Author: Prajatv Kannada

ಬೆಂಗಳೂರು: ನಾಡಿನ ಸಮಸ್ತ ಜನತೆಗೆ, ಜಗತ್ತಿನೆಲ್ಲೆಡೆ ನೆಲೆಸಿರುವ ಕನ್ನಡಿಗರೆಲ್ಲರಿಗೂ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಟ್ವೀಟ್ ಮೂಲಕ ಕೋರಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ  ದುಡಿದ ಮಹಾನ್ ಮಾನವತಾವಾದಿ ಹಾಗೆ ಅಭಿವೃದ್ಧಿ, ಶಾಂತಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧತೆಯಿಂದ ಶ್ರಮಿಸೋಣ ಎಂದು ಹೇಳಿದರು.

Read More

ಬೆಂಗಳೂರು : ಜಮೀರ್‌ ನೀನು ಲೈಬ್ರರಿಗೆ ಯಾವತ್ತಾದ್ರೂ ಹೋಗಿದ್ಯಾ? ಈ ರೀತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ಗೆ ಪ್ರಶ್ನೆ ಕೇಳಿದ್ದು ಬೇರೆ ಯಾರೂ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ. ವೇದಿಕೆ ಮೇಲೆ ಹಠಾತ್ತನೇ ಬಂದ ಈ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಜಮೀರ್‌ ಅಹ್ಮದ್‌ ಖಾನ್‌ ಸಿಎಂ ಸಿದ್ದರಾಮಯ್ಯ ಮುಖ ನೋಡಿ ನಕ್ಕು ತಲೆ ತಗ್ಗಿಸಿದರು. ಈ ಘಟನೆ ನಡೆದಿದ್ದು, 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರದ ಉದ್ಘಾಟನೆ ವೇಳೆ. ಹೌದು, ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮಗಾಗಿ ಸಾಕಷ್ಟು ಖರ್ಚು ಮಾಡಿ ಗ್ರಂಥಾಲಯ ಕಟ್ಟಿಸಿದ್ದೇವೆ. ಅಲ್ಲಿಗೆ ಯಾರು ಹೋಗುವುದೇ ಇಲ್ಲ, ಪುಸ್ತಕಗಳನ್ನು ಓದುವುದೇ ಇಲ್ಲ, ಇದೇ ವೇಳೆ ವೇದಿಕೆ ಮೇಲಿದ್ದ ಸಚಿವ ಜಮೀರ್ ಅಹ್ಮದ್‌ ಅವರನ್ನು ಕಿಚಾರಯಿಸಿದ ಸಿದ್ದರಾಮಯ್ಯ, ಜಮೀರ್ ನೀನು ಲೈಬ್ರರಿಗೆ ಯಾವತ್ತಾದ್ರು ಹೋಗಿದ್ಯಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಪ್ರಶ್ನೆಗೆ ತಬ್ಬಿಬ್ಬಾದ ಸಚಿವ ಜಮೀರ್ ಅಹ್ಮದ್‌ ಸಿದ್ದು ಮುಖ ನೋಡಿ ನಕ್ಕು ತಲೆ ತಗ್ಗಿಸಿದ್ದಾರೆ. ಇನ್ನು, ರಾಜಕಾರಣ ಧಿಮಾಕು…

Read More

ಗದಗ ;- ತಾಲೂಕಿನ ನಾಗಾವಿ ಬಳಿಯ ಹಲವು ರೈತರನ್ನ ಜಮೀನು ತೆಗೆದುಕೊಂಡು ಒಕ್ಕಲೆಬ್ಬಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ ಸ್ಥಾಪಿಸಿ ಪರಿಹಾರ ನೀಡದೆ ಸರಕಾರ ಮೋಸ ಮಾಡಿದೆ ಅಂತ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ನಾಗಾವಿ ಹಾಗೂ ಬಗುರ್ ಹುಕುಂ ಸಾಗುವಳಿದಾರರು ಪ್ರತಿಭಟನೆ ಮಾಡಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯ ಸ್ಥಾಪನೆಗೆ ಸುಮಾರು 500 ಕ್ಕೂ ಹೆಚ್ಚು ಎಕರೆ ಜಮೀನನ್ನು ಸರಕಾರ ವಶಪಡಿಸಿಕೊಂಡಿದೆ. ಇದರಲ್ಲಿ ಸುಮಾರು ‌50ಕ್ಕೂ ಹೆಚ್ಚು ರೈತರು ನಾಲ್ಕು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತ ಬರ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ಎಲ್ಲ ರೈತರನ್ನ ಒಕ್ಕಲೆಬ್ಬಿಸಿ ಅವರಿಗೆ ಪರಿಹಾರವನ್ನೂ ನೀಡದೆ ಕಾಲೇಜು ಸ್ಥಾಪನೆ ಮಾಡಿದೆ ಅಂತಾ ಆರೋಪಿಸಿದ್ದಾರೆ. ಆದ್ರೆ ಪರಿಹಾರಕ್ಕಾಗಿ ರೈತರು ಐದಾರು ವರ್ಷಗಳಿಂದ ಅಲೆದಾಡ್ತಾಯಿದ್ದಾರೆ. ಯಾರೂ ಈ ಬಗ್ಗೆ ಕಿವಿಗೊಡ್ತಿಲ್ಲ ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ಗಮನ ಹರಿಸಿ ಪರಿಹಾರ ಕೊಡಿಸಬೇಕು ಅಂತ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಡಿಸಿ ಕಚೇರಿ ಗೇಟ್ ಮುಂಬಾಗದಲ್ಲಿ ಟೆಂಟ್…

Read More

ಧಾರವಾಡ : ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಹಿಂಪಡೆಯುವ ಹಾಗೂ ಪಠ್ಯ ಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಮಾಜ ಸುಧಾರಕರ ಕುರಿತಾದ ವಿಷಯಗಳನ್ನು ಕೈ ಬಿಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ರಾಜ್ಯಪಾಲರು ತಿರಸ್ಕರಿಸಲು ಆಗ್ರಹಿಸಿ, ಶ್ರೀ ರಾಮ ಸೇನೆ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುದ ಕಾರ್ಯಕರ್ತರು ರಾಜ್ಯ ಸರ್ಕಾರ ನಡೆ ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಗೋ ಹತ್ಯಾ ನಿಷೇಧಕ್ಕೆ ಸಂಬಂಧ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಜನರ, ಮಠಾಧಿಶರ, ಸಂಘಟನಗಳ ಹೋರಾಟ ಫಲವಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ರೈತರ ಬೆನ್ನೆಲುಬು, ದೇಶದ ಆರ್ಥಿಕ ಸಾಮಾಜಿಕ, ಧಾರ್ಮಿಕ,ಆರೋಗ್ಯ, ಕೃಷಿ ಮುಂತಾದವುಗಳಿಗೆ ಆಧಾರ ಸ್ತಂಭ ಗೋ ಗುರುತಿಸಿಕೊಂಡಿದೆ. ಆದರೆ ಈಗಿನ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿರುವ ಖಂಡನೀಯವಾಗಿದೆ ಎಂದರು. ಮೋಸದ ಮತಾಂತರ ನಿಷೇಧ ಮಸೂದೆ ವಾಪಸ್ ಇದೂ ಸಹ ಹಿಂದಿನ ಬಿಜೆಪಿ ರಾಜ್ಯ…

Read More

ಧಾರವಾಡ; ಇಂದು ಜಿಲ್ಲೆಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಸಚಿವ ಎಂ ಬಿ ಪಾಟೀಲ ಭೇಟಿ ನೀಡಿದ್ದಾರೆ. ಈ ವೇಳೆ ಇನ್ಪಾ ಪ್ರೈನ್ ಪ್ರೂಡ್ಸ್ ಕಂಪನಿಗೆ ಬೇಟಿ ನೀಡಿದ ಸಚಿವ ಎಂ ಬಿ ಪಾಟೀಲ ಅವರು ಪರಿಶಿಲನೆ ನಡೆಸಿದರು. ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ ಬಿ ಪಾಟೀಲ, ಮಾವಿನ ಹಣ್ಣಿನ ಕಾರ್ಖಾನೆಗೆ ಬೇಟಿ ನೀಡಿದ್ದೆನೆ. ಬೇರೆ ಬೇರೆ ದೇಶಗಳಿಗೆ ತಪ್ತು ಮಾಡುತ್ತಾರೆ. ಎರಡು ಎಕರೆಯಷ್ಡು ರೈತರ ಜಮೀನು ಇದ್ದರೂ ಅವರಿಗೆ ಖಾರ್ಕಾನೆ ಸ್ಥಾಪಿಸಲು ಮುಂದೆ ಅವಕಾಶ ಕೊಡಲಾಗುತ್ತೆ. ಸಿಎಂ ಜೊತೆ ಚರ್ಚೆ ಮಾಡಿದ್ದೆನೆ, ಸಿಎಂ ಜೊತೆ ನಾನು ಮಾತನಾಡುತ್ತೆನೆ. ಮಾವಿನ ಹಣ್ಣಿನಲ್ಲಿರುವ ಗಲೀಜು ತೆಗೆದು ಸ್ವಚ್ಚ ವಾಗಿ ಫಲ್ಪನ್ನ ತಯಾರಿಸಿ ವಿದೆಶಕ್ಕೆ ರಪ್ತು ಮಾಡುತ್ತಾರೆ. ಪೂಡ್ ಪ್ರೋಸೆಸಿಂಗ್ ಖಾರ್ಕಾನೆಗೆ ಬಂದಿದ್ದೆನೆ. ಕ್ವಾರ್ಟಗಳು ಹಂಚಿಕೆ ಆಗಿಲ್ಲ, ಕೈಗಾರಿಕೋದ್ಯಮದಲ್ಲಿರುವ ಲೋಪ ದೋಷಗಳನ್ನ ಸರಿಪಡಿಸಲಾಗುವುದು. ಇಂಡಸ್ಡ್ರೀಸ್ ನಲ್ಲಿ ಅಭಿವೃದ್ಧಿ ಮಾಡಬೇಕಿದೆ ಎಂದರು. ಇನ್ನೂ ಭಾಗಲಕೋಟೆಯಲ್ಲಿ ಗದ್ದಲ ವಿಚಾರವಾಗಿ ಮಾತನಾಡಿ, ವಿಜಯಪುರದಲ್ಲಿ ಇಬ್ಬರು ಸಚಿವರು ಇದ್ದಾರೆ ಅವರು…

Read More

ಬೆಂಗಳೂರು ;- ರಾಜ್ಯ ಸರ್ಕಾರವು ಶಾಲಾ ಮಕ್ಕಳ ಮಣಭಾರದ ಬ್ಯಾಗ್​ಗೆ ತೂಕ ಮಿತಿ ನಿಗದಿಗೊಳಿಸಿದೆ. ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಶಾಲಾ ಬ್ಯಾಗ್​ಗಳ ಭಾರವನ್ನು ನಿಗದಿಪಡಿಸಿದೆ. ಹೆಚ್ಚುವರಿ ಭಾರವನ್ನು ವಿದ್ಯಾರ್ಥಿಗಳ ಬೆನ್ನಿನಿಂದ ಕೆಳಗಿಳಿಸುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಕೊಂಚ ನೆಮ್ಮದಿ ತಂದಿದೆ. ಇದರಿಂದಾಗಿ ಮಕ್ಕಳ ಬೆನ್ನು ಮೂಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೂ ಪೋಷಕರು ಮತ್ತು ಶಿಕ್ಷಕರು ಇದರ ಬಗ್ಗೆ ಅಷ್ಟು ಗಮನ ಹರಿಸಿಲ್ಲ. ಆದರೆ ಈ ಸಮಸ್ಯೆಯ ಗಂಭೀರತೆ ಅರ್ಥ ಮಾಡಿಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿದ್ಯಾರ್ಥಿಗಳ ಬೆನ್ನ ಮೇಲಿನ ಶಾಲಾ ಬ್ಯಾಗ್ ಭಾರವನ್ನು ಕೊಂಚ ಇಳಿಸಿದೆ.

Read More

ನವದೆಹಲಿ: ವಿದೇಶ ಪ್ರವಾಸ ಮುಗಿಸಿ ವಾಪಸ್ಸಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು ಮಣಿಪುರ (Manipura) ದ ಪರಿಸ್ಥಿತಿ ಸೇರಿದಂತೆ ಪ್ರಮುಖ ವಿದ್ಯಮಾನಗಳ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ (AmitShah), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman), ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ (PK Mishra) ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮಿತ್ ಶಾ, ಮಣಿಪುರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh) ಉಪಸ್ಥಿತರಿದ್ದರು. ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಥವಾಗಿವೆ ಎಂದು ತಿಳಿಸಿದ್ದಾರೆ.

Read More

ನವದೆಹಲಿ: ಅಸ್ಸಾಂನಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಹತ್ತು ತಂಡಗಳನ್ನು ನಿಯೋಜಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) 120ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಆದರೆ ನೀರಿನ ಮಟ್ಟವು ಇಂದು ಕಡಿಮೆಯಾಗಲು ಪ್ರಾರಂಭಿಸಿದೆ. “ಅಸ್ಸಾಂನಲ್ಲಿ ಒಟ್ಟು ಹತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಈ ತಂಡಗಳು ತಗ್ಗು ಪ್ರದೇಶಗಳಿಂದ ರಕ್ಷಣಾ ಮತ್ತು ಸ್ಥಳಾಂತರಿಸುವಿಕೆ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ, 123 ವ್ಯಕ್ತಿಗಳು ಮತ್ತು ಹಲವಾರು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ಎನ್‌ಡಿಆರ್‌ಎಫ್ ವಕ್ತಾರರು ತಿಳಿಸಿದ್ದಾರೆ. ಪ್ರತಿ NDRF ತಂಡವು ಸುಮಾರು 35-40 ಸಿಬ್ಬಂದಿಯನ್ನು ಹೊಂದಿದ್ದು, ಈ ತಂಡಗಳು ಪರಿಹಾರ ಸಾಮಗ್ರಿ ವಿತರಣೆಯಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿವೆ ಎಂದು ವಕ್ತಾರರು ಹೇಳಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ತಗ್ಗು ಪ್ರದೇಶಗಳಲ್ಲಿ ತಂಡಗಳು ವಿಚಕ್ಷಣಾ ಕಾರ್ಯ ನಡೆಸುತ್ತಿವೆ ಅವರು ತಿಳಿಸಿದ್ದಾರೆ.

Read More

ಪುಣೆ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪಾಟ್ನಾದಲ್ಲಿ ಕಳೆದ ವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ‘ಪ್ರಧಾನಿ ಹುದ್ದೆ’ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್  ಹೇಳಿದ್ದಾರೆ. ಮಹಾರಾಷ್ಟ್ರದ ಬಾರಾಮತಿ ಪಟ್ಟಣದಲ್ಲಿ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದುಬ್ಬರ, ನಿರುದ್ಯೋಗ ಮತ್ತು ಕೋಮುವಾದಿ ಶಕ್ತಿಗಳನ್ನು ನಿಯಂತ್ರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ  ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಿದರು. ಪ್ರತಿಪಕ್ಷಗಳ ಸಭೆಯನ್ನು ಟೀಕಿಸಿದ್ದಕ್ಕಾಗಿ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು. ಸಮಾವೇಶದ ಬಗ್ಗೆ ಬಿಜೆಪಿ ಏಕೆ ಚಿಂತಿಸುತ್ತಿದೆ ಎಂದ ಪವಾರ್,  ಬಿಜೆಪಿಯವರಿಗೆ ರಾಜಕೀಯ ಪ್ರಬುದ್ಧತೆಯ ಕೊರತೆಯಿದೆ ಎಂದು ಹೇಳಿದ್ದಾರೆ.

Read More

ನವದೆಹಲಿ: 6 ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ (Muslim Nations) ಮೇಲೆ 26,000 ಬಾಂಬ್‌ಗಳ ದಾಳಿ (Bomb Attack) ನಡೆಸಿದವರು ಈಗ ಭಾರತದಲ್ಲಿ ಅಲ್ಪ ಸಂಖ್ಯಾತರ ರಕ್ಷಣೆ ಬಗ್ಗೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman), ಯುಎಸ್‌ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನು (Narendra Modi) ಕೇಳಬೇಕಿತ್ತು ಎಂಬ ಯುಎಸ್‌ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ (Barack Obama) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಒಬಾಮ ಅವರು ಅಧಿಕಾರದಲ್ಲಿದ್ದಾಗಲೇ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆದಿತ್ತು. ಆದ್ರೆ ನಮ್ಮ ಸರ್ಕಾರ ʻಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ʼ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಯುಎಸ್‌ನಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

Read More