ಇನ್ನೇನು ಬೇಸಿಗೆ ಕಳೆದು ಮಳೆಗಾಲ ಬರುತ್ತಿದೆ. ಇನ್ನು ಈ ಸಂದರ್ಭದಲ್ಲಿ ಜನರಿಗೆ ಕಾಯಿಲೆಗಳು ಹೆಚ್ಚಾಗುತ್ತವೆ. ಏಕೆಂದರೆ ಕಾಯಿಲೆಗಳನ್ನು ತರುವ ಕೀಟಗಳ ಸಂತತಿ ಹೆಚ್ಚಾಗುತ್ತದೆ. ನಮ್ಮ ಮನೆಯ ಸುತ್ತಮುತ್ತ ಇವುಗಳ ವಾಸಸ್ಥಾನ ಎಂಬುದು ನಮಗೆ ಚೆನ್ನಾಗಿ ಗೊತ್ತು. ಆದರೂ ಕೂಡ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಿಂದೇಟು ಹಾಕುತ್ತೇವೆ. ಇದು ಮನೆಯವರೆಲ್ಲರೂ ಹುಷಾರು ತಪ್ಪುವಂತೆ ಆಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಈ ಲೇಖನದಲ್ಲಿ ಹೇಗೆ ಸೊಳ್ಳೆ ಹಾಗೂ ಇತರೆ ಕೀಟಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಟ್ಟಿದ್ದೇವೆ… ಮೊದಲಿಗೆ ನಿಂತಿರುವ ನೀರನ್ನು ಕ್ಲೀನ್ ಮಾಡಿ ಮನೆಯ ಸುತ್ತಮುತ್ತ ನೀರು ನಿಂತರೆ ಅದು ಸೊಳ್ಳೆಗಳ ಆವಾಸಸ್ಥಾನವಾಗುತ್ತದೆ ಎಂಬುದು ನಮಗೆಲ್ಲ ಗೊತ್ತಿ ರುವ ವಿಷಯ. ಕೇವಲ ಸೊಳ್ಳೆಗಳು ಮಾತ್ರವಲ್ಲದೆ ಇನ್ನಿತರ ಕೀಟಗಳು, ಚಿಟ್ಟೆಗಳು ಎಲ್ಲವೂ ಸಹ ಅಂತಹ ನಿಂತಿರುವ ನೀರಿನಿಂದಲೇ ಜನ್ಮ ತಳೆಯುತ್ತವೆ. ಕತ್ತಲಿನ ವಾತಾವರಣ ಮತ್ತು ತೇವಾಂಶ ಇರುವ ಜಾಗ ಎಂದರೆ ಇವುಗಳ ಸಂತತಿ ಹೆಚ್ಚಾಗಲು ಪ್ರಮುಖ…
Author: Prajatv Kannada
ರೋಮ್: ದುಷ್ಕರ್ಮಿಗಳಿಂದ ಹೈಜಾಕ್ ಆಗಿದ್ದ ಟರ್ಕಿಶ್ ಹಡಗನ್ನು ಇಟಾಲಿಯನ್ ವಿಶೇಷ ಸೇನಾ ಪಡೆ ವಶಪಡಿಸಿಕೊಂಡಿದೆ. ಅಕ್ರಮ ವಲಸಿಗರು ಹಡಗನ್ನು ಹೈಜಾಕ್ ಮಾಡಿದ್ದರು. ಹಡಗನ್ನು ನಿಯಂತ್ರಣಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹಡಗಿನಲ್ಲಿ 22 ಸಿಬ್ಬಂದಿಯಿದ್ದು, ಅವರ ಸುರಕ್ಷತೆಯ ವಿಚಾರವನ್ನು ಶೀಘ್ರದಲ್ಲೇ ದೃಢಪಡಿಸಲಾಗುವುದು ಎಂದು ಇಟಲಿಯ ರಕ್ಷಣಾ ಸಚಿವ ಗೈಡೊ ಕ್ರೊಸೆಟ್ಟೊ ತಿಳಿಸಿದ್ದಾರೆ. ವಾಹನಗಳನ್ನು ಸಾಗಿಸುವ ಮತ್ತು ನೌಕಾಯಾನದ ಹಡಗು ಜೂನ್ 7 ರಂದು ಟರ್ಕಿಯ ಟೊಪ್ಯುಲರ್‌ನಿಂದ ಹೊರಟು ದಕ್ಷಿಣ ಫ್ರಾನ್ಸ್‍ನ ಸೆಟೆಗೆ ಹೊರಟಿತ್ತು. ಅದನ್ನು ಅಕ್ರಮ ವಲಸಿಗರು ಅಪಹರಿಸಿದ್ದರು. ಶೀಘ್ರದಲ್ಲೇ ದುಷ್ಕರ್ಮಿಗಳಿಂದ ಹಡಗನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಹಡಗನ್ನು ಮುಕ್ತಗೊಳಿಸಲು ಇಟಾಲಿಯನ್ ವಿಶೇಷ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜಮೀನಿನಲ್ಲಿ ಪತ್ತೆಯಾಗಿದೆ. ಕಪ್ಪು ಹಾಗೂ ಬಿಳಿ ಬಣ್ಣದಿಂದ ಕೂಡಿರುವ ವಿಮಾನದ ಆಕಾರ ನಿಗೂಢ ಬಲೂನ್ ನೆಲದ ಮೇಲೆ ಬಿದ್ದಿರುವುದು ಕಂಡು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಗಳು ಅದನ್ನು ವಶಪಡಿಸಿಕೊಂಡಿದ್ದು, ಬಲೂನ್ ಎಲ್ಲಿಂದ ಬಂದಿದೆ ಎಂದು ತನಿಖೆ ಮಾಡಲು ಪ್ರದೇಶದಲ್ಲಿ ಸೇನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಇದೇ ರೀತಿಯ ವಿಮಾನದ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಸಹ ಪಿಐಎ ಲೋಗೋವನ್ನು ಮುದ್ರಿಸಲಾಗಿತ್ತು. ಮೇ 20 ರಂದು ಅಮೃತಸರದಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ಪಾಕಿಸ್ತಾನದ ಡ್ರೋನ್‍ನ್ನು ಸೇನೆ ಹೊಡೆದುರುಳಿಸಿತ್ತು.
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 6.34ಕ್ಕೆ 3.2 ತೀವ್ರತೆ ಯ ಭೂಕಂಪ(Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಬೆಳಗ್ಗೆ 6:34ಕ್ಕೆ 33 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ತೀವ್ರತೆಯ ಭೂಕಂಪ: 3.2, ಲ್ಯಾಟ್: 27.02 ಮತ್ತು ಉದ್ದ: 92.57, ಆಳ: 33 ಕಿಮೀ ಸ್ಥಳ: ಪಶ್ಚಿಮ ಕಮೆಂಗ್, ಅರುಣಾಚಲ ಪ್ರದೇಶ ಎಂದು NCS ಟ್ವೀಟ್ ಮಾಡಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ. ಈ ವರ್ಷದ ಆರಂಭದಲ್ಲಿ ಅರುಣಾಚಲ ಪ್ರದೇಶದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿ ಮಧ್ಯಾಹ್ನ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.ಭೂಕಂಪನದ ರಾಷ್ಟ್ರೀಯ ಕೇಂದ್ರದ ವರದಿಯ ಪ್ರಕಾರ ಭೂಕಂಪವು ಮಧ್ಯಾಹ್ನ 12.12 ಕ್ಕೆ ಸಂಭವಿಸಿದ್ದು, ಭೂತಾನ್ ಗಡಿಯ ಸಮೀಪವಿರುವ ಪಶ್ಚಿಮ ಕಮೆಂಗ್‌ನಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದುವಾಗಿತ್ತು.
ಚೆನ್ನೈ: ನನ್ನ ತಾಯಿಯನ್ನು ನೋಡದೆ 32 ವರ್ಷಗಳು ಕಳೆದಿವೆ. ನನ್ನ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಅದು ನನ್ನನ್ನು ತುಂಬಾ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹಂತಕರಲ್ಲಿ ಒಬ್ಬನಾದ ಶ್ರೀಲಂಕಾದ (Sri Lanka) ಟಿ.ಸುಥೆಂತಿರರಾಜ ತಮಿಳುನಾಡಿನ (Tamil Nadu) ಕಾರಾಗೃಹದ ವಿಶೇಷ ಶಿಬಿರದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ. ಸೂರ್ಯನ ಬೆಳಕು (Sunlight) ಕೂಡ ನಮ್ಮ ದೇಹವನ್ನು ಸ್ಪರ್ಶಿಸುವುದಿಲ್ಲ. ನಮ್ಮ ತಾಯ್ನಾಡಿಗೆ ಮರಳಲು ಬೆಂಬಲವಾಗಿ ಪ್ರಪಂಚದಾದ್ಯಂತದ ಇರುವ ತಮಿಳಿಯನ್ನರು ಧ್ವನಿ ಎತ್ತಬೇಕು ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಗುರುತಿನ ಪುರಾವೆಯನ್ನು ನವೀಕರಿಸಲು ಚೆನ್ನೈನಲ್ಲಿರುವ ಶ್ರೀಲಂಕಾ ಡೆಪ್ಯುಟಿ ಹೈಕಮಿಷನ್ ಕಚೇರಿಗೆ ಪ್ರವೇಶ ನೀಡುವಂತೆ ಆತ ಮನವಿ ಮಾಡಿದ್ದಾನೆ. ಸುಪ್ರೀಂನಿಂದ ಬಿಡುಗಡೆಯಾದರೂ, ಕಳೆದ ಆರು ತಿಂಗಳಿನಿಂದ ತಿರುಚ್ಚಿ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ವಿಶೇಷ ಶಿಬಿರದಲ್ಲಿ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ಮಹತ್ವಾಕಾಂಕ್ಷಿಯ 5 ಉಚಿತ ಯೋಜನೆಗಳಿಗೆ ಚಾಲನೆ ನೀಡುತ್ತಿದೆ. ಈ ಯೋಜನೆಗಳಿಂದ ಸರ್ಕಾರಕ್ಕೆ (Congress Government) ಆರ್ಥಿಕ ಹೊರೆಯಾಗಲಿದೆ. ಇವುಗಳನ್ನು ಜಾರಿ ಮಾಡಲು ಸಾವಿರಾರು ಕೋಟಿ ಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಯೋಜನೆಗಳಿಂದ ಸರ್ಕಾರದ ಖಜಾನೆಗೆ ಒಂದಿಷ್ಟರ ಮಟ್ಟಿಗಾದರೂ ಹೊಡೆತ ಬೀಳುವುದು ಸುಳ್ಳಲ್ಲಾ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಬರೆ ಬೀಳದ ಹಾಗೆ ಆದಾಯದ ಮೂಲ ಹೆಚ್ಚಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಸರ್ಕಾರ ಮಾರ್ಗವನ್ನು ಕಂಡುಕೊಂಡಿದ್ದು, ಅದು ಅಬಕಾರಿ ಇಲಾಖೆಯಿಂದ (Excise Department) ಆದಾಯ ಕ್ರೋಡಿಕರಣಕ್ಕೆ ಚಿಂತನೆ ನಡೆಸಿದೆ. ಲಿಕ್ಕರ್ ಲೈಸೆನ್ಸ್ ಫೀಸ್ನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದ ವಾರ್ಷಿಕ 175 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಲಿಕ್ಕರ್ ಲೈಸೆನ್ಸ್ ಫೀಸ್ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಲಿಕ್ಕರ್ ಹಾರ್ಡ್ ಡ್ರಿಂಕ್ಸ್ ದರವನ್ನು ಶೇಕಡಾ 10 ರಿಂದ…
ಬೆಂಗಳೂರು: ನೀರು.. ನೀರು.. ನೀರು ಬೆಂಗಳೂರಿನ ಜನ ಹನಿ ನೀರಿಗಾಗಿ ಪರದಾಡಬೇಕಾದ ದಿನ ದೂರವಿಲ್ಲ. ಕೆಲವೇ ಕೆಲವು ದಿನಗಳು ಅಷ್ಟೇ..ಬೆಂಗಳೂರಿನ ಕೊಳಾಯಿಗಳಲ್ಲಿ ಕಾವೇರಿ ಹರಿಯುವುದಿಲ್ಲ.ನಗರದ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗೋ ಆತಂಕ ಇದೆ..ಹೌದು ಚೆನ್ನೈ ಮಹಾನಗರದ ನಿವಾಸಿಗಳು ಎದುರಿಸುತ್ತಿರುವ ಸಂಕಷ್ಟವನ್ನೇ ಬೆಂಗಳೂರಿನ ಜನ ಎದುರಿಸಬೇಕಾಗಿದೆ.ಯಾಕೆಂದರೆ ಜೀವನದಿ ಕಾವೇರಿ ಬರಿದಾಗುತ್ತಿದ್ದು, ,ಮುಂಗಾರು ತಡವಾದ್ರೆ ರಾಜಧಾನಿಯಲ್ಲಿ ಜಲಕಂಟಕ ಭೀತಿ ಎದುರಾಗಿದೆ. ಐಟಿ ಸಿಟಿ, ಸಿಲಿಕಾನ್ ವ್ಯಾಲಿ, ಸ್ಟಾರ್ಟ್ ಅಪ್ಗಳ ರಾಜಧಾನಿ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗುವ ಆತಂಕ ಇದೆ.. ಯಸ್ ..ಚೆನ್ನೈ ನಗರದ ನಿವಾಸಿಗಳು ಎದುರಿಸುತ್ತಿರುವ ಸಂಷಕ್ಟವನ್ನೇ ಬೆಂಗಳೂರಿನ ಜನ ಕೂಡ ಎದುರಿಸುವ ಭೀತಿ ಎದುರಾಗೋ ಮುನ್ಸೂಚನೆ ಸಿಕ್ಕಿದೆ. ಆದರು ಜಲಮಂಡಳಿಯಾಗಲಿ ,ಸರ್ಕಾರವೇ ಆಗಲಿ ಈ ಎಚ್ಚರಿಕೆಯನ್ನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇಂಥಾದ್ದೊಂದು ಸಣ್ಣ ನಿರ್ಲಕ್ಷ್ಯದಿಂದಲೇ ಮಹಾನಗರದಲ್ಲಿ ಹಾಹಾಕಾರ ಭೀತಿ ಎದುರಾಗಲಿದೆ. ಜೀವನದಿ ಕಾವೇರಿ ಒಡಲು ಬರಿದಾಗಿದ್ದು, ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಜಲಮಂಡಳಿ ಅಧಿಕಾರಿಗಳು ಇನ್ನು ವಾರಕ್ಕೆ ಒಂದೆರಡು ದಿನ ಮಾತ್ರ ನಗರಕ್ಕೆ ಕಾವೇರಿ ನೀರು ಪೂರೈಸಲು…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹತ್ವದ 5 ಉಚಿತ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ”ಗೆ ಇಂದು ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಉದ್ಘಾಟನೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC ಹಾಗೂ KKRTCಯ ನಾಲ್ಕು ನಾರ್ಮಲ್ ಬಸ್ಸುಗಳನ್ನು ತಂದು ನಿಲ್ಲಿಸಿ, ಆ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಉಚಿತವಾಗಿ ಕಳಿಸಬೇಕೆಂದು ಸಾರಿಗೆ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಮಹಿಳೆಯರಿಗೆ ನೀಡುವ ‘O’ ದರದ ಪಿಂಕ್ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನೀಡುವ ಮೂಲಕ ಚಾಲನೆ ದೊರೆಯಲಿದೆ. ಇಂದಿನಿಂದ ಸೇವಾಸಿಂಧು ಪೋರ್ಟಲ್ ಆರಂಭ ಇಂದಿನಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ. ಮಹಿಳೆಯರು ಬಿಎಂಟಿಸಿ ಹೊರತು ಪಡಿಸಿ ನಾರ್ಮಲ್ ಬಸ್ಸುಗಳಲ್ಲು ಸೀಟ್ ಬುಕ್ಕಿಂಗ್…
ಸೂರ್ಯೋದಯ: 05.53 AM, ಸೂರ್ಯಾಸ್ತ : 06.46 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಅಷ್ಟಮಿ 12:05 PM ತನಕ ನಂತರ ನವಮಿ ನಕ್ಷತ್ರ: ಇವತ್ತು ಪೂರ್ವಾ ಭಾದ್ರ 02:32 PM ತನಕ ನಂತರ ಉತ್ತರಾ ಭಾದ್ರ ಯೋಗ: ಇವತ್ತು ಪ್ರೀತಿ 10:11 AM ತನಕ ನಂತರ ಆಯುಷ್ಮಾನ್ ಕರಣ: ಇವತ್ತು ಬಾಲವ 01:00 AM ತನಕ ನಂತರ ಕೌಲವ 12:05 PM ತನಕ ನಂತರ ತೈತಲೆ 11:17 PM ತನಕ ನಂತರ ಗರಜ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ:12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 06.54 AM to 08.26 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:49 ನಿಂದ ಮ.12:41 ವರೆಗೂ ಮೇಷ: ಶೇರು ವ್ಯವಹಾರ ಸಿನಿಮಾ ತಯಾರಿಕೆಯಂತ ಪ್ರಯತ್ನಗಳಿಗೆ ಧನ ನಷ್ಟ,ಉಪನ್ಯಾಸಕರಿಗೆ ಸಿಹಿಸುದ್ದಿ,ಆಸ್ತಿ…
ಬೆಂಗಳೂರು: ಸರ್ಕಾರಿ ಬಸ್ (Government Bus) ಗಳಲ್ಲಿ ಇಂದಿನಿಂದ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಬಹುದು. ಈ ಮಧ್ಯೆ ಖಾಸಗಿ ಬಸ್ ಗಳಲ್ಲಿಯೂ ಫ್ರೀ ಬಸ್ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಖಾಸಗಿ ಬಸ್‍ಗಳಿಗೆ ಈ ಫ್ರೀ ಪ್ರಯಾಣ ಸೇವೆ ಕೊಡುವ ಯೋಚನೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ. ಇಂದು ಅಧಿಕೃತವಾಗಿ 11 ಗಂಟೆಗೆ ಮಹಿಳೆಯ ಉಚಿತ ಪ್ರಯಾಣಕ್ಕೆ ಚಾಲನೆ ಸಿಗಲಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾರ್ಯಗತ ಮಾಡುತ್ತಿದ್ದೇವೆ. ಪ್ರತಿಪಕ್ಷಗಳು ಟೀಕೆ ಮಾಡುತ್ತಿದ್ದವು. ಈಗ ನಾವು ಜಾರಿ ಮಾಡುತ್ತಿದ್ದೇವೆ. ಈ ಹಿಂದೆ ಭರವಸೆಗಳನ್ನು ಕೊಟ್ಟಿದ್ರು. ಅದರಲ್ಲಿ ಜಾರಿ ಮಾಡಿದ್ದು ಕೆಲವು ಮಾತ್ರ ಎಂದು ವಾಗ್ದಾಳಿ ನಡೆಸಿದರು. ಎಲ್ಲಾ ಗ್ಯಾರಂಟಿ (Congress Guarantee) ಕಾರ್ಯಕ್ರಮಗಳು ಯಶಸ್ವಿಯಾಗಿ ಆಗುತ್ತೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯಾ ಶಾಸಕರು, ಸಂಸದರ ಸಮ್ಮುಖದಲ್ಲಿ ಏಕಾಕಲದಲ್ಲಿ ಚಾಲನೆ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ…