Author: Prajatv Kannada

ನವದೆಹಲಿ ;- ತಕ್ಷಣ ಲೋಕಸಭೆ ಚುನಾವಣೆ ನಡೆದರೆ ಯಾವ ಪಕ್ಷ ಗೆಲ್ಲಲಿದೆ? ಯಾರು ಬಹುಮತವನ್ನು ಪಡೆಯಲಿದ್ದಾರೆ ಅನ್ನೋ ಮಾಹಿತಿ ಸಮೀಕ್ಷೆಯಿಂದ ರಿವೀಲ್ ಆಗಿದೆ. ಹಾಗಾದರೆ ಪಿಎಂ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ? ಇಲ್ಲ ಸೋಲುತ್ತಾ? ಬನ್ನಿ ತಿಳಿಯೋಣ. ಯೆಸ್, 2024ರ ಲೋಕಸಭೆ ಚುನಾವಣೆ ತಕ್ಷಣ ಅಂದರೆ ಈಗಲೇ ನಡೆದರೆ, ಈಗಿನ ಸ್ಥಿತಿಯಲ್ಲಿ ಯಾವ ರಾಜ್ಯದಲ್ಲಿ ಯಾರು ಗೆಲ್ಲಲಿದ್ದಾರೆ. ಯಾರಿಗೆ ಎಷ್ಟು ಸೀಟ್ ಸಿಗಬಹುದು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅದರಲ್ಲೂ ಇತ್ತೀಚೆಗೆ ವಿಪಕ್ಷಗಳ ನಾಯಕರು ಒಗ್ಗೂಡಿ ಹೊಸ ಒಕ್ಕೂಟ ರಚಿಸಿದ್ದರು. ಇಂಡಿಯಾ ಎಂದು ಹೊಸ ಒಕ್ಕೂಟಕ್ಕೆ ಹೆಸರು ಕೂಡ ಇಟ್ಟಿದ್ದು, ಈ ಬಾರಿ ಲೋಕಸಭೆ ಚುನಾವಣೆ ಭಾರಿ ಜಿದ್ದಾಜಿದ್ದಿಯಿಂದ ಕೂಡಿರಲಿದೆ ಎನ್ನಲಾಗಿತ್ತು. ಆದರೆ ಈಗ ಹೊರಬಿದ್ದಿರುವ ಸಮೀಕ್ಷೆ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡುತ್ತಿದ್ದು, ಆ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಅಂದಹಾಗೆ ಇತ್ತೀಚೆಗಷ್ಟೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಹಾಗೇ ಬಿಜೆಪಿಗೆ ಭಾರಿ ಅಂತರದ ಸೋಲು ಕೂಡ ಎದುರಾಗಿದೆ. ಆದರೆ…

Read More

ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮೋದಿ (Narendra Modi) ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ (Congress) ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆಯಲ್ಲಿ ಬುಧವಾರ ಅವಿಶ್ವಾಸ ನಿರ್ಣಯಕ್ಕೆ (No Confidence Motion) ನೋಟಿಸ್ ನೀಡಿದರು. ಇದಲ್ಲದೇ ತೆಲಂಗಾಣದ ಆಡಳಿತ ಪಕ್ಷ ಬಿಆರ್‌ಎಸ್ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಮಂಡಿಸಿದೆ. ಸ್ಪೀಕರ್ ಓಂಬಿರ್ಲಾ ಈಗಾಗಲೇ ಅವಿಶ್ವಾಸ ನಿರ್ಣಯ ನೋಟಿಸ್‌ ಸ್ವೀಕರಿಸಿದ್ದು, ಶೀಘ್ರದಲ್ಲಿ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮಣಿಪುರದ ಬಗ್ಗೆ ಹೇಗಾದರೂ ಮಾಡಿ ಪ್ರಧಾನಿಯಿಂದ ಮಾತನಾಡಿಸಬೇಕು ಎಂದು ನಿರ್ಧರಿಸಿರುವ ವಿಪಕ್ಷಗಳು ಕಡೆಯ ಅಸ್ತ್ರ ಎನ್ನುವಂತೆ ಅವಿಶ್ವಾಸ ನಿರ್ಣಯ ಮಂಡಿಸಿವೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರವೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ ಸರ್ಕಾರ ಮಣಿಪುರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಲು ಕಾಯುತ್ತಿದೆ. ಮಣಿಪುರ ನಿಯಂತ್ರಣಕ್ಕೆ ಬರುತ್ತಿದ್ದಂತೆ ಈ ಬಗ್ಗೆ ಸದನದಲ್ಲಿ ಮಾತನಾಡಬಹುದು ಎಂದು ಹಿರಿಯ ನಾಯಕರು ನಿರೀಕ್ಷೆ ಮಾಡಿದ್ದಾರೆ. ತಮ್ಮ ಸರ್ಕಾರದ ವಿರುದ್ಧದ…

Read More

ತುಮಕೂರು : ನನ್ನ ಮಕ್ಕಳ ಮುಂದೆಯೇ ನನ್ನನ್ನು ಪೊಲೀಸರು ಕರೆದುಕೊಂಡು ಹೋದರು. ಯಾವುದೇ ಬಂಧನದ ವಾರೆಂಟ್‌ ಅನ್ನು ಕೂಡ ಕೊಡಲಿಲ್ಲ. ನನ್ನ ಮುಖ ತೊಳೆಯಲು ಕೂಡ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಚ್‌ಎಸ್‌ ಆರೋಪಿಸಿದ್ದಾರೆ. ಉಡುಪಿ ವಿಡಿಯೋ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಟ್ವೀಟ್‌ ಮಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಹಲವು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ ಬಳಿಕ ಠಾಣಾ ಜಾಮೀನಿನ ಮೇಲೆ ಶಕುಂತಲಾ ಅವರನ್ನು ಬಿಡುಗಡೆ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ಶಕುಂತಲಾ, ಪೊಲೀಸರು ಯಾವುದೇ ವಾರಂಟ್ ಇಲ್ಲದೆ ತನ್ನನ್ನು ವಶಕ್ಕೆ ಪಡೆದು, ಬಲವಂತವಾಗಿ ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ. ಉಡುಪಿ ಕಾಲೇಜಿನ ವಿಡಿಯೋ ಘಟನೆಯನ್ನು ಮಕ್ಕಳ ಆಟ ಎಂದು ಹೇಳಿ ಕಾಂಗ್ರೆಸ್ ಪೋಸ್ಟ್ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ನಾನು ಬಳಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅಥವಾ ಇತರರ ವಿಡಿಯೋ ಮಾಡಿದ್ದರೇ ಮಕ್ಕಳಾಟ ಎಂದು ಹೇಳುತ್ತಿರಾ ಎಂದು ಪ್ರಶ್ನಿಸಿದ್ದೆ.…

Read More

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲಿ ನೋಡೋಣ ಎಂದು ಮಾಜಿ ಸಚಿವ ಡಾ ಕೆ ಸುಧಾಕರ್‌ ಸವಾಲು ಹಾಕಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿ ಸ್ವತಂತ್ರವಾಗಿ ನನ್ನ ವಿರುದ್ಧ ಸ್ಪರ್ಧಿಸಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೇ ಬಿಡೋಣ ಎಂದು ಡಾ ಕೆ ಸುಧಾಕರ್‌ ಹೇಳಿದರು. ಬಿಜೆಪಿ ಮುಖಂಡನ ಮೇಲೆ ಶಾಸಕ ಪ್ರದೀಪ್‍ ಈಶ್ವರ್‌ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದನ್ನು ಖಂಡಿಸಿ ನಗರದ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಸ್‌ಪಿ ಡಿ ಎಲ್‍ ನಾಗೇಶ್‍ ಅವರಿಗೆ ದೂರು ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಇವರು ಸ್ವತಂತ್ರವಾಗಿ ಸ್ಪರ್ಧಿಸಿದರೆ 5 ಸಾವಿರ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷ ಮತ್ತು ಮುಖಂಡರ ಶ್ರಮದಿಂದ ಗೆದ್ದಿರಬಹುದು. ಆದರೆ, ಈಗ ರಾಜೀನಾಮೆ ನೀಡಿ ನನ್ನ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆಗೆ ನಿಂತು ಗೆಲ್ಲಲಿ ನೋಡೋಣ ಎಂದು ಬಹಿರಂಗ ಸವಾಲು ಹಾಕಿದರು. ನಾವು ಸೋತಿರಬಹುದು.…

Read More

ಸೂರ್ಯೋದಯ: 06.05 AM, ಸೂರ್ಯಾಸ್ತ : 06.47 ಪಿಎಂ ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಅದಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ವರ್ಷ ಋತು, ತಿಥಿ: ಇವತ್ತು ದ್ವಾದಶಿ 10:34 AM ತನಕ ನಂತರ ತ್ರಯೋದಶಿ ನಕ್ಷತ್ರ: ಇವತ್ತು ಮೂಲ 09:32 PM ತನಕ ನಂತರ ಆಷಾಢ ಯೋಗ: ಇವತ್ತು ಇಂದ್ರ 06:34 AM ತನಕ ನಂತರ ವೈಧೃತಿ ಕರಣ: ಇವತ್ತು ಬಾಲವ 10:34 AM ತನಕ ನಂತರ ಕೌಲವ 09:04 PM ತನಕ ನಂತರ ತೈತಲೆ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 03.41 PM to 05.09 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:57 ನಿಂದ ಮ.12:48 ವರೆಗೂ ಮೇಷ: ರಾಜಕಾರಣಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ಶುಭದಾಯಕ,ಸಿರಿಧಾನ್ಯ ವ್ಯಾಪಾರಸ್ಥರಿಗೆ ಅಧಿಕ ಲಾಭ,ಬಾಡಿ ಮಸೇಜ್, ಮೇಕಪ್, ವೃತ್ತಿ ಹೊಂದಿದವರಿಗೆ ಧನ…

Read More

ಬೆಂಗಳೂರು: ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ನೀಡಲಿ. ಅದರಲ್ಲಿ ಏನು ಇದೆ ಎಂಬುವುದನ್ನು ನಾವು ತನಿಖೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್‌ ವಿಚಾರವಾಗಿ ತಿರುಗೇಟು ನೀಡಿದರು. ಕುಮಾರಸ್ವಾಮಿ ಹೆದರಿಸುವುದಕ್ಕೆ ಟ್ರೈ ಮಾಡುತ್ತಿದ್ದಾರಾ? ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಿದ್ದಾರಾ? ಅಥವಾ ವಿರೋಧ ಪಕ್ಷದ ನಾಯಕ ಆಗಲು ಟ್ರೈ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರಲ್ಲಿ ಇರುವ ಪೆನ್‌ಡ್ರೈವ್‌ನಲ್ಲಿ ಏನಿದೆ ಹಾಗೂ ಅದರಲ್ಲಿರುವ ಕಂಟೆಂಟ್ ಏನು ಎಂಬುವುದರ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಗರು ತಾನೆ ಹೇಳಿದ್ದು ಪೆನ್ ಡ್ರೈವ್ ನಲ್ಲಿ ಏನೆನೋ ಇದೆ ಅಂತ. ಆದರೆ ಎಸ್‌ಪಿ ರೋಡ್‌ ಗೆ ಹೋದರೆ ಅಂತಹ ಸಾವಿರಾರು ಪೆನ್‌ಡ್ರೈವ್ ಸಿಗುತ್ತದೆ ಎಂದರು. ಸಾಕ್ಷಿ ಏನಿದೆ ಅಂತ ತೊರಿಸುವುದು ಮುಖ್ಯವಾಗುತ್ತದೆ. ಅಂದು ಪಿಎಸ್ಐ ಹಗರಣದ ಸಾಕ್ಷಿ ಕೇಳಿದ್ರು, ಸಾಕ್ಷಿ ತೊರಿಸಿದ್ರೆ, ಪ್ರಿಯಾಂಕ್ ಖರ್ಗೆ ಹುಷಾರಾಗಿರಿ, ತನಿಖೆಯಲ್ಲಿ ನಿಮ್ಮ ಹೆಸರು ಬರುತ್ತೆ ಎಂದು ಹೇಳಿದರು. ಅಂದು…

Read More

ಬೆಂಗಳೂರು ;- ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐ ಆರ್ ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಈ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು. ಇನ್ನೂ ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಯ ವಿಡಿಯೋ ಚಿತ್ರೀಕರಣ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಈಗಾಗಲೇ ಪ್ರಕರಣ ದಾಖಲು ಮಾಡಲಾಗಿದೆ. ಈ ನಡುವೆ ಕೇಂದ್ರ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಉಡುಪಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಪೋರ್ಟ್‌ಬ್ಲೇರ್‌: ಅಂಡಮಾನ್‌ ಮತ್ತು ನಿಕೋಬಾರ್‌ (Andaman And Nicobar) ದ್ವೀಪಗಳ ಪೋರ್ಟ್‌ ಬ್ಲೇರ್‌ ಬಳಿ 5.9 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ (National Center For Seismology) ತಿಳಿಸಿದೆ. ರಾಜಧಾನಿ ಪೋರ್ಟ್ ಬ್ಲೇರ್‌ನ (Port Blair) ಆಗ್ನೇಯಕ್ಕೆ 126 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದ್ದು, ರಿಕ್ಟರ್‌ ಮಾಪಕದಲ್ಲಿ 5.9 ಭೂಕಂಪನದ ತೀವ್ರತೆ ಕಂಡುಬಂದಿದೆ. ಭೂಕಂಪನವು ಮಧ್ಯರಾತ್ರಿ 12:53ಕ್ಕೆ ಐಎಸ್‌ಟಿ ಮೇಲ್ಮೈಯಿಂದ 69 ಕಿಮೀ ಆಳದಲ್ಲಿ, 10.75 ಅಕ್ಷಾಂಶ ಮತ್ತು 93.47 ರೇಖಾಂಶದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.

Read More

ಸ್ಟಾರ್ ನಟರು ತಮ್ಮ ಮಗಳ ವಯಸ್ಸಿನ ನಟಿಯರ ಜೊತೆ ಡೇಟಿಂಗ್, ಲಿಪ್ ಲಾಕ್ ಮಾಡುವುದು ಹೊಸದೇನು ಅಲ್ಲ. ಅದರಲ್ಲೂ ಬಾಲಿವುಡ್ ಅದು ಕೊಂಚ ಜಾಸ್ತಿನೇ ಇದೆ. ಹೀಗಿರುವಾಗ 66 ವರ್ಷದ ಹಿರಿಯ ನಟ ಅನಿಲ್ ಕಪೂರ್, ತನ್ನ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯೊಂದಿಗೆ ಲಿಪ್‌ಲಾಕ್ ಮಾಡಿರೋದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಬಣ್ಣದ ಲೋಕದಲ್ಲಿ ವಯಸ್ಸಿನ ಅಂತರವೇ ಇರುವುದಿಲ್ಲ. ನಟಿಯರಿಗೆ ವಯಸ್ಸು 35 ದಾಟಿದರೆ ಅವರು ನಾಯಕಿಯಾಗಿ ಗುರುತಿಸಿಕೊಳ್ಳುವುದು ಕಷ್ಟವೇ. ಇನ್ನು ವಯಸ್ಸು 40 ಮೀರಿದರಂತೂ ಅವರಿಗೆ ಸಿಗುವುದು ಅಮ್ಮನ ರೋಲ್ ಇಲ್ಲವೇ ನಾಯಕಿಯ ತಂಗಿಯ ರೋಲ್ ಅಷ್ಟೇ. ಬೆರಳೆಣಿಕೆ ನಟಿಯರನ್ನು ಹೊರತುಪಡಿಸಿ ಉಳಿದವರಿಗೆ ಸಿಗುವುದು ಇಂಥ ಪಾತ್ರಗಳೇ. ಇದು ಹಿರಿತೆರೆ ಮಾತ್ರವಲ್ಲದೇ ಕಿರಿತೆರೆಗೂ ಮೀಸಲು. ಆದರೆ ನಾಯಕ ನಟರಾದವರು ವಯಸ್ಸು 60 ದಾಟಿದರೂ ನಾಯಕರಾಗಿಯೇ ಮೆರೆಯುತ್ತಾರೆ. ಅವರು ಎಂದಿಗೂ ತಮ್ಮ ಇಮೇಜನ್ನು ಸಣ್ಣಪುಟ್ಟ ಪಾತ್ರ ಮಾಡಿ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಯುವ ನಟಿಯರೂ ಇಂಥ ಹಿರಿಯ ನಟರ ಜೊತೆ ರೊಮ್ಯಾನ್ಸ್ ಮಾಡಲು ಹಿಂಜರಿಯುವುದಿಲ್ಲ.…

Read More

2022ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲನ್ನು ಕಂಡಿತ್ತು. ತಮ್ಮದೇ ಹಿಟ್ ಸಿನಿಮಾವೊಂದರ ಸೀಕ್ವೆಲ್‌ಗೆ ಕೈ ಹಾಕಿದ್ದಾರೆ ಪುರಿ ಜಗನ್ನಾಥ್. ಹೌದು  ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ಸೆಟ್ಟೇರಿದ್ದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ರಾಮ್ ಕಂಪ್ಲೀಟ್ ಲುಕ್ ಬದಲಿಸಿದ್ದು, ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಪುರಿ ಕನೆಕ್ಟ್ಸ್ ಬ್ಯಾನರ್ ನಡಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾ ಅಂಗಳಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಎಂಟ್ರಿಯಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಇತ್ತೀಚೆಗೆ ಸೌತ್ ಸಿನಿಮಾಗಳದತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿಎಫ್ ಬಳಿಕ ಬ್ಯಾಕ್ ಟು ಬ್ಯಾಕ್ ದಕ್ಷಿಣ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜುಬಾಬಾ ಈಗ ‘ಡಬಲ್ ಇಸ್ಮಾರ್ಟ್’ ಭಾಗವಾಗಿದ್ದಾರೆ. ಸಂಜಯ್ ದತ್ ಹುಟ್ಟುಹಬ್ಬದ…

Read More