ಬೆಂಗಳೂರು: ‘ಒಂದು ದೇಶ ಒಂದು ಕಾರ್ಡ್’ ಯೋಜನೆಯ ಭಾಗವಾಗಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇದೇ ವರ್ಷದ ಮಾರ್ಚ್ ಅಂತ್ಯದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್ಗೆ (National Common Mobility Card- NCMC) ನಿರೀಕ್ಷಿತ ರೀತಿಯಲ್ಲಿ ಉತ್ತಮ ಪ್ರತಿಕ್ರಿಯೆಗಳು ಸಿಗುತ್ತಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ಖರೀದಿಸಲು BMRCL ಸ್ಮಾರ್ಟ್ ವಿಧಾನ ಪರಿಚಯಿಸಿ ಯಾವುದೋ ಕಾಲವಾಗಿದೆ. ಬಿಎಂಆರ್ಸಿಎಲ್ ವತಿಯಿಂದ ಇದುವರೆಗೆ ಮಾರಾಟವಾಗಿರುವ 8 ಲಕ್ಷ ಕಾರ್ಡ್ಗಳ ಪೈಕಿ ಕೇವಲ 4,500 ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ಗಳನ್ನು ಬೆಂಗಳೂರಿನಲ್ಲಿ ವಿತರಿಸಿದೆ. ವೈಟ್ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಕಳೆದ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ NCMC ಕಾರ್ಡ್ಗಳಿಗೆ ಚಾಲನೆ ಕೊಟ್ಟಿದ್ದರು.
Author: Prajatv Kannada
ಬೆಂಗಳೂರು: ಅದು ಜೂನ್ 21 ರ ಸಂಜೆ 3.30 ರ ಸಮಯ.ಬಾಣಸವಾಡಿಯ ಲಿಂಗರಾಜಪುರ ಏರಿಯಾ.ಮಹಿಳೆಯೊಬ್ಬಳು ರಕ್ತದ ಮಡುವಲ್ಲಿ ಬಿದ್ದು ಒದ್ದಾಡ್ತಿದ್ಳು.ಸ್ಥಳೀಯರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು.ಆಸ್ಪತ್ರೆಗೆ ಸೇರಿಸಿದ ಪೊಲೀಸರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ರು. ಆ ಮಹಿಳೆಯನ್ನು ರಕ್ತದ ಮಡುವಲ್ಲಿ ಮಲಗಿಸಿದ್ದು ಬೇರಾರು ಅಲ್ಲಾ. ತಾಳಿ ಕಟ್ಟಿದ ಆಕೆಯ ಪತಿಯೇ.ಪತ್ನಿಯ ಮೇಲೆ ಅನುಮಾನ ನೆತ್ತಿಗೇರಿ ಅಟ್ಟಹಾಸ ಮೆರೆದಿದ್ದ. ಹೀಗೆ ಸ್ಕೂಟರ್ ನಲ್ಲಿ ಮೂವರು ಬರ್ತಾರೆ.ನೋಡ ನೋಡ್ತಿದ್ದಂತೆ ಮಹಿಳೆಯನ್ನ ಕೆಳಗೆ ನೂಕ್ತಾರೆ.ಕ್ಷಣ ಮಾತ್ರದಲ್ಲಿ ಚಾಕುವಿನಿಂದ ಐದಾರು ಬಾರಿ ಚುಚ್ಚಿ ಅಟ್ಟಹಾಸ ಮೆರಿತಾರೆ.ಏನಾಗ್ತಿದೆ ಅಂತಾ ಸ್ಥಳೀಯರು ಬಂದು ನೋಡುವಷ್ಟರಲ್ಲಿ ಎಸ್ಕೇಪ್ ಆಗಿಬಿಡ್ತಾರೆ.ಈ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳುವಂತಿದೆ. ಹೌದು..ಹೀಗೆ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಮಹಿಳೆಯ ಹೆಸರು ನಿಖಿತಾ.ಬಾಣಸವಾಡಿಯ ಲಿಂಗರಾಜಪುರ ನಿವಾಸಿ.ಇನ್ನೂ ಹೀಗೆ ಗರುಡಗಂಬದ ರೀತಿ ನಿಂತಿರೊ ವ್ಯಕ್ತಿಯ ಹೆಸರು ದಿವಾಕರ್.ಈತ ಕೂಡ ಬಾಣಸವಾಡಿಯವ್ನು.ಇಬ್ಬರು ಪರಸ್ಪರ ಪ್ರೀತಿ ಮಾಡಿ ಒಂಭತ್ತು ವರ್ಷದ ಹಿಂದೆ ವಿವಾಹವಾಗಿದ್ರು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಹೆಂಡತಿ ಮಕ್ಕಳು ಅಂತಾ ಸುಖವಾದ ಸಂಸಾರ…
ಬೆಂಗಳೂರು: ಜೂನ್ 29 ರಂದು ಮುಸ್ಲಿಂಬಾಂಧವರು ಅದ್ದೂರಿಯಾಗಿ ಬಕ್ರಿದ್ ಹಬ್ಬದಾಚರಣೆ ಮಾಡ್ತಾರೆ.ಹಬ್ಬದ ಸಿದ್ದತೆಗಳೇನೋ ಜೋರಾಗಿಯೇ ನಡೀತಿದೆ.ಆದ್ರೆ ಹಬ್ಬದ ಪ್ರಮುಖ ಆಕರ್ಷಣೆಯಾದ ಕುರಿಗಳ ಖರೀದಿಗೆ ಮಾತ್ರ ಆಸಕ್ತಿ ತೋರುತ್ತಿಲ್ಲ.ಗ್ರಾಹಕರನ್ನು ನೆಚ್ಚಿಕೊಂಡು ಲಕ್ಷಾಂತರ ಬಂಡವಾಳ ಹೂಡಿ ಕುರಿ ತಂದಿದ್ದ ವ್ಯಾಪಾರಿಗಳು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.ಅವರ ಪ್ರಕಾರವೇ ನಮ್ ಬ್ಯುಸಿನೆಸ್ ಗೆ ಕಲ್ಲು ಹಾಕಿದ್ದೇ ಕಾಂಗ್ರೆಸ್ ಸರ್ಕಾರವಂತೆ.ಗೋ ಹತ್ಯೆ ನಿಷೇಧ ವಾಪಸ್ ಪಡೆದಿದ್ದರಿಂದಲೇ ಕುರಿಕೊಳ್ಳೊಕ್ಕೆ ಗ್ರಾಹಕರು ಉತ್ಸುಕತೆ ತೋರ್ತಿಲ್ಲ ಎನ್ತಾರೆ. ಬಕ್ರಿದ್ ವೇಳೆ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತಿದ್ದ ಚಾಮರಾಜಪೇಟೆ ಈದ್ಗಾ ಮೈದಾನದ ಕುರಿ ದೊಡ್ಡ “ಡಲ್” ಹೊಡೀತಿದೆ.ಕುರಿಗಳ ಮಾರಾಟ ಜಬರ್ ದಸ್ತ್ ಆಗಿ ನಡೀಬೋದು ಎಂದು ಲಕ್ಷಾಂತರ ಬಂಡವಾಳ ಹಾಕಿ ಕುರಿ ತಂದಿದ್ದ ವ್ಯಾಪಾರಿಗಳು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.ಅವರು ತಂದ ಕುರಿಗಳನ್ನು ಕೇಳೋರೇ ಇಲ್ಲವಾಗಿದೆ.ಗ್ರಾಹಕರು ಕೇಳೋ ರೇಟ್ ವ್ಯಾಪಾರಿಗಳನ್ನು ತಬ್ಬಿಬ್ಬುಗೊಳಿಸ್ತಿದೆ.ನಮ್ ವ್ಯಾಪಾರ ಹೀಗೆ ಡಲ್ ಆಗೊಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವ್ಯಾಪಾರಿಗಳು ಹಿಡಿಶಾಪ ಹಾಕ್ತಿದಾರೆ. ಬಕ್ರಿದ್ ಹಬ್ಬದಿಂದಾಗಿ ಕುರಿ ದೊಡ್ಡಿಯತ್ತ…
ಬೆಂಗಳೂರು: ಸರ್ಕಾರದ ವಿದ್ಯುತ್ ನೀತಿ ಗ್ರಾಹಕರು, ಕೈಗಾರಿಕೋದ್ಯಮಿಗಳಿಗೆ ಮಾರಕ. ಕೈಗಾರಿಕೋದ್ಯಮಿಗಳು ಮುಷ್ಕರ ನಡೆಸಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷಾಮ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಅಗತ್ಯ ಹಣಕಾಸನ್ನು ಬಿಡುಗಡೆ ಮಾಡಬೇಕು. ವಿದ್ಯುತ್ ಬಳಕೆದಾರರ ಮೇಲಿನ ಹೊರೆ ಕಡಿಮೆ ಮಾಡಬೇಕು. ಪೂರ್ವ ತಯಾರಿ ಇಲ್ಲದೇ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಅದರ ಎಲ್ಲ ಭಾರವೂ ಜನಸಾಮಾನ್ಯರ ಮೇಲೆ ಬೀಳುತ್ತದೆ. ಈಗಿರುವ ಲೋಪವನ್ನು ಸರಿಪಡಿಸಲಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿಂತಾಮಣಿ;- ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯ ಪ್ರಿಯಕರನ ಕತ್ತು ಸೀಳಿ ಪತಿ ರಕ್ತ ಕುಡಿದಿರುವ ಘಟನೆ ಜರುಗಿದೆ. ವಿಜಯ್ ಕೊಲೆ ಆರೋಪಿಯಾಗಿದ್ದು, ಮಾರೇಶ್ ಹಲ್ಲೆಗೊಳಗಾದ ವ್ಯಕ್ತಿ. ವಿಜಯ್ ಪತ್ನಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ವಿಜಯ್ ಮಾರೇಶ್ನನ್ನು ಸಿದ್ದೇಪಲ್ಲಿ ಕ್ರಾಸ್ ಬಳಿ ಕರೆಸಿಕೊಂಡು ಚಾಕುವಿನಿಂದ ಕತ್ತು ಸೀಳಿ ರಕ್ತ ಕುಡಿದಿದ್ದಾನೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯ ಈ ಭೀಭತ್ಸ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗ: ಜೋಗ ಜಲಪಾತಕ್ಕೆ ಜೋಗ ಜಲಪಾತವೇ ಸಾಟಿ. ಬಾನೆತ್ತರಿಂದ ಧುಮ್ಮುಕ್ಕುವ ಜೋಗವನ್ನು ನೋಡುವುದೇ ಒಂದು ಅದ್ಬುತ. ಹಚ್ಚ ಹಸಿರಿನ ನಡುವೆ ಹಾಲ್ ನೊರೆಯಂತೆ ದುಮ್ಮುಕ್ಕುವ ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜೋಗ ಜಲಪಾತದ ಘತವೈಭವ ಮರೆಯಾಗಿದೆ. ಜೋಗದ ಸಿರಿಯನ್ನು ಸವಿಯಲು ಬರುತ್ತಿರುವ ಪ್ರವಾಸಿಗರು ಬರೀ ಕಲ್ಲುಬಂಡೆಗಳಿಂದಲೇ ತುಂಬಿಕೊಂಡಿರುವ ಜೋಗವನ್ನು ನೋಡಿ ಮರುಗುವ ಸ್ಥಿತಿ ಪ್ರವಾಸಿಗಳಿಗೆ ಬಂದೋದಗಿದ್ದೆ. ಮಲೆನಾಡಿನ ಪ್ರಕೃತಿ ವೈಭವಕ್ಕೆ ಮರಳಾಗದ ಮನಸೇ ಇಲ್ಲ. ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ದಟ್ಟ ಕಾನನ, ಕಾನನದ ಮದ್ಯೆ ಹಾಲ್ ನೋರೆಯಂತೆ ದುಮ್ಮುಕ್ಕಿ ಹರಿಯುವ ಜರಿಗಳು, ಮಂಜಿನ ಹನಿಗಳ ಕಣ್ಣಾ ಮುಚ್ಚಾಲೆ ಆಟ. ಇವೆಲ್ಲವೂ ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇದಕ್ಕೆ ಜೋಗ ಜಲಪಾತ ಕೂಡ ಹೊರತಾಗಿಲ್ಲ. ಜೋಗ ಜಲಪಾತಕ್ಕೆ ಜೋಗ ಜಲಪಾತವೇ ಸಾಟಿ ಎಂಬಂತೆ ಹಸಿರು ಐಸಿರಿಯ ನಡುವೆ ನಾಲ್ಕು ಕಾವಲುಗಳಾಗಿ ಬೀಳುವ ಶರಾವತಿಯನ್ನ ಕಣ್ಣು ತುಂಬಿಕೊಳ್ಳೋದೆ ಒಂದು ಅನುಭವ. ರಾಜ…
ಮಂಡ್ಯ ;- ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ದಾರುಣ ಅಂತ್ಯವಾಗಿದ್ದಾರೆ. ಈ ಘಟನೆ ಮದ್ದೂರು ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಫ್ಲೈಓವರ್ ಮೇಲೆ ನಡೆದಿದೆ. ಕೋಲಾರ ಹಾಗೂ ಕೊಪ್ಪಳ ಮೂಲದ ಮಣಿ, ಮತ್ತು ಜನಾರ್ಧನ್ ಪೂಜಾರಿ ಮೃತರು ಎಂದು ಗುರುತಿಸಲಾಗಿದೆ. ವೀಕೆಂಡ್ ರಜೆ ಹಿನ್ನೆಲೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಇಂದು ಬೆಳಗ್ಗಿನ ಜಾವ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕರ ಶವವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತುಮಕೂರು ;- ಕಾಂಗ್ರೆಸ್ ಗೆ ಮತ ನೀಡಿದ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ ಸೊಸೈಟಿಯು ಪಡಿತರ ನೀಡದಿರುವ ಘಟನೆ ಜರುಗಿದೆ. ತುಮಕೂರು ಜಿಲ್ಲೆಯ ತಿಪಟೂರು ನಗರದ ಶಂಕರ್ ಮಠ ಹತ್ತಿರವಿರುವ ಸರ್ಕಾರಿ ನೌಕರರ ಸಹಕಾರ ಸಂಘದಲ್ಲಿ ಘಟನೆ ಜರುಗಿದೆ. ಸ್ಥಳೀಯರಾದ ಆರ್ ಡಿ ಬಾಬುಗೆ ಪಡಿತರ ನೀಡಲು ನಿರಾಕರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನೀವು ಬಿಜೆಪಿಗೆ ಮತ ನೀಡಿಲ್ಲ ನೀವು ಕಾಂಗ್ರೆಸ್ ನವರು ಎಂದ ಸೊಸೈಟಿ ಸಿಬ್ಬಂದಿ ಹೇಳಿದ್ದು, ಈ ವೇಳೆ ಸೊಸೈಟಿ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಸೊಸೈಟಿ ವಿರುದ್ಧ ಹೀಗಾಗಲೇ ಹಲವು ದೂರುಗಳಿದ್ದು, ಪದೇ ಪದೇ ಸೊಸೈಟಿ ಹೀಗೆ ಮಾಡುತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ತಿಪಟೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ;– ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಪ್ರಮಾಣಪತ್ರ ಪಡೆಯಬೇಕಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಸೆಕ್ಷನ್ 94 (1-ಎ) (ಐ) ಅಡಿ ಶೈಕ್ಷಣಿಕ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿಗೆ ಬ್ಲಾಂಕೆಟ್ ವಿನಾಯಿತಿ ಇಲ್ಲ. ಅವು ಪ್ರತಿ ವರ್ಷ ವಿನಾಯಿತಿ ಕೋರಿ ಸಿಎಂಸಿಯಿಂದ ಸರ್ಟಿಫಿಕೆಟ್ಗೆ ಅರ್ಜಿ ಸಲ್ಲಿಸಬೇಕು. ಆ ಬಗ್ಗೆ ಪರಿಶೀಲಿಸುವ ಸಿಎಂಸಿ ತನಗೆ ಎಲ್ಲ ಮಾನದಂಡಗಳು ಸರಿಯಾಗಿವೆ ಎಂಬುದು ಮನವರಿಕೆಯಾದರೆ ಸರ್ಟಿಫಿಕೆಟ್ ವಿತರಿಸಲಿದೆ ಎಂದು ವಾದಿಸಿದ್ದರು. ಅಲ್ಲದೆ, ಸರ್ಟಿಫಿಕೇಟ್ ಇಲ್ಲದೆ, ತೆರಿಗೆ ಪಾವತಿದಾರರು ಯಾವುದೇ ರೀತಿಯಲ್ಲೂ ಸ್ವಯಂ ಪ್ರೇರಿತವಾಗಿ ತೆರಿಗೆ ಪಾವತಿಯಿಂದ ವಿನಾಯಿತಿ ಕೋರಲಾಗದು ಎಂದು ತಿಳಿಸಿದ್ದರು.
ಬೆಂಗಳೂರು ;– ರಸ್ತೆ ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳೊಡನೆ ಶನಿವಾರ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಪ್ರಮುಖವಾಗಿ ಆಸನಗಳ ವ್ಯವಸ್ಥೆ, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ಗಮನಹರಿಸಲು ಸೂಚಿಸಿ, ತಾವೇ ಖುದ್ದು ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಸಹ ಬಸ್ ನಿಲ್ದಾಣಗಳಿಗೆ ಆಗಾಗ ಭೇಟಿ ನೀಡಬೇಕೆಂದು ಸೂಚಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುಕೂಲವಾಗುವ ತುರ್ತು ಕ್ರಮಗಳಾದ ಹೊಸ ಬಸ್ಸುಗಳ ಸೇರ್ಪಡೆ, ಬಸ್ಸುಗಳ ಪುನಶ್ಚೇತನ ಕಾರ್ಯ, ಪರಿಣಾಮಕಾರಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕಸ್ನೇಹಿ ಉಪಕ್ರಮಗಳು, ಸಿಬ್ಬಂದಿ ನೇಮಕ ಇತರೆ ವಿಷಯಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.