ಬೆಂಗಳೂರು;- ನಗರದ ಮೆಟ್ರೊ ರೈಲು ನಿಗಮವು ನಿಲ್ದಾಣಗಳಲ್ಲಿ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಸದ್ಯ ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್ ಅಳವಡಿಸಲಾಗುತ್ತಿದೆ. ನಗರದಲ್ಲಿ 63 ಸ್ಟೇಷನ್ ಗಳಿದ್ದು ಯಾವುದರಲ್ಲಿಯೂ ಈ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಿಸುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ದೇಣಿಗೆಯಿಂದ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್ ಅಳವಡಿಸಲಾಗುತ್ತಿದೆ. ಈಗಾಗಲೇ ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಈ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಇದರಿಂದ ಮೆಟ್ರೋ ಸ್ಟೇಷನ್ ಗಳಲ್ಲಿ ಸಾಮಾಜಿಕ ಜಾಲತಾಣದ ಹುಚ್ಚಾಟ ಮತ್ತು ಸುಸೈಡ್ ಪ್ರಕರಣಗಳು ಕಡಿಮೆಯಾಗುತ್ತದೆ ಮತ್ತೊಂದು ಸಣ್ಣಪುಟ್ಟ ಮಕ್ಕಳು ಮೆಟ್ರೋ ಸ್ಟೇಷನ್ ಗೆ ಎಂಟ್ರಿ ಕೊಟ್ಟ ವೇಳೆ ಗೊತ್ತಾಗದೆ ಟ್ರ್ಯಾಕ್ ಬಳಿ ಹೋಗಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಈ ಪ್ಲಾನ್ ಮಾಡಲು ಮುಂದಾಗಿದೆ.
Author: Prajatv Kannada
ಬೆಂಗಳೂರು ;- ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಜುಲೈ 31ರಿಂದ ಆಗಸ್ಟ್ 3ರವರೆಗೆ 6ರಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಮಲೆನಾಡಿನ ಪ್ರದೇಶಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 3ಕ್ಕೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಇನ್ನುಳಿದಂತೆ ದಕ್ಷಿಣ ಒಳನಾಡಿನ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಹಗರು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಇದೇ ವಾತಾವರಣ ಮುಂದುವರಿಯಲಿದೆ. ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನದಿಗಳಿಗೆ ಜೀವ ಕಳೆ ಬಂದಿದೆ. ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಹಿರಿಯೂರು ;- ಶೀಘ್ರವೇ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೆ ಮುನಿಯಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾವು ಶೀಘ್ರವೇ ಕಾನೂನು ಸಲಹೆ ಪಡೆದು ಸದಾಶಿವ ವರದಿ ಜಾರಿ ಮಾಡುತ್ತೇವೆ. ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಅಕ್ಕಿ ಬದಲಿಗೆ ಹಣ ಹಾಕಿದ್ದೇವೆ. ನಾವು ಬಡವರ ಕೆಲಸ ಮಾಡಲು ಯಾವತ್ತೂ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ;- 2023ನೇ ಸಾಲಿನ ಎಫ್‌ಎಂಸಿಜಿ ಬ್ರ್ಯಾಂಡ್ ರ್ಯಾಂಕಿಂಗ್ ನಲ್ಲಿ ಸಹಕಾರಿ ಹಾಲು ಮಾರಾಟ ಮಹಾಮಂಡಲದ ಡೈರಿ ಬ್ರ್ಯಾಂಡ್ ನಂದಿನಿ 6ನೇ ಸ್ಥಾನಕ್ಕೆ ಏರಿದೆ. 2022ರಲ್ಲಿ 7ನೇ ಸ್ಥಾನದಲ್ಲಿದ್ದ ನಂದಿನಿ ಬ್ರ್ಯಾಂಡ್ ಈ ವರ್ಷ ಒಂದು ಸ್ಥಾನ ಮೇಲೆರಿದೆ. ಇನ್ನು 2022ರಲ್ಲಿ 2ನೇ ಸ್ಥಾನದಲ್ಲಿದ್ದ ಗುಜರಾತ್ ನ ಅಮೂಲ್ ಈ ವರ್ಷ 3ನೇ ಸ್ಥಾನಕ್ಕೆ ಕುಸಿದಿದೆ. ಬ್ರ್ಯಾಂಡ್ ಫುಟ್ ಪ್ರಿಂಟ್ ಎಂಬ ಬ್ರ್ಯಾಂಡ್ ರ್ಯಾಂಕಿಂಗ್ ಲಿಸ್ಟ್ ನ್ನು ಲಂಡನ್ ಮೂಲದ ಮಾರುಕಟ್ಟೆಯ ಸಂಶೋಧನಾ ಕಾಂತಾರ್ ವರ್ಲ್ಡ್ ಪ್ರಕಟಿಸಿದೆ.
ಬೆಂಗಳೂರು ;– ಮೆಗಾಸಿಟಿ ಹಗರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿಪಿ ಯೋಗೇಶ್ವರ್ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರದ ಗಂಭೀರ ಅಪರಾಧಗಳ ತನಿಖಾ ಇಲಾಖೆ ದಾಖಲಿಸಿದ್ದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಯೋಗೇಶ್ವರ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ವಜಾಗೊಳಿಸಿದೆ. ಆರೋಪ ಸಂಬಂಧ ಈಗಾಗಲೇ ಎಸ್‌ಎಫ್‌ಐಒ ಪ್ರಕರಣ ದಾಖಲಿಸಿ ಅದು ವಿಚಾರಣೆ ಹಂತದಲ್ಲಿದೆ. ಆದ್ದರಿಂದ ಈ ಹಂತರದಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಯೋಗೇಶ್ವರ್ ಮತ್ತು ಅವರ ಕುಟುಂಬದವರು ವಿಚಾರಣೆ ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಳಗಾವಿ;- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವಖೋಡ ಗ್ರಾಮ ಒವ್ ಸಿಬ್ಬಂದಿ, ಹಾಲಪ್ಪ ಲೋಕೂರ ಹಣ ವಸೂಲಿ ಮಾಡ್ತಿದ್ದಾನೆ. ಗೃಹಲಕ್ಷ್ಮಿ ನೋಂದಣಿಗೆ ಗ್ರಾಮ ಒನ್ ಸಿಬ್ಬಂದಿ 100 ರೂಪಾಯಿ ವಸೂಲಿ ಮಾಡ್ತಿದ್ದಾನೆ ಈ ಪ್ರಶ್ನೆ ಮಾಡಿದರೆ, ಜನರಿಗೇ ಆವಾಜ್ ಹಾಕ್ತಾನೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೇಳಿ 18 ಸಾವಿರ ನನ್ನ ಅಕೌಂಟ್‌ಗೆ ಹಾಕಕ್ಕೆ ಆಗ ಫ್ರೀ ಮಾಡ್ತೀನಿ ಅಂತಿದ್ದಾನೆ. ಗ್ರಾಮ ಒನ್ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ತಹಶೀಲ್ದಾರ್ ಬಿ.ಎಸ್ ಕಡಕಬಾವಿ ಭೇಟಿ ನೀಡಿ, ಗ್ರಾಮ ಒನ್ ಕೇಂದ್ರವನ್ನ ಸೀಜ್ ಮಾಡಿದ್ದಾರೆ.
ಮೈಸೂರು : ನೆಂಟರನ್ನು ಕರೆದ ಮೇಲೆ ಒಳ್ಳೆ ಊಟ ಹಾಕಿಸಬೇಕು. ಈ ಬಾರಿ ಸಂಪ್ರದಾಯ ಮಿಶ್ರಿತ ಅದ್ದೂರಿ ದಸರಾವನ್ನು ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ ತಿಳಿಸಿದರು. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಎಚ್‌ಸಿ ಮಹದೇವಪ್ಪ, ಈ ಬಾರಿ ಅದ್ಧೂರಿಯಾಗಿ ದಸರಾ ಮಹೋತ್ಸವ ಆಚರಿಸಲು ಚಿಂತನೆ ನಡೆದಿದೆ. ಈ ಹಿಂದೆ ಕೊರೊನಾದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ರಾಜ್ಯ ಸುಭಿಕ್ಷವಾಗಿದೆ, ಹೊಸ ಸರ್ಕಾರ ಬಂದಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಮೈಸೂರು ಸಂಸ್ಕೃತಿ, ರಾಜ ಪರಂಪರೆ ಉಳಿಸಿಕೊಂಡು ದಸರಾ ಆಚರಣೆ ಮಾಡಲಾಗುತ್ತದೆ ಎಂದರು. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಜುಲೈ 31 ರಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಎಚ್‌ಸಿ ಮಹದೇವಪ್ಪ ತಿಳಿಸಿದರು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಮತ್ತು ಕೃಷಿ ಚಟುವಟಿಕೆ…
ಬೆಂಗಳೂರು ;- ಪಕ್ಷ ನನಗೆ ಮುಂದೆ ನೀಡುವ ಯಾವುದೇ ಜವಾಬ್ದಾರಿಯನ್ನು ನಿಷ್ಟೆಯಿಂದ ಮಾಡುತ್ತೇನೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿರುವ ಸಂಬಂಧ ಟ್ವೀಟ್ ಮಾಡಿರುವ ಅವರು, ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಜವಾಬ್ದಾರಿ ನೀಡಿ ಅವಕಾಶ ಮಾಡಿಕೊಟ್ಟ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಈ ಜವಾಬ್ದಾರಿ ನನಗೆ ಬಹಳಷ್ಟು ಅನುಭವ ಮತ್ತು ಬದುಕಿಗೆ ಹೊಸ ಆಯಾಮಗಳನ್ನು ನೀಡಿದೆ. ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದ ವರೆಗಿನ ನನ್ನ ಪಯಣದಲ್ಲಿ ನಿರಂತರವಾಗಿ ಕಾರ್ಯಕರ್ತನ ಭಾವದಲ್ಲಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಅದೇ ಭಾವದಿಂದ ಕೆಲಸ, ಪಕ್ಷ ನೀಡಿದ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನಡೆಸುತ್ತೇನೆ. ಭಾರತ್ ಮಾತಾ ಕಿ ಜೈ ಎಂದು ಟ್ವೀಟ್ ಮಾಡಿದ್ದಾರೆ.
ಕೊಲಂಬೊ: . ಭಾರತದಲ್ಲಿ ಐಪಿಎಲ್ ಟೂರ್ನಿ ಜನಪ್ರಿಯತೆ ಪಡೆದುಕೊಂಡ ನಂತರ ವಿದೇಶಗಳಲ್ಲೂ ಟಿ20 ಕ್ರಿಕೆಟ್ ಸಖತ್ ಟ್ರೆಂಡ್ ಆಗಿದೆ. ಲಂಡನ್‌ನಲ್ಲಿ ಇತ್ತೀಚೆಗಷ್ಟೇ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿ ನಡೆಯಿತು. ನಂತರ ಅಮೇರಿಕದಲ್ಲಿ ಮೇಜರ್ ಕ್ರಿಕೆಟ್ ಲೀಗ್ ಟೂರ್ನಿ ಆಯೋಜನೆಗೊಂಡಿದ್ದು, ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ LPL (ಲಂಕಾ ಪ್ರೀಮಿಯರ್ ಲೀಗ್) ಟೂರ್ನಿಯ 4ನೇ ಆವೃತ್ತಿ ಆಯೋಜನೆಗೊಂಡಿದೆ. ಇಂದಿನಿಂದ ಆಗಸ್ಟ್ 21ರ ವರೆಗೆ ಲಂಕಾದ ಕೊಲೊಂಬೊ ಮತ್ತು ಕ್ಯಾಂಡಿ ಕ್ರಿಕೆಟ್ ಅಂಗಳದಲ್ಲಿ ನಡೆಯಲಿದೆ ಐಪಿಎಲ್ (IPL) ಟೂರ್ನಿ ಮಾದರಿಯಲ್ಲೇ ಲಂಕಾ ಟೂರ್ನಿಯೂ ನಡೆಯಲಿದ್ದು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಜುಲೈ 30 ಅಂದರೆ ಇಂದಿನಿಂದ ಆಗಸ್ಟ್ 21ರ ವರೆಗೆ ಲಂಕಾದ ಕೊಲಂಬೊ ಮತ್ತು ಕ್ಯಾಂಡಿ ಕ್ರಿಕೆಟ್ ಅಂಗದಲ್ಲಿ ನಡೆಯಲಿದೆ. ಆಗಸ್ಟ್ 20ರಂದು ಫೈನಲ್ ಪಂದ್ಯ ನಡೆಯಲಿದೆ ಒಂದು ವೇಳೆ ಮಳೆಯಿಂದ ಅಡ್ಡಿಯಾದರೆ ಆ.21 ರಂದು ಫೈನಲ್ ಪಂದ್ಯ ಮುಂದೂಡಲಾಗುತ್ತದೆ. ಅದಕ್ಕಾಗಿಯೇ ಒಂದು ದಿನ ಹೆಚ್ಚುವರಿಯಾಗಿ ನಿಗದಿ ಮಾಡಲಾಗಿದೆ ಎಂದು ಎಲ್‌ಪಿಎಂ…
ಮಲಯಾಳಂನ ಟಿವಿ ನಟಿಯೊಬ್ಬಾಕೆಯನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ನಟಿ ಹನಿಟ್ರ್ಯಾಪ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣ ಪೀಕಿಸುತ್ತಿದ್ದಳಂತೆ. ಪರವುರ್ನಲ್ಲಿ ಹನಿಟ್ರ್ಯಾಪ್ನಲ್ಲಿ ತೊಡಗಿಕೊಂಡಿದ್ದ ಟಿವಿ ನಟಿ ಹಾಗೂ ಆಕೆಯ ಗೆಳೆತಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಿತ್ಯಾ ಸಸಿ ಎಂಬಾಕೆ ಆಕೆಯ ಗೆಳೆಯಯೊಟ್ಟಿಗೆ ಸೇರಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರಂತೆ. ವೃದ್ಧನೋರ್ವನನ್ನು ಹನಿಟ್ರ್ಯಾಪ್ ಬಲಗೆ ಬೀಳಿಸಿ ಸುಮಾರು 11 ಲಕ್ಷ ಮೊತ್ತವನ್ನು ನಿತ್ಯಾ ಸಸಿ ಹಾಗೂ ಆಕೆಯ ಗೆಳೆಯ ಪೀಕಿಸಿದ್ದರು. ಪೊಲೀಸರು ಹೇಳಿರುವಂತೆ, 75 ವರ್ಷದ ಮಾಜಿ ಸೈನಿಕ ಹಾಗೂ ಕೇರಳ ವಿಶ್ವವಿದ್ಯಾನಿಲಯದ ಮಾಜಿ ನೌಕರನೊಬ್ಬನನ್ನು ನಟಿ ತನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಳು. ಮಾಜಿ ಸೈನಿಕ, ತನ್ನ ಮನೆಯನ್ನು ಬಾಡಿಗೆಗೆ ನೀಡಲು ಯತ್ನಿಸುತ್ತಿದ್ದಾಗ ಇವರ ಸಂಪರ್ಕಕ್ಕೆ ಬಂದ ನಟಿ ಆತ್ಮೀಯಳಾಗಿ, ಕೊನೆಗೆ ಮನೆಗೆ ಕರೆಸಿಕೊಂಡು ಸೈನಿಕನನ್ನು ವಿವಸ್ತ್ರನನ್ನಾಗಿ ಮಾಡಿ, ಆಕೆಯೂ ಬೆತ್ತಲಾಗಿ ಬಲವಂತವಾಗಿ ಒಟ್ಟಿಗೆ ಫೋಟೊ ತೆಗೆಸಿಕೊಂಡರಂತೆ. ಆ ಫೋಟೊಗಳನ್ನಿಟ್ಟುಕೊಂಡು 25 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾಳೆಂದು ತಿಳಿದು…