ಜುಲೈ 12 ರಿಂದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುವ ಮೂಲಕ 2023-25ರ ಟೆಸ್ಟ್ ಚಾಂಪಿಯನ್‌ಷಿಪ್ ಅಭಿಯಾನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಶುಕ್ರವಾರ 16 ಸದಸ್ಯರ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿತ್ತು. ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ್ದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಸ್ಥಾನ ಪಡೆದುಕೊಂಡಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಹೊರಗಿಟ್ಟು, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಜೈಸ್ವಾಲ್ ಅಥವಾ ಗಾಯಕ್ವಾಡ್ ಅವರಲ್ಲಿ ಒಬ್ಬರನ್ನು ಆಡಿಸುವ ಸಾಧ್ಯತೆ ಇದೆ. ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ್ದ ಯಶಸ್ವಿ ಜೈಸ್ವಾಲ್, “ನಾನು ಭಾರತ ತಂಡಕ್ಕೆ ಆಯ್ಕೆಯಾದ ವಿಷಯ ತಿಳಿದ ಬಳಿಕ ನನ್ನ ಅಪ್ಪ ಕಣ್ಣೀರಿಟ್ಟಿದ್ದರು. ನಾನು ಈಗ…
Author: Prajatv Kannada
ಆಸ್ಟ್ರೇಲಿಯಾ ಎದುರು ನಡೆದ 2ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಬ್ಯಾಟರ್‌ಗಳ ಹೀನಾಯ ಪ್ರದರ್ಶನ ಕಾರಣ ಭಾರತ ತಂಡ 209 ರನ್‌ಗಳ ಹೀನಾಯ ಸೋಲುಂಡಿದೆ. ಇದರ ಬೆನ್ನಲ್ಲೇ ಭಾರತೀಯ ಬ್ಯಾಟರ್‌ಗಳು ಭಾರಿ ಟೀಕೆ ಎದುರಿಸಿದ್ದರು. ಪ್ರಮುಖವಾಗಿ ಟೆಸ್ಟ್ ಸ್ಪೆಷಲಿಸ್ಟ್ 3ನೇ ಕ್ರಮಾಂಕದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ತಮ್ಮ ಅಸ್ಥಿರ ಪ್ರದರ್ಶನ ಕಾರಣ ಭಾರಿ ಟೀಕೆ ಎದುರಿಸಿದರು. ಈಗ ಭಾರತ ತಂಡದ ವೈಫಲ್ಯಕ್ಕೆ ಬಲಿಪಶುವಾಗಿ ಪೂಜಾರ ಭಾರತ ತಂಡದಿಂದ ಕೈಬಿಡಲಾಗಿದೆ ಎಂದು ಗವಾಸ್ಕರ್ ಜಾಡಿಸಿದ್ದಾರೆ. “ತಂಡದ ಎಲ್ಲಾ ಬ್ಯಾಟರ್‌ಗಳು ವೈಫಲ್ಯ ಕಂಡ ಸಂದರ್ಭದಲ್ಲಿ ಕೇವಲ ಒಬ್ಬರಿಗೆ ಶಿಕ್ಷೆಯೇಕೆ? ನನ್ನ ಪ್ರಕಾರ ಅಜಿಂಕ್ಯ ರಹಾನೆ ಹೊರತಾಗಿ ಉಳಿದ ಯಾವ ಬ್ಯಾಟರ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ರಹಾನೆ 89 ಮತ್ತು 46 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳು ರನ್ ಗಳಿಸುವ ಗೋಜಿಗೆ ಬೀಳಲಿಲ್ಲ. ಹೀಗಿರುವಾಗ ಚೇತೇಶ್ವರ್ ಪೂಜಾರ ಅವರನ್ನು ಮಾತ್ರವೇ ಕೈಬಿಟ್ಟಿದ್ದೇಕೆ? ಬ್ಯಾಟಿಂಗ್ ವೈಫಲ್ಯ ಅವರನ್ನು ಮಾತ್ರ ಬಲಿಪಶು ಮಾಡಿದ್ದೇಕೆ? ಆತ ಭಾರತ…
ಬ್ಯೂನಸ್ ಐರಿಸ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಓರ್ವರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ 35 ವರ್ಷದ ಮೆಸ್ಸಿ, ‘ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ. ಆದರೆ ಎಲ್ಲದರಲ್ಲೂ ಚಾಂಪಿಯನ್ ಎಂಬ ಖುಷಿಯಲ್ಲೇ ಈಗ ಆಡುತ್ತಿದ್ದೇನೆ. ಫುಟ್ಬಾಲ್ನಲ್ಲಿ ಗೆಲುವು ಮಾತ್ರವಲ್ಲ, ನಮ್ಮ ಪಯಣವೂ ಕೂಡಾ ಜೀವನಕ್ಕೆ ಬೇಕಾದ ಅತ್ಯಮೂಲ್ಯ ಪಾಠಗಳನ್ನು ಕಲಿಸಿಕೊಟ್ಟಿದೆ. ನಾವು ಏನಾದರೂ ಅಂದುಕೊಂಡಾಗ, ಯಾವುದಕ್ಕಾದರೂ ಪ್ರಯತ್ನಿಸಿ ಸಿಗದೆ ಇರುವ ಕ್ಷಣಗಳೂ ನಮಗೆ ಪಾಠ. ನೀವು ಕನಸು ಕಂಡಿದ್ದನ್ನು ಸಾಧಿಸುವವರೆಗೂ ಪ್ರಯತ್ನ ಬಿಡಬೇಡಿ’ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು 2026ರ ವಿಶ್ವಕಪ್ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದರು. ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫೈನಲ್‌ನಲ್ಲಿ ಫ್ರಾನ್ಸ್ ಎದುರು ದಿಗ್ವಿಜಯ ಸಾಧಿಸಿತ್ತು. ಈ ಮೂಲಕ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವ ಜೀವಮಾನದ ಕನಸನ್ನು ನನಸಾಗಿಸಿಕೊಂಡಿದ್ದರು. ಫಿಫಾ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಮೆಸ್ಸಿ ಅಭಿಮಾನಿಗಳಿಗೆ ಗುಡ್…
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್ ಬಳಿಕ ಬಾಲಿವುಡ್ ಗೆ ಹಾರಿರುವ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಬಿಟೌನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ಸುದ್ದಿ ಸಾಕಷ್ಟು ವರ್ಷಗಳಿಂದ ಹರಿದಾಡುತ್ತಿದ್ದು ಇದೀಗ ನೆಟ್ಟಿಗರು ಸಾಕ್ಷಿ ಸಮೇತ ಹುಡುಕಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಸುದ್ದಿ ಹರಿದಾಡುತ್ತಿದ್ದರು ಈ ಜೋಡಿಗಳು ಮಾತ್ರ ನಮ್ಮ ಮಧ್ಯೆ ಹಾಗೇನು ಇಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಇದೀಗ ನೆಟ್ಟಿಗರು ಕೊನೆಗೂ ರಶ್ಮಿಕಾ ಹಾಗೂ ವಿಜಯ್ ಅವರ ಡೇಟಿಂಗ್ ಸುದ್ದಿಯನ್ನು ಸಾಕ್ಷಿ ಸಮೇತ ಹಿಡಿದು ಬಿಟ್ಟಿದ್ದಾರೆ. ಈಗ ವಿಜಯ್ ಹಾಗೂ ರಶ್ಮಿಕಾ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಇವರ ಕುಟುಂಬದವರು ಕೂಡ ಇದ್ದರು ಅನ್ನೋದು ವಿಶೇಷ. ಈ ಕುರಿತ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್-ರಶ್ಮಿಕಾ ಮೊದಲು ‘ಗೀತಾ ಗೋವಿಂದಂ’ ಸಿನಿಮಾದ…
ಕಿರುತೆರೆಯಲ್ಲಿ ಖ್ಯಾತಿ ಘಳಿಸಿದ್ದ ನಟಿ ವೀಣಾ ಪೊನ್ನಪ್ಪ ಶಿವರಾಜ್ ಕುಮಾರ್ ನಟನೆಯ ವೇದ ಸಿನಮಾದ ಬಳಿಕ ಬಿಗ್ ಸ್ಕ್ರೀನ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ವೀಣಾ ಪೊನ್ನಪ್ಪ ಉಪೇಂದ್ರ ನಟನೆಯ ಯುಐ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಚಿತ್ರತಂಡದ ಕಡೆಯಿಂದ ಅಧಿಕೃತ ಪೋಸ್ಟರ್‌ವೊಂದು ಹೊರಬಿದ್ದಿದ್ದು, ವೀಣಾ ಪೊನ್ನಪ್ಪ ಆನ್ ಬೋರ್ಡ್ ‘ಯು ಐ’ ಎಂದು ಬರೆಯಲಾಗಿದೆ. ಅಲ್ಲದೆ ಇದನ್ನು ಸ್ವತಃ ವೀಣಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾದಲ್ಲಿ ವೀಣಾ ಪೊಲೀಸ್ ಇನ್‌ಸ್ಟೆಕ್ಟರ್ ಪಾತ್ರದಲ್ಲಿ ನಟಿಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು. ಆ ಬಳಿಕ ನಟಿಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸದ್ಯ ನಟಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ನಲ್ಲಿ ರಾಣಿಯ ಪಾತ್ರವನ್ನು ಮಾಡುತ್ತಾ ಅದ್ಭುತವಾಗಿ ಅಭಿನಯಿಸುತ್ತಿರುವ ನಟಿ ವೀಣಾ ಇದೀಗ ಕನ್ನಡದ ನಟ, ನಿರ್ದೇಶಕ ಉಪೇಂದ್ರ ಅವರ ‘ಯುಐ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈಗಾಗಲೇ…
ತಮ್ಮ ಲವ್, ಅಫೇರ್ ಸುದ್ದಿಗಳಿಂದಲೇ ಸದ್ದು ಮಾಡುತ್ತಿದ್ದ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದೀಗ ಮತ್ತೆ ಮದುವೆ ಸಿನಿಮಾದ ಮೂಲಕ ಸುದ್ದಿಯಾಗಿದ್ದಾರೆ. ಥಿಯೇಟರ್ ಗೆ ಎಂಟ್ರಿಕೊಟ್ಟ ಮತ್ತೆ ಮದುವೆ ಕಥೆ ಇದೀಗ ಒಟಿಟಿಗೆ ಎಂಟ್ರಿಕೊಟ್ಟಿದೆ. ಜೂ.23 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಮತ್ತೆ ಮದುವೆ ಸಿನಿಮಾ ಬಿತ್ತರವಾಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಥಿಯೇಟರ್ ನಲ್ಲಿ ಬಿಡುಗಡೆಯಾದ ಒಂದು ತಿಂಗಳ ಬಳಿಕ ಇದೀಗ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ಸಿನಿಮಾ ಇದೀಗ ಮನೆಯಿಂದಲೇ ಕುಳಿತು ನೋಡಬಹುದಾಗಿದೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ…
ಜೂನ್ 25 ಅನ್ನು ವಿಶ್ವ ವಿಟಲಿಗೋ ದಿನವನ್ನಾಗಿ ಆಚರಿಸಲಾಗುತ್ತದೆ . ಇದು ವಿಟಲಿಗೋ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ವಿಟಲಿಗೋದಿಂದ ಪೀಡಿತ ಲಕ್ಷಾಂತರ ಜನರ ಬೆದರಿಸುವಿಕೆ, ಸಾಮಾಜಿಕ ನಿರ್ಲಕ್ಷ್ಯ, ಮಾನಸಿಕ ಆಘಾತ ಮತ್ತು ಅಂಗವೈಕಲ್ಯವನ್ನು ಗುರುತಿಸುವ ಮೂಲಕ ವಿಟಲಿಗೋ ವಿ ಜಾಗೃತಿಯನ್ನು ಹೆಚ್ಚಿಸುವುದರಿಂದ ಇದರ ಉದ್ದೇಶವು ವಿಸ್ತಾರವಾಗಿದೆ. ವಿಟಲಿಗೋ ಎಂಬುದು ಚರ್ಮದ ಕಾಯಿಲೆಯಾಗಿದ್ದು, ಚರ್ಮದ ವರ್ಣದ್ರವ್ಯವಾದ ಮೆಲನಿನ್ ಕೊರತೆಯಿಂದಾಗಿ ಚರ್ಮದ ಮೇಲೆ ತೆಳು ಬಿಳಿ ತೇಪೆಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಪ್ರಪಂಚದಾದ್ಯಂತದ ಜನಸಂಖ್ಯೆಯ ಸುಮಾರು 1-2 ಪ್ರತಿಶತದಷ್ಟು ಜನರು ಈ ಸ್ಥಿತಿಯಿಂದ ಬಳಲುತ್ತಿದ್ದಾರೆ, ಇದು ಅಪರೂಪ ಮತ್ತು ಆಗಾಗ್ಗೆ ತಪ್ಪು ಕಲ್ಪನೆಗಳನ್ನು ಎದುರಿಸುತ್ತದೆ. ವಿಟಲಿಗೋ ಸಾಂಕ್ರಾಮಿಕವಾಗಿದೆ ಎಂಬುದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ ವಿಶ್ವ ವಿಟಲಿಗೋ ದಿನದ ಥೀಮ್ 2022 ಜೂನ್ 25 ಅನ್ನು ವಿಶ್ವ ವಿಟಲಿಗೋ ದಿನವನ್ನಾಗಿ ಆಚರಿಸಲಾಗುತ್ತದೆ . ವಿಶ್ವ ವಿಟಲಿಗೋ ದಿನದ 2022 ರ ಥೀಮ್ ” ವಿಟಲಿಗೋ ಜೊತೆ ಬದುಕಲು ಕಲಿಯುವುದು “. ಕಳೆದ ದಶಕದಲ್ಲಿ, ವಿಭಿನ್ನ ಆಲೋಚನೆಗಳೊಂದಿಗೆ ವಿವಿಧ ದೇಶಗಳು ಪ್ರಚಾರ ಕೇಂದ್ರ ಕಚೇರಿಯನ್ನು ಆಯೋಜಿಸಿವೆ ಮತ್ತು ಈ ವರ್ಷ ಪ್ರೊ . ಜಾರ್ಜ್ ಒಕಾಂಪೊ ಕ್ಯಾಂಡಿಯಾನಿ . ವಿಶ್ವ ವಿಟಲಿಗೋ ದಿನದ ಇತಿಹಾಸ ಮೊದಲ ವಿಶ್ವ ವಿಟಲಿಗೋ ದಿನವನ್ನು 2011 ರಲ್ಲಿ ನಡೆಸಲಾಯಿತು ಮತ್ತು ಇದು ವಾರ್ಷಿಕ, ಜಾಗತಿಕ ಕಾರ್ಯಕ್ರಮವಾಗಿದೆ. ಈ “ಮರೆತುಹೋದ” ರೋಗವನ್ನು ಸಾರ್ವಜನಿಕರ ಕಣ್ಣಿಗೆ ತರಲು ಮತ್ತು ಎದುರಿಸುತ್ತಿರುವ ಸವಾಲುಗಳ…
ವ್ಯಾಗ್ನರ್ ಗ್ರೂಪ್ ಸೈನಿಕರು ಮತ್ತು ರಷ್ಯಾ ಮಿಲಿಟರಿಯ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದವರನ್ನು ‘ದೇಶದ್ರೋಹಿಗಳು’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಕ್ರೋಶ ಹೊರ ಹಾಕಿದ್ದಾರೆ. ವ್ಯಾಗ್ನರ್ ಸೇನೆ ಬಂಡಾಯ ‘ಬೆನ್ನಿಗೆ ಇರಿತ’ ಎಂದು ಹೇಳಿದ ಪುಟಿನ್, ದೇಶದ್ರೋಹ ಮಾಡುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾವು ಎದುರಿಸುತ್ತಿರುವುದು ನಿಖರವಾಗಿ ವಿಶ್ವಾಸದ್ರೋಹ. ಅತಿಯಾದ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು, ದೇಶದ್ರೋಹಕ್ಕೆ ಕಾರಣವಾಗುತ್ತದೆ. ವ್ಯಾಗ್ನರ್ ಹೋರಾಟಗಾರರು ಮತ್ತು ಕಮಾಂಡರ್‌ಗಳು ನಮ್ಮ ಇತರ ಘಟಕಗಳು ಮತ್ತು ವಿಭಾಗಗಳೊಂದಿಗೆ ಹೋರಾಡಿ ಸಾಯುತ್ತಾರೆ ಎಂದು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತ ಪುಟಿನ್ ಹೇಳಿದ್ದಾರೆ. ಮಿಲಿಟರಿ ದಂಗೆಯನ್ನು ಸಂಘಟಿಸಿದವರು, ತಮ್ಮ ಒಡನಾಡಿಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡವರು, ರಷ್ಯಾಕ್ಕೆ ದ್ರೋಹ ಬಗೆದವರು ಅದಕ್ಕೆ ಉತ್ತರಿಸಬೇಕು. ಇದು ರಷ್ಯಾಕ್ಕೆ, ನಮ್ಮ ಜನರಿಗೆ ನೀಡಿತ ಹೊಡೆತವಾಗಿದೆ. ಅಂತಹ ಬೆದರಿಕೆಯಿಂದ ಫಾದರ್ಲ್ಯಾಂಡ್ನ್ನು ರಕ್ಷಿಸಲು ನಮ್ಮ ಕ್ರಮಗಳು ಕಠಿಣವಾಗಿರುತ್ತದೆ ಎಂದು ಪುಟಿನ್ ಹೇಳಿದ್ದಾರೆ.
ದೆಹಲಿ ;- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಕುರಿತು ಶನಿವಾರ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿವಿಧ ಪಕ್ಷಗಳ ಸಲಹೆ ಸೂಚನೆ ಪಡೆದಿದ್ದಾರೆ. ಬಳಿಕ ಮಾತನಾಡಿದ ಅಮಿತ್ ಶಾ, ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಸೂಕ್ಷ್ಮವಾಗಿ ಮತ್ತು ರಾಜಕೀಯವನ್ನು ಬದಿಗಿಟ್ಟು ತಮ್ಮ ಸಲಹೆಗಳನ್ನು ನೀಡಿವೆ. ಭಾರತ ಸರ್ಕಾರ ಈ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಮೊದಲ ದಿನದಿಂದ ಮಣಿಪುರದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಣಿಪುರದಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಜೂನ್ 13 ರ ತಡರಾತ್ರಿಯಿಂದ ರಾಜ್ಯದಲ್ಲಿ ಹಿಂಸಾಚಾರದಲ್ಲಿ ಒಬ್ಬರೂ ಸಾವನ್ನಪ್ಪಿಲ್ಲ. ರಾಜ್ಯದಲ್ಲಿ 36,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, 40 ಐಪಿಎಸ್ ಅಧಿಕಾರಿಗಳನ್ನು ಮಣಿಪುರಕ್ಕೆ ಕಳುಹಿಸಲಾಗಿದೆ, 20 ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದ. ಔಷಧಿಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸಲಾಗುತ್ತಿದೆ ಎಂದು…
ಶಿವಮೊಗ್ಗ; ನಗರದಲ್ಲಿ ಸ್ಪಾ’ ಒಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಏಳು ಯುವತಿಯರನ್ನು ರಕ್ಷಿಸಿರುವ ಘಟನೆ ಜರುಗಿದೆ. ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹಿನ್ನೆಲೆ ಈ ದಾಳಿ ನಡೆದಿದೆ. ಮಾಹಿತಿ ಆಧರಿಸಿ ವಿನೋಬ ನಗರ ಪೊಲೀಸ್ ಚೌಕಿ ಬಳಿ ಇರುವ ಫ್ಯಾಮಿಲಿ ಸೆಲೂನ್ ಮೇಲೆ ಶನಿವಾರ ಸಂಜೆ ಪೊಲೀಸರು ದಾಳಿ ನಡೆಸಿದ್ದರು. ಪ್ರೊಬೇಷನರಿ ಅಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ವಿನೋಬ ನಗರ ಠಾಣೆ ಪೊಲೀಸರು ಈ ದಾಳಿ ನಡೆಸಿದ್ದು, ರಕ್ಷಿಸಲಾದ ಏಳು ಯುವತಿಯರನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದೆ