Author: Prajatv Kannada

ದೊಡ್ಡಬಳ್ಳಾಪುರ: ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪುತ್ರರಾದ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಅವರಿಗೆ ಜನಪ್ರತಿ ನಿಧಿಗಳ ವಿಶೆಷ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಹಾಗೂ 20 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.. ಮೆಡಿಕಲ್ ಸೀಟು ಕೊಡಿಸುವುದಾಗಿ ವಂಚಿಸಿದ್ದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್.ಜೆ ಅವರು ಆದೇಶ ನೀಡಿದ್ದಾರೆ. ದೇವರಾಜು ಅರಸು ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಪ್ರಕಾಶ್ ಕುಮಾರ್ ಯರ್ರಪ್ಪ ಎಂಬುವರಿಂದ‌ 45 ಲಕ್ಷ ಪಡೆದು ವಂಚನ ಮಾಡಿದ್ದಾರೆ ಎನ್ನಲಾಗಿದೆ.. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿ ನರಸಿಂಹಸ್ವಾಮಿ ಪರ ವಕೀಲರು ಜಾಮೀನು ಕೋರಲಾಗಿದ್ದು,ಪರಿಶೀಲನೆ ನಡೆಸಿ ನ್ಯಾಯಾಲಯ ಜಾಮೀನು ಮಂಜೂರು‌ ಮಾಡಿದೆ.

Read More

ಹುಬ್ಬಳ್ಳಿ: ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ನಮ್ಮ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡುವ ಬಗ್ಗೆ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸ್ಪಷ್ಟಪಡಿಸಬೇಕು. ಪದೇ ಪದೇ 10 ಕೆಜಿ ಅಕ್ಕಿಗೆ ಅಡ್ಡಗಾಲು ಹಾಕುತ್ತಿದ್ದೇವೆ ಅಂತಾರೆ. ರಾಜ್ಯ ಸರ್ಕಾರ ಮೇ 2ರಂದು ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ 5 ಕೆಜಿ ಕೊಡುತ್ತಿದೆ, ನಾವು 5 ಕೆಜಿ ಕೊಡುತ್ತೇವೆ ಅಂತ ಹೇಳಲಿ. ನಿಮಗೆ ಅಕ್ಕಿ ಬೇಕಾದರೇ ಕೇಂದ್ರ ಸರ್ಕಾರದ ಬಳಿ ಕೇಳಬೇಕು. ನೈಸರ್ಗಿಕ ವಿಕೋಪ ಬಂದಾಗ ನಮಗೆ ಅಕ್ಕಿ ಸ್ಟಾಕ್ ಅವಶ್ಯಕವಿದೆ. ಕಾಂಗ್ರೆಸ್ ಮೊದಲು ಸುಳ್ಳು ಹೇಳೋದು ಬಂದ್ ಮಾಡಬೇಕು ಹುಬ್ಬಳ್ಳಿ ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Read More

ಹುಬ್ಬಳ್ಳಿ: ನಮ್ಮದು ಬಿಟ್ಟು ಸಿಎಮ್ ಹತ್ತು ಕೆಜಿ ಅಕ್ಕಿ ಕೊಡ್ತಾರಾ ಮೊದಲು ಸ್ಪಷ್ಟಪಡಿಸಲಿ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿ ದರು. ನಾವು ಕೇಂದ್ರದಿಂದ ಈಗಾಗಲೇ ದೇಶಾದ್ಯಂತ ಐದು ಕೆಜಿ ಅಕ್ಕಿ ಕೊಡ್ತಾ ಇದ್ದೀವೆ. ಭಾರತೀಯ ಜನತಾ ಪಕ್ಷದ ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ಸೇರಿಸಿ ಎಲ್ಲರಿಗೂ ಒಂದೇ ಕಾನೂನು ಇದೆ ಬಫರ್ ಸ್ಟಾಕ್‌ನ್ನು ನಾವು ಇಟ್ಟುಕೊಳ್ಳಬೇಕಾಗುತ್ತೆ. ಕೇಂದ್ರದ ಅಕ್ಕಿ ಬೇಕಿದ್ರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು ಕೇಂದ್ರದಿಂದ ನಮಗೆ ಸಾಧ್ಯವಿರುವ ಎಲ್ಲಾ ಸಹಕಾರ ಕೊಡುತ್ತೇವೆ ಎಂದ ಅವರು, ಟೆಂಡರ್‌ ಕರೆದು ಕೇಂದ್ರ ಸರ್ಕಾರ ಅಕ್ಕಿ ಖರೀದಿ ಮಾಡುತ್ತೆ ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ ಎಂದರು.

Read More

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮಪಂಚಾಯತ ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಆಯ್ಕೆ ಸಂಬಂಧಿತ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗಳ ಸಮ್ಮುಖದಲ್ಲಿ ಬನಹಟ್ಟಿ ನಗರದ ವೈಭವ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಮೀಸಲಾತಿ ಪಟ್ಟಿ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ದಲ್ಲಿ ಮೊದಲ ಹಂತದಲ್ಲಿ ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯ ಹನ್ನೆರಡು ಗ್ರಾಪಂ ಪಟ್ಟಿ ಆಯ್ಕೆ ಪ್ರಕ್ರಿಯೆ ಯು ಸಂಪೂರ್ಣವಾಗಿ ಡಿಜಿಟಲ್ ಆಧಾರದಲ್ಲಿ ನಡೆಯಿತು. Video Player 00:00 00:14 ತಾಲೂಕಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಸಂಗಿ ಗ್ರಾಪಂ ಹಿಂ.ಅ ಮಹಿಳೆ, ಸಾಮಾನ್ಯ, ಚಿಮ್ಮಡ ಗ್ರಾಪಂ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪ.ಜಾ ಮಹಿಳೆ, ಹಿಪ್ಪರಗಿ ಗ್ರಾಪಂ ಪ.ಜಾ ಮಹಿಳೆ, ಉಪಾಧ್ಯಕ್ಷ ಹಿಂ.ಅ ಮಹಿಳೆ, ಜಗದಾಳ ಗ್ರಾಪಂ ಪ.ಜಾ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕುಲಹಳ್ಳಿ ಗ್ರಾಪಂ ಹಿಂ.ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ನಾವಲಗಿ ಗ್ರಾಪಂ ಸಾಮಾನ್ಯ, ಉಪಾಧ್ಯಕ್ಷ ಪ.ಜಾ ಮಹಿಳೆ, ಯಲ್ಲಟ್ಟಿ ಗ್ರಾಪಂ ಸಾಮಾನ್ಯ, ಉಪಾಧ್ಯಕ್ಷ ಹಿಂ.ಬ, ಕೆಸರಗೊಪ್ಪ ಗ್ರಾಪಂ ಪ.ಜಾ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ,…

Read More

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆದ ಶಾಸಕರ ಶಿಬಿರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು. ಅವರ ಜೀವನದ ಏಳು ಬೀಳುಗಳು ಹಾಗೂ ರಾಜಕೀಯದಲ್ಲಿ ನಡೆದ ಬಂದ ಹಾದಿಯನ್ನು ಸಹ ತಿಳಿಸಿಕೊಟ್ಟರು. ಅದೇನೆಂದರೆ ತುರ್ತು ಪರಿಸ್ಥಿತಿ ಜಾರಿಯಾದಾಗ ನಾನೂ ವಿರೋಧಿಸಿದ್ದೆ. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿ ಟೇಬಲ್ ಹಾಕಿಕೊಂಡು ಭಾಷಣ ಮಾಡಿದ್ದೆ. ತುರ್ತು ಪರಿಸ್ಥಿತಿ ವಿರೋಧಿಸಿ ಹ್ಯಾಂಡ್ ಬಿಲ್ ಹಂಚಿದ್ದೆ. ಆಗ ಪೊಲೀಸರು ಒದ್ದು ಒಳಗೆ ಹಾಕಿದ್ದರು. ತುರ್ತು ಪರಿಸ್ಥಿತಿಯನ್ನ ತೀವ್ರವಾಗಿ ವಿರೋಧಿಸಿದ್ದರಿಂದ ದೇವರಾಜ ಠಾಣೆ ಪೊಲೀಸರು ಒಂದು ದಿನ ಜೈಲಿಗೆ ಹಾಕಿದ್ದರು… ಶಾಸಕರ ತರಬೇತಿ ಶಿಬಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹಂಚಿಕೊಂಡ ಇಂಟರೆಸ್ಟಿಂಗ್ ಸಂಗತಿಗಳಿವು. ನೆಲಮಂಗಲದ ಕ್ಷೇಮವನದಲ್ಲಿ ಜೂನ್ 26ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರೊಂದಿಗೆ ನೂತನ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ. ಮೊದಲ ದಿನದ ಶಿಬಿರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಹಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಅಭಿಪ್ರಾಯ…

Read More

ಬೆಂಗಳೂರು: ವಲಸಿಗರ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ನಾನು ಇದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಹೋಗಲ್ಲ. ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟಲು ಇಷ್ಟ ಪಡುವುದಿಲ್ಲ. ಯಾರು ಸರಿ ಅಂತಲೂ ನಾವು ಹೇಳುವುದಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಏನೇ ಇದ್ದರೂ ಮಾತಾಡುತ್ತೇನೆ. ನಮ್ಮಿಂದ ಏನೂ ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲವು ತಪ್ಪಾಗಿದೆ. ಆ ತಪ್ಪು ಆಗದ ರೀತಿ ಮುಂದೆ ಹೋಗೋಣ ಎಂದರು. ಆಪರೇಷನ್ ಕಮಲವೇ ಬಿಜೆಪಿಗೆ ಮುಳುವಾಯ್ತು ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರವಿಕುಮಮಾರ್, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್​​ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು, ಹೊರಗಿನವರು, ಒಳಗಿನವರು ಎಂಬ ಭೇದ ಇಲ್ಲ ಎಂದರು. ಬಿಜೆಪಿ ಸರ್ಕಾರ ಅವಧಿಯ ಯಾವುದೇ ವಿಚಾರ ತನಿಖೆ ಮಾಡಲಿ. ಯಾವುದಕ್ಕೂ…

Read More

ಬೆಂಗಳೂರು: ಬೆಲೆ ಏರಿಕೆ ಬಗ್ಗೆ ನೋಡಿದ್ರೆ ಶಾಕ್ ಆಗ್ತಿದೆ.ಅಕ್ಕಿ, ಹಾಲು , ವಿದ್ಯುತ್ ಹೀಗೆ ಒಂದರ ಮೇಲೊಂದು ಬೆಲೆ ಏರುತ್ತಲೇ ಹೋಗ್ತಿದ್ರೆ ಜನಸಾಮಾನ್ಯರ ಗತಿ ಏನು? ಈಗ ನೋಡಿದ್ರೆ ಟೊಮ್ಯಾಟೋ ಬೆಲೆ 100 ರೂ. ತಲುಪಿದೆ. ಈ ಬೆಲೆ ಏರಿಕೆಯಿಂದಾಗಿ ಅತ್ತ ರೈತನಿಗೂ ಲಾಭ ಇಲ್ಲ, ಇತ್ತ ಗ್ರಾಹಕನಿಗೂ ಲಾಭವಿಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು. ಸೊಪ್ಪು ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯು ಜನ ಸಾಮ್ಯಾನರಿಗೆ ಶಾಕ್‌ ಕೊಟ್ಟಂತಾಗಿದೆ. ಈ ಕುರಿತು ಮಾಜಿ ಸಿಎಂ ಹೆಚ್‌ಡಿಕೆ ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ಆಪರೇಷನ್ ಕಮಲವೇ ಬಿಜೆಪಿಗೆ ಮುಳುವಾಯ್ತು ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರವಿಕುಮಮಾರ್, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್​​ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು, ಹೊರಗಿನವರು, ಒಳಗಿನವರು ಎಂಬ ಭೇದ ಇಲ್ಲ ಎಂದರು. ಬಿಜೆಪಿ ಸರ್ಕಾರ ಅವಧಿಯ ಯಾವುದೇ ವಿಚಾರ ತನಿಖೆ ಮಾಡಲಿ. ಯಾವುದಕ್ಕೂ ನಾವು ಸೊಪ್ಪು ಹಾಕುವುದಿಲ್ಲ, ಎದುರಿಸುತ್ತೇವೆ. ಸರ್ಕಾರದ ತನಿಖೆಗೆ ನಾವು ಹೆದರಲ್ಲ ಎಂದರು. ಇದನ್ನು ಹೊರತುಪಡಿಸಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶದಿಂದ ಸಭೆ ಮಾಡ್ತಿದೀವಿ ಅದೇ ರೀತಿ ನಮ್ಮ ಕಾರ್ಯಕರ್ತರ ಸಂಕಲ್ಪ ಶಕ್ತಿಯಿಂದ ಎಲ್ಲಾ ಲೋಕಸಭೆ ಸ್ಥಾನಗಳನ್ನೂ ಗೆಲ್ತೇವೆ ಸಣ್ಣಪುಟ್ಟ ಗೊಂದಲಗಳಿವೆ, ಅದನ್ನೆಲ್ಲ ಸರಿಪಡಿಸಿಕೊಳ್ತೇವೆ ಗೊಂದಲಗಳು ಪಕ್ಷದಲ್ಲಿ ಇಲ್ಲ ಅಂತ ನಾನು ಹೇಳಲ್ಲ ಗೊಂದಲಗಳನ್ನು ಸರಿಪಡಿಸಲು ನಮ್ಮ ನಾಯಕರು ಬಹಿರಂಗವಾಗಿ ಮಾತಾಡ್ತಿದಾರೆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಸೇರಿ ಚರ್ಚೆ ಮಾಡಿ ಬಗೆಹರಿಸಿಕೊಳ್ತೇವೆ ಮತ್ತೊಮ್ಮೆ ರಾಜ್ಯದಲ್ಲಿ…

Read More

ಬೆಂಗಳೂರು: ಬೆಸ್ಕಾಂನವರು ಮನೆಗೆ ತೆರಳಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು. ರಾಮನಗರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಅಧಿಕಾರಿಗಳು ಪ್ರಚಾರ ಮಾಡಿ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ. ಬಿಜೆಪಿಯವರು ತಿಂದು ನಮ್ಮ ಮೂತಿಗೆ ಒರಿಸುವ ಯತ್ನ ಮಾಡಿದ್ದಾರೆ ಎಂದರು. ಕಳೆದ ಮೂರು ವರ್ಷಗಳಿಂದ ಅನೇಕ ಪಾದಯಾತ್ರೆಗಳಲ್ಲಿ ಪಾಲ್ಗೊಂಡಿದ್ದೇನೆ. ನೀರಿಗಾಗಿ ನಡಿಗೆ, ಸ್ವಾತಂತ್ರ್ಯ ನಡಿಗೆ, ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದೇವೆ. ಡ್ರಗ್ಸ್ ಸೇವನೆ ಮಾಡಿದರೆ ನೋವು, ಸಾವು ಎರಡೂ ಬರುತ್ತದೆ. ಹೀಗಾಗಿ ಇದರ ಬಗ್ಗೆ ಬಹಳ ಎಚ್ಚರಿಕೆ ಇರಬೇಕು. ನೀವು ಸಾಮಾಜಿಕ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀರಿ. ನೀವು ನಿಮ್ಮ, ನಿಮ್ಮ ಸ್ನೇಹಿತರು ಆತ್ಮೀಯರು, ಸಮಾಜ ಆರೋಗ್ಯಕರ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀರಿ. ನಿಮಗೆ ಅಭಿನಂದನೆಗಳು.

Read More

ಬೆಂಗಳೂರು: ನೀವು ಮೊದಲ ಬಾರಿ ಶಾಸಕರಲ್ಲ, ಪರ್ಮನೆಂಟ್ ಶಾಸಕರಾಗಿರಬೇಕು.  ವಿಧಾನಸಭೆ ಒಳಗೆ ಆತ್ಮವಿಶ್ವಾಸದಿಂದ ಇರಲು ಈ ಶಿಬಿರ ಅನುಕೂಲ. ಈ ಶಿಬಿರದಲ್ಲಿ ಆರೋಗ್ಯದ ಬಗ್ಗೆಯೂ ಶಾಸಕರಿಗೆ ತರಬೇತಿ ನೀಡಲಾಗುತ್ತೆ. ರಾಜಕೀಯ ಒಂದು ಸರ್ಕಸ್ ಕಂಪನಿ ಇದ್ದ ಹಾಗೆ. ಈ ಸರ್ಕಸ್​ ಕಂಪನಿಯಲ್ಲಿ ಹುಲಿ, ಸಿಂಹ, ಕೋತಿ, ಆನೆ ಎಲ್ಲವೂ ಇರುತ್ತೆ. ರಾಜಕೀಯದಲ್ಲೂ ಹಾಗೆ ಎಲ್ಲರೂ ಸಿಂಹ ಆಗಲು ಸಾಧ್ಯವಿಲ್ಲ. ಸರ್ಕಸ್​​ನಲ್ಲಿ ರಿಂಗ್ ಮಾಸ್ಟರ್ ಹಿಂದೆ ಎಲ್ಲಾ ಪ್ರಾಣಿಗಳು ಹೋಗುತ್ತವೆ. ಹಾಗೆ ನೀವು ರಾಜಕೀಯದಲ್ಲಿ ರಿಂಗ್ ಮಾಸ್ಟರ್ ಆಗಬೇಕು. ಶಾಸಕರು ಕ್ಷೇತ್ರದ ಜನರಲ್ಲಿ ಸಮಾನತೆ, ಸೌಹಾರ್ದತೆ ಮೂಡಿಸಬೇಕು ಎಂದು ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದರು

Read More