ಪಾಕಿಸ್ತಾನದ ನಿಷೇಧಿತ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಯ ವಾಹನದ ಮೇಲೆ ಬುಧವಾರ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ಯೋಧ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಗಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಾಜೌರ್ ಜಿಲ್ಲೆಯ ಮಾಮೊಂಡ್ ಬಳಿ ಉಗ್ರರು ಭದ್ರತಾ ಪಡೆಯ ವಾಹನದ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದರು. ದಾಳಿಯ ತೀವ್ರತೆಯಿಂದಾಗಿ ಒಬ್ಬ ಯೋಧ ಮೃತಪಟ್ಟಿದ್ದು, ವಾಹನವು ಜಖಂಗೊಂಡಿತು. ಭದ್ರತಾ ಪಡೆಯ ಇನ್ನಷ್ಟು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದಿದ್ದಾರೆ.
Author: Prajatv Kannada
ಕನ್ನಡದ ಖ್ಯಾತ ಹಿರಿಯ ನಟಿ ತಾರಾ ಅನುರಾಧಾ ವಿಶೇಷ ಫೋಟೋ ಶೂಟ್ ಮಾಡಿಸಿದ್ದು ಥೇಟ್ ರಾಜಮಾತೆಯಂತೆ ಕಂಗೊಳಿಸಿದ್ದಾರೆ. ಮೈಸೂರಿನ ಮಹಾರಾಣಿಯ ರೀತಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಪ್ರತಿಯೊಬ್ಬರು ಕ್ಲೀನ್ ಬೋಲ್ಡ್ ಆಗಿದ್ದಾರೆ. ವಿಶೇಷ ಫೋಟೋ ಶೂಟ್ ಮೂಲಕ ನಟಿ ತಾರಾ ಅನುರಾಧಾ ಗೌರಿ ಗಣೇಶ ಹಬ್ಬಕ್ಕೆ ನಾಡಿನ ಜನತೆಗೆ ವಿಶೇಷವಾಗಿಯೆ ಶುಭಾಷಯ ತಿಳಿಸಿದ್ದಾರೆ. ತಾರಾ ಅನುರಾಧಾ ತೇಟ ಮಹಾರಾಣಿಯ ರೂಪದಲ್ಲಿಯೇ ಕಂಗೊಳಿಸಿದ್ದಾರೆ. ಹಬ್ಬದ ದಿನವೇ ಈ ಒಂದು ಲುಕ್‌ನ ರಿವೀಲ್ ಆಗಿದೆ. ಹಾಗೆ ಈ ಬಗ್ಗೆ ತಾರಾ ಅನುರಾಧಾ ತಮ್ಮ ಈ ವಿಶೇಷ ಫೋಟೋದ ಹಿಂದಿನ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ. ಅದರ ಜೊತೆಗೆ ಒಂದಷ್ಟು ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಮೈಸೂರಿನ ರಾಜಮಾತೆಯ ಲುಕ್ ಅನ್ನೇ ಇಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಹಾಗಾಗಿಯೇ ತಾರಾ ಅನುರಾಧಾ ಅವರು ಮಹಾರಾಣಿಯಂತೆ ಕಾಣಿಸುತ್ತಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳೂ ಕೂಡ ತಾರಾ ಅವರನ್ನ ರಾಜ ಮಾತೆ ಅಂತಲೂ ಕರೆದಿದ್ದಾರೆ. ತಾರಾ ಅನುರಾಧಾ ಅವರು…
ಕಿರುತೆರೆ ನಟ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಅರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೃಂದಾವನ ಸೀರಿಯಲ್ನಲ್ಲಿ ನಟಿಸುತ್ತಿದ್ದ ವರುಣ್ ಆರಾಧ್ಯ ಅವರು ಸೀರಿಯಲ್ಗೆ ಎಂಟ್ರಿ ಕೊಡುವ ಸ್ವಲ್ಪ ಮುನ್ನ ವರ್ಷ ಕಾವೇರಿ ಜೊತೆ ಬ್ರೇಕ್ ಅಪ್ ಮಾಡಿ ಕೊಂಡಿದ್ದರು. ಆದರೆ ಇದೀಗ ವರುಣ್ ವಿರುದ್ಧ ವರ್ಷ ಕಾವೇರಿ ದೂರು ದಾಖಲಿಸಿದ್ದಾರೆ. ಖಾಸಗಿ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಕೆಯ ಆರೋಪದಡಿ ವರುಣ್ ಆರಾಧ್ಯ ವಿರುದ್ಧ ವರ್ಷ ಕಾವೇರಿ ದೂರು ನೀಡಿದ್ದಾರೆ. ಯುವತಿ ಜೊತೆ ಎಂಗೇಜ್ ಆಗಿದ್ದಾಗಲೇ ಬೇರೆ ಅವರೊಂದಿಗೆ ವರುಣ್ ಅಫೇರ್ ಹೊಂದಿದ್ದರು. ಅದನ್ನು ಪ್ರಶ್ನಿಸಿದ ಯುವತಿಗೆ ಖಾಸಗಿ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ವರುಣ್ ಬೆದರಿಸಿದ್ದ. ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿದ್ದಾರೆ. ವಾಟ್ಸ್ ಆಪ್‌ಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್ ನಿಂದಿಸಿರೋದಾಗಿ ವರ್ಷ ಕಾವೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ…
ರಾಜ್ಯದ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು ಶ್ರಮಿಸುವ ಅರಣ್ಯ ಸಿಬ್ಬಂದಿಗೂ ಪೊಲೀಸ್ ಕ್ಯಾಂಟೀನ್ ಸೌಲಭ್ಯ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. https://youtu.be/yyEd9bOlKgY?si=G5cU104Mk5PBUH1r ನಗರದ ಭವನದಲ್ಲಿ ಬುಧವಾರ ಮಾತನಾಡಿದ ಅವರು, ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದರು. ಕಾಡ್ಗಿಚ್ಚು ನಂದಿಸುವಾಗ, ಮಾನವ-ವನ್ಯಜೀವಿ ಸಂಘರ್ಷ ತಡೆಯುವ ಸಂದರ್ಭದಲ್ಲಿ ಜೀವವನ್ನು ಒತ್ತೆಯಿಟ್ಟಿದ್ದಾರೆ. ಒತ್ತುವರಿದಾರರು ಮತ್ತು ಕಾಡುಗಳ್ಳರ ಆಕ್ರೋಶಕ್ಕೆ ಗುರಿಯಾಗಿ ಈವರೆಗೆ 61 ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ಎಲ್ಲರ ಕುಟುಂಬದೊಂದಿಗೆ ಅರಣ್ಯ ಇಲಾಖೆ ನಿಂತಿದೆ ಎಂದರು. ರಾಜ್ಯದ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು, ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಲಿ ಇರುವ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹುತಾತ್ಮರ ಕುಟುಂಬಕ್ಕೆ…
ಬೆಳಗಾವಿ: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ದೀಪಾವಳಿ ನಂತರ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂಬ ಬಿಜೆಪಿನಾಯಕರ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಸ್ಥಿರ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಅಸ್ಥಿರ ಮಾಡುವುದು, ಸರ್ಕಾರ ಬೀಳಿಸುವುದು, ಸರ್ಕಾರ ಒಡೆಯುವುದು, ಆಪರೇಷನ್ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದವರಿಗೆ ಇದೇ ಕೆಲಸ ಆಗಿದೆ. ಸರ್ಕಾರ ಬೀಳಿಸುವುದೇ ಒಂದೇ ಅವರ ಕಾರ್ಯಕ್ರಮ ಆಗಿದೆ ಎಂದು ಕಿಡಿಕಾರಿದರು. ನಾಳೆ ಸಿಎಂ ಭವಿಷ್ಯ ನಿರ್ಧಾರ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆಗುವುದಿಲ್ಲ. ಸಿಎಂ ಅವರ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಸಿಎಂ ರೇಸ್‌ನಲ್ಲಿ ಯಾರು ಇಲ್ಲ ಎಂದು ಸಮರ್ಥಿಸಿಕೊಂಡರು. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟ ಸಿಎಂ, ಭ್ರಷ್ಟ ಸಿಎಂ ಆಕಾಂಕ್ಷಿಗಳು ಎಂದು ಪೋಸ್ಟ್ ಹಾಕಿರುವ ಕುರಿತು, ಅವರ ಸೋಷಿಯಲ್ ಮೀಡಿಯಾದಲ್ಲಿ…
ಲೈಂಗಿಕ ಜೀವನವು ರೋಮಾಂಚನಕಾರಿ ಮತ್ತು ಆನಂದದಾಯಕವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ, ಆದರೆ ಕೆಲವೊಮ್ಮೆ ಲೈಂಗಿಕ ಜೀವನವನ್ನು ಅಡ್ಡಿಪಡಿಸುವ ಕೆಲವು ಲೈಂಗಿಕ ರೋಗಗಳು ಇರುತ್ತವೆ. ಪುರುಷರಂತೆ ಮಹಿಳೆಯರಲ್ಲೂ ಹಲವಾರು ರೀತಿಯ ಲೈಂಗಿಕ ಸಮಸ್ಯೆಗಳಿವೆ. ಕೆಲವು ಮಹಿಳೆಯರು ಲೈಂಗಿಕ ಪ್ರಚೋದನೆಯ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಇದನ್ನು ನಿರಂತರ ಲೈಂಗಿಕ ಪ್ರಚೋದನೆಯ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಹೆಚ್ಚಿನ ಲೈಂಗಿಕ ಪ್ರಚೋದನೆ ಈ ರೀತಿಯ ಕಾಯಿಲೆಯಲ್ಲಿ, ಮಹಿಳೆಯರು ಯಾವುದೇ ಲೈಂಗಿಕ ಚಟುವಟಿಕೆಯಿಲ್ಲದೆ ಲೈಂಗಿಕ ಪ್ರಚೋದನೆಯಲ್ಲಿ ಹೊಂದುತ್ತಾರೆ. ಅನೇಕ ಜನರು ಇದನ್ನು ರೋಗ ಎಂದು ಭಾವಿಸುವುದಿಲ್ಲ, ಆದರೆ ಇದು ಒಂದು ರೀತಿಯ ರೋಗವಾಗಿದೆ. ಈ ರೋಗದಲ್ಲಿ ಮಹಿಳೆಯರು ಯಾವಾಗಲೂ ಉತ್ಸುಕರಾಗಿರುತ್ತಾರೆ ಮತ್ತು ಅವರು ಮತ್ತೆ ಮತ್ತೆ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಈ ರೋಗವು ತುಂಬಾ ಮಾರಕವೂ ಆಗಬಹುದು. ಈ ರೋಗದ ಲಕ್ಷಣಗಳು ಈ ರೋಗದ ಮೊದಲ ಲಕ್ಷಣವೆಂದರೆ ಮಹಿಳೆಯರು ಲೈಂಗಿಕ ಚಟುವಟಿಕೆಯಿಲ್ಲದಿದ್ದರೂ ಉತ್ಸಾಹದಿಂದ ಇರುತ್ತಾರೆ. ಮಹಿಳೆ ಬಯಸದಿದ್ದರೂ ಲೈಂಗಿಕ ಪ್ರಚೋದನೆಯನ್ನು ಹೊಂದಿರುತ್ತಾಳೆ. ಮಹಿಳೆಯು ದಿನಕ್ಕೆ ಹಲವಾರು ಬಾರಿ ಲೈಂಗಿಕತೆಯನ್ನು ಹೊಂದಿದ್ದರೂ ಸಹ…
ಆಗಾಗ್ಗೆ ಕಣ್ಣು ಸೆಳೆತ ಎಂದು ಯಾರಾದರೂ ಹೇಳುವುದನ್ನು ನಾವು ಕೇಳಿರಬಹುದು. ಯಾರ ಕಣ್ಣಾದರೂ ಪಟಪಟನೆ ಬಡಿದರೆ ಅದು ಶಕುನಗಳಿಗೆ ಸಂಬಂಧ ಕಲ್ಪಿಸಿದಂತೆ. ಕಣ್ಣು ಈ ರೀತಿಯಾಗಿ ಬಡಿದುಕೊಳ್ಳುವುದು ಎಂದರೆ ಮುಂದಿನ ಘಟನೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಜನರು ನಂಬುತ್ತಾರೆ. ಕಣ್ಣು ಹೀಗೆ ಬಡಿದುಕೊಳ್ಳುವುದರ ಅರ್ಥ ಒಳ್ಳೆಯದು ಅಥವಾ ಕೆಟ್ಟದು ಆಗಬಹುದು ಎಂದು ನಂಬಲಾಗಿದೆ. ಬಲಗಣ್ಣು ಸಾಗರ ವಿಜ್ಞಾನದ ಪ್ರಕಾರ, ಮನುಷ್ಯನ ಬಲಗಣ್ಣು ಬಡಿಯುತ್ತಿದ್ದರೆ, ಅದು ಅವನಿಗೆ ಒಳ್ಳೆಯದು. ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಅವರು ಬಡ್ತಿ ಮತ್ತು ಹಣ ವನ್ನು ಪಡೆಯುತ್ತಾರೆ. ಆದರೆ ಮಹಿಳೆಯ ಬಲಗಣ್ಣು ಬಡಿಯುತ್ತಿದ್ದರೆ, ಅದು ಅವಳಿಗೆ ಅಶುಭ ಸಂಕೇತವಾಗಿದೆ. ಮಹಿಳೆಯ ಕೆಲಸವು ಹದಗೆಡಲಿದೆ ಎಂದು ನಂಬಲಾಗಿದೆ. ಎಡಗಣ್ಣಿನ ಪಟಪಟನೆ ಎಡಗಣ್ಣಿನ ಪಟಪಟನೆ ಬಡಿಯುವುದು ಮಹಿಳೆಯರಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಎಡಗಣ್ಣು ಹೊಡೆಯುವುದು ಎಂದರೆ ಮಹಿಳೆಯರು ಚಿನ್ನ-ಬೆಳ್ಳಿಯ ಆಭರಣ ಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಪುರುಷರ ಎಡಕಣ್ಣುಗಳು ಹೊಡೆದುಕೊಳ್ಳುತ್ತಿದ್ದರೆ ಹಾನಿಗೊಳಗಾಗುತ್ತವೆ. ಅವರ ಶತ್ರುವು…
ಹಮಾಸ್ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್, ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಕಟ್ಟಡ ನಿರ್ಮಾಣ, ಬಡಗಿ, ಕಮ್ಮಾರ ಕೆಲಸದಾಳುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಕಾರ್ಮಿಕರನ್ನು ಒದಗಿಸಲು ಅಲ್ಲಿನ ಸರ್ಕಾರ ಭಾರತಕ್ಕೆ ಮನವಿ ಮಾಡಿದ್ದು10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭೇಡಿಕೆ ಇಟ್ಟಿದೆ. ಒಟ್ಟು 10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರ ಅಗತ್ಯವಿದ್ದು ಮತ್ತೆ ನೇಮಕ ಪ್ರಕ್ರಿಯೆ ನಡೆಸಿಕೊಡುವಂತೆ ಭಾರತಕ್ಕೆ ಇಸ್ರೇಲ್ ಮನವಿ ಮಾಡಿದೆ. ಅಲ್ಲದೇ ಮನೆ ಕೆಲಸಕ್ಕೆ 5 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಡುವಂತೆಯೂ ಬೇಡಿಕೆ ಸಲ್ಲಿಸಿದೆ. ಇಸ್ರೇಲ್ ಮನವಿಗೆ ಸ್ಪಂದಿಸಿರುವ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ಈ ಸಂಬಂಧ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದು ವಿಷಯ ತಿಳಿಸಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ನೇಮಕ ಪ್ರಕ್ರಿಯೆ ಈ ಬಾರಿ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಮೊದಲ ಸುತ್ತಿನ ನೇಮಕಾತಿ ಪ್ರಕ್ರಿಯೆ ಉತ್ತರ ಪ್ರದೇಶ, ಹರಿಯಾಣ ಮತ್ತು ತೆಲಂಗಾಣದಲ್ಲಿ ನಡೆದಿತ್ತು. ಆಗ, 10,349 ಕಾರ್ಮಿಕರು ನೇಮಕಗೊಂಡಿದ್ದರು. ಇದೀಗ ಮತ್ತೆ ಬೇಡಿಕೆ ಸಲ್ಲಿಸಿದ್ದು ಮತ್ತಷ್ಟು ಕಾರ್ಮಿಕರು…
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಆರು ಸಂಸದರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸಾವಿರಾರು ಬೆಂಬಲಿಗರು ಭಾನುವಾರ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರ್ಯಾಲಿಗಾಗಿ ಜಮಾಯಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಬಂಧಿತ ಸಂಸದರನ್ನು ಇಸ್ಲಾಮಾಬಾದ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಬಂಧಿತರನ್ನು ನ್ಯಾಯಾಧೀಶರು ಅವರಿಗೆ ಎಂಟು ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ. ಕಳೆದ ವಾರವಷ್ಟೇ ಪಾಕ್ ಸಂಸತ್ ನಲ್ಲಿ ಶಾಂತಿಯುತ ಸಭೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಯಿದೆ 2024 ಅನ್ನು ಅಂಗೀಕರಿಸಲಾಯಿತು. ಈ ಕಾಯ್ದೆಯಡಿ ಪಿಟಿಐ ಪಕ್ಷದ ಒಟ್ಟು 34 ಮಂದಿಯನ್ನು ಬಂಧಿಸಲಾಗಿದೆ. ಈ ಸಣ್ಣ ಅಡೆತಡೆಗಳು ನಮ್ಮನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ನಾವು ಇಮ್ರಾನ್ ಖಾನ್ ಅವರ ಸೈನಿಕರು, ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಸಂಸದರ ಜೊತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ ಪಿಟಿಐ ನಾಯಕ ಮತ್ತು ಹಿರಿಯ ವಕೀಲ ಮುಹಮ್ಮದ್ ಶೋಯೆಬ್ ಶಾಹೀನ್ ಹೇಳಿದ್ದಾರೆ. ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ…