ಬೆಂಗಳೂರು ;– ಸಿಎಂ ಸ್ಥಾನದ ಬಗ್ಗೆ ಸೋನಿಯಾ, ರಾಹುಲ್ ನಿರ್ಧಾರ ಮಾಡುತ್ತಾರೆ ಎಂದು ಹೇಳುವ ಮೂಲಕ ಬಿ.ಕೆ ಹರಿಪ್ರಸಾದ್ ಗೆ ಸಚಿವ ಜಮೀರ್ ಟಾಂಗ್ ಕೊಟ್ಟಿದ್ದಾರೆ. ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು ‘ ಎಂಬ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಜಮೀರ್, ಸಿಎಂ ಮಾಡೋದು ಬಿಡೋದು ಅವರ ಕೈಲೂ ಇಲ್ಲ, ನನ್ನ ಕೈಲೂ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆ ನಿರ್ಧಾರವನ್ನು ಮಾಡುತ್ತಾರೆ ಎಂದರು. ಬಿಜೆಪಿ, ಜೆಡಿಎಸ್ ನಡುವೆ ಹೊಂದಾಣಿಕೆ ಬಗ್ಗೆ ಅವರನ್ನೇ ಕೇಳಿ, ನನಗೆ ಏನೂ ಗೊತ್ತಿಲ್ಲ ಎಂದರು.
Author: Prajatv Kannada
ರಾಮನಗರ ;– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಂಕಿತ ಉಗ್ರರು ಪತ್ತೆ ಹಿನ್ನೆಲೆ ರಾಮನಗರದಲ್ಲಿ ASC ತಪಾಸಣೆಗೆ ಇಳಿದಿದೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ರಾಮನಗರದಲ್ಲೂ ತಪಾಸಣೆ ನಡೆಸಲಾಗಿದ್ದು, ವಿದ್ವಾಂಸಕ ಕೃತ್ಯ ತಪಾಸಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ರಾಮನಗರ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಪ್ರಮುಖ ಕಚೇರಿಗಳನ್ನ ASC ತಂಡ ತಪಾಸಣೆ ಮಾಡುತ್ತಿದೆ. ಪ್ರಮುಖ ಜಾಗಗಳಲ್ಲಿ ಇಂಚಿಂಚು ಜಾಗವನ್ನು ಪರಿಶೀಲನೆ ನಡೆಸುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಂಡಿರುವ ರಾಮನಗರ ಖಾಕಿ ಪಡೆ ಹಲವೆಡೆ ಪರಿಶೀಲನೆ ಮಾಡುತ್ತಿದೆ.
ಬೆಂಗಳೂರು ;- ನೈಸ್ ಹಗರಣದ ತನಿಖೆ ನಡೆಸಲು ಕಾಂಗ್ರೆಸ್ ಕೈಕಟ್ಟಿ ಹಾಕಿತ್ತು ಎಂಬುದು ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೈಸ್ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉತ್ತರಿಸಿ, ಕಾಂಗ್ರೆಸ್ ಸರ್ಕಾರದ ನಂತರ ಮೈತ್ರಿ ಸರ್ಕಾರ ಬಂದ ಸಂದರ್ಭದಲ್ಲಿಯೇ ಕ್ರಮ ತೆಗೆದುಕೊಳ್ಳಬಹುದಿತ್ತು. ತನಿಖೆ ನಡೆಸಲು ಕಾಂಗ್ರೆಸ್ ನವರು ಕೈಕಟ್ಟಿ ಹಾಕಿದ್ದರು ಎಂಬುದು ಸುಳ್ಳು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಲಮನ್ನಾ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲವೇ, ಕಾಂಗ್ರಸ್ ಕೈಕಟ್ಟಿ ಹಾಕಿತ್ತು ಎಂದು ರಾಜೀನಾಮೆ ನೀಡಿದರೆ?. ತಮ್ಮ ಸ್ವಯಂ ತಪ್ಪಿನಿಂದಲೇ ಅವರು ಸರ್ಕಾರ ಕಳೆದುಕೊಳ್ಳುವಂತಾಯಿತು ಎಂದು ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಇನ್ನೂ ಬಿಜೆಪಿಯವರು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದರು ವಿರೋಧಪಕ್ಷದವರು ಚರ್ಚೆಗಳಲ್ಲಿ ಭಾಗವಹಿಸಲಿ ಎಂದು ಮೂರು ವಾರಗಳ ಕಾಲ ಅಧಿವೇಶನವನ್ನು…
ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಪ್ರಹಾರ ನಡೆಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಹೇಳಿದ್ದ ಡಿಕೆಶಿ ಅವರ ವಿರುದ್ಧ ಕಿಡಿಕಿಡಿಯಾಗಿರುವ ಅವರು, ನೈಸ್ ಅಕ್ರಮಗಳಲ್ಲಿ ನಿಮ್ಮ ಪಾತ್ರವೇನು ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡಿಕೆಶಿ ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ. ಇದೇನು ಬುಲ್ಡೋಜ್ ಬೆಂಗಳೂರಾ?: ನೈಸ್ ಯೋಜನೆಗೆ ಹೆಚ್.ಡಿ.ದೇವೇಗೌಡರೇ ಸಹಿ ಹಾಕಿದ್ದು ಎಂದು ಹೇಳುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು. ಆದರೆ, ಅದೇ ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನ!! ಯಾಕೆ?? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬುಲ್ಡೋಜ್ ಬೆಂಗಳೂರು ಹಾಗೂ ಬುಲ್ಡೋಜ್ ಕರ್ನಾಟಕ ಎಂದು ಹ್ಯಾಷ್ ಟ್ಯಾಗ್ ಮಾಡಿ ನೇರವಾಗಿ…
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಐದು ದಿನಳಿಂದ ನಿರಂತರ ಮಳೆಯಾಗುತ್ತಿದ್ದು, 235 ಮಿಮೀವರೆಗೂ ಮಳೆಯ ಪ್ರಮಾಣ ದಾಖಲಾಗಿದೆ. ಇದರಿಂದ ಮಲಪ್ರಭಾ ನದಿಯ ಒಳ ಹರಿವು ಹೆಚ್ಚಳವಾಗಿದ್ದು, ಕಣಕುಂಬಿ ಗ್ರಾಮದ ರಸ್ತೆ ಮತ್ತು ಬ್ರಿಡ್ಜ್ಗಳು ಕೊಚ್ಚಿಹೋಗುತ್ತಿವೆ. ಇದರಿಂದ ರಸ್ತೆ ಸಂಪರ್ಕ ಕೂಡ ಸಂಪೂರ್ಣ ಬಂದ್ ಆಗಿದೆ. ಪಶ್ಚಿಮಘಟ್ಟ ಪ್ರದೇಶ ಹಾಗೂ ಬೆಳಗಾವಿಯ (Belagavi) ಸುತ್ತಮುತ್ತ ಮಳೆ ಚುರುಕುಗೊಂಡಿದೆ. ಇದರಿಂದಾಗಿ ಗೋಕಾಕ್ ತಾಲೂಕಿನ ಘಟಪ್ರಭಾ ನದಿಯಲ್ಲಿ (Ghataprabha River) ನೀರಿನ ಪ್ರಮಾಣ ಹೆಚ್ಚಳವಾಗಿದೆ. ಪರಿಣಾಮ ಸೇತುವೆ ಜಲಾವೃತಗೊಂಡಿದ್ದು, ಅಪಾಯಕಾರಿ ಸೇತುವೆ ಮೇಲೆ ಬೈಕ್ ಸವಾರ ದಸ್ಸಾಹಸ ಪ್ರದರ್ಶನ ಮಾಡಿದ್ದಾನೆ. ಸೇತುವೆ ಮೇಲೆ ತೆರಳದಂತೆ ಕರ್ತವ್ಯ ನಿರತ ಪೊಲೀಸ್ (Police) ಸಿಬ್ಬಂದಿ ಸೂಚಿಸಿದ್ದಾರೆ. ಆದರೂ ಬೈಕ್ ಸವಾರ ಪೊಲೀಸರ ಮಾತು ಕೇಳದೆ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಬೈಕ್ ಸವಾರಿ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು : ತಮ್ಮ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಾಗೂ 14 ಬಾರಿ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಇದೇ ಮೊದಲ ಬಾರಿ ವಿರೋಧ ಪಕ್ಷದ ಉಪಸ್ಥಿತಿಯಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡುವಂತಹ ಪರಿಸ್ಥಿತಿ ಒದಗಿಬಂದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ. ವಿರೋಧಪಕ್ಷದವರು ಚರ್ಚೆಗಳಲ್ಲಿ ಭಾಗವಹಿಸಲಿ ಎಂದು ಮೂರು ವಾರಗಳ ಕಾಲ ಅಧಿವೇಶನವನ್ನು ನಡೆಸಲಾಯಿತು. ಆದರೆ ವಿಧಾನಸಭೆಗೆ ಆಗಮಿಸದೆ ಗದ್ದಲದಲ್ಲೇ ಸಮಯವನ್ನು ವ್ಯರ್ಥಗೊಳಿಸಿದರು.ಅವರು ನಡವಳಿಕೆ ಸರಿಯಿರದಿದ್ದ ಕಾರಣ , ಸಭಾಧ್ಯಕ್ಷರು ಕ್ರಮ ತೆಗೆದುಕೊಂಡಿದ್ದಾರೆ. ಸಭಾಧ್ಯಕ್ಷರ ಕ್ರಮಕ್ಕೂ , ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು. ಕಾಂಗ್ರಸ್ ಕೈಕಟ್ಟಿ ಹಾಕಿತ್ತು ಎಂಬುದು ಸುಳ್ಳು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ಸ್ವಾಮಿಯವರು ನೈಸ್ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉತ್ತರಿಸಿ, ಕಾಂಗ್ರೆಸ್ ಸರ್ಕಾರದ ನಂತರ ಮೈತ್ರಿ…
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಭಯೋತ್ಪಾದನಾ ಚಟುವಟಿಕೆಗಳು, ಬೆಲೆಯೇರಿಕೆ, ಗ್ಯಾರಂಟಿ ಘೋಷಣೆ ಅನುಷ್ಠಾನದಲ್ಲಿ ವೈಫಲ್ಯ ಮತ್ತು ಬಿಜೆಪಿ ಶಾಸಕರ ಅಮಾನತು ವಿಚಾರವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅದು ಅಲ್ಲದೇ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜವಿರೋಧಿ ಶಕ್ತಿಗಳು ತಲೆ ಎತ್ತಿವೆ ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಟಿ.ನರಸೀಪುರದಲ್ಲಿ ಸಮಾಜದ್ರೋಹಿಗಳಿಂದ ವೇಣುಗೋಪಾಲ್ ಹತ್ಯೆಯಾಯಿತು, ಹಲವು ಕಡೆ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಅಶ್ವತ್ಥ್ ನಾರಾಯಣ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಬೆಂಗಳೂರು : NDAನೂ ಇಲ್ಲ, INDIA(UPA)ನೂ ಇಲ್ಲ..! ಸ್ವತಂತ್ರವಾಗಿ ಹೋರಾಟ ಮಾಡ್ತೇವೆ ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತೆರೆ ಎಳೆದರು. ಆದರೆ, ಸದ್ಯ ಈ ಎಲ್ಲ ಚರ್ಚೆಗಳಿಗೂ ಬ್ರೇಕ್ ಬಿದ್ದಿದ್ದು, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಹಿಂದೇಟು ಹಾಕಿದೆ. ಈ ಮೂಲಕ NDAನೂ ಇಲ್ಲ, INDIAನೂ ಇಲ್ಲ, ಸ್ವತಂತ್ರವಾಗಿಯೇ ಹೋರಾಟ ಮಾಡುವ ನಿರ್ಧಾರಕ್ಕೆ ದಳಪತಿಗಳು ಬಂದಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಪರಿಸ್ಥಿತಿ ಹೇಳಿಕೊಳ್ಳುವಂತೆ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಅದರ ಪ್ರಾಬಲ್ಯ ಕುಸಿಯುತ್ತಿದ್ದರೆ, ಬಿಜೆಪಿಯ ಶಕ್ತಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಎಂಬಂತಾಗಿದ್ದು, ಹಾವು-ಏಣಿ ಆಟ ಆಡುತ್ತಲೇ ಇದೆ. ಇದುವರೆಗೂ ಒಂದು ಬಾರಿಯೂ ಬಹುಮತವನ್ನು ಪಡೆಯಲಾಗಿಲ್ಲ. ಆದರೆ, ಕಾಂಗ್ರೆಸ್ ಶಕ್ತಿ ಕರ್ನಾಟಕದಲ್ಲಿ ಹೆಚ್ಚುತ್ತಿದ್ದು, ಜಂಟಿಯಾಗಿಯೇ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ – ಜೆಡಿಎಸ್ ಮುಂದಾಗಿದ್ದವು. ಬಿಜೆಪಿ – ಜೆಡಿಎಸ್ ಮೈತ್ರಿ ಮಾತುಕತೆಗೆ ಬ್ರೇಕ್ ಬಿದ್ದಿದ್ದು ಏಕೆ? ಬಿಜೆಪಿ ಜೊತೆ ಹೋಗಲು ಜೆಡಿಎಸ್ ಹಿಂದೇಟು ಹಾಕುತ್ತಿರುವುದು ಏಕೆ ಎಂಬುದರ ವಿವರ ಇಲ್ಲಿದೆ.…
ಬೆಂಗಳೂರು ;- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ನಿರ್ವಹಣಾ ಕಾಮಗಾರಿಯಿಂದ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಗಿಡನ ಕೋನೇನಹಳ್ಳಿ, ಉಪಕಾರ ಲೇಔಟ್ ಸೇರಿದಂತೆ ಬ್ಯಾಡರಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು. ಹಾಗೂ ಸುಂಕದಕಟ್ಟೆ, ಹೇರೋಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ತುಂಗಾನಗರ, ಹೊಸಳ್ಳಿ, ಅನ್ನಪೂರ್ಣೇಶ್ವರಿ ನಗರ, ಶಂಕ್ರಪ್ಪ ಕೈಗಾರಿಕಾ ಪ್ರದೇಶ, ಹೆಗ್ಗನಹಳ್ಳಿ, ಬಿಇಎಲ್ 2ನೇ ಹಂತ, ಅಂಜನಾನಗರದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪವರ್ ಕಟ್ ಇರಲಿದೆ. ಹೀಗಾಗಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾ (LET) ಉಗ್ರ ನಸೀರ್ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಮತ್ತಷ್ಟು ರಹಸ್ಯಗಳನ್ನ ಬಯಲಿಗೆಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಉಗ್ರ ನಸೀರ್ ದಿನಕ್ಕೆ 4-5 ಸಾವಿರ ದುಡ್ಡು ಸಂಪಾದನೆ ಮಾಡುತ್ತಿದ್ದ. ಬಟ್ಟೆ, ಡ್ರೈ ಫ್ರೂಟ್ಸ್, ಸ್ವೀಟ್ಸ್ ಮಾಡುತ್ತಿದ್ದ. ಉಗ್ರರಿಗೆ ನಿಗದಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸುತ್ತಿದ್ದ ನಸೀರ್ ವಿಚಾರಣಾಧೀನ ಕೈದಿಗಳನ್ನ ತನ್ನ ರೂಮಿಗೆ ಹಾಕಿಸಿಕೊಂಡು ಬಿಸಿನೆಸ್ ಮಾಡ್ತಿದ್ದ. ಹೊರಗಡೆಯಿಂದ ಡ್ರೈ ಫ್ರೂಟ್ಸ್, ಬಟ್ಟೆ ತರಿಸಿಕೊಂಡು ಜೈಲಿನ ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿದ್ದ ಎಂಬ ಅನೇಕ ರಹಸ್ಯಗಳು ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲನ್ನೆ ಎಲ್ ಇ ಟಿ ಉಗ್ರ ಟಿ ನಾಜಿರ್ ನ ಬಿಸಿನೆಸ್ ಅಡ್ಡೆ ಮಾಡಿಕೊಂಡಿದ್ದಾನಂತೆ. ಜೈಲಲ್ಲಿ ಕುಳಿತುಕೊಂಡೇ ಉಗ್ರ ಟಿ ನಾಜಿರ್ ದಿನಕ್ಕೆ ನಾಲ್ಕೈದು ಸಾವಿರ ಸಂಪಾದನೆ ಮಾಡ್ತಿದ್ದಾನೆ. ಜೈಲಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್…