ಭಾರತದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯು ಸಂಪೂರ್ಣ ಬಿಜೆಪಿ ನಿಯಂತ್ರಣದಲ್ಲಿತ್ತು. ಬಿಜೆಪಿ ಬಯಸಿದಂತೆ ಚುನಾವಣ ಆಯೋಗ ಚುನಾವಣೆಯನ್ನು ನಡೆಸಿತು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕಾದ ಜಾರ್ಜ್ ಟೌನ್ ನಲ್ಲಿ ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದ್ದರೆ ಬಿಜೆಪಿ 240 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ. ಬಿಜೆಪಿ ತನ್ನ ಯೋಚನೆ ಮತ್ತು ಯೋಜನೆಗಳನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ರಚಾರ ಮಾಡುವುದಕ್ಕೆ ಬೇಕಾದ ಅವಕಾಶವನ್ನು ಚುನಾವಣ ಆಯೋಗ ಕಲ್ಪಿಸಿಕೊಟ್ಟಿತು. ಹೀಗಾಗಿ ಪ್ರಧಾನಿ ಮೋದಿ ತಮ್ಮ ಉದ್ದೇಶಗಳನ್ನು ನಿಖರವಾಗಿ ಜನರಿಗೆ ತಲುಪಿಸಿದರು ಎಂದಿದ್ದಾರೆ. ಚುನಾವಣೆ ನಡೆಸುವ ಸಮಯದಲ್ಲಿ ಬಿಜೆಪಿಯ ಬಳಿ ಸಾಕಷ್ಟು ಹಣಕಾಸಿನ ಶಕ್ತಿ ಇತ್ತು. ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಅಮಾನತಿನಲ್ಲಿಟ್ಟು, ಹಣಕಾಸು ನೆರವು ದೊರೆಯದಂತೆ ಮಾಡಲಾಗಿತ್ತು. ಆದರೂ ಚುನಾವಣೆಯಲ್ಲಿ ನಾವು ಗಳಿಸಿದ ಸ್ಥಾನಗಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ರಾಹುಲ್ ಹೇಳಿದರು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲ ಎಂದು ದೂರಿದ…
Author: Prajatv Kannada
ದಕ್ಷಿಣ ಭಾರತ ಖ್ಯಾತ ನಟ ಜಯಂ ರವಿ ಇತ್ತೀಚೆಗೆ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಬಗ್ಗೆ ಜಯಂ ರವಿ ಪತ್ನಿ ತಕರಾರು ಎತ್ತಿದ್ದಾರೆ. ನನ್ನ ಗಮನಕ್ಕೆ ತರದೆ ಪತಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿಗೆ ಕುಳಿತು ಮಾತನಾಡಲು ಪತಿಯಿಂದ ಅವರು ಸಮಯ ಕೇಳಿದ್ದಾರೆ. ‘ಕಳೆದ ಕೆಲವು ದಿನಗಳಿಂದ ನನ್ನ ಪತಿ ಜೊತೆ ಮಾತನಾಡಲು ಅವಕಾಶ ಕೇಳಿದೆ. ಇಬ್ಬರ ಮಧ್ಯೆ ಮಾತುಕತೆ ಆಗಬಹುದು ಎಂದು ಭಾವಿಸಿದ್ದೇನೆ. ಇದರಿಂದ ನಮ್ಮಿಬ್ಬರ ಮಧ್ಯೆ ಹಾಗೂ ನಮ್ಮ ಕುಟುಂಬದ ಮಧ್ಯೆ ಬೆಳೆದ ಸಂಬಂಧಕ್ಕೆ ಇದು ಗೌರವ ನೀಡುತ್ತದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ‘ನಾನು ಸಮಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಮ್ಮ ಪರಿಸ್ಥಿತಿ ಅರ್ಥವಾಗುತ್ತದೆ’ ಎಂದು ಅವರು ಬರೆದಿದ್ದಾರೆ. ಮಕ್ಕಳು ಮೊದಲ ಆದ್ಯತೆ ಎಂದು ಅವರು ಹೇಳಿಕೊಂಡಿದ್ದಾರೆ. ವಿಚ್ಛೇದನದಿಂದ ದೂರ ಹೋಗುವ ನಿರ್ಧಾರ ಜಯಂ ರವಿ ಹೇಳಿದ್ದಾರೆ. ಜಯಂ ರವಿ ಹಾಗೂ ಆರತಿ ಮದುವೆ ಆಗಿ 15…
ಬಾಲಿವುಡ್ನ ಖ್ಯಾತ ನಟಿ, ಮಾಡೆಲ್ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ತಮ್ಮ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 75 ವರ್ಷದ ಅನಿಲ್ ಅರೋರಾ ಮುಂಬೈನ ಬಾಂದ್ರಾದಲ್ಲಿ ವಾಸವಿದ್ದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಮಲೈಕಾ ಅರೋರಾ ಚಿತ್ರೀಕರಣಕ್ಕಾಗಿ ಪುನಾಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಂಬೈಗೆ ರವಾನೆಯಾಗಿದ್ದಾರೆ. ಮಲೈಕಾ ಅರೋರಾರ ಸಹೋದರಿ ಅಮೃತ್ ಅರೋರಾ ಸಹ ತಂದೆಯ ಸಾವಿನ ವಿಷಯ ತಿಳಿದು ಮುಂಬೈಗೆ ವಾಪಸ್ಸಾಗಿದ್ದಾರೆ. ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಭಾರತದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅನಿಲ್ ಅರೋರಾರ ಮೃತ ದೇಹವನ್ನು ಮುಂಬೈನ ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಗಳಿಗೆ ನೀಡಲಾಗುವುದೆಂದು ತಿಳಿಸಲಾಗಿದೆ. ಅನಿಲ್ ಅವರದ್ದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದರೋ ಎಂಬ ಬಗ್ಗೆ ಅನುಮಾನವಿರುವುದಾಗಿ ಪೊಲೀಸರು…
ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಕಾರುಗಳು ಮತ್ತು SUVಗಳ ಬೆಲೆಯನ್ನು ಬೆಲೆಯನ್ನು 1.80 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬೆಲೆಯನ್ನು ಕಂಪನಿ ಕಡಿತಗೊಳಿಸಿದೆ. ಅಕ್ಟೋಬರ್ 31ರವರೆಗೆ ಮಾತ್ರ ಈ ಕೊಡುಗೆ ಇರುತ್ತದೆ. ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..? ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ. ಸಫಾರಿ: ಬೆಲೆ ಕಡಿತ 1.80 ಲಕ್ಷ ಬೆಲೆ ಕಡಿತದ ನಂತರ ಸಫಾರಿ ಕಾರಿನ ಬೆಲೆ 15.49 ಲಕ್ಷದಿಂದ – 25.09 ಲಕ್ಷದವರೆಗೆ ಇದೆ. ಹ್ಯಾರಿಯರ್: ಬೆಲೆ ಕಡಿತ 1.60 ಲಕ್ಷ ಬೆಲೆ ಕಡಿತದ ನಂತರ ಹ್ಯಾರಿಯರ್ ಕಾರಿನ ಬೆಲೆ 14.99 ಲಕ್ಷದಿಂದ – 23.99 ಲಕ್ಷದವರೆಗೆ ಇದೆ. ನೆಕ್ಸಾನ್: ಬೆಲೆ ಕಡಿತ 80 ಸಾವಿರ ಬೆಲೆ ಕಡಿತದ ನಂತರ ನೆಕ್ಸಾನ್ ಕಾರಿನ ಬೆಲೆ 7.99 ಲಕ್ಷದಿಂದ – 15.29 ಲಕ್ಷದವರೆಗೆ ಇದೆ. ಟಿಯಾಗೋ: ಬೆಲೆ ಕಡಿತ 65…
ಮೈಸೂರು: ಕಲುಷಿತ ನೀರು ಸೇವನೆಯಿಂದ ಓರ್ವ ಸಾವನ್ನಪ್ಪಿದ್ದು, 12 ಜನ ವಾಂತಿಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮ ಬೆಟ್ಟಹಳ್ಳಿಯಲ್ಲಿ ನಡೆದಿದೆ. ಗೋವಿಂದೇಗೌಡ (65) ಸಾವಿಗೀಡಾದ ವ್ಯಕ್ತಿ. ಗ್ರಾಮದ ಟ್ಯಾಂಕ್‌ನಿಂದ ಸರಬರಾಜಾಗಿದ್ದ ನೀರನ್ನು ಸೇವಿಸಿ ಕೆಲವರಿಗೆ ವಾಂತಿ ಭೇದಿ ಆಗಿದೆ ಎಂದು ಶಂಕಿಸಲಾಗಿದೆ. ಅಸ್ವಸ್ಥರನ್ನು ತಕ್ಷಣವೇ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಗೋವಿಂದೇಗೌಡ ಎಂಬುವವರು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಹಾಸನ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಂಡ್ಯ: ನಾವು ಯಾವ ಊರಿಗೆ ಹೋದರೂ ಸಹ ಜನರು ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಇತರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನಗಳು ಬರುತ್ತಿಲ್ಲ. ಹೀಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಿ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ. https://youtu.be/eiG_ohQw0jw?si=78l0FfE9ZFe4KQKF ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ಹೋದ ಕಡೆಯಲ್ಲಿ ಎಲ್ಲಾ ಜನರು ನಮಗೆ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಗಳು ಬೇಕು ಎಂದು ಹೇಳುತ್ತಿದ್ದಾರೆ. ಮೂರು ಹೊತ್ತು ಊಟ ಮಾಡುವುದರ ಜೊತೆಗೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಸಹ ಅನಿವಾರ್ಯವಾಗಿದೆ ಎಂದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಬೇಕಾಗಿದೆ. ಜನರು ಗೆದ್ದು ಒಂದೂವರೆ ವರ್ಷವಾಗಿದೆ ಏನು ಕೆಲಸ ಮಾಡಿದ್ದೀರಾ ಎಂದು ಕೇಳುತ್ತಿದ್ದಾರೆ. ಜನರ ಅಭಿವೃದ್ಧಿಗೆ ಹಲವು ಇಲಾಖೆಗಳಿಂದ…
ರಾಯಚೂರು ಜಿಲ್ಲೆ ಮಾನ್ವಿಯ ಶಾಲಾ ವಾಹನ ಅಪಘಾತ ಬೆನ್ನಲ್ಲೆ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳ ವಾಹನಗಳಿಗೆ ಆಂಬ್ಯುಲೆನ್ಸ್ ಮಾನ್ಯತೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆ. ಮಾನ್ವಿಯ ಶಾಲಾ ಬಸ್ ಹಾಗೂ KSRTC ಬಸ್ ಮಧ್ಯೆ ಆದ ಅಪಘಾತ ಇದೇ ತಿಂಗಳ 5ರಂದು ನಡೆದಿದ್ದ ಭೀಕರ ಅಪಘಾತ ಅಪಘಾತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪದ್ರು ಮೂರ್ನಾಲ್ಕು ಮಕ್ಕಳ ಕೈ ಕಾಲು ಕಟ್ ಆಗಿದ್ದವು. ಇದರಿಂದ ರಾಜ್ಯದ ಎಲ್ಲಾ ಪೋಷಕರಿಗೆ, ಮತ್ತು ಸಾರ್ವಜನಿಕರಿಗೆ, ದೊಡ್ಡ ಆಘಾತ ಉಂಟಾಗಿದೆ ಈ ರೀತಿಯ ಅವಘಡ ಮತ್ತೆ ಆಗದಂತೆ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಒತ್ತಾಯ ಕೃಪ ಸಂಘಟನೆಯಿಂದ ಸರ್ಕಾರಕ್ಕೆ ಒತ್ತಾಯ ಮಕ್ಕಳು ಶಾಲೆಗಳಿಗೆ ಸುರಕ್ಷಿತವಾಗಿ ಸಂಚರಿಸಲು ಹಾಗೂ ಪೋಷಕರ ಆತಂಕ ನಿವಾರಿಸಬೇಕು ಶಾಲಾ ಆಡಳಿತ ಮಂಡಳಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪೋಷಕರ ಸಂಘಟನೆಗಳ ಸದಸ್ಯರೊಂದಿಗ ಸಭೆ ಮಾಡಿ, ಕಾನೂನಿನಡಿ ಕ್ರಮಕ್ಕೆ ಒತ್ತಾಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರದ ಮೂಲಕ ಮನವಿ ಪ್ರಸ್ತುತ…
ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ಮತ್ತು ಕೇರಳದ ಕೊಚುವೇಲಿ ನಿಲ್ದಾಣಗಳ ನಡುವೆ ವಿಶೇಷ ರೈಲು ಓಡಿಸಲಿದೆ. https://youtu.be/–8h1ySPgKU?si=ak5ISqzcRHPbTVZ9 ರೈಲು ಸಂಖ್ಯೆ 07333 ಸೆಪ್ಟೆಂಬರ್ 13 ರಂದು ಬೆಳಿಗ್ಗೆ 06:55ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಮರುದಿನ ಬೆಳಿಗ್ಗೆ 06:45ಕ್ಕೆ ಕೊಚುವೇಲಿ ತಲುಪಲಿದೆ. ರೈಲು ಸಂಖ್ಯೆ 07334 ಸೆಪ್ಟೆಂಬರ್ 14 ರಂದು ಮಧ್ಯಾಹ್ನ 12:50ಕ್ಕೆ ಕೊಚುವೇಲಿಯಿಂದ ಹೊರಟು, ಮರುದಿನ ಮಧ್ಯಾಹ್ನ 12:50ಕ್ಕೆ ಎಸ್‌ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಲಿದೆ. ಈ ರೈಲು ಎರಡೂ ದಿಕ್ಕುಗಳಲ್ಲಿ ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪೂರು, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗಣ್ಣೂರ್, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೈಕ್ ದುರಸ್ತಿ ಸರಿಯಾಗಿ ಮಾಡಿಲ್ಲ ಅಂತ ಶೋರೂಮಿಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿಯಲ್ಲಿ ನಡೆದಿದೆ..ನಗರದ ಹುಮ್ನಾಬಾದ್ ಸರ್ಕಲ್ ಬಳಿಯ ಎಲೆಕ್ಟ್ರಿಕ್ ಬೈಕ್ ಶೋರೂಮಲ್ಲಿ ಘಟನೆ ನಡೆದಿದ್ದು ಮಹ್ಮದ್ ನದೀಮ್ ಎಂಬಾತನೇ ಬೆಂಕಿ ಇಟ್ಟಿದ್ದು ಅತ ಗೊತ್ತಾಗಿದೆ. ಬೈಕ್ ರಿಪೇರಿ ವಿಚಾರವಾಗಿ ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ನಂತ್ರ ಪೆಟ್ರೋಲ್ ಸುರಿದು ಶೋರೂಮಿಗೆ ಬೆಂಕಿ ಇಟ್ಟಿದ್ದಾನೆ..ಆರೋಪಿಯನ್ನ ಬಂಧಿಸಿದ ಚೌಕ್ ಠಾಣೆ ಪೋಲೀಸರು ತನಿಖೆ ಮುಂದುವರೆಸಿದ್ದಾರೆ..
ಕೋಲಾರ: ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಐದು ಜನರಿಗೆ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕಾರಹಳ್ಳಿ ಸರ್ಕಲ್ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ನಡೆದಿದೆ. ಅಮರಾವತಿ ಬಡಾವಣೆ ಗುಂಪು ಹಾಗೂ ರೈಲ್ವೇ ಕ್ವಾಟ್ರಸ್ ಯುವಕರ ಗುಂಪಿನ ನಡುವೆ ಗಲಾಟೆಯಾಗಿದ್ದು, ಗಾಯಾಳುಗಳು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ.