ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ ನ ಮಹಾ ಎಡವಟ್ಟು ಬಟಾ ಬಯಲಾಗಿದೆ. ಹಲ್ಲು ನೋವು ಎಂದು ಕ್ಲಿನಿಕ್ ಹೋಗಿದ್ದ ವ್ಯಕ್ತಿಯ ಪ್ರಾಣಕ್ಕೆ ಈತ ಸಂಚಕಾರ ತಂದಿಟ್ಟು ಬಿಟ್ಟಿದ್ದಾನೆ. ಸಣ್ಣ ನೋವಿಗೆ ವೈದ್ಯರ ಬಳಿ ಹೋದವನಿಗೆ ಹತ್ತಾರು ಕಡೆ ತಿರುಗುವಂತೆ ಡುಪ್ಲಿಕೇಟ್ ಡೆಂಟಲ್ ಡಾಕ್ಟರ್ ಮಾಡಿದ್ದು, ರೋಗಿಯ ಪರಿಸ್ಥಿತಿ ಹೇಳತ್ತೀರದ್ದಾಗಿದೆ. ಹೌದು, ಅರುಣ್ ಕುಮಾರ್ ಹೆಸರಿನ ಡೆಂಟಲ್ ಕ್ಲಿನಿಕ್ ಡಾಕ್ಟರ್ ಈ ಎಡವಟ್ಟು ಎಸಗಿರುವ ಆರೋಪ ಕೇಳಿ ಬಂದಿದೆ. ವಿಜಯ ನಗರದ ಮೂಡಲಪಾಳ್ಯದಲ್ಲಿರುವ ಈ ಕ್ಲಿನಿಕ್ ಗೆ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ನಾಗೇಂದ್ರ ಎಂಬ ವ್ಯಕ್ತಿ ಹೋಗಿದ್ದ. ಈ ವೇಳೆ ನಕಲಿ ವೈದ್ಯ ಹಲ್ಲು ತಗೆಯಲು ಸಜೆಸ್ಟ್ ಮಾಡಿದ್ದಾರೆ. ಹಲ್ಲು ತಗೆಯದಾ ಹೊರತು ಹಲ್ಲಿನ ನೋವು ಸರಿ ಹೋಗೋದಿಲ್ಲ ಎಂದು ನಾಗೇಂದ್ರ ಗೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಹಲ್ಲು ನೋವಿಗೆ ಒಳಗಾಗಿದ್ದ ವ್ಯಕ್ತಿ ನಾಗೇಂದ್ರ ಹಲ್ಲು ತಗೆಯಲು ಒಪ್ಪಿಕೊಂಡಿದ್ದಾರೆ. ಕೇವಲ ಹತ್ತು ನಿಮಿಷದಲ್ಲಿ ಹಲ್ಲು…
Author: Prajatv Kannada
ಬೆಂಗಳೂರು: ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮ ಅಂಗವಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಜ್ಯೋತಿ ಯಾತ್ರೆಗೆ ಕೆಂಪಾಂಬುಧಿ ಗಡಿ ಗೋಪುರದಿಂದ ಚಾಲನೆ ನೀಡಿದರು. ಕೆಂಪೇಗೌಡನಗರದ ಕೆಂಪಾಂಬುಧಿ ಕೆರೆ, ಹಲಸೂರು, ಲಾಲ್‌ಬಾಗ್, ಮೇಖ್ರಿ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿಬಂದ ದಿವ್ಯ ಜ್ಯೋತಿಗಳು ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸೇರಿದವು ಹಾಗೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಅವರ ಸಾರಥ್ಯದಲ್ಲಿ ಕೆಂಪಾಂಬುಧಿ ಕೆರೆ ಬಳಿಯ ಗೋಪುರದಿಂದ ಜ್ಯೋತಿಯನ್ನು ಹೊತ್ತು ತರಲಾಯಿತು. ನಗರದ ನಾಲ್ಕು ದಿಕ್ಕಿನಲ್ಲಿರುವ ಗಡಿ ಗೋಪುರಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕೃತಗೊಳಿಸಲಾಗಿತ್ತು. ಈವರೆಗೆ ಬಿಬಿಎಂಪಿಯಿಂದಷ್ಟೇ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸರಕಾರದಿಂದ ಆಚರಣೆ ಮಾಡಲಾಯಿತು. ಬಸವನಗುಡಿ ಶಾಸಕರಾದ ಶ್ರೀ.ರವಿ ಸುಬ್ರಮಣ್ಯ ಅವರು ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯ ಭೀಕರ ಹತ್ಯೆ ನಡೆದಿದೆ. ದುಷ್ಕರ್ಮಿಗಳ ಗುಂಪೊಂದು ಮಹಿಳೆಯೊಬ್ಬರ ಕತ್ತು ಕೊಯ್ದು ಭೀಕರವಾಗಿ ಕೊಂದು ಹಾಕಿರುವ ಘಟನೆ ಜರುಗಿದೆ. ರಾಜಧಾನಿ ಬೆಂಗಳೂರಿನ ವಿವೇಕ್ ನಗರ ಈಸ್ಟ್ ರೋಡ್ ಬಳಿ ಘಟನೆ ನಡೆದಿದೆ. 45 ವರ್ಷ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಹಿಳೆಯ ವಿವರಗಳನ್ನು ಕಲೆ ಹಾಕಲಾಗುತ್ತಿದ್ದು, ಪರಿಚಿತರೇ ಕೊಂದು ಹಾಕಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಒಂದಲ್ಲ ಒಂದು ರೀತಿ ಮಿತಿ ಮೀರುತ್ತಿದೆ. ಅದರ ಭಾಗವಾಗಿ ಗಾಯತ್ರಿನಗರ ಮೊದಲನೇ ಮುಖ್ಯ ರಸ್ತೆಯಲ್ಲಿ ಮಾದಕ ದ್ರವ್ಯದ ನಶೆಯಲ್ಲಿ ನಿಂತಿದ್ದ ಕಾರುಗಳನ್ನು ಪುಂಡರು ಜಖಂಗೊಳಿಸಿದ್ದಾರೆ. ಹೀಗಾಗಿ ಕಾರುಗಳನ್ನು ಜಖಂಗೊಳಿಸಿದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ತದುಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ರಾತ್ರಿಯಾದರೆ ಜಾಲಿ ರೈಡ್‌ಗಾಗಿ ಹೊರಬೀಳುವ ಈ ನಿಶಾಚರಿ ದುಷ್ಕರ್ಮಿಗಳು ನಿವಾಸಿಗಳ ನೆಮ್ಮದಿಗೆ ಕೊಳ್ಳಿ ಇಟ್ಟು ಹೈರಾಣಾಗಿಸುತ್ತಿರುವುದಂತೂ ಸತ್ಯ. ಹಾಗೇ ಚಂದ್ರು ನಾಯ್ಡು@ ಸೇಟು ಎಂಬ ಕಾರು ಚಾಲಕ ತನ್ನಿಬ್ಬರು ಸ್ನೇಹಿತರ ಜತೆ ಸೇರಿ ಹೀಗೆ ಅವಾಂತರ ಸೃಷ್ಟಿಸಿದ್ದಾನೆ. ಹಿಂದೆ ಇದೇ ಏರಿಯಾದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಶಿಫ್ಟ್ ಆಗಿದ್ದ. ಇಂದು ತನ್ನ ಗೆಳೆಯರ ಜೊತೆಗೂಡಿ ಮದ್ಯ ಸೇವಿಸಿ ಐ20 ಕಾರು ಚಲಾಯಿಸಿಕೊಂಡು ಬಂದು ಏರಿಯಾದಲ್ಲಿದ್ದ 12ಕ್ಕೂ ಅಧಿಕ ಕಾರ್, 10ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದಿದ್ದಾನೆ. ರಸ್ತೆ ಬದಿ ನಿಂತಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ಇವರು ಜಖಂ ಮಾಡಿದ್ದಾರೆ.…
ಬೆಂಗಳೂರು ;- ಅಶೋಕ್ ನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶ್ರೀಕಾಂತ್ ಎಸ್ ತೋಟಗಿ ಅವರನ್ನು ಅಮಾನತು ಮಾಡಿ ಬೆಂಗಳೂರಿನ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಪ್ರೈಡ್ ಹೋಟೆಲ್ ನಲ್ಲಿ ನಿಯಮ ಮೀರಿ ಲೇಟ್ ನೈಟ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಿನಾಂಕ 10 ರಂದು ಸಿಸಿಬಿ ಪೊಲೀಸರು ದಾಳಿ ಮಾಡಿದರು. ಬಳಿಕ ಘಟನೆ ಸಂಬಂಧ ವರದಿ ಸಲ್ಲಿಸಿದರು. ಇಷ್ಟು ದೊಡ್ಡ ಪಾರ್ಟಿ ನಡೆಯುತ್ತಿದ್ದರೂ ಇನ್ಸಪೆಕ್ಟರ್ ನಿರ್ಲಕ್ಷ ವಹಿಸಿದ್ದ ಹಿನ್ನೆಲೆ ಅಶೋಕ್ ನಗರ ಪೊಲೀಸ್ ಇನ್ಸಪೆಕ್ಟರ್ ಅಮಾನತು ಶ್ರೀಕಾಂತ್ ಎಸ್ ತೋಟಗಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ;- ನಗರದ ಬಾರ್ ಒಂದರಲ್ಲಿ ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೇದಾಂತ್ ದುಗರ್ ನೇಪಾಳದ ಕಠ್ಮಂಡುವಿನಿಂದ ಬೆಂಗಳೂರಿಗೆ ದುಗರ್ ಆಗಮಿಸುತ್ತಿದ್ದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಆರ್ಟಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಮೇ 9 ರಂದು ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ್ದ. ಈ ಕುರಿತು ಆರ್ಟಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ವೇದಾಂತ್ ಮೇ 11ರಂದು ಬೆಂಗಳೂರಿನಿಂದ ವಿಮಾನದ ಮೂಲಕ ಬಾಂಬೆಗೆ ಹೋಗಿದ್ದ. ನಂತರ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿ ಅಲ್ಲಿಂದ ಖಾಸಗಿ ಜೆಟ್ ಮೂಲಕ ನೇಪಾಳಕ್ಕೆ ಏಸ್ಕೇಪ್ ಆಗಿದ್ದನು. ಆರೋಪಿಯನ್ನು ಹುಡುಕಿಕೊಂಡು ಮುಂಬೈಗೆ ಹೋಗಿದ್ದ ಆರ್ಟಿ ನಗರ ಪೊಲೀಸರು ವಾಪಸ್ ಆಗಿದ್ದರು.…
ಗದಗ: ಸರಕಾರಿ ಹೈಸ್ಕೂಲ್’ಗೆ ಕಟ್ಟಡ ರೆಡಿಯಿದ್ರೂ ಉದ್ಘಾಟನೆ ಭಾಗ್ಯ ಸಿಗ್ತಿಲ್ಲ ಹೌದು ಗದಗ ಜಿಲ್ಲೆ ನಾಗಾವಿ ಗ್ರಾಮದಲ್ಲಿರುವ ಸರ್ಕಾರಿ ಹೈಸ್ಕೂಲ್ ಪರಿಸ್ಥಿತಿ ಈ ರೀತಿಯಾಗಿದೆ. ಹೈಸ್ಕೂಲ್’ಗಾಗಿ ಹೊಸ ಕಟ್ಟಡ ನಿರ್ಮಿಸಿದ್ರೂ ಪ್ರೈಮರಿ ಸ್ಕೂಲ್’ನಿಂದ ಶೀಫ್ಟ್ ಆಗದಿರುವ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆ ನಿರ್ಮಾಣಕ್ಕೆ ಭೂಮಿದಾನ ಕೊಟ್ಟವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. Video Player 00:00 01:06 ಊರಿನವರಿಗೆ ಅನುಕೂಲವಾಗ್ಲಿ ಅಂತಾ ಭೂದಾನ ಮಾಡಿದ್ವಿ ಆದ್ರೆ ಪ್ರಯೋಜನವಾಗ್ತಿಲ್ಲ ಅಂತಾ ಭೂದಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾವಿ ಗ್ರಾಮದ ಚಿಂಚಲಿ ಕುಟುಂಬಸ್ಥರಿಂದ ದಿವಂಗತ ಶ್ರೀ ವೀರುಪಾಕ್ಷಪ್ಪ ಚಿಂಚಲಿ ಹೆಸರಲ್ಲಿ ಶಾಲೆಗೆ ಭೂದಾನ ಮಾಡಲಾಗಿತ್ತು. ಈಗ ಅದೇ ಜಾಗದಲ್ಲಿ ಸುಸಜ್ಜಿತ ಕಟ್ಟಡ ರೆಡಿಯಿದೆ. ಆದ್ರೂ ಮಕ್ಕಳಿಗೆ ಅನುಕೂಲವಾಗ್ತಿಲ್ಲ ಅನ್ನೋದೆ ದೊಡ್ಡ ಸಮಸ್ಯೆಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಉದ್ಘಾಟನೆಗೆ ಸಚಿವರ ದಿನಾಂಕಕ್ಕಾಗಿ ಕಾಯ್ತಿದೀವಿ ಅಂತಾರೆ. Video Player 00:00 01:06 ಇನ್ನೂ ಸ್ಥಳೀಯವಾಗಿ ಸಮಸ್ಯೆ ಇದೆ ಅಂತಾರೆ. ಇದರಿಂದ ಬೇಸತ್ತಿದ್ದಾರೆ. ಹೈಸ್ಕೂಲ್ ಮಕ್ಕಳು ಪ್ರೈಮರಿ ಶಾಲೆ ಬಿಲ್ಡಿಂಗ್’ನಲ್ಲಿ…
ಮಂಡ್ಯ: ಇಂದು ಉಸ್ತುವಾರಿ ಸಚಿವರಿಂದ ಮೊದಲ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದ್ದು, ಸಚಿವರಾದ ಬಳಿಕ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಸುತ್ತಿರುವ ಚಲುವರಾಯಸ್ವಾಮಿ, ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.. KRS ಡ್ಯಾಂ ವಸ್ತು ಸ್ಥಿತಿ, ರೈತರ ಪರಿಸ್ಥಿತಿ, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಂಡ್ಯದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೆಡಿಪಿ ಸಭೆ ಆಯೋಜನೆ ಮಾಡಿದ್ದು, ಸಂಸದೆ ಸುಮಲತಾ ಸೇರಿದಂತೆ ಜಿಲ್ಲೆ ಎಲ್ಲಾ ಶಾಸಕರೂ ಭಾಗಿ ಸಾಧ್ಯತೆ ಇದೆ. ಕಳೆದ ಅವಧಿಯಲ್ಲಿ ಸುಮಲತಾ ಭಾಗಿಯಾದ ಸಭೆಗಳಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಜೆಡಿಎಸ್ ಶಾಸಕರು. ಈ ಬಾರಿ ಕಾಂಗ್ರೆಸ್ ಶಾಸಕರ ಪಾರುಪತ್ಯದಲ್ಲಿ ಸುಮಲತಾ ನಡೆ ನಿಗೂಢವಾಗಿದ್ದು, ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರಾ ರೆಬೆಲ್ ಲೇಡಿ ಸುಮಕ್ಕ ಎಂದು ಕಾದು ನೋಡಬೇಕಿದೆ.
ಕಲಬುರಗಿ: ಜನ ಮೋಸ ಹೋಗೋದು ಕಾಮನ್ ಆಗಿ ಬಿಟ್ಟಿದೆ ಅದರಲ್ಲೂ ದುಡ್ಡಿನ ವಿಷಯದಲ್ಲಿ ಎಷ್ಟೆ ಜಾಗುರುಕತೆಯಿಂದ ಇದ್ರೂ ನೂ ಹೇಗಾದ್ರೂ ಮೋಸ ಮಾಡ್ತಾರೆ. ಅದರಲ್ಲಿ ಉದಾಹರಣೆ ಇಲ್ಲಿದೆ ನೋಡಿ..ಶೇರ್ ಮಾರ್ಕೆಟ್(Share Market)ನಲ್ಲಿ ದುಡ್ಡು ಹಾಕಿ, ಮೂರೇ ತಿಂಗಳಿಗೆ ಡಬಲ್ ಮಾಡಿ ಕೊಡುತ್ತೇವೆ ಎಂದು ಹೇಳಿ ಅನೇಕರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್ನ್ನ ಪೊಲೀಸರು ಬಂಧಿಸಿದ್ದಾರೆ. ಹೌದು ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಗೌಡಗಾಂವ್ ಗ್ರಾಮದ ನಿವಾಸಿಗಳಾದ ಮಂಗಳಾ ಮತ್ತು ಮಹೇಶ್ ಎನ್ನುವ ದಂಪತಿಯಿಂದ ವಂಚನೆ ಆರೋಪ ಕೇಳಿಬಂದಿದೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಎಫ್ಡಿಎ ಆಗಿ ಮಂಗಳಾ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಶೇರ್ ಮಾರ್ಕೆಟ್ ದಂಧೆಯನ್ನು ಮಾಡುತ್ತಾ ಜನರಿಗೆ ವಂಚಿಸುತ್ತಿದ್ದರು. ಇನ್ನು ನಿನ್ನೆ(ಜೂ.26) ಸಂಜೆ ಕಲಬುರಗಿ ನಗರದ ಸಾವಿತ್ರಿ ಎನ್ನುವ ಮಹಿಳೆ, ಆರೋಪಿ ಮಂಗಳಾಗೆ 21 ಲಕ್ಷ ಹಣವನ್ನ ಕೊಟ್ಟಿದ್ದರಂತೆ. ಅನೇಕ ತಿಂಗಳಾದರೂ ಕೂಡ ಹಣ ಮರಳಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ, ಮಂಗಳಾ ಕೆಲಸ ನಿರ್ವಹಿಸುವ ಶಾಲೆ ಬಳಿ…
ಉತ್ತರ ಕರ್ನಾಟಕ ಭಾಗದ ಅದರಲ್ಲೂ ಹುಬ್ಬಳ್ಳಿ, ಧಾರವಾಡ ಅವಳಿನಗರದ ಜನತೆಯ ಬಹು ನಿರೀಕ್ಷಿತ ವಂದೇ ಭಾರತ ರೈಲು ನಾಳೆಯಿಂದ ಅಧಿಕೃತವಾಗಿ ಧಾರವಾಡ ಮತ್ತು ಬೆಂಗಳೂರು ಮಧ್ಯೆ ಸಂಚಾರ ಮಾಡಲಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧಾರವಾಡದಲ್ಲಿ ಈ ರೈಲು ಸಂಚಾರಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ. ಅದರ ಮುನ್ನಾ ದಿನವಾದ ಸೋಮವಾರ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ವೇಸ್ಟ್ ಆದ ಥರ್ಮಕೋಲ್ ಹಾಗೂ ಫ್ಲೈವುಡ್ ಪೀಸ್‌ಗಳಿಂದ 3X2 ಅಳತೆಯ ವಂದೇ ಭಾರತ ರೈಲು ನಿರ್ಮಿಸಿದ್ದಾರೆ. ಅಲ್ಲದೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರುವ ಕಲಾಕೃತಿಯನ್ನೂ ರಚಿಸಿದ್ದಾರೆ. ಆ ಕಡೆಯಿಂದ ಈ ಕಡೆ ಧಾರವಾಡ ಬೆಂಗಳೂರು ಜಂಕ್ಷನ್ ಬೋರ್ಡ್ ಹಾಕಿ ಗಮನಸೆಳೆದಿದ್ದಾರೆ. ಈ ರೀತಿಯ ಕಲಾಕೃತಿ ರಚಿಸುವ ಮೂಲಕ ಕಲಾವಿದ ಮಂಜುನಾಥ ಹಿರೇಮಠ ಅವರು ನಾಳೆಯಿಂದ ಆರಂಭವಾಗುವ ವಂದೇ ಭಾರತ ರೈಲಿಗೆ ಶುಭಾಶಯ ಕೋರಿದ್ದಾರೆ. ಈ ವಂದೇ ಮಾತರಂ ಪೆರಂಬೂರಿನಲ್ಲಿರುವ…