ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಘೋಷಣೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಕ್ಕಿದ್ದರಿಂದ ದೇವಸ್ಥಾನಗಳಿಗೆ ಒಳ್ಳೆಯ ಕಲೆಕ್ಷನ್ ಆಗಿದೆ. ಹೌದು, ಉಚಿತ ಪ್ರಯಾಣ ಶುರುವಾಗಿದಾಗಿನಿಂದ ಮಹಿಳೆಯರು ಮನೆಯಲ್ಲೇ ಇರುತ್ತಿಲ್ಲ, ಯಾವ್ಯಾವ ಊರುಗಳಿಗೆ ದೇವಾಸ್ಥಾನಗಳಿಗೆ ಹೋಗಿಲ್ಲವೋ ಅಲ್ಲಿಗೆಲ್ಲಾ ಹೋಗುತ್ತಿದ್ದು ದೇವಾಸ್ಥಾನದ ಖಜಾನೆ ಭರ್ತೀಯಾಗಿದೆ. ಕಳೆದ ಒಂದು ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11ರ ವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ-ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ. ಯಾವ ದೇವಾಲಯಗಳಿಗೆ ಎಷ್ಟು ಆದಾಯ? 2022ರ ಜೂನ್ 11 ರಿಂದ ಜುಲೈ 15ರ ವರೆಗೆ ಹೋಲಿಕೆ ಮಾಡಿದ್ರೆ 2023 ಜೂನ್ 11 ರಿಂದ ಜುಲೈ 15ರ ವರೆಗೆ ದೇವಸ್ಥಾನಗಳ ಆದಾಯದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯ ಕಳೆದ ವರ್ಷ…
Author: Prajatv Kannada
ಬೆಂಗಳೂರು ;- ದಿನವೊಂದಕ್ಕೆ ಒಂದು ಕೇಂದ್ರದಿಂದ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿದ್ದ ಸರ್ಕಾರದ ನಿರ್ಧಾರದಿಂದ ‘ಗೃಹಲಕ್ಷ್ಮಿಯರು’ ಸಹನೆ ಕಳೆದುಕೊಂಡಿದ್ದಾರೆ. 60 ಅರ್ಜಿ ಸ್ವೀಕರಿಸುವ ಕೇಂದ್ರದಲ್ಲಿ 200-300 ಮಹಿಳೆಯರು ನೋಂದಣಿಗೆ ತೆರಳಿರುವುದರಿಂದ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಸಮಸ್ಯೆ ಉಂಟಾಗಿದ್ದರಿಂದ ಒಂದು ದಿನದ ನಂತರ ಸರ್ಕಾರ ನಿಯಮ ಬದಲಾಯಿಸಿದ್ದು, ದಿನದ ನೋಂದಣಿ ಮಿತಿಯನ್ನು ತೆರವುಗೊಳಿಸಿದೆ. ಮೊಬೈಲ್ಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಬಾರದಿದ್ದವರು ಸರ್ಕಾರ ನೀಡಿರುವ 1902 ಅಥವಾ 8147500500 ನಂಬರ್ಗೆ ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್ಎಂಎಸ್ ಮಾಡಿ ತಾವು ನೋಂದಾಯಿಸುವ ಸ್ಥಳ, ಸಮಯವನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ, ಎಸ್ಎಂಎಸ್ ಮಾಡಿದ ಕೆಲವರಿಗೆ 2024ರ ಜನವರಿ ಮತ್ತು ಫೆಬ್ರವರಿಗೆ ಬಂದು ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಿ ಎಂದು ಎಸ್ಎಂಎಸ್ ಬರುತ್ತಿವೆ. ಒಂದು ವೇಳೆ 2024ರಲ್ಲಿ ನೋಂದಣಿ ಮಾಡಿಸಿಕೊಳ್ಳುವಂತಾದರೆ ಕನಿಷ್ಠ ಐದಾರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಅಂದರೆ ಸುಮಾರು 10ರಿಂದ 12 ಸಾವಿರ ರೂ. ಫಲಾನುಭವಿಗಳಿಗೆ ನಷ್ಟವಾಗುತ್ತದೆ. ಹೀಗಾಗಿ, ಸರ್ಕಾರ ನೋಂದಣಿಯ ದಿನಾಂಕವನ್ನು ಮತ್ತೊಮ್ಮೆ…
ಬೆಂಗಳೂರು: ರಾಜಧಾನಿ ಬೆಂಗಳೂರಿನ ದುನಿಯಾ ದಿನೇದಿನೆ ಕಾಸ್ಟ್ಲಿ ಆಗ್ತಿದೆ. ಜನ ಸಾಮಾನ್ಯರಂತೂ ಬದುಕೋಕೆ ಆಗ್ತಿಲ್ಲ. ಏಪ್ರಿಲ್, ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಆದ್ರೀಗ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್ಸಿಎಲ್ ಸಿದ್ದತೆ ನಡೆಸಿದೆ. ರಾಜಧಾನಿ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತಾನೇ ಇದೆ. ಶ್ರೀಸಾಮಾನ್ಯ, ಮಧ್ಯಮ ವರ್ಗದ ಜನರಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ. ಎಲ್ಲವೂ ತುಂಬಾನೇ ಕಾಸ್ಟ್ಲಿ.. ಸರ್ಕಾರಿ ಇಲಾಖೆಗಳಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೇ ಬಂದಿದೆ. ಆದ್ರೆ ಈಗ ಬೆಂಗಳೂರು ಮೆಟ್ರೋ ನಿಗಮದ ಸರದಿ. ಹೌದು..ಈಗಾಗಲೇ ಮೆಟ್ರೋ ಕಾಮಗಾರಿಗಾಗಿ ವೆಚ್ಚ ಮಾಡಿದ ಹಣವನ್ನು ಭರಿಸಿಕೊಳ್ಳುವುದಕ್ಕೆ ಟಿಕೆಟ್ ದರ ಪರಿಷ್ಕರಣೆ ಬಿಟ್ಟರೆ ಬೇರೆ ದಾರಿ ಇಲ್ಲ.ಇದೂ ಇಲ್ಲದೆ 2017 ರಿಂದ ಟಿಕೆಟ್ ದರ ಹೆಚ್ಚಿಸಿರಲಿಲ್ಲ.ಆದ್ರೆ ಟಿಕೆಟ್ ದರ ಹೆಚ್ಚಿಸುವುದು ನಮ್ಮ ಮೆಟ್ರೋಗೆ ಅನಿವಾರ್ಯವಾಗಿದೆ.ಈಗಾಗಲೇ ಯಲಚೇನಹಳ ಟು…
ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಶತಕ (171 ರನ್) ಸಿಡಿಸಿ ಹಲವು ದಾಖಲೆ ಬರೆದಿದ್ದ ಯಂಗ್ ಸೆನ್ಷನಲ್ ಯಶಸ್ವಿ ಜೈಸ್ವಾಲ್ ಭಾರತದ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಗುಣಗಾಣ ಮಾಡಿದ್ದಾರೆ. ಡೊಮಿನಿಕಾದ ವಿಂಡ್ಸರ್ ಪಾರ್ಕಕನಲ್ಲಿ ಯಶಸ್ವಿ ಜೈಸ್ವಾಲ್ (171 ರನ್) ರೆಡ್ ಬಾಲ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲೇ ನಾಯಕ ರೋಹಿತ್ ಶರ್ಮಾ (103) ಜೊತೆಗೂಡಿ ಆರಂಭಿಕ ವಿಕೆಟ್‌ಗೆ 229 ರನ್ ಜೊತೆಯಾಟ ನೀಡಿ ದಾಖಲೆ ಬರೆದಿದ್ದರು. ಆ ಮೂಲಕ ಭಾರತ ತಂಡಕ್ಕೆ ಇನಿಂಗ್ಸ್ ಹಾಗೂ 141 ರನ್ ಗೆಲುವಿಗೆ ನೆರವಾಗಿದ್ದರು. ರವಿಚಂದ್ರನ್ ಅಶ್ವಿನ್ (131 ಕ್ಕೆ 12) ಬೌಲಿಂಗ್ ಹಾಗೂ ಜೈಸ್ವಾಲ್ ಶತಕದ ನೆರವಿನಿಂದ 2 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ. ತಮ್ಮ ಪದಾರ್ಪಣೆ ಪಂದ್ಯದಲ್ಲೇ ಶತಕ (171 ರನ್) ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ದಕ್ಷಿಣ ಆಫ್ರಿಕಾ…
ಬೆಂಗಳೂರು: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ವಿರುದ್ದ ಪ್ರಸ್ತುತ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 2000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಹಾಗೂ ಟೆಸ್ಟ್ ಇತಿಹಾಸದಲ್ಲಿಯೇ ಆರಂಭಿಕನಾಗಿ ಅತಿ ಹೆಚ್ಚು ಸರಾಸರಿ ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ, 143 ಎಸೆತಗಳಲ್ಲಿ 80 ರನ್ ಸಿಡಿಸಿದರು. 45 ರನ್ ಗಳಿಸುತ್ತಿದ್ದಂತೆ ರೋಹಿತ್ ಶರ್ಮಾ 2000 ರನ್‌ಗಳನ್ನು ಪೂರ್ಣಗೊಳಿಸಿದರು. ಒಟ್ಟಾರೆ ಆರಂಭಿಕನಾಗಿ 40 ಇನಿಂಗ್ಸ್‌ಗಳಲ್ಲಿ ರೋಹಿತ್ 2052 ರನ್ ಗಳಿಸಿದ್ದಾರೆ. ಹಾಗೆ ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. 2000 ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಭಾರತೀಯ ಆರಂಭಿಕರಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ…
ಬಾಲಿವುಡ್‌ನ ಸದ್ಯದ ಲೇಟೆಸ್ಟ್ ಜೋಡಿ ಅಂದರೆ ಅದು ವಿಜಯ್ ವರ್ಮಾ ಹಾಗೂ ನಟಿ ತಮನ್ನಾ ಭಾಟಿಯಾ. ಇಬ್ಬರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದು ಇಬ್ಬರು ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಶುರುವಾಗಿದೆ. ಹೋದಲ್ಲಿ ಬಂದಲ್ಲೆಲ್ಲಾ ವಿಜಯ್ ಹಾಗೂ ತಮನ್ನಾ ಮದುವೆಯ ಕುರಿತು ಪ್ರಶ್ನೆ ಮಾಡಲಾಗುತ್ತಿದ್ದು ಇದೀಗ ವಿಜಯ್ ಮದುವೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ವಿಜಯ್ ನೀಡಿದ ಉತ್ತರ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಾನು ಮಾರ್ವಾಡಿ ಕುಟುಂಬದವ.. ನಮ್ಮ ಸಮುದಾಯದಲ್ಲಿ, ಗಂಡು ಮಕ್ಕಳ ಮದುವೆಯ ವಯಸ್ಸು 16 ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ನಾನು ಮದುವೆಯ ವಯಸ್ಸನ್ನು ಮೀರಿತ್ತು. ಬಳಿಕ ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ. ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ. ಆದರೆ ಈಗಲೂ ನನ್ನ…
‘ಅನುರೂಪ’, ‘ಸರ್ವ ಮಂಗಳ ಮಾಂಗಲ್ಯೇ’, ಸುಂದರಿ ಸೇರಿದಂತೆ ಇನ್ನೂ ಕೆಲ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಐಶ್ವರ್ಯಾ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ. ಕನ್ನಡದ ನಟಿ ಇದೀಗ ತೆಲುಗಿನ ದೊಡ್ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಟಿವಿ ಲೋಕದ ಜನಪ್ರಿಯ ‘ಅನುರೂಪ’ ಧಾರವಾಹಿಯಲ್ಲಿ ನಟ ರಿಷಿಗೆ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ಬಳಿಕ ರಮೇಶ್ ಅರವಿಂದ್ ನಿರ್ಮಾಣದ ‘ಸುಂದರಿ’ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದರು. ಜೊತೆಗೆ ಯಶ್ ನಟನೆಯ ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾದಲ್ಲಿ ಯಶ್ ತಂಗಿಯಾಗಿ ನಟಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಐಶ್ವರ್ಯಾ ಕನ್ನಡದ ಜೊತೆ ತೆಲುಗು ಸೀರಿಯಲ್‌ನಲ್ಲೂ ಸದ್ದು ಮಾಡ್ತಿದ್ದಾರೆ. ತೆಲುಗು ಪ್ರೇಕ್ಷಕರ ಪ್ರೀತಿಯನ್ನ ಸಂಪಾದಿಸಿದ್ದು ಇದೀಗ ದೊಡ್ಮನೆಗೆ ಹೋಗುವ ಆಫರ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ನಾಗಾರ್ಜುನ್ ನಿರೂಪಣೆಯ ತೆಲುಗಿನ ಬಿಗ್ ಬಾಸ್ ಸೀಸನ್ 7ರ ಪ್ರೋಮೋ ರಿವೀಲ್ ಆಗಿದೆ. ಫಸ್ಟ್ ಪ್ರೋಮೋಗೆ ಗುಡ್ ರೆಸ್ಪಾನ್ಸ್ ಸಿಕ್ಕಿದ್ದು, ಯಾರೆಲ್ಲಾ ತಾರೆಯರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ…
ಶ್ರೀನಗರ ಕಿಟ್ಟಿ ನಟನೆಯ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಚಿತ್ರತಂಡದಲ್ಲಿ ಅಚ್ಚರಿಯ ತಾರಾ ಬಳಗ ಇರಲಿದೆ. ಈ ಹಿಂದೆ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾಗಿ ನಟಿ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ ರಮ್ಯಾ ಬೇರೆ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣದಿಂದಾಗಿ ರಮ್ಯಾ ಜಾಗಕ್ಕೆ ನಟಿ ರಚಿತಾ ರಾಮ್ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ರಚಿತಾ ರಾಮ್ ಜೊತೆ ಚಿತ್ರತಂಡ ಒಂದು ಸುತ್ತಿನ ಮಾತುಕತೆ ನಡೆಸಿತ್ತು. ಹೀಗಾಗಿ ರಚಿತಾ ರಾಮ್ ಅವರೇ ನಾಯಕಿ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡವೇ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿ ರಚಿತಾ ರಾಮ್ ಅವರನ್ನು ಖಚಿತ ಪಡಿಸಿದೆ. ರಚಿತಾ ರಾಮ್ ಮಾತ್ರವಲ್ಲದೆ ಚಿತ್ರದಲ್ಲಿ ದಕ್ಷಿಣದ ಖ್ಯಾತ ತಾರೆಗಳಾದ ಪ್ರಕಾಶ್ ರೈ ಹಾಗೂ ರಮ್ಯಾಕೃಷ್ಣ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಯಾರು, ಯಾವ ಪಾತ್ರಗಳನ್ನು ಮಾಡಲಿದ್ದಾರೆ ಎಂದು ನಾಗಶೇಖರ್ ಹೇಳದೇ ಇದ್ದರೂ, ಇಬ್ಬರೂ ನಟಿಸುವುದು ಪಕ್ಕಾ ಎಂದಿದ್ದಾರೆ. ಈಗಾಗಲೇ ಹಾಡುಗಳಿಗೆ ಸಂಗೀತ ಸಂಯೋಜನೆಯ ಕೆಲಸ ಪ್ರಾರಂಭವಾಗಿದೆ.…
ರೋಮ್ : ಇಟಲಿಯ ದಕ್ಷಿಣದಲ್ಲಿರುವ ಸಿಸಿಲಿ ಕಡಲತೀರದ ಬಳಿ ಸಮುದ್ರದ ನೀರಿನಲ್ಲಿ ತೇಲುತ್ತಿದ್ದ 5.3 ಟನ್ ಗಳಷ್ಟುಮಾದಕ ಪದಾರ್ಥ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದ್ದು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಇಟಲಿಯ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಅಮೆರಿಕಾದಿಂದ ಪ್ರಯಾಣ ಆರಂಭಿಸಿರುವ ಹಡಗು ಸಿಸಿಲಿ ಕಡಲ ತೀರ ಸಮೀಪಿಸುತ್ತಿರುವಂತೆಯೇ ಹಡಗಿನಿಂದ ಪ್ಯಾಕೆಟ್ ಗಳನ್ನು ನೀರಿಗೆ ಎಸೆಯುತ್ತಿರುವ ಬಗ್ಗೆ ಕಣ್ಗಾವಲು ವಿಮಾನವು ಇಟಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಅದರಂತೆ ಪೊಲೀಸರು ದೋಣಿಯಲ್ಲಿ ಆ ಸ್ಥಳದತ್ತ ಹೋದಾಗ ನೀರಿನಲ್ಲಿ ತೇಲುತ್ತಿದ್ದ ಪ್ಯಾಕೆಟ್ ಗಳನ್ನು ಮೀನುಗಾರಿಕೆಯ ಟ್ರಾಲರ್ ಬೋಟ್ ನವರು ಬಲೆ ಬಳಸಿ ಹಿಡಿಯುತ್ತಿದ್ದರು. ಈ ಪ್ಯಾಕೆಟ್ ಗಳನ್ನು ಟ್ರಾಲರ್ ಬೋಟ್ ನಲ್ಲಿದ್ದ ರಹಸ್ಯ ಕಂಪಾರ್ಟ್ ಮೆಂಟ್ ನಲ್ಲಿ ಇಡಲಾಗಿದ್ದು, ಇದರ ಒಟ್ಟು ಮೌಲ್ಯ 946 ದಶಲಕ್ಷ ಡಾಲರ್ಗಳಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೊತೆ ಜೊತೆಯಲಿ ಧಾರವಾಹಿ ಮೂಲಕ ಸಖತ್ ಖ್ಯಾತಿ ಘಳೀಸಿದ್ದ ನಟ ಅನಿರುದ್ಧ್ ಇದೀಗ ಮತ್ತೆ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದಾರೆ. ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ದೊಡ್ಡ ನಾಯಕ ನಟನಾಗಿ ಮಿಂಚುವ ಭರವಸೆ ಮೂಡಿಸಿದ್ದ ಅನಿರುದ್ಧ್ ಆ ಬಳಿಕ ಮಂಕಾಗಿದ್ದರು. ಆದರೆ ಅನಿರುದ್ಧ್ ಕೈ ಹಿಡಿದಿದ್ದು ಜೊತೆ ಜೊತೆಯಲಿ ಧಾರವಾಹಿ. ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ್ ಪಾತ್ರ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿತ್ತು. ಇದೀಗ ಅನಿರುದ್ಧ್ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅನಿರುದ್ದ್ ನಟನೆಯ ಹೊಸ ಸಿನಿಮಾಗೆ ಇತ್ತೀಚೆಗಷ್ಟೆ ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ಚಾಲನೆ ಸಿಕ್ಕಿದೆ. ಈ ಹಿಂದೆ ರಾಘು ಹೆಸರಿನ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಎಂ.ಆನಂದ್ ರಾಜ್ ಇದೀಗ ಅನಿರುದ್ಧ್ ನಟನೆಯ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಇತ್ತೀಚೆಗೆ ಮೈಸೂರಿನ ಡಾ ವಿಷ್ಣುವರ್ಧನ್ ಸ್ಮಾರಕದಲ್ಲಿ ನೆರವೇರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಈ…