ಭಾರತೀಯರ ಪವಿತ್ರ ಹಬ್ಬವಾಗಿರುವ ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್ ನಗರದಲ್ಲಿ ಶಾಲೆಗಳಿಗೆ ರಜೆ ಘೊಷಿಸುವ ಮೂಲಕ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿಂದೆ 2021 ಮತ್ತು 2022ರಲ್ಲಿ ಎರಡು ಬಾರಿ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಿದ್ದರು, ಎರಡು ಮಸೂದೆಯು ವಿಫಲವಾಗಿತ್ತು. ಈ ಮಸೂದೆಯನ್ನು ವಿಧಾನಸಭೆಯ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಮಂಡಿಸಿ, ಮಸೂದೆ ಅಂಗೀಕಾರವಾದಾಗ ದಕ್ಷಿಣ ಏಷ್ಯಾದ ಸಮುದಾಯದ ಕನಸನ್ನು ನನಸು ಮಾಡಿದೆ ಎಂದು ಹೇಳಿದ್ದರು. ನ್ಯೂಯಾರ್ಕ್ನಲ್ಲಿ ಹಿಂದೂಗಳ ಹಬ್ಬಕ್ಕೆ ಶಾಲೆಗಳಿಗೆ ರಜೆ ಘೋಷಿಸಿರುವುದು ಖುಷಿಯಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡವ್ಸ್ ಹೇಳಿಕೆ ನೀಡಿದ್ದು, ಎಲ್ಲಾ ಸದಸ್ಯರ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಭಾರತೀಯ ಸಮುದಾಯ ಸೇರಿದಂತೆ ನಗರದ ನಿವಾಸಿಗಳಿಗೆ ಇದು ವಿಜಯ ಎಂದು ಅಧಿಕಾರಿಗಳು ಬಣ್ಣಿಸಿದರು. ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಅವರು ಸ್ಟೇಟ್ ಹೌಸ್ ಮತ್ತು ಸ್ಟೇಟ್ ಸೆನೆಟ್ ನ್ಯೂಯಾರ್ಕ್ ಸಿಟಿ ಪಬ್ಲಿಕ್ ಶಾಲೆಗಳನ್ನು ದೀಪಾವಳಿಯಂದು ಮುಚ್ಚಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಹಲವು…
Author: Prajatv Kannada
ಇಸ್ಲಾಮಾಬಾದ್: ಆರ್ಥಿಕ ಪರಿಸ್ಥಿತಿಯಿಂದ ಪರಿತಪಿಸುತ್ತಿರುವ ಪಾಕಿಸ್ತಾನ ಜನತೆಗೆ ಇದೀಗ ಹವಾಮಾನ ಕೂಡ ತಲೆ ನೋವಾಗಿದೆ. ಇದೀಗ ವಿಪರೀತ ಬಿಸಿಲಿನ ಕಾರಣದಿಂದಾಗಿ ಇಸ್ಲಾಮಾಬಾದ್ ಮತ್ತು ಮರ್ದಾನ್‌ನಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮರ್ದಾನ್ ಮೆಡಿಕಲ್ ಕಾಂಪ್ಲೆಕ್ಸ್ ಮುಖ್ಯಸ್ಥ ಡಾ.ತಾರಿಕ್ ಮೆಹಮೂದ್, ಜೂನ್ 24ರಂದು ನಗರದಲ್ಲಿ 18 ಮಂದಿ ಬಿಸಿಲ ಬೇಗೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಎಂದು ತಿಳಿಸಿದ್ದಾರೆ. ಹಲವಾರು ನಗರಗಳಲ್ಲಿ ಅಘೋಷಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದಾಗಿ ಜನಸಾಮಾನ್ಯರ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗಿದೆ. ಇದಲ್ಲದೆ, ಫೆಡರಲ್ ರಾಜಧಾನಿಯಲ್ಲಿ ನಾಲ್ಕು ಜನರು ಬಿಸಿಲ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕ್: ಸಾಮಾನ್ಯವಾಗಿ ಎಳೆಯ ಮಕ್ಕಳನ್ನು ಒಂದು ನಿಮಿಷ ಕೂಡ ಬಿಟ್ಟಿರಲು ತಾಯಿ ಹಿಂದೆ ಮುಂದೆ ನೋಡುತ್ತಾಳೆ. ಎಲ್ಲಿಯೇ ಹೋದರು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಇಲ್ಲೋರ್ವ ಪಾಪಿ ತಾಯಿ ತನ್ನ ಎಂಜಾಯ್ ಮೆಂಟ್ ಗಾಗಿ ಒಂದೂವರೆ ವರ್ಷದ ಮಗುವನ್ನು ಬಿಟ್ಟು ಹೋದ ಪರಿಣಾಮ ಇದೀಗ ತನ್ನ ಮಗುವನ್ನೇ ಕಳೆದುಕೊಂಡಿದ್ದಾಳೆ. ಅಮೆರಿಕದ ಓಹಿಯೋ ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ (31) ಎಂಬ ಮಹಿಳೆ ತನ್ನ 16 ತಿಂಗಳ ಜೈಲಿನ್ ಹೆಸರಿನ ಮಗುವನ್ನು ಒಂಟಿಯಾಗಿ ಹತ್ತು ದಿನಗಳ ಕಾಲ ಮನೆಯಿಂದ ಹೊರ ಹೋಗಿದ್ದಾಳೆ. ಈ ವೇಳೆ ಮಗು ಊಟ, ತಿಂಡಿ ಇಲ್ಲದೆ ಮೃತಪಟ್ಟಿದ್ದು ಇದೀಗ ಕ್ರಿಸ್ಟಲ್ ಪೊಲೀಸರ ಅತಿಥಿಯಾಗಿದ್ದಾಳೆ. ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಳನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದಳು. ಆದರೆ ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಲಿಲ್ಲ. ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ನೆರೆಮನೆಯವರು ಸುಮ್ಮನಿದ್ದರು. ಆದರೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಗು ಹೊಟ್ಟೆಗೆ ಏನೂ ಇಲ್ಲದೆ ಮೃತಪಟ್ಟಿದೆ. ಇತ್ತ…
ಲಕ್ನೋ: ಕೊಲೆ ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಕಳೆದ ಸಾಕಷ್ಟು ವರ್ಷಗಳಿಂದ ಕೊಲೆ ಹಾಗೂ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಫ್ರಾನ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಈತ ಪ್ರತಾಪ್‌ಗಢ್ ಮತ್ತು ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ 13 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಗುಫ್ರಾನ್ ಭಾಗಿಯಾಗಿದ್ದು ಈತನನ್ನು ಹತ್ಯೆ ಮಾಡಿದ ಯುಪಿ ಪೊಲೀಸರಿಗೆ 1,00,000 ಬಹುಮಾನ ನೀಡಲಾಗಿದೆ. ಇಂದು ಬೆಳಗ್ಗೆ 5:00 ಗಂಟೆ ಸುಮಾರಿಗೆ ವಿಶೇಷ ಕಾರ್ಯಪಡೆಯ ತಂಡವು ಕೌಶಂಬಿ ಜಿಲ್ಲೆಯಲ್ಲಿ ದಾಳಿ ನಡೆಸಿದ್ದಾಗಿ ಯುಪಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎನ್‌ಕೌಂಟರ್ ವೇಳೆ ಗುಫ್ರಾನ್ ತಂಡದವರು ಸಹ ಪೊಲೀಸರ ಮೇಲೆ ಗುಂಡಿನ ಪ್ರತಿದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಕ್ರಾಸ್ ಫೈರಿಂಗ್‌ನಲ್ಲಿ ಗುಫ್ರಾನ್ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಗುಫ್ರಾನ್‌ನನ್ನು ಪೊಲೀಸರು ಆಸ್ಪತ್ರೆಗೆ…
ಮಹಾರಾಷ್ಟ್ರ: ವಿಡಿಯೋ ಕಾಲ್‌ನಲ್ಲಿ ಶಿಕ್ಷಕಿಯನ್ನು ಬೆತ್ತಲಾಗುವಂತೆ ಪ್ರೇರೇಪಿಸಿದ ಯುವಕನೊಬ್ಬ ಅದೇ ವಿಡಿಯೋ ಮುಂದಿಟ್ಟುಕೊಂಡು ಸಾವಿರಾರು ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ. ಪುಣೆಯ ಹದಪ್ಸರ್ ಪೊಲೀಸ್ ಠಾಣೆಯಲ್ಲಿ 36 ವರ್ಷ ವಯಸ್ಸಿನ ಶಿಕ್ಷಕಿ 26 ವರ್ಷ ವಯಸ್ಸಿನ ವಿದ್ಯಾರ್ಥಿ ಮೇಲೆ ಈ ಆರೋಪ ಮಾಡಿದ್ದಾರೆ. ತಾನು ಹಣ ಕೊಡದೇ ಇದ್ದರೆ ತನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ವಿದ್ಯಾರ್ಥಿ ಬೆದರಿಕೆ ಹಾಕಿದ್ದ ಎಂದೂ ಶಿಕ್ಷಕಿ ಆರೋಪ ಮಾಡಿದ್ದಾರೆ. ತನಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಒಂದರ ಕ್ಲಿಪ್ ಕಳಿಸಿದ ವಿದ್ಯಾರ್ಥಿ, ಹಣ ಕೊಡದೇ ಇದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದ ಎಂದು ಶಿಕ್ಷಕಿಯು ಪೊಲೀಸರಿಗೆ ದೂರು ನೀಡಿದ್ಧಾರೆ. ಶಿಕ್ಷಕಿ ಪಾಠ ಮಾಡುತ್ತಿದ್ದ ಎಂಜಿನಿಯರಿಂಗ್ ಕಾಲೇಜ್‌ನಲ್ಲಿಯೇ ವಿದ್ಯಾರ್ಥಿ ಕೂಡಾ ವ್ಯಾಸಂಗ ಮಾಡುತ್ತಿದ್ದಾನೆ. ಮಾರ್ಚ್ 2020 ರಿಂದ ಜೂನ್ 2023ರವರೆಗೆ ಈ ಘಟನಾವಳಿಗಳು ನಡೆದಿವೆ ಎಂದು ತನಿಖೆ ನಡೆಸುತ್ತಿರುವ ಹಿರಿಯ ಇನ್ಸ್‌ಪೆಕ್ಟರ್ ಅರವಿಂದ ಗೋಖಲೆ ಅವರು…
ಧಾರವಾಡ ;- ಭೂಪರಿವರ್ತನೆಗೆ ಎರಡು ಎಕರೆ ಜಮೀನು ಇದ್ದರೆ ಅವಕಾಶ ನೀಡುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಉದ್ಯಮ ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ. ಭೂಪರಿವರ್ತನೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಎರಡು ಎಕರೆ ಜಮೀನು ಇದ್ದರೆ ಪರಿವರ್ತನೆ ಮಾಡಲು ಅವಕಾಶ ಕೊಡುತ್ತೇವೆ. ಫುಡ್ ಇಂಡಸ್ಟ್ರಿ ಮಾಡುವವರಿದ್ದರೆ ಮಾಡಬಹುದು. ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಆಹಾರ ಉದ್ಯಮ ಬೆಳೆಸಲು ಪ್ರೋತ್ಸಾಹ ನೀಡುತ್ತೇವೆ. ಧಾರವಾಡದಲ್ಲಿ ಮಾವಿನ ಹಣ್ಣಿನ ಜೊತೆಗೆ ಬೇರೆ ಬೇರೆ ರೀತಿಯ ರಸ ತೆಗೆಯುತಿದ್ದಾರೆ. ಇದು ವಿದೇಶಕ್ಕೆ ರಫ್ತಾಗುತ್ತಿದೆ. ಮಾವಿನ ಮಾರುಕಟ್ಟೆ ಬೆಲೆ ಕುಸಿತ ಅದಾಗ ಫುಡ್ ಪ್ರೊಸೆಸ್ ಮಾಡಬಹುದು. ಇದರಿಂದ ಬೆಳೆಗಾರರಿಗೆ ಬೆಂಬಲ ಸಿಗಲಿದೆ ಎಂದು ಹೇಳಿದ್ದಾರೆ.
ಮಲೆನಾಡಿನ ಜಲಾಶಯಗಳ ಒಡಲು ತುಂಬಿದರೆ ಬಯಲು ಸೀಮೆ ಶ್ರೀಮಂತವಾಗುತ್ತದೆ.ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದರೆ ಬಯಲು ಸೀಮೆ ಸಮೃದ್ಧವಾಗುತ್ತದೆ.ಜಲಾಶಯಗಳ ಆಗರವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ, ತುಂಗಾ, ಭದ್ರಾ, ಮಾಣಿ, ಚಕ್ರ ಸಾವೆಹಕ್ಲು ಜಲಾಶಯಗಳು ವರ್ಷಪೂರ್ತಿ ಮೈದುಂಬಿ ಹರಿಯುತ್ತವೆ.ಆದರೆ ಈ ಬಾರಿ ರಾಜ್ಯದ ಬಹುತೇಕ ಜಲಾಶಯಗಳ ಒಡಲು ಬರಿದಂತೆ ಜಿಲ್ಲೆಯ ಜಲಾಶಯಗಳು ಬತ್ತಿ ಹೋಗಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ನೆನ್ವೆಯಿಂದ ಮಳೆ ಸುರಿಯುತ್ತಿದ್ದರೂ ಅದು ಡ್ಯಾಂ ಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. 151.64 ಟಿಎಂಸಿ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲೇಲ್ ಇಂದಿಗೆ 18.69 ಟಿಎಂಸಿ ನೀರು ಸಂಗ್ರಹಗೊಂಡಿದೆ. ಗರಿಷ್ಠ 1819 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂ ನಲ್ಲಿ 1740.40 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ 2559 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಣಿವೆ ಪ್ರದೇಶದ ವ್ಯಾಪ್ತಿಯಲ್ಲಿ 38.2 ಮಿಲಿಮೀಟರ್ ಮಳೆಯಾಗಿದೆ. ಇನ್ನು ಮಾಣಿ ಡ್ಯಾಂ ಪರಿಸರದಲ್ಲೂ ಕೂಡ ಮಳೆ ಪ್ರಮಾಣ ತಗ್ಗಿದೆ. ಗರಿಷ್ಠ 594.36 ಮೀಟರ್ ನೀರು ಸಂಗ್ರಹ ಸಮರ್ಥ್ಯ ಹೊಂದಿರುವ…
ಬೆಂಗಳೂರು ;- ಇಲಾಖೆಯ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣ ಆಗುವುದರ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಮೈಸೂರಿನ ಜಿ.ಪಂ ಸಭಾಂಗಣದಲ್ಲಿ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣ ಆಗುವುದರ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಕಾಗದದ ಮೇಲಿನ ಪ್ರಗತಿಯನ್ನು ಒಪ್ಪಲು ಸಾಧ್ಯವಿಲ್ಲ. ವಾಸ್ತವದ ನೆಲೆಯಲ್ಲಿ ಪ್ರಗತಿ ಆಗಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಇಲಾಖೆ ಇಂಜಿನಿಯರ್‌ಗಳಿಗೆ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿದರೆ ಸಮಸ್ಯೆಯ ವಾಸ್ತವದ ಸ್ಥಿತಿಗತಿ ತಿಳಿಯುತ್ತದೆ. ಪರಿಹಾರ ಕಂಡು ಹಿಡಿಯಲು ಸುಲಭವಾಗುತ್ತದೆ ಎಂದು ಸಚಿವರು ಸಲಹೆ ನೀಡಿದರು. ಇನ್ನೂ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ನನ್ನ ಬಳಿಗೆ ಬನ್ನಿ. ಅನುಕೂಲ ಮಾಡಿ ಕೊಡೋಣ. ಆದರೆ ಈ ವಿಚಾರದಲ್ಲಿ ಮಧ್ಯವರ್ತಿಗಳು ಬೇಡ. ಏನೇ ಸಮಸ್ಯೆ ಇದ್ದರೂ ಕೂಡ ಹೇಳಿ ಎಂದು ಇಲಾಖೆ ಇಂಜಿನಿಯರ್‌ಗಳಿಗೆ ತಿಳಿಸಿದರು.
ಧಾರವಾಡ: ಇಂದು ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಭೋಪಾಲ್‌ನ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಬೆಳಗ್ಗೆ 10.30ಕ್ಕೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿ ಸಂಜೆ 6.40ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಪ್ರಧಾನಿ ಮೋದಿ ಅವರು ಇಂದು ಒಟ್ಟು 5 ವಂದೇ ಭಾರತ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಮಂಗಳೂರು: ನಮಗೆ ಮೀನು ಎಂದರೆ ಮೊದಲು ನೆನಪಾಗೋದು ಮಂಗಳೂರು. ಇಲ್ಲಿ ವಿಧ ವಿಧ ರೀತಿಯ ಮೀನುಗಳು ದೇಶ ವಿದೇಶಕ್ಕೆ ರಫ್ತು ಆಗುತ್ತವೆ. ಈ ಸಲ ಮಳೆಯ ಅಭಾವ ಹಿನ್ನೆಲೆಯಾದ್ರೂ ಮೀನುಗಾರರಿಗೆ ಮಾತ್ರ ಸಂಕಟವೇನು ಆಗಿಲ್ಲ ಯಾಕೆಂದರೆ ಮಳೆ ಜಾಸ್ತಿಯಾದರೆ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ ಆದರೆ ಮಳೆ ಕಮ್ಮಿಯಾದ್ದರಿಂದ ಮೀನುಗಾರರ ಮೊಗದಲ್ಲಿ ಸಂತಸವನ್ನು ನಾವು ಕಾಣಬಹುದು. ಮಂಗಳೂರು ಮೀನುಗಾರಿಕೆ ದಕ್ಕೆಗೆ ಬೆಳ್ಳಂಬೆಳಗ್ಗೆ ಸ್ಥಳೀಯವಾಗಿ ದೋಣಿಯಲ್ಲಿ ಗಾಳ ಹಾಕಿ ಹಿಡಿದ ದೊಡ್ಡ ಅಂಜಲ್ ಮೀನು, ಪಕ್ಕದ ಮಲ್ಪೆ ಅಲ್ಲದೆ, ಕಾರವಾರ, ರತ್ನಗಿರಿ, ಆಂಧ್ರಪ್ರದೇಶ ಮತ್ತು ಚೆನ್ನೈಯಿಂದಲೂ ತಾಜಾ ಮೀನು ಬರುತ್ತಿದೆ. ಫ್ರೋಝನ್ ಮೀನು ಕೂಡ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದೆ. ಮಂಗಳೂರು ಮೀನುಗಾರಿಕೆ ದಕ್ಕೆಗೆ ಪ್ರತಿದಿನ ಬೆಳಗ್ಗೆ 7 ಗಂಟೆ ವೇಳೆ ಅಳಿವೆ ಬಾಗಿಲು ಬಳಿ ಬೋಟ್ ಮೂಲಕ ಬಲೆ ಹಾಕಿ ಹಿಡಿದು ತರುವ ತಾಜಾ ಕಾನೆ ಮೀನು ಬರುತ್ತಿದೆ. ಮಳೆಗಾಲದಲ್ಲಿ ಹೆಚ್ಚು ಕಾನೆ ಸಿಗುತ್ತಿದೆ. 5-6 ಮಂದಿ ಏಲಂ ಮಾಡುತ್ತಿದ್ದು, ಕೆಜಿಗೆ 600- 700 ರೂ.ಗೆ…