Author: Prajatv Kannada

ಮೈಸೂರು: ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳ ಜಾರಿ ವಿಚಾರ‘ ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ?, ಎಷ್ಟು ಸಾಲವಿದೆ? ಈ ಎಲ್ಲದರ ಬಗ್ಗೆಯೂ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು ಎಂದು ಮೈಸೂರು ನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕಾಂಗ್ರೆಸ್ ಬಹಳ ಧೈರ್ಯದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದೆ. ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಹೆಚ್ಚುವರಿ ತೆರಿಗೆ ವಿಧಿಸ್ತೀರಾ?, ಸಾಲ ಮಾಡುತ್ತೀರಾ ಮೊದಲು ತಿಳಿಸಿ ಎಂದರು.

Read More

ಕೋಲಾರ:-  ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವನ್ನು ಪಶು ಇಲಾಖೆ ಅಧಿಕಾರಿಗಳು ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಿಪಬ್ಲಿಕನ್ ಸೇನಾ ಕೋಲಾರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ್ರು. ಇದೇ ವೇಳೆ ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕಿನ ಪಶು ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಪಶು ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಮಾಡಿರುವ ಭ್ರಷ್ಟಾಚಾರದ ದಾಖಲೆಗಳನ್ನು ನೀಡಿದ್ದೇವೆ ಯಾರು ಭ್ರಷ್ಟಾಚಾರವನ್ನು ಮಾಡಿದ್ದಾರೆ ಅವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸ ಬೇಕು ಅಲ್ಲದೆ ಲೋಕಾಯುಕ್ತ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಹ ಸಲ್ಲಿಸಿದರು. ಮಂಜುನಾಥ್ ನವೀನ್ ಕುಮಾರ್ ನಾರಾಯಣ ಸ್ವಾಮಿ, ಅಮರೇಶ್, ಕೆ ವಿ ಶ್ರೀನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Read More

ಬಾಗಲಕೋಟೆ ;- ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟೀ `ಶಕ್ತಿ’ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬನಹಟ್ಟಿಯಲ್ಲಿ ಅಧಿಕೃತ ಚಾಲನೆ ನೀಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬನೆ, ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ ವೃದ್ಧಿ ಸೇರಿ ಎಲ್ಲ ಉದ್ದೇಶಗಳಿಗೆ `ಶಕ್ತಿ’ ಯೋಜನೆ ಬಳಸಿಕೊಳ್ಳಬೇಕು. ಇದಕ್ಕೆ ಸರ್ಕಾರ ಯಾವದೇ ಮಿತಿ ಹಾಕದೆ ಎಲ್ಲ ಮಹಿಳೆಯರಿಗೂ ನಿರಂತರ ದೊರಕುವಂತೆ ಮಾಡಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು. ಮಹಿಳೆಯರಿಗೆ ನೀಡಿದ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸುವ ಗುರಿ ಹೊಂದಿರುವ ಸರ್ಕಾರದ ನಡೆಯನ್ನು ಗೌರವಿಸುತ್ತೇನೆ. ಯಾವದೇ ಕಾರಣಕ್ಕೂ ದುರುದ್ಧೇಶ ಅಥವಾ ನಿಯಮಗಳನ್ನು ಹಾಕುವದು ಬೇಡವೆಂದು ಸವದಿ ತಿಳಿಸಿದರು. ಕೆಲ ಹೊತ್ತು ಗೊಂದಲ: ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಬನಹಟ್ಟಿ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶಾಸಕ ಸಿದ್ದು ಸವದಿ ಬಸ್ ನಿಲ್ದಾಣದೊಳಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಪರ…

Read More

ಉತ್ತರ ಕನ್ನಡ:  ರಾಜ್ಯದ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರ ಹಿನ್ನಲೆ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಭಾರಿ ಕಡಲ ಕೊರತವಾಗಿದೆ. ಇನ್ನು ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಅಲೆಗಳ ಹೊಡೆತಕ್ಕ ಬೇರು ಸಮೇತ ಕಿತ್ತು ಬಂದಿದೆ. ಇನ್ನು ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿದ್ದು, ಅಲೆಗಳ ಅಬ್ಬರಕ್ಕೆ ಪ್ರವಾಸಿಗರು ಆತಂಕಗೊಂಡಿದ್ದಾರೆ.

Read More

ಗದಗ:- ಕರ್ನಾಟಕ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದರು. ಉಚಿತ ಪ್ರಯಾಣ ಹಿನ್ನೆಲೆ ಪ್ರಯಾಣಿಕರು ಕಿಕ್ಕಿರಿದು ಬಸ್ಸಿನಲ್ಲಿ ತುಂಬಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅದರಂತೆ ಪ್ರಯಾಣಿಕರನ್ನು ಹೆಚ್ಚು ಲೋಡ್ ಮಾಡಿಕೊಂಡು ಹೋದ ಸರ್ಕಾರಿ ಬಸ್ ಒಂದು ಮಾರ್ಗ ಮಧ್ಯೆದಲ್ಲೇ ಕೆಟ್ಟು ನಿಂತಿದೆ. ಹೌದು ಗದಗ ನಗರದ ಮಹಿಳಾ ಕಾಲೇಜ್ ಬಳಿ‌ ಈ ಘಟನೆ ಜರುಗಿದೆ. ಪಾಟಾ ಕಟ್ ಆಗಿದ್ದರಿಂದ ಪ್ರಯಾಣಿಕರ ಪರದಾಟ ಹೇಳತ್ತಿರದ್ದಾಗಿತ್ತು. ಇನ್ನೂ ಉಚಿತ ಬಸ್ ಪ್ರಯಾಣ ಹಿನ್ನೆಲೆ, ಬಸ್ ನಲ್ಲಿ ಮಹಿಳಾ ಪ್ರಯಾಣಿಕರೇ ತುಂಬಿ ತುಳುಕುತ್ಕಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಕೆಟ್ಟು ನಿಂತ ಬಸ್, ಗದಗ ಡಿಪೋಗೆ ಸೇರಿದ್ದಾಗಿದ್ದು, ಗದಗದಿಂದ ಗಜೇಂದ್ರಗಡಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿತ್ತು. ಇನ್ನೂ ಮಾರ್ ಮಧ್ಯೆಯೇ ಬಸ್ ಕೆಟ್ಟಿದ್ದು, ಊರು ತಲುಪೋದು ಹೇಗೆ ಅಂತ ಪ್ರಯಾಣಿಕರು ಪರದಾಡಿದ ದೃಶ್ಯ ಕಂಡು ಬಂತು. ಕೆಲ ಹೊತ್ತಿನ ನಂತರ ಬೇರೊಂದು…

Read More

ಹುಬ್ಬಳ್ಳಿ: ಸಾಲದ ಭಾದೆಗೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ. ಸಾಲದ ಸುಳಿ ಸಿಲುಕಿ ಕೃಷಿ ಹೊಂಡಕ್ಕೆ ಹಾರಿ ರೈತ ಶಿವಪುತ್ರಪ್ಪ ಫಕ್ಕೀರಪ್ಪ ಗಡಾದ ವಯಾ (63) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು, ಲಾವಣಿ ಜಮೀನನ್ನು ಸಾಗುವಳಿ ಮಾಡಲು 2 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಈ ವರ್ಷ ಸರಿಯಾಗಿ ಮಳೆ ಬೆಳೆ ಆಗದಿರುವ ಕಾರಣ ಮಾಡಿದ ಮನನೊಂದು ಕೃಷಿ ಹೊಂಡಕ್ಕೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೈಸೂರು: ಹುಣಸೂರು ತಾಲ್ಲೂಕಿನ ಕರಿ ಮಾರಮ್ಮ ದೇವಾಲಯದ ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಶವದ ಎಡಗೈಯಲ್ಲಿ ಸಾಯಿಕುಮಾರ್ ಹಾಗೂ ಬಲಗೈಯಲ್ಲಿ ಎಸ್​ಜಿ ಗೀತಾ ಎಂದು ಹಚ್ಚೆ ಗುರುತು ಇದೆ. ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಬಿಳಿಗೆರೆಯುಳ್ಳ ಶರ್ಟ್ ಧರಿಸಿರುವ ವ್ಯಕ್ತಿಯ ಮೃತ ದೇಹದ ಗುರುತು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗದಗ‌: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ‌ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಲ್ಲಯ್ಯ ಶಂಕ್ರಯ್ಯ ಮುದಗಲ್ಲಮಠ ಅನ್ನೋ ರೈತರಿಗೆ ಸೇರಿದ್ದ ಎಮ್ಮೆ ಇದಾಗಿದ್ದು, ಸಾಸರವಾಡ ಗ್ರಾಮದ‌ ನದಿದಡದಲ್ಲಿ ಮೇಯಿಸಲು ಹೋದಾಗ ಈ ರ್ದುಘಟನೆ ನಡೆದಿದ್ದು, 50 ರಿಂದ 60 ಸಾವಿರ ರೂಪಾಯಿ ನಷ್ಟವನ್ನ ರೈತ ಅನುಭವಿಸಿದ್ದಾನೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ರಾಮನಗರ: ನನಗೆ ರಾಜಕಾರಣದ (Politics) ಮೇಲೆ ಒಲವಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿಯೂ ನನಗೆ ಚುನಾವಣೆ (Election) ಎದುರಿಸುವ ಆಸಕ್ತಿ ಇರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ ಎಂದರು. ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಜೊತೆ ಮೈತ್ರಿ ಬಗ್ಗೆ ಕೇಳಿದ್ದಕ್ಕೆ, ಇದೆಲ್ಲವೂ ಗಾಳಿ ಸುದ್ದಿ. ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು ಹಾಗೂ ಸೋತವರ ಜೊತೆ ಚರ್ಚೆ ಮಾಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು. ಸಂಸದ ಡಿ.ಕೆ. ಸುರೇಶ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, “ನನ್ನ ವಿಚಾರ ಬಿಡಿ, ರಾಮನಗರದ ಹಾಲಿ ಸಂಸದರ ವಿಚಾರವನ್ನೇ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ…

Read More

ಬೆಂಗಳೂರು: ಜನಸಾಮಾನ್ಯರಿಗೆ ಮಾತ್ರವಲ್ಲ ಕೈಗಾರಿಕೆಗಳಿಗೂ ಕರೆಂಟ್  ಶಾಕ್ ವಿದ್ಯುತ್ ಬಿಲ್ ಗೆ ಬೆದರಿ ಬಳಲಿ ಬೆಂಡಾದ ಸಣ್ಣ ಕೈಗಾರಿಕೆಗಳು. ಕೈಗಾರಿಕೆ ಬೀಗ ಹಾಕಿ ಸರ್ಕಾರಕ್ಕೆ ನಡೆಸುವಂತೆ ಕೀ ಕೊಡಲು ಮುಂದಾದ ಪೀಣ್ಯ ಸಣ್ಣ ಕೈಗಾರಿಕೆಗಳು ಏಷ್ಯಾದಲ್ಲಿ ಸುಪ್ರಸಿದ್ದ ಬೆಂಗಳೂರಿನ ಪೀಣ್ಯ ಕೈಗಾರಿಕೆ ಮೆಕಾನಿಕಲ್, ಗಾರ್ಮೆಂಟ್ ಸಣ್ಣ ಕೈಗಾರಿಕೆಗೆ ಹೆಸರುವಾಸಿ ಆದ್ರೆ ಕರೆಂಟ್ ಯೂನಿಟ್ ಬೆಲೆ ಹಾಗೂ ನಿಗದಿತ ಶುಲ್ಕ ಹೆಚ್ಚಳದಿಂದ ಕೈಗಾರಿಕೆ ನಡೆಸಲು ಹಿಂದೇಟು ಪೀಣ್ಯ ಕೈಗಾರಿಕೆ ವಲಯದಲ್ಲಿವೆ 12 ಸಾವಿರ ಸಣ್ಣ ಕೈಗಾರಿಕೆಇದರಲ್ಲಿ ಬಿಡಿಭಾಗ ತಯಾರಿಸುವ 5 ಸಾವಿರ ಮೆಕಾನಿಕಲ್ ಸಣ್ಣ ಕೈಗಾರಿಕೆ ಇವೆಲ್ಲ ಕರೆಂಟ್ ಮೇಲೆ ಅವಲಂಬಿತ ಕೈಗಾರಿಕೆಗಳುಕಮರ್ಷಿಯಲ್‌ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ. ಈ ಮೊದಲು ಪ್ರತಿ ಯೂನಿಟ್ ಗೆ 6.75 ರೂ ಇದೀಗ ಪ್ರತಿ ಯೂನಿಟ್ ಬೆಲೆ 8.50 ರೂ. ಹೆಚ್ಚಳ 0-1000 8.50 ರೂ. ಪ್ರತಿ‌ ಯೂನಿಟ್ ನಿಗದಿತ ಶುಲ್ಕವೂ ಶೇ. 40-60ರಷ್ಟು ಹೆಚ್ಚಳ ಸಣ್ಣ ಕೈಗಾರಿಕೆಗಳಿಗೆ  ಉತ್ತೇಜನ ಕೊಡಿ ಅದು ಬಿಟ್ಟು ಈ ರೀತಿ…

Read More