ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಇನ್ಮುಂದೆ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಊಟ-ತಿಂಡಿಗೆ ಪರದಾಡಬೇಕಿಲ್ಲ. ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಜನರಲ್ ಕೋಚ್ ಎದುರು ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಮತ್ತು ಪಾನೀಯ ಇಲ್ಲಿ ದೊರಕಲಿದೆ. ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ರೈಲಿನಲ್ಲಿ ಊಟ ನೀಡುವ ಅಂಗಡಿಗಳನ್ನು ಜನರಲ್ ಬೋಗಿಗಳು ನಿಲ್ಲುವ ಪ್ಲಾಟ್ ಫಾರಂ ನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬಗೆಯಲ್ಲಿ ಈ ಊಟವನ್ನು ವಿಧಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್ ಗೆ 20 ರೂಪಾಯಿ ಹಾಗು 2 ಬಗೆಯ ಊಟ ಹೊಂದಿರುವ ಪ್ಯಾಕೆಟ್ ಗೆ 50 ರೂಪಾಯಿ ಬೆಲೆ ಇರಲಿದೆ. ಅಲ್ಲದೆ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ. ಇದರೊಂದಿಗೆ ಪ್ರಯಾಣಿಕರಿಗೆ 200 ಮಿಲಿ ಲೀಟರ್ ನೀರು 3…
Author: Prajatv Kannada
ಉತ್ತರಾಖಂಡ: ಜುಲೈ 15 ರಂದು ಉತ್ತರಾಖಂಡದ ಹಲ್ದ್‌ವಾನಿ ಪಟ್ಟಣದಲ್ಲಿ ಒಂದು ವಿಚಿತ್ರ ಪ್ರಕರಣ ಬಯಲಾಗಿತ್ತು. ಉದ್ಯಮಿಯೊಬ್ಬನ ಶವ ಕಾರ್‌ನಲ್ಲಿ ಕುಳಿತ ರೀತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಎಂಜಿನ್ ಆನ್ ಇತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಉದ್ಯಮಿಯ ಕಾಲಿನಲ್ಲಿ ಹಾವು ಕಡಿದಿರುವ ಗುರುತು ಪತ್ತೆಯಾಗಿತ್ತು. ಹೀಗಾಗಿ, ಉದ್ಯಮಿ ಅಂಕಿತ್ ಚೌಹಾಣ್ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ ಎಂದು ಮೇಲ್ನೋಟಕ್ಕೆ ಪೊಲೀಸರು ಭಾವಿಸಿದ್ದರು. ಆದರೆ, ಈ ಪ್ರಕರಣದ ತನಿಖೆ ನಡೆಸಿದ ಸಂದರ್ಭದಲ್ಲಿ ದೊಡ್ಡ ಷಡ್ಯಂತ್ರವೊಂದು ಬಯಲಾಯ್ತು! ಸಿನಿಮೀಯ ರೀತಿಯಲ್ಲಿ ಹಾವನ್ನು ಬಳಸಿ ಕೊಲೆ! 30 ವರ್ಷ ವಯಸ್ಸಿನ ಉದ್ಯಮಿ ಅಂಕಿತ್ ಚೌಹಾಣ್ ಶವದ ಮರಣೋತ್ತರ ಪರೀಕ್ಷೆ ವೇಳೆ ಮೃತನ ಕಾಲಿಗೆ ಎರಡು ಬಾರಿ ಹಾವು ಕಡಿದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾವಿನ ವಿಷದಿಂದಲೇ ಉದ್ಯಮಿಯ ಹತ್ಯೆಯಾಗಿದೆ ಎಂದೂ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಕ್ಕಿತ್ತು. ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡು ಬಂತು. ಆದರೆ, ಮೃತ ಚೌಹಾಣ್‌ನ ಮೊಬೈಲ್ ಕರೆಗಳ ಮಾಹಿತಿ ತಪಾಸಣೆ ವೇಳೆ ಆತನಿಗೆ ಮಹಿ…
ಬೆಳಗಾವಿ: ಅಮವಾಸ್ಯೆ ಹಿನ್ನೆಲೆ ಗಂಡನೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಪತ್ನಿ (Wife) ಎದುರೇ ಗಂಡನ (Husband) ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಐನಾತಿ ಹೆಂಡತಿ ಪ್ರಿಯಾಂಕಾ ಜಗಮತ್ತಿಯನ್ನ ಮೂಡಲಗಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸೋಮವಾರ ಭೀಮನ ಅಮವಾಸ್ಯೆಯಾಗಿದ್ದರಿಂದ ಶಂಕರ್ ಜಗಮತ್ತಿ ಮತ್ತು ಪ್ರಿಯಾಂಕಾ ಜಗಮತ್ತಿ ದಂಪತಿ ಮೂಡಲಗಿ (Mudalagi) ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ (Banasiddeshwara Temple) ಬಂದಿದ್ದರು. ಈ ವೇಳೆ ಪತ್ನಿಯ ಕಣ್ಣೆದುರೇ ದುಷ್ಕರ್ಮಿಗಳು ಪತಿಯ ಹತ್ಯೆ ಮಾಡಿದ್ದು, ಸ್ಥಳದಲ್ಲೇ ಶಂಕರ್ ಜಗಮತ್ತಿ ಸಾವನ್ನಪ್ಪಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್ ತಳವಾರ(21), ಶಂಕರ್ ಪತ್ನಿ ಪ್ರಿಯಾಂಕ ಜಗಮತ್ತಿಯನ್ನು (21) ಬಂಧಿಸಲಾಗಿದೆ. ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಪ್ರಿಯಾಂಕಾ ಮನೆ ಬಿಡುವ ವೇಳೆ ಪ್ರಿಯಕರ ಶ್ರೀಧರ್‌ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು. ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಬರುತ್ತಿದ್ದಂತೆ ಆರೋಪಿ ಶ್ರೀಧರ್ ಪ್ರಿಯಾಂಕಾ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಇತ್ತ ಏನು…
ಉಡುಪಿ : ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪೆಚ್ಚು ಮೋರೆ ಹಾಕಿ ಎದ್ದು ಹೊರನಡೆದ ಪ್ರಸಂಗ ನಡೆದಿದೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಸಭೆ ಕುರಿತು ಮಾತನಾಡಿ, ಸಭೆಯನ್ನು ಟೀಕಿಸಿದ್ದರು. ಬಳಿಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಕುರಿತೂ ವ್ಯಂಗ್ಯವಾಡಿದರು. ಕಾಂಗ್ರೆಸ್ ಕುರಿತ ಪ್ರಶ್ನೆಗಳಿಗೆ ಸಾವಧಾನವಾಗಿಯೇ ಉತ್ತರಿಸಿದ್ದ ಕೇಂದ್ರ ಸಚಿವರಿಗೆ ವರದಿಗಾರರು, ನಿಮ್ಮ ವಿರೋಧ ಪಕ್ಷದ ನಾಯಕನ ಆಯ್ಕೆ ಯಾಕೆ ಕಗ್ಗಂಟಾಗಿ ಉಳಿದಿದೆ ಎಂದು ಕೇಳಿದರು. ಆಗ ಶೋಭಾ ಅವರು ಪೆಚ್ಚು ಮೋರೆ ಹಾಕಿ ಕೊಠಡಿಯಿಂದ ಹೊರ ಹೋಗಿದ್ದಾರೆ. ರಾಷ್ಟ್ರಮಟ್ಟದಲ್ಲಿ I.N.D.I.A ಎಂಬ ವಿರೋಧ ಪಕ್ಷಗಳ ಹೊಸ ಒಕ್ಕೂಟ ರಚನೆಯು ಈಸ್ಟ್ ಇಂಡಿಯಾ ಕಂಪನಿಯ ಹೊಸ ಆವೃತ್ತಿಯಾಗಿದೆ. 60 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದವರು ಈಗ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಇದೀಗ India vs Bharat ಆಗಿದೆ ಎಂದು ವಾಗ್ದಾಳಿ…
ಬೆಂಗಳೂರು: ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಘಟನೆ ನಡೆಯುವ ಮುನ್ನವೇ ಪೊಲೀಸರು ಶಂಕಿತ ಉಗ್ರರನ್ನ ಹಿಡಿದು ಹೆಡೆಮುರಿ ಕಟ್ಟಿದ್ದಾರೆ ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ತನ್ನೆಲ್ಲ ಭಯಾನಕ ಕೃತ್ಯಗಳನ್ನ ಎಸೆಯುತ್ತಿದ್ದ ಇದಕ್ಕೆ ಜೈಲಾಧಿಕಾರಿಗಳ ಕುಮ್ಮಕ್ಕು ಸಹ ಇದೇಯಾ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು ಅದಕ್ಕೆ ಇದೇ ಸಾಕ್ಷಿಯಾಗಿದೆ ನೋಡಿ.. ಬೆಂಗಳೂರಿನ ಸೆಂಟ್ರಲ್ ಜೈಲೋ ಅಥವಾ ಹಣ ಮಾಡುವ ಅಡ್ಡೆಯೋ? ಇಂಥಹದೊಂದು ಪ್ರಶ್ನೆ ಪರಪ್ಪನ ಅಗ್ರಹಾರ ಜೈಲಿನ ಪರಿಸ್ಥಿತಿ ನೋಡಿದಾಗ ನಮ್ಮಲ್ಲೆ ಹುಟ್ಟುವ ಪ್ರಶ್ನೆಯಾಗಿದೆ. ಪರಪ್ಪನ ಅಗ್ರಹಾರ ಜೈಲನ್ನೆ ಎಲ್ ಇ ಟಿ ಉಗ್ರ ಟಿ ನಾಜಿರ್ ನ ಬಿಸಿನೆಸ್ ಅಡ್ಡೆ ಮಾಡಿಕೊಂಡಿದ್ದಾನಂತೆ. ಜೈಲಲ್ಲಿ ಕುಳಿತುಕೊಂಡೇ ಉಗ್ರ ಟಿ ನಾಜಿರ್ ದಿನಕ್ಕೆ ನಾಲ್ಕೈದು ಸಾವಿರ ಸಂಪಾದನೆ ಮಾಡ್ತಿದ್ದಾನೆ. ಜೈಲಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್ , ಸ್ವೀಟ್ಸ್ ಮಾರಾಟ ಮಾಡ್ತಿರೊ ಟಿ ನಾಜಿರ್ ಉಗ್ರರಿಗೆ ನಿಗಧಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸ್ತಿದ್ದಾನಂತೆ. ವಿಚಾರಣಾಧೀನ ಕೈದಿಗಳನ್ನ ತನ್ನ ರೂಂ ಗೆ ಹಾಕಿಸಿಕೊಳ್ಳೋ…
ಬೆಂಗಳೂರು: ಸದನದ ಕಿಚ್ಚುನ್ನು ಬಿಜೆಪಿ ನಾಯಕರು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ರು. ಶಕ್ತಿಸೌಧದ ಗಾಂಧಿ ಪ್ರತಿಮೆಯ ಬಳಿ ಕುಳಿತು ಕಾಂಗ್ರೆಸ್ ಹಾಗೂ ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿದ್ರು. ಪಾದಯಾತ್ರೆ ಮೂಲಕ ರಾಜಭವನಕ್ಕೆ ಹೋದ ಕೇಸರಿ ನಾಯಕರು ಖಾದರ್ ಏಕಪಕ್ಷೀಯ ನಡೆ, ಅಧಿಕಾರಿಗಳ ದುರ್ಬಳಕೆ ವಿಚಾರವಾಗಿ ದೂರು ನೀಡಿದ್ರು, ಬಿಜೆಪಿಯ ಹೋರಾಟಕ್ಕೆ ದಳಪತಿಗಳು ಕೈಜೋಡಿಸಿದ್ದು ನಾಳೆ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ…. ಕಾಂಗ್ರೆಸ್ ಪಕ್ಷದ ಏಜೆಂಟ್ ಖಾದರ್ ಗೆ ಧಿಕ್ಕಾರ, ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ಪ್ರಜಾಪ್ರಭುತ್ವ ಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ. ಅನ್ಯಾಯ, ಅನ್ಯಾಯ ಸ್ಪೀಕರ್ ಇಂದ ಅನ್ಯಾಯ ಇಂತಹ ಆಕ್ರೋಶದ ಘೋಷಣೆಗಳು ಕೇಳಿಬಂದಿದ್ದು ವಿಧಾನಸೌಧ – ವಿಕಾಸಸೌಧದ ಮಧ್ಯದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಶಿಷ್ಟಾಚಾರ ಸಮರದ ಕಿಚ್ಚು ಜೋರಾಗ್ತಿದೆ10 ಶಾಸಕರ ಅಮಾನತು ಖಂಡಿಸಿ ಬಿಜೆಪಿ ನಾಯಕರು ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶಾಸಕರು, ಪರಿಷತ್…
ಬೆಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ನಿರ್ಲಕ್ಷತನದ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಿ ತೊಲಗಬೇಕೆಂದು ಆಗ್ರಹಿಸಿದರು. ಸುಮಾರು 77 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಗಲಭೆ ನಡೆಯುತ್ತಿರುವ ಮಣಿಪುರಕ್ಕೆ ಭೇಟಿ ನೀಡಿ ಶಾಂತ ರೀತಿಯ ವಾತಾವರಣ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ರವರು ವಿಫಲವಾಗಿದ್ದಾರೆ. ಮಹಿಳೆಯರನ್ನ ಬೆತ್ತಲೆ ಗೊಳಿಸುವ ಹೀನಾಯ ಕೃತ್ಯಗಳು ನಡೆಯುತ್ತಿದ್ದರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ದೇಶದ ದುರಂತ. ಮಹಿಳೆಯರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದ ನರೇಂದ್ರ ಮೋದಿ ಭೇಟಿ ಬಚಾವೋ ಭೇಟಿ ಪಡವೋ ಎಂಬುವ ಘೋಷಣೆ ಕೂಗಿ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡರೂ ಕಾಣದ ರೀತಿ ವರ್ತಿಸುತ್ತಿದ್ದಾರೆ ಇಂತಹ ಹೀನಾಯ ಸ್ಥಿತಿಗೆ…
ಬೆಂಗಳೂರು: ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಸಂಪರ್ಕದಲ್ಲಿದ್ದ ಹಲವರ ವಿಚಾರಣೆ ನಡೆಸುತ್ತಿದ್ದು, ಶಂಕಿತ ಉಗ್ರರು ಜುನೈದ್, ಟಿ.ನಾಸೀರ್ ಮಾತ್ರವಲ್ಲದೆ ಹಲವರ ಸಹಾಯ ಪಡೆದಿದ್ದಾರೆ. ಇನ್ನು ಸಿಸಿಬಿ ತನಿಖೆ ನಡೆಸುತ್ತಿರುವ ಪ್ರಕರಣವನ್ನೇ ಎನ್ಐಎ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. 2024ರಲ್ಲಿ ರಾಜ್ಯದಲ್ಲಿ ಉಗ್ರರ ಟಾರ್ಗೆಟ್ ಆಗಿದ್ದ ಪ್ಲಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯಿಂದ ಸಿಸಿಬಿ ನಡೆಸಿರೋ ಕಾರ್ಯಚರಣೆಗೆ ಇಡೀ ರಾಜ್ಯವೇ ನಿಟ್ಟಿಸುರು ಬಿಟ್ಟಿದೆ. ರಾಜ್ಯದಲ್ಲಿ ಸದ್ದಿಲ್ಲದೆ ಶೇಖರಣೆ ಆಗ್ತಿದ್ದ ಗ್ರೆನೇಡ್, ಗನ್ ಮತ್ತು ಗುಂಡುಗಳನ್ನ ಕಂಡು ಪೊಲೀಸ್ರೆ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಉಗ್ರರಿಗೆ ಟಾರ್ಗೆಟ್ ಇದ್ದಿದ್ದು ಜನನಿಬಿಡ ಪ್ರದೇಶ. ಆದ್ರೆ ಅದಕ್ಕೆ ಆವ್ರೂ ಆಯ್ಕೆ ಮಾಡಿಕೊಂಡಿದ್ದ ಬಸ್ ಸ್ಟಾಂಡೋ ರೈಲ್ವೇ ಸ್ಟೇಷನ್ನೋ ಅಲ್ಲ ಬದಲಿಗೆ. ಚುನಾವಣಾ ರ್ಯಾಲಿಯನ್ನ. ಎಸ್ ಒಂದೇ ಏಟಿಗೆ ಎರಡು ಕಲ್ಲು ಹೊಡೆಯೋ ಪ್ಲಾನ್ ಮಾಡಿದ್ದ ಉಗ್ರರು ಮುಂಬರೋ ಲೋಕಾಸಭಾ ಚುನಾವಣೆಯ ಬಿಜೆಪಿ ಪಾರ್ಟಿ ರ್ಯಾಲಿಯನ್ನ…
ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರೇ ಅವರನ್ನು ಬ್ರದರ್ಸ್ ಅಂತಾ ಅಪ್ಪಿಕೊಳ್ಳಲು ಹೋಗಬೇಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾಲೆಳೆದರು. ಈಗಲಾದರೂ ಡಿಕೆ ಶಿವಕುಮಾರ್ ಅವರೇ ವಿವೇಚನೆ ಇಲ್ಲದೇ, ಮತ ಬ್ಯಾಂಕ್‌ಗಾಗಿ ಅವರನ್ನು ಬ್ರದರ್ಸ್ ಎನ್ನಬೇಡಿ. ಅವರನ್ನು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು, ಕರ್ನಾಟಕ ಸಂಕಷ್ಟಕ್ಕೆ ಹೋಗಬಹುದು ಎಂದು ಹೇಳಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಅವರು ಅಮಾಯಕರು ಎಂದು ಬಿಂಬಿಸಿದರು. ಬಿಜೆಪಿ ದುರುದ್ದೇಶಪೂರ್ವಕವಾಗಿ ಬಂಧಿಸುತ್ತಿದೆ ಎಂದು ಹೇಳಿದರು. ಇವತ್ತು ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ದೇಶದಲ್ಲಿ ಉಗ್ರರು ಉಗ್ರಗಾಮಿ ಚಟುವಟಿಕೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರನ್ನು ನೀವು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು ಕರ್ನಾಟಕ ಸಂಕಷ್ಟಕ್ಕೆ ಹೋಗಬಹುದು ಎಂದರು. ಪೊಲೀಸರಿಗೆ ಮುಕ್ತ ತನಿಖೆ ನಡೆಸಲು ಅವಕಾಶ ಕೊಡಬೇಕು. ಬ್ರದರ್ಸ್ ಅಂತ ಹೇಳಿಕೆ ನೀಡಿ, ಯಾರಾದರೂ ಮಾತು ಕೇಳಿ ಅವರನ್ನು ಬಿಡಿಸುವ ಕೆಟ್ಟ ಕೆಲಸ ಮಾಡಬೇಡಿ. ಬೆಂಗಳೂರಲ್ಲಿ ಹಲವು ಕಡೆ ಬಾಂಬ್ ಬ್ಲಾಸ್ಟ್ ಮಾಡುವಂತಹ ಸಂಚು ಮಾಡಿದ್ದಾರೆ…
ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿದ್ದು ಶಾಸಕರಾದ ರವಿಕುಮಾರ್ ಗೌಡ ಗಣಿಗ ಮತ್ತು ಪ್ರದೀಪ್ ಈಶ್ವರ್ ಹಾಗೂ ಮಾಧ್ಯಮ ಸಂಯೋಜಕರಾಗಿರುವ ವೃತ್ತಿ ಬಾಂಧವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಗೌರವಿಸಲಾಯಿತು. ಸುದ್ದಿಮನೆಯಿಂದ ವಿಧಾನಸೌದದ ವರೆಗೆ ಕಾರ್ಯಕ್ರಮದಡಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಸುದ್ದಿಮನೆಯಲ್ಲಿ ಕೆಲಸ ಮಾಡಿ ಸದ್ಯ ಮಾಧ್ಯಮ ಸಂಯೋಜಕರಾಗಿ ಮತ್ತು ನಾನಾ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ಗೌರವಿಸುತ್ತಿದೆ ಎಂದರು. ನಾನೂ ಪತ್ರಕರ್ತನಾಗಿದ್ದೆ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಒಬ್ಬ ಪತ್ರಕರ್ತನಿಗೆ ಏನೆಲ್ಲ ಸವಾಲು ಇದೆ ಎನ್ನುವುದು ನಾನು ವೃತ್ತಿ ಮಾಡುವಾಗ ಅನುಭವಕ್ಕೆ ಬಂತು. ಚಿಕ್ಕಬಳ್ಳಾಪುರದಲ್ಲಿ ಲೋಕಲ್ ಟಿವಿ ಮಾಡಿದಾಗ ಅನುಭವಕ್ಕೆ ಬಂತು. ನಾನೆ ಸುದ್ದಿ ಸಂಪಾದಿಸಿ ನಾನೇ ಎಡೆಟಿಂಗ್ ಮಾಡಿ ನಾನೇ ಸುದ್ದಿ ವಾಚನ ಮಾಡಬೇಕಾಗಿತ್ತು ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡರು. ವ್ಯಕ್ತಿಗೆ ಬದ್ದತೆ ಇದ್ದರೆ ಮತ್ತು ಪರಿಶ್ರಮ ಹಾಕಿದರೆ ಯಾವ…