Author: Prajatv Kannada

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಒಂಟಿಕೊಪ್ಪಲು ವೆಂಕಟರಮಣ ಸ್ವಾಮಿ ದೇಚಾಲಯದ ಸಮೀಪದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಭಾರೀ ಪ್ರಮಾಣದ ನೀರು ಪೋಲಾಗಿದೆ. ಮೈಸೂರು ನಗರಕ್ಕೆ ಬೆಳಗೊಳ ಪಂಪ್ ಹೌಸ್ ನಿಂದ ನೀರು ಸರಬರಾಜು ಮಾಡುವ‌ ಪ್ರಮುಖ ಪೈಪ್ ಲೈನ್ ಗೆ ಸಂಪರ್ಕವಿರುವ ನೀರಿನ ಕೊಳವೆ ಒಡೆದಿದ್ದರಿಂದ ರಸ್ತೆ ಮಧ್ಯೆ‌ ನೀರು ಕಾರಂಜಿಯಂತೆ ಚಿಮ್ಮುತ್ತಾ ಪೋಲಾಗಿದ್ದನ್ನು ಕಂಡು ಸಾರ್ವಜನಿಕರು ಗಾಬರಿಗೊಂಡರು. ಈ ಸಂಬಂಧ ವಾಣಿವಿಲಾಸ ವಾಟರ್ ವರ್ಕ್ಸ್ ಸಿಬ್ಬಂದಿಗೆ ಕರೆ ಮಾಡಿದರೂ ಬಹಳ ಹೊತ್ತು ಅವರು ಸ್ಥಳಕ್ಕೆ ಬಾರದೆ ನೀರು ಪೋಲಾಯಿತು.

Read More

ಬೆಂಗಳೂರು: ಯಾವುದೇ ಸುಳ್ಳು ಕೇಸ್ ಹಾಕಿದರೂ ನ್ಯಾಯಾಲಯದ ಮೇಲೆ ನಂಬಿಕೆ ಇದೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಸುಪ್ರೀಂಕೋರ್ಟ್ (Supremecourt) ನಿಂದ ಡಿಕೆ ಶಿವಕುಮಾರ್ ಗೆ ರಿಲೀಫ್ ವಿಚಾರ ಮಾತನಾಡಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ನನಗೆ ಯಾರೂ ಮಾಹಿತಿ ಕೊಟ್ಟಿಲ್ಲ ಎಂದರು ಆದಾಯಕ್ಕೂ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ತನಿಖೆಗೆ ಮಧ್ಯಂತರ ತಡೆ ನೀಡಿದ್ದ ಹೈಕೋರ್ಟ್ (Highcourt) ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

Read More

ಕೋಲಾರ : ರಾಕೇಶ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಸೂಕ್ತ ತನಿಖೆಗೆ ಆಗ್ರಹಿಸಿ ಗ್ರಾಮಸ್ಥರು  ಕಾಲ್ನಡಿಗೆ ಜಾಥಾ ನಡೆಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ,  ಚಲ್ದಿಗಾನಹಳ್ಳಿ ಗ್ರಾಮದಿಂದ ತಾಲ್ಲೂಕು ಕಚೇರಿಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು. ಜುಲೈ 18 ರಂದು ಅನುಮಾನಾಸ್ಪದವಾಗಿ ಕೃಷಿ ಹೊಂಡದಲ್ಲಿ ಅನುಮಾನಸ್ಪದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಮೃತ ಯುವಕ ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್  ಎಂದು ಗುರುತಿಸಲಾಗಿತ್ತು. 17 ವರ್ಷದ ರಾಜೇಶ್​ ಚಿಂತಾಮಣಿ ಕಾಲೇಜಿನಲ್ಲಿ ಡಿಪ್ಲೋಮೋ ಓದುತ್ತಿದ್ದ. ನಮ್ಮ ಮಗನನ್ನು ಕೊಲೆ ಮಾಡಲಾಗಿದೆಯೆಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಈಗಾಗಲೇ ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂದಿಸುವಂತೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ  ಸಾರ್ವಜನಿಕರು ಜಾಥಾ ನಡೆಸಿದ್ರು. ಕಾಲ್ನಡಿಗೆ ಜಾಥಾದಲ್ಲಿ ವಿವಿಧ ದಲಿತಪರ,ಪ್ರಗತಿಪರ, ಹಾಗೂ ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಿದ್ರು. ಮುನ್ನೆಚ್ಚರಿಕೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ  ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು

Read More

ಬೆಂಗಳೂರು: ರಾಜ್ಯದಲ್ಲಿ ಹಚ್ಚುತ್ತಿರು ಮದ್ರಾಸ್ ಐ ಹಿನ್ನಲೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹಾಗೂ ಸಲಹೆ ನೀಡಿದೆ.ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟುಮಾಡುತ್ತದೆ. ಈ ಬಾರಿ ರಾಜ್ಯದಲ್ಲಿ ಮಳೆಗಾಲಕ್ಕೂ ಮುನ್ನವೇ ʻಮದ್ರಾಸ್‌ ಐʼ ಪ್ರಕರಣ ಕಾಲಿಟ್ಟಿತ್ತು. ಈ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಮದ್ರಾಸ್ ಐ ನಾ ರೋಗ ಲಕ್ಷಣಗಳು ಕಣ್ಣು ಕೆಂಪಾಗುವುದು, ನೀರು ಸೋರುವಿಕೆ ಅತಿಯಾದ ಕಣ್ಣೀರು ಕಣ್ಣಿನಲ್ಲಿ ತುರಿಕೆ ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು ದೃಷ್ಟಿ ಮಂಜಾಗುವುದು ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು

Read More

ಹುಬ್ಬಳ್ಳಿ: ಶಕ್ತಿ ಯೋಜನೆ ವಿರೋಧಿಸಿ  ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಪ್ರತಿಭಟನೆ ಮಾಡುತ್ತಿದ್ದಾರೆ. ನೂರಾರು ಆಟೋ ಚಾಲಕರು, ಮಾಲೀಕರು ಪ್ರತಿಭಟನೆ ಮಾಡುತ್ತಿದ್ದು, ಶಕ್ತಿ ಯೋಜನೆಯನ್ನು ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಆಟೋ ಸಂಚಾರ ಸಂಪೂರ್ಣ ಬಂದ್ ಆಗಿದೆ.

Read More

ಯಾದಗಿರಿ: ಬೆಂಗಳೂರಿನಿಂದ ಕಲಬುರಗಿಗೆ (Kalaburagi) ಶವ ಸಾಗಿಸುತ್ತಿದ್ದ ಅಂಬುಲೆನ್ಸ್‌ (Ambulance) ಉರುಳಿ ಬಿದ್ದ ಘಟನೆ ಯಾದಗಿರಿಯ ಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಲಬುರಗಿ ನಗರದ ನಿವಾಸಿ ರಾಜು (45) ಶನಿವಾರ ಬೆಂಗಳೂರಿನಲ್ಲಿ (Bengaluru) ಮೃತಪಟ್ಟಿದ್ದರು. ರಾಜು ಅವರ ಶವವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಯಾದಗಿರಿಯ (Yadagiri) ಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬುಲೆನ್ಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಕುಟುಂಬಸ್ಥರು ಇನ್ನೊಂದು ವಾಹನದಲ್ಲಿ ಶವ ಕೊಂಡೊಯ್ದಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು 2023-24ನೇ ಸಾಲಿನ ಎಸ್‌.ಸಿ.ಎಸ್‌.ಪಿ./ ಟಿ.ಎಸ್.ಪಿ. ಕ್ರಿಯಾ ಯೋಜನೆ ಅನುಮೋದಿಸುವ ಕುರಿತ ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಸದಸ್ಯರಾದ ಸಚಿವರುಗಳಾದ ನಾಗೇಂದ್ರ, ಹೆಚ್‌.ಕೆ. ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ಎಂ.ಸಿ. ಸುಧಾಕರ್‌ ಹಾಜರಿದ್ದು, ರಾಜ್ಯ ಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಪ್ರಸಾದ ಅಬ್ಬಯ್ಯ, ಇ. ತುಕಾರಾಂ, ಪ್ರಕಾಶ ರಾಥೋಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಚಿಕ್ಕಮಗಳೂರು: ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ (Gruhajyothi) ಆರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ ಬರುವ ಜುಲೈ ತಿಂಗಳ ಬಿಲ್ ಎಲ್ಲರಿಗೂ ಫ್ರೀ ಸಿಗಲಿದೆ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ (K.J.George) ಹೇಳಿದ್ದಾರೆ. ಚಿಕ್ಕಮಗಳೂರು (Chikkamagaluru) ನಗರದ ನೌಕರರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಮನ್ ಚಾಂಡಿಯವರು ನಿಧನ ಹೊಂದಿದ್ದರಿಂದ ಸಭೆ ಮುಂದೆ ಹೋಗಿದೆ ಅಷ್ಟೇ. ರಾಹುಲ್ ಗಾಂಧಿ (Rahul Gandhi) ಬಾರದ ಕಾರಣ ಸಭೆ ತಾತ್ಕಾಲಿಕವಾಗಿ ಪೋಸ್ಟ್‌ಪೋನ್‌ ಆಗಿದೆ. ಯಾರ ಮೇಲೂ ಯಾರಿಗೆ ಅಸಮಾಧಾನ, ಏನೂ ಇಲ್ಲ ಎಂದರು. ಯಾರೂ ಕೂಡಾ ಶಾಸಕ ಬಿ.ಆರ್.ಪಾಟೀಲ್ (B.R.Patil) ಅವರ ರಾಜೀನಾಮೆ ಕೇಳಿಲ್ಲ. ಪಾಟೀಲ್ ವಿಚಾರದಲ್ಲಿ ಒಳ್ಳೆಯದ್ದನ್ನೇ ಮಾತನಾಡಿದ್ದಾರೆ. ಕೆಲ ಸಚಿವರಿಗೆ ಬೇಜಾರು ಇರಬಹುದು. ಯಾಕೆಂದರೆ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ. ಆದರೆ ಅದನ್ನು ಪುನಃ ಪ್ರಾರಂಭ ಮಾಡಲು ಆದೇಶ ನೀಡಲು ಮುಂದಾಗಿದ್ದಾರೆ. ಬಜೆಟ್‌ನಲ್ಲಿ ಇರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಆಗುತ್ತದೆ. ಆದರೆ ಹೊಸ ಕಾರ್ಯಕ್ರಮಕ್ಕಷ್ಟೇ ನಿರ್ಬಂಧ ಎಂದು…

Read More

ಬೆಂಗಳೂರು: ರಾಜ್ಯದಲ್ಲಿ ಒಂದು ಸಮುದಾಯದ ಪರವಾಗಿ ಆಡಳಿತ ನಡೆಯುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್​ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಾವು ಬಿಜೆಪಿ ಮಾತು ಕೇಳಿ ಆಡಳಿತ ನಡೆಸುತ್ತಿಲ್ಲ. ಬಿಜೆಪಿಯನ್ನ ಜನರೇ ತಿರಸ್ಕರಿಸಿದ್ದಾರೆ. ತಿರಸ್ಕಾರವಾದ ಜನರ ಬಗ್ಗೆ ನನ್ನ ಮುಂದೆ ಹೇಳಲು ಹೋಗ್ಬೇಡಿ ಎಂದು ಗರಂ ಆಗಿದ್ದಾರೆ. ಇನ್ನು ಆಲಮಟ್ಟಿ ಡ್ಯಾಂ, ಕೃಷ್ಣಾನದಿಗೆ ಸಿಎಂ ಬಾಗೀನ ಅರ್ಪಿಸುವ ವಿಚಾರವಾಗಿ ಮಾತನಾಡಿ, ಮೊದಲು ಆಲಮಟ್ಟಿ ಡ್ಯಾಂ ತುಂಬಲಿ. ಮೊನ್ನೆ ಕೆಲ ದಿನ ಒಳ ಹರಿವು ಹೆಚ್ಚಿತ್ತು. ಈಗ ಒಳ ಹರಿವು ಕಡಿಮೆಯಾಗಿದೆ, ಆತುರ ಬೇಡ. ಈಗ ಕೆನಾಲ್‌ಗಳಿಗೆ ನೀರು ಹರಿಸುವ ಕೆಲಸ ಮಾಡ್ತಿದ್ದೇವೆ. ಈ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ನಡೆಯಬೇಕಿದೆ. KBJNL ಎಂಡಿ ಜೊತೆಗೆ ಮಾತನಾಡಿದ್ದೇನೆ. ಬಾಗೀನ ಅರ್ಪಣೆಗೆ ಆತುರ

Read More

ಹುಬ್ಬಳ್ಳಿ : ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತ ಚಾಲಕರ ಮನವಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್ ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದರು.  ಆಟೋ ಚಾಲಕರ ಬೇಡಿಕೆಗಳ ಕುರಿತು ಸಿಎಂ ಹಾಗೂ ಸಾರಿಗೆ ಸಚಿವರ ಜೊತೆಗೆ ಚರ್ಚಿಸುವುದಾಗಿ ಸಚಿವ ಲಾಡ್ ಭರವಸೆ ನೀಡಿದರು. ನಿಮ್ಮ ಸಮಸ್ಯೆಗಳನ್ನ ನೇರವಾಗಿ ಸಿಎಂ‌ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಇಂದು ‌ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಯಾವ ತೀರ್ಮಾನವಾಗುತ್ತೆ ಕಾದು ನೋಡಬೇಕು ಎಂದು ಹೇಳಿದರು.  ಆಟೋ ಚಾಲಕರ ಪ್ರತಿಭಟನೆ ಬಗ್ಗೆ ನಾನು ಮನವಿ‌ ಸ್ವೀಕರಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಲಾಡ್ ತಿಳಿಸಿದ್ರು. ಅಟೋ ಚಾಲಕರ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ‌ ತರಲಾಗುವುದು. ಅಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ನೀಡುವ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.  ನಮ್ಮ ಸರ್ಕಾರ ಬಡವರ ಹಿಂದುಳಿದ ವರ್ಗಗಳ ಪರವಾಗಿದೆ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್…

Read More