ಸಾಮಾನ್ಯವಾಗಿ ದಂತ ವೈದ್ಯರ ಬಳಿಕ ಹಲ್ಲು ಕೀಳಿಸಲು ಹೋದಕ್ಕೆ ಒಂದೋ ಅಥವಾ ಎರಡು ಹಲ್ಲೋ ಕೀಳುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಒಂದೇ ದಿನ 23 ಹಲ್ಲುಗಳನ್ನು ಕಿತ್ತು 12 ಹೊಸ ಹಲ್ಲುಗಳನ್ನು ಫಿಕ್ಸ್ ಮಾಡಿದ್ದಾನೆ. ಇದರಿಂದ ನೋವು ತಾಳಲಾರದೆ ವ್ಯಕ್ತಿ ಮೃತಪಟ್ಟ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿ ನಡೆದಿದೆ. ಈ ಬಗ್ಗೆ ಯುವತಿ ಆನ್‌ಲೈನ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಯುವತಿಯ ತಂದೆ ಹುವಾಂಗ್ ಅವರು ಆಗಸ್ಟ್ 14 ರಂದು ಯೋಂಗ್‌ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ ಸುದೀರ್ಘ ದಂತ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ದಂತ ಶಸ್ತ್ರಚಿಕಿತ್ಸಕರು “ತಕ್ಷಣದ ಮರುಸ್ಥಾಪನೆ” ವಿಧಾನವನ್ನು ಅನುಸರಿಸಿದರು. ಈ ಕಾರ್ಯವಿಧಾನದ ಭಾಗವಾಗಿ 23 ಹಲ್ಲುಗಳನ್ನು ಹೊರತೆಗೆಯಲಾಯಿತು. ಇದಲ್ಲದೇ 12 ಹೊಸ ಹಲ್ಲುಗಳನ್ನು ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ಶಸ್ತ್ರಚಿಕಿತ್ಸಕ ಐದು ವರ್ಷಗಳ ಸೇವೆಯಲ್ಲಿ ಅನುಭವ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ರೂಟ್ ಕೆನಾಲ್ ಚಿಕಿತ್ಸೆ, ಹೊರತೆಗೆಯುವಿಕೆ ಮತ್ತು ಇತರ ಹಲ್ಲಿನ ಚಿಕಿತ್ಸೆಗಳಲ್ಲಿ ಹೆಚ್ಚು ನುರಿತ. ಆದರೆ ಚಿಕಿತ್ಸೆಯ ನಂತರ,…
Author: Prajatv Kannada
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮೇ 15ರಂದು ಆಯೋಜಿಸಿದ್ದ ರೇವ್ ಪಾರ್ಟಿ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಇತ್ತೀಚೆಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ತೆಲುಗು ನಟಿ ಹೇಮಾ ಡ್ರಗ್ಸ್ ಸೇವನೆ ಮಾಡಿರುವುದು ಕನ್ಪಾರ್ಮ್ ಆಗಿದೆ. ಬೆಂಗಳೂರಿನಲ್ಲಿ ನಡೆದ ಈ ರೇವ್ ಪಾರ್ಟಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಾಸು ಎಂಬಾತ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದು,\ಈ ಪಾರ್ಟಿಗೆ ಅನೇಕ ಸೆಲೆಬ್ರಿಟಿಗಳಿಗೆ ಆತ ಆಹ್ವಾನ ನೀಡಿದ್ದ. ಈ ಈವೆಂಟ್ನಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿ ಆಗಿದ್ದರು. ಆದರೆ ವಿಚಾರಣೆ ವೇಳೆ ನಟಿ ತಾನು ರೇವ್ ಪಾರ್ಟಿಯಲ್ಲಿ ಇರಲೇ ಇಲ್ಲ ಎಂದು ಹೇಳಿದ್ದರು. ಅಲ್ಲದೆ ಘಟನೆ ನಡೆದ ಸಂದರ್ಭದಲ್ಲಿ ನಾನು ನನ್ನ ಮನೆಯಲ್ಲೇ ಇದ್ದೆ ಎಂದಿದ್ದರು. ಆದ್ರೆ ಬಳಿಕ ನಟಿ ತಾನು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರಕರಣದ ತನಿಖೆ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ರನ್ನು ನೋಡಲು ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರು ದೀನಾಕರ್ ತೂಗುದೀಪ್ ಆಗಮಿಸಿದ್ದರು. ಈ ಮಧ್ಯೆ ದರ್ಶನ್ ಗೆ ಅಮ್ಮನನ್ನು ನೋಡಲು ಮನ ಹಂಬಲಿಸಿದೆ. ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಇಂದಿಗೆ 15 ದಿನ. ಪೊಲೀಸರು ಪ್ರಕರಣ ಸಂಬಂಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೇ ವಿಚಾರವಾಗಿ ದರ್ಶನ್ ಜೊತೆ ಮಾತುಕತೆ ನಡೆಸಲು ಅವರ ಕುಟುಂಬ ಬಳ್ಳಾರಿ ಜೈಲಿಗೆ ಆಗಮಿಸಿತ್ತು. ಈ ವೇಳೆ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ವಕೀಲರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಬರೋಬ್ಬರಿ 24 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ. ಸಹೋದರನ ಬಳಿ ಅಮ್ಮನ ಬಗ್ಗೆ ದರ್ಶನ್ ಕೇಳಿದ್ದಾರೆ. ಅಮ್ಮ ಬರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನಿನ್ನೆಯೇ ತಾಯಿ ಮೀನಾ ತೂಗುದೀಪ ಜೈಲಿಗೆ ಬಂದು ಮಾತನಾಡಿಸಿಕೊಂಡು ಹೋಗಬೇಕಿತ್ತು. ಕಾರಣಾಂತರಗಳಿಂದ ನಿನ್ನೆಯ ಜೈಲು ಭೇಟಿ ಕ್ಯಾನ್ಸಲ್ ಆಗಿದೆ. ಇವತ್ತು…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ನಟ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ. ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ. ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.
‘ಬೃಂದಾವನ’ ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಎಫ್‌ಐಆರ್ ದಾಖಲಿಸಿದ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ 3 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಡುತ್ತೇನೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಸುಳ್ಳು ಸುದ್ದಿ. ನಾನು ದೂರು ನೀಡಿರುವುದು ನಮ್ಮ ರೀಲ್ಸ್ ಮತ್ತು ಫೋಟೋಗಳನ್ನು ಗೂಗಲ್‌ನಿಂದ ಡಿಲೀಟ್ ಮಾಡುವುದಕ್ಕೆ. ದಯವಿಟ್ಟು ಫೇಕ್ ನ್ಯೂಸ್ ಹರಡಿಬೇಡಿ ಎಂದು ಯುವತಿ ಬರೆದುಕೊಂಡಿದ್ದಾರೆ. ಯಾರೆಲ್ಲಾ ಹರಿದಾಡುತ್ತಿರುವ ನ್ಯೂಸ್ ನೋಡಿಕೊಂಡು ಕಾಮೆಂಟ್ ಮಾಡುತ್ತಿದ್ದೀರಿ ದಯವಿಟ್ಟು ಮೂರು ದಿನಗಳ ಕಾಯಬೇಕಿದೆ. ಈ ಬಗ್ಗೆ ಕ್ಲ್ಯಾರಿಟಿ ಕೊಡಲು ನಿಮ್ಮ ಮುಂದೆ ಬರುತ್ತೀನಿ ಎಂದು ಯುವತಿ ಹೇಳಿದ್ದಾರೆ. ವರುಣ್ ಆರಾಧ್ಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದ ಕಾರಣ ಯುವತಿ ಉಲ್ಟಾ ಹೊಡೆದ್ರಾ? ಅಸಲಿಗೆ ಎನಾಗಿದೆ ಎಂಬುದನ್ನು ಕಾಯಬೇಕಿದೆ. ಅಂದಹಾಗೆ, ನಟ ವರುಣ್ ಆರಾಧ್ಯ ವಿರುದ್ಧ ಸೆ.7ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್…
ತಮಿಳು ನಟ ಜೀವ ಹಾಗೂ ಅವರ ಪತ್ನಿ ಸುಪ್ರಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಸೇಲಂನಿಂದ ಚೆನ್ನೈಗೆ ತೆರಳುವಾಗ ಕಲ್ಲಕುರಿಚಿಯಲ್ಲಿ ಈ ಅಪಘಾತ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ಹೀರೋ ಜೀವ ಸಿಟ್ಟಾದ ವಿಡಿಯೋ ಕೂಡ ಇದೆ. ಅಷ್ಟಕ್ಕೂ ಆ ಸ್ಥಳದಲ್ಲಿ ನಡೆದಿದ್ದು ಏನು ಗೊತ್ತಾ.. ಜೀವ ಅವರು ಕಾರು ಹೈವೇಲಿ ಸಾಗುತ್ತಿತ್ತು. ಈ ವೇಳೆ ಬೈಕ್ ಅಡ್ಡ ಬಂದಿದೆ. ನಂತರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಭಿಮಾನಿಯೋರ್ವ ಜೀವ ಅವರನ್ನು ಟಚ್ ಮಾಡಲು ಬಂದಿದ್ದಾರೆ. ಇದರಿಂದ ಜೀವ ಅವರು ಸಿಟ್ಟಾಗಿದ್ದಾರೆ. ‘ನನಗೆ ಅಪಘಾತ ಆಗಿದೆ. ನೀವೇನು ಮಾಡುತ್ತಿದ್ದೀರಾ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅದೃಷ್ಟವಶಾತ್ ಜೀವ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಂತರ ಅವರು ಬೇರೆ ಕಾರಿನಲ್ಲಿ ಚೆನ್ನೈ ತೆರಳಿದ್ದಾರೆ. ಅವರು ಆಸ್ಪತ್ರೆಗೆ ತೆರಳಿ…
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನವಾಗಿ 90 ದಿನವಾಗಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧ ಇಂದು ದರ್ಶನ್‌ರನ್ನು ಕೋರ್ಟ್ ವಿಚಾರಣೆ ನಡೆಸಲಿದೆ. ಮಧ್ಯಾಹ್ನ ವಿಚಾರಣೆ ನಡೆಯಲಿದ್ದು, ಪ್ರಕರಣ ಸಂಬಂಧ ದರ್ಶನ್ ಹಾಜರಿರಲಿದ್ದಾರೆ. https://youtu.be/eBEJVeQy14s?si=MLGHDaSO4XHVxxaX ಬಳ್ಳಾರಿ ಜೈಲಿನಿಂದ ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ.ಸೆಂಟ್ರಲ್ ಜೈಲ್‌ನ ಹೈ-ಸೆಕ್ಯುರಿಟಿ ಸೆಲ್ನಿಂದ ದರ್ಶನ್ ಹಾಜರಾಗಲಿದ್ದಾರೆ. ದರ್ಶನ್ಗಾಗಿ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಕೈಯಲ್ಲಿ ಎರಡು ಬ್ಯಾಗ್ ಹಿಡಿದು ಹೈ ಸೆಕ್ಯೂರಿಟಿ ಸೆಲ್ ನಿಂದ ಸಂದರ್ಶಕರ ಕೋಣೆಗೆ ದರ್ಶನ್ ಬಂದಿದ್ದಾರೆ. ವೈಟ್ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ನಟ ದರ್ಶನ್ ಬಂದಿದ್ದಾರೆ.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ನಟ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ. https://youtu.be/_EfF8GGYBOs?si=yuJVx5UlrW_-XJ7J ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ. ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.
ಧಾರವಾಡ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ, ಗಲಭೆ ಇದೀಗ ರಾಜ್ಯ ಮಟ್ಟದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ, ಗಲಭೆ ಕುರಿತ ಒಂದೊಂದೇ ಮಾಹಿತಿ ಹೊರಬೀಳುತ್ತಿವೆ. ಇನ್ನೂ ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. https://youtu.be/CZKVOexNFIk?si=Jn3E2l3N2osmCIUr ಮುಸ್ಲಿಂ ಸಮಾಜದವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಮಸೀದಿ ಒಳಗಡೆ ಕಲ್ಲು ಹೇಗೆ ಬಂತು? ಮಸೀದಿ ಸೀಜ್ ಮಾಡಿ ಬುಲ್ಡೋಜರ್ ಹಚ್ಚಬೇಕು ಎಂದು ಕಿಡಿಕಾರಿದ್ದಾರೆ. ಈ ಪ್ರಕರಣದಲ್ಲಿ ಹಿಂದೂಗಳ ತಪ್ಪಿಲ್ಲ. ಇದು ಮುಸ್ಲಿಂರೇ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಸ್ವಲ್ಪ ಜನ ಹಿಂದೂಗಳನ್ನ ಬಂಧಿಸೋದು ಸ್ವಲ್ಪ ಜನ ಮುಸ್ಲಿಂ ಯುವಕರನ್ನ ಬಂಧಿಸೋದು ಮೊದಲು ಬಿಡಬೇಕು. ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ. ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿರುವ ಇಂತಹ ಹೇಯ ಕೃತ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವ ನಾರಾಯಣಸ್ವಾಮಿ ಕಾರಣ ಎಂದು ಆರೋಪಿಸಿದ್ದಾರೆ.
ಮಂಡ್ಯ: ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ರಾತ್ರಿ ಮೂರ್ತಿಯ ನಿಮಜ್ಜನಾ ಮೆರವಣಿಗೆ ಅನ್ಯಕೋಮಿನ ಪ್ರಾರ್ಥನಾ ಮಂದಿರದ ಬಳಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕೆಲವು ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.. https://youtu.be/FtEu6gnMkW0?si=7-jIUKDmPpeKJbGG ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಲಭೆ ಸಂಬಂಧ 150 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೌದು, ಕರ್ತವ್ಯ ನಿರತ ಪಿಎಸ್‌ಐ B.J.ರವಿ ಅವರ ದೂರು ಆಧರಿಸಿ ಕೇಸ್ ದಾಖಲಾಗಿದೆ. 150 ಮಂದಿಯ ಮೇಲೆ ಎಫ್‌ಐಆರ್ ಗಣಪತಿ ಮೂರ್ತಿ ಮೆರವಣಿಗೆ ವೇಳೆ ಗಲಾಟೆ ನಡೆಸಿದ ಸಂಬಂಧ ಪೊಲೀಸರು 150 ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪೈಕಿ 53 ಮಂದಿ ಆರೋಪಿಗಳ ಹೆಸರು ಮತ್ತು ವಿಳಾಸವನ್ನು ಪತ್ತೆ ಮಾಡಿದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ 109, 115,118, 121, 132, 189, 190 ಸೇರಿದಂತೆ 16 ಸೆಕ್ಷನ್ಗಳಡಿ ಎಫ್‌ಐಆರ್ ದಾಖಲಾಗಿದೆ. 100-150 ಜನರಿಂದ ಅಲ್ಲಾಹು…