Author: Prajatv Kannada

ದೇವನಹಳ್ಳಿ: ಮುಸ್ಲಿಮರ ವಿರುದ್ಧ ಮಾಜಿ ಸಚಿವ ಎಂಟಿಬಿ ನಾಗರಾಜ್​​ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಎಂಟಿಬಿ ನಾಗರಾಜ್ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ ಮಾಡಲಾಗಿದೆ. ಸೋಲಿಗೆ ಮುಸ್ಲಿಂ ಸಮುದಾಯ(Hoskote Muslim community) ಸಹ ಕಾರಣ ಎಂದಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆಯಲ್ಲಿ ನಡೆದ ಆತ್ಮಾವಲೋಕನಾ ಸಭೆಯಲ್ಲಿ ಎಂಟಿಬಿ ನಾಗರಾಜ್ ಮಾತನಾಡಿ, ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದಿದ್ದರು. ಇದೀಗ ಆ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

Read More

ಚಿಕ್ಕಬಳ್ಳಾಪುರ: ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಸ್ಪರ್ಧಿಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸುಳಿವು ನೀಡಿದ್ದಾರೆ. ಚಿಕ್ಕಬಳ್ಳಾಪುರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್​ ಈಶ್ವರ್​, “ಇಬ್ಬರೂ ಗೆಲುವು ಸಾಧಿಸುತ್ತಾರೆ, ಇವರ ಗೆಲುವಿಗೆ ನಾನು ಹಗಲಿರುಳು ದುಡಿಯುತ್ತೇನೆ. ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೇವೆ. ರಾಜ್ಯದಲ್ಲಿ 20 ಎಂಪಿ ಸೀಟ್​ಗಳನ್ನು ಗೆಲ್ಲುತ್ತೇವೆ‌” ಎಂದು ಪ್ರದೀಪ್ ಈಶ್ವರ್ ಹೇಳಿಕೆ‌ ನೀಡಿದ್ದಾರೆ. ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದು ಇಬ್ಬರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ವಿಚಾರವಾಗಿ ಮಾತನಾಡಿದ ಪ್ರದೀಪ್ ಈಶ್ವರ್, “ಡಿಪೋ ಮ್ಯಾನೇಜರ್ ಬಳಿ ಮಾತನಾಡುತ್ತೇನೆ. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಶಾಸಕರನ್ನು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿರುವುದು ಖುಷಿಯ ಸಂಗತಿ” ಎಂದು ಹೇಳಿದರು.

Read More

ಹುಬ್ಬಳ್ಳಿ: ಮದ್ವೆಯಾಗಿ 8 ವರ್ಷಗಳ ಮ್ಯಾಲ್ ಹುಟ್ಟಿದ ಮಗಾನ್ರೀ ಅವ್ನು. ಮಕ್ಕಳಾಗಿಲ್ಲ ಅಂತ ಕಂಡಕಂಡ ದೇವ್ರಿಗೆ ಹರಕೆ ಹೊತ್ತಿದ್ದೀವ್ರಿ. ಇದ್ದೊಂದ ಮಗನ ಕಳ್ಕೊಂಡ ಹೇಗಿರಬೇಕ್ರಿ. ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಗ್ರಾಮದ ಶಾಲೆಯಲ್ಲಿ ಕೊಠಡಿಯ ಗೋಡೆ ಕುಸಿದು ಮೃತಪಟ್ಟ ಬಾಲಕ ವಿಶ್ರುತ್‌ನ ತಂದೆ ಫಕ್ಕಿರೇಶ ಬಳಗಲಿ ಅವರ ನೋವಿನಿಂದ ಆಡಿದ ಮಾತುಗಳಿವು. ಮಗನ ಶವ ಒಯ್ಯಲು ಕಿಮ್ಸ್‌ ಶವಾಗಾರಕ್ಕೆ ಬಂದಿದ್ದ ಅವರ ರೋದನ, ಕಲ್ಲು ಹೃದಯದವರನ್ನೂ ಕರಗಿಸುವಂತಿತ್ತು. ಒಮ್ಮೆ ‘ಮಗನೇ ಬಿಟ್ಟೋದೆಯಾ’ ಎಂದು ಬಿಕ್ಕಿಬಿಕ್ಕಿ ಅತ್ತರೆ, ಮರುಕ್ಷಣ ಎಲ್ಲವನ್ನೂ ಕಳೆದುಕೊಂಡ ಹತಾಶ ಭಾವದಲ್ಲಿ ಮೌನರಾಗುತ್ತಿದ್ದರು. ಕರುಳ ಕುಡಿ ಕಳೆದುಕೊಂಡ ಅವರ ಸಂಕಟ ಗ್ರಾಮಸ್ಥರ ಕಣ್ಣಾಲಿಗಳನ್ನು ತೇವಗೊಳಿಸಿತ್ತು. ಶಾಲೆಯು ಆರಂಭವಾಗುತ್ತಿತ್ತು ಆದರೆ, ಬೆಳಿಗ್ಗೆ 9ಕ್ಕೆ ಶಾಲೆಗೆ ಬಂದ ವಿಶ್ರುತ ಶಾಲೆಯ ಪ್ರವೇಶದ್ವಾರ ತೆರೆಯದಿರುವುದು ಗೊತ್ತಾಯಿತು. ತನ್ನ ಮೂವರ ಸ್ನೇಹಿತರ ಜೊತೆಗೆ ಶಾಲೆಯ ಹಿಂಭಾಗದ ಪ್ರವೇಶದ್ವಾರದಿಂದ ಆವರಣ ಪ್ರವೇಶಿಸಿದ. ಎಲ್ಲರೂ ನಿರ್ಮಾಣ ಹಂತದ ಕಟ್ಟಡದತ್ತ ತೆರಳಿದರು. ಅದೇ ವೇಳೆ ಆಸರೆಗೆ ನಿಲ್ಲಿಸಲಾಗಿದ್ದ ಕಟ್ಟಿಗೆ ಕಂಬವು ಸರಿದು, ಗೋಡೆಯು…

Read More

ಮಂಗಳೂರು: ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟ ಬೆನ್ನಲ್ಲೇ ಮಂಗಳೂರಿನ (Mangaluru) ಉಳ್ಳಾಲ (Ullala) ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿದ್ದು, ಮಾಲೀಕ ಬಿಲ್ ನೋಡಿ ಶಾಕ್ ಆಗಿದ್ದಾರೆ. ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು 3,000 ವಿದ್ಯುತ್ ಬಿಲ್ ಬರುತ್ತಿತ್ತು. ಇದೀಗ ಮೇ ತಿಂಗಳ ಹೊಸ ಬಿಲ್ ಬಂದಿದ್ದು, ಅದರಲ್ಲಿ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7,71,072 ರೂ. ಕಟ್ಟಬೇಕು ಎಂದು ಬಿಲ್ ನೀಡಲಾಗಿದೆ. ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಈ ಬಗ್ಗೆ ಕೇಳಿದ್ದಾರೆ. ಆಗ ಬಿಲ್ ರೀಡರ್ ಅದನ್ನೆಲ್ಲಾ ಮೆಸ್ಕಾಂ (MESCOM) ಕಚೇರಿಯಲ್ಲಿ ಕೇಳಿ ಎಂದಿದ್ದಾರೆ. ಈ ಕುರಿತು ಸದಾಶಿವ ಆಚಾರ್ಯ ಅವರು ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ತಮ್ಮ ತಪ್ಪನ್ನು ಅರಿತುಕೊಂಡು 2,833 ರೂ. ಮೌಲ್ಯದ…

Read More

ಮಂಡ್ಯ:– ಮಂಡ್ಯದಲ್ಲಿ ನಡೆದ ಬೀಗರ ಔತಣ ಕೂಟದ ಬಗ್ಗೆ ಮಾತನಾಡಲು ಅಭಿಷೇಕ್ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅಂದುಕೊಂಡಂತೆ ಕಾರ್ಯಕ್ರಮ ಯಶಸ್ವಿಯಾಗಿದೆ ಆದರೆ ಎಲ್ಲೋ ಕೆಲವರು ಮಾಡಿದ ತಪ್ಪಿನಿಂದ ನಾವು ಊಟದ ವ್ಯವಸ್ಥೆಯನ್ನು ಬೇಗನೆ ಮುಗಿಸಬೇಕಾಯ್ತು. ಬಹುತೇಕ ಎಲ್ಲರಿಗೂ ಊಟ ಸಿಕ್ಕಿದೆ ಆದರೆ ಊಟ ಸಿಗದೆ ತೊಂದರೆ ಪಟ್ಟವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದರು. ನಾನು ಯಾರನ್ನೂ ದೂಷಿಸುವುದಿಲ್ಲ. ನಾವು ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸುಮಾರು 250 ಮಂದಿ ಪೊಲೀಸರು ಸಹ ಸ್ಥಳದಲ್ಲಿ ನಿಯೋಜನೆಗೊಂಡು ಜನರನ್ನು ನಿಯಂತ್ರಿಸಿದರು. ಹಾಗಿದ್ದರೂ ಸಹ ಎಲ್ಲೋ ಕೆಲವು ಮಂದಿ ನಿಯಂತ್ರಣ ತಪ್ಪಿದರು. ಅಥವಾ ಅವರನ್ನು ಕೆಲವರು ಪ್ರಚೋದಿಸಿದ್ದರಿಂದಲೋ ಏನೋ ಅವರು ಅಡುಗೆ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಅದರಿಂದಾಗಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟರು ಹಾಗೂ ಮಹಿಳೆಯರು ಗಾಬರಿಯಾಗಿಬಿಟ್ಟರು. ಇದರಿಂದ ಅಡುಗೆ ಬಡಿಸುವುದು ಸಹ ತಡವಾಗಿಬಿಟ್ಟಿತು. ಕಾರಣಗಳನ್ನು ಎಷ್ಟೆ ಹೇಳಿದರು ಸಣ್ಣ ಮಟ್ಟಿನ ಸಮಸ್ಯೆ ಆಗಿರುವುದಂತೂ ನಿಜವಾದ್ದರಿಂದ ನಾನು ಕ್ಷಮೆ…

Read More

ಬೆಂಗಳೂರು ;– ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆ ಒಂದಾಗಿದೆ. ಜುಲೈ 1 ರಂದು ಅನ್ನಭಾಗ್ಯ ಯೋಜನೆ ಆರಂಭ ಮಾಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದೀಗ ಕೇಂದ್ರದಿಂದ ಅಕ್ಕಿ ಕೊಡಲು ನಿರಾಕರಿಸಲಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದಿದ್ದು, ಜುಲೈ ೧ಕ್ಕೆ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲು ಸಿದ್ದು ಸರ್ಕಾರ ಪಣ ತೊಟ್ಟಿದೆ. ಕೊಟ್ಟ ಮಾತಿನಂತೆ ನಾವು ನಡೆದುಕೊಳ್ಳಲೇಬೇಕು ಎಂದು ಕೈ ನಾಯಕರು ಹೇಳಿದ್ದು, ನೆರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ಸರ್ಕಾರ ಕಸರತ್ತು ಮುಂದುವರೆಸಿದೆ. ಒಂದು ವೇಳೆ ನೆರೆ ರಾಜ್ಯಗಳಿಂದ ಅಕ್ಕಿ ಖರೀದಿ ಪ್ರಮಾಣ ಕಡಿಮೆಯಾದ್ರೆ ಓಪನ್ ಮಾರ್ಕೆಟ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸಿಎಂ ಸೂಚನೆ ಬೆನ್ನಲ್ಲೇ ಓಪನ್ ಮಾರ್ಕೆಟ್ ನಲ್ಲಿ ಲಭ್ಯ ಇರುವ ಅಕ್ಕಿ ಸಂಗ್ರಹ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಓಪನ್ ಮಾರ್ಕೆಟ್ ನಲ್ಲಿ ಕೆಜಿ ಅಕ್ಕಿಯ…

Read More

ಬೆಂಗಳೂರು:- ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ‌ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ಭುಗಿಲೆದ್ದಿದೆ. ಬಿಜೆಪಿಯ ಈ ಪರಿಸ್ಥಿತಿಗೆ ಬೊಮ್ಮಾಯಿ ಕಾರಣ ಎಂದು ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಸಂಸದ ಪ್ರತಾಪ್ ಸಿಂಹ ನೇರ ಆರೋಪ ಮಾಡಿದರು. ಈ ಹಿನ್ನೆಲೆ ಪ್ರತಾಪ್ ಸಿಂಹ ವಿರುದ್ಧ ಬೊಮ್ಮಾಯಿ ಕೊತ ಕೊತ ಕುದಿಯುತ್ತಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿಗೆ ಪ್ರತಾಪ್ ಸಿಂಹ ಹೇಳಿಕೆ ತೀವ್ರ ಮುಜುಗರ ತಂದಿದೆ. ಚುನಾವಣೆ ಬಳಿಕವೂ ಬಿಎಸ್ವೈ – ಬಿ ಎಲ್ ಸಂತೋಷ ಬಣದ ನಡುವೆ ಕೋಲ್ಡ್ ವಾರ್ ಮುಂದುವರೆದಿದೆ. ಪ್ರತಾಪ್ ಸಿಂಹ ಹೇಳಿಕೆ ಹಿಂದೆ ಬಿ ಎಲ್ ಸಂತೋಷ್ ಇದ್ದಾರೆ ಎಂದು ಬಿ ಎಲ್ ಸಂತೋಷ್ ನಡೆಗೆ ಬಿಎಸ್ವೈ ಆ್ಯಂಡ್ ಟೀಂ ತೀವ್ರ ಆಕ್ರೋಶ ಹೊರ ಹಾಕಿದೆ. ಚುನಾವಣೆಯಲ್ಲಿ ತಮ್ಮದೇ ರಣತಂತ್ರ ಮಾಡಿ ಬಿಜೆಪಿಯನ್ನ ಸೋಲಿಸಿದರು. ನಾನು ಹೇಳಿದ್ದೇ ನಡೆಯಬೇಕೆಂದು ನಮ್ಮ ಮಾತು ಯಾವುದು ಕೇಳಿಲ್ಲ. ಇದೀಗ ಪ್ರತಾಪ್ ಸಿಂಹ ಮುಖಾಂತರ ನಮ್ಮ ಮೇಲೆ ಆರೋಪ ಮಾಡಿಸುತ್ತಿದ್ದಾರೆ ಎಂದು‌ ಬೊಮ್ಮಾಯಿ ಗರಂ ಆಗಿದ್ದು,…

Read More

ಬೆಂಗಳೂರು: ಮದ್ಯ ದರ ಹೆಚ್ಚಳ ಮಾಡಿಲ್ಲ ಆ ಬಗ್ಗೆ ಯಾವುದೇ ಅಧಿಕೃತ ಆದೇಶ ಆಗಿಲ್ಲ ಇದರ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಸ್ಪಷ್ಟನೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗೆ ಹಣಕಾಸು ಕ್ರೋಡೀಕರಣ ಮಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ದರ ಏರಿಕೆ ಮಾಡಲಾಗಿದೆ ಎಂಬುವುದನ್ನು ನಿರಾಕರಣೆ ಮಾಡಿದರು. ದರ ಏರಿಕೆ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ಎಣ್ಣೆ ದರ ಏರಿಕೆ ಇದುವರೆಗೂ ಆಗಿಲ್ಲ ಪ್ರಸ್ತಾವನೆ ಕೂಡ ಬಂದಿಲ್ಲವೆಂದು ತಿಳಿಸಿದರು. ಅಬಕಾರಿ ಇಲಾಖೆಯಿಂದ ಯಾವುದೇ ದರ ಏರಿಕೆ ಮಾಡಿಲ್ಲ. ಹಣಕಾಸು ಇಲಾಖೆ ಇರಬಹುದು ಅಥವಾ ಕೆಎಸ್ ಬಿಎಸ್ ಎನ್ ನಲ್ಲಿ ಇರಬಹುದು ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಅಬಕಾರಿ ಸಚಿವರು ಸ್ಪಷ್ಟಪಡಿಸಿದರು.

Read More

ಬೆಂಗಳೂರು:- ಮಹಿಳೆಯರ ಉಚಿತ ಬಸ್ ಪಾಸ್ ‘ಶಕ್ತಿ ಯೋಜನೆ’ ಸ್ಮಾರ್ಟ್ ಕಾರ್ಡ್ ಅರ್ಜಿ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೂನ್ 11ರಂದು ಶಕ್ತಿ ಯೋಜನೆ ಆರಂಭವಾಗಿದ್ದು, ಜೂನ್ 15ರಿಂದ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಸ್ಮಾರ್ಟ್ ಕಾರ್ಡ್ ನಲ್ಲಿ ಏನೆಲ್ಲಾ ಅಂಶಗಳಿರಬೇಕು ಎಂಬುದರ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸ್ಮಾರ್ಟ್ ಕಾರ್ಡ್ ಕೇಂದ್ರಗಳನ್ನು ಹೆಚ್ಚು ಮಾಡಿಕೊಳ್ಳಬೇಕು. ಅಲ್ಪಾವಧಿ ಟೆಂಡರ್ ಕರೆಯಬೇಕು. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆ ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳತ್ತ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Read More

ಬೆಂಗಳೂರು ;- ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ತಿಂಗಳು 15 ದಿನಗಳಲ್ಲಿ 166 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ, ಇದರಿಂದಾಗಿ ಎರಡು ಸಾವಿರದ ಗಡಿ ದಾಟಿದೆ. ಈಗಾಗಲೇ 70 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 23 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತಪಟ್ಟಿರುವುದು ದೃಢಪಟ್ಟಿತ್ತು. ಈ ವರ್ಷ ಯಾವುದೇ ಮರಣ ವರದಿಯಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 1,009 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, 732 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 156, ವಿಜಯಪುರದಲ್ಲಿ 113, ಚಿತ್ರದುರ್ಗದಲ್ಲಿ 91, ಬೆಳಗಾವಿಯಲ್ಲಿ 78, ಧಾರವಾಡದಲ್ಲಿ 71, ಬಳ್ಳಾರಿಯಲ್ಲಿ 69 ಹಾಗೂ ಶಿವಮೊಗ್ಗದಲ್ಲಿ 56 ಪ್ರಕರಣ ವರದಿಯಾಗಿದೆ.

Read More