ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 46ನೇ ಸಿನಿಮಾದ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್ ಮೂರು ಸಿನಿಮಾಗಳಿಗೆ ಗ್ರೇನ್ ಸಿಗ್ನಲ್ ನೀಡಿದ್ದಾರೆ. ಆ ಪೈಕಿ ‘ದಿ ವಿ ಕ್ರಿಯೇಷನ್ಸ್’ನ ಕಲೈಪುಲಿ ಎಸ್.ತನು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಇದೇ ಚಿತ್ರತಂಡ ಸುದೀಪ್ 46ನೇ ಚಿತ್ರದ ಟೀಸರ್ ಜುಲೈ 2 ರಂದು ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಕಿಚ್ಚ 46’ ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿರೋ ವಿಚಾರ. ಕಳೆದ ಸುಮಾರು ಏಳೆಂಟು ತಿಂಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಅಂತೆ – ಕಂತೆಗಳು ಕೇಳಿಬರುತ್ತಲೇ ಇವೆ. ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನಟ ಸುದೀಪ್ ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಸಂಪಾದಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಇವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಕೊಂಚ…
Author: Prajatv Kannada
ಬೆಂಗಳೂರು: ಹಾಲಿ,ಮಾಜಿ ಡಿಸಿಎಂ ಗಳ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬೀದಿಗೆ ಬಿದ್ದಿದೆ..ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ವೇಳೆಯೇ ಡಿಕೆ ಹಾಗೂ ಅಶ್ವಥ್ ನಾರಾಯಣ್ ನಡುವಿನ ಕೋಲ್ಡ್ ವಾರ್ ಸ್ಪೋಟಗೊಂಡಿದೆ.. ಶ್ರೀಗಳ ಮುಂದೆ ಪರಸ್ಪರ ಕುಶಲೋಪರಿ ಹಂಚಿಕೊಂಡ ನಾಯಕರು ಹೊರಗೆ ಬರುತ್ತಲೇಕಿಡಿಕಾರಿದ್ದಾರೆ..ರಾಮನಗರದ ಹಿಡಿತಕ್ಕೆ ಶುರುವಾದ ಗದ್ದಲ ಸರ್ಕಾರ ಬಿದ್ದು ಹೊಸ ಸರ್ಕಾರ ಬಂದ್ರೂ ಕಡಿಮೆಯಾಗ್ತಿಲ್ಲ..ಈ ರಾಜಕೀಯ ಜಿದ್ದಿನ ಹಿಂದಿದೆ ಹಲವುಲೆಕ್ಕಾಚಾರ..ಏನು ಎತ್ತ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಯಸ್..ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬೀದಿಗೆ ಬಿದ್ದಿದೆ..ರಾಮನಗರದ ಹಿಡಿತಕ್ಕಾಗಿ ಬಿಜೆಪಿಸರ್ಕಾರದ ಅವಧಿಯಲ್ಲಿ ಶುರುವಾದ ಘರ್ಷಣೆ ಸರ್ಕಾರ ಬಿದ್ದು ಹೊಸ ಸರ್ಕಾರ ಬಂದ್ರೂ ನಿಲ್ತಿಲ್ಲ..ಯಾಕಂದ್ರೆ ಬೆಂಗಳೂರಿನಲ್ಲಿಂದು ನಡೆದ ಕೆಂಪೇಗೌಡರ ಜಯಂತಿ ವೇಳೆಯೂ ಅವರ ನಡುವಿನ ಗುದ್ದಾಟ ಜಗಜ್ಜಾಹೀರಾಗಿದೆ..ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು ನಿರ್ಮಲಾನಂದರ ಸಮ್ಮುಖದಲ್ಲಿ ಕುಶಲೋಪರಿಹಂಚಿಕೊಂಡವರು ಹೊರಗೆ ಬರುತ್ತಲೇ ಹಾವು,ಮುಂಗುಸಿ ರೀತಿ ಮಾತಿನ ವಾಕ್ಸಮರ ನಡೆಸಿದ್ದಾರೆ..ಅಶ್ವಥ್ ನಾರಾಯಣ್ ರಾಮನಗರ ಮೂಲದ ಬಗ್ಗೆ ಡಿಕೆಶಿ ಕಾಲೆಳೆದಿದ್ರು..ಇದಕ್ಕೆಪ್ರತಿಯಾಗಿ ಅಶ್ಚಥ್ ನಾರಾಯಣ್…
ಬೆಂಗಳೂರು: ಪ್ರತಿಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಸರ್ಕಾರ SIT ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ.ಕೋವಿಡ್ ಹಗರಣ, PSI ಹಗರಣ,ನೀರಾವರಿ ಕಾಮಗಾರಿ ಹಗರಣ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.ಈ ಮೂಲಕ ಬಿಜೆಪಿಯನ್ನ ಕಟ್ಟಿಹಾಕಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಯೆಸ್,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಒಂದಲ್ಲಾ ಒಂದು ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿಗೆ ಶಾಕ್ ನೀಡುತ್ತಿದೆ.ಪಠ್ಯಪುಸ್ತಕ ಪರಿಷ್ಕರಣೆಗೆ ಕೊಕ್,ಮತಾಂತರ ನಿಷೇಧ ಕಾಯ್ದೆ ವಾಪಸ್ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ತೆಗದುಕೊಂಡಿದ್ದ ನಿರ್ಧಾರಗಳಿಗೆ ಕಾಂಗ್ರೆಸ್ ಸರ್ಕಾರ ಗೇಟ್ ಪಾಸ್ ನೀಡಿತ್ತು.ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸಿಎಂ ಸಿದ್ದರಾಮಯ್ಯ,ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳನ್ನ ತನಿಖೆಗೆ ನೀಡಲು ಮುಂದಾಗಿದೆ.ಬಿಜೆಪಿ ಸರ್ಕಾರದ ಹಗರಣಗಳನ್ನ ತನಿಖೆ ನಡೆಸಲು SIT ರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಇಂದು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಹಾಸನದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿ ಅವಧಿಯಲ್ಲಿ ನಡೆದ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ. ಅವ್ಯವಹಾರಗಳು ನಡೆದಿರುವ ಬಗ್ಗೆ…
ಬೆಂಗಳೂರು: ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ, ಬಿಜೆಪಿ ಸದ್ಯ ಮನೆಯೊಂದು ಮೂರು ಬಾಗಿಲು ಆಗಿದೆ. ಸೋಲಿಗೆ ನೀವೇ ಕಾರಣ,ನೀವೇ ಕಾರಣ ಎಂದು ಪರಸ್ಪರ ಕೆಸರೆರೆಚಾಟದಲ್ಲಿ ಕಮಲ ನಾಯಕರು ತೊಡಗಿದ್ದಾರೆ.ವಿಪಕ್ಷ ನಾಯಕ ಆಯ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ವಿಚಾರವೇ, ಬಿಎಸ್ವೈ ಹಾಗೂ ಬಿಎಲ್ ಸಂತೋಷ್ ಬಣಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ. ಯೆಸ್,ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ ಛಿದ್ರ ಛಿದ್ರವಾಗಿದೆ.ಶಿಸ್ತಿನ ಪಕ್ಷದಲ್ಲಿ ಆಶಿಸ್ತು ಸ್ಪೋಟವಾಗಿದೆ.ಹೀನಾಯ ಸೋಲನ್ನ ಅರಗಿಸಿಕೊಳ್ಳಲ್ಲು ಸಾಧ್ಯವಾಗದ ಕೆಲ ಬಿಜೆಪಿ ನಾಯಕರು,ಪಕ್ಷದ ವಿರುದ್ಧವೇ ಬುಸು ಬುಸು ಎನ್ನುತ್ತಿದ್ದಾರೆ.ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಿದ್ದಾರೆ ಎಂದು ಕೆಲ ನಾಯಕರು ಬಿಎಸ್ವೈ ಹಾಗೂ ಬೊಮ್ಮಾಯಿ ವಿರುದ್ಧವೇ ನೇರವಾಗಿ ಕಿಡಿಕಾರುತ್ತಿದ್ದಾರೆ.ವಲಸಿಗರ ಬಗ್ಗೆಯು ಕೆ.ಎಸ್.ಈಶ್ವರಪ್ಪ ವಾಕ್ ಪ್ರಹಾರ ನಡೆಸಿದ್ದಾರೆ.ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಿತ್ತಾಟ, ಮನೆಯೊಂದು ಮೂರು ಬಾಗಿಲು ಆದಂತೆ ಆಗಿದೆ. ಮುಂದಿನ ಸೋಮವಾರದಿಂದ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿದೆ.ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಿದ್ರೆ ಇಷ್ಟೋತ್ತಿಗೆ ವಿರೋಧ ಪಕ್ಷದ ನಾಯಕನನ್ನ ಬಿಜೆಪಿ ಆಯ್ಕೆ ಮಾಡಬೇಕಿತ್ತು.ಆದ್ರೆ,…
ಇತ್ತೀಚಿನ ಮಕ್ಕಳು ಅನಾರೋಗ್ಯಕರ ಜಂಕ್‌ಫುಡ್‌ಗಳ ಮೊರೆ ಹೋಗುತ್ತಿದ್ದು ಬಹುಬೇಗ ಹಲ್ಲಿನ ಸಮಸ್ಯೆಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರು ಕೂಡ ಯಾವೆಲ್ಲಾ ಆಹಾರಗಳು ಮಕ್ಕಳ ಹಲ್ಲಿನ ಮೇಲೆ ದೀರ್ಘಕಾಲದ ಪರಿಣಾಮ ಬೀರುತ್ತದೆ ಎಂದು ತಿಳಿಯುವುದು ಅತ್ಯವಶ್ಯಕ. ಇಲ್ಲಿದೆ ಸಂಪೂರ್ಣ ಮಾಹಿತಿ…. ಮಗುವಿನ ಆರೋಗ್ಯದ ಬಗ್ಗೆ ಗಮನವಹಿಸಿ. ಸಿಟ್ರಸ್ ಹಣ್ಣುಗಳು ಸಾಮಾನ್ಯವಾಗಿ ಸಿಟ್ರಸ್ ಹಣ್ಣುಗಳು ಎಂದೇ ಕರೆಯುತ್ತಾರೆ. ಇಂತಹ ಹಣ್ಣುಗಳು ಅಥವಾ ಜ್ಯೂಸ್‌ಗಳು ದಂತಕವಚಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಉದಾಹರಣೆಗೆ, ನಿಂಬೆಹಣ್ಣು, ಕಿತ್ತಳೆಹಣ್ಣುಗಳು ಕೂಡ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿತ್ತವೆಯಾದರೂ ಮಿತವಾಗಿ ಬಳಸುವುದಕ್ಕೆ ಸಲಹೆ ನೋಡಲಾಗುತ್ತಿದೆ. ಪಾಪ್‌ಕಾರ್ನ್ ಮಕ್ಕಳ ಸಂಜೆಯ ಸ್ಯಾಕ್ಸ್‌ಗೆ ನೀವು ಪಾಪ್‌ಕಾರ್ನ್ ನೀಡುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ. ಇದು ಗೋಧಿ ಧಾನ್ಯದ ಕಾರ್ನ್‌ನಿಂದ ತಯಾರಿಸ್ಪಟ್ಟಿರುವ ಕಾರಣ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಆದಾಗ್ಯೂ, ಇದು ಹಲ್ಲಿನ ಒಳಪದರದ ಅಡಿಯಲ್ಲಿ ಸಿಲುಕಿಕೊಳ್ಳುವ ಕಾರಣ ಹಲ್ಲು ನೋವಿಗೆ ಕಾರಣವಾಗುತ್ತದೆ. ಅಂದರೆ ಸೋಂಕಿನ ರೂಪದಲ್ಲಿ ಮಕ್ಕಳ ಹಲ್ಲುಗಳಿಗೆ ತೊಂದರೆ ನೀಡುತ್ತದೆ. ಒಂದು ವೇಳೆ ಮಗು ತಿನ್ನಲು ಹಠ ಮಾಡಿದರೆ, ಪಾಪ್‌ಕಾರ್ನ್ ತಿಂದ…
ಬೀಜಿಂಗ್ : ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ಜುಲೈ 4ರಂದು ಶಾಂಘೈ ಸಹಕಾರ ಸಂಘದ ಸಮಾವೇಶ ನಡೆಯಲಿದ್ದು, ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಂದರ ವಿನ್ಯಾಸದ ‘ನವದೆಹಲಿ ಸಭಾಂಗಣ’ವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಉದ್ಘಾಟಿಸಲಾಯಿತು. ಈ ವೇಳೆ ವಿಡಿಯೊ ಮೂಲಕ ಮಾತನಾಡಿದ ಸಚಿವ ಎಸ್.ಜೈಶಂಕರ್, ‘ಎಸ್‌ಸಿಒ ಪ್ರಧಾನ ಕಾರ್ಯದರ್ಶಿ, ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಭಾಂಗಣ ಉದ್ಘಾಟಿಸಿರುವುದು ಸಂತಸ ತಂದಿದೆ. ಇದು ಭಾರತದ ವೈವಿದ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ. ಈ ಸಭಾಂಗಣವು ‘ಪುಟ್ಟ ಭಾರತ’ವಾಗಿರಲಿದೆ’ ಎಂದರು. ‘ಇದು ಸಾಂಪ್ರದಾಯಿಕ ವಿನ್ಯಾಸದ ಜೊತೆ ಆಧುನಿಕ ತಂತ್ರಜ್ಞಾನ, ಸಾಧನಗಳನ್ನೂ ಒಳಗೊಂಡಿದೆ. ‘ವಸುಧೈವ ಕುಟುಂಬಕಂ ‘ ಎಂಬ ಭಾರತದ ಬದ್ಧತೆಗೆ ಸಾಕ್ಷಿಯಾಗಲಿದೆ’ ಎಂದು ತಿಳಿಸಿದರು.
ವಾಷಿಂಗ್ಟನ್: ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಕರ್ತೆಯೊಬ್ಬರು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದ್ದು ಈ ಹಿನ್ನೆಲೆಯಲ್ಲಿ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ವೈಟ್ಹೌಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಬೆಳವಣಿಗೆಗಳು ‘ಸ್ವೀಕಾರಾರ್ಹವಲ್ಲ’ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಕರ್ತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಕಿರುಕುಳ ನೀಡುತ್ತಿರುವುದನ್ನು ಶ್ವೇತಭವನ ಬಲವಾಗಿ ಖಂಡಿಸುತ್ತದೆ. ಇದು ಪ್ರಜಾಪ್ರಭುತ್ವ ನೀತಿಗಳಿಗೆ ವಿರುದ್ಧವಾಗಿದೆ. ನಾವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದು, ಪತ್ರಕರ್ತರಿಗೆ ಕಿರುಕುಳ ನೀಡುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ “ಆ ಕಿರುಕುಳದ ವರದಿಗಳ ಬಗ್ಗೆ ನಮಗೆ ತಿಳಿದಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಕಿರ್ಬಿ ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲೂ ಪತ್ರಕರ್ತರಿಗೆ ಯಾವುದೇ ಕಿರುಕುಳ ಉಂಟಾದರು ನಾವು ಅದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ರಾಜ್ಯದಲ್ಲಿ ಕಳೆದ ವಾರ ಪ್ರದರ್ಶನಗೊಂಡ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್…
ಸೋಮಶೇಖರ್ ಗುರೂಜಿ B.Sc M.935348 8403 ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ನವಮಿ 03:05 AM ತನಕ ನಂತರ ದಶಮಿ ನಕ್ಷತ್ರ: ಇವತ್ತು ಚಿತ್ತ 04:01 PM ತನಕ ನಂತರ ಸ್ವಾತಿ ಯೋಗ: ಇವತ್ತು ಪರಿಘ 06:09 AM ತನಕ ನಂತರ ಶಿವ ಕರಣ: ಇವತ್ತು ಕೌಲವ 03:05 AM ತನಕ ನಂತರ ತೈತಲೆ 03:17 PM ತನಕ ನಂತರ ಗರಜ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 09.16 AM to 10.57 AM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ…
ನವದೆಹಲಿ: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಜೊತೆಗೆ ಚರ್ಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ರಸ್ತೆಗಳ ಕಾಮಗಾರಿ (Road Work) ನೆನೆಗುದಿಗೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದ ಅಧಿಕಾರಿಗಳ ಜೊತೆಗೆ ಜಂಟಿ ಸಭೆ ಮಾಡಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು. 38 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಬೇಕಿದೆ. ಚಿಕ್ಕಮಗಳೂರು- ಬಿಳಿಕೆರೆ ರಸ್ತೆ ಉನ್ನತೀಕರಿಸಬೇಕಿದೆ. ಶಿರಾಡಿ ಘಾಟ್ ಸುರಂಗ ಮಾಡಲು ಕೇಂದ್ರ ಸರ್ಕಾರ ಉತ್ಸುಕತೆ ತೋರಿದೆ. ಬೆಂಗಳೂರಿನಲ್ಲಿ (Bengaluru) ಅಂಡರ್ ಗ್ರೌಂಡ್ 65 ಕಿಲೋ ಮೀಟರ್ ರಸ್ತೆ ಮಾಡಲು ಚಿಂತನೆ ನಡೆದಿದ್ದು, ಮೆಟ್ರೋ ಸುರಂಗದ ರೀತಿ ಅಂಡರ್ ಗ್ರೌಂಡ್ ರಸ್ತೆಯ ಕೆಲಸ ಮಾಡಬೇಕಿದೆ ಎಂದರು. ಹೆಬ್ಬಾಳ ಕೆರೆ ಪಕ್ಕಕ್ಕೆ ಮತ್ತೊಂದು ರಸ್ತೆ ಕೇಳಿದ್ದೇವೆ. ಮೈಸೂರು ರಿಂಗ್ ರೋಡ್‌ಗೆ ಫ್ಲೈಓವರ್…
ಕೋಲ್ಕತಾ: ಪಾಟ್ನಾದಲ್ಲಿ ನಡೆದ ಬೃಹತ್ ವಿರೋಧ ಪಕ್ಷದ ಸಭೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ಸ್ಟ್ (ಸಿಪಿಐಎಂ) ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಮಹಾ ವಿರೋಧ ಪಕ್ಷದ ಮೈತ್ರಿಯನ್ನು ರಚಿಸುವ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ಮತ್ತು ಸಿಪಿಐಎಂನ ಕ್ರಮಗಳು ಪಶ್ಚಿಮಬಂಗಾಳದಲ್ಲಿ ಸ್ಥಾನ ತರಿಸುತ್ತಿರುವಂತಿದೆ ಎಂದು ಹೇಳಿದ್ದಾರೆ. “ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ (ಮಹಾಜೋತ್) ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ-ಎಂ ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ ಸಂಬಂಧವನ್ನು ಮುರಿಯುತ್ತೇನೆ” ಎಂದು ಟಿಎಂಸಿ ಮುಖ್ಯಸ್ಥರು ಹೇಳಿದ್ದಾರೆ. ಸೋಮವಾರ ಕೂಚ್ ಬಿಹಾರ್‌ನಲ್ಲಿ ಪಂಚಾಯತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಈ ಮಾತು ಹೇಳಿದ್ದು, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಬಾರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬಿಜೆಪಿಯೊಂದಿಗೆ ಪರಸ್ಪರ ಒಪ್ಪಂದ ಹೊಂದಿದೆ ಎಂದು ಬ್ಯಾನರ್ಜಿ ಟೀಕಿಸಿದ್ದಾರೆ.