಗಿದ್ದಾರೆ. ಬೆಂಗಳೂರು ಕಡೆಗೆ ಪ್ರಯಾಣಿಸಿದ ಚಾಲಕ, ಐದು ನಿಮಿಷಗಳ ಬಳಿಕ ಮತ್ತೆ ಪೊಲೀಸರ ಬಳಿ ಖ್ಯಾತೆ ತೆಗೆದಿದ್ದಾನೆ. ಎಲ್ಲರನ್ನು ಹಿಡಿಯಬೇಕು. ಯಾರನ್ನು ಬಿಡುವಂತಿಲ್ಲ ಎಂದು ಗಲಾಟೆ ನಡೆಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಇದನ್ನು ವಿರೋಧಿಸಿ ಹಲ್ಲೆ ನಡೆಸಿದವನ ಮೇಲೆ ಗಲಾಟೆ ನಡೆಸಿದ್ದಾರೆ. ಬಳಿಕ ಟ್ರಾಫಿಕ್ ಸಿಬ್ಬಂದಿ…

Read More

ಕೊಪ್ಪಳ: ಅಕ್ಕಿ ಬದಲು ಹಣ ನೀಡುವ ನಿರ್ಧಾರಕ್ಕೆ ಬಿಜೆಪಿ(BJP) ಟೀಕೆ ವಿಚಾರವಾಗಿ ಶಾಸಕ ರಾಘವೇಂದ್ರ ಹಿಟ್ನಾಳ್(Raghavendra Hitnal)  ಮಾತನಾಡಿ ಬಿಜೆಪಿಯವರು ಇರುವುದೇ ಟೀಕೆ ಮಾಡುವುದಕ್ಕೆ.  ಶಕ್ತಿ ಯೋಜನೆಯಿಂದ ಈಗಾಗಲೇ ಮಹಿಳೆಯರಿಗೆ ಅನುಕೂಲ ಆಗಿದೆ. ಅನ್ನಭಾಗ್ಯ ಯೋಜನೆಯಿಂದ ಸಹ ಬಡವರಿಗೆ ಉಪಯೋಗ ಆಗುತ್ತೆ. ಟೀಕೆ ಮಾಡುವವರು ಅನ್ನಭಾಗ್ಯ ಫಲಾನುಭವಿಗಳಲ್ಲ. ಎಲ್ಲ ಕಡೆ ಕೇಳಿದರೂ ಅಕ್ಕಿ ಸಿಕ್ಕಿಲ್ಲ, ಹೀಗಾಗಿ ಹಣ ನೀಡುತ್ತಿದ್ದೇವೆ. ಬಡವರು ನಮ್ಮ ಯೋಜನೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ‌. ಮುಂದೆ ಬರುವ ಚುನಾವಣೆಯಲ್ಲೂ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ಬಿಜೆಪಿಯವರು ಏನು ಅವಾಂತರ ಮಾಡಿದ್ದಾರೆ ಅನ್ನೋದು ಗೊತ್ತು. ಕೇಂದ್ರದ ಬೆಲೆ ಏರಿಕೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಶಾಸಕ ರಾಘವೇಂದ್ರ ಹಿಟ್ನಾಳ್ ಕಿಡಿಕಾರಿದ್ದಾರೆ.

Read More

ಮಡಿಕೇರಿ: ಡಿಕೆ ಶಿವಕುಮಾರ್​​-ಸಿದ್ದರಾಮಯ್ಯ (DK Sivakumar-Siddaramaiah)ಸಮ್ಮಿಶ್ರ ಸರ್ಕಾರ ತುಂಬಾ ದಿನ ಉಳಿಯಲ್ಲ. ಸಂಸತ್‌ ಚುನಾವಣೆ ಬಳಿಕ ಕಾಂಗ್ರೆಸ್​​ ಸರ್ಕಾರ ಪತನ ಆಗುತ್ತೆ. ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಲ್ಲಿ ಯಾವ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ಜನರು ಗೊಂದಲದಲ್ಲಿದ್ದಾರೆ. ಪ್ರಧಾನಿ ಮೋದಿಯವರನ್ನು ತೆಗಳುವುದರ ಮೂಲಕ ವಿಷಯಾಂತರ ಮಾಡಲಾಗುತ್ತಿದೆ. ಬೆಲೆ ಏರಿಕೆಗೂ ಪ್ರಧಾನಿ ನರೇಂದ್ರ ಮೋದಿಯನ್ನು ಕೇಳಿ ಅಂತಾರೆ. ಮೋದಿ ಟೊಮ್ಯಾಟೋ ಬೆಲೆ ಏರಿಕೆ‌ ಮಾಡಿದ್ರಾ. ಬೆಲೆ‌ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ. ಸರ್ಕಾರದ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಂದು ಮಡಿಕೇರಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಶೋಕ್(Ashok) ಹೇಳಿದರು.

Read More

ಮೈಸೂರು:  ವ್ಯಾಪಾರದಲ್ಲಿ ನೀಡಿದ್ದ ಸಾಲದ ಹಣ ವಸೂಲಿ ಮಾಡಲು ಉದ್ಯಮಿಯನ್ನ ಹಾಡುಹಗಲೇ ಕಿಡ್ನಾಪ್ ಮಾಡಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿಧ.ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳದಕೇರಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಉದ್ಯಮಿ ಪ್ರಕಾಶ್(35) ಎಂಬುವರನ್ನ ಅಪಹರಿಸಿದ 5 ಖದೀಮರ ಹೆಡೆಮುರಿಯನ್ನ ಖಾಕಿ ಪಡೆ ಕಟ್ಟಿಹಾಕಿದೆ.ಅಪಹರಣಕಾರರ ಕಪಿಮುಷ್ಠಿಯಲ್ಲಿದ್ದ ಉದ್ಯಮಿಯನ್ನ ಲಷ್ಕರ್ ಠಾಣಾ ಪೊಲೀಸರು ರಕ್ಷಿಸಿದ್ದಾರೆ.ರಾಜಾಸ್ಥಾನ್ ಮೂಲದ ದುಗ್ಗರ್ ಸಿಂಗ್,ಬದ್ದಾರಾಮ್ ಸೇರಿದಂತೆ 5 ಅಪಹರಣಕಾರರನ್ನ ಬಂಧಿಸಲಾಗಿದೆ. ಹಳ್ಳದಕೇರಿಯಲ್ಲಿ ಲಲಿತಾ ಕಿಚನ್ ಸಪ್ಲೈಯರ್ಸ್ ಹೆಸರಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕಾಶ್ ಕೆಲವು ದಿನಗಳ ಹಿಂದೆ ದುಗ್ಗರ್ ಸಿಂಗ್ ನಿಂದ ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ 5.6 ಲಕ್ಷ ಮೌಲ್ಯದ ಗುಟ್ಕಾ ಕೊಡಿಸಿದ್ದರು.ತಮಿಳುನಾಡಿನ ವ್ಯಾಪಾರಿ ಹಣ ಹಿಂದಿರುಗಿಸುವಲ್ಲಿ ವಿಳಂಬ ಮಾಡಿದ್ದರು.ಗುಟ್ಕಾ ಹಣಕ್ಕಾಗಿ ದುಗ್ಗರ್ ಸಿಂಗ್ ಒತ್ತಾಯ ಮಾಡುತ್ತಿದ್ದರು.ಇದೇ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು.ಜೂನ್ 26 ರಂದು ಪ್ರಕಾಶ್ ತಮ್ಮ ಅಂಗಡಿಯಲ್ಲಿ ಕುಳಿತಿದ್ದ ವೇಳೆ ದುಗ್ಗರ್ ಸಿಂಗ್,ಬದ್ದಾರಾಮ್ ಸೇರಿದಂತೆ 5 ಮಂದಿ ಅಟ್ಯಾಕ್ ಮಾಡಿ ಪ್ರಕಾಶ್ ರನ್ನ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ.ಪಕ್ಕದ…

Read More

ಮೈಸೂರು- ಬೆಂಗಳೂರು ನಡುವಿನ ಎಕ್ಸ್‌’ಪ್ರೆಸ್‌ ವೇಯಲ್ಲಿ ಅಪಘಾತಗಳು ಸಂಭವಿಸಲು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಹೆದ್ದಾರಿಯನ್ನು ಮೈಸೂರು ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ ಹೈವೇ ಮಾಡಿದ್ದೇವೆ. ಇದು ರೇಸಿಂಗ್ ಟ್ರ್ಯಾಕ್ ಅಲ್ಲ. ರೇಸಿಂಗ್ ಮಾಡಲು ಬೇರೆ ಕಡೆ ವ್ಯವಸ್ಥೆ ಇದೆ. ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ‌ನಿರ್ಮಾಣ ಮಾಡಿದ್ದಾರೆ ಎಂಬುದನ್ನು ಒಪ್ಪುವುದಿಲ್ಲ. ಹಾಗೊಮ್ಮೆ ಅದನ್ನು ತೋರಿಸಿಕೊಟ್ಟರೆ ಇಂಜಿನಿಯರ್ ಗಳನ್ನು ಕರೆಯಿಸಿ ಅವರನ್ನು ಸರಿ ಮಾಡುತ್ತೇನೆ ಎಂದು ಪ್ರತಾಪಸಿಂಹ ಹೆದ್ದಾರಿ ಕುರಿತ ಟೀಕಾಕಾರರಿಗೆ ತಿರುಗೇಟು ನೀಡಿದರು

Read More

ಬೆಂಗಳೂರು ಗ್ರಾಮಾಂತರ: ಆನೇಕಲ್ ತಾಲೂಕಿನ ಗಡಿಭಾಗದ ಇತಿಹಾಸ ಪ್ರಸಿದ್ಧ ಹೊಸೂರು ಬೆಟ್ಟದ ಮೇಲಿರುವ ಚಂದ್ರ ಚೂಡೇಶ್ವರ ದೇವಾಲಯದಲ್ಲಿ  ಮಹಾಕುಂಭಾಭಿಷೇಕ ಮತ್ತು ಗೋಪುರವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಿದರು. ಜೊತೆಗೆ ಹೆಲಿಕ್ಯಾಪ್ಟರ್ ನ ತರಿಸಿ ಹೂವನ್ನು ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು ಇನ್ನು ಗಂಗಾ ಯಮುನಾ ಕಾವೇರಿ ನರ್ಮದಾ ಗೋದಾವರಿ ಸೇರಿದಂತೆ ಹನ್ನೊಂದು ನದಿಗಳ ನೀರನ್ನು ತಂದು ಶುದ್ಧೀಕರಣವನ್ನು ಮಾಡಿದರು. ಆ ನಂತರ ಗೋಪುರಕ್ಕೆ ಮಧುರೈನಿಂದ ಕರೆ ತಂದಿದ್ದ ಆಧ್ಯಾತ್ಮಿಕ ಗುರುಗಳಿಂದ ಗೋಪುರದ ಮೇಲೆ ಕಳಶವನಿಟ್ಟು ಪೂಜೆಯನ್ನು ಸಲ್ಲಿಕೆ ಮಾಡಿದರು ಇನ್ನು 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಾಭಿಷೇಕ ಮತ್ತು ಗೋಪುರ ನಿರ್ಮಾಣ ಕಾರ್ಯಕ್ಕೆ ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದು ದೇವಿ ಕೃಪೆಗೆ ಪಾತ್ರರಾಗಿದ್ದರು. ಇನ್ನು ಹೊಯ್ಸಳ ಮತ್ತು ಚೋಳರ ಕಾಲದಲ್ಲಿ ಚಂದ್ರಚೂಡೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ್ದು ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳ ದೈವ ಎಂದು ಗುರುತಿಸಿಕೊಂಡಿದೆ.. ಇನ್ನು ಬಂದ ಭಕ್ತಾದಿಗಳಿಗೆ ತೀರ್ಥ  ವಿನ್ಯಾಯೋಗ ಮತ್ತು ಪ್ರಸಾದವನ್ನು ವಿತರಣೆ…

Read More