Author: Prajatv Kannada

ಬೆಂಗಳೂರು ;– ರಾಜ್ಯದಲ್ಲಿ ಉಚಿತ ವಿದ್ಯುತ್‌ಗೊಸ್ಕರ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಚಿತ ವಿದ್ಯುತ್‌ಗೊಸ್ಕರ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ. ಲೋಡ್‌ ಶೆಡ್ಡಿಂಗ್‌ಗೆ ಸರಕಾರ ಆದೇಶವನ್ನೇ ಮಾಡಿಲ್ಲ. ನಿರ್ವಹಣೆ ವೇಳೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿರಬಹುದು ಅಷ್ಟೆ. ಸ್ಥಳೀಯವಾಗಿ ಸಮಸ್ಯೆಗಳಿದ್ದರೆ ಗಮನಕ್ಕೆ ತರುವಂತೆ ಜೆಸ್ಕಾಂ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು. ಗೃಹಜ್ಯೋತಿ ಒಳ್ಳೆಯ ಕಾರ್ಯ ಕ್ರಮವಾಗಿದೆ. ರಾಜ್ಯದ 2.14 ಕೋಟಿ ಜನರಿಗೆ ಉಚಿತ ವಿದ್ಯುತ್‌ ಸೌಲಭ್ಯ ಸಿಗಲಿದೆ. ಪ್ರತಿ ಕುಟುಂಬಕ್ಕೂ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು. ಈಗಾಗಲೇ 52 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು. ವಿದ್ಯುತ್‌ ಬಳಕೆಯ ವಾರ್ಷಿಕ ಸರಾಸರಿಗೆ ಶೇ.10ರಷ್ಟು ಸೇರಿಸಿ ಮುಂದಿನ ಆಗಸ್ಟ್‌ ತಿಂಗಳಿಂದ ಶೂನ್ಯ ಬಿಲ್‌ ನೀಡಲಾಗುವುದು ಎಂದು ಹೇಳಿದ್ದಾರೆ.

Read More

ಉಡುಪಿ: ಜನರ ಸಮಸ್ಯೆಗಳನ್ನ ಬಗೆಹರಿಸಬೇಕಾದ ನಗರಸಭೆ ಸದಸ್ಯರೇ ಮೋಜು ಮಸ್ತಿಯಲ್ಲಿ ತೊಡಗಿದ್ದು,  ಘಣತ್ಯಾಜ್ಯ ನಿರ್ವಹಣೆ ಘಟಕ ವೀಕ್ಷಣೆ ಹೆಸರಲ್ಲಿ ಗದಗ ಬೆಟಗೇರಿ ನಗರಸಭೆ ಸದಸ್ಯರು ಭರ್ಜರಿ ಟ್ರಿಪ್ ಕೈಗೊಂಡಿದ್ದಾರೆ. ಎರಡು ದಿನಗಳಿಂದ ಉಡುಪಿಯಲ್ಲಿ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಜೊತೆಗೆ ಮೋಜು ಮಸ್ತಿಗೆ ತಮ್ಮ ಪತಿಗಳನ್ನೂ ಮಹಿಳಾ ಸದಸ್ಯರು ಕರೆದುಕೊಂಡು ಹೋಗಿದ್ದಾರೆ. ಸುಮಾರು 18 ಜನ ಸದಸ್ಯರು ಹಾಗೂ 10 ಜನ ಅಧಿಕಾರಿಗಳ ತಂಡ ಭೇಟಿ ಪ್ರವಾಸ ಕೈಗೊಂಡಿದ್ದು, ಇವರ ಜೊತೆಗೆ ಕೆಲವು ಮಹಿಳಾ ಸದಸ್ಯರ ಗಂಡಂದಿರು ಬಂದಿದ್ದರು. ಯಾವುದಾದರೂ ಸಮಸ್ಯೆ ಹೇಳಿಕೊಂಡು ಬಗೆಹರಿಸಲು ಕೇಳಿದರೆ ಅನುದಾನದ ನೆಪ ಹೇಳುವ ಇವರು ಮೋಜು ಮಸ್ತಿ ಮಾಡುತ್ತಿರುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಜುಮಸ್ತಿ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಬಾರಿ ಟೀಕೆ ಕೂಡ ಎದುರಾಗಿದೆ.

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮತ್ತೊಂದು ಮಹತ್ವದ ಯೋಜನೆ ಜಾರಿಗಾಗಿ ಮುಹೂರ್ತ ಫಿಕ್ಸ್ ಆಗಿದೆ. ಇಷ್ಟುದಿನ ರಾಜ್ಯದ ಮಹಿಳೆಯರು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಿಸಲು ರಾಜ್ಯ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ಜೂನ್ 27ರಿಂದ ಅಂದ್ರೆ ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಂದುಕೊಂಡಂತೆ ಆದ್ರೆ ಸ್ವಾತಂತ್ರೋತ್ಸವ ದಿನಕ್ಕೆ ಲಕ್ಷ್ಮೀಯರ ಖಾತೆಗೆ ಲಕ್ಷ್ಮೀಯ ಆಗಮನವಾಗಲಿದೆ. ಮಹಿಳಾ ಮಣಿಗಳಿಗೆ ಶಕ್ತಿಯ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ದೊಡ್ಡ ಗಿಫ್ಟ್ ಕೊಡೋಕೆ ಮುಂದಾಗಿದೆ. ಎಲ್ಲೆಂದರಲ್ಲಿ ಫ್ರೀ ಬರ್ಡ್ನಂತೆ ಓಡಾಡಿ ಅಂತ ನಾರಿಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದ್ದ ಸರ್ಕಾರ ಈಗ ಖರ್ಚಿಗೆ ರಾಜ್ಯದ ಎಲ್ಲಾ ಗೃಹಗಳ ಲಕ್ಷ್ಮೀಯರ ಖಾತೆಗೆ ಹಣ ಹಾಕಲು ಮುಂದಾಗಿದೆ. ಇಂದಿನಿಂದ ಗೃಹಲಕ್ಷ್ಮೀ ಯೋಜನೆ ನೋಂದಾಣಿ ಪ್ರಕ್ರಿಯೆ ಆರಂಭವಾಗಲಿದ್ದು, ಆಗಸ್ಟ್ 16 ಅಥವಾ 17ರ ನಂತರ ಮನೆ ಯಜಮಾನಿ ಖಾತೆಗೆ ಹಣ ತಲುಪಿಸಲು ಸರ್ಕಾರ…

Read More

ಬೆಂಗಳೂರು ;- ಪ್ರಧಾನಿಯಾಗಿ 9 ವರ್ಷ ಪೂರೈಸಿದ ಹಿನ್ನೆಲೆ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಬೆಳಗ್ಗೆ 10.30ಕ್ಕೆ ವರ್ಚುವಲ್ ಮೂಲಕ ಭಾಷಣ ಮಾಡಲಿದ್ದಾರೆ. ಅಲ್ಲದೇ ನಾಳೆ ರಿಂದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಒಂದು ವಾರ ಕಾಲ ಬಿಜೆಪಿ ಸಂಪರ್ಕ ಅಭಿಯಾನ ನಡೆಯುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿ. ಅವರು 2014ರಲ್ಲಿ ಮೊದಲ ಸಲ ಪ್ರಧಾನಮಂತ್ರಿಯಾಗಿದ್ದರು. ನರೇಂದ್ರ ಮೋದಿಯವರು 2019ರ ಮೇ 30 ರಂದು ಎರಡನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಭಾಜನರು. ಅಲ್ಲದೇ ಇಂದು ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಭೋಪಾಲ್‌ನ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ಚಾಲನೆ ನೀಡಲಿದ್ದಾರೆ. ಚಾಲನೆ ಬಳಿಕ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯುತ್ತದೆ. ಬಳಿಕ ಧಾರವಾಡದಿಂದ ರೈಲು ಹೊರಡಲಿದೆ.

Read More

ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಾಸೀರ್ ಮದನಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕೇರಳಾಗೆ ತೆರಳಿದ್ದಾನೆ. ತಂದೆಯ ಅನಾರೋಗ್ಯ ನಿಮಿತ್ತ ಸೋಮವಾರ ಸಂಜೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ಪೊಲೀಸ್ ಬಂದೋಬಸ್ತ್‌ನೊಂದಿಗೆ ಪ್ರಯಾಣಿಸಿದ್ದಾನೆ. ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆದು ಮದನಿ 12 ಕಾಲ ಕೇರಳದಲ್ಲಿ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ. ತಂದೆಯ ಅನಾರೋಗ್ಯ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಲು ಅನುಮತಿ ಕೋರಿ ಸುಪ್ರೀಂಕೋರ್ಟ್​ಗೆ ಮದನಿ ಅರ್ಜಿ ಸಲ್ಲಿಸಿದ್ದ. ಈ ಸಂಬಂಧ ಮದನಿ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯವು ಕೇರಳಕ್ಕೆ ತೆರಳಲು ಅನುಮತಿ ನೀಡಿತ್ತು. ಹೀಗಾಗಿ ಪೊಲೀಸ್ ಬಂದೋಬಸ್ತ್ ನಡುವೆ ಕಳುಹಿಸಲಾಗಿದೆ

Read More

ಬೆಂಗಳೂರು ;- ಯಾರು ಬೇಕಾದರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡಬಹುದು, ನಿರ್ಧಾರ ಹೈಕಮಾಂಡ್‌ನದ್ದು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡೋದು ತಪ್ಪಲ್ಲ. ಆದರೆ ಯಾರು ಸೂಕ್ತ ಎಂದು ಪಕ್ಷ ತೀರ್ಮಾನ ಮಾಡುತ್ತದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಟ್ಟಿಲ್ಲ. ಸದ್ಯಕ್ಕೆ ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನದನ್ನು ಪಕ್ಷ ತೀರ್ಮಾನಿಸಲಿದೆ ಎಂದರು. ಇನ್ನೂ ಜನರಿಗೆ ಆಶ್ವಾಸನೆ ಕೊಟ್ಟಿದ್ದು ಕಾಂಗ್ರೆಸ್ ಪಾರ್ಟಿ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿ ಬಿಟ್ಟು, 10 ಕೆಜಿ ಅಕ್ಕಿ ಕೊಡಬೇಕು. ಜುಲೈ 1 ರಿಂದಲೇ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಇನ್ನು ಐದು‌ ದಿನಗಳಲ್ಲಿ ಭತ್ತ ಬೆಳೆದಾದರೂ ಕೊಡಲಿ. ಎಲ್ಲಿಂದಲಾದರೂ ತಂದು ಕೊಡಲಿ. ಯಾವ ವಿಶ್ವಾಸದ ಮೇಲೆ ಹೇಳಿದ್ದರೋ ಅದೇ ಮಾತಲ್ಲಿ ಕೊಡಲಿ ಎಂದು ಸಿ.ಟಿ. ರವಿ ಆಗ್ರಹಿಸಿದರು.

Read More

ಬೆಂಗಳೂರು ;- ಚೆಕ್​ ಬೌನ್ಸ್​ ಪ್ರಕರಣದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅಪರಾಧಿ ಆಗಿದ್ದು, ಹಣ ಪಾವತಿಗೆ ವಿಫಲವಾದಲ್ಲಿ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವವರೆಗೂ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ಬಿಟಿಎಂ ಬಡಾವಣೆಯ ಪ್ರಕಾಶ್​ ಕುಮಾರ್​ ಯಾರಪ್ಪ ಎಂಬವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ಪ್ರೀತ್​ ಈ ಆದೇಶ ನೀಡಿದ್ದಾರೆ. ದೂರುದಾರರಿಗೆ ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ 64,95,000 ಲಕ್ಷ ರೂಪಾಯಿಗಳನ್ನು ಪಾವತಿಸಿ, 5 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿ ಮಾಡುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು ;- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7 ರಂದು 3.35 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರೆ ಕಾರಣಕ್ಕಾಗಿ ಜುಲೈನಲ್ಲಿ ಮಂಡಿಸುವ ಬಜೆಟ್ ಗಾತ್ರ 3.35 ಲಕ್ಷ ಕೋಟಿಗಳಷ್ಟು ಇರಲಿದೆ. ಹಿಂದಿನ ಸರ್ಕಾರ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ನಾಲ್ಕು ತಿಂಗಳ ಅವಧಿಗೆ ಲೇಖಾನುದಾನ ಪಡೆಯಲಾಗಿತ್ತು. ಆಗಸ್ಟ್1 ರಿಂದ ಅನ್ವಯವಾಗುವಂತೆ ಹೊಸದಾಗಿ ಬಜೆಟ್ ಮಂಡಿಸಬೇಕಿದ್ದು, ಜು. 7 ರಂದು ಬಜೆಟ್ ಮಂಡಿಸಲಾಗುವುದು. ಹಿಂದಿನ ಬಜೆಟ್ ಗಾತ್ರ 3.09 ಲಕ್ಷ ಕೋಟಿ ರೂ. ಇದ್ದು, ಈಗ 3.30 -3.35 ಲಕ್ಷ ಕೋಟಿ ರೂ.ಗಳಷ್ಟು ಇರಲಿದೆ ಹೇಳಿದ್ದಾರೆ.

Read More

ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರವನ್ನು ಜೋಡಿಸುವ ಎಕ್ಸ್‌’ಪ್ರೆಸ್ ವೇ ಸಾವಿನ ಹೆದ್ದಾರಿಯಾಗಿ ಬದಲಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 100 ಮಂದಿ ಸಾವನ್ನಪ್ಪಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಸುರಕ್ಷತೆ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿ ವರ್ಗ ಸಿದ್ದತೆ ನಡೆಸ್ತಿದೆ. ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪ್ರತಿ ದಿನ ಸರಾಸರಿ 56 ಸಾವಿರ ವಾಹನಗಳು ಓಡಾಡುತ್ತವೆ ಎಂದು ಅಂದಾಜಿಸ ಲಾಗಿದೆ. ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಪ್ರಯಾಣದ ಅವಧಿ ಕೇವಲ 75 ನಿಮಿಷಕ್ಕೆ ಕಡಿತಗೊಂಡಿದೆ. ಜೊತೆಯಲ್ಲೇ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಪರ್ಕ ಕೊಂಡಿಯಾಗಿಯೂ ಈ ರಸ್ತೆ ಇದೆ. ರಾಮನಗರ ಹಾಗೂ ಮಂಡ್ಯ ಪೊಲೀಸರ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಈ ಹೆದ್ದಾರಿಯಲ್ಲಿ 79 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಇದಲ್ಲದೆ 226 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಒಟ್ಟು 94…

Read More

ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಅಷ್ಟಮಿ 02:04 AM ತನಕ ನಂತರ ನವಮಿ ನಕ್ಷತ್ರ: ಇವತ್ತು ಹಸ್ತ 02:43 PM ತನಕ ನಂತರ ಚಿತ್ತ ಯೋಗ: ಇವತ್ತು ವರಿಯಾನ್ 06:24 AM ತನಕ ನಂತರ ಪರಿಘ ಕರಣ: ಇವತ್ತು ಬವ 02:04 AM ತನಕ ನಂತರ ಬಾಲವ 02:40 PM ತನಕ ನಂತರ ಕೌಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 08.13 AM to 09.57 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:45 ವರೆಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು…

Read More