ಕೋಲಾರ: ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ವಿಚಾರ ಸಂಬಂಧಿಸಿದಂತೆ ಕೋಲಾರದಲ್ಲಿ ಮಹಿಳೆಯರ ಆಕ್ರೋಶ ತಾರಕಕ್ಕೇರಿದೆ. ಹೌದು ಸಾಲ ವಸೂಲಿಗೆ ತೆರಳಿದ್ದ ವೇಳೆ ಮಹಿಳೆಯರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಬೈಕ್‍ಗೆ ಬೆಂಕಿ ಹಚ್ಚಿದ ಘಟನೆ ಕೋಲಾರ ದಲ್ಲಿ (Kolar) ಇಂದು ನಡೆದಿದೆ. ಸ್ತ್ರೀಶಕ್ತಿ ಸಂಘದ ಸಾಲ ವಸೂಲಾತಿಗೆ ಡಿಸಿಸಿ ಬ್ಯಾಂಕ್ (DCC Bank) ಸಿಬ್ಬಂದಿ ಕೋಲಾರದ ಮುಳಬಾಗಿಲಿನ (Mulabagilu) ಬಿಸ್ನಹಳ್ಳಿ ಗ್ರಾಮಕ್ಕೆ ತೆರಳಿದ್ದರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಅಲ್ಲದೇ ಅಲ್ಲಿದ್ದ ಬೈಕ್‍ಗೆ ಬೆಂಕಿ ಹಚ್ಚಿ ಸಿಬ್ಬಂದಿ ಮತ್ತೆ ಬಂದರೆ ಅವರ ಬೈಕ್‍ಗೂ ಇದೇ ಗತಿ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರು ಗೋಕುಂಟೆ ಸೊಸೈಟಿಯಲ್ಲಿ ಸಾಲ ಪಡೆದಿದ್ದರು. ಸಾಲ ವಸೂಲಿಗೆ ಸೊಸೈಟಿ ಸಿಬ್ಬಂದಿ ಜೋಸೆಫ್ ತೆರಳಿದ್ದರು. ಈ ವೇಳೆ ಸಾಲ ಕಟ್ಟೋದಿಲ್ಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ ಎಂದು ಮಹಿಳೆಯರು ಹೇಳಿದ್ದಾರೆ. ಅಲ್ಲದೇ ಮಹಿಳೆಯರಿಂದ ಸಿಬ್ಬಂದಿಯ ಮೇಲೆ ಹಲ್ಲೆಯ ಯತ್ನ ಕೂಡ ನಡೆದಿದೆ.
Author: Prajatv Kannada
ವಿಜಯಪುರ: ರಾಜ್ಯದಲ್ಲಿ ವಿದ್ಯುತ್ ದರ(Current bill)ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ (MB Patil)ತಿಳಿಸಿದ್ದಾರೆ. ಕೆಇಆರ್ಸಿ ವಿದ್ಯುತ್ ದರ ಹೆಚ್ಚಳ ಮಾಡಿದೆ. ನಾವು ಅಧಿಕಾರಕ್ಕೆ ಬರುವ ಮೊದಲೇ ವಿದ್ಯುತ್ ದರ ಹೆಚ್ಚಳ ಆಗಿದೆ. ಬೆಲೆ ಏರಿಕೆಗೂ ನಮಗೂ ಯಾವ ಸಂಬಂಧವಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಹಿಂಪಡೆಯಲು ಆಗಲ್ಲ ಎಂದಿದ್ದಾರೆ. ಆದರೂ ಸಹ ನಾನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಕೈಗಾರಿಕೋದ್ಯಮಿಗಳು ಸಹಕರಿಸಿ ಎಂದು ವಿನಂತಿ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಜಾರ್ಜ್ ಜತೆ ಚರ್ಚಿಸುತ್ತೇನೆ ಎಂದರು.
ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ಪಾಪಿ ತಂದೆ ಇಬ್ಬರು ಪುಟ್ಟ ಮಕ್ಕಳ ಕುತ್ತಿಗೆ ಕೂದು ಕೊಲೆ ಮಾಡಿ ತನ್ನ ಮಡದಿಗೂ ಮಾರ ಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ಫಾಂ ಹೌಸ್‌ನಲ್ಲಿ ಜರುಗಿದೆ. ನಾಲ್ಕು ವರ್ಷದ ಆದರ್ಶ ಹಾಗೂ ಎರಡು ಅಮೂಲ್ಯ ತಂದೆಯಿಂದ ಕೊಲೆಯಾದ ದುರ್ದೈವಿ ಮಕ್ಕಳಾಗಿದ್ದಾರೆ. ಶ್ರೀಕಾಂತ್ ಎಂಬ ಪಾಪಿ ತಂದೆ ತನ್ನ ಇಬ್ಬರು ಮಕ್ಕಳನ್ನು ಕೊಂದು ತನ್ನ ಪತ್ನಿ ಲಕ್ಷ್ಮೀಗೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಶ್ರೀಕಾಂತ್ ಗುಲ್ಬರ್ಗ ಜಿಲ್ಲೆಯ ಗಾಣಗಪುರ ಗ್ರಾಮದವರಾಗಿದ್ದು, ಲಕ್ಷ್ಮಿ, ಶ್ರೀಕಾಂತ್ ಮದುವೆಯಾಗಿ 6 ವರ್ಷಗಳಾಗಿತ್ತು. ಮದುವೆಯಾ ದಾಗಿನಿಂದ ಒಂದೆಲ್ಲಾ ಒಂದು ವಿಚಾರಕ್ಕೆ ಗಲಾಟೆಯಾಗುತ್ತಿತ್ತು. ನಿನ್ನೆ ಶ್ರೀಕಾಂತ್ ತನ್ನ ತಂದೆ ತಾಯಿ ಜೊತೆ ಗಲಾಟೆ ಮಾಡಿಕೊಂಡು ಶ್ರೀರಂಗಪಟ್ಟಣ ಸಮೀಪದ ಮರಳಗಾಲ ಗ್ರಾಮದ ವಿರುಪಾಕ್ಷ ಎಂಬುವವರ ತೋಟದ ಮನೆಯಲ್ಲಿ ಕೆಲ ಮಾಡುತ್ತಿದ್ದ ಅತ್ತೆ-ಮಾವನ ಮನೆಗೆ ಬಂದಿದ್ದಾರೆ. ಬಳಿಕ ಇಲ್ಲೇ ಒಂದು ಕೆಲಸ ಕೊಡಿಸಿ ನಾವು ಇಲ್ಲಿಯೇ ಇರುತ್ತೇವೆ ಎಂದು ಶ್ರೀಕಾಂತ್…
ಬೆಂಗಳೂರು: ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ನಿಂತಿಲ್ಲ. ಕಳೆದ ಮೂರು ವರ್ಷಗಳಲ್ಲಿ 79,057 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಹೌದು, ಬೆಂಗಳೂರು ನಗರದ ಕೆಲವು ಗಲ್ಲಿಗಳಲ್ಲಿ ನಡೆದಾಡಲೂ ಭಯದ ವಾತಾವರಣ ಇದೆ. ಬೈಕ್ ಸವಾರರ ಮೇಲೂ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಬೀದಿ ನಾಯಿಗಳ ಕಾಟದಿಂದಾಗಿ ರಸ್ತೆಯಲ್ಲಿ ರಾತ್ರಿ ಹೊತ್ತು ನಡೆದಾಡಲೂ ಭಯಪಡುವಂತಾಗಿದೆ. ಕೆಲವೊಂದು ಘಟನೆಗಳು ನಡೆದಾಗ ಎಚ್ಚೆತ್ತುಕೊಳ್ಳುವ ಬಿಬಿಎಂಪಿ ಅಧಿಕಾರಿಗಳು ನಂತರದಲ್ಲಿ ಸೈಲೆಂಟ್ ಆಗಿ ಕೂತಿರುತ್ತಾರೆ. ಆದರೆ ಈ ಹಾವಳಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಿಟಿಯಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ದಾಂಗುಡಿ ಇಡುತ್ತಿದ್ದು, ಮಕ್ಕಳ ಮೇಲೆ ಹೆಚ್ಚಾಗಿ ಎಗುರಿ ಬೀಳ್ತಿವೆ. ಕಳೆದ ಕೆಲವು ದಿನಗಳಿಂದ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮಕ್ಕಳ ಮೇಲಿನ ದಾಳಿ ಪ್ರಕರಣ ಹೆಚ್ಚಾಗುತ್ತಿವೆ ಹೀಗಾಗಿ ಪಾಲಿಕೆ ನಾಯಿ ಕಡಿತ ಪ್ರಕರಣ ತಪ್ಪಿಸಲು ಜಾಗೃತಿ…
ಬೆಂಗಳೂರು: ನಿಮ್ಮ ವ್ಯಾಪ್ತಿಯ ಒಂದು ಠಾಣೆಗೆ ದಿಢೀರ್ ಭೇಟಿ ನೀಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (Alok Mohan) ಸೂಚನೆ ನೀಡಿದ್ದಾರೆ. ಆ ಮೂಲಕ ಪೊಲೀಸರ ಕಾರ್ಯವೈಖರಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ. ಭದ್ರತೆಗೆ ನಿಯೋಜನೆಯಾಗಿದ್ದರೆ ಅಧಿಕಾರಿಗಳ ಸಂಪರ್ಕದಲ್ಲಿ ಇರಬೇಕು ಎಂದು ಹೇಳಿದ್ದಾರೆ.ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ಗಳ ಜೊತೆಗೂ ಸಂವಹನ ನಡೆಸಿ. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಜೊತೆ ಚರ್ಚೆ ನಡೆಸಬೇಕು. ಕಮಿಷನರ್, ಎಸ್ಪಿ ವಾರದಲ್ಲಿ ಒಂದು ದಿನ ನೈಟ್ ರೌಂಡ್ಸ್ ಮಾಡಬೇಕು. ನೈಟ್ ಬೀಟ್ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಲು ದಿಢೀರ್ ಭೇಟಿ ನೀಡಿ ಎಂದು ತಿಳಿಸಿದ್ದಾರೆ.
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ (School Bag Weight) ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ (Education Department) ಮಹತ್ವದ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ತರಗತಿ ಮತ್ತು ತೂಕದ ವಿವರ: 1-2ನೇ ತರಗತಿ – 1.5 ರಿಂದ 2 ಕೆಜಿ 3-5ನೇ ತರಗತಿ – 2-3 ಕೆಜಿ 6-8ನೇ ತರಗತಿ – 3-4 ಕೆಜಿ 9-10ನೇ ತರಗತಿ – 4-5 ಕೆಜಿ ಹೊರೆ ಇಳಿಸಲು ಅಧ್ಯಯನ ನಡೆಸಿದ ಡಿಎಸ್‌ಇಆರ್‌ಟಿ: ಎನ್‌ಎಲ್‌ಎಸ್‌ಯುಐ, ಸೆಂಟರ್ ಫಾರ್ ಚೈಲ್ಡ್ ಲಾ ಇವರ ಸಹಯೋಗದೊಂದಿಗೆ ಅಧ್ಯಯನ ಮಾಡಿದ ಡಿಎಸ್‌ಇಆರ್‌ಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ವಿದ್ಯಾರ್ಥಿಗಳ ದೇಹದ ತೂಕದ 10-15% ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಲು…
ಬೆಂಗಳೂರು: ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿಲ್ಲ. ಕಾಂಪೌಂಡ್ ಹಾಗೂ ಶೆಡ್ಗಳನ್ನು ತೆರವು ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಯಲಹಂಕ, ಮಹದೇವಪುರ ಸೇರಿ ಹಲವೆಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೋರ್ಟ್ನಿಂದ ಸ್ಟೇ ತಂದಿರುವ ಕಡೆ ತೆರವು ಕಾರ್ಯಾಚರಣೆ ಇಲ್ಲ. ಉಳಿದ ಎಲ್ಲಾ ಕಡೆ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಮೈಸೂರು: ಮೈಸೂರು ಜಿಲ್ಲೆಯಲ್ಲಿ(Mysuru Crime) ಜೋಡಿ ಕೊಲೆ ನಡೆದಿದ್ದು, ಸಾಮಿಲ್ ನಲ್ಲಿ ಇದ್ದ ಇಬ್ಬರು ಕಾವಲುಗಾರರನ್ನು ಹತ್ಯೆ ಮಾಡಲಾಗಿದೆ. ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶ್ ಹಾಗೂ ಶಣ್ಮುಗ ಎಂಬುವರನ್ನ ಕೊಲೆ ಮಾಡಲಾಗಿದೆ. ಪಟ್ಟಣದ ಎಸ್.ಎಸ್.ಸಾಮಿಲ್ ನಲ್ಲಿ ಘಟನೆ ನಡೆದಿದ್ದು, ಪ್ರತಿದಿನ ಮುಂಜಾನೆ 6 ಗಂಟೆಗೆ ವೆಂಕಟೇಶ್ ಸಾಮಿಲ್ ನಿಂದ ಹೊರಗೆ ಬರುತ್ತಿದ್ದರು.ಇಂದು 7 ಗಂಟೆ ಆದ್ರೂ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆ ಮನೆಯವರು ಮಾಲೀಕರಿಗೆ ವಿಚಾರ ಮುಟ್ಟಿಸಿದ್ದಾರೆ.ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.ಮೃತ ಷಣ್ಮುಗ ಮಾನಸಿಕ ಅಸ್ವಸ್ಥನಾಗಿದ್ದನೆಂದು ಹೇಳಲಾಗಿದೆ.ಸಾಮಿಲ್ ನಲ್ಲಿ ಸಿಗುವ ಸೌದೆಗಳನ್ನ ಮಾರಿಕೊಂಡು ಜೀವನ ನಡೆಸುತ್ತಿದ್ದ ಎಂದು ಹೇಳಲಾಗಿದೆ.ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಅಮಾಯಕರನ್ನ ಹತ್ಯೆ ಮಾಡಿದ ದುಷ್ಕರ್ಮಿಗಳ ಸಂಚು ಏನು ಎಂದು ತಿಳಿದು ಬಂದಿಲ್ಲ.ಸ್ಥಳಕ್ಕೆ ಅಡಿಷನಲ್ ಎಸ್ಪಿ ನಂದಿನಿ ರವರು ಹಾಗೂ ಡಿವೈಎಸ್ಪಿ ಭೇಟಿ ನೀಢಿದ್ದಾರೆ.
ಬೆಂಗಳೂರು: ಡಿಜಿ & ಐಜಿಪಿ ಅಲೋಕ್ ಮೋಹನ್ (Alok Mohan)ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ.ಬೆಂಗಳೂರು ನಗರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯಲಿದ್ದು ಪೊಲೀಸ್ ಆಯುಕ್ತ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರಿನ(Bangalore) ಎಲ್ಲ ವಿಭಾಗದ ಡಿಸಿಪಿಗಳು, IPS ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಫೇಕ್ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ. ಕಳೆದ ಬಾರಿ ಕೂಡ ಬೆಂಗಳೂರಿನ ಐಪಿಎಸ್ ಗಳ ಸಭೆ ನಡೆಸಿದ್ದ ಅಲೋಕ್ ಮೋಹನ್ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿ ಬಾಕಿ ಉಳಿದಿದ್ದ ಪ್ರಕರಣಗಳ ಬಗ್ಗೆ ಡಿಟೇಲ್ಸ್ ಪಡೆದಿದ್ರು.
ಬೆಂಗಳೂರು: ಶಕ್ತಿ ಯೋಜನೆ ಬಂದ ಮೇಲೆ ವೋಲ್ವೋ ಬಸ್ ಆದಾಯ ನಷ್ಟ ಆಗುತ್ತೆ ಎಂದೇ ಭಾವಿಸಲಾಗಿತ್ತು. ಆದರೆ BMTC Volvo Bus ಖಾಲಿ ಓಡಾಡ್ತಿಲ್ಲ.ಕಳೆದೊಂದು ವಾರದಿಂದ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆ ಆಗ್ತಿದೆ. ಮಹಿಳೆಯರು ದುಡ್ಡು ಕೊಟ್ಟೂ ಬಸ್ ಲ್ಲಿ ಪ್ರಯಾಣ ಮಾಡ್ತಿದಾರೆ ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್ ಬಿಳಿಯಾನೆ ಸಾಕಿದಂತೆ. ಆರಂಭದಲ್ಲೂ ಈ ಬಸ್ ಗಳು ಲಾಭಕ್ಕಿಂತ ನಷ್ಟ ಮಾಡಿದ್ದೆ ಹೆಚ್ಚು. ಆದ್ರೆ ಶಕ್ತಿ ಯೋಜನೆ ಜಾರಿಯಾದ್ಮೇಲೆ ವೋಲ್ವೋ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ವ್ಯಕ್ತವಾಗಿತ್ತು. ಆದ್ರೆ ಬಿಎಂಟಿಸಿಗೆ ಬೊಕ್ಕಸ ತುಂಬಿಸುತ್ತಿರುವ ಶಕ್ತಿ ಯೋಜನೆ ಆಗುತ್ತಿದೆ. BMTC ಐಷಾರಾಮಿ ಬಸ್ ಗಳಿಗೆ ಶಕ್ತಿ ತುಂಬಿದ ಸರ್ಕಾರದ ‘ಶಕ್ತಿ’ ಸ್ಕೀಂ ಆಗುತ್ತಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ವೋಲ್ವೋ ಬಸ್ಗಳಿಲ್ಲ ಎಫೆಕ್ಟ್ ಇಲ್ಲ. ಕಳೆದೊಂದು ವಾರದಲ್ಲಿ ವೋಲ್ವೋ, ವಜ್ರ ಬಸ್ ಗಳ ಪ್ರಯಾಣದಲ್ಲಿ ಗಣನೀಯ ಏರಿಕೆ ಆಗಿದೆ. ದಿನನಿತ್ಯ ನಿತ್ಯ 5 ರಿಂದ 6 ಸಾವಿರ ಪ್ರಯಾಣಿಕರ ಸಂಖ್ಯೆ…