Author: Prajatv Kannada

ಕೋಲ್ಕತ್ತಾ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದೆ. ಪಂಚಾಯತ್‌ ಚುನಾವಣೆ ಪ್ರಚಾರ ಮುಗಿಸಿ ಮಮತಾ ಬ್ಯಾನರ್ಜಿ ಅವರು ಬಾಗ್ದೋಗ್ರಾದಿಂದ ಜಲಪೈಗೂರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ಭಾಗದಲ್ಲಿ ಭಾರೀ ಮಳೆಯ ಹಿನ್ನಲೆಯಲ್ಲಿ ಉತ್ತರ ಬಂಗಾಳದ ಸಲಗರಾ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಿನ್ನೆ ಮಧ್ಯಾಹ್ನ ಎರಡು ಗಂಟೆಗೆ ಈ ಘಟನೆ ನಡೆದಿದೆ. ‘ಹೆಲಿಕಾಪ್ಟರ್‌ ಲ್ಯಾಂಡ್‌ ಆಗಬೇಕಿದ್ದ ಭಾಗದಲ್ಲಿ ಭಾರೀ ಮಳೆಯಾಗುತ್ತಿತ್ತು. ಹೀಗಾಗಿ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು’ ಎಂದು ಮೂಲಗಳು ತಿಳಿಸಿವೆ. ಬ್ಯಾನರ್ಜಿ ಅವರು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಿ, ನಂತರ ಕೋಲ್ಕತ್ತಾಗೆ ಹಿಂತಿರುಗಿದರು. ಜುಲೈ 8 ರಂದು ಮತದಾನ ನಡೆಯಲಿರುವ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ಮುಖ್ಯಮಂತ್ರಿಗಳು ಉತ್ತರ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದರು.

Read More

ಭೋಪಾಲ್;– ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನೀವೇ ನಿರ್ಧರಿಸಿ, ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ ಎಂದು ಪ್ರತಿಪಕ್ಷ ಮೈತ್ರಿಗೆ ಪ್ರಧಾನಿ ಮೋದಿ ಚಾಟಿ ಬೀಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ನೀಡಿದ ‘ಗ್ಯಾರಂಟಿ ಭರವಸೆ’ಗಳು ದೇಶದಲ್ಲಿ ಸದ್ದು ಮಾಡುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿ ಯೋಜನೆಗಳು ಹಾಗೂ ವಿಪಕ್ಷಗಳ ವಿರುದ್ಧ ಪ್ರಹಾರ ನಡೆಸಿದ್ದಾರೆ. ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಮಂಗಳವಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇತ್ತೀಚೆಗೆ ಹೊಸ ಪದವೊಂದು ಹುಟ್ಟಿಕೊಂಡಿದೆ. ಅದೇ ‘ಗ್ಯಾರಂಟಿ’ ಎಂಬ ಪದ. ಆದರೆ ಮೊನ್ನೆ ಪಟನಾದಲ್ಲಿ ಸಭೆ ಮಾಡಿದವರ ಮುಖ ನೋಡಿದೆ. ಅವರೆಲ್ಲ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ಮಾಡಿದವರು. ಹಗರಣದಲ್ಲಿ ಕಾಂಗ್ರೆಸ್ಸೇ ಮುಂಚೂಣಿಯಲ್ಲಿದೆ’ ಎಂದು ವಾಗ್ದಾಳಿ ನಡೆಸಿದರು. ಹೀಗಾಗಿ ಮತ್ತೆ ಜನರು ವಿಪಕ್ಷಗಳ ಬೆನ್ನು ಹತ್ತಿ ಹೋದರೆ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ‘ಗ್ಯಾರಂಟಿ’. ಆದರೆ ಬಿಜೆಪಿ ಮಾತ್ರ ಹಗರಣಕೋರರ ವಿರುದ್ಧ ಕ್ರಮ ಕೈಗೊಳ್ಳುವ…

Read More

ನವದೆಹಲಿ;- ಬದಲಾವಣೆಗಾಗಿ ತೆಲಂಗಾಣ ಹಾತೊರೆಯುತ್ತಿದೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತೆಲಂಗಾಣದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ರಣನೀತಿಯ ಕುರಿತು ರಾಜ್ಯದ ಮುಖಂಡರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ತೆಲಂಗಾಣ ಜನತೆ ರಾಜಕೀಯ ಬದಲಾವಣೆಗಾಗಿ ಹಾತೊರೆಯುತ್ತಿದ್ದು, ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ ತೆಲಂಗಾಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಯಾವುದೇ ಸವಾಲುಗಳನ್ನು ಸ್ವೀಕರಿಸಲು ಪಕ್ಷ ಸಿದ್ಧವಾಗಿದೆ. ನಾವೆಲ್ಲರೂ ಸೇರಿ ತೆಲಂಗಾಣಕ್ಕೆ ಉಜ್ವಲ ಭವಿಷ್ಯವನ್ನು ನೀಡಲಿದ್ದೇವೆ ಎಂದು ಖರ್ಗೆ ಭರವಸೆ ನೀಡಿದರು. ಕೆಸಿಆರ್‌ನ ಊಳಿಗಮಾನ್ಯ ರಾಜಕಾರಣಕ್ಕೆ ಮತ್ತು ಬಿಜೆಪಿ ಹಾಗೂ ಬಿಆರ್‌ಎಸ್‌ನ ಅಪವಿತ್ರ ಮೈತ್ರಿಗೆ ತೆಲಂಗಾಣ ಕೊನೆ ಹಾಡಲಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮತ್ತೆ ಅಕ್ಕಿ ಹಗ್ಗ ಜಗ್ಗಾಟ ಮುಂದುವರಿದಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ವಿಪಕ್ಷ ಬಿಜೆಪಿ ಕೌಂಟರ್ ಕೊಡಲು ಮುಂದಾಗಿದ್ದು ರಾಜ್ಯ ಸರ್ಕಾರದ ಆರೋಪಕ್ಕೆ ಒಂದು ವಾರದ ಕ್ಯಾಂಪೇನ್ ಕೈಗತ್ತಿಕೊಂಡಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿರುವ ವಿಚಾರದ ಬಗ್ಗೆ ಮನೆ ಮನೆ ಸಂಪರ್ಕ ಅಭಿಯಾನ ಮಾಡುತ್ತಿದೆ. ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿರುವ ಬಗ್ಗೆ ಹೇಳಲು ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಇಂದಿನಿಂದ (ಜೂನ್ 28) ಈ ಅಭಿಯಾನ ಆರಂಭವಾಗಲಿದೆ.

Read More

ಬೆಂಗಳೂರು: ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆ ಸೇರಿದಂತೆ ನಾಲ್ಕು ಯೋಜನೆಗಳ ಜಾರಿ ಸಂಬಂಧ ಗಂಭೀರ ಸಮಾಲೋಚನೆ ನಡೆಸಲಾಗುತ್ತೆ. ಕೇಂದ್ರ ಸರ್ಕಾರದಿಂದ ಅಕ್ಕಿಕಡಿತದಿಂದ ರಾಜ್ಯ ಸರ್ಕಾರ ತುಂಬಾ ಕನ್ಫ್ಯೂಸ್ ಇರುವುದರಿಂದ ಇದಕ್ಕೆ ಪರ್ಯಾಯ ಮಾರ್ಗಗಳೇನು ಮುಂದಿನ ಯೋಜನೆಗಳೇನು ಎನ್ನುವುದರ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ

Read More

ಶಿವಮೊಗ್ಗ: ಹೊಂದಾಣಿಕೆ ರಾಜಕಾರಣ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಹಿರಂಗ ಹೇಳಿಕೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬೇಸರ ಹೊರ ಹಾಕಿದ್ದಾರೆ. ನಾಯಕರು ಕಾರ್ಯಕರ್ತರಿಗೆ ನೋವು ಆಗದಂತೆ ನೋಡಿಕೊಳ್ಳಬೇಕು. ವಿಧಾನಸಭೆ ಚುನಾವಣೆ ಫಲಿತಾಂಶ ಕೆಟ್ಟ ಕನಸು. ಮುಂದಿನ ಚುನಾವಣೆ ಗೆಲುವಿನತ್ತ ನಾವೆಲ್ಲರೂ ಗಮನಹರಿಸಬೇಕು ಎಂದರು. ಕಾಂಗ್ರೆಸ್‌ ನಲ್ಲಿ ಇದ್ದವರನ್ನು ನಾವು ನಮ್ಮ ಪಕ್ಷಕ್ಕೆ ಕರೆದುಕೊಂಡು ಬಂದು ಈಗ ಅನುಭವಿಸುತ್ತಿದ್ದೇವೆ. ಬಿಜೆಪಿಯಲ್ಲಿ ಅಶಿಸ್ತು ವಾತಾವರಣ ನಿರ್ಮಾಣವಾಗಿದೆ. ಸಮಯ ಸಂದರ್ಭ ನೋಡಿಕೊಂಡು ಅವರ ಬಾಲ ಕಟ್ ಮಾಡಲಾಗುವುದು. ವಲಸಿಗರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲೂ ಪಕ್ಷದಲ್ಲಿ ಅಶಿಸ್ತು ಬರಲು ವಲಸಿಗರನ್ನೇ ಹೊಣೆಯನ್ನಾಗಿಸಿದ್ದಾರೆ. ಜೊತೆಗೆ ಸಮಯ ಸಂದರ್ಭ ನೋಡಿಕೊಂಡು ವಲಸಿಗರ ಬಾಲ ಕಟ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈಶ್ವರಪ್ಪ ಅವರ ಈ ಹೇಳಿಕೆ ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಾರ್ವಜನಿಕರು ಸೇರಿ ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ಬೇಗ ಮುಗಿಸಿ ಕೊಡಿ ಎಂದು ಶಾಸಕ ಲಕ್ಷ್ಮಣ ಸವದಿ ಅವರಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಕಾಮಗಾರಿ ಮುಗಿಸಲು ಎಷ್ಟು ವರ್ಷ ಬೇಕು ನಿಮಗೆ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು, ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ರವಿ ಗಡಾದ. ರವಿ ಜಮಖಂಡಿ. ಪ್ರವೀಣ ಹಜಾರೆ. ಮಾಹಾದೇವ ದುಪದಾಳ. ಸಂಜಯ ತೇಲಿ. ಆನಂದ ಜುಗಳಿ. ಶ್ರೀಶೈಲ ದಲಾಲ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಯಾದಗಿರಿ: ಯಾದಗಿರಿಯ ಗುರುಮಠಕಲ್ ತಾಲೂಕಿನ ಹಿಮ್ಲಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಬೇಧಿಯಿಂದ 54 ಜನ ಅಸ್ವಸ್ಥಗೊಂಡಿದ್ದಾರೆ. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.

Read More

ಚಾಮರಾಜನಗರ: ಹೊಲದ ಗುಡಿಸಲಿನಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು‌ ಕಂಚಗಳ್ಳಿಯಲ್ಲಿ ಜೋಳದ ಫಸಲು ಕಾವಲು ಕಾಯುತ್ತಿದ್ದ ರೈತ ನಂಜಪ್ಪ ರಗ್ಗು ಹೊದ್ದು ಮಲಗಿದ್ದ ವೇಳೆ ಚಿರತೆ ದಾಳಿ ಮಾಡಿದೆ. ನಂಜಪ್ಪನ ತೋಳು ಪರಚಿದೆ. ತಕ್ಷಣ ರಗ್ಗು ಬೀಸಾಡುತ್ತಿದ್ದಂತೆ ಓಡಿ ಹೋಗಿದೆ. ರೈತ ನಂಜಪ್ಪನಿಗೆ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Read More

ಬೆಂಗಳೂರು: ಎರಡನೇ ಬಾರಿಗೆ ಸಿಎಂ ಆಗಿದ್ದಕ್ಕೆ ಪತ್ರ ಬರೆದು ಅಭಿನಂದಿಸಿದ್ದ 8 ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಸಿದ್ದರಾಮಯ್ಯ ಮರಳಿ ಪತ್ರ ಬರೆದು ಉತ್ತರಿಸಿದ್ದಾರೆ. ಅನ್ನಭಾಗ್ಯ, ಶೂ ಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯದಂತ ಅನೇಕ ಕಾರ್ಯಕ್ರಮ ನೀಡಿದ್ದೀರಿ. ನೀವು ಬಡವರು, ದೀನ ದಲಿತರ ಪರವಾಗಿರೋ ನಾಯಕ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದರು. ಇದಕ್ಕೆ ಸಿಎಂ ಕೊಪ್ಪಳ ವಿದ್ಯಾರ್ಥಿನಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. ಕೊಪ್ಪಳ ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ ಶ್ರೆಯಾಂಕ ವಿ ಮೆಣಸಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆ ಇತ್ತೀಚೆಗೆ ಅಭಿನಂದನಾ ಪತ್ರ ಬರೆದಿದ್ದಳು. ಪತ್ರದ ಮುಖೇನ ವಿದ್ಯಾರ್ಥಿನಿ ಸಿದ್ದರಾಮಯ್ಯ 2013ರ ಅವಧಿಯಲ್ಲಿ ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳಾದ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಪ್ರಸ್ತಾಪಿಸಿ, ಇದೇ ರೀತಿಯಾಗಿ ಈ ಬಾರಿಯೂ ಉತ್ತಮ ಆಡಳಿತ ನೀವು ನೀಡಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಳು. ಸಾಮಾಜಿಕ ಕಳಕಳಿಯೊಂದಿಗೆ…

Read More