ಮಂಗಳೂರು: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ ವಿಚಾರ ‘ ನನಗೆ ಸೇರಿದ್ದ 150 ಆಸ್ತಿಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ 80ಕ್ಕೂ ಅಧಿಕ ಆಸ್ತಿಗಳನ್ನು ಕೋರ್ಟ್ ನಿನ್ನೆ ಬಿಡುಗಡೆ ಮಾಡಿದೆ. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥದ ಬಳಿಕ ಪರಿಹಾರವಾಗಲಿದೆ ಎಂದು ಧರ್ಮಸ್ಥಳದಲ್ಲಿ ಕೆಆರ್ಪಿಪಿ ಸ್ಥಾಪಕ, ಶಾಸಕ ಜನಾರ್ದನರೆಡ್ಡಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಾತನಾಡಿದ ಅವರು ‘ನನ್ನ ಮೇಲೆ ದೇವರು ಮತ್ತು ಮಂಜುನಾಥ ಸ್ವಾಮಿಯ ಕೃಪೆ ಇದೆ. ನ್ಯಾಯದ ಮೇಲೆ ನನಗೆ ಮೊದಲಿನಿಂದಲೂ ನಂಬಿಕೆ ಇತ್ತು. ಮಂಜುನಾಥನ ಆಶೀರ್ವಾದದಿಂದ 80ಕ್ಕೂ ಹೆಚ್ಚು ಆಸ್ತಿ ವಾಪಸ್ ಬಂದಿದೆ. 2009ರ ಪೂರ್ವದಲ್ಲಿ ನನ್ನ ಆಸ್ತಿಗಳನ್ನು ಸಿಬಿಐ ಜಪ್ತಿ ಮಾಡಿತ್ತು. ಆಗ ಜಪ್ತಿಯಾಗಿದ್ದ 80ಕ್ಕೂ ಹೆಚ್ಚು ಆಸ್ತಿಗಳನ್ನು ಬಿಡುಗಡೆ ಮಾಡಿದೆ ಎಂದರು.
Author: Prajatv Kannada
ಹುಬ್ಬಳ್ಳಿ: ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ಅಧಿವೇಶನ ಕರೆದ ಕೂಡಲೇ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗುತ್ತದೆ. ಸೋಲಿನ ಬಗ್ಗೆ ವರಿಷ್ಠರು ಬೇಸರ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನ ಕೊಟ್ಟ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ನಾನೇ ವಿಧಾನಸಭೆ ಚುನಾವಣೆ ಸೋಲಿನ ಹೊಣೆ ಹೊತ್ತಿದ್ದೇನೆ ಎಂದರು. ಇನ್ನು ಕೆಲ ಶಾಸಕರ ಸೋಲಿಗೆ ಬೊಮ್ಮಾಯಿ ಕಾರಣ ಆರೋಪ ವಿಚಾರ ‘ ಸೋಲಿನ ಹೊಣೆ ಹೊತ್ತಿದ್ದೇನೆ ಎಂದಮೇಲೆ ಆರೋಪಕ್ಕೆ ಉತ್ತರಿಸಬೇಕಿಲ್ಲ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಎದ್ದಿದೆ. ಈ ಹಿಂದೆ ಅನೇಕ ಬಾರಿ ದಲಿತ ಸಿಎಂ ಕೂಗು ಎದ್ದಿದ್ದು ಪರಮೇಶ್ವರ್ ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಹೇಳಿಕೊಂಡು ಬಂದಿದ್ದು ಈಗ ಅದೇ ರೀತಿ ಮತ್ತೆ ಪರಮೇಶ್ವರ್ ಅವರು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಯಾಕೆ ಸಿಎಂ (Chief Minister) ಆಗಬಾರದು? ಮುನಿಯಪ್ಪ ಯಾಕಾಗಬಾರದು? ಮಹಾದೇವಪ್ಪ ಯಾಕೆ ಆಗಬಾರದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರಶ್ನಿಸಿದ್ದಾರೆ. ದಲಿತಪರ ಸಂಘಟನೆಗಳು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಸರ್ಕಾರದ ದಲಿತ ಸಮುದಾಯದ ಸಚಿವರುಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಪರಮೇಶ್ವರ್ ಮಾತನಾಡಿದರು. ನಮ್ಮಲ್ಲಿ ಕೀಳರಿಮೆ ಇರಬಾರದು. ಅದಕ್ಕೆ ನಾನು ಯಾವಾಗಲೂ ನಾನು ಸಿಎಂ ಆಗಬೇಕು ಅಂತ ಹೇಳುತ್ತೇನೆ. ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ಅದು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ನಾವು ಏನು ಸಾಧನೆ ಮಾಡುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಇರಬೇಕು ಎಂದರು.…
ಬೆಂಗಳೂರು: ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲ್ ಅವಿವಾ ಜೂನ್ 16 ರಂದು ಮಂಡ್ಯದ ಜನತೆಗೆ ಅದ್ದೂರಿ ಬೀಗರೂಟ ಏರ್ಪಡಿಸಿದ್ದಾರೆ. ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಇದೀಗ ಅಭಿಷೇಕ್ ಹಾಗೂ ಅವಿವಾ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, ಅಲ್ಲಿಯೇ ಬೀಗರೂಟ ನಡೆಯಲಿದೆ. ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಟೆಂಟ್ ಹಾಕಲಾಗುತ್ತಿದ್ದು ಖುದ್ದು ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀಗರೂಟದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು ಭರ್ಜರಿ ಬಾಡೂಟದ ವ್ಯವಸ್ಥೆ ಇರಲಿದೆ. ಬೀಗರೂಟವನ್ನು ಪಕ್ಕಾ ಮಂಡ್ಯ ಶೈಲಿಯಲ್ಲಿ ಆಯೋಜಿಸುತ್ತಿದ್ದು, ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ…
ಬೆಂಗಳೂರು: ಕಳೆದ ಒಂದು ವಾರದ ಹಿಂದಷ್ಟೇ ನಗರ ಪ್ರದಕ್ಷಿಣೆ ಹಾಕಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದೂ ಕೂಡ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಲಿದ್ದಾರೆ. ಬಿಡಿಎ ಕಚೇರಿಯಲ್ಲಿ DCM ಡಿಕೆ ಸಭೆ ನಡೆಸಿ ನಂತರ ಹೆಬ್ಬಾಳ ಫ್ಲೈ ಓವರ್ ಬಳಿ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ವಾಹನಗಳ ದಟ್ಟಣೆ ಸ್ಥಳ ಪರಿಶೀಲನೆ ಕೂಡ ಮಾಡಲಿದ್ದಾರೆ. ಹಾಗೆ ಬೆಂಗಳೂರಿನ ಕೆಲವು ಕಡೆ ಮಳೆಗೆ ಮನೆಗಳಿಗೆ ನುಗ್ಗಿದ ನೀರು ಹಾಗೂ ಚರಂಡಿ ಪರಿಶೀಲನೆ ಸಹ ನಡೆಸಲಿದ್ದಾರೆ.
ಬೆಂಗಳೂರು : ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದು ಎಂಟಿಬಿ ನಾಗರಾಜ್ ಅವರು ಆತ್ಮಾವಲೋಕನಾ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ್ದ ಅವರು ‘ಬಿಜೆಪಿಯ ಹಣ ತೆಗೆದುಕೊಂಡು ಕಾಂಗ್ರೆಸ್ಗೆ ವೋಟು ಹಾಕಿದ್ದೀರಿ. ಅಲ್ಲಾ ಮೇಲೆ ಪ್ರಮಾಣ ಮಾಡಿ ನನ್ನ ಬೆನ್ನಿಗೇ ಚೂರಿ ಹಾಕಿದ್ರಿ, ಮುಸ್ಲಿಮರಿಗೆ ಹಣ ಕೊಡಬೇಡಿ ಮತ ಹಾಕಲ್ಲ, ಅದೇ ಹಣವನ್ನ ಹಿಂದೂ ಸಮುದಾಯಗಳಿಗೆ ಕೊಡಿ ಎಂದಿದ್ದರು. ಇನ್ಮುಂದೆ ಭಯ ಪಡುವ ಪ್ರಮೇಯ ಇಲ್ಲ ಎಂದಿದ್ದಾರೆ.
ಬೆಂಗಳೂರು: ಬಿಬಿಎಂಪಿ ಚುನಾವಣೆ ವಿಚಾರವಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಗಂಭೀರ ಚರ್ಚೆ ನಡೆಸಿದ್ದಾರೆ. ಸುರ್ಜೇವಾಲ ಅವರು ಬೆಂಗಳೂರು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದಿದ್ದು. ಈ ವೇಳೆ ‘ಈಗ ಒಳ್ಳೆಯ ವಾತಾವರಣ ಪಕ್ಷದ ಪರವಾಗಿ ಇದೆ. ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಮಾಡುವುದು ಒಳ್ಳೆಯದು. ಸರ್ಕಾರ ನಮ್ಮದೆ ಇರುವುದರಿಂದ ಕಾನೂನು ತೊಡಕುಗಳನ್ನು ಬೇಗ ಸರಿಪಡಿಸಬೇಕು. ಮೀಸಲಾತಿ ಮತ್ತು ವಾರ್ಡ್ ಮರು ವಿಂಗಡಣೆ ಕಾನೂನು ತೊಡಕು ನಿವಾರಣೆ ಆಗಬೇಕು. ಈ ಮೊದಲೇ ಬಿಜೆಪಿ ಮಾಡಿದ ವಾರ್ಡ್ ವಿಂಗಡಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದೇವು. ಬಿಜೆಪಿಯವರು ಮತ ವಿಭಜನೆ ವಿಚಾರವಾಗಿ ತಾರತಮ್ಯ ಮಾಡಿ, ಅವರಿಗೆ ಅನುಕೂಲ ಆಗುವ ಹಾಗೆ ವಿಂಗಡಣೆ ಮಾಡಿದ್ದಾರೆ. ಹಾಗಾಗಿ ವಾರ್ಡ್ ಮರು ವಿಂಗಡಣೆ ಆಗಲೇಬೇಕು ಜೊತೆಗೆ ಪಾಲಿಕೆಯನ್ನು ಕೂಡ ವಿಂಗಡಣೆ ಮಾಡುವುದರೊಂದಿಗೆ ಬಿ ಎಸ್ ಪಾಟೀಲ್ ಸಮಿತಿ ಕೊಡುವ ವರದಿ ಒಪ್ಪಿಕೊಳ್ಳಬೇಕು ಎಂದು ಬೆಂಗಳೂರು ಕಾಂಗ್ರೆಸ್ ಶಾಸಕರು ಸುರ್ಜೇವಾಲ ಮತ್ತು ಡಿಕೆಶಿಗೆ ಸಲಹೆ ಕೊಟ್ಟಿದ್ದಾರೆ.
ಬೆಂಗಳೂರಿನ ಘನತೆಗೆ ಕಪ್ಪುಚುಕ್ಕೆಯಾಗಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಕಲ್ಪ ಮಾಡಿರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ನಗರದ ಪ್ರಮುಖ ಸಂಚಾರಿ ದಟ್ಟಣೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಡಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ್ ನಾಯಕ್, ಡಿಸಿಎಂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಬೆಂಗಳೂರು ಪ್ರದಕ್ಷಣೆ ಹಾಕಿದ ಶಿವಕುಮಾರ್ ಅವರು ಮೊದಲು ಹೆಬ್ಬಾಳ ಜಂಕ್ಷನ್ ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ 2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆಗೆ ಯಾವ ರೀತಿ ಕ್ರಮ…
ಇತ್ತೀಚೆಗೆ ಟಾಲಿವುಡ್ ನಟಿ, ಮಿಲ್ಕಿ ಬ್ಯೂಟಿ ನಟಿ ತಮನ್ನಾ ಸಿನಿಮಾಗಳಿಗಿಂತ ಹೆಚ್ಚಾಗಿ ಖಾಸಗಿ ವಿಚಾರವಾಗಿಯೇ ಸದ್ದು ಮಾಡ್ತಿದ್ದಾರೆ. ಡೇಟಿಂಗ್ ಕುರಿತಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ನಟಿ ಮೊನ್ನೆಯಷ್ಟೇ ಬಾಲಿವುಡ್ ನಟ ವಿಜಯ್ ವರ್ಮಾ ಡೇಟಿಂಗ್ ವದಂತಿಯನ್ನು ತಳ್ಳಿ ಹಾಕಿದ್ದರು. ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಈ ವಿಚಾರದ ಕುರಿತಾಗಿ ನಟಿ ತಮನ್ನಾ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ವಿಚಾರವನ್ನು ನಟಿ ತಳ್ಳಿ ಹಾಕಿದ್ದರು. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಮಾತನಾಡಲ್ಲ ಎಂದಿದ್ದರು. ಇದೀಗ ಡೇಟಿಂಗ್ ಕುರಿತು ಮತ್ತೆ ಪ್ರತಿಕ್ರಿಯೆ ನೀಡುತ್ತಿರುವ ನಟಿ, ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದಾರೆ. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು. ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು.…
ಬೀಜಿಂಗ್: ಜೂನ್ 15ರಂದು ವರ್ಕಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಸೌಹಾರ್ದ ಪಂದ್ಯಕ್ಕೆ ತೆರಳುತ್ತಿದ್ದ ವೇಳೆ ಅರ್ಜೆಂಟೀನಾ ಫುಟ್ಬಾಲ್ ತಂಡದ (Argentina Football Team) ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ. ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಪಂದ್ಯದಲ್ಲಿ ತನ್ನ ದೇಶವನ್ನು ಮುನ್ನಡೆಸಲು ಲಿಯೋನೆಲ್ ಮೆಸ್ಸಿ ಚೀನಾಕ್ಕೆ ಆಗಮಿಸಿದರು. ಆಗ ಅವರನ್ನು ಚೀನಾದ ಬಾರ್ಡರ್ ಪೊಲೀಸರು (Chinese Border Police) ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಿದರು. ಮೂಲಗಳ ಪ್ರಕಾರ, ಮೆಸ್ಸಿ ಅವರ ವೀಸಾ ವಿಳಂಬವಾಗಿತ್ತು. ಮೆಸ್ಸಿ ತಮ್ಮ ಅರ್ಜೆಂಟೀನಾದ ಪಾಸ್‌ಪೋರ್ಟ್ ಬದಲಾಗಿ ತಮ್ಮ ಸ್ಪ್ಯಾನಿಷ್ ಪಾಸ್‌ಪೋರ್ಟ್ನೊಂದಿಗೆ ಪ್ರಯಾಣಿಸಿದ್ದರು. ಆದರೆ ಅದು ಚೀನಾ ವೀಸಾವನ್ನು (Chinese Visa) ಹೊಂದಿರಲಿಲ್ಲ. ತಮ್ಮ ಅಜಾಗರುಕತೆಯಿಂದಾಗಿ ಮೆಸ್ಸಿ ಚೀನಾ ಬಾರ್ಡರ್ ಪೊಲೀಸರಿಂಧ ಬಂಧಿತರಾಗಿದ್ದರು. ಸುಮಾರು 30 ನಿಮಿಷಗಳ ನಂತರ ಪರಿಸ್ಥಿತಿಯನ್ನು ಬಗೆಹರಿಸಲಾಯಿತು. ಅನಂತರ ಲಿಯೋನೆಲ್ ಮೆಸ್ಸಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು. ತನ್ನ ಸ್ಪ್ಯಾನಿಷ್ ಪಾಸ್‌ಪೋರ್ಟ್…