ಮೀಥೇನ್ ಮತ್ತು ಕಪ್ಪು ಇಂಗಾಲದಂತಹ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಲು ಭಾರತ ಕ್ರಮ ಕೈಗೊಳ್ಳಬೇಕು ಎಂದು ಸಿಒಪಿ 29 ಹವಾಮಾನ ಶೃಂಗಸಭೆಯಲ್ಲಿ ತಜ್ಞರು ಒತ್ತಾಯಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯವು ದಿನೇ ದಿನೇ ಹದಗೆಡುತ್ತಿದೆ. ಗಾಳಿಯ ಗುಣಮಟ್ಟ ಕುಸಿತ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿರುವ ಮೀಥೇನ್ ಮತ್ತು ಕಪ್ಪು ಇಂಗಾಲದಂತಹ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳನ್ನು (ಎಸ್‌ಎಲ್ಸಿಪಿ) ಕಡಿಮೆ ಮಾಡುವಲ್ಲಿ ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳು (ಎಸ್‌ಎಲ್ಸಿಪಿಗಳು) ಹಸಿರುಮನೆ ಅನಿಲಗಳು ಮತ್ತು ವಾಯು ಮಾಲಿನ್ಯಕಾರಕಗಳ ಗುಂಪಾಗಿದ್ದು, ಇದು ಹವಾಮಾನದ ಮೇಲೆ ದೀರ್ಘಕಾಲೀನ ತಾಪಮಾನದ ಪರಿಣಾಮವನ್ನು ಬೀರುತ್ತದೆ ಮತ್ತು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಎಸ್‌ಎಲ್ಸಿಪಿಗಳಲ್ಲಿ ಕಪ್ಪು ಇಂಗಾಲ, ಮೀಥೇನ್, ನೆಲಮಟ್ಟದ ಓಝೋನ್ ಮತ್ತು ಹೈಡ್ರೋಫ್ರೋರೋಕಾರ್ಬನ್ಗಳು (ಎಚ್‌ಎಫ್ಸಿಗಳು) ಸೇರಿವೆ. ನವದೆಹಲಿಯ ಗಾಳಿಯ ಗುಣಮಟ್ಟವು ಈ ಋತುವಿನಲ್ಲಿ ಮೊದಲ ಬಾರಿಗೆ ತೀವ್ರ ಮಟ್ಟವನ್ನು ತಲುಪಿದೆ, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬುಧವಾರ 418…
Author: Prajatv Kannada
ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿದ್ದ ಬ್ರಿಟನ್ ಮೂಲದ ಖ್ಯಾತ ಬಾಣಸಿಗ ಅಲೆಕ್ಸಿ ಜಿಮಿನ್ ಸರ್ಬಿಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮೃತ ಜಿಮಿನ್ ಅವರಿಗೆ 52 ವರ್ಷ ವಯಸ್ಸಾಗಿತ್ತು. 2014ರಲ್ಲಿ ರಷ್ಯಾ ತೊರೆದಿದ್ದ ಜಿಮಿನ್ ಲಂಡನ್‌ನಲ್ಲಿ ಸ್ವಂತ ಹೊಟೇಲ್ ನಡೆಸುತ್ತಿದ್ದರು. ಹಾಗೂ ರಷ್ಯಾದ ಎನ್‌ಟಿವಿಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪರಾಗಿ ಕೆಲಸ ಮಾಡುತ್ತಿದ್ದರು. ರಷ್ಯಾ-ಉಕ್ರೇನ್ ಯುದ್ಧದ ವೇಳೆ ಪುಟಿನ್ ಅವರನ್ನು ಟೀಕೆ ಮಾಡುತ್ತಿದ್ದ ಜಿಮಿನ್ ಸಾಮಾಜಿಕ ಮಾಧ್ಯಗಳಲ್ಲಿ ಸರಣಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು. ಈ ಟೀಕೆ ಬಳಿಕ ಎನ್‌ಟಿವಿಯು ಜಿಮಿನ್ ಅವರ ಕಾರ್ಯಕ್ರಮವನ್ನು ರದ್ದುಪಡಿಸಿತ್ತು. ಜಿಮಿನ್ ಅವರು ತಮ್ಮ ನೂತನ ‘ಅಂಗ್ಲೋಮೇನಿಯಾ’ ಪುಸ್ತಕವನ್ನು ಪ್ರಚಾರ ಮಾಡಲು ಇತ್ತೀಚೆಗೆ ಸರ್ಬಿಯಾ ರಾಜಧಾನಿ ಬೆಲ್ಗ್ರೇಡ್‌ಗೆ ಪ್ರಯಾಣಿಸಿದ್ದರು. ಇಲ್ಲಿನ ಹೋಟೆಲ್ ಕೊಠಡಿಯಲ್ಲಿ ಜಿಮಿನ್ ಮೃತಪಟ್ಟಿದ್ದಾರೆ. ಜಿಮಿನ್ ಸಾವಿಗೆ ನಿಖರ ಕಾರಣಗಳು ತಿಳಿದಿಲ್ಲ, ಯಾವುದೇ ಅನುಮಾನಾಸ್ಪದ ಸಂಗತಿಗಳು ಅಲ್ಲಿ ನಡೆದಿಲ್ಲ, ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ತಿಳಿಯಲಿದೆ ಎಂದು ಸರ್ಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿ ಬುಶ್ರಾ ಬೀಬಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ. ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರುಖ್ ಅರ್ಜುಮಂದ್ ಅವರು, ಇಮ್ರಾನ್ ಖಾನ್ ಹಾಗೂ ಬುಶ್ರಾ ವಿರುದ್ಧ ಸೋಮವಾರ ದೋಷಾರೋಪ ನಿಗದಿ ಮಾಡುವುದಾಗಿ ತಿಳಿಸಿದರು. ಇಸರ್ಕಾರದ ಮುಖ್ಯಸ್ಥರು, ಪ್ರಮುಖರಿಗೆ ಬರುವ ಉಡುಗೊರೆಗಳು ತೋಷಖಾನಾ ಇಲಾಖೆ ಸುಪರ್ದಿಗೆ ಹೋಗಲಿವೆ. ಇಂತಹ ಉಡುಗೊರೆಗಳ ಪೈಕಿ ದುಬಾರಿ ಮೌಲ್ಯದ ಗಡಿಯಾರವೊಂದನ್ನು ಇಮ್ರಾನ್ ಹೆಚ್ಚಿನ ಬೆಲೆಗೆ ಮಾರಿಕೊಂಡು, ಲಾಭ ಗಳಿಸಿದ್ದರು ಎಂಬ ಆರೋಪ ಇದೆ. ಇದನ್ನು ತೋಷಖಾನಾ ಪ್ರಕರಣ ಎನ್ನಲಾಗುತ್ತದೆ.
ಬಾಲಿವುಡ್ನ ಖ್ಯಾತ ನಟಿ ಜಾಕ್ವೆಲಿನ್ ಫಾರ್ನಾಂಡಿಸ್ ಸುಕೇಶ್ ಗೆಳೆತನದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ. ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಆಪ್ತವಾಗಿದ್ದರು. ಸುಕೇಶ್ ಕೊಟ್ಟಿದ್ದ ಐಷಾರಾಮಿ ಉಡುಗೊರೆಗಳನ್ನು ಕೂಡ ಜಾಕ್ವೆಲಿನ್ ಪಡೆದಿದ್ದರು. ಅವುಗಳಿಗೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಅದನ್ನು ಪ್ರಶ್ನಿಸಿ ನಟಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ನಡೆದಿದೆ. ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಚಾರ್ಜ್ಶೀಟ್ ರದ್ದು ಮಾಡಬೇಕು ಎಂಬುದು ಜಾಕ್ವೆಲಿನ್ ಫರ್ನಾಂಡಿಸ್ ಅವರ ಮನವಿ. ಇದಕ್ಕೆ ಸಂಬಂಧಿಸಿದಂತೆ ಅವರ ವಾದ ಏನು ಎಂಬುದನ್ನು ವಕೀಲರು ತಿಳಿಸಿದ್ದಾರೆ. ಅಂದಾಜು 200 ಕೋಟಿ ರೂಪಾಯಿ ಸುಲಿಗೆ ಮತ್ತು ವಂಚನೆ ಕೇಸ್ನಲ್ಲಿ ಸುಕೇಶ್ ಅಂದರ್ ಆಗಿದ್ದಾನೆ. ಆದರೆ ಆತ ವಂಚನೆಯಿಂದ ತಂದ ದುಡ್ಡಿನಲ್ಲಿ ತಮಗೆ ಗಿಫ್ಟ್ ಕೊಟ್ಟಿದ್ದ ಎಂಬ ವಿಚಾರ ತಿಳಿದಿರಲಿಲ್ಲ ಎಂದು ಜಾಕ್ವೆಲಿನ್ ಹೇಳಿದ್ದಾರೆ. ಎಲ್ಲವೂ ಚೆನ್ನಾಗಿ ಇದ್ದಾಗ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ಜೊತೆ ಸ್ನೇಹ ಬೆಳೆಸಿದ್ದರು. ಇಬ್ಬರೂ ಆಪ್ತವಾಗಿ ಕಾಣಿಸಿಕೊಂಡ…
ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾದ ಮೂಲಕ ಸದ್ದು ಮಾಡಿದ ಬಾಲಿವುಡ್ ಬ್ಯೂಟಿ ಅನನ್ಯ ಪಾಂಡೆ ಸದ್ಯ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅನನ್ಯಾ ಪಾಂಡೆ ದುಬೈನ ಬೀಚ್‌ನಲ್ಲಿಯೇ ಸಿಕ್ಕಾಪಟ್ಟೆ ಹಾಟ್ ಆಗಿಯೇ ಓಡಾಡ್ತಿದ್ದಾರೆ. ಬಿಕಿನಿ ತೊಟ್ಟು ಬೀಚ್‌ನ ಮರಳಿನ ಮೇಲೆ ಬಿಂದಾಸ್ ಆಗಿ ವಾಕ್ ಮಾಡಿದ್ದಾರೆ. ದುಬೈನಲ್ಲಿ ಸಿಕ್ಕ ಆತಿಥ್ಯದ ಬಗ್ಗೆ ಅನನ್ಯ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಧನ್ಯವಾದಗಳು ಈ ಒಂದು ಆತಿಥ್ಯಕ್ಕೆ ಅಂತಲೂ ಹೇಳಿದ್ದಾರೆ. ಆದಷ್ಟು ಬೇಗ ವಾಪಾಸ್ ಮುಂಬೈಗೆ ಮರಳುತ್ತೇನೇ ಅಂತಲೂ ಬರೆದುಕೊಂಡಿದ್ದಾರೆ. ಅನನ್ಯ ಪಾಂಡೆ ಇಲ್ಲಿ ಒಂದಷ್ಟು ಬಿಕಿನಿ ಫೋಟೋ ಹಾಕಿದ್ದಾರೆ. ಆದರೆ, ಇತರ ಫೋಟೋ ಇಂಟ್ರಸ್ಟಿಂಗ್ ಅನಿಸುತ್ತವೆ. ಉಳಿದಕೊಂಡ ಹೋಟೆಲ್, ತಿಂದ ತಿಂಡಿ ತಿನಿಸುಗಳು, ಓಡಾಡಿದ ಜಾಗ, ಮಲಗಿ ಕೊಂಡು ಓದಿದ ಪುಸ್ತಕ ಹಿಂಗೆ ಇನ್ನು ಹಲವು ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಅನನ್ಯ ಪಾಂಡೆ ಸಿನಿಮಾಗಳು ಹಿಟ್ ಏನೂ ಆಗಿಲ್ಲ ನೋಡಿ. ಲೈಗರ್ ಮಕಾಡೆ ಮಲಗಿತ್ತು. ಸ್ಟುಟೆಂಟ್ ಆಫ್ ದಿ ಇಯರ್-2 ಚಿತ್ರದ ಮೂಲಕ ಪರಿಚಯ…
ಬೆಂಗಳೂರು:- ಕೊವಿಡ್ ಹಗರಣದ ತನಿಖೆಗೆ SIT ರಚನೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಅಸ್ತು ಎಂದಿದೆ. ಸಿಎಂಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಹಗರಣದ ಬಗ್ಗೆ ಚರ್ಚೆ ನಡೆದಿದ್ದು, ತನಿಖೆಗಾಗಿ SIT ತಂಡ ರಚಿಸಲು ಸಂಪುಟ ಅಸ್ತು ಅಂದಿದೆ. https://youtu.be/n6EJlM8u4QI?si=-keGsTzUT4irEHKH ಕೊವಿಡ್ ಹಗರಣದ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಎಸ್‌ಐಟಿ ಗೆ ವಹಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಕೊವಿಡ್ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಕೊವಿಡ್ ಹಗರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗುವುದು. ವರದಿ ಆಧರಿಸಿ ಎಸ್‌ಐಟಿ ತನಿಖೆ ಆಗಲಿದೆ . ಅಗತ್ಯ ಬಿದ್ದರೆ FIR ದಾಖಲಾಗುತ್ತೆ, ಚಾರ್ಜ್ಶೀಟ್ ಕೂಡ ಹಾಕ್ತೇವೆ.…
ಬೆಂಗಳೂರು:- ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸೋ ಷಡ್ಯಂತ್ರ ನಡೆದಿದೆ ಎಂದು DCM ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. https://youtu.be/GR6Wdhp8Mw0?si=TTJ7k1vrPMr04tga ಈ ಸಂಬಂಧ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಬಿಜೆಪಿ ಅವರು ಆಫರ್ ಕೊಡ್ತಿರೋದು ನಿಜ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಆರೋಪವನ್ನು ಸಮರ್ಥನೆ ಮಾಡಿಕೊಂಡರು. ಬಿಜೆಪಿ ಅವರು 50 ಕೋಟಿ ಅಫರ್ ನಮ್ಮ ಶಾಸಕರಿಗೆ ಮಾಡ್ತಿದ್ದಾರೆ. ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದೆ ತಿಳಿಸುತ್ತೇನೆ ಎಂದರು. ನಮ್ಮ ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ಆಫರ್ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ‘ಕೈ’ ನಾಯಕರು ಕಿಡಿಕಾರಿದ್ದಾರೆ.
ಧಾರವಾಡದ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಯರ್ಸ್ ಕಚೇರಿಯ ಆವರಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹಾತ್‌ಕರ್ಗಾ ಕೈಮಗ್ಗ ಮೇಳ ಹಾಗೂ ಕೈಮಗ್ಗಗಳ ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿದರು. https://youtu.be/XJhthj-ZlSc?si=48_4kMiVwrLIo1bW ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಿ ಆಯೋಜನೆ ಮಾಡಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ನ.4 ರಿಂದ ಆರಂಭವಾಗಿರುವ ಈ ಮೇಳದಲ್ಲಿ ಇಲ್ಲಿಯವರೆಗೂ 62 ಲಕ್ಷ ರೂಪಾಯಿಯಷ್ಟು ವ್ಯಾಪಾರವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ಇತರ ರಾಜ್ಯಗಳಿಂದಲೂ ಕೈಮಗ್ಗ ಉತ್ಪನ್ನಗಳು ಇಲ್ಲಿ ಮಾರಾಟಕ್ಕೆ ಬಂದಿವೆ. ಮಂಗಳವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಕೂಡ ಮಾರಾಟ ಮೇಳಕ್ಕೆ ಭೇಟಿ ಕೊಟ್ಟು ಕೈಮಗ್ಗ ಉತ್ಪನ್ನಗಳನ್ನು ಕುತೂಹಲದಿಂದ ವೀಕ್ಷಿಸುವುದರ ಜೊತೆಗೆ ತಾವೂ ಕೂಡ ಕೆಲ ಉತ್ಪನ್ನಗಳನ್ನು ಖರೀದಿ ಮಾಡಿದರು. ಕೈಮಗ್ಗ ಉತ್ಪನ್ನಗಳನ್ನೇ ಹೆಚ್ಚು ಖರೀದಿ ಮಾಡುವ ಮೂಲಕ ನೇಕಾರರ ಬದುಕು ಸುಧಾರಿಸುವ ಕೆಲಸವನ್ನು ಜನ ಮಾಡಬೇಕಿದೆ ಎಂದರು.…
ಬೆಂಗಳೂರು:- ನಗರದ ಹಲವೆಡೆ ತುಂತುರು ಮಳೆಯಾಗಿದೆ. ಕಾರ್ಪೋರೇಷನ್, ರಿಚ್ಮಂಡ್ ಟೌನ್, ವಿಧಾನಸೌಧ, ಟೌನ್ ಹಾಲ್ ಸೇರಿ ಹಲವೆಡೆ ತುಂತುರು ಮಳೆ ಬಂದಿದೆ. ಬೆಳಗ್ಗೆ ಕಚೇರಿಗೆ ತೆರಳುವವರು ಪರದಾಡುವಂತಾಯಿತು. https://youtu.be/wmR8M6M9YOo?si=WnfehHR2NbEXVUPI ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಚ್ಎಎಲ್ನಲ್ಲಿ 24.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.8ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 25.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 25.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ,…
ಆಕ್ರಮಿತ ಕ್ರಿಮಿಯಾ ಪ್ರಾಂತದ ಸೆವಾಸ್ಟೊಪೊಲ್ ನಗರದಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ ರಶ್ಯ ನೌಕಾಪಡೆಯ ಉನ್ನತ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯನ್ನು ಉಕ್ರೇನ್ ಪ್ರಜೆ ನಡೆಸಿರುವುದಾಗಿ ಉಕ್ರೇನ್‍ನ ಭದ್ರತಾ ಪಡೆಯ ಮೂಲಗಳು ಹೇಳಿವೆ. ಮೃತ ಅಧಿಕಾರಿಯನ್ನು ರಶ್ಯ ನೌಕಾಪಡೆಯ ಉನ್ನತ ಅಧಿಕಾರಿ ವ್ಯಾಲೆರಿ ಟ್ರಂಕೋವ್ಸ್‍ಕಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಬಾಂಬ್ ಇರಿಸಿ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಭಯೋತ್ಪಾದಕ ಕೃತ್ಯ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.