ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ಇದೀಗ ಶಿವಮೊಗ್ಗದ ಅಭಿಮಾನಿ ವೈಷ್ಣವಿ ಎಂಬುವವರು ತಮ್ಮ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಮರುಹಂಚಿಕೊಂಡಿರುವ ಸುದೀಪ್, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ. ಮಹಿಳಾ ಅಭಿಮಾನಿಯ ರಕ್ತದಲ್ಲಿ ತಯಾರಾದ ಚಿತ್ರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದರೆ,ಸಾಕಷ್ಟು ಮಂದಿ ರಕ್ತ ಅಮೂಲ್ಯವಾದದ್ದು ಅದನ್ನು ಈ ರೀತಿ ಹಾಳು ಮಾಡಬೇಡಿ. ಅಭಿಮಾನವನ್ನು ರಕ್ತದಾನ ಮಾಡುವ ಮೂಲಕ ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
Author: Prajatv Kannada
ಬೆಂಗಳೂರು ;- ತನ್ವೀರ್ ಸೇಠ್ ಪತ್ರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಈ ಹಿಂದೆ ಶಾಸಕ ತನ್ವೀರ್ ಸೇಠ್, ‘ಅಮಾಯಕರ ಮೇಲಿನ ಪ್ರಕರಣಗಳನ್ನು ಬಿಟ್ಟು ಬಿಡುವಂತೆ’ ಕೋರಿ ಪತ್ರ ಬರೆದಿದ್ದರು. ಈ ವಿಚಾರವಾಗಿ ವಿವಾದ ಉಂಟಾಗಿದ್ದು ಇದೀಗ ಬಸನಗೌಡ ಪಾಟೀಲ ಯತ್ನಾಳ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತನ್ವೀರ್ ಸೇಠ್ ಬರೆದಿದ್ದ ಪತ್ರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಕಿಡಿಕಾರಿದ್ದಾರೆ. ಶಾಸಕ ತನ್ವೀರ್ ಸೇಠ್ ಬರೆದ ಪತ್ರವನ್ನು ಟ್ಯಾಗ್ ಮಾಡಿರುವ ಯತ್ನಾಳ್ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಟ್ವೀಟ್ನಲ್ಲಿ, ‘ಗೃಹ ಮಂತ್ರಿ ಶ್ರೀ ಪರಮೇಶ್ವರ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದ್ದು, ನಾವು ಯಾವ ಒಂದು ಕೋಮಿನ ಪರವೂ ಅಲ್ಲ. ಎಲ್ಲಾ ಅಮಾಯಕರ ಕೇಸುಗಳನ್ನು ಹಿಂಪಡೆಯಲು ಹೇಳಿದ್ದೇವೆ ಎಂದು ಹೇಳಿದ್ದನ್ನು ಗಮನಿಸಿದ್ದೇನೆ. ಸುಳ್ಳು ನೂರು ಬಾರಿ ಹೇಳಿದರೆ ಸತ್ಯವಾಗದು. ಶಾಸಕರ ಪತ್ರದಲ್ಲಿ ‘ಒಂದು ಕೋಮಿನ ನಿರ್ದಿಷ್ಟ’ ಅಮಾಯಕರು ಎಂದು ಬರೆದಿದ್ದೀರಿ. ಯಾವ ಕೋಮು ಅದು? ಯಾಕೆ ಅದೇ ಕೋಮಿನವರು ಕಲ್ಲು…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ, ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ‘ಆಚಾರ್ & ಕೋ’ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಶ್ವಿನಿ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾ ಗೆಲ್ಲುವಂತೆ ಪ್ರಾರ್ಥಿಸಿದ್ದಾರೆ ಎನ್ನಲಾಗುತ್ತಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಜೊತೆಗೆ ‘ಆಚಾರ್ & ಕೋ’ ಚಿತ್ರತಂಡದ ಸದಸ್ಯರು ಕೂಡ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಆಚಾರ್ & ಕೋ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ ಚಿತ್ರವಾಗಿದ್ದು ಇಂದು ಚಿತ್ರ ಬಿಡುಗಡೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಚಿತ್ರತಂಡದ ಜೊತೆ ಚಾಮುಂಡಿ ದೇವಿಯ ಆಶೀರ್ವಾದ ಪಡೆದ್ದಾರೆ. ಈ ಸಂದರ್ಭದಲ್ಲಿ ನಟ ವಿನಯ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಪುತ್ರಿ ಕೂಡ ಜೊತೆ ಇದ್ದರು. ಪುನೀತ್ ನಿಧನಾ ನಂತರ ಪಿ.ಆರ್.ಕೆ ಪ್ರೊಡಕ್ಷನ್…
ಸಾಮಾನ್ಯವಾಗಿ ನಮ್ಮ ತ್ವಜೆಗೆ ಎಣ್ಣೆಯ ಅವಶ್ಯಕತೆ ಇದೆ ಎಣ್ಣೆಯು ನಮ್ಮ ತ್ವಜೆಯನ್ನು ಸಾಫ್ಟ್ ಆಗಿ ಇಡಲು ಸಹಾಯ ಆಗಿದೆ ಅದೇ ರೀತಿ ನಮ್ಮ ತ್ವಜೆಯ ಮೇಲೆ ನೆರಿಗೆಗಳನ್ನು ಕೂಡ ಆಗಲಿ ಇದು ಬಿಡುವುದಿಲ್ಲ ಆದರೆ ಅದೇ ಎಣ್ಣೆ ತುಂಬಾ ಜಾಸ್ತಿ ಆದರೆ ಇದರೊಂದಿಗೆ ಧೂಳು ಸೇರಿಕೊಂಡು ಫಂಗಲ್ ಇನ್ಫೆಕ್ಷನ್ ಆಗುತ್ತದೆ ಮೊಡವೆ ಆಗಲು ಶುರು ಆಗುತ್ತದೆ ಹಾರ್ಮೋನ್ ಇಂಬ್ಯಲೆನ್ಸ್ ಆಗುವುದರಿಂದ ಕೂಡ ಆಯಿಲ್ ಸ್ಕಿನ್ ಆಗಲು ಶುರು ಆಗುತ್ತದೆ. ಆದ್ದರಿಂದ ನೀವು ಏನು ಮಾಡಬೇಕು ಎಂದರೆ ಮುಖ ತೊಳೆಯುವಾಗ ಕಡಿಮೆ ಕೆಮಿಕಲ್ ಹಾಕಿರುವ ಸೋಪ್ ಗಳನ್ನ ಕ್ರೀಂ ಅನ್ನು ಹಚ್ಚಬಾರದು ಈ ಲೇಖನದಲ್ಲಿ ಎಣ್ಣೆ ಚರ್ಮ ನಿವಾರಣೆ ಅಂದಳು ಕೆಲವು ಮನೆ ಮದ್ದು ತಿಳಿಸುತ್ತೇವೆ ಈ ಮನೆ ಮದ್ದು ಬಳಸುವುದರಿಂದ ನಿಮ್ಮ ತ್ವಜೆಯ ಮೇಲೆ ಇರುವ ಎಣ್ಣೆಯನ್ನು ನಿವಾರಣೆ ಮಾಡಲು ತುಂಬಾ ಉಪಯೋಗ ಆಗುತ್ತದೆ. ಮುಖದ ಮೇಲಿನ ಎಣ್ಣೆ ನಿವಾರಣೆ ಮಾಡಲು ನೀವು ಬಾಳೆ ಹಣ್ಣು ತೆಗೆದುಕೊಂಡು ಕೈಯಿಂದ ಸ್ವಲ್ಪ ಮ್ಯಾಶ್…
ಜೀರಿಗೆ ಸಾರ ಮಿಶ್ರಣ ಮಾಡಿದ ನೀರು ಇಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಬೇಕಾದಷ್ಟು ಜನರಿಗೆ ರಕ್ತದ ಒತ್ತಡ, ಮಧುಮೇಹ, ಹೃದಯದ ತೊಂದರೆ ಇತ್ಯಾದಿಗಳು ಸಹ ಅಚ್ಚುಕಟ್ಟಾಗಿ ಇದರಿಂದ ನಿರ್ವಹಣೆಯಾಗಿದೆ. ಹಾಗಿದ್ದ ಮೇಲೆ ನೀವೇಕೆ ಒಮ್ಮೆ ಟ್ರೈ ಮಾಡಬಾರದು. ಜೀರಾ ವಾಟರ್ ಅಥವಾ ಜೀರಿಗೆ ಪಾನೀಯ ಕುಡಿಯುವುದರ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೀರಿಗೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ವೇಳೆ ಜೀರಿಗೆ ನೆನೆಹಾಕಿ, ಬೆಳಗ್ಗೆ ಅದೇ ನೀರಿನಲ್ಲಿ ಮತ್ತಷ್ಟು ನೀರು ಸೇರಿಸಿ ಕುದಿಸಿ ಟೀ ರೀತಿಯಲ್ಲಿ ಕುಡಿದರೆ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಸೇರಿ ವಿವಿಧ ಖನಿಜಗಳಿಂದ ಕೂಡಿದೆ. ಉರಿಯೂತ ಕಡಿಮೆ ಮಾಡುತ್ತದೆ: ನೀರಿನಲ್ಲಿ ಜೀರಿಗೆಯನ್ನು ಬೆರೆಸಿ ಕುದಿಸಿ ಕುಡಿಯುವುದರಿಂದ ಯಕೃತ್ತನ್ನು ಉರಿಯೂತದಿಂದ ರಕ್ಷಿಸುತ್ತದೆ ಮತ್ತು ಒಟ್ಟಾರೆ ಯಕೃತ್ತಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಈ ನೀರಿನ ಸೇವನೆಯಿಂದ ಹೊಟ್ಟೆಯ…
ದೇಹದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿದ್ದರೆ ಅದನ್ನು ಮಧುಮೇಹ ಕಾಯಿಲೆ ಎನ್ನುತ್ತಾರೆ. ಮಧುಮೇಹ ಅಧಿಕವಾದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎನ್ನುವುದು ನಿಮಗೆ ಹೊಸದೇನಲ್ಲ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು(Blood Sugar Level) ಅಧಿಕವಾಗಿದೆ ಅಂತಾದರೆ ನೀವು ಮಧುಮೇಹದಿಂದ(Diabetes) ಬಳಲುತ್ತಿದ್ದೀರಿ ಎಂದರ್ಥ. ಈ ಸಕ್ಕರೆ ಕಾಯಿಲೆಯು ಹೃದಯ(Heart) ಮತ್ತು ಮೂತ್ರಪಿಂಡದ(Kidney) ಕಾಯಿಲೆಯಂತಹ ಇತರ ಸ್ಥಿತಿಗಳ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದು ಒಳ್ಳೆಯ ಸುದ್ದಿ ಏನೆಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ.. ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಕಡಿಮೆ ಮಾಡುವುದು ಹೇಗೆ ? ಕೆಲವು ಮೂಲಗಳು ನೀರು ಅಥವಾ ಹೆಚ್ಚಿನ-ಪ್ರೋಟೀನ್ ಲಘು ಸೇವನೆಯು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ, ಅದಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನೀವು ಬಯಸಿದರೆ, ನೀವು ಈ ಕೆಳಗಿನ ವಿಧಾನಗಳನ್ನು ಬಳಸಬಹುದು: ಔಷಧಿಗಳನ್ನು ತೆಗೆದುಕೊಳ್ಳಿ: ಔಷಧಿ ಡೋಸ್ ಅನ್ನು ತಪ್ಪಿಸಿಕೊಳ್ಳಬೇಡಿ. ನೀವು ಇನ್ಸುಲಿನ್ ಅನ್ನು ಶಿಫಾರಸು ಮಾಡಿದ್ದರೆ, ಎಷ್ಟು ಇನ್ಸುಲಿನ್…
ನಾವು ತಿನ್ನುವ ತಿಂಡಿ ಅಥವಾ ಊಟದ ಮೇಲೆ ನಮಗೆ ಗಮನ ಇರುವುದಿಲ್ಲ. ಹಾಗಾಗಿ ಊಟದ ನಿಜವಾದ ಸ್ವಾದವನ್ನು ನಾವು ಅನುಭವಿಸಲು ಸಾಧ್ಯವಾಗುತ್ತಿಲ್ಲ. ತೃಪ್ತಿಕರವಾಗಿ ಊಟ ಮಾಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ದಿನೇ ದಿನೇ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜೊತೆಗೆ ದೇಹದ ತೂಕ ಹಾಗೂ ಬೊಜ್ಜು ಕೂಡ ಹೆಚ್ಚಾಗಿದೆ. ಟಿವಿ ನೋಡುತ್ತಾ ಕುಳಿತು ತಿನ್ನುವುದರಿಂದ ಆಗುವ ಕೆಲವು ಅವಾಂತರಗಳ ಬಗ್ಗೆ ನೋಡೋಣ ಬನ್ನಿ. ಹೆಚ್ಚು ತಿಂದುಬಿಡುತ್ತೀರಿ! ಊಟ ಮಾಡುವ ಸಂದರ್ಭದಲ್ಲಿ ಯಾರು ಟಿವಿ ನೋಡುತ್ತಾರೆ, ಅವರ ಗಮನ ಏನಿದ್ದರೂ ಟಿವಿ ಕಡೆಗೆ ಹೆಚ್ಚಾಗಿರುತ್ತದೆ. ಹಾಗಾಗಿ ತಟ್ಟೆಯಲ್ಲಿ ಎಷ್ಟು ಪ್ರಮಾಣದ ಆಹಾರವಿದೆ ಮತ್ತು ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಅರಿವು ಸ್ವಲ್ಪವೂ ಇರುವುದಿಲ್ಲ. ಈ ಸಂದರ್ಭದಲ್ಲಿ ನಮ್ಮ ದೇಹಕ್ಕೆ ಅತಿಯಾದ ಕ್ಯಾಲೋರಿಗಳು ಸೇರಿಬಿಡುತ್ತವೆ. ಪ್ರತಿ ಬಾರಿ ಹೀಗೆ ಮುಂದುವರೆದರೆ ನಮ್ಮದೇಹದ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ. ಜಂಕ್ ಫುಡ್ ಸೇವನೆ ಟಿವಿಯಲ್ಲಿ ಅಪ್ಪಿತಪ್ಪಿ ಕ್ರಿಕೆಟ್ ಮ್ಯಾಚ್ ಅಥವಾ ಇಷ್ಟವಾದ ಯಾವುದಾದರೂ ಮೂವಿ ಬಂದರೆ ಮುಗಿಯಿತು, ಕೈಯಲ್ಲಿ ಕಾರ್ಬೋನೇಟೆಡ್…
ಡಮಾಸ್ಕಸ್ : ಸಿರಿಯಾದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನಗರು ಗಾಯಗೊಂಡಿರುವ ಘಟನೆ ಡಮಾಸ್ಕಸ್ ಗ್ರಾಮೀಣ ಪ್ರದೇಶದ ಅಸ್ಸೈದಾ ಝಯನಾಬ್ ಪಟ್ಟಣದಲ್ಲಿ ನಡೆದಿದೆ ಎಂದು ಸಿರಿಯಾ ಅರಬ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುದ್ದಿ ಸಂಸ್ಥೆಯ ಪ್ರಕಾರ, ಡಮಾಸ್ಕಸ್ ಗ್ರಾಮೀಣ ಪ್ರದೇಶದ ಅಸ್ಸೈದಾ ಝೈನಾಬ್ ಪಟ್ಟಣವನ್ನು ಗುರಿಯಾಗಿಸಿಕೊಂಡು ಸ್ಫೋಟಗೊಳಿಸಲಾಗಿದ್ದು, ಸಯ್ಯಿದಾ ಝೈನಾಬ್ನ ಕೌ ಸುಡಾನ್ ಸ್ಟ್ರೀಟ್ನಲ್ಲಿ ಟ್ಯಾಕ್ಸಿ ಬಳಿ ಮೋಟಾರ್ಸೈಕಲ್ ಸ್ಫೋಟಗೊಂಡಿದೆ ಎಂದು ಸನಾ ವರದಿ ಮಾಡಿದೆ. ಹುತಾತ್ಮರು ಮತ್ತು ಗಾಯಗೊಂಡವರ ಶವಗಳನ್ನು ಆಸ್ಪತ್ರೆಗಳಿಗೆ ದಾಖಲಿಸುತ್ತಿದ್ದಂತೆ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದರು ಎಂದು ಆಂತರಿಕ ಸಚಿವಾಲಯ ಟೆಲಿಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಮನಿಲಾ (ಫಿಲಿಪ್ಪೀನ್): ಫಿಲಿಪೈನ್ಸ್‌ನ ಸರೋವರದಲ್ಲಿ ಪ್ರಯಾಣಿಕರಿದ್ದ ದೋಣಿ ಮುಳುಗಿ 30 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 40 ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. MBCA ಪ್ರಿನ್ಸೆಸ್ ಅಯಾ ಬಿನಾಂಗೊನಾನ್‌ನ ಬರಾಂಗೇ ಕಲಿನಾವನ್‌ನಿಂದ ಸುಮಾರು 50 ಗಜಗಳಷ್ಟು ದೂರದಲ್ಲಿ ಪ್ರಯಾಣಿಕರಿದ್ದ ದೋಣಿ ಮಗುಚಿ ಬಿದ್ದಿದೆ ಎಂದು ಫಿಲಿಪೈನ್ ಕೋಸ್ಟ್ ಗಾರ್ಡ್ (PCG) ತಿಳಿಸಿದೆ. ಏಜೆನ್ಸಿಯ ಪ್ರಕಾರ, ಈ ಘಟನೆಯು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸಂಭವಿಸಿದ್ದು, ಬಲವಾದ ಗಾಳಿಯಿಂದ ಯಾಂತ್ರಿಕೃತ ದೋಣಿಯು ಜರ್ಜರಿತವಾದಾಗ ಭಯಭೀತರಾದ ಪ್ರಯಾಣಕರು ಒಂದೆಡೆ ಗುಂಪುಗೂಡಿದರು, ಇದರಿಂದಾಗಿ ದೋಣಿ ಮಗುಚಿದೆ ಎಂದು ತಿಳಿದುಬಂದಿದೆ.ಘಟನಾ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈ: ‘2015ರಲ್ಲಿ ಇಲ್ಲಿ ನಡೆದಿದ್ದ ಮಸೀದಿ ಸ್ಫೋಟ ಪ್ರಕರಣದ ಅಪರಾಧಿ ಸೇರಿದಂತೆ ಐವರನ್ನು ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದೆ’ ಎಂದು ಕುವೈತ್‌ನ ಪಬ್ಲಿಕ್ ಪ್ರಾಸಿಕ್ಯೂಷನ್ ತಿಳಿಸಿದೆ. ಸ್ಫೋಟದಲ್ಲಿ 27 ಮಂದಿ ಸಾವಿಗೀಡಾಗಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.