ಬೆಂಗಳೂರು ;– ಪೊಲೀಸ್ ಇಲಾಖೆ ಹೊಸ ಕ್ರಮ ಜಾರಿಗೆ ತಂದಿದ್ದು, ಇನ್ಮುಂದೆ ಮೇಲಧಿಕಾರಿಗಳು ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ನಡೆಸಬೇಕು. ಇನ್ಮುಂದೆ ಇನ್ಸ್ ಪೆಕ್ಟರ್ ಹಾಗೂ ಅವರ ಮೇಲಿನ ಅಧಿಕಾರಿಗಳು ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ಮಾಡಬೇಕು. ಈ ಬಗ್ಗೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ. ಇದರಿಂದಾಗಿ ಎಎಸ್‌ಐ ಹಾಗೂ ಕಾನ್ಸ್ ಟೇಬಲ್ ಹೆಸರಲ್ಲಿ ನಡೆಯುತ್ತಿದ್ದ ಸುಲಿಗೆ ನಿಲ್ಲಲಿದೆ ಎಂಬುದು ಇಲಾಖೆಯ ಅಭಿಮತ. ಅಲ್ಲದೇ ವಾರದಲ್ಲಿ 2 ದಿನ ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ಮಾಡುವಂತೆ ಸಂಚಾರಿ ಪೊಲೀಸರ ಸಭೆಯಲ್ಲಿ ಸೂಚಿಸಲಾಗಿದೆ.
Author: Prajatv Kannada
ಬೆಂಗಳೂರು ;- ಮಳೆ, ಚಳಿ ಗಾಳಿ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಜ್ವರ, ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಸಂಪರ್ಕಾಧಿಕಾರಿ ಡಾ.ಶ್ರೀಕಾಂತ ಹೆಳವಾರ ಅವರ ಪ್ರಕಾರ, ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಜುಲೈ 1 ರಿಂದ 4,795 ರೋಗಿಗಳು ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿದ್ದಾರೆ. 700 ಡೆಂಗೆ ಪ್ರಕರಣಗಳು ಕಳೆದ 26 ದಿನಗಳಲ್ಲಿ ವರದಿಯಾಗಿದೆ. ಚಳಿ ಶೀತ ವಾತಾವರಣ ಮತ್ತು ಮಳೆಯಿಂದಾಗಿ ರೋಗಿಗಳು ಜ್ವರ, ಶೀತ ಮತ್ತು ಕೆಮ್ಮಿನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ 40 ಡೆಂಗೆ ಒಳರೋಗಿಗಳಿದ್ದು, ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಡಾ.ಹೆಳವಾರ ತಿಳಿಸಿದರು. ಅದೇ ರೀತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಿನನಿತ್ಯದ ಸರಾಸರಿ 350 ಹೊರ ರೋಗಿಗಳು ಹೆಚ್ಚಾಗುತ್ತಿದ್ದು, ಹವಾಮಾನ ಮತ್ತು ಮಳೆ ಇದಕ್ಕೆ ಕಾರಣವಾಗಿರಬಹುದು ಎಂದು ನಿವಾಸಿ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದ್ದಾರೆ. ಜ್ವರ ಮತ್ತು ಡೆಂಗ್ಯೂ ಪ್ರಕರಣಗಳು ಸ್ವಲ್ಪ ಹೆಚ್ಚಿವೆ ಆದರೆ ಇದು ಇನ್ನೂ ಆತಂಕಕಾರಿಯಾಗಿಲ್ಲ ಎಂದು ಶ್ರೀನಿವಾಸ್ ಹೇಳಿದರು. ಪ್ರಾಥಮಿಕ…
ಬೆಂಗಳೂರು ;- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೈದರಾಬಾದ್ಗೆ ತೆರಳು ನಿನ್ನೆ ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು, ಆದ್ರೆ, ಇನ್ನೂ ಏರ್ ಏಷ್ಯಾ ವಿಮಾನ ಹೊರಡಲು ಸಮಯ ಇದೆ ಎಂದು ಸಿಬ್ಬಂದಿ ರಾಜ್ಯಪಾರನ್ನು ಕರೆದುಕೊಂಡು ಹೋಗಿ ವಿಐಪಿ ಲಾಂಜ್ನಲ್ಲಿ ಕೂರಿಸಿದ್ದಾರೆ. ಆದ್ರೆ, ಟೈಮ್ ಆಗಿರುವುದು ಗಮನಕ್ಕೆ ಬಂದಿಲ್ಲ. ಇದರಿಂದ ವಿಮಾನ ಸರಿಯಾದ ಸಮಯಕ್ಕೆ ಟೇಕಫ್ ಆಗಿ ಹೋಗಿದೆ. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಮಾನ ತಪ್ಪಿದೆ. ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಹೈದರಾಬಾದ್ಗೆ ಕಳುಹಿಸಿಕೊಟ್ಟಿದ್ದಾರೆ. ಮಧ್ಯಾಹ್ನ 02 ಗಂಟೆಯ ವಿಮಾನದಲ್ಲಿ ಹೋಗಲು ನಿಲ್ದಾಣಕ್ಕೆ 1:30ಕ್ಕೆ ಆಗಮಿಸಿದ್ದರು. ಸಿಬ್ಬಂದಿ ವಿಮಾನದಲ್ಲಿ ಲಗೇಜ್ ಇಟ್ಟು ಬಂದಿದ್ದರು. ಆದ್ರೆ, ಟೈಮ್ ಇದೆ ಎಂದು ಪ್ರೋಟೋಕಾಲ್ ಸಿಬ್ಬಂದಿ ರಾಜ್ಯಪಾಲರನ್ನು ವಿಐಪಿ ಲಾಂಜ್ ನಲ್ಲಿ ಕೂರಿಸಿದ್ದಾರೆ. ಇತ್ತ ಸಮಯವಾಗಿದ್ದರಿಂದ ವಿಮಾನ ಟೇಕಫ್ ಆಗಿ ಹೋಗಿದೆ. ಒಂದು ನಿಮಿಷ ತಡವಾಗಿ ಬಂದಿದ್ದಕ್ಕೆ ಗರ್ವನರ್ಗೆ ವಿಮಾನ ಮಿಸ್ ಆಗಿದೆ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ…
ಬೆಂಗಳೂರು: ಎಲ್ಲಕ್ಕೂ ಒಂದ್ ಮಿತಿ ಇರ್ಬೇಕು..ನಿರ್ಬಂದ ಹೇರಲಿಕ್ಕೆ ಕಾರಣಗಳೂ ಇರಬೇಕು..ಆದ್ರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಧಮನಿ ಸುವಂಥ ದಮನಕಾರಿ ನೀತಿಯನ್ನು ಅನುಸರಿಸಿದರೆ ಹೇಗೆ..? ಬಿಬಿಎಂಪಿಯಲ್ಲಿ ಆಗುತ್ತಿರುವುದೂ ಅದೇ..ಮಾದ್ಯಮಗಳಿಗೆ ಅದರಲ್ಲೂ ಪ್ರಮುಖವಾಗಿ ದೃಶ್ಯ ಮಾದ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ರೇ ಖಂಡಾತುಂಡವಾಗಿ ಹೇಳಿಬಿಟ್ಟಿದ್ದಾರಂತೆ.ಆಯುಕ್ತರು ಹಾಗೆ ಹೇಳೊಕ್ಕೆ ಸರ್ಕಾರದ ಹುಕುಂ ಕಾರಣ ಎನ್ನಲಾಗುತ್ತಿದೆ. ವಿಧಾನಸೌಧದ ಕಾರ್ಯಕಲಾಪ ವೇಳೆ ಚಿತ್ರಿಕರಣ ಮಾಡದಂತೆ ನಿರ್ಬಂದ ಹೇರಿ ದಮನಕಾರಿ ನೀತಿ ಅನುಸರಿಸಿದ್ದ ಸರ್ಕಾರ ದ ಮುಂದುವರೆದ ಭಾಗ ಎನ್ನುವಂತೆ ಇದೀಗ ಬಿಬಿಎಂಪಿ ಆಡಳಿತ ಮಾದ್ಯಮಗಳ ವಿಷಯದಲ್ಲಿ ನಕಾರಾತ್ಮಕ ಧೋರಣೆ ಅನು ಸರಿಸ್ಲಿಕ್ಕೆ ಮುಂದಾಗಿದೆ.ಲೋಕಲ್ ಗವರ್ನ್ಮೆಂಟ್ ಆಗಿ ಕೆಲಸ ಮಾಡುವ ಬಿಬಿಎಂಪಿಯಲ್ಲಿ ಏನೆಲ್ಲಾ ವಿದ್ಯಾಮಾನಗಳು ನಡೆಯು ತ್ತಿವೆ ಎನ್ನುವುದರ ಬಗ್ಗೆ ಸುದ್ದಿ ನೀಡುವುದರಿಂದ ಹಿಡಿದು ಅದರ ಬಗ್ಗೆ ಪ್ರತಿಕ್ರಿಯಿಸ್ಲಿಕ್ಕೂ ಮುಖ್ಯ ಆಯುಕ್ತ ತುಷಾರಗಿರಿನಾಥ್ ನಿರಾಕರಿಸ್ಲಿಕ್ಕೆ ಮುಂದಾಗಿದ್ದಾರೆ.ಇದು ಪತ್ರಿಕಾಸಮೂಹವನ್ನು ಕೆಂಡಾಮಂಡಲಗೊಳಿಸಿದೆ. ಬಿಬಿಎಂಪಿ ಎಲ್ಲರಿಗೂ ತಿಳಿದಿರುವಂತೆ ಸ್ಥಳೀಯ ಸರ್ಕಾರವಾಗಿ ಕೆಲಸ ಮಾಡುತ್ತದೆ.ಅಲ್ಲಿನ ನಿತ್ಯದ ವಿದ್ಯಾಮಾನಗಳನ್ನು ಸಾರ್ವಜನಿಕವಾಗಿ ತಿಳಿಸುವ ಹೊಣೆಗಾರಿಕೆ…
ಬೆಂಗಳೂರು ;- ಕುಮಾರಸ್ವಾಮಿಯವರ ವಿದೇಶ ಪ್ರವಾಸದ ಬೆನ್ನಲ್ಲೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ಯುರೋಪ್ ಪ್ರವಾಸ ಕೈಗೊಂಡಿದ್ದು, ಈ ಬೆಳವಣಿಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿದೇಶ ಪ್ರವಾಸ ಪುಷ್ಟಿ ನೀಡುತ್ತಿದೆಯೇ ಎಂಬ ಅಂತೆ ಕಂತೆಗಳು ಸಹ ಹರಿದಾಡುತ್ತಿವೆ. ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದು, ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರವನ್ನು ಪತನಗೊಳಿಸಲು ವಿದೇಶದಲ್ಲಿ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿದ್ದು, ಆದರೆ ಜೆಡಿಎಸ್ ನಾಯಕರು ಈ ಆರೋಪವನ್ನು ತಳ್ಳಿ ಹಾಕಿದ್ದರು. ಆದರೆ ಇದಕ್ಕೆ ಪುಷ್ಟಿ ನೀಡುವಂತೆ HDK ಪ್ರವಾಸ ಬೆನ್ನಲ್ಲೇ ಯಡಿಯೂರಪ್ಪ ಪ್ರವಾಸ ಕೈಗೊಂಡಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಬಾರ್ಬೆಡೊಸ್ (ವೆಸ್ಟ್ ಇಂಡೀಸ್): ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪೈಪೋಟಿ ನಡೆಸಲಿವೆ. ಪ್ರಥಮ ಒಡಿಐ ಇಲ್ಲಿನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಜುಲೈ 27ರಂದು (ಗುರುವಾರ) ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ಎದುರಾಗಿದೆ. ಅನುಭವಿಗಳ ಅನುಪಸ್ಥಿತಿಯಲ್ಲಿ ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಮುನ್ನಡೆಸಬೇಕಿತ್ತು. ಆದರೆ, ಆಟಗಾರರ ಮೇಲಿನ ಹೊರೆ ನಿರ್ವಹಣೆ ನಿಟ್ಟಿನಲ್ಲಿ ಸಿರಾಜ್ ಅವರಿಗೆ ವಿಂಡೀಸ್ ವಿರುದ್ಧದ ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ. “ಮೊಹಮ್ಮದ್ ಸಿರಾಜ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಗೂ ಮುನ್ನ ಭಾರತದ ಒಡಿಐ ತಂಡದಿಂದ ಬಿಡುಗಡೆ ಮಾಡಲಾಗಿದೆ. ಬಲಗೈ ವೇಗದ ಬೌಲರ್ ತಮ್ಮ ಬಲಗಾಲಿನ ಪಾದದಲ್ಲಿ ನೋವಿರುವುದಾಗಿ ಹೇಳಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಸ್ಥಿತಿಗತಿ ಬಗ್ಗೆ…
ಹೆಸರಾಂತ ಕ್ರಿಕೆಟ್ (Cricket) ಆಟಗಾರ ಎಂ.ಎಸ್. ಧೋನಿ (M.S. Dhoni) ಮುಂದಿನ ದಿನಗಳಲ್ಲಿ ತೆರೆಯ ಮೇಲೆ ಹೀರೋ (Hero) ಆಗಲಿದ್ದಾರಂತೆ. ಹಾಗಂತ ಸ್ವತಃ ಅವರ ಪತ್ನಿ ಸಾಕ್ಷಿಯೇ (Sakshi Dhoni) ಭವಿಷ್ಯ ನುಡಿದಿದ್ದಾರೆ. ಕ್ರಿಕೆಟ್, ಹಲವು ಉದ್ಯಮಗಳನ್ನು ನಡೆಸುತ್ತಿರುವ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇದೀಗ ಸಿನಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಬ್ಯಾನರ್ ನಲ್ಲಿ ಈಗಾಗಲೇ ತಮಿಳು ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ. ಟೀಮ್ ಇಂಡಿಯಾಗೆ ಫಿಟ್ನೆಸ್ ಕಲ್ಚರ್ ಪರಿಚಯಿಸಿದ್ದೇ ಚಾಂಪಿಯನ್ ಕ್ಯಾಪ್ಟನ್ ಎಂಎಸ್ ಧೋನಿ. ಅಂದು ಮಾಹಿ ಬಿತ್ತಿದ ಫಿಟ್ನೆಸ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟರ ಮಟ್ಟಿಗೆ ವಿಶ್ವಕ್ರಿಕೆಟ್ಗೆ ಭಾರತ ತಂಡವಿಂದು ಫಿಟ್ನೆಸ್ ತವರೂರಾಗಿ ಗುರುತಿಸಿಕೊಂಡಿದೆ. ವಿರಾಟ್ ಕೊಹ್ಲಿ ಫಿಟ್ನೆಸ್ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ಇಷ್ಟೆಲ್ಲ ಆಳವಾಗಿ ಬೇರೂರಿದ್ರು ಮಾಜಿ ಕ್ಯಾಪ್ಟನ್ ಧೋನಿಗೆ ಫಿಟ್ನೆಸ್ ಮೇಲಿನ ಒಲವು ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿರೋ ಮಾಸ್ಟರ್ಮೈಂಡ್ ವರ್ಷಕ್ಕೊಮ್ಮೆ ಐಪಿಎಲ್ನಲ್ಲಿ…
ಬೆಂಗಳೂರು: ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಣ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯ ಅಕ್ಟೋಬರ್ 15ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆ ಆಗಬೇಕಿದೆ. ಈ ಪಂದ್ಯದ ತಯಾರಿಯಲ್ಲಿರುವ ಕ್ರಿಕೆಟ್ ಪ್ರಿಯರು, ಇದೀಗ ತಮ್ಮ ವೇಳಾಪಟ್ಟಿ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಏಕೆಂದರೆ, ಇತ್ತೀಚಿನ ಮಾಹಿತಿ ಪ್ರಕಾರ ನವರಾತ್ರಿ ಹಬ್ಬ ಮತ್ತು ಭದ್ರತೆ ದೃಷ್ಟಿಯಲ್ಲಿ ಇಂಡಿಯಾ-ಪಾಕಿಸ್ತಾನ ಪಂದ್ಯದ ದಿನಾಂಕವನ್ನು ಬದಲಾಯಿಸಲು ಬಿಸಿಸಿಐ ಮುಂದಾಗಿದೆ ಎಂಬುದು ತಿಳಿದುಬಂದಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯ ವೀಕ್ಷಿಸಲು ಈ ಬಾರಿ ವಿಶ್ವ ದಾಖಲೆಯ 1.3 ಲಕ್ಷ ಮಂದಿ ಕ್ರೀಡಾಂಗಣದಲ್ಲಿ ಹಾಜರಿರಲಿದ್ದಾರೆ ಎಂದೇ ಅಂದಾಜಿಸಲಾಗಿದೆ. ಇನ್ನು ಅಕ್ಟೋಬರ್ 15ರ ಹಿಂದು ಮುಂದಿನ ದಿನಗಳಲ್ಲಿ ಅಹ್ಮದಾಬಾದ್‌ನ ಎಲ್ಲ ಹೋಟೆಲ್‌ಗಳು ಈಗಾಗಗಲೇ ಬುಕ್ ಆಗಿವೆ. ಹೋಟೆಲ್ ರೂಮ್ ಸಿಗದೇ ಇರುವ ಕಾರಣಕ್ಕೆ ಕ್ರಿಕೆಟ್ ಪ್ರಿಯರು ಆಸ್ಪತ್ರೆ ಬೆಡ್‌ಗಳನ್ನೇ ಬುಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಗಳ ಮೂಲಕ ಬೆಳಕಿಗೆ ಬಂದಿತ್ತು. ಭದ್ರತೆ ದೃಷ್ಟಿಯಲ್ಲಿ ಭಾರತ-ಪಾಕಿಸ್ತಾನ…
ಬೆಂಗಳೂರು : ನಮ್ಮ ಸರ್ಕಾರ ಅಧಿಕಾರದಲ್ಲಿದೆ ಎಂದು ಯಾವುದೇ ಕಾರಣಕ್ಕೂ ಮುಂದಿನ 5 ವರ್ಷ ನಾವೇ ಶಾಸಕರು ಎಂದು ಮೈ ಮರೆಯಬೇಡಿ. ನಮ್ಮ ಸರ್ಕಾರ ಸುಭದ್ರವಾಗಿದೆ. ಸರ್ಕಾರನ್ನು ಡಿಸ್ಟರ್ಬ್ ಮಾಡುವ ಪ್ರಯತ್ನ ನಡೆಯುತ್ತವೆ. ಇದರ ಬಗ್ಗೆ ನಿಮ್ಮ ಕಣ್ಣು,ಕಿವಿ ಚುರುಕಿರಬೇಕು. ನಿಮ್ಮನ್ನು ಬೇಕೇಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೈ’ ಕಲಿಗಳಿಗೆ ಎಚ್ಚರಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಆಮೇಲೆ ಆ ಸುಳ್ಳನ್ನು ತಮ್ಮ ಪರಿವಾರದ ಮೂಲಕ ಹಬ್ಬಿಸುತ್ತಾರೆ. ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಹಿತವಚನ ಮಾಡಿದರು. ನಮ್ಮ 5 ಗ್ಯಾರಂಟಿಗಳು ಎಲ್ಲಾ ಜಾತಿ, ಧರ್ಮ, ವರ್ಗಗಳ ಬದುಕಿಗೂ ಸ್ಪಂದಿಸಿವೆ. ಇದು ಬಿಜೆಪಿಗೆ ನಡುಕ ಹುಟ್ಟಿಸಿದೆ. ಹೀಗಾಗಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಿಪರೀತ ಸುಳ್ಳುಗಳನ್ನು, ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತಾರೆ. ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ,…
ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದ 11 ವರ್ಷಗಳು ಉರುಳಿಸಿದೆ. ಆದರೆ ತಪ್ಪಿತಸ್ಥರು ಇದುವರೆಗೂ ಸಿಕ್ಕಿಲ್ಲ. ಅಮಾಯಕ ಹೆಣ್ಣುಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಸೌಜನ್ಯ ಕುಟುಂಬಸ್ಥರು, ಸಂಘಟನೆಗಳು ಹೋರಾಟ ಮಾಡುತ್ತಲೇ ಇದೆ. ಇಂದು ಸೌಜನ್ಯ ಅತ್ಯಾಚಾರ ಪ್ರಕರಣವನ್ನ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಅಂತ 30 ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳಿಂದ ನಗರದ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಈ ಪ್ರಕರಣವನ್ನ ಉನ್ನತಮಟ್ಟದ ತನಿಖೆಗೆ ವಹಿಸಬೇಕು. ಯಾರನ್ನೋ ಉಳಿಸುವ ಪ್ರಯತ್ನ ಆಗಬಾರದೆಂದು ಪ್ರತಿಭಟನೆಯಲ್ಲಿ ಭಾಗಿಯಾದ ಮಹಿಳೆಯರು ಕಿಡಿಕಾರಿದ್ರು. ಇನ್ನೂ ಈ ಪ್ರತಿಭಟನೆಯಲ್ಲಿ ಸೌಜನ್ಯಳ ತಾಯಿ ಕೂಡ ಭಾಗಿಯಾಗಿ, ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಭಾವುಕರಾದ್ರು. ಅಕ್ಟೋಬರ್ 9, 2012ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಕಾಲೇಜಿನ ವಿದ್ಯಾರ್ಥಿನ ಕುಮಾರಿ ಸೌಜನ್ಯ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದಳು. ಈ ಕುರಿತು ಹಲವು ಇಲಾಖೆಗಳಿಂದ ತನಿಖೆ ನಡೆದಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. 2013ರಿಂದ 2023ರ ವರೆಗೆ ಸಿಬಿಐ ತನಿಖೆ ನಡೆಸಿತ್ತು. ಇತ್ತೀಚೆಗೆ…