ರಸ್ತೆಗಳಲ್ಲಿ ಗತ ವೈಭವ ಮೆರೆದಿದ್ದ ಡಬ್ಬಲ್ ಡೆಕ್ಕರ್ ಬಸ್ಸುಗಳನ್ನ ಮತ್ತೆ ನಗರದಲ್ಲಿ ಕಾಣುವ ಕನಸು ಕಂಡಿದ್ದ ಬೆಂಗಳೂರಿಗರಿಗೆ ನಿರಾಸೆ ಉಂಟಾಗಿದೆ. ಇನ್ಮುಂದೆ ಮತ್ತೆ ನಗರದ ರಸ್ತೆಗಳಲ್ಲಿ ಕನಸಿನ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಿಳಿಯಲ್ಲ ಅನ್ನೋ ವಿಚಾರ ಬಯಲಾಗಿದ್ದು, ಈ ಮೂಲಕ ಈ ಸಾಲಿನ ಜನರ ಕನಸು ಕನಸಾಗಿಯೇ ಉಳಿಯಲಿದೆ. https://youtu.be/iC28ruVlDHc?si=CwsxklqxJpnLKKOO ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದೊಂದು ಕಾಲವಿತ್ತು. 80, 90ರ ದಶಕಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ಸುಗಳು ರಸ್ತೆಗಿಳಿದರೆ ಅದೇನೋ ವೈಭವ. ಬಸ್ಸುಗಳಲ್ಲಿ ಬೆಂಗಳೂರು ಸುತ್ತೋದು ಅದ್ಭುತ ಅನುಭವ. ಅದರಲ್ಲೂ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನ ಆ ಬಸ್ ಮೇಲೆ ಕುಳಿತು ನೋಡುವುದಕ್ಕೆ ಅಂತಾನೇ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಜನ ಬರುತ್ತಿದ್ದರು. ಕಾಲ ಕ್ರಮೇಣ ಆ ಬಸ್ಸುಗಳು ಕಣ್ಮರೆಯಾಗಿ ವೈಭವವು ಮರೆಯಾಗಿಯೇ ಬಿಟ್ಟಿತ್ತು. ಆದರೆ ನಗರದಲ್ಲಿ ಮತ್ತೆ ಆ ಕ್ಷಣಗಳನ್ನ ವಾಪಸ್ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ನಿಗಮ ಪ್ರಯತ್ನ ಪಟ್ಟಿತು. ಆದರೆ ಕೊನೆಗೂ ಕನಸು, ಕನಸಾಗೇ ಉಳಿಯುದುಕೊಳ್ಳುವಂತಾಗಿದೆ. ಡಬ್ಬಲ್ ಡೆಕ್ಕರ್…
Author: Prajatv Kannada
ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣಗೆ ಸಂತ್ರಸ್ತೆಯ ಸೀರೆ ದೊಡ್ಡ ಸಂಕಷ್ಟ ತರುವ ಸಾಧ್ಯತೆಯಿದೆ. ಸಂತ್ರಸ್ತೆಯ ಸೀರೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ. https://youtu.be/yyEd9bOlKgY?si=zFiZVO9NOOKmX1cP ಸಂತ್ರಸ್ತೆಯ ಬಳಿ ನಾಲ್ಕು ಸೀರೆ ವಶಕ್ಕೆ ಪಡೆದಿದ್ದ ಎಸ್‌ಐಟಿ ಅದನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿದೆ. ಪತ್ತೆಯಾಗಿರುವ ವೀರ್ಯ ಮತ್ತು ಕೂದಲು ಯಾರದ್ದು ಎಂದು ತಿಳಿಯುವ ಉದ್ದೇಶದಿಂದ ಪ್ರಜ್ವಲ್ ರೇವಣ್ಣಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ. ಎಸ್‌ಐಟಿ ಪೊಲೀಸರು ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎನ್‌ಎ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲಿ ವೀರ್ಯ ಮತ್ತು ತಲೆಕೂದಲಿಗೆ ಸಾಮ್ಯತೆ ಕಂಡು ಬಂದರೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ ಬಿಗಿಯಾಗಲಿದೆ. ತಮ್ಮ ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಡಿಎನ್‌ಎ ಪರೀಕ್ಷೆ ವಿಚಾರವು ಬೆಳಕಿಗೆ ಬಂದಿದೆ. ಅಲ್ಲದೆ ವೈದ್ಯಕೀಯ…
ದೇವರಪಲ್ಲಿ :– ಭೀಕರ ರಸ್ತೆ ಅಪಘಾತದಲ್ಲಿ 7 ಕೂಲಿ ಕಾರ್ಮಿಕರು ದುರ್ಮರಣ ಹೊಂದಿದ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ದೇವರಪಲ್ಲಿ ತಾಲೂಕಿನ ಚಿಲಕವಾರಿಪಾಕಲ ಎಂಬ ಗ್ರಾಮದ ಬಳಿ ಜರುಗಿದೆ. ಮೃತರ ಪೈಕಿ 6 ಕಾರ್ಮಿಕರು ತಾಡಿಮಳ್ಳ ಗ್ರಾಮದ ನಿವಾಸಿಗಳು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಡಂಬಿ ಲೋಡ್ ತುಂಬಿಕೊಂಡು ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ದುರಂತ ಸಂಭವಿಸಿದೆ. ಮಂಗಳವಾರ ರಾತ್ರಿ ಈ ರಸ್ತೆ ಅಪಘಾತ ಸಂಭವಿಸಿದೆ. ನರಸಾಪುರಂ ಮಂಡಲದ ಬೊರ್ರಂಪಾಲೆಂನಿಂದ ನಿಡದವೋಲು ಮಂಡಲದ ತಾಡಿಮಲ್ಲ ಕಡೆಗೆ ಲಾರಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಿನ್ನಾಯಗುಡೆಂ ಉಪನಗರದಲ್ಲಿ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಅಪಘಾತವಾದ ಲಾರಿಯಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮ್ಮಿ ರೆಡ್ಡಿ ಸತ್ಯನಾರಾಯಣ (45), ದೇಶಭಟ್ಟುಲ ವೆಂಕಟರಾವ್ (40), ಬೊಕ್ಕ ಪ್ರಸಾದ್ (32), ಪೆನುಗುರ್ತಿ ಚಿನ್ನ ಮುಸಲಯ್ಯ (35), ಕತ್ತಿವ ಕೃಷ್ಣ (40), ಕತ್ತಿವ ಸತ್ತಿಪಂಡು (40), ತಾಡಿ…
ನವದೆಹಲಿ: ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಭಾರತ ಶತ್ರು ಸೇನೆಗಳ ಹುಟ್ಟಡಗಿಸಲು ಸೂಕ್ತ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತ ಸ್ವದೇಶಿ ನಿರ್ಮಿತ ಆಯುಧಗಳನ್ನೇ ಸೇನೆಗೆ ಸೇರ್ಪಡೆಗೊಳಿಸಲು ಒಂದಾದ ಮೇಲೊಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ಚೀನಾ ಮತ್ತು ಪಾಕ್ ಗಡಿಯಲ್ಲಿ ಭಾರತ ಗಸ್ತು ಹೆಚ್ಚಿಸಲು 156 ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಿತ್ತು. ಇದೀಗ ರಕ್ಷಣಾ ಸಚಿವಾಲಯವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆಗೆ ಸು-30ಎಂಕೆಐ ವಿಮಾನಗಳಿಗಾಗಿ 240 ಏರೋ ಎಂಜಿನ್‌ಗಳ ತಯಾರಿಕೆಗಾಗಿ 26,000 ಕೋಟಿ ರೂ.ಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಆತ್ಮನಿರ್ಭರ್ ಭಾರತ್ ಉಪಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ, ರಕ್ಷಣಾ ಸಚಿವಾಲಯವು 26,000 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಏರೋ-ಎಂಜಿನ್‌ಗಳನ್ನು HALನ ಕೊರಾಪುಟ್ ವಿಭಾಗವು ತಯಾರಿಸಲಿದೆ. ಈ ಮೂಲಕ ಹೆಚ್‌ಎಎಲ್ Su-30MKI ಕಾರ್ಯಾಚರಣೆಯ ಸಾಮರ್ಥ್ಯವನ್ನು ಉಳಿಸಿಕೊಳ್ಳುವಲ್ಲಿ ಭಾರತೀಯ ವಾಯುಪಡೆಗೆ ಸಹಾಯ ಮಾಡುವ ನಿರೀಕ್ಷೆಯಿದೆ. ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಮತ್ತು ವಾಯುಪಡೆ ಮುಖ್ಯಸ್ಥ…
ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಅಷ್ಟಮಿ, ನಕ್ಷತ್ರ: ಜೇಷ್ಠ ರಾಹು ಕಾಲ:12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ಮ.12:05 ನಿಂದ ಮ.1:46 ತನಕ ಅಭಿಜಿತ್ ಮುಹುರ್ತ: ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಭೂ ಖರೀದಿ, ವಾಹನ ಖರೀದಿ,ಗೃಹ ನಿರ್ಮಾಣ, ಇದು ಸಕಾಲ ,ವಿಚ್ಛೇದನ ಅಥವಾ ವಿಧವಾ ಮಹಿಳೆಯ ಅಥವಾ ಪುರುಷರಿಗೆ ಮರು ಮದುವೆ ಸಾಧ್ಯತೆ ಇದೆ, ಉದ್ಯೋಗ ಕ್ಷೇತ್ರದಲ್ಲಿ ಒತ್ತಡವಿದ್ದರೂ ಮುನ್ನಡೆಯಿರಿ, ನಿಮ್ಮ ಅನಿಸಿಕೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ, ವ್ಯಾಪಾರ ವಹಿವಾಟಿನಲ್ಲಿ ಲಾಭಾಂಶ ಉತ್ತಮವಾಗಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಸದ್ಯಕ್ಕೆ ಬಂಡವಾಳ ಹಾಕುವುದು ಬೇಡ, ಕೆಲಸದಲ್ಲಿ…
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸೀಟು ಸಧ್ಯಕ್ಕೆ ಖಾಲಿ ಇಲ್ಲ ಬದಲಾವಣೆಯ ಪ್ರಶ್ನೆ ಎಲ್ಲಿಂದ ಬರುತ್ತೇ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ ಇದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಅವ್ರು ಹೇಳಿದರು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಬದಲಾವಣೆ ಬಗ್ಗೆ ಅವರು ಇವರು ಹೇಳುವ ಮಾತುಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ ಸರಕಾರದ ಮಟ್ಟದಲ್ಲಿ ಏನಾದರೂ ಚರ್ಚೆ ಮಾಡಿದ್ದರಾ ಇಲ್ಲವೇ ಇಲ್ಲ ವಿರೋಧ ಪಕ್ಷಗಳ ಊಹಾಪೋಹಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಆಸೆ ಪಟ್ಟಿದ್ದಾರೆ ಎಂಬುದಕ್ಕೆ ಉತ್ತರಿಸಿ ಮುಂದಕ್ಕೆ ಏನಾದರೂ ಸಿಗಬಹುದು ಅಂತ ಕೆಲವರು ಈಗಿನಿಂದಲೂ ಕಲ್ಲು ಹಾಕಲು ಹೊರಟಿರಬಹುದು ಆಸೆಗಾಗಿ…
ಹುಬ್ಬಳ್ಳಿ- ನಗರದ ಸಿದ್ಧಕಲ್ಯಾಣ ನಗರದ ಶ್ರೀ ಗಣಪತಿ ದೇವಸ್ಥಾನ ಆವರಣದಲ್ಲಿ ಗಜಾನನ ಸೇವಾ ಶ್ರೀ ಸಿದ್ದ ಕಲ್ಯಾಣನಗರ ಯುವಕ ಮಂಡಲದಲ್ಲಿ ಶ್ರೀ ತ್ರಿಲಿಂಗೇಶ್ವರ ಸ್ವರೂಪಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸಮರ್ಥ ಮೃತ್ಯುಂಜಯ ಗೋಧಿ ಅವರ ಗಣಪತಿ ಮೂರ್ತಿ ನೀಡಿದ್ದು ಗಮನ ಸೆಳೆದಿದ್ದು, ಶ್ರೀ ಗಣೇಶನ ಆಶೀರ್ವಾದ ಪಡೆಯಲು ವಿವಿಧ ಕಡೆಗಳಿಂದ ಭಕ್ತಾದಿಗಳು ಆಗಮಿಸಿ ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮೃತ್ಯುಂಜಯ ಗೋಧಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ರಾಜಣ್ಣ ಕೊರವಿ, ವಾರ್ಡ ಅಧ್ಯಕ್ಷರಾದ ನವೀನ ಮಡಿವಾಳರ,ಪ್ರಮುಖರಾದ ಸಿ ಜಿ ಧಾರವಾಡಶೆಟ್ಟರ , ರಮೇಶ ಮಹದೇವಪ್ಪನವರ, ವೀರುಪಾಕ್ಷಿಗೌಡ ಮುದೀಗೌಡ್ರ, ಸಿ .ಬಿ. ಪಾಟೀಲ, ಕುಮಾರೇಶ್ವರ ಮುಳಗುಂದಮಠ, ಗುರು ರೇವಡಗಿ ಹಾಗೂ ಇತರರು ಉಪಸ್ಥಿತರಿದ್ದರು.
ಸ್ಯಾಟಲೈಟ್ (ಉಪಗ್ರಹ) ಆಧಾರಿತ ಎಲೆಕ್ಟ್ರಿಕ್ ಟೋಲ್ ವಸೂಲಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ, ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಬಂಧನೆ-2008ಕ್ಕೆ ತಿದ್ದುಪಡಿ ಮಾಡಿ ನೋಟಿಫಿಕೇಷನ್ ಜಾರಿ ಮಾಡಿದೆ. ಇದರ ಪ್ರಕಾರ, ಈಗಿರುವ ಟೋಲ್‌ಗಳಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (GNSS) ಆಧಾರಿತ ಟೋಲ್ ಪದ್ದತಿ ಜಾರಿಗೆ ಬರಲಿದೆ. ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂನ ಆನ್ ಬೋರ್ಡ್ ಯೂನಿಟ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾವನ್ನು ಕ್ರಾಸ್ ಮಾಡಿದಾಗ, ಪಯಣಿಸಿದ ದೂರಕ್ಕೆ ಅನುಗುಣವಾಗಿ ಆಟೋಮೆಟಿಕ್ ಆಗಿ ಟೋಲ್ ಶುಲ್ಕ ಪಾವತಿ ಆಗಲಿದೆ. ಒಬಿಯು ಅಳವಡಿಸಿಕೊಂಡ ವಾಹನಗಳಿಗೆ ಪ್ರತ್ಯೇಕ ಲೇನ್ ತೆರೆಯಲಾಗುತ್ತದೆ. ಮೊದಲ 20 ಕಿಮೀ ವರೆಗೂ ಜೀರೋ ಟೋಲ್ ಕಾರಿಡಾರ್ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅಂದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ 20 ಕಿಲೋಮೀಟರ್‌ಗೆ ಟೋಲ್ ಪಾವತಿಸುವ ಅಗತ್ಯ ಇರುವುದಿಲ್ಲ. ನಂತರದ ಪಯಣಕ್ಕೆ ಅನುಗುಣವಾಗಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮೊದಲಿಗೆ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳಲ್ಲಿ ಈ ವಿಧಾನ ಜಾರಿಗೆ ತಂದು, ನಂತರ ದೇಶಾದ್ಯಂತ ಇದನ್ನು…
ಸಿಲಿಕಾನ್ ಸಿಟಿಯಲ್ಲಿ ನಡು ರಸ್ತೆಯಲ್ಲೇ ಯುವಕನಿಗೆ ಹಿಗ್ಗಮುಗ್ಗ ಥಳಿಸಿದ ಘಟನೆ ಹೆಚ್.ಎಲ್.ಎಲ್ ರಸ್ತೆಯ ಯು.ಆರ್. ರಾವ್ ಸೆಟಲೈಟ್ ಸೆಂಟರ್ ಬಳಿ ನಡೆದಿದೆ. https://youtu.be/–8h1ySPgKU?si=KpMJKjbYR_aPDZLc ಹೌದು.. ಯುವಕನ ಮೇಲೆ ಮನಬಂದಂತೆ ಹಲ್ಲೆ ಮಾಡ್ತಿರುವ 5-6 ಯುವಕರ ಗುಂಪು ಹೆಚ್.ಎಲ್.ಎಲ್ ರಸ್ತೆಯ ಯು.ಆರ್. ರಾವ್ ಸೆಟಲೈಟ್ ಸೆಂಟರ್ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದ್ದು ಹಲ್ಲೆಯ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಾಲಿನಿಂದ ಒದ್ದು, ಕೈಯಿಂದ ಗುದ್ದಿ 6 ಯುವಕರ ಅಟ್ಟಹಾಸಕಾಲು ಹಿಡದು ಎಳೆದುಕೊಂಡು ಹೋಗಿ, ನೆಲಕ್ಕೆ ಬೀಳಿಸಿ ಒದ್ದು, ಕೈಯಿಂದ ಗುದ್ದುವ ಯುವಕರುಹಲ್ಲೆ ವಿಡಿಯೋ ಎಕ್ಸ್ ನಲ್ಲಿ ಶೇರ್ ಮಾಡಿರುವ ಸ್ಥಳೀಯ ನಿವಾಸಿಯೊಬ್ಬರುಜೀವನಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಯು.ಆರ್. ರಾವ್ ಸೆಟಲೈಟ್ ಸೆಂಟರ್ ಸರ್ಕಲ್ ನ 1ನೇ ಮುಖ್ಯ ರಸ್ತೆಯಲ್ಲಿ ಘಟನೆ ಹಲ್ಲೆ ಬಗ್ಗೆ ಯಾವುದೇ ದೂರು ಬಂದಿಲ್ಲ ಅಂತ ಪೊಲೀಸರ ಮಾಹಿತಿ ಸದ್ಯ ವಿಡಿಯೋ ಆಧಾರದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು
ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. 2024ರ ಮುಂದಿನ ಅಧ್ಯಕ್ಷ ಯಾರಾಗ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ನಡುವೆ ದೊಡ್ಡ ಪೈಪೋಟಿ ನಡೆದಿದೆ. ಈ ಮಧ್ಯೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುತ್ತೇನೆ’ ಎಂದು ಅಮೆರಿಕದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಹೇಳಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಮಧ್ಯೆ ಫಿಲಡೆಲ್ಫಿಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ಮುಖಾಮುಖಿಯಾಗಿದ್ದರು. ಉಭಯ ನಾಯಕರ ನಡುವಿನ ಚರ್ಚಾ ಕಾರ್ಯಕ್ರಮ ಮುಗಿದ ಕೆಲವೇ ಗಂಟೆಗಳಲ್ಲಿ ಸ್ವಿಫ್ಟ್ ಅವರು ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸುವುದಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಹ್ಯಾರಿಸ್ ಅವರಿಗೆ ಸೆಲೆಬ್ರಿಟಿಗಳ ಬೆಂಬಲವು ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಟೇಲರ್ ಸ್ವಿಫ್ಟ್ ಅವರು ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್…