ಈಜಿಪ್ಟ್: ಇಲ್ಲಿನ ಪ್ರಸಿದ್ಧ ರೆಡ್ ಬೀಚ್ ರೆಸಾರ್ಟ್ ನಲ್ಲಿ ಶಾರ್ಕ್ ವೊಂದು 23 ವರ್ಷದ ರಷ್ಯಾದ ಪ್ರವಾಸಿಗನನ್ನು ತನ್ನ ತಂದೆಯ ಮುಂದೆಯೇ ಕೊಂದು ತಿಂದಿರುವ ಘಟನೆ ನಡೆದಿದ್ದು ಇದರಿಂದ ಜನ ಕಂಗಾಲಾಗಿದ್ದಾರೆ. ಈ ಭಯಾನಕ ದೃಶ್ಯ ಕಂಡು ಜನ ಭಯಭೀತರಾಗಿದ್ದು ಮಗನನ್ನು ರಕ್ಷಿಸುವಂತೆ ತಂದೆ ಜೋರಾಗಿ ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಿ ಬಂದಿದೆ. ಆದರೆ ಕ್ಷಣಾರ್ದದಲ್ಲಿ ಶಾರ್ಕ್ ಆತನನ್ನು ತಿಂದು ಮುಗಿಸಿದೆ. ಶಾರ್ಕ್ ಅವನನ್ನು ಪದೇ ಪದೇ ನೀರಿಗೆ ಎಸೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆತ ಈಜಲು ಪ್ರಾರಂಭಿಸಿದಾಗ ಆತನನ್ನು ಶಾರ್ಕ್ ತನ್ನ ಕಡೆಗೆ ಎಳೆಯುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಹೀಗೆ ದೃಶ್ಯದಲ್ಲಿ ಸ್ವಲ್ಪ ಸಮಯದಲ್ಲೇ ಶಾರ್ಕ್ ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. 23 ವರ್ಷದ ವ್ಲಾದಿಮಿರ್ ಪೊಪೊವ್ ಈಜಲು ಹೋಗಿದ್ದರು. ಆಗ ಹುಲಿ ಶಾರ್ಕ್ ಅವನನ್ನು ನೀರಿನಲ್ಲಿ ಕೊಂದಿದೆ. ಅಷ್ಟರಲ್ಲಿ ಆತನ ಗೆಳತಿಯ ಪ್ರಾಣ ಉಳಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪರಾರಿಯಾಗಿದ್ದು, ಪೊಪೊವ್ ಅವರ ತಂದೆ ಈ ಭೀಕರ ದಾಳಿಯನ್ನು ಬಹಳ ಹತ್ತಿರದಿಂದ…
Author: Prajatv Kannada
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದೇ ಹೋಗಿದ್ದು ಹಾಗೂ ಶ್ವೇತ ಭವನ ತೊರೆದ ಬಳಿಕವೂ ತಮ್ಮ ದಾಖಲೆಗಳನ್ನು ಫ್ಲೋರಿಡಾದ ನಿವಾಸದಲ್ಲೇ ಉಳಿಸಿಕೊಳ್ಳುವ ಮೂಲಕ ಕಾನೂನಿನ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡಿದ ಆರೋಪದ ಮೇಲೆ ಫೆಡರಲ್ ಗ್ರ್ಯಾಂಡ್ ಜ್ಯೂರಿ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್ ತಾಣು ಅಮಾಯಕ ಎಂದಿದ್ದಾರೆ. ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಈ ರೀತಿ ದೋಷಾರೋಪಣೆಗೆ ಗುರಿಯಾದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಪಾತ್ರರಾಗಿದ್ದಾರೆ. ಇದರಿಂದ ಅಮೆರಿಕ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿಯೇ ಟ್ರಂಪ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶ್ವೇತಭವನದಿಂದ ನಿರ್ಗಮಿಸಿದ ನಂತರ ತಮ್ಮ ಫ್ಲೋರಿಡಾ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಟ್ರಂಪ್, ಸರ್ಕಾರದ ಕೆಲವು ರಹಸ್ಯ ಹಾಗೂ ಸೂಕ್ಷ್ಮ ದಾಖಲೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು ಹಾಗೂ ಸರ್ಕಾರದ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರು ಎಂಬ ಆರೋಪದಲ್ಲಿ ಫೆಡರಲ್ ಗ್ರ್ಯಾಂಡ್ ನ್ಯಾಯಾಧೀಶರು ಅವರ ವಿರುದ್ಧ ದೋಷಾರೋಪಣೆ ನಿಗದಿಪಡಿಸಿದ್ದಾರೆ. ರಹಸ್ಯ ಹಾಗೂ…
ಮುಂಬೈ: ಇಲ್ಲಿನ ಮೀರಾ ರೋಡ್‌ನಲ್ಲಿರುವ ಗೀತಾ ನಗರದಲ್ಲಿ ನಡೆದ ಕೊಲೆ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲಾಗಿದೆ. ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯನ್ನೂ ಮೀರಿಸುವಂತಿರುವ ಈ ಕೇಸ್‌ನಲ್ಲಿ ಮತ್ತಷ್ಟು ರೋಚಕ ಮಾಹಿತಿಗಳು ಬೆಳಕಿಗೆ ಬಂದಿವೆ. ಹೌದು. ಮುಂಬೈನಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಸರಸ್ವತಿ ವೈದ್ಯ (32) (Saraswathi Vaidya) ಹಾಗೂ ಮನೋಜ್ ಸಾನೆ (56) (Manoj Sahni) ಇಬ್ಬರೂ ವಿವಾಹವಾಗಿದ್ದರು. ಆದ್ರೆ ವಯಸ್ಸಿನ ಅಂತರದಿಂದ ಹೊರಗೆ ಹೇಳಿಕೊಳ್ಳಲಾಗದೇ ಮುಚ್ಚಿಟ್ಟಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ ಸರಸ್ವತಿ ತನ್ನ ನಾಲ್ವರು ಸಹೋದರಿಯರೊಂದಿಗೆ ಸಂಪರ್ಕದಲ್ಲಿದ್ದು, ಅವರಲ್ಲಿ ಮೂವರನ್ನ ಶುಕ್ರವಾರ ವಿಚಾರಣೆಗೆ ಒಳಪಡಿಸಿದಾಗ ಮದುವೆಯಾಗಿದ್ದ ರಹಸ್ಯ ಬಯಲಾಗಿದೆ. ಅವರಿಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ವಿಷಯವನ್ನ ತನ್ನ ಸಹೋದರಿಯರಿಗೆ ಮಾತ್ರ ತಿಳಿಸಿದ್ದರು. ವಯಸ್ಸಿನ ಅಂತರದಿಂದ ಬೇರೆಯವರಿಗೆ ಹೇಳಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ಜಯಂತ್ ಬಬಲೆ ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ ಮನೋಜ್ ಸಾನೆ, ಆಕೆಯ ಚಿಕ್ಕಪ್ಪನೇ ಆಗಿದ್ದು, ಮುಂಬೈನಲ್ಲಿ ಬಟ್ಟೆ ಅಂಗಡಿ ಹೊಂದಿದ್ದ. ಅಹ್ಮದ್‌ನಗರದಿಂದ ಶಾಲೆ ಬಿಟ್ಟ ಸರಸ್ವತಿ ಮುಂಬೈಗೆ…
ಚಂಡೀಗಢ: ತಮ್ಮ ಪತಿ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನವನ್ನು ಭಗವಂತ್ ಮಾನ್ (Bhagwant Mann) ಅವರಿಗೆ ಉಡುಗೊರೆಯಾಗಿ ನೀಡಿರುವುದಾಗಿ ಸಿಧು ಪತ್ನಿ ನವಜೋತ್ ಕೌರ್ (Navjot Kaur) ಹೇಳಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕಾಂಗ್ರೆಸ್ (Congress) ನಾಯಕ ನವಜೋತ್ ಸಿಂಗ್ ಸಿಧು ನಡುವಿನ ಮಾತಿನ ಚಕಮಕಿಯ ನಡುವೆ ಕೌರ್ ಸರಣಿ ಟ್ವೀಟ್‌ಗಳ ಮೂಲಕ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿಧು ಅವರಿಗೇ ಪಂಜಾಬ್‌ನ ಚುಕ್ಕಾಣಿ ನೀಡಲು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಬಯಸಿದ್ದರು. ಆದ್ರೆ ಸಿಧು ಅವರು ತಮ್ಮ ಪಕ್ಷಕ್ಕೆ ದ್ರೋಹ ಬಗೆಯದಿರಲು ನಿರ್ಧರಿಸಿದ್ದರು. ಹಾಗಾಗಿ ಭಗವಂತ್ ಮಾನ್ ಅವರು ಸಿಎಂ ಆದರು ಎಂದು ಪತಿಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಿಎಂ ಭಗವಂತ್ ಮಾನ್ ಅವರೇ ಮುಚ್ಚಿಟ್ಟ ರಹಸ್ಯವೊಂದನ್ನು ನಾನಿಂದು ಬಹಿರಂಗಪಡಿಸುತ್ತೇನೆ. ನೀವು ಇಂದು ಅಲಂಕರಿಸಿರುವ ಬಹಳ ಗೌರವಾನ್ವಿತ ಕುರ್ಚಿಯನ್ನು ನಿಮ್ಮ ಹಿರಿಯ ಸಹೋದರ ನವಜೋತ್ ಸಿಂಗ್ ಸಿಧು…
ಮುಂಬೈ: ಎನ್‍ಸಿಪಿ ನೇತಾರ ಶರದ್ ಪವಾರ್ (Sharad Pawar) ಶಿವಸೇನೆ ಉದ್ಧವ್ ಬಣದ ಮುಖಂಡ ಸಂಜಯ್ ರಾವತ್‍ಗೆ (Sanjay Raut) ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ವಿಚಾರವಾದಿ ನರೇಂದ್ರ ದಾಬೋಲ್ಕರ್‌ಗೂ ಆದ ಗತಿಯೇ ನಿಮಗೂ ಆಗಲಿದೆ ಎಂದು ಶರದ್ ಪವಾರ್‌ಗೆ ಟ್ವಿಟ್ಟರ್ ಮೂಲಕ ಹತ್ಯೆ ವಾರ್ನಿಂಗ್ ನೀಡಿದ್ದಾರೆ. ಇದೇ ವೇಳೆ ಪವಾರ್ ಪುತ್ರಿ, ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ವಾಟ್ಸಪ್ ನಂಬರ್‌ಗೆ ಪವಾರ್ ಅವರನ್ನು ಹತ್ಯೆ ಮಾಡುವುದಾಗಿ ಸಂದೇಶಗಳು ಬಂದಿವೆ. ಈ ಬೆದರಿಕೆ ಸಂದೇಶಗಳ ಸಂಬಂಧ ತನಿಖೆ ನಡೆಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ. ಸಂಜಯ್ ರಾವತ್‍ರನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ರಾವತ್ ಸಹೋದರ, ಶಾಸಕ ಸುನೀಲ್ ದೂರು ನೀಡಿದ್ದಾರೆ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವೀಸ್ ಪ್ರತಿಕ್ರಿಯಿಸಿ, ಯಾವುದೇ ನಾಯಕರಿಗೆ ಬೆದರಿಕೆ ಹಾಕುವುದನ್ನು ಸಹಿಸುವುದಿಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಆಗಾಗ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ಭಾರತ್ ಜೋಡೋ ಯಾತ್ರೆ ಮತ್ತು ಕರ್ನಾಟಕ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಮೊಹಬ್ಬತ್ ಕಿ ದುಖಾನ್’ ಹೇಳಿಕೆಯ ಬಗ್ಗೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ “ಮೊಹಬ್ಬತ್” (ಪ್ರೀತಿ) ಎಂದರೆ ಹಿಂದೂ ಜೀವನ ವಿಧಾನವನ್ನು ಖಂಡಿಸುವುದು, ಸಿಖ್ಖರ ಹತ್ಯೆ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಹೊರಗಿನ ಹಸ್ತಕ್ಷೇಪವನ್ನು ಬಯಸುವುದೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ನಿಮ್ಮದು ಯಾವ ರೀತಿಯ ಪ್ರೀತಿ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಅದರಲ್ಲಿ ರಾಜಸ್ಥಾನದಲ್ಲಿ ಮಹಿಳೆಯರ ಅಪಹರಣವೂ ಸೇರಿದೆಯೇ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಅದು ಹಿಂದೂ ಜೀವನ ವಿಧಾನವನ್ನು ಖಂಡಿಸುತ್ತದೆಯೇ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಭಾರತವನ್ನು ಒಡೆಯಲು ಬಯಸುವವರ ಜೊತೆ ಪಾಲುದಾರಿಕೆ ಎಂದು ಅರ್ಥವೇ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ ಪ್ರಜಾಪ್ರಭುತ್ವದ ವಿರುದ್ಧ ಹೊರಗಿನ ಹಸ್ತಕ್ಷೇಪವನ್ನು ಹುಡುಕಲು ಆ ‘ಮೊಹಬ್ಬತ್’ ನಿಮ್ಮನ್ನು ಒತ್ತಾಯಿಸುತ್ತದೆಯೇ ಎಂದು…
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದು, ದೇಶದ ಆಂತರಿಕ ವಿಷಯಗಳನ್ನು ಹೊರ ಜಗತ್ತಿಗೆ ಕೊಂಡೊಯ್ಯುವುದು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, ‘ಜಗತ್ತು ನಮ್ಮನ್ನು ಗಮನಿಸುತ್ತಿದೆ’ ಎಂದು ಹೇಳಿದರು. ‘ರಾಹುಲ್ ಗಾಂಧಿ ಅವರು ದೇಶದಿಂದ ಹೊರಗೆ ಹೋದಾಗಲೆಲ್ಲ ದೇಶವನ್ನು ಟೀಕಿಸುವುದು ಮತ್ತು ನಮ್ಮ ರಾಜಕೀಯದ ಬಗ್ಗೆ ಕಾಮೆಂಟ್ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಜಗತ್ತು ನಮ್ಮನ್ನು ನೋಡುತ್ತಿದೆ. ಚುನಾವಣೆಗಳು ನಡೆಯುತ್ತಲೇ ಇರುತ್ತವೆ, ಕೆಲವೊಮ್ಮೆ ಒಂದು ಪಕ್ಷ ಗೆದ್ದರೆ ಮತ್ತೆ ಕೆಲವು ಬಾರಿ ಇನ್ನೊಂದು ಪಕ್ಷ ಗೆಲ್ಲುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ ಇಂತಹ ಬದಲಾವಣೆ ಬರುತ್ತಿರಲಿಲ್ಲ. ಎಲ್ಲಾ ಚುನಾವಣೆಯ ಫಲಿತಾಂಶಗಳು ಒಂದೇ ಆಗಿರುತ್ತಿತ್ತು. 2024 ರ ಫಲಿತಾಂಶ ತೋ ವಹೀ ಹೋಗಾ, ಹಮೇಂ ಪತಾ ಹೈ…’ ಎಂದು ಜೈಶಂಕರ್ ಹೇಳಿದರು.
ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದಾರೆ. ವರುಣ ಕ್ಷೇತ್ರದ ಜನತೆಗೆ ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ಸಮಾವೇಶ ನಡೆಸಲಿದ್ದಾರೆ. ಬೆಳಗ್ಗೆ 11.30 ಬೆಂಗಳೂರಿನಿಂದ ತೆರಳುವ ಸಿಎಂ ಸಿದ್ದರಾಮಯ್ಯ, ಮಧ್ಯಾಹ್ನ 12.20ಕ್ಕೆ ಸುತ್ತೂರು ಹೆಲಿಪ್ಯಾಡ್ಗೆ ತಲುಪಲಿದ್ದಾರೆ. ಮಧ್ಯಾಹ್ನ 12.35ಕ್ಕೆ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ಸಂಜೆ 4 ಗಂಟೆಗೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಜೂ.11ರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಹೊಂದಿರುವ ನಾಲ್ ರೋಡ್ ಹಾಗೂ ಗರಿಕೆಕಂಡಿ ರಸ್ತೆ ಮಾರ್ಗ ಮಧ್ಯೆ ಚೆಕ್ ಪೋಸ್ಟ್ ಸಮೀಪದಲ್ಲಿ ಪುಂಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡಿ ಬೈಕ್ ಜಖಂ ಗೊಂಡಿದೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತಿದ್ದಂತಹ ಬೈಕ್ ಸವಾರರ ಮೇಲೆ ಕಾಡಾನೆ ದಾಳಿ ಮಾಡಿದ್ದು ಭಯಭೀತರಾದ ಬೈಕ್ ಸವಾರರು ತಮ್ಮ ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಂತರ ಅಕ್ಕ ಪಕ್ಕದಲ್ಲಿ ಇದ್ದಂತ ಇತರೆ ವಾಹನ ಸವಾರರು ಕೂಗಾಡಿ ಆನೆಯನ್ನು ಚದುರಿಸಿದ್ದಾರೆ. ಇನ್ನು ವಿಷಯ ತಿಳಿದ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ ಎಂದು ತಿಳಿದುಬಂದಿದೆ
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಏಕಾಏಕಿ ಮಳೆಗೆ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ.ಅಡ್ಡಾದಿಡ್ಡಿ ಮಳೆಗೆ ಚಿಂಚೋಳಿ ತಾಲೂಕಿನ ದೇಗುಲಮಡಿ ಸೇತುವೆ ಕೊಚ್ಚಿಹೋಗಿದೆ. ಮಳೆ ಬಂದ ಪರಿಣಾಮ ದೇಗುಲಮಡಿ ಗ್ರಾಮದ ಸಂಚಾರ ಕಡಿತಗೊಂಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು.. ಹೀಗಾಗಿ ಸಂಚಾರಕ್ಕೆ ಅನುವಾಗಲು ಪಕ್ಕದಲ್ಲಿ ಚಿಕ್ಕದೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ವಿಚಿತ್ರ ಅಂದ್ರೆ ಆ ಚಿಕ್ಕ ಸೇತುವೆ ಇದೀಗ ಮಳೆಗೆ ನೆಲಕಚ್ಚಿದೆ.