ಪೇಶಾವರ್: ಪೇಸ್ ಬುಕ್ ನಲ್ಲಿ ಪರಿಚಯವಾದ ಸ್ನೇಹಿತನನ್ನು ಭೇಟಿಯಾಗಲು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ವಿವಾಹಿತ ಭಾರತೀಯ ಮಹಿಳೆ ಆಗಸ್ಟ್ 20ರಂದು ಭಾರತಕ್ಕೆ ಮರಳಲಿದ್ದಾಳೆ. ಆಕೆಯನ್ನು ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದು ಪಾಕ್ ವ್ಯಕ್ತಿ ನುಸ್ರುಲ್ಲಾ ತಿಳಿಸಿದ್ದಾರೆ. ಭಾರತದ ಮಹಿಳೆ ಜೊತೆಗಿನ ಪ್ರೀತಿ ಪ್ರೇಮದ ಆಯಾಮವನ್ನು ತಳ್ಳಿ ಹಾಕಿರುವ ನುಸ್ರುಲ್ಲಾ, ಅಂಜುಳ ವೀಸಾ ಅವಧಿ ಮುಗಿದ ನಂತರ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ತಂಗಿದ್ದಾಳೆ ಎಂದಿದ್ದಾರೆ. ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ 34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಜೊತೆ 2019ರಲ್ಲಿ ಪೇಸ್ ಬುಕ್ ಮೂಲಕ ಸ್ನೇಹಿತರಾಗಿದ್ದರು. ಆತನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಗೆ ಅಂಜು ತೆರಳಿದ್ದಳು. ಅಂಜು ಆರಂಭದಲ್ಲಿ ಪೊಲೀಸರ ವಶದಲ್ಲಿದ್ದರು, ಆದರೆ ಅವರ ಪ್ರಯಾಣ ದಾಖಲೆಗಳನ್ನು ಜಿಲ್ಲಾ ಪೊಲೀಸರು…
Author: Prajatv Kannada
ಕೊರ್ಬಾ;+ ಬಾಯಿಗೆ ಹಲ್ಲಿ ನುಗ್ಗಿ ಮಗು ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ಕೊರ್ಬಾದಲ್ಲಿ ನಡೆದಿದೆ. ಮಲಗಿದ್ದ ವೇಳೆ ಮಗುವಿನ ಬಾಯಿಯಲ್ಲಿ ಹಲ್ಲಿ ಇರುವುದನ್ನು ತಾಯಿ ಕಂಡಿದ್ದಾಳೆ. ಕಿರುಚಿದ ಆಕೆ ತಕ್ಷಣವೇ ಅದನ್ನು ಹೊರಗೆಳೆದು ಬಿಸಾಡಿದ್ದಾಳೆ. ಮಗುವನ್ನು ಎಬ್ಬಿಸಲು ಯತ್ನಿಸಿದಾಗ ಅದು ನಿಸ್ತೇಜವಾಗಿತ್ತು. ಅಕ್ಕಪಕ್ಕದವರು ಬಂದು ಕಂಡಾಗ ಮಗು ಸಾವನ್ನಪ್ಪಿದ್ದು ಗೊತ್ತಾಗಿದೆ. ಕೋಣೆಯಲ್ಲಿ ಮಗುವೊಂದನ್ನೇ ಮಲಗಿಸಲಾಗಿತ್ತು. ತಾಯಿ ಬಂದು ನೋಡಿದಾಗಲೇ ಘಟನೆ ನಡೆದಿದ್ದು ಗೊತ್ತಾಗಿದೆ. ಹಲ್ಲಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದರು. ಮಗುವಿನ ಬಾಯಿಗೆ ಹಲ್ಲಿ ಹೇಗೆ ನುಗ್ಗಿತು ಎಂಬುದು ಯಾರಿಗೂ ತಿಳಿಯದ ಪ್ರಶ್ನೆಯಾಗಿ ಉಳಿದಿದೆ. ಹಲ್ಲಿಯ ವಿಷ ಸೇವಿಸಿ ಮಗು ಸಾವನ್ನಪ್ಪಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದು ಜನರಲ್ಲಿನ ಅನುಮಾನವಾಗಿದೆ. ಪೋಷಕರ ಇಲ್ಲದಾಗ ಮಗುವಿಗೆ ಏನಾಯಿತು ಮತ್ತು ಹಲ್ಲಿ ಆತನ ಬಾಯಿಗೆ ಹೇಗೆ ಪ್ರವೇಶಿಸಿತು ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ : DK Shivakumar; ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರ ಬದ್ಧ – DCM ಡಿಕೆಶಿ
ಬಿಹಾರ;- ಇಲ್ಲಿನ ಬಕ್ಸರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ದಶಕಗಳ ನಂತರ ಕಳ್ಳನೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ಅಪರಾಧ ಸಭೆಯಲ್ಲಿ ಎಸ್‌ಪಿ ಛೀಮಾರಿ ಹಾಕಿದ್ದ ಬೆನ್ನಲ್ಲೆ, 1990ರಲ್ಲಿ ಹಲವಾರು ಕಳ್ಳತನದ ಘಟನೆಗಳನ್ನು ನಡೆಸಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಮೂರು ದಶಕಗಳ ಬಳಿಕ ಪೊಲೀಸರು ಬಿಹಾರದ ಬಕ್ಸರ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ವಿರುದ್ಧ ಹಲವು ವರ್ಷಗಳವರೆಗೆ ರೆಡ್ ವಾರಂಟ್ ಜಾರಿ ಮಾಡಲಾಗಿತ್ತು. ತಲೆಮರೆಸಿಕೊಂಡಿದ್ದ ಕಳ್ಳನನ್ನು 33 ವರ್ಷಗಳ ಬಳಿಕ ನಾಟಕೀಯ ರೀತಿಯಲ್ಲಿ ಆತನ ಮನೆಯಲ್ಲೇ ಬಂಧಿಸಿರುವ ಘಟನೆ ಜಿಲ್ಲೆಯ ದುಮ್ರಾವ್ ಉಪವಿಭಾಗದ ಕೃಷ್ಣಬ್ರಹ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ : ಉಪ್ಪಾರ ಸಮಾಜದ ಮುಖಂಡರ ನಿಯೋಗದಿಂದ ಸಿಎಂ ಸಿದ್ದರಾಮಯ್ಯ ಭೇಟಿ..!
ನವದೆಹಲಿ : ವೃದ್ಧರೊಬ್ಬರ ಮನೆಗೆ ಕಳ್ಳತನಕ್ಕೆಂದು ಬಂದು ಯೋಗ್ಯವಾದ ವಸ್ತು ಏನೂ ಸಿಗದಿದ್ದಾಗ ಕಳ್ಳರು (Thieves) 500 ರೂ. ಬಿಟ್ಟು ಹೋಗಿರುವ ವಿಚಿತ್ರ ಘಟನೆ ನವದೆಹಲಿಯ (New Delhi) ರೋಹಿಣಿಯ ಸೆಕ್ಟರ್ 8ರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಜುಲೈ 20ರಂದು ಮಧ್ಯರಾತ್ರಿ ನಡೆದಿದೆ. 80 ವರ್ಷದ ನಿವೃತ್ತ ಎಂಜಿನಿಯರ್ ಎಂ ರಾಮಕೃಷ್ಣ ಜುಲೈ 19ರಂದು ತಮ್ಮ ಪತ್ನಿಯೊಂದಿಗೆ ತಮ್ಮ ಮಗನನ್ನು ಭೇಟಿಯಾಗಲು ಗುರುಗ್ರಾಮಕ್ಕೆ ತೆರಳಿದ್ದರು. ಜುಲೈ 21ರಂದು ರಾಮಕೃಷ್ಣ ಅವರ ನೆರೆಹೊರೆಯವರು ಕರೆ ಮಾಡಿ, ತಮ್ಮ ಮನೆಗೆ ಕಳ್ಳರು ನುಗ್ಗಿದ್ದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ತಮ್ಮ ಮನೆಗೆ ಧಾವಿಸಿದ್ದು, ಮುಖ್ಯ ಗೇಟ್‌ನ ಬೀಗ ಒಡೆದಿರುವುದು ಕಂಡುಬಂದಿದೆ. ಆದರೆ ಮನೆ ಒಳಗಡೆ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಅವರಿಗೆ ಗೇಟ್ ಬಳಿ 500 ರೂ. ನೋಟ್ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ರಾಮಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಟ್ಟಿಲ್ಲ ಎಂದು ಅವರು…
ಆಂದ್ರ ;- ಅಪಾರ ಭಕ್ತಗಣವನ್ನು ಹೊಂದಿರುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಪ್ರತಿ ದಿನ ಕೋಟ್ಯಾಂತರ ರೂಪಾಯಿ ಆದಾಯಗಳಿಸುತ್ತಿದೆ. ವಾರ್ಷಿಕವಾಗಿ 1500ಕೋಟಿಗೂ ಹಣ ಹುಂಡಿ ಎಣಿಕೆಯಲ್ಲೇ ಸಿಗುತ್ತಿದೆ. ಹಾಗಾಗಿ ತಿಮ್ಮಪ್ಪನ ಆದಾಯದ ಬಗ್ಗೆ ಕುತೂಹಲ ಮೂಡಬಹುದು. ಇದೀಗ ಸ್ವತಃ ಟಿಟಿಡಿ ಇಒ ಧರ್ಮಾರೆಡ್ಡಿ ಬಹಿರಂಗಪಡಿಸಿದ್ದಾರೆ. ವಾರಣಾಸಿಯಲ್ಲಿ ನಡೆದ ಅಂತರಾಷ್ಟ್ರೀಯ ದೇಗುಲ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಾರೆಡ್ಡಿ, ತಿರುಮಲದ ಬಗ್ಗೆ ಹಲವು ಕೂತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತಿಮ್ಮಪ್ಪನ ಬಳಿ ಇರುವ ಚಿನ್ನ, ಹಣ, ಪ್ರಸಾದ ವಿತರಣೆಗೆ ಬಳಸುವ ವಸ್ತುಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಟಿಟಿಡಿಯಲ್ಲಿ 24,500 ನೌಕರರಿದ್ದರೆ, 800 ಸಿಬ್ಬಂದಿ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆ ಸಲ್ಲಿಸಲು ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಶ್ರೀವಾರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ವಾರ್ಷಿಕ 500 ಟನ್ ತುಪ್ಪವನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಜೂನ್ ತಿಂಗಳು 23 ಲಕ್ಷ ಮಂದಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ತಿರುಮಲ…
ಮೈಸೂರು ;- ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಜಂಗಲ್ ಲಾಡ್ಜ್ ನಲ್ಲಿ ರಿಯಾಯಿತಿ ಘೋಷಣೆ ಮಾಡಲಾಗಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಬಳಕೆ ಹೆಚ್ಚಳ ಉದ್ದೇಶದಿಂದ ಹಿರಿಯ ನಾಗರಿಕರು, ಪಿಯುಸಿ, ಬಿಎ, ಬಿಎಸ್ಸಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರಿಯಾಯಿತಿ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕೊರೋನಾದಿಂದಾಗಿ 2020 -21 ರಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಗಳಿಂದ 61 ಕೋಟಿ ರೂ. ವ್ಯವಹಾರ ನಡೆದಿತ್ತು. 2022-23ರಲ್ಲಿ 111 ಕೋಟಿ ರೂ. ವ್ಯವಹಾರ ನಡೆದಿದೆ. ಪ್ರಸ್ತುತ ದಾಖಲಾತಿ ಶೇ. 47 ರಷ್ಟು ಇದ್ದು, ದಾಖಲಾತಿಯನ್ನು 2024 ರೊಳಗೆ ಶೇಕಡ 75 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರೆಸಾರ್ಟ್ ದರ ಹೆಚ್ಚಾಗಿರುವುದಿರಂದ ವಿಶೇಷ ಪ್ಯಾಕೇಜ್ ನೀಡದ ಕಾರಣ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ರಿಯಾಯಿತಿ ಪ್ಯಾಕೇಜ್ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಉಕ್ಕಿ ಹರಿಯುವ ನದಿಯಲ್ಲಿ ಸೆಲ್ಫಿಗಾಗಿ ಯುವಕರ ಹುಚ್ಚಾಟ.. ವಿಡಿಯೋ…
ಕಲಬುರ್ಗಿ ;- ನಿರಂತರ ಮಳೆಗೆ ಮಣ್ಣಿನ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ ಘಟನೆ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ಜರುಗಿದೆ. ಬಸಮ್ಮಾ ಬಸವರಾಜ್ ಮೃತ ಮಹಿಳೆ. ಸಂಜೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರನೆ ಮನೆಯ ಗೋಡೆ ಕುಸಿದು ದುರಂತ ಸಂಭವಿಸಿದೆ. ಮೃತ ಮಹಿಳೆಯೊಂದಿಗೆ ಮಗು ಕೂಡ ಇದ್ದು, ಅದೃಷ್ಟವಶಾತ್ ಪಾರಾಗಿದೆ. ಮೃತ ಬಸಮ್ಮ ಅವರ ಮನೆ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಲಾಗಿತ್ತು. ನಿರಂತರ ಮಳೆಯಿಂದ ಗೋಡೆ ತೇವಗೊಂಡು, ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ರಾಜಕಾಲುವೆ ಒತ್ತುವರಿ ತೆರವು ಮಾಡದ ಬಿಬಿಎಂಪಿ- ಪಾಲಿಕೆ ವಿರುದ್ಧ ಹೈಕೋರ್ಟ್ ಅಸಮಾಧಾನ
ಗಂಗಾವತಿ: ಬೆಂಕಿ ಇಲ್ಲದೆ ಹೊಗೆ ಬರಲ್ಲ ಆದ್ದರಿಂದ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ಮಧ್ಯೆ ಸಮಸ್ಯೆ ಇದ್ದು ಶೀಘ್ರವೇ ಪರಿಹಾರವಾಗುವ ನಿರೀಕ್ಷೆ ಇದೆ ಎಂದು ಕನ್ನಡದ ಹಿರಿಯ ಹಾಸ್ಯ ನಟ ಹಾಗೂ ನಿರ್ಮಾಪಕ ಮಿತ್ರಾ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರ ಕೊಡುಗೆ ಅಪಾರವಾಗಿದೆ. ನನ್ನನ್ನು ಸೇರಿ ಪ್ರತಿಯೊಬ್ಬ ನಟರೂ ಗೌರವಯುತವಾಗಿ ನಡೆದುಕೊಳ್ಳಬೇಕು. ಕುಮಾರ ಹಾಗೂ ಸುದೀಪ್ ಸಮಸ್ಯೆ ದೀರ್ಘ ಮಟ್ಟಕ್ಕೆ ಹೋಗಿರವುದರಿಂದ ಕನ್ನಡ ಚಿತ್ರರಂಗ ಎಲ್ಲಾ ಹಿರಿಯರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದು ಇಬ್ಬರೂ ಒಂದು ಹೆಜ್ಜೆ ಹಿಂದಿಡಬೇಕು.ಇದರಿಂದ ಎಲ್ಲರ ಗೌರವವು ಹೆಚ್ಚಾಗುತ್ತದೆ. ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರೂ ಮತ್ತು ಪ್ರೇಕ್ಷಕ ವರ್ಗವಿದ್ದರೆ ಮಾತ್ರ ಇಂಡಸ್ಟ್ರಿ ಇರಲು ಸಾಧ್ಯ. ಇಲ್ಲಿ ಯಾರು ಸಹ ಪ್ರತಿಷ್ಠೆ ತೆಗೆದುಕೊಳ್ಳಬಾರದು ಎಂದು ನಟ ಮಿತ್ರಾ ತಿಳಿಸಿದರು. ಇದನ್ನೂ ಓದಿ : ಕುಡಿವ ನೀರಲ್ಲಿ ಹುಳುಗಳು ಪತ್ತೆ; ಅಜ್ಮೀರ್ ನಗರದ ಜನರಿಗೆ ನೀರಿಲ್ಲದೆ ಪರದಾಟ
ಹುಬ್ಬಳ್ಳಿ ;- ವಾಣಿಜ್ಯ ನಗರಿಯಲ್ಲಿ ವರುಣನ ಆರ್ಭಟ ಜೋರಾದರು ಕೂಡಾ, ನೀರಿನ ಸಮಸ್ಯೆಗೆ ಕಮ್ಮಿ ಇಲ್ಲಾ. ಕುಡಿಯುವ ನೀರಿನಲ್ಲಿಯೇ ಹುಳುಗಳು ಪತ್ತೆಯಾದ ಘಟನೆ, ನಗರದ ತಿಮ್ಮಸಾಗರ ರೋಡ್ ಅಜ್ಮೀರ್ ನಗರದಲ್ಲಿ ನಡೆದಿದೆ. ಹೌದು, ಮಳೆಗಾಲ ಆರಂಭವಾದ್ರೆ ಸಾಕು, ರೋಗಗಳ ಹಾವಳಿ ಕೂಡಾ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಡಿವ ನೀರಿನಲ್ಲಿ ಹುಳುಗಳು ಪತ್ತೆಯಾಗಿರುವುದು ಇನ್ನಷ್ಟು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 10 ದಿನಗಳಿಗೆ ಒಂದು ಸಲ ನೀರನ್ನು ಸರಬರಾಜು ಮಾಡಲಾಗುತ್ತದೆ. ಕುಡಿಯುವ ನೀರಿನ ಜೊತೆ ಚರಂಡಿ ನೀರು ಕೂಡಾ ಮಿಶ್ರಣವಾಗಿ ನೀರು ದೊರಕುತ್ತದೆ. ನಳಕ್ಕೆ ಬಟ್ಟೆ ಕಟ್ಟಿ ನೀರನ್ನು ತೆಗೆದುಕೊಂಡರು ಕೂಡಾ ಮತ್ತೆ ಹುಳಗಳು ಪತ್ತೆ ಯಾಗುತ್ತದೆ ಎಂಬುದು ಸ್ಥಳೀಯರ ಗೋಳಾಗಿದೆ. ಈ ಕುಡಿಯುವ ನೀರಿನ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬುದನ್ನು ಕಾದುನೋಡ ಬೇಕಿದೆ. ಇದನ್ನೂ ಓದಿ : ಬಿಬಿಎಂಪಿ ವಾರ್ ರೂಮ್, ಕಂಟ್ರೋಲ್ ರೂಂಗೆ ದಿಢೀರ್ ಭೇಟಿ ನೀಡಿದ ಡಿಕೆ ಶಿವಕುಮಾರ್..!
ಬೆಂಗಳೂರು ;- ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ವಾರ್ ರೂಂ ಹಾಗೂ ಕಂಟ್ರೋಲ್ ರೂಂಗೆ ಸೋಮವಾರ ರಾತ್ರಿ ದಿಢೀರ್ ಭೇಟಿ ನೀಡಿ ಕಾರ್ಯನಿರ್ವಹಣೆ ಪರಿಶೀಲಿಸಿದರು. ಪಾಲಿಕೆ ಕೇಂದ್ರ ಕಛೇರಿ ಅನೆಕ್ಸ್ ಕಟ್ಟಡ-3ರ 6ನೇ ಮಹಡಿಯಲ್ಲಿ ಕಂಟ್ರೋಲ್ ರೂಂ ಹಾಗೂ ಐ.ಸಿ.ಸಿ.ಸಿ(ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್) ಗೆ ದಿಢೀರ್ ಭೇಟಿ ನೀಡಿ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ, ಮರಗಳು, ಮರದ ರೆಂಬೆ/ಕೊಂಬೆಗಳು ಬಿದ್ದಿರುವುದು ಸೇರಿದಂತೆ ಬಂದಿರುವ ದೂರುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಾಗರಿಕರ ದೂರುಗಳಿಗೆ ಪಾಲಿಕೆ ವಾರ್ ರೂಮ್ ಹೇಗೆ ಸ್ಪಂದಿಸುತ್ತಿದೆ ಎಂದು ಖುದ್ದು ಪರಿಶೀಲನೆ ನಡೆಸಿದರು. ಮಳೆ ಅನಾಹುತಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಉದಾಸೀನ ಮಾಡಬಾರದು. ನಾಗರಿಕರ ಹಿತವೇ ಮೊದಲ ಆದ್ಯತೆ ಆಗಬೇಕು ಎಂದು ಸೂಚನೆ ನೀಡಿದರು ಡಿಸಿಎಂ. ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರು. ಕಂಟ್ರೋಲ್…