ಬೆಂಗಳೂರು ;– ಜೂನ್ 30ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ,ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಮಂಡ್ಯ, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
Author: Prajatv Kannada
ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿಯಾಗಿದೆ. ಕೆಂಗೇರಿ ಉಪನಗರದ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ವೇಳೆ ಪದ್ಮಲತ ಅವರ ಮೇಲೆ ಬಿಎಂಟಿಸಿ ಹರಿದಿತ್ತು. ವೃದ್ಧೆಯ ಎರಡು ಕಾಲುಗಳ ಮೇಲೆ ಚಾಲಕ ಬಸ್ ಹರಿಬಿಟ್ಟಿದ್ದ. ಜೂನ್ 24ರಂದು ಸಂಜೆ 5 ಗಂಟೆಗೆ ಘಟನೆ ನಡೆದಿತ್ತು. ಅಪಘಾತ ನಡೆದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ವೃದ್ಧೆಯನ್ನು ಪೊಲೀಸರು ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವಿಗೀಡಾಗಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ;- ಬಕ್ರೀದ್ ಹಬ್ಬಕ್ಕೆ ಇನ್ನೂ ಮೂರು ದಿನ ಬಾಕಿ ಇರುವಂತೆ ರಾಜಧಾನಿ ಬೆಂಗಳೂರಿನಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ. ನಾನಾ ಜಿಲ್ಲೆಗಳಿಂದ ವಿವಿಧ ತಳಿಗಳ ಕುರಿ ಹಾಗೂ ಮೇಕೆಗಳ ದಂಡುಗಳೊಂದಿಗೆ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬಂಡೂರು, ಕಿರಿಗಾವು, ಮೌಳಿ, ಶಿರೋಹಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು, ಚಿತ್ರದುರ್ಗ ಮರಿ ಸೇರಿದಂತೆ ವಿವಿಧ ತಳಿಗಳು ಇಲ್ಲಿವೆ. ಬಂಡೂರು ಕುರಿಗಳು ಕನಿಷ್ಠ ₹ 15ಸಾವಿರದಿಂದ ಗರಿಷ್ಠ ₹ 90ಸಾವಿರದವರೆಗೆ ಮಾರಾಟವಾದರೆ, ಅಮೀನಗಡ ತಳಿಯ ಟಗರಿಗೆ ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 1.20ಲಕ್ಷದವರೆಗೂ ಬಿಕರಿಯಾಗುತ್ತಿವೆ’ ಎಂದು ವ್ಯಾಪಾರಿ ಚಿಕ್ಕಣ್ಣ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಅಮೀನಗಡದಿಂದ 60 ಟಗರು ತಂದಿದ್ದೇನೆ. 20 ಟಗರು ಮಾರಾಟವಾಗಿವೆ. ಈ ವರ್ಷ ವ್ಯಾಪಾರ ಕುಸಿದಿದೆ. ಕುರಿ, ಟಗರಿನ ಬೆಲೆಗೆ ಹೋಲಿಸಿದರೆ ಹಸು, ಎತ್ತುಗಳ ಬೆಲೆ ಕಡಿಮೆ. ಗ್ರಾಹಕರು ಅವುಗಳ ಖರೀದಿಗೆ…
ಬೆಂಗಳೂರು ;- ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭಾನುವಾರ ಸಂಜೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಮಹಾರಾಷ್ಟ್ರದಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆ ಹಾಗೂ ಪಕ್ಷದ ಬಲದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿಂದೆ ಇರುವ ರಾಜ್ಯ ನಾಯಕರ ಪ್ರಯತ್ನ, ಹೋರಾಟ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಜನವಿರೋಧಿ ಅಲೆಯನ್ನು ಬಳಸಿಕೊಂಡ ವಿಧಾನದ ಕುರಿತು ಚರ್ಚಿಸಿದರು. ಇದಾದ ಬಳಿಕ ಸಂಜೆ ಬ್ರಿಗೇಡ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಎಂ ಆರ್ ಜೈ ಶಂಕರ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಸರ್ಕಾರಕ್ಕೆ ನಮ್ಮ ಸಹಕಾರ ಇರಲಿದೆ. ತಮ್ಮಿಂದಲೂ ಸಿಗಬೇಕಾದ ಸಹಕಾರದ ನಿರೀಕ್ಷೆಯನ್ನು ವಿವರಿಸಿದರು.
ಟಿ20 ಟೂರ್ನಿಯಲ್ಲಿ ಲ್ಯಾಂಕಾಷೈರ್ ಲೈಟನಿಂಗ್ ಪರ ಆಡುತ್ತಿರುವ ಜೋಸ್ ಬಟ್ಲರ್ ಅವರು ಡರ್ಬಿಷೈರ್ ಫಾಲ್ಕನ್ಸ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ 83 ರನ್ ಸಿಡಿಸಿದರು. ಆ ಮೂಲಕ ಲ್ಯಾಂಕಾಷೈರ್ ತಂಡದ 27 ರನ್‌ಗಳ ಗೆಲುವಿಗೆ ನೆರವಾದರು. ಈ ಪಂದ್ಯದ ಗೆಲುವಿನ ಮೂಲಕ ಲ್ಯಾಂಕಾಷೈರ್ ತಂಡ ಎರಡು ನಿರ್ಣಾಯಕ ಅಂಕಗಳನ್ನು ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ಸ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಪಂದ್ಯ ಸ್ವಲ್ಪ ತಡವಾಗಿ ಆರಂಭವಾಗಿತ್ತು. ಜೋಸ್ ಬಟ್ಲರ್ ಅವರ ಇನಿಂಗ್ಸ್‌ನಲ್ಲಿ 6 ಭರ್ಜರಿ ಸಿಕ್ಸರ್‌ಗಳಿವೆ. ಅಷ್ಟೇ ಅಲ್ಲದೆ ತಮ್ಮ ರಾಷ್ಟ್ರೀಯ ತಂಡದ ಸಹ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಜೊತೆ ಮುರಿಯದ ಎರಡನೇ ವಿಕೆಟ್‌ಗೆ ಜೋಸ್ ಬಟ್ಲರ್ ಅವರು 41 ಎಸೆತಗಳಲ್ಲಿ 101 ರನ್ ಸಿಡಿಸಿದ್ದರು. ಆ ಮೂಲಕ ಲ್ಯಾಂಕಾಷೈರ್ ಲೈಟನಿಂಗ್ ತಂಡ 15 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 177 ರನ್ ಕಲೆ ಹಾಕಿತು. ಝಮಾನ್ ಖಾನ್ ಅವರ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟ್ ಆದ ಜೋಸ್ ಬಟ್ಲರ್…
ಕುಕ್ಕೆ ಸುಬ್ರಮಣ್ಯ;- ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಕೆ.ಎಲ್. ರಾಹುಲ್, ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ಸೇವೆ ನೆರವೇರಿಸಿದ್ದಾರೆ. ಬಳಿಕ ಹೊಸಳ್ಳಿಗಮ್ಮನ ದರ್ಶನ ಪಡೆದ ಅವರು ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ರಾಹುಲ್ ಅವರಿಗೆ ದೇಗುಲದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದ್ದು, ಬಳಿಕ ದೇವಾಲಯದ ಆಡಳಿತ ಮಂಡಳಿ ಕಚೇರಿಗೂ ರಾಹುಲ್ ಭೇಟಿ ನೀಡಿದ್ದಾರೆ. ಕೆ.ಎಲ್. ರಾಹುಲ್ ಪ್ರತಿ ವರ್ಷವೂ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಕೆತಿಂಗಳುಗಳ ಹಿಂದೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿ ಅವರ ಜೊತೆ ವಿವಾಹವಾಗಿರುವ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದಾರೆ.
ಮುಂಬೈ: ಕಿತ್ತು ತಿನ್ನುವ ಬಡತನ, ಹಳ್ಳಿಯಲ್ಲೇ ಜೀವನ, ಅಪೌಷ್ಟಿಕತೆಯಿಂದ ಬಳಲುತ್ತಾ ಶಕ್ತಿ ಕಳೆದುಕೊಂಡಿದ್ದ ಬಿಹಾರ ಮೂಲದ ಯುವಕ ಮುಕೇಶ್‌ಕುಮಾರ್ ಈಗ ಟೀಂ ಇಂಡಿಯಾ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಹೌದು. ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಕುಗ್ರಾಮದವರಾದ ಮುಖೇಶ್ ಕುಮಾರ್ ಹಳ್ಳಿಯಲ್ಲಿ ಹುಟ್ಟಿ-ಬೆಳೆದು ಬಡತನದಲ್ಲೇ ಜೀವನ ಸಾಗಿಸುತ್ತಿದ್ದರು. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಹಲವು ವರ್ಷಗಳ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಮುಖೇಶ್ ಕುಮಾರ್ ಅವರ ತಂದೆ ಕಾಶಿನಾಥ್ ಸಿಂಗ್ ಟ್ಯಾಕ್ಸಿ ಚಾಲಕರಾಗಿದ್ದರು. ಕುಟುಂಬದ ನಿರ್ವಹಣೆಗೆ ಸಾಕಷ್ಟು ಕಷ್ಟಪಟ್ಟಿದ್ದರು. ಮುಕೇಶ್ ಕುಮಾರ್ ಕ್ರಿಕೆಟ್ ಆಡುವುದು ಆರಂಭದಲ್ಲಿ ಅವರ ತಂದೆಗೆ ಇಷ್ಟವಿರಲಿಲ್ಲ. 2012ರಲ್ಲಿ ಕೋಲ್ಕತ್ತಾಗೆ ಬಂದ ಮುಖೇಶ್ ಕುಮಾರ್, ರಾತ್ರಿ ವೇಳೆ ಈಡನ್ ಗಾರ್ಡನ್ ಕ್ರಿಕೆಟ್ ಅಂಗಳದ ಸಮೀಪದ ಛತ್ರಗಳಲ್ಲೇ ಮಲಗುತ್ತಿದ್ದರು. ಆದ್ರೆ ಮೆದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಮುಕೇಶ್ ತಂದೆ 2019ರಲ್ಲಿ ನಿಧನರಾಗಿದ್ದರು. ಈ ಕುರಿತು ಮಾತನಾಡಿರುವ ಮುಕೇಶ್, ನಾನು ಯಾವಾಗಲೂ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ (Test Cricket…
ಕನ್ನಡದ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಖ್ಯಾತ ನಿರೂಪಕ ಮಾಸ್ಟರ್ ಆನಂದ್‌ಗೆ ರಿಯಲ್ ಎಸ್ಟೇಟ್ ನಲ್ಲಿ ವಂಚನೆ ಎಸಗಲಾಗಿದೆ. ನಿವೇಶನ ನೀಡೋದಾಗಿ ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು ಆನಂದ್ ಅವರಿಂದ 18.50 ಲಕ್ಷ ರೂಪಾಯಿ ಪಡೆದುಕೊಂಡು ಇದೀಗ ವಂಚನೆ ಎಸಗಿದ್ದು ಈ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ. ಮಲ್ಟಿ ಲೀಪ್ ವೆಂಚರ್ಸ್ ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೀಡುವುದಾಗಿ ಕಂಪೆನಿಯು ಹೇಳಿತ್ತು. ಮನಿಕಾ ಕೆಂ.ಎಂ ಇಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ತಿಳಿಸಿತ್ತು. ಕಂಪನಿ ಮಾತು ಕೇಳಿಕೊಂಡು ಮಾಸ್ಟರ್ ಆನಂದ್ ಸೈಟ್ ಖರೀದಿಸಿದ್ದರು. ಆದರೆ, 2020 ರ ಸೆಪ್ಟಂಬರ್ ನಿಂದ 2021 ರ ಅಕ್ಟೋಬರ್ ನ ಅವಧಿಯಲ್ಲಿ ಕಂಪನಿ ತನ್ನನ್ನು ವಂಚಿಸಿದೆ ಎಂದು ಗೊತ್ತಾಗಿದ್ದು ಈ ಬಗ್ಗೆ ಆನಂದ್ ದೂರು ದಾಖಲಿಸಿದ್ದಾರೆ. ಮನಿಕಾ ಕೆಂ ಎಂ ಇಂದ ನಿವೇಶನ (Site) ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ದರಿಂದ ಮಾಸ್ಟರ್ ಆನಂದ್ ಆ ಬಳಿಕ ರಾಮಸಂದ್ರದ…
ಬಿಗ್ ಬಿ ಅಮಿತಾಬ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ ಹಾಗೂ ದಿಶಾ ಪಠಾಣಿ ಸೇರಿದಂತೆ ಬಹುತಾರಾಗಣದ ಪ್ರಾಜೆಕ್ಟ್ ಕೆ ಸಿನಿಮಾ ಆರಂಭಕ್ಕೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮುಂದಿನ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿರುವ ಈ ಸಿನಿಮಾದ ಕುರಿತು ಮತ್ತೊಂದು ಅಪ್ ಡೇಟ್ ಹೊರ ಬಿದ್ದಿದೆ. ಚಿತ್ರಕ್ಕೆ ಬಹುಭಾಷಾ ನಟ ಕಮಲ್ ಹಾಸನ್ ಎಂಟ್ರಿಕೊಟ್ಟಿದ್ದು ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಕಳೆದ ತಿಂಗಳೇ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ಎದುರು ಕಮಲ್ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಇದೀಗ ಸ್ವತಃ ಚಿತ್ರತಂಡ ಸ್ಪೆಷಲ್ ವಿಡಿಯೋದ ಝಲಕ್ ಹಂಚಿಕೊಳ್ಳುವ ಮೂಲಕ ಸುದ್ದಿಯನ್ನು ಅಧಿಕೃತಗೊಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ನಾನು 50 ವರ್ಷದ ಹಿಂದೆ ನೃತ್ಯ ಸಹಾಯಕ ಮತ್ತು ಸಹಾಯಕ ನಿರ್ದೇಶಕನಾಗಿದ್ದಾಗ ನಿರ್ಮಾಣ ವಲಯದಲ್ಲಿ ಅಶ್ವಿನಿ ದತ್ ಹೆಸರು ದೊಡ್ಡ ಮಟ್ಟದಲ್ಲಿ ಖ್ಯಾತಿಗೊಳಿಸಿತ್ತು. ಐವತ್ತು ವರ್ಷದ…
ತೆಲುಗಿನ ವರ ಪ್ರಸಾದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಡಾ.ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಯವಾದ ನಟಿ ಇಶಾ ಕೋಪಿಕರ್ ಇಂದಿಗೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ನಟಿ ಅಲ್ಟ್ರಾಸಾನೋಗ್ರಾಫಿಕ್ ಫೋಟೋ ಹಂಚಿಕೊಳ್ಳುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದರು. 46ನೇ ವಯಸ್ಸಿನಲ್ಲಿ ನಟಿ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಶುಭ ಹಾರೈಸಿದ್ದರು. ಆದ್ರೆ ಇದೀಗ ನಡೆದಿರುವುದೇ ಬೇರೆಯಾಗಿದ್ದ ನಟಿಯ ಪ್ರೀತಿಗೆ ಅಭಿಮಾನಿಗಳು ಮನ ಸೋತಿದ್ದಾರೆ. 2009ರಲ್ಲಿ ಟಿಮ್ಮಿ ನಾರಂಗ್ ಅವರನ್ನು ಮದುವೆಯಾದ ನಟಿ ಇಶಾ ಕೋಪಿಕರ್ ಗೆ ಈಗಾಗಲೇ ರಿಯಾನ್ನಾ ಹೆಸರಿನ ಮಗಳಿದ್ದಾಳೆ. ಈ ಮಧ್ಯೆ ಮತ್ತೋರ್ವ ಮಗುವಿಗೆ ಇಶಾ ಜನ್ಮ ನೀಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಇಶಾ ತಮ್ಮ ಮುದ್ದಿನ ನಾಯಿ ತಾಯಿಯಾಗಿದ್ದಾಳೆ ಎನ್ನುವುದನ್ನು ಈ ರೀತಿಯಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಇಶಾ ಅವರು ತಮ್ಮ ಮುದ್ದಿನ ಶ್ವಾನದ ಮೇಲಿಟ್ಟಿರುವ ಪ್ರೀತಿಯನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮರಾಠಿ…