ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಈಗ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಹಗ್ಗಜಗ್ಗಾಟ ಜೋರಾಗಿದೆ. ಈ ಕುರಿತು ಬಿಜೆಪಿ ನಾಯಕರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ (CT Ravi)ಅವರು ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಮ್ಮೆ ರಾಜೀನಾಮೆ ನೀಡಿದ್ದೇನೆ ಅಂತಾರೆ. ಆಮೇಲೆ ಇಲ್ಲ ಅಂತಾರೆ. ಆರ್.ಅಶೋಕ್ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ. ಪಾರ್ಲಿಮೆಂಟ್ ಎಲೆಕ್ಷನ್ ವೇಳೆ ಬದಲಾವಣೆ ಇಲ್ಲ ಅನಿಸುತ್ತೆ. ನನ್ನ ಗಮನಕ್ಕೆ ಬಂದಿಲ್ಲ ಅಂತಾರೆ. ಆದರೆ ಸಿ.ಟಿ.ರವಿ ಅವರು ಈ ಪ್ರಶ್ನೆಗೆ ನಾನು ಉತ್ತರ ನೀಡಲ್ಲ. ಸಾರಿ ಟು ಸೆ. ಐ ವಿಲ್ ನಾಟ್ ಆನ್ಸರ್ ದಿಸ್ ಕ್ವಷ್ಚನ್ ಎಂದಿದ್ದಾರೆ. ಸಿ.ಟಿ.ರವಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನಾನು ಯಾವುದೇ ರೇಸ್‌ನಲ್ಲಿ ಇಲ್ಲ. ನಾನು ಈಗಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಕಾರ್ಯಕರ್ತ ಅನ್ನೋದನ್ನ ಯಾವತ್ತೂ, ಯಾರು ಕಿತ್ತುಕೊಳ್ಳಲು ಆಗುವುದಿಲ್ಲ. ಪಕ್ಷ ನನಗೆ ಎಕ್ಸ್‌ಪೀರಿಯನ್ಸ್ ಆಗಲು ಹಾಗೂ ಎಕ್ಸ್‌ಪೋಸ್ ಆಗೋದಕ್ಕೆ…
Author: Prajatv Kannada
ಬೀದರ್: ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆಯುವ ಕೆಲಸ ಮಾಡಿದೆ ಎಂದು ಬೀದರ್ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿ ಕೊಡುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅಕ್ಕಿ ವಿತರಿಸುವ ಕೆಲಸ ಮಾಡಿದೆ. ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಭರವಸೆಯಂತೆ 10 ಕೆಜಿ ಅಕ್ಕಿ ಕೊಡಲಾಗದೆ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಹಿಂದೂ ಕಾರ್ಯಕರ್ತರು, ರಾಷ್ಟ್ರ ಚಿಂತಕರ ಮೇಲೆ ಕೇಸ್ ಹಾಕ್ತಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಏಕೆ ಕೇಸ್ ಹಾಕಿಲ್ಲ? ಎಂದು ಕಿಡಿಕಾರಿದರು.
ಚಿತ್ರದುರ್ಗ: ಕಾಂಗ್ರೆಸ್ ಗ್ಯಾರಂಟಿಗಳ ಭರವಸೆ ನೀಡಿ ಗೆದ್ದಿದೆ. ನಮ್ಮವರು ಸಹ ನಂಬಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಈಗ ಭರವಸೆ ಈಡೇರಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ( Yediyurappa) ಹೇಳಿದ್ದಾರೆ. 10 ಕೆಜಿ ಅಕ್ಕಿಯಲ್ಲಿ 1 ಕೆಜಿ ಕಡಿಮೆಯಾದರೂ ನಾವು ಬಿಡಲ್ಲ. ಮಾಜಿ ಶಾಸಕರ ಜೊತೆ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಅಧಿವೇಶನದ ವೇಳೆ 10 ದಿನ ಧರಣಿ ನಡೆಸುತ್ತೇವೆ. ಜನರಿಗೆ ಟೋಪಿ ಹಾಕಿ, ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ವಿಶ್ವಾಸದ್ರೋಹ ಮಾಡಿದ ಕಾಂಗ್ರೆಸ್ ಬಣ್ಣ ಬಯಲು ಮಾಡಬೇಕು. ಸೋಲಿನಿಂದ ಬಿಜೆಪಿ ಕಾರ್ಯಕರ್ತರು ದೃತಿಗೆಟ್ಟಿಲ್ಲ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ಚುನಾವಣೆ ಗೆಲ್ಲುವ ವಿಶ್ವಾಸವಿದೆ ಎಂದರು.
ಚಿತ್ರದುರ್ಗ: 1 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ನೋಡಿದ್ದೇವೆ. ಕರ್ನಾಟಕದ ಮಾಲೀಕರಂತೆ ಸಚಿವರು ಮಾತನಾಡುತ್ತಿದ್ದಾರೆ. ಸ್ವಯಂ ಘೋಷಿತ ಸಾಹಿತಿಗಳು, ಶಿಕ್ಷಣ ತಜ್ಞರು ಸಿಎಂ ಭೇಟಿಯಾಗಿ ಬಿಜೆಪಿ ಕಾಲದಲ್ಲಿ ಆಗಿರುವ ಪಠ್ಯ ಪುಸ್ತಕ ಬದಲಾವಣೆಗೆ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಒಪ್ಪಿದರು. ರೀತಿ ನೀತಿ ಇಲ್ಲದೆ ಪಠ್ಯ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಪಠ್ಯ ಬದಲಾವಣೆಯಲ್ಲೂ ಒಂದು ಸಮುದಾಯದ ಮತ ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳು ಏನು ಕಲಿಯಬೇಕೆಂಬ ಆಲೋಚನೆ ಇಲ್ಲ. ಪಠ್ಯದಲ್ಲಿನ ದೋಷ ಹೇಳಿ ತಿದ್ದುವ ಕೆಲಸ ಮಾಡಲಿಲ್ಲ. ಮುಸಲ್ಮಾನರ ಮತ ಸೆಳೆಯಲು ಪ್ರಯತ್ನ ಮಾಡಿದ್ದಾರೆ ಎಂದರು.
ಯಾದಗಿರಿ: ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಸ್ವ ಕ್ಷೇತ್ರದಲ್ಲೇ ಇಬ್ಬರು ಗ್ರಾಮ ಪಂಚಾಯತ್ ಸದಸ್ಯೆಯರನ್ನು ಹೈಜಾಕ್ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಆಯ್ಕೆಗೆ ಬಂದ ಹಿನ್ನೆಲೆ ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ಹಾಡುಹಗಲೇ ನಗನೂರು ಗ್ರಾಮ ಪಂಚಾಯತಿಯ ಸದಸ್ಯೆಯರಾದ, ಖಾನಾಪುರ ಗ್ರಾಮದ ನೀಲಗಂಗಮ್ಮ ಹಾಗೂ ಫಾತೀಮಾ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹಾಂತಗೌಡ ಪಾಟೀಲ, ಅನಂತರೆಡ್ಡಿ, ಕೆಂಚಗೌಡ್ರ ಹಾಗೂ ಕಾಂಗ್ರೆಸ್ ಮುಖಂಡ ಶರಣಗೌಡ ಕೆಂಚಗೋಳರ ವಿರುದ್ಧ ಕಿಡ್ನಾಪ್ ಆರೋಪ ಕೇಳಿಬಂದಿದೆ. ಇತ್ತ ಇಬ್ಬರು ಸದಸ್ಯೆಯರ ಪತಿಯಂದಿರು ಯಾದಗಿರಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು: ವಯಸ್ಸಾದವರಿಗೆ ದೇವಸ್ಥಾನಗಳಲ್ಲಿ ದೇವರ ದರ್ಶನವನ್ನು ಉಚಿತವಾಗಿ ಕಲ್ಪಿಸುವ ಯೋಜನೆಗೆ ಇಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.ಯೋಜನೆಗೆ ಬಸವನಗುಡಿಯ ದೊಡ್ಡಬಸವಣ್ಣ ದೇವಸ್ಥಾನದಲ್ಲಿ ಚಾಲನೆ ನೀಡಿ, ಹಿರಿಯರು ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯೊಕ್ಕೆ ಪಡುತ್ತಿರುವ ಕಷ್ಟ ದೂರ ಮಾಡುವ ಯೋಜನೆಗೆ ಅಗತ್ಯ ಪರಿಷ್ಕರಣೆಯನ್ನು ಶೀಘ್ರವೇ ಮಾಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯೊಕ್ಕೆ ಬಂದ್ರೆ ಎಲ್ಲರಂತೆ ಸರದಿಸಾಲಿನಲ್ಲಿ ನಿಲ್ಲಬೇಕು.ವಯಸ್ಸಾಗಿರುವುದರಿಂದ ನಿಲ್ಲೊಕ್ಕೆ ಕಷ್ಟವಾಗ್ತಿದೆ ಎಂದು ವಯೋವೃದ್ದ ಭಕ್ತಾಧಿಗಳು ಮಾಡಿಕೊಂಡ ಮನವಿಗೆ ಕಿವಿಗೊಟ್ಟ ಕಾಂಗ್ರೆಸ್ ಸರ್ಕಾರ ದೇವರ ದರ್ಶನವನ್ನು ಕ್ಯೂ ನಲ್ಲಿ ನಿಲ್ಲದೆ ಸಾವಕಾಶವಾಗಿ ಕಲ್ಪಿಸುವ ನಿರ್ದಾರಕ್ಕೆ ಬಂದ ಹಿನ್ನಲೆಯಲ್ಲಿ ಇಂದು ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು,ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಯೋಜನೆ ಜಾರಿಗೊಳಿಸಲಾಗುತ್ತಿದೆ.ಇದರಿಂದ ದೇವಸ್ಥಾನಕ್ಕೆ ಬಂದು ದರ್ಶನ ಸಿಗದೆ ವಾಪಸ್ಸಾಗುತ್ತಿದ್ದ ಎಷ್ಟೋ ಭಕ್ತಾಧಿಗಳ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗುತ್ತದೆ.ಪ್ರತ್ಯೇಕ ಬ್ಯಾರಿಕೇಡ್ ಗಳನ್ನು ಹಾಕಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. ಸರ್ಕಾರದ ಯೋಜನೆಗೆ ಅಭಿನಂದನೆ…
ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ,ಬಿಜೆಪಿಯ ಮೊದಲನೇ ವಿಕೆಟ್ ಪತನಕೊಂಡಿದೆ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ಘೋಷಿಸಿದ್ದಾರೆ.ರಾಜೀನಾಮೆ ಘೋಷಿಸಿ ಒಂದೇ ಗಂಟೆಯಲ್ಲೇ,ನಾನು ರಾಜೀನಾಮೆ ಸಲ್ಲಿಸಿಲ್ಲ ಎಂದು ಕಟೀಲ್ ಯೂ ಟರ್ನ್ ಹೊಡೆದಿದ್ದಾರೆ. ಯೆಸ್,ವಿಧಾನಸಭೆ ಚುನಾವಣೆಯಲ್ಲಿ ಮೂರು ಡಿಜಿಟ್ ದಾಟದೇ ಬಿಜೆಪಿ ಹೀನಾಯ ಸೋಲು ಕಂಡಿತ್ತು.ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಬಂದ ಒಂದೂವರೆ ತಿಂಗಳ ಬಳಿಕ ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.ಮೊದಲ ಭಾಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಮಾಡಲು ಮುಂದಾಗಿದ್ದು,ಇಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲು ರಾಜೀನಾಮೆ ಘೋಷಿಸಿದ್ದಾರೆ.ಬಳ್ಳಾರಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್,ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ರು. ಇನ್ನು ರಾಜೀನಾಮೆ ವಿಚಾರದಲ್ಲಿ ನಳೀನ್ ಕುಮಾರ್ ಕಟೀಲ್ ಯೂ ಟರ್ನ್ ಹೊಡೆದಿದ್ದಾರೆ.ಇಂದು ಬೆಳಗ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಘೋಷಣೆ ಮಾಡಿದ್ದರು.ತದ ಬಳಿಕ ಒಂದೇ ಗಂಟೆಯಲ್ಲೇ ನಾನು ಆ ಅರ್ಥದಲ್ಲಿ ಹೇಳಿಲ್ಲ.ಈ ಬಗ್ಗೆ ಹೈಕಮಾಂಡ್ ನಾಯಕರು…
ಕೋಲಾರ: ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಕೇಳಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದ್ದಾರಾ? 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳುವಾಗ ನಿಮಗೆ ಜ್ಞಾನ ಇರಲಿಲ್ವಾ? ಇದು 15 ಸಾವಿರ ಕೋಟಿ ಯೋಜನೆ, ಯಾರನ್ನು ಕೇಳಿ ಕೊಟ್ಟಿದ್ದೀರಿ? ಒಂದು ಎಸ್ಟಿಮೇಟ್ ಇಲ್ಲ ಯಾರನ್ನು ಕೇಳಿ ಘೋಷಣೆ ಮಾಡಿದ್ದೀರಿ? ಕೇಂದ್ರವು ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದ್ದೀರಾ ಬೇರೆ ಯಾವ ರಾಜ್ಯಕ್ಕಾದರೂ ಹೆಚ್ಚುವರಿ ಅಕ್ಕಿ ಕೊಟ್ಟಿದ್ದಾರಾ? ಕರ್ನಾಟಕ ಸಿಎಂ ಸಿದ್ದರಾಮಯ್ಯ ನೀವೇನು ಸ್ಪೆಷಲ್ ಕ್ಯಾಟಗಿರಿನಾ? ನೀವೇನು ಆಕಾಶದಿಂದ ಇಳಿದು ಬಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ: ಮಹಿಳೆಯರಿಗೆ ಉಚಿತ ಪ್ರಯಾಣದ ಎಫೆಕ್ಟ್ ಅನ್ನೆ ಬಂಡವಾಳ ಮಾಡಕೊಂಡ ಮಹಿಳೆಯೊಬ್ಬಳು ಬಸ್ ಹತ್ತುವ ವೇಳೆ ಮಾಂಗಲ್ಯ ಚೈನ್ ಕದ್ದು ಸಿಕ್ಕಿಬಿದ್ದು ನಾನವಳಲ್ಲ ನಾನವಳಲ್ಲಾ ಎಂದು ಹೈಡ್ರಾಮ ಸೃಷ್ಟಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಂದು ವೀಕೆಂಡ್ ಆಗಿರೋದ್ರಿಂದ ಇಶಾ ಪೌಂಡೇಶನ್ ಗೆ ಹೋಗಲು ಸಾವಿರಾರು ಮಹಿಳೆಯರು ಬಂದಿದ್ದರು. ಬಸ್ ಹತ್ತುವ ವೇಳೆ ನೂಕುನುಗ್ಗಲು ಆಗುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳಿ ಸುಮಾರು ಒಂದು ಲಕ್ಷ ಎಪ್ಪತೈದು ಸಾವಿರ ಬೆಲೆ ಬಾಳುವ ಮಾಂಗಲ್ಯ ಚೈನ್ ನನ್ನು ಎಗರಿಸಿದ್ದಾಳೆ ತಕ್ಷಣ ಎಚ್ಚೆತ್ತ ನಾಗಮ್ಮ ಕಳ್ಳಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜುಟ್ಟು ಹಿಡಿದುಕೊಂಡು ಎಳೆದಾಡಿ ಥಳಿಸಿದ್ದಾಳೆ.. Video Player 00:00 01:52 ನಾಗಮ್ಮ ಮಾಲೂರಿನಿಂದ ಚಿಕ್ಕಬಳ್ಳಾಪುರದ ಸಂಭಂದಿಕರ ಮನೆಗೆ ಬಂದಿದ್ದಳು ನಂತರ ಚಿಕ್ಕಬಳ್ಳಾಪುರದಿಂದ ವಾಪಸ್ಸು ಮಾಲೂರಿಗೆ ಹೋಗುವ ವೇಳೆ ಈ ಘಟನೆ ನಡೆದಿದೆ ಇನ್ನೂ ತನ್ನ ಮಾಂಗಲ್ಯ ಚೈನ್ ಕದ್ದ ಆರೋಪಿ ಮೈಸೂರು ಮೂಲದ ಮಂಜುಳಾ ಎಂದು ತಿಳಿದು ಬಂದಿದೆ. ತನ್ನ…
ಬೆಂಗಳೂರು: ಜನಸಾಮಾನ್ಯರಿಗೆ ಶಾಕ್ ಮೇಲೆ ಶಾಕ್ ವಿದ್ಯುತ್ , ಹಾಲು, ಮದ್ಯಪಾನ ಹೀಗೆ ಎಲ್ಲದರ ರೇಟ್ ಗಗನಕ್ಕೇರಿದ್ದು ಈಗ ಟೊಮೆಟೋ ಸರದಿ ಬಂದಿದೆ. ಜನರಿಗೆ ಬರೆ ಹಾಕಿದಂತೆ ಆಗುತ್ತಿದೆ. ಸಾಮಾನ್ಯ ಜನರಿಗಂತು ಇದು ನುಂಗಲಾರದ ತುತ್ತಾಗಿಬಿಟ್ಟಿದಂತೆ ಕಾಣುತ್ತಿದೆ. ನೂರರ ಸನಿಹಕ್ಕೆ ಆಗಮಿಸಿದ ಟೊಮೆಟೊ ದರ ಐದು ಗ್ಯಾರಂಟಿ ಖುಷಿ ನಡುವೆ ಜನತೆಗೆ ಟೊಮಟೋ ದರ ಶಾಕ್ಇನ್ನೆರಡು ದಿನದಲ್ಲಿ ಟೊಮೆಟೊ ದರ ಗಗನಕ್ಕೆ ಸಾಧ್ಯತೆ. 15 Kg ಟೊಮಾಟೋ ಬಾಕ್ಸ್ ಸಾವಿರ ಸನಿಹಕ್ಕೆಇತರೆ ರಾಜ್ಯಗಳಲ್ಲಿ ಭಾರಿ ಮಳೆಟೊಮೆಟೋ ಬಾಂಗ್ಲಾ ದೇಶಕ್ಕೆ ರಫ್ತು ಇದೇ ಮೊದಲ ಬಾರಿಗೆ ರಾಜ್ಯದ ಟೊಮೆಟೋ ಬಾಂಗ್ಲಾಕ್ಕೆ ರಫ್ತು ರಾಜ್ಯದಲ್ಲಿ ಏರಿಕೆಯಾದ ಟೊಮೆಟೋ ಬೆಲೆ ಕೋಲಾರದಿಂದ ಹೊರರಾಜ್ಯಗಳಿಗೆ ಹೆಚ್ಚಿದ ರಫ್ತು ಬೇರೆ ರಾಜ್ಯಗಳಲ್ಲಿ ಟೊಮೆಟೋಗೆ ಭಾರೀ ಡಿಮ್ಯಾಂಡ್ ಇದರಿಂದ ಬೆಂಗಳೂರಿಗೆ ತಟ್ಟಿದ ಬಿಸಿ ಟೊಮಾಟೋ ಖರೀದಿ ಮಾಡಲು ಹಿಂದೇಟು ಹಾಕ್ತಿರೋ ಹೆಂಗಳೆಯರು ಕಳೆದ ವಾರ 30-40 ರೂ. ಇದ್ದ ಟೊಮೆಟೋ ದರ ನಿನ್ನೆ 40-50 ರೂ. ಇಂದು 70-80 ರೂ. ಇನ್ನೆರಡು…