ಕೈರೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಈಜಿಪ್ಟ್ ಪ್ರವಾಸದಲ್ಲಿದ್ದಾರೆ. ಶನಿವಾರ ಹಾಗೂ ಭಾನುವಾರ ಈಜಿಪ್ಟ್ ಗೆ ತೆರಳಿದ್ದು ಮೋದಿ ಅವರಿಗೆ ಈ ವೇಳೆ ಈಜಿಪ್ಟ್ ನ ಅತ್ಯುನ್ನತ ರಾಜ್ಯ ಗೌರವವಾದ ʼಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ದಿ ನೈಲ್ ಅನ್ನು ನೀಡಿ ಗೌರವಿಸಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿ ಅವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ. ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯು 3 ಚದರ ಯುನಿಟ್‌ಗಳನ್ನೊಳಗೊಂಡ ಶುದ್ಧ ಚಿನ್ನದ ಮಾಲೆಯಾಗಿದೆ. ಅದರ ಮೇಲೆ ಫರೋನಿಕ್ ಚಿಹ್ನೆಗಳಿದ್ದು, ಮೊದಲ ಯುನಿಟ್‌ನಲ್ಲಿ ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆಯನ್ನು ಹೋಲುತ್ತದೆ. ಎರಡನೇ ಘಟಕದಲ್ಲಿ ನೈಲ್ ನದಿಯಿಂದಾದ ಸಮೃದ್ಧಿ ಹಾಗೂ ಸಂತೋಷವನ್ನು ಹೋಲುತ್ತದೆ ಮತ್ತು ಮೂರನೇ ಘಟಕದಲ್ಲಿ ಸಂಪತ್ತು ಹಾಗೂ ಸಹಿಷ್ಣುತೆಯನ್ನು ಸೂಚಿಸುತ್ತದೆ. ಅಮೂಲ್ಯ ಆಭರಣಗಳಿಂದ ಅಲಂಕರಿಸಲ್ಪಟ್ಟಿರುವ ವೃತ್ತಾಕಾರದ…
Author: Prajatv Kannada
ನವದೆಹಲಿ: ದೆಹಲಿಯ ಟೆಕ್ಕಿಯೊಬ್ಬರಿಗೆ (Delhi Techie) ಆರ್ಡರ್ ಮಾಡಿದ್ದ ಪ್ರಾಡಕ್ಟ್ 4 ವರ್ಷಗಳ ಬಳಿಕ ಡೆಲಿವರಿ ಆಗಿರುವ ಅಚ್ಚರಿದಾಯಕ ಘಟನೆ ನಡೆದಿದೆ. ದೆಹಲಿ ಮೂಲದ ಟೆಕ್ಕಿ ನಿತಿನ್ ಅಗರ್ವಾಲ್ ಅವರು 2019ರ ಸಂದರ್ಭದಲ್ಲಿ ಅಲಿ ಎಕ್ಸ್‌ಪ್ರೆಸ್ ಸೈಟ್ ಮೂಲಕ ಪ್ರಾಡಕ್ಟ್‌ವೊಂದನ್ನು ಆರ್ಡರ್ ಮಾಡಿದ್ದರು. ಅದು 2023 ಅಂದರೆ ನಾಲ್ಕು ವರ್ಷದ ಬಳಿಕ ಡೆಲಿವರಿ ಆಗಿದೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಲಿ ಎಕ್ಸ್‌ಪ್ರೆಸ್ (AliExpress) ಈಗ ಭಾರತದಲ್ಲಿ ಬ್ಯಾನ್ ಆಗಿದೆ. ಇತರೆ 58 ಆ್ಯಪ್‌ಗಳ ಜೊತೆಗೆ ಇದನ್ನೂ ಭಾರತ ಸರ್ಕಾರ ಬ್ಯಾನ್ ಮಾಡಿತ್ತು. ಈ ಸೈಟ್ ಬ್ಯಾನ್ ಆಗುವ ಮುನ್ನವೇ ಟೆಕ್ಕಿ ಆರ್ಡರ್ ಮಾಡಿದ್ದರು ಎಂಬುದು ತಿಳಿದುಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟೆಕ್ಕಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ʼಎಂದಿಗೂ ಭರವಸೆ ಕಳೆದುಕೊಳ್ಳಬೇಡಿ.. ಅಲಿ ಎಕ್ಸ್‌ಪ್ರೆಸ್‌ನಲ್ಲಿ ನಾನು 2019ರಲ್ಲಿ ಆರ್ಡರ್ ಮಾಡಿದ್ದ ಪ್ರಾಡಕ್ಟ್ ಕೊನೆಗೂ ಇಂದು ನನ್ನ ಕೈ ಸೇರಿದೆʼ ಎಂದು ಬರೆದುಕೊಂಡಿದ್ದಾರೆ. ದೆಹಲಿ ಟೆಕ್ಕಿಯ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು…
ಕಠ್ಮಂಡು;– ವಿಶ್ವವಿಖ್ಯಾತ ನೇಪಾಳದ ಪಶುಪತಿನಾಥ ದೇಗುಲದಲ್ಲಿ 10 ಕೆಜಿ ಚಿನ್ನ ಕಳವಾಗಿರುವ ಹಿನ್ನೆಲೆ, ತನಿಖೆಗಾಗಿ ದೇವಸ್ಥಾನ ತಾತ್ಕಾಲಿಕ ಬಂದ್ ಮಾಡಲಾಗಿದೆ. ನೇಪಾಳದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ದೇವಾಲಯವನ್ನು ತನಿಖೆಗಾಗಿ ವಶಕ್ಕೆ ಪಡೆದಿದೆ. ದೇವರ ಚಿನ್ನದ ಆಭರಣವು ಕಾಣೆಯಾದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದ ಬಳಿಕ ಸರ್ಕಾರವು ತನಿಖೆಗೆ ನಿರ್ದೇಶನ ನೀಡಿದೆ. ಇನ್ನು ದೇವಸ್ಥಾನದ ಆವರಣದಲ್ಲಿ ನೇಪಾಳ ಸೇನೆಯ ಯೋಧರು, ಹತ್ತಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತನಿಖಾ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ನೇಪಾಳದ ಕಾಠ್ಮಂಡುವಿನ ಪೂರ್ವ ಭಾಗದ ಭಾಗವತಿ ನದಿಯ ದಡದಲ್ಲಿರುವ ಪಶುಪತಿನಾಥ ದೇವಾಲಯವು ವಿಶ್ವದ ಅತ್ಯಂತ ಮಹತ್ವ ಹಾಗೂ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಒಳಗೆ ಪ್ರವೇಶಿಸಲು ಕೇವಲ ಹಿಂದೂಗಳಿಗೆ ಮಾತ್ರ ಅವಕಾಶವಿತ್ತಂತೆ. ಉಳಿದವರು ದೇವಸ್ಥಾನದ ಇನ್ನೊಂದು ಭಾಗದಲ್ಲಿ ನಿಂತು ನೋಡಬಹುದಿತ್ತು. ಈ ದೇವಸ್ಥಾನವು ಅತ್ಯಂತ ಹಳೆಯ ದೇವಸ್ಥಾನವಾಗಿದ್ದು ಇದು ಯಾವಾಗ ನಿರ್ಮಾಣವಾಯಿತು ಎಂಬ ಬಗ್ಗೆ ನಿಖರ ಮಾಹಿತಿ…
ವಿಜಯಪುರ: ನಾನು ಶಿವಾಜಿಯ ವಂಶಸ್ಥ, ರಾಣಾ ಪ್ರತಾಪರ ವಂಶಸ್ಥ, ನಾನು ಸಾರ್ವಕರ್ ವಂಶಸ್ಥ ನನ್ನನ್ನ ಜೈಲಿಗೆ ಹಾಕ್ತೀರಾ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಸಚಿವ ಎಂ.ಬಿ ಪಾಟೀಲ್ (MB Patil) ಅವರನ್ನ ಪ್ರಶ್ನಿಸಿದ್ದಾರೆ. ಎಂ.ಬಿ ಪಾಟೀಲ್ ಮತಕ್ಷೇತ್ರ ಬಬಲೇಶ್ವರದಲ್ಲಿ ನಡೆದ ಗೋ ಸಮಾವೇಶದಲ್ಲಿ ಸ್ವಕ್ಷೇತ್ರದ ಶಾಸಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ನೀವು ಆಯ್ಕೆ ಮಾಡಿರುವ ಶಾಸಕರು ಹೇಳ್ತಾರೆ, ಚಕ್ರವರ್ತಿ ಬಾಲ ಬಿಚ್ಚಿದ್ರೆ ಜೈಲಿಗೆ ಹಾಕ್ತೀವಿ ಅಂತ. ಅಯ್ಯೋ ಪುಣಾತ್ಮ ನಾನು ಶಿವಾಜಿಯ ವಂಶಸ್ಥ, ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ (VD Savarkar) ವಂಶಸ್ಥ. ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು ನಾನು. ನನ್ನನ್ನ ಜೈಲಿಗೆ ಹಾಕ್ತಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಪಠ್ಯ ಪುಸ್ತಕದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ. ಹಿಜಬ್, ಆಜಾನ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಕೆಲಸ ಮಾಡಿದರೆ ಸೂಲಿಬೆಲೆಯನ್ನ ಜೈಲಿಗೆ ಕಳುಹಿಸಲಾಗುವುದು ಎಂದು ಸಚಿವ ಎಂಬಿಪಿ…
ಚಿಕ್ಕೋಡಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Bommai) ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Yatnal) ನಡುವೆ ಪರೋಕ್ಷವಾಗಿ ಮಾತಿನ ಪೈಟ್ ನಡೆದಿದೆ. ಈ ವಿಚಾರವಾಗಿ ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತಣಾಡಿದ ಬೊಮ್ಮಾಯಿ, ನಮ್ಮಿಬ್ಬರ ನಡುವೆ ಭಿನ್ನಾಬಿಪ್ರಾಯದ ಪ್ರಶ್ನೇಯೇ ಇಲ್ಲ. ನಾವು ಒಗ್ಗಟ್ಟಾಗಿ, ಒಂದಾಗಿ ಕಾಂಗ್ರೆಸ್ ಸೋಲಿಸುವ ಕುರಿತು ಮಾತನಾಡಿದ್ದೇವೆ ಹೊರತು ಮತ್ತೇನೂ ಅಲ್ಲ. ಬೆಳಗ್ಗೆಯಿಂದ ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಅವರ ಕಾರಿನಲ್ಲೇ ಬಂದಿದ್ದೇನೆ. ಇಬ್ಬರೂ ಅಣ್ಣತಮ್ಮಂದಿರ ಹಾಗೆ ಇದ್ದೇವೆ. ಇಬ್ಬರದ್ದೂ ಮೂವತ್ತು ವರ್ಷಗಳ ದೋಸ್ತಿ. ರಾಜಕಾರಣ ಮೀರಿ ನಮ್ಮಿಬ್ಬರ ಸ್ನೇಹವಿದೆ. ಅವರದೇ ಆದ ಶೈಲಿಯಲ್ಲಿ ಆ ರೀತಿ ಹೇಳಿದ್ದಾರೆ. ಅವರು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ನಾನು ಸಾರ್ವಜನಿಕವಾಗಿಯೇ ಸ್ಪಷ್ಟಿಕರಣ ಕೊಟ್ಟಿದ್ದೇನೆ. ಈಗಲೂ ಹೇಳುತ್ತೇನೆ ನಮ್ಮಿಬ್ಬರದ್ದು ಒಂದೇ ಡಿಎನ್ಎ, ಅದು ಬಿಜೆಪಿ ಡಿಎನ್ಎ ಎಂದರು
ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಸೋಮಶೇಖರ್ ಗುರೂಜಿ B.Sc M.935348 8403 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಸಪ್ತಮಿ 12:25 AM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಉತ್ತರ ಫಾಲ್ಗುಣಿ 12:44 PM ತನಕ ನಂತರ ಹಸ್ತ ಯೋಗ: ಇವತ್ತು ವ್ಯತೀಪಾತ 06:07 AM ತನಕ ನಂತರ ವರಿಯಾನ್ ಕರಣ: ಇವತ್ತು ವಿಷ್ಟಿ 01:19 PM ತನಕ ನಂತರ ಬವ ರಾಹು ಕಾಲ:04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 04.46 AM to 06.32 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:52 ನಿಂದ ಮ.12:44 ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ಕಿರು ಪ್ರವಾಸ ಸಾಧ್ಯತೆ, ಸಣ್ಣ ಉದ್ಯಮ ಪ್ರಾರಂಭ ಯೋಜನೆ…
ರಾಜ್ಯ ಸರ್ಕಾರದಿಂದ (Government) ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. SC, ST ವಿದ್ಯಾರ್ಥಿಗಳಿಗೆ ಸೋನಾ ಮಸೂರಿ ಅಕ್ಕಿ ವಿತರಿಸಲು ಸಚಿವರು ಆದೇಶ ಹೊರಡಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಮಟ್ಟದ ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿನಿಲಯಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ಸೋನಾ ಮಸೂರಿ ಊಟ ಮಾಡಲಿ ಎಂಬ ಉದ್ದೇಶದಿಂದ 2,50 ಲಕ್ಷ ಮಕ್ಕಳ ಊಟಕ್ಕೆ ಅಕ್ಕಿ ನೀಡಲು ನಿರ್ಧರಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಮಟ್ಟದ ಎಸ್.ಸಿ., ಎಸ್.ಟಿ. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಊಟಕ್ಕೆ ಸೋನಾಮಸೂರಿ ನೀಡುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ವಿಕಾಸಸೌಧದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 2023 -24 ನೇ ಸಾಲಿನ ಎಸ್.ಸಿ.ಎಸ್.ಪಿ & ಟಿ.ಎಸ್.ಪಿ ಆಯವ್ಯಯ ಹಂಚಿಕೆಯ ಬಗ್ಗೆ ನೋಡಲ್ ಏಜೆನ್ಸಿ…
ಬೆಂಗಳೂರು ;- ಸರ್ಜನ್ಗಳ ಸೇವೆ ಅಳತೆಗೂ ಮೀರಿದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಹೇಳಿದ್ದಾರೆ. ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಹಾಗೂ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಶಸ್ತ್ರಚಿಕಿತ್ಸಕರ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಜನ್ಗಳು ಶಸ್ತ್ರಚಿಕಿತ್ಸೆ ನಡೆಸುವಾಗ ಜೀವನದಲ್ಲಿ ಒಮ್ಮೆ ಮಾತ್ರ ನೋವು ನೀಡುತ್ತಾರೆ. ಆದರೆ ಜೀವನ ಪರ್ಯಂತ ನಗು ನಗುತಾ ಬದುಕು ಸಾಗಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಶಸ್ತ್ರಚಿಕಿತ್ಸಕರು ಮಾನವ ರೂಪದ ದೇವರು ಎಂದರು. ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಸಣ್ಣ ಸಣ್ಣ ವಿಚಾರಗಳು ಸಹ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಆಗುತ್ತಿವೆ. ವೈದ್ಯಕೀಯ ಕಾನೂನು ರೂಪಿಸುವ ಮುನ್ನ ವೈದ್ಯಕೀಯ ಸಮೂಹದ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ನಿರುಪಯುಕ್ತವಾಗಿದೆ ಎಂದರು. ಈ ವೇಳೆ ಕರ್ನಾಟಕ ಸ್ಟೇಟ್…
ಬಿಜೆಪಿಯಲ್ಲಿ (BJP) ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗ್ತಾನೇ ಇದೆ, ಅಧ್ಯಕ್ಷ ಸ್ಥಾನ ನನಗೆ ಬೇಕು ಅಂತ ಮಾಜಿ ಸಚಿವ ವಿ. ಸೋಮಣ್ಣ ಪಟ್ಟು ಹಿಡಿದಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಸೋಮಣ್ಣ ಇದ್ದಕ್ಕಿದ್ದಂತೆ ಕಾರ್ಯಕಾರಿಣಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ, ಇತ್ತ ಮಾಜಿ ಸಿಎಂ ಬಿಎಸ್ವೈ ಪಕ್ಷದಲ್ಲಿ ಮತ್ತೆ ಸಕ್ರಿಯರಾಗ್ತಿದ್ದು ಹಿಡಿತ ಕೈತಪ್ಪದಂತೆ ಎಚ್ಚರಿಕೆ ವಹಿಸ್ತಿದ್ದಾರೆ. ಸೋಮಣ್ಣರನ್ನ ಬಿಎಲ್ ಸಂತೋಷ್ ಮುಂದೆ ಬಿಟ್ಟು ಗೇಮ್ ಶುರುಮಾಡಿದ್ರಾ ಅನ್ನೋ ಅನುಮಾನ ಶುರುವಾಗಿದ್ದು, ಮತ್ತೆ ಬಿಎಸ್ ವೈ BSY – Santosh ಸಂತೋಷ್ ಕೋಲ್ಡ್ ವಾರ್ ತಾರಕ್ಕೇರೊ ಲಕ್ಷಣಗಳು ಕಂಡುಬರ್ತಿವೆ. ವಿಧಾನಸಭಾ ಚುನಾವಣೆಯಲ್ಲಿ ಸೋತುಸುಣ್ಣವಾಗಿರುವ ಬಿಜೆಪಿ ಪಕ್ಷ ಹೊಸ ಸಾರಥಿಯ ಹುಡುಕಾಟದಲ್ಲಿದೆ ಇಷ್ಟುದಿನ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಅಶ್ವಥ್ ನಾರಾಯಣ್, ಸಿಟಿ ರವಿ, ಶೋಭಾ ಕರಂದ್ಲಾಜೆ,ಸುನೀಲ್ ಕುಮಾರ್ ಅನ್ನೋ ಹೆಸರುಗಳು ಕೇಳಿಬರ್ತಿದ್ದೋ. ಇದೀಗ ಈ ರೇಸ್ ಗೆ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮಾಜಿ ಸಚಿವ ವಿ.ಸೋಮಣ್ಣ ಬಂದಿದ್ದು ರಣಾಂಗಣ ನಿಧಾನವಾಗಿ ರಂಗೇರ್ತಿದೆ. ಹೈಕಮಾಂಡ್…
ಆನೇಕಲ್ ;- ಕಲುಷಿತ ನೀರು ಕುಡಿದು ಹಸು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಜರುಗಿದೆ. ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ನೀರನ್ನು ಶುದ್ಧೀಕರಿಸದೆ ಕಾರ್ಖಾನೆಗಳು ಚರಂಡಿಗೆ ಹರಿದುಬಿಡುತ್ತಿದ್ದು, ಇದರಿಂದ ನೀರು ಕಲುಷಿತಗೊಂಡಿದೆ. ಇದನ್ನು ಸೇವಿಸಿದ ಹಸು ಸಾವನ್ನಪ್ಪಿದೆ. ಸುಶ್ಚಿತ್ ಹರ್ಬಲ್ಸ್,ಎಸ್ ಎಸ್ ಬಯೋಕೆಮ್ಸ್,ಗ್ರೀನ್ ಕೆಂ. ಲೇಕ್ ಕೆಮಿಕಲ್, ಫೈನ್ ಕಲರ್, ನ್ಯಾಚುರಲ್ ಕ್ಯಾಪ್ಸ್,ಕಟ್ರಾ, ಸೋನಿಯಾ ಆರ್ಗನಿಕ್ಸ್ ಇನ್ನಿತರ ಕಾರ್ಖಾನೆಗಳು ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಸೇರಿದ್ದು, ಕಾನೂನುಗಳನ್ನು ಗಾಳಿಗೆ ತೂರಿ ಕೆಮಿಕಲ್ ನೀರನ್ನು ಹೊರಗೆ ಬಿಡುತ್ತಿವೆ. ಮತ್ತೊಂದೆಡೆ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಹೊಗೆಯಿಂದಾಗಿ ಕಾಯಿಲೆ ಬರುವ ಸಾಧ್ಯತೆ ಇದ್ದು, ಸರ್ಕಾರಿ ಶಾಲೆಗಳಿದ್ದರೂ ಸಹ ರಾಜಾರೋಷವಾಗಿ ಕೆಮಿಕಲ್ ನೀರನ್ನು ಹೊರ ಬಿಡುತ್ತಿವೆ. ಇದರಿಂದ ಶಾಲಾ ಮಕ್ಕಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ ಗಬ್ಬು ವಾಸನೆಯಿಂದ ದಿನನಿತ್ಯ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಮಿಕಲ್ ನೀರು ಕುಡಿದು ಆಗಾಗ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಆದರೂ ಕೂಡ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ನೆರಳೂರು ಗ್ರಾಮ…