ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಅದೃಷ್ಟದ ನಟಿ ಎಂದೇ ಖ್ಯಾತಿ ಘಳಿಸಿದ್ದ ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಚಿತ್ರರಂಗ ಯಾಕೋ ಕೈ ಕೊಟ್ಟಿದೆ. ರಶ್ಮಿಕಾ ನಟನೆಯ ಎರಡು ಹಿಂದಿ ಸಿನಿಮಾಗಳು ಸೋತಿದ್ದು ಇದೀಗ ಮತ್ತೆ ಮೂರನೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಮೂಲಕವಾದ್ರು ರಶ್ಮಿಕಾರನ್ನ ಬಿಟೌನ್ ಮಂದಿ ಕೈ ಹಿಡಿಯುತ್ತಾರಾ ಕಾದು ನೋಡಬೇಕಿದೆ. ಗುಡ್ ಬೈ, ಮಿಷನ್ ಮಜ್ನು ಎರಡು ಸಿನಿಮಾಗಳ ಸೋಲಿನ ನಂತರ ಇದೀಗ ಅನಿಮಲ್ ಚಿತ್ರದ ಮೂಲಕ ಕಿರಿಕ್ ನಟಿ ಬರುತ್ತಿದ್ದಾರೆ. ರಣ್‌ಬೀರ್, ರಶ್ಮಿಕಾ ನಟನೆಯ ‘ಅನಿಮಲ್’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿದೆ. ಕಳೆದ ವರ್ಷ ಬಾಲಿವುಡ್‌ನಲ್ಲಿ ಬಿಗ್ ಬಿ ಜೊತೆಗಿನ ಗುಡ್ ಬೈ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ `ಮಿಷನ್ ಮಜ್ನು’ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾಗಳು ಕಲೆಕ್ಷನ್ ವಿಷ್ಯದಲ್ಲಿ ಮಕಾಡೆ ಮಲಗಿತ್ತು. ಇದೀಗ ನಟ ರಣ್‌ಬೀರ್ ಕಪೂರ್ ಜೊತೆಗೆ ರಶ್ಮಿಕಾ ಅನಿಮಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಸದ್ಯ ರಿಲೀಸ್…
Author: Prajatv Kannada
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ನಟ ಶಿವರಾಜ್ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಭೇಟಿಯಾದರು. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ, ಮಾತುಕಥೆ ನಡೆಸಿದ್ದಾರೆ. ಈ ವೇಳೆ ಸಚಿವ ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ್ ಉಪಸ್ಥಿತಿ ಇದ್ದರು. ನಾನು ಸೌಜನ್ಯಯುತವಾಗಿ ಸಿಎಂ ಭೇಟಿಗೆ ಆಗಮಿಸಿದ್ದಿದ್ದು ಬೇರೇನೂ ವಿಷಯವಿಲ್ಲ ಎಂದು ಮಾಧ್ಯಮಗಳಿಗೆ ಶಿವರಾಜ್ ಕುಮಾರ್ ಸ್ಪಷ್ಟನೆ!
ಲಂಡನ್: ಆಸ್ಟ್ರೇಲಿಯಾ ವಿರುದ್ದ 2023ರ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮುಂಬರುವ ಒಡಿಐ ವಿಶ್ವಕಪ್ ಟೂರ್ನಿಯಲ್ಲಿಯೂ ಸೆಮಿಫೈನಲ್ ತಲುಪುವುದಿಲ್ಲವೆಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ, ಮೂರು ಮಹತ್ತರ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿದೆ. 2022ರ ಏಷ್ಯಾ ಕಪ್ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ಭಾರತ ತಂಡ, ನಂತರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸೋತಿತ್ತು. ಇದೀಗ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 209 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿದೆ. “ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಐಸಿಸಿ ಟ್ರೋಫಿ ಮುಡಗೇರಿಸಿಕೊಳ್ಳಲಿದೆ ಎಂದು ಜನರು ತಪ್ಪು ಕಲ್ಪನೆಯನ್ನು ಹೊಂದಿದ್ದರು. ಆದರೆ, ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ…
ಮುಂಬೈ: ಮೊಬೈಲಿನಲ್ಲಿ ಕ್ರಿಕೆಟ್ ವೀಕ್ಷಿಸುವ ಬಳಕೆದಾರರಿಗೆ ಡಿಸ್ನಿ ಹಾಟ್‌ಸ್ಟಾರ್ (Disney Hotstar) ಸಿಹಿ ಸುದ್ದಿ ಕೊಟ್ಟಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ (ICC Cricket World Cup) ಮೊಬೈಲ್ ಆ್ಯಪ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. 2023ರಲ್ಲಿ ನಡೆದ 16ನೇ ಐಪಿಎಲ್ ಆವೃತ್ತಿಯಲ್ಲಿ ಜಿಯೋಸಿನಿಮಾ (JioCinema) ಆ್ಯಪ್ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಸಕ್ಸಸ್ ಕಂಡಿತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನ 3.2 ಕೋಟಿ ಜನ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿತು. ಹಾಗಾಗಿ ಪ್ರತಿಸ್ಪರ್ಧಿ ಡಿಸ್ನಿ ಹಾಟ್‌ಸ್ಟಾರ್ 2023ರಲ್ಲಿ ನಡೆಯಲಿರುವ ಏಕದಿನ ಏಷ್ಯಾಕಪ್ ಹಾಗೂ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದೆ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ.…
ಕನ್ನಡದ ಹಬ್ಬ, ಗ್ರಾಮದೇವತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಖ್ಯಾತ ಖಳನಟ ಕಜನ್ ಖಾನ್ ನಿಧನರಾಗಿದ್ದಾರೆ. ನಿನ್ನೆ ಅವರಿಗೆ ಹೃದಯಾಘಾತವಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 1992ರಲ್ಲಿ ತೆರೆಕಂಡ ಸೆಂತಮೀಜ್ ಪಾಟ್ವು ಎಂಬ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಜನ್ ಖಾನ್ ಬಳಿಕ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದರು. 1999ರಲ್ಲಿ ತೆರೆಕಂಡ ಹಬ್ಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಅವರು ಬಳಿಕ ನಾಗದೇವತೆ ಸಿನಿಮಾದಲ್ಲಿ ಖಳನಟರಾಗಿ ಕಾಣಿಸಿಕೊಂಡು ಖ್ಯಾತಿ ಘಳಿಸಿದ್ದರು. ಕನ್ನಡ, ತಮಿಳು, ಮಲಯಾಳಂ ಸಿನಿಮಾ ರಂಗದಲ್ಲಿ ವಿಲನ್ ಪಾತ್ರದ ಮೂಲಕವೇ ಗುರುತಿಸಿಕೊಂಡಿದ್ದ ಕಜನ್ ಖಾನ್, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಕಜನ್ ಖಾನ್ ಅವರ ಹಠತ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
ಇಂಡಿಯನ್ ಮೈಕಲ್ ಜಾಕ್ಸನ್, ಡ್ಯಾನ್ಸಿಂಗ್ ಸ್ಟಾರ್, ನಟ ಪ್ರಭುದೇವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಪ್ರಭುದೇವ್ ಅವರ ಎರಡನೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಇದೇ ಖುಷಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಭುದೇವ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ದೇವಾಲಯಕ್ಕೆ ಸಾಕಷ್ಟು ಭಕ್ತರು ಆಗಮಿಸಿದ್ದರು. ಕೆಲ ಅಭಿಮಾನಿಗಳು ಪ್ರಭುದೇವ ಜೊತೆ ಸೆಲ್ಫಿ ಪೋಟೋ ತೆಗೆದುಕೊಂಡು ಖುಷಿಪಟ್ರ. ಪೂಜೆ ನೆರವೇರಿದ ಬಳಿಕ ದೇವಾಲಯದ ವತಿಯಿಂದ ಪ್ರಭುದೇವ ಅವರಿಗೆ ಸನ್ಮಾನ ಮಾಡಲಾಯಿತು. ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಭುದೇವ ಕುಟುಂಬಕ್ಕೆ ಮೊದಲ ಹೆಣ್ಣು ಮಗು ಆಗಮಿಸಿದ್ದು ಇಡೀ ಕುಟುಂಬ ಸಂಭ್ರಮದಲ್ಲಿದೆ. ಈ ಬಗ್ಗೆ ಸ್ವತಃ ಪ್ರಭುದೇವ ಅವರೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಎಸ್ ಇದು ನಿಜ. ನಾನು ಮತ್ತೆ ತಂದೆ ಆಗಿದ್ದೀನಿ…
ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲ್ ಅವಿವಾ ಜೂನ್ 16 ರಂದು ಮಂಡ್ಯದ ಜನತೆಗೆ ಅದ್ದೂರಿ ಬೀಗರೂಟ ಏರ್ಪಡಿಸಿದ್ದಾರೆ. ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಇದೀಗ ಅಭಿಷೇಕ್ ಹಾಗೂ ಅವಿವಾ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, ಅಲ್ಲಿಯೇ ಬೀಗರೂಟ ನಡೆಯಲಿದೆ. ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಟೆಂಟ್ ಹಾಕಲಾಗುತ್ತಿದ್ದು ಖುದ್ದು ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀಗರೂಟದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು ಭರ್ಜರಿ ಬಾಡೂಟದ ವ್ಯವಸ್ಥೆ ಇರಲಿದೆ. ಬೀಗರೂಟವನ್ನು ಪಕ್ಕಾ ಮಂಡ್ಯ ಶೈಲಿಯಲ್ಲಿ ಆಯೋಜಿಸುತ್ತಿದ್ದು, ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ…
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದೆ. ಈ ಜೋಡಿಯ ಮದುವೆಗೆ ಹಲವು ಮಂದಿ ಗಣ್ಯರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಕಳುಹಿಸಿದ ಪತ್ರವನ್ನು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಮದುವೆಗೆ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಸುಮಲತಾ ಮತ್ತು ಪುತ್ರ ಅಭಿಷೇಕ್.ಆಹ್ವಾನ ನೀಡಿದ್ದರು. ಆದರೆ ಮೋದಿ ಕೆಲಸದ ಒತ್ತಡದಿಂದಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಧಾನಿ ನವ ಜೋಡಿಗೆ ಶುಭ ಹಾರೈಸಿ ಪತ್ರ ಬರೆದಿದ್ದು ಈ ಪತ್ರವನ್ನು ನಟಿ ಸುಮಲತಾ ಇದೀಗ ಶೇರ್ ಮಾಡಿದ್ದಾರೆ. ಶುಭ ಕೋರಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ‘ಅಭಿಷೇಕ ಅಂಬರೀಶ್–ಅವಿವಾ ಬಿಡಪ್ಪ ಮದುವೆಗೆ ಶುಭಾಶಯಗಳನ್ನು ತಿಳಿಸಿ, ನವ ಜೋಡಿಯ ಹೊಸ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಮಾನ್ಯ ಪ್ರಧಾನ ಮಂತ್ರಿಗಳಾದ…
ಪೇಡ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಆದರೆ ನೀವು ಬೇಕರಿಗೆ ಹೋಗಿಯೇ ಪೇಡ ಖರೀದಿ ಮಾಡಬೇಕಿಲ್ಲ. ಮನೆಯಲ್ಲೇ ಪೇಡ ಮಾಡಿ ತಿನ್ನಬಹುದು. ಬೇಕರಿ ಸ್ಟೈಲ್ ಪೇಡ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಬೇಕಾಗುವ ಸಾಮಾಗ್ರಿಗಳು: 1. ಹಾಲಿನ ಪುಡಿ – 1 ಕಪ್ 2. ಹಾಲು – 1 ಕಪ್ 3. ಸಕ್ಕರೆ – 1/3 ಕಪ್ 4. ಮೈದಾ ಹಿಟ್ಟು – 1/4 ಕಪ್ 5. ತುಪ್ಪ – 2 ಚಮಚ 6. ಏಲಕ್ಕಿ ಪುಡಿ – ಚಿಟಿಕೆ 7. ಕೇಸರಿ ಪುಡಿ (ಬೇಕಾದರೆ) – ಚಿಟಿಕೆ ಮಾಡುವ ವಿಧಾನ: 1. ಸಕ್ಕರೆ ಪುಡಿ, ಹಾಲಿನ ಪುಡಿ, ಏಲಕ್ಕಿ ಪುಡಿ, ಕೇಸರಿ ಪುಡಿ ಎಲ್ಲವನ್ನ ಒಂದು ನಾನ್ ಸ್ಟಿಕ್ ಪ್ಯಾನಲ್ಲಿ ಹಾಕಿ ಹುರಿದುಕೊಳ್ಳಿ. 2. ಸ್ವಲ್ಪ ಬೆಚ್ಚಗಾದ ನಂತರ ಹಾಲನ್ನ ಬೆರೆಸಿ, ಗಂಟಾಗದಂತೆ ನಿಧಾನವಾಗಿ ತಿರುಗಿಸಿ. 3. ಮಧ್ಯಮ ಉರಿಯಲ್ಲಿ ನಿಧಾನವಾಗಿ ತಿರುಗಿಸುತ್ತಾ, ಮಿಶ್ರಣ ಸ್ವಲ್ಪ…
ಲಾಸ್ ಏಂಜಲೀಸ್: ಒಲಿಂಪಿಕ್ ಪದಕ ವಿಜೇತೆ ಹಾಗೂ ಅಮೆರಿಕದ ವೇಗದ ಓಟಗಾರ್ತಿ ಟೊರಿ ಬೌವಿ (32) ಹೆರಿಗೆ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಟೊರಿ ಬೌವಿ ಫ್ಲೋರಿಡಾದ ಆರೇಂಜ್ ಕೌಂಟಿಯ ಮನೆಯಲ್ಲಿ ಒಬ್ಬರೇ ಇದ್ದರು. ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಈ ವೇಳೆ ಕುಸಿದು ಬಿದ್ದಿದ್ದಾರೆ. ಆ ಸಮಯದಲ್ಲಿ ಉಸಿರಾಟದ ತೊಂದರೆ ಅನುಭವಿಸಿರಬಹುದು. ಇದರಿಂದ ಅಧಿಕ ರಕ್ತದೊತ್ತಡ ಉಂಟಾಗಿ ನಿಧನರಾಗಿರಬಹುದು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಟೊರಿ ಮೃತಪಟ್ಟ ವೇಳೆ ಮಗು ಗರ್ಭದಿಂದ ಹೊರಬರುವ ಪ್ರಕ್ರಿಯೆಯಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಟೊರಿ ಅವರು 2016ರ ರಿಯೊ ಒಲಿಂಪಿಕ್‌ನಲ್ಲಿ 4X100 ಮೀಟರ್ ರಿಲೇ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದೇ ವೇಳೆ ಅವರು 100 ಮೀಟರ್ ಓಟದಲ್ಲಿ ಬೆಳ್ಳಿ, 200 ಮೀಟರ್ ಓಟದಲ್ಲಿ ಕಂಚು ಗೆದ್ದಿದ್ದರು. ಟೊರಿ ನಿಧನಕ್ಕೆ ಅವರ ಕುಟುಂಬದರವು, ಅಮೆರಿಕದ ಖ್ಯಾತ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಸೇರಿದಂತೆ ಅನೇಕರು…