ಬೆಂಗಳೂರು ;- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಪಂಚಖಾತ್ರಿ ಯೋಜನೆಗಳ ಪೈಕಿ ಅತಿ ದೊಡ್ಡ ಯೋಜನೆಯಾಗಿರುವ ಗೃಹಜ್ಯೋತಿ ಆಗಸ್ಟ್ 1ರಿಂದ ಅನುಷ್ಠಾನಗೊಳ್ಳಲಿದೆ. ಅದರಂತೆ ಇಂದಿನಿಂದ ಅರ್ಹ ಗ್ರಾಹಕರಿಗೆ ಶುಲ್ಕ ವಿನಾಯಿತಿ ವಿದ್ಯುತ್ ಬಿಲ್‌ಗಳು ಸಿಗಲಿವೆ. ಯೋಜನೆಗೆ ಈಗಾಗಲೇ ನೋಂದಣಿ ಪ್ರಕ್ರಿಯೆಗಳು ಬಿರುಸಿನಿಂದ ನಡೆದಿದ್ದು, ರಾಜ್ಯಾದ್ಯಂತ 1.40 ಕೋಟಿಗೂ ಹೆಚ್ಚು ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಮತ್ತು ಅಮೃತ ಯೋಜನೆಯಡಿ 40 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೊಳಪಡುತ್ತಿದ್ದಾರೆ. ರಾಜ್ಯದಲ್ಲಿ 2.16 ಕೋಟಿ ಫಲಾನುಭವಿಗಳಿದ್ದು, ಅವರಲ್ಲಿ 2.14 ಕೋಟಿ ಗ್ರಾಹಕರು ಗೃಹಜ್ಯೋತಿಗೆ ಅರ್ಹತೆ ಪಡೆದಿದ್ದರು. ಇದುವರೆಗೆ ಶೇ.66ರಷ್ಟು ಫಲಾನುಭವಿಗಳು ನೋಂದಣಿಯಾಗಿರುವುದರಿಂದ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಂತಾಗಿದೆ. ಸುಮಾರು 2 ಕೋಟಿಗೂ ಮೇಲ್ಪಟ್ಟು ನೋಂದಣಿಗಳಾಗುವ ನಿರೀಕ್ಷೆಗಳಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ನೋಂದಣಿಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ಹೆಸರಿನ ಗೊಂದಲ, ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಗೊಂದಲದಿಂದ ಬಹಳಷ್ಟು ಮಂದಿ…
Author: Prajatv Kannada
ಬೆಂಗಳೂರು ;- 19 ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ವಿಚಾರದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಮಾಡುವ ಸಂಬಂಧ ಚರ್ಚೆ ನಡೆಸಲು ಹೈಕಮಾಂಡ್ ಕರೆದಿದೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಬದಲಾವಣೆ ಮಾಡುವ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಾವು ಹೋಗಿ ಕೂರಲು ಆಗುವುದಿಲ್ಲ. ನಾವು ಸಚಿವರಾಗಿದ್ದೇವೆ. ನಮ್ಮ ಸ್ಥಾನದಲ್ಲಿ ಬೇರೆಯವರಿಗೆ ಕೂರಿಸಬೇಕು. ಪೂರ್ಣಾವಧಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಾತಿ ನಡೆಯಲಿದೆ. ವರಿಷ್ಠರ ಸಭೆಯಲ್ಲಿ ಹೊಸ ಟೀಂ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಬೆಂಗಳೂರು ;– ಎಂಪಿ ಎಲೆಕ್ಷನ್ ಚುನಾವಣೆ ಸಂಬಂಧ ಚರ್ಚಿಸಲು ಆಗಸ್ಟ್ 2 ರಂದು ಸಭೆ ಕರೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಗೆ ನಾವು ಕ್ರಿಯಾ ಯೋಜನೆ ರೂಪಿಸಬೇಕಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾನದಂಡಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಆಗಸ್ಟ್ 2ರಂದು ಸಭೆ ನಡೆಯಲಿದ್ದು, ಸಭೆಗೆ ಎಲ್ಲ ಹಿರಿಯ ನಾಯಕರನ್ನು ದೆಹಲಿಗೆ ಕರೆಸಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ತಂತ್ರ ರೂಪಿಸಿದೆ ಎಂದರು.
ಬೆಂಗಳೂರು: ಭವಿಷ್ಯದಲ್ಲಿ ಕೃಷಿ ಕುರಿತು ಚಿಂತನಾ ಸಭೆಯನ್ನು ನಡೆಸಲಾಯಿತು. ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭವಿಷ್ಯದಲ್ಲಿ ಕೃಷಿಗೆ ಬೇಕಾಗುವ ಸಾಮಾಗ್ರಿಗಳು ಅದರ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.agriculture-minister-who-will-hold-a-think-tank-on-agriculture-in-the-future/ ವಿಧಾನಸೌಸದ ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ಕೃಷಿ ಸಚಿವರಾದ ಚಲುವರಾಯಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆಯನ್ನು ನೂತನ ಕಾರ್ಯಕ್ರಮಗಳಿಂದ ಕೂಡಲೇ ರೈತರನ್ನು ತಲುಪಲು ಡಾ. ಅಶೋಕ್ ದಳವಾಯಿ, ಸಿಇಒ, ರಾಷ್ಟ್ರೀಯ ಒಣಬೇಸಾಯ ಅಭಿವೃದ್ಧಿ ಪ್ರಾಧಿಕಾರ, ಹಾಗೆ ಹಿರಿಯ ಅಧಿಕಾರಿಗಳಡನೆ ಚಿಂತನ ಮಂಥನ ಸಭೆ ನಡೆಸಿದರು. ಸಭೆಯಲ್ಲಿ ಶ್ರೀ ವೈ.ಎಸ್.ಪಾಟೀಲ್ ಆಯುಕ್ತರು, ಕೃಷಿ ಇಲಾಖೆ, ಶ್ರೀ ಗಿರೀಶ್, ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ, ಶ್ರೀ ಜಿ.ಟಿ.ಪುತ್ರ, ನಿರ್ದೇಶಕರು, ಕೃಷಿ ಇಲಾಖೆ, ಶ್ರೀ ಶ್ರೀನಿವಾಸ್, ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆ, ಶ್ರೀ ಭಂಟ್ನಾಳ್, ವ್ಯವಸ್ಥಾಪಕ ನಿರ್ದೇಶಕರು, ಕೆಪೆಕ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಹೊರಡಿಸಿದ ಮಾರ್ಗಸೂಚಿಗಳು ಇಲ್ಲಿದೆ: ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ವಿವಿಧ ಯೋಜನೆಗಳಲ್ಲಿ ದೊರೆಯುವ ಸೌಕರ್ಯಗಳನ್ನು ಒಂದೇ…
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಷ್ಟ್ರ ವಿರೋಧಿ ಹಾಗೂ ಭಯೋತ್ಪಾದಕರ ಪರವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಂದೂ ವಿರೋಧಿ ನೀತಿ ಹೆಚ್ಚಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಎಂ, ಗೃಹ ಸಚಿವರು ವಿಫಲರಾಗಿದ್ದಾರೆ. ಸಿದ್ದರಾಮಯ್ಯ, ಜಿ. ಪರಮೇಶ್ವರ್ ಕೇರಳ ಫೈಲ್ಸ್ (Kerala Files) ಸಿನಿಮಾ ನೋಡಲಿ. ಉಡುಪಿಯಲ್ಲಿ ನಡೆದಿರೋದು ಕೇರಳ ಫೈಲ್ಸ್ ಸಿನಿಮಾ. ಕಾಂಗ್ರೆಸ್ ಗೆದ್ದಾಗಲೇ ಪಾಕಿಸ್ತಾನ ಪರ ಜಯಘೋಷ ಕೂಗಿದರು. ಆದರೆ ಈವರೆಗೂ ಅವರನ್ನು ಸಿದ್ದರಾಮಯ್ಯ ಜೈಲಿಗೆ ಹಾಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಾಗ್ದಾಳಿ ಮಾಡಿದರು. ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ಚಿತ್ರಿಕರಣ ಪ್ರಕರಣ ಖಂಡಿಸಿ ಮಂಗಳೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇದು ಷಂಡತನದ ಮತ್ತು ನಿರ್ವೀರ್ಯದ ಸರ್ಕಾರ. ಬಿಜೆಪಿ ಸರ್ಕಾರ ಇಲ್ಲಿ ತಾಕತ್ತು ತೋರಿಸಿದೆ. ಎನ್ಐಎ ಮೂಲಕ ಪಿಎಫ್ಐ ಹುಟ್ಟಡಗಿಸಿ ನಿಷೇಧ ಮಾಡಲಾಗಿದೆ. ಇವತ್ತು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಜಿಹಾದಿಗಳ ಜೊತೆ…
ಕೆ.ಆರ್.ಪುರ: ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ನೀತಿಯನ್ನು ಖಂಡಿಸಿ ಭಾರತೀಯರ ಸೇವಾ ಸಮಿತಿ BSS ಮತ್ತು ಅಖಿಲ ಕರ್ನಾಟಕ ರೈತ ಮತ್ತು ವ್ಯಾಪಾರಿ ಸಂಘಟನೆಯಿಂದ ಜಂಟಿಯಾಗಿ ಪ್ರತಿಭಟನೆ ನಡೆಯಿತು.ಬೀದಿ ಬದಿ ವ್ಯಾಪಾರಿಗಳು ಕೆ.ಆರ್.ಪುರಂ ನಿಂದ ಫ್ರೀಡಂ ಪಾರ್ಕ್ ನತ್ತ ಜಾಥ ಹೊರಟಿದ್ದು, ಪ್ರತಿಭಟನಾಕಾರರು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 20 ದಿನ ಗಳಿಂದ ರೈತರನ್ನು ಬೀದಿ ಬದಿ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತೆ ಮಕ್ಕಳು ಮತ್ತು ಬಿಎಸ್ಎಸ್ ಸಂಘಟನೆಗಳು ಕೆ.ಆರ್.ಪುರದಿಂದ ಐಟಿಐ ವರೆಗೆ ವಿನೂತನವಾಗಿ ರೀತಿಯಲ್ಲಿ ಜಾಥ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಯಲ್ಲೆ ನೂರಾರು ವ್ಯಾಪಾರಿಗಳು ಕುಳಿತುಕೊಂಡು ಸರ್ಕಾರದ ಧೋರಣೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಅವರು ಬಿದಿಬದಿಯ ವ್ಯಾಪಾರಿಗಳನ್ನು ತೆರವು ಮಾಡುವುದರಿಂದ ನೂರಾರು ಕುಟುಂಬಗಳು ಬೀದಿಗೆ ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. Video Player 00:00 03:07 ಬೀದಿಬದಿಯ ವ್ಯಾಪಾರಿಗಳನ್ನು ಗುರುತಿಸಿ…
ಬೆಂಗಳೂರು ಗ್ರಾಮಾಂತರ: ಬ್ಯ್ರಾಂಡ್ ಬೆಂಗಳೂರಿಂದ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟ ಹಾಗೂ ಭಾರತೀಯ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.. ಕೆಆರ್ ಪುರದ ಸಂತೆ ಮೈದಾನದಿಂದ ಟಿನ್ ಫ್ಯಾಕ್ಟರಿ ವರೆಗೆ ಕಾಲ್ನಡಿಗೆ ಜಾಥ ನಡೆಸಿ ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.. ಬಳಿಕ ಮಾತನಾಡಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಲೆ ಶ್ರೀನಿವಾಸ್ ಅವರು, ಸರ್ಕಾರವು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ವ್ಯಾಪಾರವನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರಿಂದ ಮಾಲ್ ಗಳ ನಿರ್ಮಾಣ ಮಾಡುವ ಮೂಲಕ ಬಡವರನ್ನು ಸರ್ವನಾಶ ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.. ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದ್ದು, ಕೂಡಲೇ ಸರ್ಕಾರ ಬ್ರ್ಯಾಂಡ್ ಬೆಂಗಳೂರನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.. ಹಿಂಪಡೆಯದಿದ್ದಲ್ಲಿ ಆಗಸ್ಟ್ 14 ರಂದು ಕೆಪಿಸಿಸಿ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದೆಂದು…
ಬೆಂಗಳೂರು: ದುನಿಯಾ ದಿನೇ ದಿನೇ ಕಾಸ್ಟ್ಲಿ ಆಗ್ತಿದೆ.ಜನ ಸಾಮಾನ್ಯರಂತೂ ಅಂತೂ ಬದುಕೋಕೆ ಆಗ್ತಿಲ್ಲ.ಪೆಟ್ರೋಲ್,ಡಿಸೇಲ್ ,ಎಲ್ಪಿಜಿ ಗ್ಯಾಸ್ ,ಕರೆಂಟ್ ಬಿಲ್ ಗಗನಕ್ಕೇರಿದೆ.ಇಷ್ಟು ಸಾಲದು ಅಂತ ನಾಳೆಯಿಂದ ಹಾಲು, ಮೊಸರು, ದುಬಾರಿಯಾಗ್ತಿದೆ. ಕಾಫಿಗೂ ಹಾಲು,ಟೀ ಗೂ ಹಾಲು,ಅಭಿಷೇಕಕ್ಕೂ ಹಾಲು,ಅಡುಗೆ ಮನೆಯಲ್ಲಿ ಹಾಲು ಇಲ್ಲದೆ ದಿನವೇ ನಡೆಯಲ್ಲ.ಇನ್ನೂ ಮೊಸರು ಮಜ್ಜಿಗೆ ಅಂತೂ ಬೇಕೇ ಬೇಕು.ನಿತ್ಯ ಬದುಕಿಗೆ ತೀವ್ರ ಅಗತ್ಯವಾಗಿರುವ ಹಾಲು- ಮೊಸರು ದರ ನಾಳೆಯಿಂದ ಪ್ರತಿ ಲೀಟರ್ ಮೂರು ರೂಪಾಯಿ ಏರಿಕೆಯಾಗ್ತಿದೆ..ಹೌದು.ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರೋ ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್ ಕಾಡ್ತಾನೇ ಇದೆ.ಶ್ರೀಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ.ಎಲ್ಲಾವೂ ತುಂಬಾನೇ ಕಾಸ್ಟ್ಲಿ.ಆದರೆ ಕಳೆದ ಕೆಲ ದಿನದಿಂದ ಹಾಲು,ಮೊಸರು ದರ ಏರಿಕೆಗೆ ತಡೆ ಹಿಡಿದ್ದ ಸರ್ಕಾರ ಇದೀಗ ಅಳೆದು ತೂಗಿ ದರ ಪರಿಷ್ಕರಣೆ ಗ್ರೀನ್ ಸಿಗ್ನಲ್ ನೀಡೇಬಿಟ್ಟಿದೆ. ಹಾಲಿನ ದರ ಪ್ರತಿ ಲೀಟರ್ ಗೆ 5 ರೂ ಹೆಚ್ಚಳ ಮಾಡುವಂತೆ ಹಾಲು…
ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಯೋಜನೆ.ಆದ್ರೆ ಈ ಯೋಜನೆ ಇನ್ನೂ ಕಾಗದ ಮೇಲಿನ ಘೋಷಣೆಯಾಗೇ ಉಳಿಸಿದೆ.ಹೀಗಾಗಿ ಮಹತ್ವಾಕಾಂಕ್ಷೆಯ ಯೋಜನೆ ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣ್ತಿಲ್ಲ.ಯೋಜನೆ ಉಸ್ತುವಾರಿ ಹೊತ್ತುಕೊಂಡ ಬಿಡಿಎ ಬರೀ ಟೆಂಡರ್ ಪ್ರಕ್ರಿಯೆಯಲ್ಲೇ ಕಾಲಹರಣ ಮಾಡ್ತಿದೆ.ಆದ್ರೆ ಇದೀಗ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಮರುಜೀವ ನೀಡಲು ಮುಂದಾಗಿದೆ. ಈ ಸಂಬಂಧ ಇವತ್ತು ಡಿಸಿಎಂ ಭೂಮಿ ಕೊಟ್ಟ ರೈತರ ಜತೆ ಸಭೆ ನಡೆಸಿ ಸಮಸ್ಯೆ ಆಲಿಸಿದ್ದಾರೆ. . ಬೆಂಗಳೂರು ಬೃಹತ್ ಆಕಾರವಾಗಿ ಬೆಳೆದಿದೆ.ನಗರದ ಬೆಳೆದಂತೆ ಟ್ರಾಫಿಕ್ ಕೂಡ ವಿಪರೀತವಾಗಿ ಹೆಚ್ಚಾಗ್ತಿದೆ.ಭವಿಷ್ಯದಲ್ಲಿ ಬೆಂಗಳೂರು ಟ್ರಾಫಿಕ್ ದಟ್ಟನೆ ಹಿತದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡ್ತಿರೋ ಫೆರಿಫೆರೆಲ್ ರಿಂಗ್ ಯೋಜನೆ ದಿನೇ ದಿನೇ ಹಳ್ಳ ಹಿಡಿಯುತ್ತಿದೆ.ಈ ಯೋಜನೆ 2006 ರಲ್ಲೇ ಘೋಷಣೆಯಾಗಿತ್ತು.ಆದ್ರೆ ಭೂಸ್ವಾಧೀನ ಪ್ರಕ್ರಿಯೆ ಪರಿಸರ ಇಲಾಖೆ ಅನುಮತಿಯಲ್ಲಿನ ವಿಳಂಬದಿಂದ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.ಆದ್ರೆ ಕಳೆದ 18 ವರ್ಷದಿಂದ ನೆನಗುದಿಗೆ ಬಿದ್ದಿರುವ ಪೆರಿಫೆರೆಲ್ ರಸ್ತೆ ನಿರ್ಮಾಣಕ್ಕೆ ಇದೀಗ ಮರುಜೀವ…
ಬೆಂಗಳೂರು: ಖಾಸಗಿ ವಾಹನ ಚಾಲಕ ಮತ್ತು ಮಾಲಿಕರ ಜತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಂತಿನಗರದ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಸಭೆಯಲ್ಲಿ ಓಲಾ, ಉಬರ್ ಸಂಸ್ಥೆಗಳು ಮಾತ್ರ ಭಾಗಿಯಾಗಿವೆ. ಆಟೋ, ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಜೊತೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ ಹಿನ್ನೆಲೆ ಸಾರಿಗೆ ಒಕ್ಕೂಟದಿಂದ ಎಲ್ಲರೂ ಬಂದ್ಗೆ ಕರೆ ಕೊಟ್ಟಿದ್ದೇವೆ. ಹೀಗಾಗಿ ಒಟ್ಟಿಗೆ ಸಭೆ ಕರೆಯುವಂತೆ ಆಗ್ರಹಿಸಿವೆ. ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ರ್ಯಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ಆಟೋ ಚಾಲಕರ ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಮೆ ಮಾಡಿಸಬೇಕು ಅಂತಾ ಚಾಲಕರು ಮನವಿ ಮಾಡಿದ್ದಾರೆ. ಚಾಲಕರ ದಿನಾಚರಣೆ ಮಾಡಲು ಕೋರಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ, ಏರ್ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಓಪನ್ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್ ಓಪನ್ ಮಾಡುತ್ತೇವೆ. ಖಾಸಗಿ ಬಸ್ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ…