Author: Prajatv Kannada

ನವದೆಹಲಿ: ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್  (Brij Bhushan Sharan Singh) ವಿರುದ್ಧದ ಹೋರಾಟವನ್ನು ರಸ್ತೆಯಲ್ಲಲ್ಲ, ನ್ಯಾಯಾಲಯದಲ್ಲಿ ನಡೆಸಲಾಗುತ್ತದೆ ಎಂದು ಕುಸ್ತಿಪಟುಗಳು (Wrestlers) ಎಚ್ಚರಿಕೆ ನೀಡಿದ್ದಾರೆ. ಸಿಂಗ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಅಲ್ಲದೇ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ಅದು ರಸ್ತೆಯ ಮೇಲಲ್ಲ, ನ್ಯಾಯಾಲಯದಲ್ಲಿ ಎಂದು ಟ್ವಿಟ್ಟರ್‍ನಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಪ್ರಕಟಿಸಿದ್ದಾರೆ. ಡಬ್ಲ್ಯುಎಫ್‍ಐನ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದೆ. ಜುಲೈ 11 ರ ಚುನಾವಣೆಗೆ ಸರ್ಕಾರ ನೀಡಿರುವ ಭರವಸೆಗಾಗಿ ಕಾಯುತ್ತೇವೆ. ಅಲ್ಲದೇ ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

Read More

ಭುವನೇಶ್ವರ: ಇತ್ತೀಚೆಗಷ್ಟೇ ಭೀಕರ ರೈಲು ದುರಂತ (Odisha Train Accident) ಸಂಭವಿಸಿದ್ದ ಒಡಿಶಾದಲ್ಲಿ (Odisha) ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು 12 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಎರಡು ಬಸ್ಸುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮದುವೆ (Marriage) ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಬರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಎಂ. ಶರವಣ ವಿವೇಕ್ ತಿಳಿಸಿದ್ದಾರೆ. ಬರ್ಹಾಂಪುರದಲ್ಲಿ ವಿವಾಹಮಹೋತ್ಸವ ಮುಗಿಸಿ ಕೊಂಡು ಪ್ರಯಾಣಿಕರು ದಿಗಪಹಂಡಿ ಬಳಿಕ ಖಂಡದೇಲಿಗೆ ಹಿಂದಿರುಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ 12 ಮಂದಿ ಮೃತಪಟ್ಟಿದ್ದಾರೆ. 7 ಮಂದಿ ಗಾಯಗೊಂಡಿದ್ದು, ಅವರನ್ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ…

Read More

ನಾಗಪುರ;– ಶೀಘ್ರದಲ್ಲೇ ಲೀಟರ್ ಗೆ 15 ರೂ. ದರದ ಎಥನಾಲ್ ಚಾಲಿತ ವಾಹನ ಪರಿಚಯಿಸಲಾಗುತ್ತದೆ ಎಂದು ಕೇಂದ್ರ ಸಚಿವ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾಗಪುರದಲ್ಲಿ ಮಾತನಾಡಿದ ಅವರು, ಎಥನಾಲ್ ಗೆ ಪ್ರತಿ ಲೀಟರ್ 60 ರೂಪಾಯಿ ದರ ಇದ್ದು, ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಎಥನಾಲ್ ಶೇಕಡ 40ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್ ಸರಾಸರಿ ದರ 15 ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ. ಸಂಪೂರ್ಣವಾಗಿ ಎಥನಾಲ್ ನಿಂದ ಚಾಲನೆಯಾಗುವ ವಾಹನಗಳನ್ನು ಟಿವಿಎಸ್, ಹೀರೋ ಸ್ಕೂಟರ್, ಬಜಾಜ್ ಕಂಪನಿಗಳು ತಯಾರಿಸಲಿದ್ದು, ಶೀಘ್ರವೇ ವಾಹನಗಳು ಮಾರುಕಟ್ಟೆಗೆ ಬರಲಿವೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

Read More

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ತಮ್ಮ ಕಂಪನಿ ಬೆಂಬಲಿಸುತ್ತದೆ ಮತ್ತು ದೇಶದ ವಾಣಿಜ್ಯ ವಿಮಾನಯಾನ ಮಾರುಕಟ್ಟೆಯ ತ್ವರಿತ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೋಯಿಂಗ್ ವಿಮಾನ ಸಂಸ್ಥೆಯ ಸಿಇಒ ಡೇವಿಡ್ ಎಲ್ ಕ್ಯಾಲ್ಹೌನ್ ತಿಳಿಸಿದ್ದಾರೆ. ಮೋದಿ ಅಮೆರಿಕಾಗೆ ಭೇಟಿ ನೀಡಿದ್ದ ವೇಳೆ ಅವನ್ನು ಭೇಟಿಯಾದ ಡೇವಿಡ್, ಎಂಟು ದಶಕಗಳ ಏರೋಸ್ಪೇಷ್ ಪಾಲುದಾರಿಕೆ ಕುರಿತಂತೆ ಮಹತ್ವದ ಚರ್ಚಿಸಿದ್ದರು. ಭಾರತದ ವಾಣಿಜ್ಯ ವಾಯುಯಾನ ಮಾರುಕಟ್ಟೆಯ ಕ್ಷಿಪ್ರ ವಿಸ್ತರಣೆಯಲ್ಲಿ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳ ಮಿಷನ್ ಸಿದ್ಧತೆ ಮತ್ತು ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಲು ಬೋಯಿಂಗ್ ಹೆಮ್ಮೆಪಡುತ್ತದೆ ಎಂದರು. ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ, ಭಾರತದಲ್ಲಿ 5,000 ಕ್ಕೂ ಹೆಚ್ಚು ಜನರು ಬೋಯಿಂಗ್ ತಂಡದಲ್ಲಿ ನವೀನ ಕೆಲಸಗಳನ್ನು ಮಾಡುತ್ತಿರುವ ಉನ್ನತ-ಗುಣಮಟ್ಟದ ವೃತ್ತಿಜೀವನವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಭಾರತದಲ್ಲಿ ಬೋಯಿಂಗ್‍ನ ಬೆಳೆಯುತ್ತಿರುವ ಹೂಡಿಕೆಗಳು ದೇಶದೊಂದಿಗಿನ ಕಂಪನಿಯ ಪಾಲುದಾರಿಕೆಯ ಬಲವನ್ನು ಮಾತ್ರವಲ್ಲದೆ ವಿಶಾಲವಾದ ಅಮೆರಿಕ-ಭಾರತದ ಆರ್ಥಿಕ…

Read More

ಆಸ್ಟಿನ್: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ತನ್ನನ್ನು ಅಪಹರಿಸುತ್ತಿದ್ದಾನೆಂದು ತಿಳಿದು ಊಬರ್ ಚಾಲಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ. 48 ವರ್ಷದ ಫೋಬೆ ಕೊಪಸ್ ಎಂಬ ಮಹಿಳೆ ಊಬರ್ ಕಾರು ಚಾಲಕ ಡೇನಿಯಲ್ ಪೀಡ್ರಾ ಗಾರ್ಸಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ. ಮಹಿಳೆಯನ್ನು 1.5 ಮಿಲಿಯನ್ ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎಲ್ ಪಾಸೊ ಪೊಲೀಸರು ತಿಳಿಸಿದ್ದಾರೆ. ಕೆಂಟುಕಿಯಿಂದ ಬಂದಿದ್ದ ಫೋಬೆ ಕೊಪಸ್ ತನ್ನ ಗೆಳೆಯನನ್ನು ಭೇಟಿ ಮಾಡಲು ಟೆಕ್ಸಾಸ್‍ಗೆ ಊಬರ್‌ನಲ್ಲಿ ತೆರಳಲು ನಿರ್ಧರಿಸಿದ್ದಳು. ಹೆದ್ದಾರಿಯಲ್ಲಿ ಮೆಕ್ಸಿಕೋ ಚಿಹ್ನೆಗಳನ್ನು ನೋಡಿ ತನ್ನನ್ನು ಅಪಹರಿಸುತ್ತಿದ್ದಾನೆ ಎಂದು ತಿಳಿದ ಆಕೆ ಈ ಕೃತ್ಯ ಎಸಗಿದ್ದಾಳೆ. ಮಹಿಳೆ ಚಾಲಕನಿಗೆ ಗುಂಡು ಹಾರಿಸುತ್ತಿದ್ದಂತೆ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಪೊಲೀಸರಿಗೆ ಕರೆ ಮಾಡುವ ಮೊದಲು ಆಕೆ ಘಟನೆಯ ಫೋಟೋ ತೆಗೆದು ಅದನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಊಬರ್ ಸಂಸ್ಥೆ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ. ಮಹಿಳೆಯನ್ನು ಊಬರ್…

Read More

ಹುಬ್ಬಳ್ಳಿ: ನಾಳೆ ವಂದೇ ಭಾರತ್​ ರೈಲಿಗೆ ಚಾಲನೆ ನೀಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಆಮದು ಮಾಡಿಕೊಳ್ಳುವ ಕಾಲ ಇತ್ತು. ಇವತ್ತು ನಮ್ಮ ದೇಶ ಹೆಚ್ಚು ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಅಕ್ಕಿ ಎಂದು ಮಾತನಾಡುತ್ತಾರೆ. ನಾವು ಕಾಂಗ್ರೆಸ್​​ನವರಿಗೆ ಉತ್ತರ ಕೊಡಬೇಕಾಗಿದೆ. ಕಳೆದ 3 ವರ್ಷಗಳಿಂದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಅಕ್ಕಿ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಿ ಎಂದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಕ್ಕಿ ಖರೀದಿಸಿ ಕೊಡುತ್ತಿದ್ದಾರೆ. ಅಕ್ಕಿ ವಿತರಣೆ ಮುಂದೆ ಹಾಕಿದರೆ ಹಣ ಉಳಿಸಬಹುದೆಂಬ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. 2 ತಿಂಗಳ ಮುಂದೆ ಹಾಕಿದರೆ 2 ಸಾವಿರ ಕೋಟಿ ಹಣ ಉಳಿಸಬಹುದು. ಹೀಗಾಗಿ ರಾಜ್ಯ ಕಾಂಗ್ರೆಸ್​ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದರು.

Read More

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ಮಳೆಗಾಗಿ ರೈತರಿಂದ ವಿಭಿನ್ನವಾದ ಸಂಪ್ರದಾಯವನ್ನು ನೋಡಬಹುದು…ಬೀದರ ಜಿಲ್ಲೆಯಲ್ಲಿ ಸಕಾಲಕ್ಕೆ ಬಾರದ ಮಳೆರಾಯನ ಆಗಮನಕ್ಕೆ ಹುಲಸೂರ ಪಟ್ಟಣದಲ್ಲಿ ಸಕಾಲಕ್ಕೆ ಮೃಘ ನಕ್ಷತ್ರದಂದು ಮಳೆ ಬಾರದಿದ್ದರೆ ಹುಲಸೂರು ಪಟ್ಟಣದ ಓಣಿಯ ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿ ಹರಕೆ ತೀರಿಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಪಂಚಾಳ ಎನ್ನುವರ ಮನೆಯ ಆವರಣದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಓಣಿಯ ಮಹಿಳೆಯರು, ಬೀಗರು ,ನೆಂಟರ ರೂಪದಲ್ಲಿ ಮದುವೆ ಹಾಜರಾಗುವುದು ವಿಶೇಷ. ತಂದನಂತರ ಹಾಡುಗಳು ಹಾಡುವ ಮುಖಾಂತರ ಗೊಂಬೆಗೆ ಅರಿಶಿನ, ಎಣ್ಣೆಯನ್ನು ಹಚ್ಚಿ , ಸ್ನಾನ ಮಾಡಿಸಿ, ಪುರುಣಿತಿ ಓದುತ್ತಾ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ತೆರಳಿ ದೇವರ ದರ್ಶನ ಪಡೆದು,ಮದುವೆ ಮಂಟಪಕ್ಕೆ ಆಗಮಿಸಿ ಶ್ರಂಗಾರ ಗೋಳಿಸಿದ ಮಂಟಪದಲ್ಲಿ ಅಕ್ಷತೆಯ ಹಾಡು ಹಾಡುವ ಮುಖಾಂತರ ವಿಶೇಷ ಗೋಂಬೆಗಳ ಮದುವೆ ಮಾಡುತ್ತಾರೆ. ನಂತರ ಬೀಗರಿಗೆ,ನೆಂಟರಿಗೆ ಮಹಿಳೆಯರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ.

Read More

ಮಂಡ್ಯ :- ನರೇಗಾ ಯೋಜನೆಯ ಪಂಚ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಜಿ‌ಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಧನರಾಜ್ ಬೊರಾಳೆ ಸೋಮವಾರ ಹೇಳಿದರು‌. ಮದ್ದೂರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿಯಾದ ಬೊರಾಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ನರೇಗಾ ಯೋಜನೆ ಅನುಷ್ಠಾನದ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನರೇಗಾ ಯೋಜನೆಯ ಪಂಚ ಕಾರ್ಯಕ್ರಮ ಯೋಜನೆಗಳಾದ ಕೋಟಿ ವೃಕ್ಷ ಯೋಜನೆ, ಜೈವಿಕ ಅನಿಲ, ಹಸಿರು ಸರೋವರ, ಕೊಳವೆ ಬಾವಿಗಳ ಪುನಶ್ಚೇತನ, ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನವಾಗುತ್ತಿಲ್ಲ. ಹೀಗಾಗಿ ನರೇಗಾ ಯೋಜನೆಯ ಪ್ರಗತಿ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಪಂಚ ಕಾರ್ಯಕ್ರಮಗಳ ಬಗ್ಗೆ ಎಲ್ಲಾ 42 ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಯೋಜನೆ ಅನುಗುಣವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಅರಣ್ಯ, ರೇಷ್ಮೆ,…

Read More

ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌’ಪ್ರೆಸ್‌ ಹೈವೆ ಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನಲೆಯಲ್ಲಿ ರಸ್ತೆ ನಿರ್ಮಾಣ ದಲ್ಲಿರಬಹುದಾದ ಲೋಪ ಪರಿಶೀಲನೆಗೆ ಉನ್ನತ ಮಟ್ಟದ ತಜ್ಞರ ಸಮಿತಿ ಯನ್ನು ರಚಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಇಂದು ವಿಧಾನಸೌಧದಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಮಂಡ್ಯ ಜಿಲ್ಲಾ ಸಂಸದರು ಮತ್ತು ಶಾಸಕರ ಸಮ್ಮುಖದಲ್ಲಿ NHI ಮತ್ತು PWD ಉನ್ನತ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ಮೈಸೂರು ರಸ್ತೆಯಲ್ಲಿ ಅಪಘಾತಗಳು ಪ್ರತಿದಿನ ವರದಿಯಾಗುತ್ತಿರುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದು ಅವೈಜ್ಞಾನಿಕ ವಾಗಿ ರಸ್ತೆ ನಿರ್ಮಿಸಿರುವುದಕ್ಕೆ ಸಚಿವರು,ಸಂಸದರು,ಶಾಸಕರಿಂದ ಅಸಮಾಧಾನ ವ್ಯಕ್ತವಾಯಿತು. ಅವೈಜ್ಞಾನಿಕ ಬೈಪಾಸ್ ರಸ್ತೆ ನಿರ್ಮಿಸಿರುವುದು,ಲೈಟ್ ವ್ಯವಸ್ಥೆ ಇರುವುದಿಲ್ಲ, ಸಂಪರ್ಕ ರಸ್ತೆ ಅಭಿವೃದ್ಧಿ ಸಮರ್ಪಕವಾಗಿರದಿರುವುದು, ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಸೌಲಭ್ಯ ವಿಲ್ಲ. ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ರಸ್ತೆಯಲ್ಲಿ ಜನರು ಓಡಾಡಲು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮಧ್ಯೆ ನಿರ್ಮಿಸಿರುವ ಡಿವೈಡರ್ ಕೇವಲ 225.ಸೆ.ಮಿ ಇದೆ ಇದನ್ನು ಕನಿಷ್ಟ 4 ಅಡಿ…

Read More

ಪ್ರಜಾಟಿವಿಯಲ್ಲಿ ಸುವರ್ಣಾವಕಾಶ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇದ್ದವರು ಈ ಅವಕಾಶ ಬಳಸಿಕೊಳ್ಳಿ. ಅನುಭವ ಉಳ್ಳವರಿಗೆ ಮೊದಲ ಆದ್ಯತೆ . 

Read More